• English
  • Login / Register

ಟಾಟಾ ಪಂಚ್ EVಯ ಹೊಸ ಇಂಟೀರಿಯರ್ ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆ

ಟಾಟಾ ಪಂಚ್‌ ಇವಿ ಗಾಗಿ rohit ಮೂಲಕ ಜೂನ್ 30, 2023 02:33 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಸ್ಪೈ ಶಾಟ್‌ಗಳು ಈ ನವೀಕೃತ ಮೈಕ್ರೋ SUV ಹೇಗೆ ಕಾಣುತ್ತದೆ ಎಂಬುದರ ಕುರಿತು ನಮಗೆ ಸುಳಿವು ನೀಡುತ್ತದೆ

Tata Punch EV spied

  •  ಎಕ್ಸ್‌ಟೀರಿಯನ್‌ನ ಪ್ರಮುಖಾಂಶಗಳು, ಡಿಸ್ಕ್ ಬ್ರೇಕ್‌ಗಳು ಮತ್ತು ಸಂಪರ್ಕಿತ LED DRL ಸ್ಟ್ರಿಪ್‌ನೊಂದಿಗೆ ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಿವೆ.

  •  ಹೊಸ ಸ್ಪೈ ಶಾಟ್‌ಗಳು ಒಳಗೆ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ತೋರಿಸುತ್ತದೆ. 

  •  ಅಲ್ಲದೇ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಒಳಗೊಂಡ  ಪರಿಷ್ಕೃತ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ಪಡೆಯಬಹುದು.

  •  ನಿರೀಕ್ಷಿತ ಫೀಚರ್‌ಗಳು 360-ಡಿಗ್ರಿ ಕ್ಯಾಮರಾ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. 

  •  ಟಿಗಾರ್ EVಯಂತೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆದಿರಬಹುದು; 300-350kmನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಬಹುದು.

  •  ಈ ವರ್ಷದ ಕೊನೆಯಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದ್ದು ಬೆಲೆಗಳು ರೂ12 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ.

 ಸ್ವಲ್ಪ ಸಮಯದ ಹಿಂದೆ ಟಾಟಾ ಪಂಚ್ EV ಯ ಪರೀಕ್ಷಾರ್ಥ ಕಾರನ್ನು ಗುರುತಿಸಲಾಗಿದ್ದು, ಇದು ಪ್ರಸ್ತುತ ಮೈಕ್ರೋ SUV ಆವೃತ್ತಿಯನ್ನು ತುಂಬಾ ಹೋಲುತ್ತಿತ್ತು. ಈಗ ಆನ್‌ಲೈನ್‌ನಲ್ಲಿ ಕಾಣುವ  ಈ ತಾಜಾ ಸ್ಪೈ ಚಿತ್ರಗಳು ಪಂಚ್ EV ಯ ತಾಜಾ ಡಿಸೈನ್ ಅನ್ನು ತೋರಿಸುತ್ತವೆ. ಅಲ್ಲದೇ ಈ ಸ್ಪೈ ಶಾಟ್‌ಗಳು ಇಲೆಕ್ಟ್ರಿಕ್  SUVಯ ಪರಿಷ್ಕೃತ ಕ್ಯಾಬಿನ್‌ನ ನೋಟವನ್ನೂ ನಮಗೆ ನೀಡುತ್ತದೆ.

 

ಅನೇಕ ಅಪ್‌ಡೇಟ್‌ಗಳು 

Tata Punch EV spied

 ಇತ್ತೀಚಿನ ಸ್ಪೈಶಾಟ್‌ಗಳ ಪ್ರಕಾರ, ಟಾಟಾ ಪಂಚ್‌ನ ಮುಂಬರುವ ಎಲ್ಲಾ-ಇಲೆಕ್ಟ್ರಿಕ್ ಪುನರಾವರ್ತನೆಗಳು ಸಣ್ಣ ಮಟ್ಟದ ಡಿಸೈನ್ ಅಪ್‌ಡೇಟ್ ಅನ್ನು ಪೆಡೆಯುತ್ತಿದ್ದು, ನವೀಕೃತ ಪಂಚ್‌ನಲ್ಲೂ ಕೂಡಾ ಇದರ ಸುಳಿವನ್ನು ನೀಡುತ್ತದೆ. ಮುಂಭಾಗದ ಬಂಪರ್‌ನ ಡಿಸೈನ್ ಅಂಶಗಳು ನವೀಕೃತ ನೆಕ್ಸಾನ್‌ನಲ್ಲಿರುವ ಡಿಸೈನ್ ಅಂಶಗಳನ್ನು ಹೋಲುತ್ತದೆ. ಅಲ್ಲದೇ ಇದು ಟಾಟಾದ ಹೊಸ EV ಯಲ್ಲಿ ಕಾಣುವಂತೆ ಫ್ರಂಟ್ ಫೇಸಿಯಾದ ಅಗಲಕ್ಕೆ ಹೊಸ ಸಂಪರ್ಕಿತ LED DRL ಸ್ಟ್ರಿಪ್ ಅನ್ನು ಹೊಂದಿರುವಂತೆ ಕಾಣುತ್ತದೆ. 

 ಬದಿಗಳಿಗೆ ಬಂದಾಗ, ಎರಡು ಗಮನಾರ್ಹ ವ್ಯತ್ಯಾಸಗಳೆಂದರೆ, ಸುತ್ತಲೂ ಡಿಸ್ಕ್ ಬ್ರೇಕ್ ಹೊಂದಿರುವ ಹೊಸ ಅಲಾಯ್ ವ್ಹೀಲ್‌ಗಳು  ಮತ್ತು 360-ಡಿಗ್ರಿ ಕ್ಯಾಮರಾವನ್ನು ಸೂಚಿಸುವ ಹೊಸ ORVM- ಮೌಂಟ್ ಮಾಡಿದ ಸೈಡ್ ಕ್ಯಾಮರಾಗಳು.

 ಇದನ್ನೂ ಓದಿ:  ಈ ತನಕ 50,000 ಜನರು ಟಾಟಾ ನೆಕ್ಸಾನ್ EV ಅನ್ನು ಖರೀದಿಸಿದ್ದಾರೆ

 

ಫ್ರೆಶ್ ಕ್ಯಾಬಿನ್

Tata Punch EV new steering wheel spied

Tata Punch EV new interior spied

 ಹಿಂದಿನ ಸ್ಪೈ ಶಾಟ್‌ಗಳಲ್ಲಿ ಕಂಡಿರುವುದಕ್ಕೆ ಪ್ರತಿಯಾಗಿ, ಹೊಸ ಸ್ಪೈ ಶಾಟ್‌ಗಳು ಈ ಪಂಚ್ EV ಗೆ ಪ್ರಸ್ತುತ ಇರುವ ಪಂಚ್‌ನ ಬ್ಲ್ಯೂ ಹೈಲೈಟ್‌ನ ಕ್ಯಾಬಿನ್ ಅನ್ನು ನೀಡಲಾಗುವುದಿಲ್ಲ ಎಂದು ದೃಢಪಡಿಸುತ್ತದೆ. ಬದಲಿಗೆ, ಇದು ಪರಿಷ್ಕೃತ ಡ್ಯಾಶ್‌ಬೋರ್ಡ್ ಡಿಸೈನ್ ಜೊತೆಗೆ ಹೊಸ ಎರಡು 2-ಸ್ಪೋಕ್ ಸ್ಟೀರಿಂಗ್ ವ್ಹೀಲ್‌ನೊಂದಿಗೆ ಬರಬಹುದು ಹಾಗೂ ಇದನ್ನು 2023 ರ ಆಟೋ ಎಕ್ಸ್‌ಪೋನಲ್ಲಿ ಹತ್ತಿರದ ಉತ್ಪಾದನೆ ಆವೃತ್ತಿಯಲ್ಲಿ ಬಹಿರಂಗಪಡಿಸಲಾಯಿತು. ಅಲ್ಲದೇ ಇದು ಬ್ಯಾಟರಿ ಪುನರುತ್ಪಾದನೆಗಾಗಿ ಪ್ಯಾಡಲ್ ಶಿಫ್ಟರ್‌ಗಳನ್ನು (ಸ್ಪೈ ಚಿತ್ರದಲ್ಲಿ ಕಾಣುವಂತೆ) ಹೊಂದಿರಬಹುದು ಮತ್ತು  ನವೀಕೃತ ನೆಕ್ಸಾನ್‌ನಿಂದ ಡಿಜಿಟಲ್‌ ಡ್ರೈವರ್ ಡಿಸ್‌ಪ್ಲೇ ಹೊಂದಿರುವ ಸಂಭವ ಇದೆ. 

ಇತರ ಪಟ್ಟಿಯಲ್ಲಿರುವ ನಿರೀಕ್ಷಿತ ಫೀಚರ್‌ಗಳೆಂದರೆ, ಹೊಸ ಟಚ್-ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್, ಟಚ್‌ಸ್ಕ್ರೀನ್ ಸಿಸ್ಟಮ್, ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ಒಂದು ರಿವರ್ಸಿಂಗ್ ಕ್ಯಾಮರಾವನ್ನು ಒಳಗೊಂಡಿದೆ.

 

ಇಲೆಕ್ಟ್ರಿಕ್ ಪವರ್‌ಟ್ರೇನ್ ವಿವರಗಳು

Tata Tigor EV battery pack

 ಈ ಪಂಚ್ EV ALFA ವೇದಿಕೆ ಮೇಲೆ ಟಾಟಾ ಬಿಡುಗಡೆ ಮಾಡುವ ಮೊದಲ EV ಆಗಿರಲಿದೆ. ಇದರ ಇಲೆಕ್ಟ್ರಿಕ್ ಪವರ್‌ಟ್ರೇನ್‌ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಈ ಬ್ರ್ಯಾಂಡ್‌ನ ಉಳಿದ EV ಲೈನ್‌ಅಪ್‌ನಂತೆ ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು  ಹೊಂದಿರಬಹುದು ಎಂಬುದು ನಮ್ಮ ನಿರೀಕ್ಷೆ. ಈ ಪಂಚ್ EV ಸುಮಾರು 300km ರಿಂದ 350km ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಬಹುದು.

ಇದನ್ನೂ ಪರಿಶೀಲಿಸಿ: ವೀಕ್ಷಿಸಿ: ಟಾಟಾ ಟಿಯಾಗೋ EV ವರ್ಸಸ್ ಸಿಟ್ರನ್ eC3 - AC ಬಳಕೆಯಿಂದ ಬ್ಯಾಟರಿ ಡ್ರೈನ್ ಪರೀಕ್ಷೆ

 

ಮಾರುಕಟ್ಟೆಗೆ ಬಿಡುಗಡೆ ಮತ್ತು ಬೆಲೆ

ಟಾಟಾ ಈ ಪಂಚ್ EV ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬದು ಮತ್ತು ಇದರ ಬೆಲೆಗಳು ರೂ 12 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಇದು ಸಿಟ್ರಾನ್ eC3 ಗೆ ಪೈಪೋಟಿ ನೀಡುತ್ತದೆ ಮಾತ್ರವಲ್ಲದೇ MG ಕಾಮೆಟ್ EV ಮತ್ತು ಟಾಟಾ ಟಿಯಾಗೋ EVಗೆ ದುಬಾರಿ ಪರ್ಯಾಯ ಆಗಿರಲಿದೆ.

ಚಿತ್ರದ ಮೂಲ

ಇನ್ನಷ್ಟು ಓದಿ : ಟಾಟಾ ಪಂಚ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಪಂಚ್‌ EV

Read Full News

explore ಇನ್ನಷ್ಟು on ಟಾಟಾ ಪಂಚ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience