ಟೊಯೋಟಾ ಇನ್ನೋವಾ ಕ್ರಿಸ್ಟಾ ಈಗ ಇನ್ನೋವಾ ಹೈಕ್ರಾಸ್‌ಗಿಂತ ಅಗ್ಗ

published on ಮಾರ್ಚ್‌ 15, 2023 04:52 pm by ansh for ಟೊಯೋಟಾ ಇನೋವಾ ಸ್ಫಟಿಕ

 • 34 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಈ ಡೀಸೆಲ್ ಮಾತ್ರ MPVಯ ಆರಂಭಿಕ ವೇರಿಯೆಂಟ್‌ಗಳ ಬೆಲೆಗಳನ್ನು ಬಹಿರಂಗಪಡಿಸಲಾಗಿದೆ.

Updated Toyota Innova Crysta

 •  2023 ಇನ್ನೋವಾ ಕ್ರಿಸ್ಟಾದ ಬೆಲೆಗಳು ರೂ 19.13 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. 
 •  RDE-ಅನುಸರಣೆಯ 2.4-ಲೀಟರ್ ಡೀಸೆಲ್ ಇಂಜಿನ್ 150PS ಮತ್ತು 343Nm ನಷ್ಟು ರೇಟ್/ ಮಾಡಲಾಗಿದೆ.
 •  G, GX, VX ಮತ್ತು ZX ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಬರುತ್ತದೆ. VX ಮತ್ತು ZXನ ಬೆಲೆಗಳು ಪ್ರಕಟಿಸಲು ಬಾಕಿ ಇವೆ.
 •  ಏಳು ಏರ್‌ಬ್ಯಾಗ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಂಟು ವಿಧದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟುಗಳನ್ನು ಹೊಂದಿದೆ.
 •  ಇನ್ನೋವಾ ಕ್ರಿಸ್ಟಾಗೆ ಬುಕಿಂಗ್‌ಗಳು ತೆರೆದಿವೆ.

 ನವೀಕೃತ ಇನ್ನೋವಾ ಕ್ರಿಸ್ಟಾವನ್ನು ಇತ್ತೀಚೆಗಷ್ಟೆ ಅನಾವರಣಗೊಳಿಸಿದ ಟೊಯೋಟಾ ಈ  MPV ಗೆ ಬುಕಿಂಗ್ ಪ್ರಾರಂಭಿಸಿದೆ. ಅಧಿಕೃತ ಬಿಡುಗಡೆಗೆ ಕಾಯುತ್ತಿರುವ ಈ MPV ಭಾರತದಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಲಾರಂಭಿಸಿದೆ ಮತ್ತು ನಾವೀಗ ಅದರ ಲೋವರ್-ಸ್ಪೆಕ್ ವೇರಿಯೆಂಟ್‌ಗಳ ಬೆಲೆಗಳನ್ನು ಹೊಂದಿದ್ದೇವೆ.

 ಬೆಲೆಗಳು

2023 Toyota Innova Crysta Front

ಡೀಸೆಲ್ ಮಾತ್ರದ ಇನ್ನೋವಾ ಕ್ರಿಸ್ಟಾದ G ಮತ್ತು GX ವೇರಿಯೆಂಟ್‌ಗಳ ಬೆಲೆಗಳನ್ನು ಇಲ್ಲಿ ಪರಿಶೀಲಿಸಿ:

ವೇರಿಯೆಂಟ್‌ಗಳು

ಇನ್ನೋವಾ ಕ್ರಿಸ್ಟಾ (ಡೀಸೆಲ್ MT)

ಇನ್ನೋವಾ ಹೈಕ್ರಾಸ್ (ಪೆಟ್ರೋಲ್ CVT)

ವ್ಯತ್ಯಾಸ

ಬೆಲೆ (ಎಕ್ಸ್-ಶೋರೂಂ)

ಬೆಲೆ (ಎಕ್ಸ್-ಶೋರೂಂ)

G 7S

ರೂ 19.13 ಲಕ್ಷ

ರೂ 18.55 ಲಕ್ಷ

+ ರೂ 58,000

G 8S

ರೂ 19.18 ಲಕ್ಷ

ರೂ 18.60 ಲಕ್ಷ

+ ರೂ 58,000

GX 7S

ರೂ 19.99 ಲಕ್ಷ

ರೂ 19.40 ಲಕ್ಷ

+ ರೂ 59,000

GX 8S

ರೂ 19.99 ಲಕ್ಷ

ರೂ 19.45 ಲಕ್ಷ

+ ರೂ 54,000

ಇನ್ನೋವಾ ಕ್ರಿಸ್ಟಾದ ಈ ಬೇಸ್-ಸ್ಪೆಕ್ G ವೇರಿಯೆಂಟ್ ಬೇಸ್-ಸ್ಪೆಕ್ ಇನ್ನೋವಾ ಹೈಕ್ರಾಸ್‌ಗಿಂತ ರೂ 58,000ಗಳಷ್ಟು ಹೆಚ್ಚು ದುಬಾರಿಯಾಗಿದೆ. ಇನ್ನೋವಾ ಕ್ರಿಸ್ಟಾದ GX ವೇರಿಯೆಂಟ್‌ಗಳು ಅನುಗುಣವಾದ ಹೈಕ್ರಾಸ್ ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ ರೂ 59,000 ಹೆಚ್ಚು ಬೆಲೆ ಹೊಂದಿದೆ.

ಇದನ್ನೂ ಓದಿ: ಹೊಸ ಹೈಬ್ರಿಡ್ ವೇರಿಯೆಂಟ್‌ ಆಗಮನದೊಂದಿಗೆ ಟೋಯೋಟಾ ಹೈಕ್ರಾಸ್ ಬೆಲೆ ಏರಿಕೆಯನ್ನು ಪಡೆದಿದೆ

 ಹೈಕ್ರಾಸ್‌ನ ಹೆಚ್ಚು ಕೈಗೆಟುಕುವ ವೇರಿಯೆಂಟ್‌ಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 2-ಲೀಟರ್‌ನ ಸಾಮಾನ್ಯ ಪೆಟ್ರೋಲ್ ಇಂಜಿನ್ ಹೊಂದಿದ್ದು ಇದಕ್ಕೆ ಹೋಲಿಸಿದರೆ ಕ್ರಿಸ್ಟಾದಲ್ಲಿ ಕೇವಲ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾತ್ರ ಇದೆ ಎಂಬದು ಗಮನಾರ್ಹವಾಗಿದೆ.

ಪವರ್‌ಟ್ರೇನ್

2023 Toyota Innova Crysta Rear

ನಿರ್ದಿಷ್ಟತೆಗಳು

ಇಂಜಿನ್

2.4-ಲೀಟರ್ ಡೀಸೆಲ್ ಇಂಜಿನ್

ಟ್ರಾನ್ಸ್‌ಮಿಷನ್

ಫೈವ್-ಸ್ಪೀಡ್ ಮ್ಯಾನುವಲ್

ಪವರ್

150PS

ಟಾರ್ಕ್

343Nm

 ನವೀಕೃತ ಕ್ರಿಸ್ಟಾ ಡೀಸೆಲ್-ಮ್ಯಾನುವಲ್ ಪವರ್‌ಟ್ರೇನ್ ಅನ್ನು ಮಾತ್ರ ಹೊಂದಿದೆ. ಇದು BS6 ಫೇಸ್ 2 ಮತ್ತು RDE ಎಮಿಷನ್ ಮಾನದಂಡಗಳ ಅನುಸರಣೆಗಾಗಿ ತನ್ನ 2.4-ಲೀಟರ್ ಡೀಸೆಲ್ ಯೂನಿಟ್ ಅನ್ನು ಉಳಿಸಿಕೊಂಡಿದೆ, ಅಲ್ಲದೇ E20 ಅನುಸರಣೆಯನ್ನೂ ಹೊಂದಿದೆ. ಇಲ್ಲಿ ಆಟೋಮ್ಯಾಟಿಕ್ ಆಯ್ಕೆ ಇರುವುದಿಲ್ಲ ಆದರೆ ನೀವು ರಿಯರ್-ವ್ಹೀಲ್-ಡ್ರೈವ್ ಸೆಟಪ್ ಅನ್ನು ಪಡೆಯುತ್ತೀರಿ.

ಫೀಚರ್‌ಗಳು

2023 Toyota Innova Crysta Cabin

 • ಈ ನವೀಕೃತ ಇನ್ನೋವಾ ಕ್ರಿಸ್ಟಾ ಅನ್ನು ತುಸು ನವೀಕರಿಸಿದ ಫ್ರಂಟ್ ಫೇಸಿಯ ಮತ್ತು ಹೊಸ ಗ್ರಿಲ್‌ನೊಂದಿಗೆ ಗುರುತಿಸಬಹುದು. ಅಷ್ಟಲ್ಲದೇ ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಿಕ್ಸ್-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಂಟು ವಿಧದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟುಗಳಂತಹ ಅನೇಕ ಫೀಚರ್‌ಗಳನ್ನು ಹೊಂದಿದೆ. ಪ್ರಯಾಣಿಕ ಸುರಕ್ಷತೆಯ ವಿಷಯಕ್ಕೆ ಬಂದರೆ, ಈ ನವೀಕೃತ ಕ್ರಿಸ್ಟಾ ಏಳು ಏರ್‌ಬ್ಯಾಗ್‌ಗಳು, ABS ಜತೆಗಿನ EBD, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ರಿಯರ್‌ವ್ಯೂ ಕ್ಯಾಮರಾ ಮತ್ತು ಎಲ್ಲಾ ಪ್ರಯಾಣಿಕರಿಗೆ ಥ್ರೀ-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ. ಈ ಲೋವರ್-ಸ್ಪೆಕ್ G ಮತ್ತು GX ವೇರಿಯೆಂಟ್‌ಗಳು ಹ್ಯಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಕೀರಹಿತ ಎಂಟ್ರಿ, ಮ್ಯಾನುವಲ್ AC, ಮೂರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಬ್ರೇಕ್ ಅಸಿಸ್ಟ್‌ಗಳೊಂದಿಗೆ ಬರುತ್ತದೆ.

ಪ್ರತಿಸ್ಪರ್ಧಿಗಳು

2023 Toyota Innova Crysta

ಹೆಚ್ಚಿನ ಆರಂಭಿಕ ಬೆಲೆಗಳೊಂದಿಗೆ, ಉಳಿದವುಗಳ ಬೆಲೆಗಳು ಪ್ರಕಟಗೊಂಡರೆ ಈ MPV ಇನ್ನೋವಾ ಹೈಕ್ರಸ್‌ನ ಕೆಳಗಿನ ಸ್ಥಾನದಲ್ಲಿ ಬರುತ್ತದೆ.ಈ ಇನ್ನೋವಾ ಕ್ರಿಸ್ಟಾ, ಕಿಯಾ ಕಾರೆನ್ಸ್ ಮತ್ತು ಮಹೀಂದ್ರಾ ಮರಾಝೋಗೆ ಅತ್ಯುತ್ತಮ ಪರ್ಯಾಯವೆಂದು ಪರಿಗಣಿಸಬಹುದಾಗಿದೆ.

  ಅವರಿಂದ ಪ್ರಕಟಿಸಲಾಗಿದೆ
  was this article helpful ?

  0 out of 0 found this helpful

  Write your Comment ನಲ್ಲಿ ಟೊಯೋಟಾ ಇನೋವಾ Crysta

  Read Full News
  • ಟೊಯೋಟಾ ಇನೋವಾ hycross
  • ಟೊಯೋಟಾ ಇನೋವಾ ಸ್ಫಟಿಕ
  • ಟ್ರೆಂಡಿಂಗ್
  • ಇತ್ತಿಚ್ಚಿನ

  trendingಎಮ್‌ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  ×
  We need your ನಗರ to customize your experience