• English
  • Login / Register

ಸಬ್-4m ಎಸ್‌ಯುವಿ ವಿಭಾಗದ ಮಾರಾಟದ ಅಂಕಿಆಂಶ: ಅಕ್ಟೋಬರ್‌ನಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್

ಮಾರುತಿ ಬ್ರೆಜ್ಜಾ ಗಾಗಿ sonny ಮೂಲಕ ನವೆಂಬರ್ 13, 2023 06:44 pm ರಂದು ಪ್ರಕಟಿಸಲಾಗಿದೆ

  • 60 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಹಬ್ಬದ ಸಂಭ್ರಮದಲ್ಲಿ ಕಿಯಾ ಸೊನೆಟ್ ಕಾರು ತಿಂಗಳಿನಿಂದ ತಿಂಗಳಿಗೆ ಅತ್ಯುತ್ತಮ ಮಾರಾಟದ ಬೆಳವಣಿಗೆಯನ್ನು ಕಂಡಿದೆ.

Tata Nexon, Maruti Brezza, Hyundai Venue

 2023 ರ ಅಕ್ಟೋಬರ್ ತಿಂಗಳಲ್ಲಿ ಬಂದ ದಸರಾ ಹಬ್ಬಗಳ ಕಾರಣದಿಂದಾಗಿ ಸಬ್-4m ಎಸ್‌ಯುವಿ ಕಾರುಗಳ ಮೇಲಿನ ಬೇಡಿಕೆ ಗಣನೀಯವಾಗಿ ಹೆಚ್ಚಾಯಿತು, ಆದರೆ ಬಹುಶಃ ಕಾರು ತಯಾರಕರು ನಿರೀಕ್ಷಿಸಿದಷ್ಟು ಮಾರಾಟವಾಗಿಲ್ಲ. ಆ ತಿಂಗಳ ಮಾರಾಟದ ಪಟ್ಟಿಯಲ್ಲಿ ಗಮನಿಸುವುದಾದರೆ, ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಜ್ಜಾ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದೆ ಮತ್ತು ಎರಡೂ ಮೊಡೆಲ್‌ಗಳು 16,000 ಮಾರಾಟದ ಗಡಿಯನ್ನು ದಾಟಿದೆ. ಹಿಂದಿನ ತಿಂಗಳಿನಿಂದ ಮಾಡೆಲ್-ವಾರು ಮಾರಾಟದ ವಿವರಗಳನ್ನು ಸಂಕ್ಷಿಪ್ತವಾಗಿ ನೋಡೋಣ:

ಸಬ್‌-ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಕ್ರಾಸ್‌ಓವರ್‌ಗಳು

 

ಅಕ್ಟೋಬರ್ 2023

ಸೆಪ್ಟೆಂಬರ್ 2023

ತಿಂಗಳ ಏರಿಕೆ (%)

ಪ್ರಸ್ತುತ ಮಾರ್ಕೆಟ್ ಶೇರ್ (%)

    ಮಾರ್ಕೆಟ್ ಶೇರ್ (% ಕಳೆದ ವರ್ಷ)

ವರ್ಷದಿಂದ ವರ್ಷಕ್ಕೆ ಮಾರ್ಕೆಟ್‌ ಶೇರ್‌ (%)

ಸರಾಸರಿ ಮಾರಾಟ (6 ತಿಂಗಳಿನಲ್ಲಿ)

ಟಾಟಾ ನೆಕ್ಸಾನ್‌

16887

15325

10.19

28.44

26.12

2.32

13163

ಮಾರುತಿ ಬ್ರೆಝಾ

16050

15001

6.99

27.03

18.86

8.17

13655

ಹುಂಡೈ ವೆನ್ಯೂ 

11581

12204

-5.1

19.5

18.19

1.31

10893

ಕಿಯಾ ಸೊನೆಟ್ 

6493

4984

30.27

10.93

14.44

-3.51

6511

ಮಹಿಂದ್ರಾ ಎಕ್ಸುವಿ 300

4865

4961

-1.93

8.19

11.92

-3.73

4961

ನಿಸ್ಸಾನ್‌ ಮೆಗ್ನೈಟ್

2573

2454

4.84

4.33

5.34

-1.01

2487

ರೆನಾಲ್ಟ್ ಕೈಗರ್‌

912

980

-6.93

1.53

5.09

-3.56

1279

ಒಟ್ಟು

59361

55909

6.17

 

 

 

 

ಇದರ ಸಾರಾಂಶ

  • 2023 ರ ಅಕ್ಟೋಬರ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್‌ನ ಬೇಡಿಕೆಯು ತಿಂಗಳಿನಿಂದ ತಿಂಗಳಿಗೆ (MoM) 10 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅಂಕಿಅಂಶಗಳು ನೆಕ್ಸಾನ್‌ EV ಯ ಮಾರಾಟವನ್ನೂ ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ. ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ಅದರ ರಿಫ್ರೆಶ್ ವಿನ್ಯಾಸ, ಹೆಚ್ಚುವರಿ ಸೌಕರ್ಯಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಕಾರು ಗ್ರಾಹಕರು ಉತ್ತಮವಾಗಿ ಮೆಚ್ಚಿಕೊಂಡಿದ್ದಾರೆ ಎಂದು ಈ ಅಂಕಿಅಂಶಗಳು ಸೂಚಿಸುತ್ತದೆ.
  • ಮಾಸಿಕ ಚಾರ್ಟ್‌ನ್ನು ಗಮನಿಸುವಾಗ, ಏರಡನೇ ಸ್ಥಾನದಲ್ಲಿರುವ ಮಾರುತಿ ಬ್ರೆಝಾದ 16,050 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ ಇನ್ನೂ ಹೆಚ್ಚು ಜನಪ್ರಿಯವಾಗಿದೆ. ಆದರೆ ಅದರ ಭಾರತೀಯ ಪ್ರತಿಸ್ಪರ್ಧಿಯಷ್ಟಿಲ್ಲ. ಇದು ಕಳೆದ ತಿಂಗಳಿಗೆ ಹೋಲಿಸಿದರೆ, ಇದು ಕೇವಲ 7 ಪ್ರತಿಶತದಷ್ಟು  ಬೆಳವಣಿಗೆಯನ್ನು ಕಂಡಿದೆ, ಆದರೆ ಇದು 27 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ (YoY) 8 ಪ್ರತಿಶತದಷ್ಟು ಸುಧಾರಣೆಯಾಗಿದೆ.
  • ಹ್ಯುಂಡೈ ವೆನ್ಯೂ ಈ ಸೆಗ್ಮೆಂಟ್‌ನಲ್ಲಿ 10,000 ಮಾಸಿಕ ಮಾರಾಟವನ್ನು ದಾಟಿದ ಮೂರನೇ ಮೊಡೆಲ್‌ ಆಗಿದೆ. ಆದಾಗಿಯೂ, ಅದರ ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ತಿಂಗಳ ಮಾರಾಟದ ಕಾರ್ಯಕ್ಷಮತೆಯು ವಾಸ್ತವವಾಗಿ 5 ಪ್ರತಿಶತದಷ್ಟು ಕಡಿಮೆಯಾಗಿದೆ. ಇದರ ಸೋದರ ಸಂಸ್ಥೆಯ ಕಾರಾಗಿರುವ ಕಿಯಾ ಸೋನೆಟ್, 2023 ರ ಅಕ್ಟೋಬರ್ ನಲ್ಲಿ 6,500 ಯೂನಿಟ್‌ಗಳು ಮಾರಾಟವಾಗುವುದರೊಂದಿಗೆ 30 ಪ್ರತಿಶತದಷ್ಟು ಹೆಚ್ಚಿನ MoM ಮಾರಾಟದ ಬೆಳವಣಿಗೆಯನ್ನು ಕಂಡಿದೆ.
  • ಹಿಂದಿನ ತಿಂಗಳಲ್ಲಿ ಮಹೀಂದ್ರಾ XUV300 ಕೇವಲ 5,000 ಯುನಿಟ್‌ಗಳಿಗಿಂತ ಕಡಿಮೆ ಮಾರಾಟವಾಗುವುದರೊಂದಿಗೆ ಈ ಹಬ್ಬದ ಅವಧಿಯಲ್ಲಿಯೂ ಅದಕ್ಕೆ ಹತ್ತಿರದ ಸಂಖ್ಯೆಯೊಂದಿಗೆ ಸ್ಥಿರವಾದ ಬೇಡಿಕೆಯನ್ನು ಕಾಯ್ದುಕೊಂಡಿದೆ.
  • ನಿಸ್ಸಾನ್ ಮ್ಯಾಗ್ನೈಟ್‌ 2023ರ ಅಕ್ಟೋಬರ್ ನಲ್ಲಿ 2,500 ಕ್ಕಿಂತ ಸ್ವಲ್ಪ ಹೆಚ್ಚು ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಇದರ MoM ಬೇಡಿಕೆಯು 5 ಪ್ರತಿಶತದಷ್ಟು ಹೆಚ್ಚಾಯಿತು. ಆದರೆ ಅದರ ಸೋದರ ಸಂಸ್ಥೆಯ ಕಾರಾಗಿರುವ ರೆನಾಲ್ಟ್ ಕಿಗರ್, ಕಳೆದ ತಿಂಗಳಿನಲ್ಲಿ 1,000 ಯುನಿಟ್‌ಗಳಿಗಿಂತಲೂ ಕಡಿಮೆ ಮಾರಾಟವನ್ನು ಕಂಡಿದೆ.  ಕಿಗರ್‌ನ MoM ಕಾರ್ಯಕ್ಷಮತೆಯು ಸುಮಾರು 7 ಶೇಕಡಾ ಕಡಿಮೆಯಾಗಿದೆ ಮತ್ತು ಪ್ರಸ್ತುತ 2 ಶೇಕಡಾಕ್ಕಿಂತ ಕಡಿಮೆ ಮಾರುಕಟ್ಟೆ ಪಾಲನ್ನು ಹೊಂದಿದೆ.
  • ಒಟ್ಟಾರೆಯಾಗಿ, ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ವಿಭಾಗದಲ್ಲಿ ಕೇವಲ 6 ಪ್ರತಿಶತದಷ್ಟು MoM ಬೆಳವಣಿಗೆಯನ್ನು ಕಂಡಿತು.

ಇನ್ನಷ್ಟು ಓದಿ: ಮಾರುತಿ ಬ್ರೆಝಾ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಬ್ರೆಜ್ಜಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience