Login or Register ಅತ್ಯುತ್ತಮ CarDekho experience ಗೆ
Login

ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್‌ ಸ್ಪೆಕ್‌ ವೇರಿಯಂಟ್‌ ಆಗಿರಬಹುದೇ?

published on ಡಿಸೆಂಬರ್ 08, 2023 03:34 pm by rohit for ಟಾಟಾ ಪಂಚ್‌ ಇವಿ

ಇದು ಸ್ಟೀಲ್‌ ಚಕ್ರಗಳಲ್ಲಿ ಚಲಿಸುತ್ತಿತ್ತು. ಆದರೆ ಹಿಂದಿನ ಪರೀಕ್ಷಾರ್ಥ ವಾಹನಗಳಲ್ಲಿ ಕಂಡುಬಂದಿದ್ದ ಫ್ರೀ ಫ್ಲೋಟಿಂಗ್‌ ಟಚ್‌ ಸ್ಕ್ರೀನ್‌ ಇದರಲ್ಲಿಲ್ಲ

  • ಪಂಚ್ EV‌ ಯು ಟಾಟಾದಿಂದ ಬಿಡುಗಡೆಯಾಗಲಿರುವ ಮುಂದಿನ ಎಲೆಕ್ಟ್ರಿಕ್‌ ಕಾರ್‌ ಆಗಿದೆ.
  • LED DRL ಗಳು ಟರ್ನ್‌ ಇಂಡಿಕೇಟರ್‌ ಗಳಾಗಿಯೂ ಕೆಲಸ ಮಾಡಲಿದ್ದು, ನೆಕ್ಸನ್‌ ನಲ್ಲಿರುವಂತಹ ಸ್ಪ್ಲಿಟ್‌ ಹೆಡ್‌ ಲೈಟ್‌ ಗಳನ್ನು ಪಡೆಯಲಿದೆ.
  • ಕ್ಯಾಬಿನ್‌ ನಲ್ಲಿ 2 ಸ್ಪೋಕ್‌ ಸ್ಟೀಯರಿಂಗ್‌ ವೀಲ್‌ ಮತ್ತು ಪ್ಯಾಡಲ್‌ ಶಿಫ್ಟರ್‌ (ಬ್ಯಾಟರಿ ರೀಜನರೇಶನ್‌ ಗಾಗಿ) ಗಳನ್ನು ನೋಡಬಹುದು.
  • ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರಲಿದ್ದು, ಸುಮಾರು 500 km ವರೆಗಿನ ಶ್ರೇಣಿಯನ್ನು ಒದಗಿಸಲಿದೆ.
  • ಇದು 2024ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 12 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.

ಟಾಟಾ ಪಂಚ್‌ EV ಕಾರು ಬಿಡುಗಡೆಯ ಹಂತವನ್ನು ಸಮೀಪಿಸಿದ್ದು, ಮರೆಮಾಚಿದ ಈ ಎಲೆಕ್ಟ್ರಿಕ್‌ SUV ಯ ಸ್ಪೈ ಶಾಟ್‌ ಗಳು ಆನ್ಲೈನ್‌ ನಲ್ಲಿ ಕಂಡುಬಂದಿವೆ. ಈ ಹೆಚ್ಚಿನ ಸ್ಪೈ ಶಾಟ್‌ ಗಳಲ್ಲಿ, ಈ ಪರೀಕ್ಷಾರ್ಥ EV ವಾಹನವು ಸುಸಜ್ಜಿತವಾಗಿ ಕಂಡು ಬಂದಿದ್ದು, ಇದರ ಲೋವರ್‌ ವೇರಿಯಂಟ್‌ ನಲ್ಲಿ ಏನೆಲ್ಲ ಬರಲಿದೆ ಎಂಬುದನ್ನು ನಾವು ಗಮನಿಸಿದ್ದೇವೆ.

ನಾವು ಹೀಗೆ ಹೇಳಲು ಕಾರಣವೇನು?

ಇತ್ತೀಚಿನ ಚಿತ್ರಗಳಲ್ಲಿ ನಾವು ಗಮನಿಸಿದ ಎರಡು ಪ್ರಮುಖ ಅಂಶಗಳು, ಇದು ಲೋವರ್‌ ಸ್ಪೆಕ್‌ ಆಗಿರಬಹುದೆಂಬುದಕ್ಕೆ ಸಾಕಷ್ಟು ಇಂಬು ನೀಡಿವೆ. ಹಿಂದಿನ ಚಿತ್ರಗಳಲ್ಲಿ ನಾವು ಗಮನಿಸಿದ ಅಲೋಯ್‌ ವೀಲ್‌ ಗಳು ಮತ್ತು ಫ್ರೀ ಫ್ಲೋಟಿಂಗ್‌ (ದೊಡ್ಡದಾದ) ಟಚ್‌ ಸ್ಕ್ರೀನ್‌ ಇದರಲ್ಲಿ ಕಂಡುಬಂದಿಲ್ಲ.

ಆದರೆ ನೆಕ್ಸನ್‌ ನಲ್ಲಿ ಇರುವಂತಹ LED DRL ಗಳು (ಇವು ಟರ್ನ್‌ ಇಂಡಿಕೇಟರ್‌ ಗಳಾಗಿಯೂ ಕೆಲಸ ಮಾಡುತ್ತವೆ) ಮತ್ತು ಸ್ಪ್ಲಿಟ್‌ ಹೆಡ್‌ ಲೈಟ್‌ ಗಳು ಇದರಲ್ಲೂ ಇವೆ. ಈ ಹಿಂದೆ ಕಾಣಿಸಿಕೊಂಡ ಮಾದರಿಗಳು ರಿಯರ್‌ ಡಿಸ್ಕ್‌ ಬ್ರೇಕ್‌ ಗಳು ಮತ್ತು ಮರುವಿನ್ಯಾಸಕ್ಕೆ ಒಳಪಡಿಸಿದ ಗ್ರಿಲ್‌ ಮತ್ತು ಹೊಸ ಏರ್‌ ಡ್ಯಾಮ್‌ ಹೌಸಿಂಗ್‌ ಅನ್ನು ಹೊಂದಿದ್ದವು.

ಕ್ಯಾಬಿನ್‌ ಮತ್ತು ವೈಶಿಷ್ಟ್ಯಗಳಲ್ಲಿ ಮಾರ್ಪಾಡು

​​​​​​​

ಈ ವಾಹನದಲ್ಲಿ ಮಿನುಗುವ ಟಾಟಾ ಲೋಗೊ ಜೊತೆಗೆ 2 ಸ್ಪೋಕ್‌ ಸ್ಟೀಯರಿಂಗ್‌ ವೀಲ್‌ ಮತ್ತು ಪ್ಯಾಡಲ್‌ ಶಿಫ್ಟರ್‌ (ಬ್ಯಾಟರಿ ರೀಜನರೇಶನ್‌ ಮಟ್ಟದ ಹೊಂದಾಣಿಕೆಗಾಗಿ) ಅನ್ನು ನಾವು ಗಮನಿಸಿದ್ದೇವೆ.

ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಚಾಲಕನಿಗಾಗಿ ಸೆಮಿ ಡಿಜಿಟಲ್‌ ಡಿಸ್ಪ್ಲೇ, ಮತ್ತು ಬಹುಶಃ 360 ಡಿಗ್ರಿ ಕ್ಯಾಮರಾವನ್ನು ಸಹ ಪಂಚ್‌ EV ವಾಹನವು ಪಡೆಯಲಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ ಅರು ಏರ್‌ ಬ್ಯಾಗ್‌ ಗಳು, ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಮತ್ತು ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP) ಇತ್ಯಾದಿಗಳು ಸೇರಿವೆ.

ಇದನ್ನು ಸಹ ಓದಿರಿ: ಕ್ಯಾಲೆಂಡರ್‌ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು

ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನ ವಿವರಗಳು

ಪಂಚ್ EV‌ ವಾಹನವು ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರಲಿದ್ದು, 500 km ನಷ್ಟು ಶ್ರೇಣಿಯು ದೊರೆಯಲಿದೆ ಎಂದು ಟಾಟಾ ಸಂಸ್ಥೆಯು ಹೇಳಿದೆ. ಇದರ ಎಲೆಕ್ಟ್ರಿಕ್‌ ಮೋಟಾರ್‌ ಕುರಿತು ಯಾವುದೇ ವಿವರಗಳು ದೊರೆಯದೆ ಇದ್ದರೂ, ಇದು 75 PS ನಿಂದ 100 PS ತನಕದ ಶ್ರೇಣಿಯ ಬಲವನ್ನುಂಟು ಮಾಡಲಿದೆ.

ಇದನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ?

ಟಾಟಾ ಪಂಚ್‌ EV ಕಾರನ್ನು 2024ರ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 12 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಸಿಟ್ರನ್‌ eC3 ಜೊತೆಗೆ ಸ್ಪರ್ಧಿಸಲಿದ್ದು, MG ಕಾಮೆಟ್‌ EV ಮತ್ತು ಟಾಟಾ ಟಿಯಾಗೊ EV ಇತ್ಯಾದಿಗಳೊಂದಿಗೆ ಹೋಲಿಸಿದಾದ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುವ ಬದಲಿ ಆಯ್ಕೆ ಎನಿಸಲಿದೆ.

ಇದನ್ನು ಸಹ ನೋಡಿರಿ: ಭಾರತದಲ್ಲಿ 2024ರಲ್ಲಿ ಹೊರಬರಲಿರುವ ಕಾರುಗಳು: ಮುಂದಿನ ವರ್ಷ ನೀವು ರಸ್ತೆಯಲ್ಲಿ ಕಾಣಲಿರುವ ಕಾರುಗಳ ಎಲ್ಲಾ ಮಾಹಿತಿ ಇಲ್ಲಿದೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಪಂಚ್ AMT

r
ಅವರಿಂದ ಪ್ರಕಟಿಸಲಾಗಿದೆ

rohit

  • 60 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಪಂಚ್‌ EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ