Login or Register ಅತ್ಯುತ್ತಮ CarDekho experience ಗೆ
Login

Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್‌ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ

ಜನವರಿ 28, 2025 12:21 pm shreyash ಮೂಲಕ ಮಾರ್ಪಡಿಸಲಾಗಿದೆ
39 Views

ನೆಕ್ಸಾನ್ ಸಿಎನ್‌ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್‌ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ

  • ಸಂಪೂರ್ಣ ಕಪ್ಪು ಬಣ್ಣದ ಬಾಡಿ ಕಲರ್‌ ಅನ್ನು ಹೊಂದಿದ್ದು, ಕಪ್ಪು ಬಣ್ಣದ ಅಲಾಯ್ ಚಕ್ರಗಳು ಮತ್ತು ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿದೆ.

  • ಕಪ್ಪು ಬಣ್ಣದ ಲೆದರೆಟ್ ಸೀಟ್ ಕವರ್‌ ಅನ್ನು ಒಳಗೊಂಡ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ.

  • 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು ಪನೋರಮಿಕ್ ಸನ್‌ರೂಫ್ ಇವುಗಳ ಫೀಚರ್‌ಗಳಾಗಿವೆ.

  • ಸುರಕ್ಷತೆಗಾಗಿ 6 ​​ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ನೋಡಿಕೊಳ್ಳಲಾಗಿದೆ.

  • 1.2-ಲೀಟರ್ ಟರ್ಬೊ-ಸಿಎನ್‌ಜಿ ಪವರ್‌ಟ್ರೇನ್ ಅನ್ನು ಬಳಸುತ್ತದೆ, 100 ಪಿಎಸ್‌ ಮತ್ತು 170 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ.

  • ಬೆಲೆಗಳು 12.70 ಲಕ್ಷ ರೂ.ನಿಂದ 14.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ-ದೆಹಲಿ) ಇದೆ.

ಟಾಟಾ ನೆಕ್ಸಾನ್ ಸಿಎನ್‌ಜಿ ಈಗ ಮೂರು ಡಾರ್ಕ್ ಎಡಿಷನ್ ವೇರಿಯೆಂಟ್‌ಗಳನ್ನು ಪರಿಚಯಿಸುವುದರೊಂದಿಗೆ ಸಂಪೂರ್ಣ ಕಪ್ಪು ಕಾರುಗಳ ಕ್ಲಬ್ ಅನ್ನು ಸೇರಿದೆ. ನೆಕ್ಸಾನ್ ಸಿಎನ್‌ಜಿ ಡಾರ್ಕ್ ಎಡಿಷನ್‌ ಕ್ರಿಯೇಟಿವ್ ಪ್ಲಸ್ ಮತ್ತು ಫಿಯರ್‌ಲೆಸ್ ಪ್ಲಸ್ ಟ್ರಿಮ್‌ಗಳನ್ನು ಆಧರಿಸಿದೆ ಮತ್ತು ಸಂಪೂರ್ಣ ಕಪ್ಪು ಬಣ್ಣದ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ಥೀಮ್ ಅನ್ನು ಪಡೆಯುತ್ತದೆ. ಹೆಚ್ಚಿನ ವಿವರಗಳನ್ನು ಪಡೆಯುವ ಮೊದಲು, ನೆಕ್ಸಾನ್ ಸಿಎನ್‌ಜಿಯ ಡಾರ್ಕ್ ಎಡಿಷನ್‌ ವೇರಿಯೆಂಟ್‌ಗಳ ಬೆಲೆಗಳನ್ನು ಮೊದಲು ಪರಿಶೀಲಿಸೋಣ.

ವೇರಿಯೆಂಟ್‌ಗಳು

ರೆಗ್ಯುಲರ್‌ ಬೆಲೆ

ಡಾರ್ಕ್‌ ಎಡಿಷನ್‌ ಬೆಲೆ

ವ್ಯತ್ಯಾಸ

ಕ್ರಿಯೇಟಿವ್ ಪ್ಲಸ್ ಎಸ್ ಸಿಎನ್‌ಜಿ

12.30 ಲಕ್ಷ ರೂ.

12.70 ಲಕ್ಷ ರೂ.

+ 40,000 ರೂ.

ಕ್ರಿಯೇಟಿವ್ ಪ್ಲಸ್ ಪಿಎಸ್ ಸಿಎನ್‌ಜಿ

13.30 ಲಕ್ಷ ರೂ.

13.70 ಲಕ್ಷ ರೂ.

+ 40,000 ರೂ.

ಫಿಯರ್‌ಲೆಸ್ ಪ್ಲಸ್ ಪಿಎಸ್ ಸಿಎನ್‌ಜಿ

14.30 ಲಕ್ಷ ರೂ.

14.50 ಲಕ್ಷ ರೂ.

+ 20,000 ರೂ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್‌ಶೋರೂಮ್‌ ಆಗಿದೆ

ನೆಕ್ಸಾನ್ ಸಿಎನ್‌ಜಿ ಡಾರ್ಕ್‌ನ ಮಿಡ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ 40,000 ರೂ.ಗಳವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿದ್ದರೆ, ನೆಕ್ಸಾನ್ ಸಿಎನ್‌ಜಿಯ ಟಾಪ್-ಸ್ಪೆಕ್ ಫಿಯರ್‌ಲೆಸ್ ಪ್ಲಸ್ ಪಿಎಸ್ ಡಾರ್ಕ್ ಟ್ರಿಮ್ ಅದರ ಅನುಗುಣವಾದ ರೆಗ್ಯುಲರ್‌ ವೇರಿಯೆಂಟ್‌ಗಿಂತ ಕೇವಲ 20,000 ರೂ.ಗಳಷ್ಟು ದುಬಾರಿಯಾಗಿದೆ.

ಸಂಪೂರ್ಣ ಕಪ್ಪು ಬಣ್ಣದ ಬಾಡಿ ಕಲರ್‌

ರೆಗ್ಯುಲರ್‌ ಪೆಟ್ರೋಲ್/ಡೀಸೆಲ್ ಚಾಲಿತ ನೆಕ್ಸಾನ್‌ನ ಡಾರ್ಕ್ ಎಡಿಷನ್‌ನಂತೆಯೇ, ಅದರ CNG ಪ್ರತಿರೂಪವು ಸಹ ಪೂರ್ಣ-ಕಪ್ಪು ಬಾಡಿ ಕಲರ್‌ ಅನ್ನು ಹೊಂದಿದೆ. 16-ಇಂಚಿನ ಅಲಾಯ್ ವೀಲ್‌ಗಳು ಮತ್ತು ಸ್ಕಿಡ್ ಪ್ಲೇಟ್‌ಗಳಂತಹ ಸಂಪೂರ್ಣ ಕಪ್ಪು ಅಂಶಗಳು ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸುಲಭವಾಗಿ ಗುರುತಿಸಲು ಫೆಂಡರ್‌ನಲ್ಲಿ 'ಡಾರ್ಕ್' ಬ್ಯಾಡ್ಜ್‌ ಕೂಡ ಇದೆ, ಆದರೆ ಟಾಟಾ ಲೋಗೋ ಡಾರ್ಕ್ ಕ್ರೋಮ್ ಫಿನಿಶ್ ಅನ್ನು ಪಡೆಯುತ್ತದೆ.

ಕ್ಯಾಬಿನ್‌ ಮತ್ತು ಫೀಚರ್‌ಗಳು

ಒಳಭಾಗದಲ್ಲಿ, ನೆಕ್ಸಾನ್ ಸಿಎನ್‌ಜಿ ಡಾರ್ಕ್ ಎಡಿಷನ್‌ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದ್ದು, ಕಪ್ಪು ಲೆದರೆಟ್ ಸೀಟ್ ಕವರ್‌ಅನ್ನು ಹೊಂದಿದೆ. ಇತರ ಪರಿಷ್ಕೃತ ಬಿಟ್‌ಗಳಲ್ಲಿ ಮುಂಭಾಗದ ಹೆಡ್‌ರೆಸ್ಟ್‌ಗಳಲ್ಲಿ '#ಡಾರ್ಕ್' ಎಂಬಾಸಿಂಗ್ ಮತ್ತು ಕವರ್‌ನಲ್ಲಿ ನೀಲಿ ಆಕ್ಸೆಂಟ್‌ಗಳೊಂದಿಗೆ ಟ್ರೈ-ಆರೋ ಪ್ಯಾಟರ್ನ್‌ ಸೇರಿವೆ.

ಫೀಚರ್‌ಗಳ ವಿಷಯದಲ್ಲಿ, ನೆಕ್ಸಾನ್ ಸಿಎನ್‌ಜಿ ಡಾರ್ಕ್‌ನ ಟಾಪ್-ಸ್ಪೆಕ್ ಫಿಯರ್‌ಲೆಸ್ ಪ್ಲಸ್ ಪಿಎಸ್ ಟ್ರಿಮ್ 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುತ್ತದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಸೇರಿವೆ.

ಪವರ್‌ಟ್ರೇನ್ ವಿವರಗಳು

ನೆಕ್ಸಾನ್ ಸಿಎನ್‌ಜಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ಎಂಜಿನ್‌

1.2-ಲೀಟರ್ ಟರ್ಬೊ-ಸಿಎನ್‌ಜಿ

ಪವರ್‌

100 ಪಿಎಸ್‌

ಟಾರ್ಕ್‌

170 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್‌ ಮ್ಯಾನ್ಯುವಲ್‌

ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್ ಸಿಎನ್‌ಜಿಯನ್ನು ಮಾರುತಿ ಬ್ರೆಝಾ ಸಿಎನ್‌ಜಿಗೆ ನೇರ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು. ಹಾಗೆಯೇ ರೆಗ್ಯುಲರ್‌ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ಸ್ಕೋಡಾ ಕೈಲಾಕ್‌ಗಳೊಂದಿಗೆ ಪೈಪೋಟಿ ನಡೆಸುತ್ತದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Tata ನೆಕ್ಸಾನ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ