Tata Nexonಗೂ ಬರಬಹುದು ವಿಹಂಗಮ ಸನ್‌ರೂಪ್
ಟಾಟಾ ನೆಕ್ಸಾನ್ ಗಾಗಿ samarth ಮೂಲಕ ಮೇ 17, 2024 03:15 pm ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ನೆಕ್ಸಾನ್ ವಿಹಂಗಮ ಸನ್‌ರೂಫ್‌ನೊಂದಿಗೆ ಬಂದಿರುವುದು ಕಂಡುಬಂದಿದೆ. ಇದು ಫ್ಯಾಕ್ಟರ್ ಸೆಟ್ಟಿಂಗ್‌ನಂತೆ ಕಾಣುತ್ತಿದ್ದು, ಅದರ ವೈಶಿಷ್ಟ್ಯಗಳ ಅಪ್‌ಡೇಟ್ ಅನ್ನು ಶೀಘ್ರವೇ ಬಹಿರಂಗಗೊಳಿಸುವ ಸಾಧ್ಯತೆಯಿದೆ.
ಕೆಲವು ವಿಭಾಗ-ಮೊದಲ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಓ ಅನ್ನು ಮಾರುಕಟ್ಟೆಗೆ ಪರಿಚಯಿಸಿರುವುದು ಪ್ರತಿಸ್ಪರ್ಧಿಗಳಿಗೆ ತಮ್ಮ ವಾಹನಗಳಲ್ಲಿ ಕೂಡ ಕೆಲವು ವೈಶಿಷ್ಟ್ಯಗಳನ್ನು ಅಪ್‌ಡೇಟ್ ಮಾಡುವ ಕಾರಣ ದೊರೆತಂತಾಗಿದೆ. ಇದರಲ್ಲಿ ಈ ವಿಭಾಗದ ಮುಂಚೂಣಿಯಲ್ಲಿರುವ ನಾಟಾ ನೆಕ್ಸಾನ್ ತನ್ನ ಕಾರುಗಳಲ್ಲಿ ಪ್ಯಾನರೋಮಿಕ್ ಸನ್‌ರೂಫ್ ಅಳವಡಿಸುವ ಮೂಲಕ ಮೊದಲ ಹೆಜ್ಜೆ ಇಡುವ ನಿರೀಕ್ಷೆಯಿದೆ. ತನ್ನಫ್ಯಾಕ್ಟರಿ ಮಹಡಿಯಲ್ಲಿ ನೆಕ್ಸಾನ್ ನಿಂತಿರುವ ವಿಡಿಯೋಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಪ್ರಕಾರ ಹೊಸದಾಗಿ ಸನ್‌ರೂಫ್ ಅಳವಡಿಸಲಾಗಿದೆ.
ಎಕ್ಸ್‌ಯುವಿ 3ಎಕ್ಸ್‌ಓ ಪರಿಣಾಮ?
ಎಕ್ಸ್‌ಯುವಿ300 ಫೇಸ್‌ಲಿಫ್ಟ್ ಗೆ ಬದಲಿಯಾಗಿ, ಎಕ್ಸ್‌ಯುವಿ 3ಎಕ್ಸ್‌ಓ ಅನ್ನು ಹಲವು ವಿಭಾಗ-ಪ್ರಮುಖ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಯಿತು. ಮತ್ತು ಇದು ಪ್ರಾಥಮಿಕ ಪರಿಚಯದ ಹಂತದಲ್ಲಿಯೇ ಅತಿ ಹೆಚ್ಚಿನ ದರವನ್ನು ಹೊಂದಿದೆ. ಇದರ ಬುಕ್ಕಿಂಗ್ ಆರಂಭಗೊಂಡ ಮೊದಲ ಗಂಟೆಯೊಳಗೆ ಮಹೀಂದ್ರಾ ತನ್ನ ಹೊಸ ಸಬ್ -4ಎಂ ಎಸ್‌ಯುವಿಗಾಗಿ 50,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದಿರುವುದಕ್ಕೆ ಈ ಅಂಶಗಳು ಕಾರಣವಾಗಿವೆ.
2024ರ ಏಪ್ರಿಲ್29 ರಂದು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಓ ಬಿಡುಗಡೆಯಾದ ನಂತರದ ಅವಧಿಯಲ್ಲಿ, ಪ್ರವೇಶ ಬೆಲೆಯನ್ನು ಕಡಿಮೆ ಮಾಡಲು ಮತ್ತು 3ಎಕ್ಸ್‌ಓ ಬೇಸ್ ವೇರಿಯಂಟ್‌ನ ಸನಿಹಕ್ಕೆ ತರುವ ಉದ್ದೇಶದಿಂದ ಟಾಟಾ ಈಗಾಗಲೇ ನೆಕ್ಸಾನ್‌ನ ಹೊಸ ಬೇಸ್-ಸ್ಪೆಕ್ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವೇರಿಯಂಟ್‌ಗಳನ್ನು ಘೋಷಿಸಿದೆ. ವಿಹಂಗಮ ಸನ್‌ರೂಫ್‌ನ ಅಳವಡಿಕೆಯು ನೆಕ್ಸಾನ್ ಅನ್ನು ಇನ್ನಷ್ಟು ಸುಧಾರಿಸುವ ಯೋಜನೆಯಾಗಿದ್ದರೂ ಕೂಡ, ಸ್ಪರ್ಧೆಗೆ ಪ್ರತಿಕ್ರಿಯೆಯಾಗಿ ಟಾಟಾ, ಆದಷ್ಟು ವೇಗವಾಗಿ ತನ್ನ ವೈಶಿಷ್ಟ್ಯಗಳನ್ನು ಪರಿಚಯಿಸಿದರೆ ಯಾವುದೇ ಅಚ್ಚರಿಯಿಲ್ಲ.
ಟಾಟಾ ನೆಕ್ಸಾನ್‌ನ ಇತರ ನಿರೀಕ್ಷಿತ ಅಪ್‌ಡೇಟ್‌ಗಳೆಂದರೆ, ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೇರ್ಪಡೆ. ಈಗ ಇದು ಕೇವಲ ಎಕ್ಸ್‌ಯುವಿ 3ಎಕ್ಸ್‌ಓ ಮಾತ್ರವಲ್ಲದೆ, ಕಿಯಾ ಸೋನೆಟ್ ಹಾಗೂ ಹ್ಯುಂಡೈ ವೆನ್ಯೂ ಅಲ್ಲಿ ಕೂಡ ನೀಡಲಾಗುತ್ತದೆ.
ಇದನ್ನೂ ಓದಿರಿ: ಟಾಟಾ ನೆಕ್ಸಾನ್‌ಗೆ ಹೋಲಿಸಿದರೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಓ ಈ 7 ಲಾಭಗಳನ್ನು ನೀಡುತ್ತದೆ
ನೆಕ್ಸಾನ್ ಪ್ರಸ್ತುತ ಫೀಚರ್‌ಗಳು
ಟಾಟಾ ನೆಕ್ಸಾನ್ ಸ್ವಾಗತ/ಗುಡ್‌ಬೈ ಕಾರ್ಯಕ್ಷಮತೆಯನ್ನು ಹೊಂದಿರುವ ಅನುಕ್ರಮ ಎಲ್‌ಇಡಿ ಡಿಆರ್‌ಎಲ್‌ಗಳು, 360-ಡಿಗ್ರಿ ವ್ಯೂ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಚಾರ್ಜರ್ ಮತ್ತು ಜೆಬಿಎಲ್- ಚಾಲಿತ ಸೌಂಡ್ ಸಿಸ್ಟಮ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ. ಪ್ರಸ್ತುತ ನೆಕ್ಸಾನ್ ಮಾದರಿಯು ಈಗಾಗಲೇ ಸಿಂಗಲ್-ಪೇನ್ ಧ್ವನಿ-ಸಕ್ರಿಯಗೊಳಿಸಿದ ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ.
ನಿರೀಕ್ಷಿತ ಬಿಡುಗಡೆ
ಪ್ಯಾನರೋಮಿಕ್ ಸನ್‌ರೂಫ್ ಇರುವಂತಹ ಟಾಟಾ ನೆಕ್ಸಾನ್‌ನ ವಿಡಿಯೋ ಅನ್ನು ಉತ್ಪಾದನಾ ವಿಭಾಗದಿಂದಲೇ ಲೀಕ್ ಮಾಡಲಾಗಿರುವಂತೆ ಕಾಣುತ್ತಿದೆ. ಈ ಮೂಲಕ ಅವರು ನೆಕ್ಸಾನ್ ಶೀಘ್ರದಲ್ಲೇ ಅದನ್ನು ಬಿಡುಗಡೆಗೊಳಿಸಲಿದೆ ಎಂಬ ಸೂಚನೆ ನೀಡುತ್ತಿದ್ದಾರೆ. ಇದು ತನ್ನ ಇತರ ವಿಭಾಗದ ಸ್ಪರ್ಧಿಗಳಾದ ಮತ್ತು ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕೈಗರ್, ನಿಸಾನ್ ಮ್ಯಾಗ್ನೆಟ್ ಮುಂದೆ ಬರಲಿರುವ ಸ್ಕೋಡಾ ಸಬ್-4ಎಂ ಎಸ್‌ಯುವಿ ವಿರುದ್ಧ ಸ್ಪರ್ಧೆಯನ್ನು ಮುಂದುವರಿಸಲಿದೆ.
ಇದನ್ನೂ ಓದಿ: ಸ್ಕೋಡಾ ಸಬ್-4ಎಂ ಎಸ್‌ಯುವಿ ಪರೀಕ್ಷಾರ್ಥ ಓಡಾಟ ಪತ್ತೆ, 2025ರ ಆರಂಭದಲ್ಲಿ ಬಿಡುಗಡೆಗೆ ಸಿದ್ಧ
ಮತ್ತೊಂದು ನೆಕ್ಸಾನ್ ಅಪ್‌ಡೇಟ್, ಎಂದರೆ 2024ರ ಫೆಬ್ರವರಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಸಿಎನ್‌ಜಿ ಪವರ್‌ಟ್ರೇನ್ ಸೇರ್ಪಡೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ ನೆಕ್ಸಾನ್ ಸಿಎನ್‌ಜಿ ಈ ವರ್ಷದ ಕೊನೆಯಲ್ಲಿ ಬರುವ ನಿರೀಕ್ಷೆಯಿದೆ ಮತ್ತು ಮಾರುತಿ ಬ್ರೆಝಾ ಸಿಎನ್‌ಜಿ ವೇರಿಯಂಟ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ.
ಹೆಚ್ಚಿನ ಓದಿಗೆ: ಟಾಟಾ ನೆಕ್ಸಾನ್
ಹೆಚ್ಚಿನ ಓದಿಗೆ : ಟಾಟಾ ನೆಕ್ಸಾನ್ ಎಎಂಟಿ
0 out of 0 found this helpful