Tata Punch EVಯ ಬಿಡುಗಡೆ ಸಮೀಪಿಸುತ್ತಿದ್ದಂತೆ ಡೀಲರ್‌ಶಿಪ್‌ಗಳನ್ನು ತಲುಪುತ್ತಿರುವ ಯುನಿಟ್‌ಗಳು
ಟಾಟಾ ಪಂಚ್ ಇವಿ ಗಾಗಿ ansh ಮೂಲಕ ಜನವರಿ 18, 2024 12:49 pm ರಂದು ಪ್ರಕಟಿಸಲಾಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಪಂಚ್ EV ನ ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌ನ ವಿವರಗಳು ಬಹಿರಂಗವಾಗಿಲ್ಲವಾದರೂ ಇದು 500 ಕಿ.ಮೀ. ಗಿಂತ ಹೆಚ್ಚಿನ ರೇಂಜ್ ಅನ್ನು ಹೊಂದಿರುವ ನಿರೀಕ್ಷೆಯಿದೆ.
- ಇದರ ಮುಂಭಾಗದ ಪ್ರೊಫೈಲ್ ಪೂರ್ಣ-ಅಗಲದ ಎಲ್‌ಇಡಿ DRL ಗಳು, ವರ್ಟಿಕಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ದೊಡ್ಡ ಮುಂಭಾಗದ ಬಂಪರ್‌ನೊಂದಿಗೆ ನೆಕ್ಸಾನ್ EV ಅನ್ನು ಹೋಲುತ್ತದೆ.
- ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್ ಅನ್ನು ಪಡೆದುಕೊಂಡಿದೆ, ಟಾಟಾದ ಹೊಸ ಸ್ಟೀರಿಂಗ್ ವ್ಹೀಲ್ ಪ್ರಕಾಶಿತ ಲೋಗೋ ಮತ್ತು ಸ್ಪರ್ಶ ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಹೊಂದಿದೆ.
- ಫೀಚರ್‌ಗಳಲ್ಲಿ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ.
- ಬೆಲೆ ರೂ. 12 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಟಾಟಾ ಪಂಚ್ EV ಅಧಿಕೃತವಾಗಿ ಅನಾವರಣಗೊಂಡಿದೆ ಮತ್ತು ಬುಕ್ಕಿಂಗ್ ಕೂಡ ಈಗಾಗಲೇ ಪ್ರಾರಂಭವಾಗಿದೆ. ಈಗ, ಟಾಟಾ ಈ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೆ ಮುಂಚಿತವಾಗಿ ಡೀಲರ್‌ಶಿಪ್‌ಗಳಿಗೆ ತಲುಪಿಸಲು ಪ್ರಾರಂಭಿಸಿದೆ. ಟಾಟಾ ಪಂಚ್ EV ಯ ವಿಶೇಷತೆಗಳ ಬಗ್ಗೆ ಕೆಳಗೆ ನೀಡಲಾಗಿದೆ.
ಆಧುನಿಕ ವಿನ್ಯಾಸ
ಪಂಚ್ EV ಅದರ ICE (ಅಂತರ್ದಹನ ಎಂಜಿನ್) ಪ್ರತಿರೂಪವಾದ ಟಾಟಾ ಪಂಚ್ ಅನ್ನು ಆಧರಿಸಿದೆ, ಆದರೆ ಅದರ ವಿನ್ಯಾಸ ಮಾತ್ರ ಗಮನಾರ್ಹವಾಗಿ ವಿಭಿನ್ನವಾಗಿದೆ. ಪಂಚ್ EV ಯ ವಿನ್ಯಾಸವು ನೆಕ್ಸಾನ್ EVಯಿಂದ ಪ್ರೇರಿತವಾಗಿದೆ, ಇದರಲ್ಲಿ ಬಾನೆಟ್-ಸ್ಪ್ಯಾನಿಂಗ್ ಎಲ್ಇಡಿ DRL ಗಳು, ವರ್ಟಿಕಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಏರೋಡೈನಾಮಿಕ್ ಅಲಾಯ್ ವ್ಹೀಲ್‌ಗಳು ಸೇರಿವೆ. ಹಿಂಭಾಗದ ವಿನ್ಯಾಸವು ಪೆಟ್ರೊಲ್- ಪಂಚ್‌ನಂತೆಯೇ ಇದೆ ಮತ್ತು ಇದು ಚಂಕಿ ಬಂಪರ್, ಸ್ಕಿಡ್ ಪ್ಲೇಟ್ ಮತ್ತು ಅದೇ ರೀತಿಯ ಟೈಲ್ ಲೈಟ್‌ಗಳನ್ನು ಹೊಂದಿದೆ.
ಇದನ್ನೂ ಓದಿ: ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು ಮತ್ತು ಅಪ್‌ಡೇಟ್ ಮಾಡಲಾದ ಸೆಂಟರ್ ಕನ್ಸೋಲ್ ಅನ್ನು ಪಡೆಯಲಿರುವ ಟಾಟಾ ಪಂಚ್ EV
ಒಳಭಾಗದಲ್ಲಿ, ಪಂಚ್ EV ನೆಕ್ಸಾನ್ EV ಯಂತೆಯೇ ಗೋಚರಿಸುತ್ತದೆ. ಇದರ ಕ್ಯಾಬಿನ್ ಪ್ರಕಾಶಿತ ಟಾಟಾ ಲೋಗೋ, ಸ್ಪರ್ಶ ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಮತ್ತು ಡ್ಯುಯಲ್-ಟೋನ್ ಥೀಮ್‌ನೊಂದಿಗೆ ಹೊಸ ಎರಡು-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.
ಫೀಚರ್‌ಗಳು
ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಮತ್ತು ಡೀಲರ್‌ಶಿಪ್‌ನಲ್ಲಿ ಕಂಡುಬರುವ ಟಾಟಾ ಪಂಚ್ EV ಫೋಟೋಗಳ ಪ್ರಕಾರ, ಇದು ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳನ್ನು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಸ್ಪರ್ಶ-ಆಧಾರಿತ ಪ್ಯಾನೆಲ್‌ನೊಂದಿಗೆ ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಹೊಂದಿರಲಿದೆ. ಇದು ಟಾಟಾದ Arcade.ev ಫೀಚರ್ ಅನ್ನು ಸಹ ಪಡೆಯುತ್ತದೆ, ಇದರಿಂದಾಗಿ ಪ್ರಯಾಣಿಕರಿಗೆ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ ಟಿವಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳು ಸೇರಿವೆ.
ಪವರ್‌ಟ್ರೇನ್ ವಿವರಗಳು
ಪಂಚ್ EV ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿರುತ್ತದೆ, ಆದರೆ ಕಂಪನಿಯು ಅವುಗಳ ನಿರ್ದಿಷ್ಟ ವಿವರಣೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದು ಟಾಟಾದ ಹೊಸ Acti.EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ ಮತ್ತು ಅದರ ಪ್ರಮಾಣೀಕೃತ ರೇಂಜ್ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಇರುವ ಸಾಧ್ಯತೆಯಿದೆ. ಇದು DC ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಮಲ್ಟಿ ಚಾರ್ಜಿಂಗ್ ಆಯ್ಕೆಗಳನ್ನು ಸಹ ಬೆಂಬಲಿಸುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ EV ಯ ಬೆಲೆ ರೂ. 12 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ) ಎಂದು ನಿರೀಕ್ಷಿಸಲಾಗಿದೆ. ಇದು ಸಿಟ್ರೊಯೆನ್ eC3ನೊಂದಿಗೆ ಸ್ಪರ್ಧಿಸುತ್ತದೆ. ಇದು ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಗಳಿಗೆ ಹೆಚ್ಚು ಅಗ್ಗದ ಪರ್ಯಾಯ ಆಯ್ಕೆಯಾಗಿದೆ.
ಇನ್ನಷ್ಟು ಓದಿ: ಟಾಟಾ ಪಂಚ್ AMT
0 out of 0 found this helpful