Login or Register ಅತ್ಯುತ್ತಮ CarDekho experience ಗೆ
Login

ಮತ್ತೊಮ್ಮೆ ಫುಲ್‌ ಕವರ್‌ನೊಂದಿಗೆ ಕ್ಲೆವರ್‌ ಆಗಿ ಟೆಸ್ಟಿಂಗ್‌ ನಡೆಸುವಾಗ Tata Punch EV ಪತ್ತೆ, ಇಲ್ಲಿವೆ ಅದರ ಸಂಪೂರ್ಣ ವಿವರಗಳು

ನವೆಂಬರ್ 07, 2023 01:43 pm ರಂದು ansh ಮೂಲಕ ಪ್ರಕಟಿಸಲಾಗಿದೆ
20 Views

ಬಂಪರ್ ಕೆಳಗೆ ಟೇಲ್‌ಪೈಪ್ ಹೊಂದಿರುವ ಈ ಮರೆಮಾಚಿದ ಪಂಚ್‌ನ ಎಕ್ಸಾಸ್ಟ್ ಅನ್ನು ಬಂಪರ್ ಕೆಳಗೆ ಅಳವಡಿಸಲಾಗಿದೆ

  • ಪಂಚ್ ಇವಿ ಸಾಮಾನ್ಯ ಮಾಡೆಲ್‌ಗೆ ಹೋಲಿಸಿದರೆ ಕೆಲವೊಂದು ಡಿಸೈನ್ ಅಪ್‌ಡೇಟ್‌ಗಳನ್ನು ಪಡೆಯಲಿದ್ದು ಇದು ನೆಕ್ಸಾನ್ ಇವಿಯ ಸ್ಟೈಲಿಂಗ್‌ನಂತೆಯೇ ಇದೆ
  • ಇದು 500kmಗೂ ಹೆಚ್ಚಿನ ಡ್ರೈವಿಂಗ್ ರೇಂಜ್ ನೀಡುತ್ತದೆ ಎಂದು ಟಾಟಾ ಹೇಳುತ್ತದೆ, ಅಧಿಕೃತ ಪವರ್‌ಟ್ರೇನ್ ವಿವರಗಳನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
  • ಫೀಚರ್‌ಗಳು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 6 ರ ತನಕ ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮರಾವನ್ನು ಒಳಗೊಂಡಿದೆ.
  • ರೂ 12 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಈ ವರ್ಷ ಬಿಡುಗಡೆಯಾಗಬಹುದು.

ಟಾಟಾ ಪಂಚ್ ಇವಿ ಕೆಲವು ಸಮಯಗಳ ಕಾಲ ಅಭಿವೃದ್ಧಿಯ ಹಂತಗಲ್ಲಿದ್ದು, ಇದರ ಆಗಮನದ ನಿರೀಕ್ಷೆಯಲ್ಲಿರುವಾಗ ಮರೆಮಾಚಲಾದ ಪರೀಕ್ಷಾರ್ಥ ಕಾರನ್ನು ರಸ್ತೆಗಳಲ್ಲಿ ಸ್ಪೈ ಮಾಡಲಾಗಿದೆ. ಈ ಪಂಚ್ ಇವಿಯ ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ, ಪಾರ್ಶ್ವ ಮತ್ತು ಹಿಂಭಾಗದ ಪ್ರೊಫೈಲ್ ಅನ್ನು ಸ್ಪಷ್ಟವಾಗಿ ಗುರುತಿಸಲಾಗಿದ್ದು, ಇದರ ಡಿಸೈನ್ ಬಗ್ಗೆ ಸೂಚನೆ ನೀಡಿದರೂ ದಾರಿ ತಪ್ಪಿಸುತ್ತದೆ. ಇದರ ಸ್ಪೈಶಾಟ್‌ಗಳು ಇಲ್ಲಿವೆ ನೋಡಿ.

ಇದು ಪಂಚ್ ಇವಿ ಇರಬಹುದೇ?

ಹೌದು, ಬಂಪರ್ ಅಡಿಯಲ್ಲಿ ಟೇಲ್ ಪೈಪ್ ಹೊಂದಿರುವ ಇದು, ಇದು the ICE (ಇಂಟರ್ನಲ್ ಕಂಬಶನ್ ಇಂಜಿನ್) ಟಾಟಾ ಪಂಚ್ ಇರಬಹುದೇ ಎಂಬ ಅನುಮಾನವನ್ನು ನಮಗೆ ಮೂಡಿಸುತ್ತದೆ. ಇದು ಇಲೆಕ್ಟ್ರಿಕ್ ಆವೃತ್ತಿ ಎಂದು ಭಾವಿಸಲು ಎರಡು ಕಾರಣಗಳಿವೆ ಮೊದಲನೆಯದು, ಪಂಚ್ ಇವಿಯನ್ನು ಈ ಹಿಂದೆ ರಿಯರ್ ವ್ಹೀಲ್ ಡಿಸ್ಕ್ ಬ್ರೇಕ್‌ಗೊಂದಿಗೆ ಗುರುತಿಸಲಾಗಿದ್ದು, ಇವುಗಳನ್ನು ಸ್ಪೈಶಾಟ್‌ಗಳಲ್ಲಿಯೂ ನೋಡಬಹುದಾಗಿದೆ, ಎರಡನೆಯದಾಗಿ ಪ್ರಸ್ತುತ ICE ಪಂಚ್‌ನ ಟೇಲ್ ಪೈಪ್ ಡಿಸೈನ್ ಅನ್ನು ಹಿಂಭಾಗದ ಬಂಪರ್ ಜೊತೆಗೆ ಸಂಯೋಜಿಸಲಾಗಿದ್ದರೂ, ಅದಕ್ಕೆ ಜೋಡಿಕೊಂಡಿರುವುದಿಲ್ಲ.

ಟಾಟಾ ಪಂಚ್ ಇವಿ ಇತರ ಡಿಸೈನ್ ಬದಲಾವಣೆಗಳನ್ನೂ ಪಡೆದಿದ್ದು, ಇದು ನವೀಕೃತ ಟಾಟಾ ನೆಕ್ಸಾನ್ ಇವಿಯಿಂದ ಪ್ರೇರಣೆ ಪಡೆದ ಹೊಚ್ಚ ಹೊಸ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಇಲ್ಲಿಯ ತನಕದ ಸ್ಪೈ ಶಾಟ್‌ಗಳನ್ನು ಆಧರಿಸಿ, ಈ ಪಂಚ್ ಇವಿ ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಅಪ್‌ಡೇಟ್ ಮಾಡಲಾದ ಏರ್ ಡ್ಯಾಮ್‌ಗಳನ್ನು ಪಡೆದಿದೆ. ಈ ಮೈಕ್ರೋ SUVಯ ಒಟ್ಟಾರೆ ಡಿಸೈನ್ ಇದರ ಪೆಟ್ರೋಲ್ ಆವೃತ್ತಿಯನ್ನು ಹೋಲುತ್ತದೆಯಾದರೂ, ಟಾಟಾ ಇದಕ್ಕೆ ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಯಲ್ಲಿ ಕಾಣಬಹುದಾದ ಇವಿ-ವಿಶಿಷ್ಟ ಬ್ಲೂ ಎಲಿಮೆಂಟ್‌ಗಳನ್ನು ಸುತ್ತಲೂ ಸೇರಿಸಿರಬಹುದು.

ಕ್ಯಾಬಿನ್ ಮತ್ತು ಫೀಚರ್‌ಗಳು

ಕ್ಯಾಬಿನ್ ಕೂಡಾ ಇದರ ಇಲೆಕ್ಟ್ರಿಕ್ ಸ್ವಭಾವವನ್ನು ಎತ್ತಿತೋರಿಸುವ ಹೊಸ ಥೀಮ್ ಅನ್ನು ಒಳಗೊಂಡಿದೆ, ಆದರೆ, ಇದರ ಕುರಿತು ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ. ಆದಾಗ್ಯೂ, ಇದರ ಡ್ಯಾಶ್‌ಬೋರ್ಡ್ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು ಟಾಟಾ ಲೋಗೋ ಬ್ಯಾಕ್‌ಲಿಟ್ ಜೊತೆಗೆ ಟಾಟಾದ ಹೊಸ ಎರಡು-ಸ್ಪೋಕ್ ಸ್ಟೀರಿಂಗ್ ಸ್ಪೈ ಶಾಟ್‌ ಹೊಂದಿರುವುದು ನಮಗೆ ವ್ಹೀಲ್ ಹಿಂದಿನ ಸ್ಪೈಶಾಟ್‌ಗಳಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ಜಾಗ್ವಾರ್ ಲ್ಯಾಂಡ್ ರೋವರ್‌ನ EMA ಪ್ಲಾಟ್‌ಫಾರ್ಮ್ ಆಧಾರಿತವಾಗಿದೆ ಟಾಟಾ ಅವಿನ್ಯಾ ಇವಿ

ಉಳಿದಂತೆ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6ರ ತನಕದ ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿಯರ್‌ವ್ಯೂ ಕ್ಯಾಮರಾದಂತಹ ಫೀಚರ್‌ಗಳನ್ನು ಒಳಗೊಂಡಿರಬಹುದು.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ಪಂಚ್ ಇವಿಯು ಟಿಗೋರ್ ಇವಿ ಮತ್ತು ಟಿಯಾಗೋ ಇವಿಯಂತಹ ಬ್ಯಾಟರಿ ಪ್ಯಾಕ್‌ನಂತಹುದನ್ನೇ ಹೊಂದಿರಬಹುದು ಎಂದು ನಾವು ಈ ಮೊದಲು ಭಾವಿಸಿದ್ದೆವು. ಆದಾಗ್ಯೂ, ಪಂಚ್ ಇವಿ 500km ಗೂ ಮಿಗಿಲಾದ ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿರಲಿದೆ ಎಂದು ಟಾಟಾ ಇತ್ತೀಚೆಗೆ ಅಧಿಕೃತವಾಗಿ ಬಹಿರಂಗಪಡಿಸಿದೆ. ಅಂದರೆ, ಈ ಪುಟ್ಟ ಇವಿ ಹೆಚ್ಚುವರಿ ದೂರಕ್ಕೆ ಹೆಚ್ಚಿನ ದಕ್ಷತೆಯುಳ್ಳ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ.

ಬಿಡುಗಡೆ ಮತ್ತು ಬೆಲೆ

ಟಾಟಾ ಪಂಚ್ ಇವಿ ರೂ 12 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಈ ವರ್ಷದ ಅಂತ್ಯದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಇದು ಸಿಟ್ರಾನ್ eC3 ಗೆ ನೇರ ಪ್ರತಿಸ್ಪರ್ಧಿಯಾಗಿರಲಿದ್ದು, ಟಾಟಾ ಟಿಯಾಗೋ ಇವಿ ಮತ್ತು MG ಕಾಮೆಟ್ ಇವಿಗೆ ದುಬಾರಿ ಪರ್ಯಾಯವಾಗಿರಲಿದೆ.

ಇನ್ನಷ್ಟು ಓದಿ : ಟಾಟಾ ಪಂಚ್ AMT

Share via

Write your Comment on Tata ಪಂಚ್‌ EV

H
hogo
Nov 7, 2023, 5:44:25 PM

These posts are random

ಇನ್ನಷ್ಟು ಅನ್ವೇಷಿಸಿ on ಟಾಟಾ ಪಂಚ್‌ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ