Honda Elevateನೊಂದಿಗೆ ಆನಂದಿಸಿ ಈ ಎಲ್ಲಾ ಎಕ್ಸಸರಿಗಳು
ಈ ಕಾಂಪ್ಯಾಕ್ಟ್ ಎಸ್‌ಯುವಿ ಮೂರು ಪರಿಕರ ಪ್ಯಾಕ್‌ಗಳು ಮತ್ತು ವಿವಿಧ ವೈಯಕ್ತಿಕ ಆಂತರಿಕ ಮತ್ತು ಬಾಹ್ಯ ಪರಿಕರಗಳೊಂದಿಗೆ ಬರುತ್ತದೆ.
- ಹೋಂಡಾ ಎಲಿವೇಟ್ ರೂ. 11 ಲಕ್ಷದಿಂದ ರೂ. 16 ಲಕ್ಷದವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿದೆ.
- ಇದು SV, V, VX, ಮತ್ತು ZX ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ಬರುತ್ತದೆ
- 121PS ಮತ್ತು 145Nm ಬಿಡುಗಡೆ ಮಾಡುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ.
- 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ADAS ಫೀಚರ್‌ಗಳನ್ನು ಇದು ಒಳಗೊಂಡಿದೆ.
ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಇತ್ತೀಚಿನ ಸ್ಪರ್ಧಿಯಾಗಿ ಈ ಹೋಂಡಾ ಎಲಿವೇಟ್ ಅನ್ನು ಬಿಡುಗಡೆ ಮಾಡಲಾಗಿದ್ದು ಇದರ ಬೆಲೆಯು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತದೆ. ಇದನ್ನು ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ ಮತ್ತು ಇದನ್ನು ಖರೀದಿಸಲು ಬಯಸುವವರು ಅನೇಕ ಅಧಿಕೃತ ಪರಿಕರಗಳೊಂದಿಗೆ ವೈಯಕ್ತೀಕರಿಸಬಹುದು.
ಪರಿಕರ ಪ್ಯಾಕ್‌ಗಳು
ಮೂಲಭೂತ ಕಿಟ್ |
ಸಿಗ್ನೇಚರ್ ಪ್ಯಾಕೇಜ್ |
ಆರ್ಮರ್ ಪ್ಯಾಕೇಜ್ |
|
|
|
ನಿಮ್ಮ ಎಲಿವೇಟ್‌ಗಾಗಿ ಪ್ರತ್ಯೇಕ ಪರಿಕರಗಳ ಆಯ್ಕೆಗಳನ್ನು ನೀವು ಬಯಸದಿದ್ದರೆ ನೀವು ಈಗಾಗಲೇ ನೀಡಲಾದ ಪರಿಕರಗಳಿಂದ ಆಯ್ದುಕೊಳ್ಳಬಹುದು. ಮೂಲಭೂತ ಕಿಟ್, ಈ ಹೆಸರೇ ಸೂಚಿಸುವಂತೆ ಇದು ಮೂಲಭೂತ ಪರಿಕರಗಳನ್ನು ಹೊಂದಿರುತ್ತದೆ. ಸಿಗ್ನೇಚರ್ ಪ್ಯಾಕೇಜ್ ಹೆಚ್ಚಾಗಿ ಕಾರಿನ ಸುತ್ತಲಿನ ಗಾರ್ನಿಶಿಂಗ್ ಅನ್ನು ಹೊಂದಿರುತ್ತದೆ ಮತ್ತು ಆರ್ಮರ್ ಪ್ಯಾಕೇಜ್ ಎಲ್ಲಾ ಕಡೆಯ ರಕ್ಷಕಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಹೈದರಾಬಾದ್‌ನಲ್ಲಿ 1 ದಿನದಲ್ಲಿ 100 ಎಲಿವೇಟ್ ಎಸ್‌ಯುವಿಗಳ ಡೆಲಿವರಿ
ವೈಯಕ್ತಿಕ ಪರಿಕರಗಳು
ಈ ಪರಿಕರ ಪ್ಯಾಕ್‌ನಲ್ಲಿ ನೀವು ಬಯಸಿರುವುದು ಲಭ್ಯವಿಲ್ಲದಿದ್ದರೆ, ನೀವು ವೈಯಕ್ತಿಕ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಪರಿಕರಗಳಿಂದ ಆಯ್ದುಕೊಳ್ಳಬಹುದು. ಮೇಲೆ ತಿಳಿಸಲಾದ ಪರಿಕರ ಪಟ್ಟಿಗೆ ಹೆಚ್ಚುವರಿಯಾಗಿ ಇಲ್ಲಿ ಇನ್ನಿತರ ಆಯ್ಕೆಗಳಿವೆ:
ಇಂಟೀರಿಯರ್ ಪರಿಕರಗಳು |
ಎಕ್ಸ್‌ಟೀರಿಯರ್ ಪರಿಕರಗಳು |
ಮಸಾಜರ್ ಅನ್ನು ಹೊಂದಿರುವ ವೆಂಟಿಲೇಟೆಡ್ ಸೀಟ್ ಕವರ್ ಟಾಪ್ |
ಸ್ಟೆಪ್ ಇಲ್ಯುಮಿನೇಷನ್ |
ಕುಶನ್ ಹೆಡ್ ರೆಸ್ಟ್ |
ಮುಂಭಾಗದ ಫಾಗ್ ಲೈಟ್ |
ಸ್ಟೀರಿಂಗ್ ವ್ಹೀಲ್ ಕವರ್ |
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ |
ಸೀಟಿನ ಕವರ್ - ಲಕ್ಸುರಿಯಸ್ ಬ್ಲ್ಯಾಕ್, ಬ್ಲ್ಯಾಕ್ ಮತ್ತು ಬೀಜ್ (ಒಂದು ರೀತಿಯ ಉಣ್ಣೆ ಬಟ್ಟೆ), ಚೌಕ ಮಾದರಿ ಮತ್ತ ರಿಬ್ಬಡ್ ಮಾದರಿ (ಕಪ್ಪು) |
ಬಾಡಿ ಕವರ್ |
ಫೂಟ್ ಲೈಟ್ |
|
ಕಾರ್ಗೋ ಟ್ರೇ |
|
ಡ್ರೈವ್ ವ್ಯೂ ರೆಕಾರ್ಡರ್ |
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಈ ಹೋಂಡಾ ಎಲಿವೇಟ್ ಬೆಲೆಯನ್ನು ರೂ.11 ಲಕ್ಷದಿಂದ ರೂ. 16 ಲಕ್ಷಗಳ (ಪ್ರಾಸ್ತಾವಿಕ, ಎಕ್ಸ್-ಶೋರೂಮ್) ನಡುವೆ ನಿಗದಿಪಡಿಸಲಾಗಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಕ್, ಎಂಜಿ ಆಸ್ಟರ್, ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗೆ ಪೈಪೋಟಿ ನೀಡಲಿದೆ.
ಇನ್ನಷ್ಟು ಇಲ್ಲಿ ಓದಿ : ಹೋಂಡಾ ಎಲಿವೇಟ್ ಆನ್ ರೋಡ್ ಬೆಲೆ