• English
  • Login / Register

Tata Nexon: ಸಿದ್ದವಾದ ಹೆಡ್ ಲೈಟ್ ನೊಂದಿಗೆ ಮೊದಲ ಬಾರಿಗೆ ಸುಧಾರಿತ ಆವೃತ್ತಿ ಪ್ರತ್ಯಕ್ಷ

ಟಾಟಾ ನೆಕ್ಸಾನ್‌ ಗಾಗಿ rohit ಮೂಲಕ ಆಗಸ್ಟ್‌ 02, 2023 12:16 pm ರಂದು ಮಾರ್ಪಡಿಸಲಾಗಿದೆ

  • 28 Views
  • ಕಾಮೆಂಟ್‌ ಅನ್ನು ಬರೆಯಿರಿ

 ನವೀಕೃತ ಟಾಟಾ ನೆಕ್ಸಾನ್ ಮುಂದಿನ ವರ್ಷದ ಆರಂಭದಲ್ಲಿ ರೂ. 8 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

2024 Tata Nexon spied

  •  ಟಾಟಾ ನೆಕ್ಸಾನ್ ತನ್ನ ಎರಡನೇ ನವೀಕೃತ ಆವೃತ್ತಿಯನ್ನು ಪಡೆಯಲಿದ್ದು, ಮೊದಲನೆಯದು 2020 ರ ಆರಂಭದಲ್ಲಿ ಬಂದಿತ್ತು.

  •  ನಿರೀಕ್ಷಿತ ಬದಲಾವಣೆಗಳಲ್ಲಿ ಎಲ್‌ಇಡಿ- ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳು ಹಾಗೂ ಹೊಸ ಅಲಾಯ್ ವ್ಹೀಲ್‌ಗಳನ್ನು ನಾವು ನೋಡಬಹುದು.

  • ಹೊಸ ನೆಕ್ಸಾನ್ ಪರಿಷ್ಕೃತ ಮೇಲ್ಗವಸು, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವ್ಹೀಲ್‌ಗಳನ್ನು ಪಡೆಯಲಿದೆ.

  •  10.25-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸೇರಿಸಲಾಗಿದೆ.

  •  ಟಾಟಾ ಇದನ್ನು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಎರಡರಲ್ಲೂ ನೀಡಬಹುದು; ಹೊಸ 7-ಸ್ಪೀಡ್ ಡಿಸಿಟಿ ಆಯ್ಕೆಯನ್ನು ಪಡೆಯಬಹುದು.

 ಈ ನವೀಕೃತ ಟಾಟಾ ನೆಕ್ಸಾನ್‌ನ ಪರೀಕ್ಷಾ ಕಾರನ್ನು ನಾವು ಸಂಪೂರ್ಣವಾಗಿ ವೀಕ್ಷಿಸಿದ್ದೇವೆ. ಇತರ ಪರೀಕ್ಷಾ ಕಾರುಗಳಂತೆಯೇ ಇದನ್ನೂ ಸಹ ಸಂಪೂರ್ಣವಾಗಿ ಮುಚ್ಚಿದ್ದರೂ, ಹೊಸದಾಗಿ ಸ್ಪೈ ಮಾಡಲಾದ ಈ ಮಾಡೆಲ್ ಸಬ್-4m ಎಸ್‌ಯುವಿಯ ನವೀಕೃತ ಫೀಚರ್‌ಗಳಲ್ಲಿ ಒಂದನ್ನು ನಾವು ತಿಳಿದುಕೊಂಡೆವು 2020 ರ ಆರಂಭದಲ್ಲಿ ಬಂದ ಮೊದಲ ನವೀಕರಣದ ನಂತರ ಇದು ನೆಕ್ಸಾನ್‌ನ ಎರಡನೇ ಪ್ರಮುಖ ನವೀಕರಣವಾಗಿರುತ್ತದೆ.

 ನಾವು ನೋಡಿದ್ದೇನು?

ಇತ್ತೀಚಿನ ಸ್ಪೈ ಚಿತ್ರದಲ್ಲಿ, ನಾವು ಹೊಸ ನೆಕ್ಸಾನ್‌ನ ಲಂಬವಾಗಿ ಇರಿಸಿರುವ ಎಲ್‌ಇಡಿ ಹೆಡ್‌ಲೈಟ್‌ಗಳು (ಸಂಭವನೀಯ ಪ್ರೊಜೆಕ್ಟರ್‌ಗಳು) ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು (ಸಂಕ್ಷಿಪ್ತವಾಗಿ) ಮೊದಲ ಬಾರಿಗೆ ನೋಡಲು ಸಾಧ್ಯವಾಯಿತು. ಸ್ಪ್ಲೀಟ್-ಗ್ರಿಲ್ ಸೆಟಪ್ ಮತ್ತು ಟ್ವೀಕ್ ಮಾಡಲಾದ ಬಂಪರ್ ಸೇರಿದಂತೆ ಟಾಟಾ ಸಿಯೆರಾ ಇವಿ ಮತ್ತು ಟಾಟಾ ಕರ್ವ್ ಕಾನ್ಸೆಪ್ಟ್‌ನಿಂದ ಪ್ರೇರಿತವಾಗಿ ಈ ನವೀಕೃತ ಎಸ್‌ಯುವಿ ಮುಂಭಾಗದ ಅಂಶವನ್ನು ಪಡೆಯುತ್ತದೆ.

 ಇದು ಪಾರ್ಶ್ವದಲ್ಲಿ ಕಡಿಮೆ ಬದಲಾವಣೆಗಳನ್ನು ಹೊಂದಿದ್ದು, ಅಲಾಯ್ ವ್ಹೀಲ್‌ಗಳಿಗೆ ಹೊಸ ವಿನ್ಯಾಸವನ್ನು ಮಾತ್ರ ಒಳಗೊಂಡಿರುತ್ತದೆ. ಫೇಸ್‌ಲಿಫ್ಟೆಡ್ ನೆಕ್ಸಾನ್‌ನ ಹಿಂಭಾಗವು ಪರಿಷ್ಕೃತ ಬಂಪರ್, ಮರು ಆಕಾರದ ಟೈಲ್‌ಗೇಟ್ ಮತ್ತು LED ಟೈಲ್‌ಲೈಟ್‌ಗಳ ರೂಪದಲ್ಲಿ ವ್ಯತ್ಯಾಸಗಳನ್ನು ಹೊಂದಿರುತ್ತದೆ.

 ಒಳಭಾಗದಲ್ಲಿನ ಅಪ್‌ಡೇಟ್‌ಗಳು

2024 Tata Nexon spied

 ನವೀಕೃತ ಟಾಟಾ ನೆಕ್ಸಾನ್‌ನ ಕ್ಯಾಬಿನ್ ನಮಗೆ ಸರಿಯಾಗಿ ಕಂಡಿಲ್ಲವಾದರೂ, ಟಾಟಾ ಅವಿನ್ಯಾ-ತರಹದ ಸ್ಟೀರಿಂಗ್ ವ್ಹೀಲ್ (ಮಧ್ಯದಲ್ಲಿರುವ ಡಿಸ್‌ಪ್ಲೇ ಜೊತೆಗೆ) ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಗಮನಿಸಿದ್ದೇವೆ. ಕ್ಯಾಬಿನ್ ಒಳಗಿನ ಇತರ ಬದಲಾವಣೆಗಳೆಂದರೆ, ಹೊಸ ನೇರಳೆ ಬಣ್ಣದ ಮೇಲ್ಗವಸು ಮತ್ತು ಸ್ವಲ್ಪ ಪರಿಷ್ಕೃತ ಸೆಂಟರ್ ಕನ್ಸೋಲ್ ಅನ್ನು ಇದು ಪಡೆದಿದೆ.

 ಫೀಚರ್‌ಗಳ ವಿಷಯದಲ್ಲಿ, ನವೀಕೃತ ನೆಕ್ಸಾನ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಸೀಟುಗಳನ್ನು ಪಡೆಯುತ್ತಿದೆ. ಸುರಕ್ಷತೆಯ ಜವಾಬ್ದಾರಿಯನ್ನು ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಪಡೆದಿವೆ.

ಇದನ್ನೂ ಓದಿ: ಮಳೆಗೆ ಹೆದರದ ರೂ. 10 ಲಕ್ಷದೊಳಗಿನ 10 ಕಾರುಗಳು 

 ಪವರ್‌ಟ್ರೇನ್‌ಗಳು

New 1.2-litre turbo-petrol engine

 ನವೀಕೃತ ಟಾಟಾ ನೆಕ್ಸಾನ್, ಹೊಸ 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ (125PS/225Nm) ಜೊತೆಗೆ ಪ್ರಸ್ತುತ ಮಾಡೆಲ್‌ನಲ್ಲಿರುವ 1.5 ಲೀಟರ್ ಡಿಸೇಲ್ ಯೂನಿಟ್ (115PS/160Nm) ಅನ್ನು ಸಹ ಪಡೆಯಬಹುದು. ಹೊಸ ಟರ್ಬೋ-ಪೆಟ್ರೋಲ್ ಎಂಜಿನ್ 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಜೊತೆಗೆ ಬಂದರೆ ಡಿಸೇಲ್ ಎಂಜಿನ್ ಎಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ.

 ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

2024 Tata Nexon spiedನವೀಕೃತ ನೆಕ್ಸಾನ್ ಮುಂದಿನ ವರ್ಷದ ಆರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದ್ದು, ಬೆಲೆಗಳು ರೂ. 8 ಲಕ್ಷದಿಂದ (ಎಕ್ಸ್‌-ಶೋರೂಮ್) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಹ್ಯುಂಡೈ ವೆನ್ಯು, ಮಾರುತಿ ಬ್ರೆಝಾ, ಮಹೀಂದ್ರಾ XUV300, ಕಿಯಾ ಸೊನೆಟ್, ನಿಸಾನ್ ಮ್ಯಾಗ್ನೈಟ್, ಮತ್ತು ರೆನಾಲ್ಟ್ ಕೈಗರ್‌ಗೆ ಪ್ರತಿಸ್ಪರ್ಧೆಯೊಡ್ಡಿದರೆ, ಮಾರುತಿ ಫ್ರಾಂಕ್ಸ್ ಮತ್ತು ಸಿಟ್ರಾನ್ C3 ಅಂತಹ ಕ್ರಾಸ್ಓವರ್ ಎಸ್‌ಯುವಿಗಳಿಗೆ ಪರ್ಯಾಯವಾಗಿದೆ ಎನ್ನಬಹುದು.

 ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್‌ಗಿಂತ ಟಾಟಾ ಪಂಚ್‌ನಲ್ಲಿರುವ 5 ಫೀಚರ್‌ಗಳು

ಇನ್ನಷ್ಟು ಇಲ್ಲಿ ಓದಿ : ಟಾಟಾ ನೆಕ್ಸಾನ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience