• English
  • Login / Register

ಈ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿವೆ ಮೂರು ಕಾರುಗಳು

ಮಾರುತಿ ಜಿಮ್ನಿ ಗಾಗಿ tarun ಮೂಲಕ ಮೇ 30, 2023 02:00 pm ರಂದು ಪ್ರಕಟಿಸಲಾಗಿದೆ

  • 95 Views
  • ಕಾಮೆಂಟ್‌ ಅನ್ನು ಬರೆಯಿರಿ

ಥಾರ್ ನಂತರದ ಬಹು ನಿರೀಕ್ಷಿತ ಲೈಫ್‌ಸ್ಟೈಲ್ SUV ಜೂನ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ

These Are The 3 Upcoming Cars Of June 2023

2023 ಮಧ್ಯಕ್ಕೆ ಪ್ರವೇಶಿಸುತ್ತಿದ್ದಂತೆಯೇ, ದೊಡ್ಡ ಬ್ರ್ಯಾಂಡ್‌ಗಳಿಂದ ನಾವು ಕೆಲವು ಪ್ರಮುಖ ಬಿಡುಗಡೆಗಳು ಮತ್ತು ಅನಾವರಣಗಳನ್ನು ನೋಡಲಿದ್ದೇವೆ. ಇತ್ತೀಚಿನ ವರ್ಷಗಳ ಮಾರುತಿಯ ಬಹು ನಿರೀಕ್ಷಿತ ಮಾಡಲ್‌ನ ಬಿಡುಗಡೆ ಅಂತಿಮವಾಗಿ ಈ ಜೂನ್‌ನಲ್ಲಿ ಆಗಲಿದ್ದು, ಹ್ಯುಂಡೈ ಮತ್ತು ಹೋಂಡಾದಿಂದ ನಾವು ಎರಡು ಹೊಚ್ಚ ಹೊಸ SUVಗಳನ್ನು ನೋಡಲಿದ್ದೇವೆ. ಲಕ್ಷುರಿ ವಿಭಾಗದಲ್ಲಿ ಮರ್ಸಿಡಿಸ್-ಬೆನ್ಝ್ ಮತ್ತೊಮ್ಮೆ ದೇಶಕ್ಕೆ ಪುನರಾಗಮಿಸುತ್ತಿದೆ.

 ಜೂನ್ ತಿಂಗಳಿನಲ್ಲಿ ಪಾದಾರ್ಪಣೆ ಮಾಡಲಿರುವ ಮೂರು ಕಾರುಗಳ ವಿವರಗಳು ಇಲ್ಲಿವೆ:

ಮಾರುತಿ ಜಿಮ್ನಿ

Maruti Jimny

 ಅಂತಿಮವಾಗಿ ನಾಲ್ಕು ವರ್ಷಗಳ ನಂತರ ಜಿಪ್ಸಿಯ ಬದಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಮಾರುತಿಯು 2023ರ ಆಟೋ ಎಕ್ಸ್‌ಪೋದಲ್ಲಿ ವಿಶಿಷ್ಟವಾದ 5-ಡೋರ್ ಅವತಾರ್-ಜಿಮ್ನಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ SUV 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದ್ದು 105PS ಮತ್ತು 134Nm ಉತ್ಪಾದಿಸುತ್ತದೆ ಮತ್ತು ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ AT ಆಯ್ಕೆಗಳೊಂದಿಗೆ ಜೋಡಿಸಲಾಗಿದೆ. ಈ ಜಿಮ್ನಿ 4X4 ಡ್ರೈವ್‌ಟ್ರೇನ್‌ನೊಂದಿಗೆ ಲೋ ರೇಂಜ್ ಗೇರ್‌ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಖರೀದಿದಾರರು ಈ ಕಾರಿನಲ್ಲಿ ವಾಷರ್ ಹೊಂದಿರುವ ಎಲ್ಇಡಿ ಹೆಡ್‌ಲ್ಯಾಂಪ್‌, 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತಾರೆ. ಅತ್ಯಂತ ಸಾಮರ್ಥ್ಯವುಳ್ಳ ಮಾರುತಿಯು ಸುಮಾರು 10 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಬೆಲೆಯನ್ನು ನಿರೀಕ್ಷಿಸಲಾಗಿದೆ.

ಇದೇ ವೇಳೆ, ನಾವು ಈಗಾಗಲೇ ಜಿಮ್ನಿಯನ್ನು ಡ್ರೈವ್ ಮಾಡಿದ್ದೇವೆ ಹಾಗೂ ಇದರ ವಿವರವಾದ ವಿಮರ್ಶೆ ಇಲ್ಲಿದೆ

 ಹೋಂಡಾ ಎಲಿವೇಟ್

Honda Elevate

 ಜೂನ್ 6ರಂದು ಆಗಮಿಸಲಿರುವ ಹೊಚ್ಚ ಹೊಸ ಹೋಂಡಾ ಎಲಿವೇಟ್ ಅನ್ನು ನಾವೀಗ ನೋಡಲಿದ್ದೇವೆ. ಈ ಎಲಿವೇಟ್ ಕೇವಲ ಪೆಟ್ರೋಲ್ ಇಂಜಿನ್‌ನೊಂದಿಗೆ ಮಾತ್ರ ಲಭ್ಯವಿದ್ದು, ಸಿಟಿಯ 1.5-ಲೀಟರ್ iVTEC ಯೂನಿಟ್ ಅನ್ನು ಪಡೆದಿದೆ. ಸೆಡಾನ್‌ನ ಪ್ರಬಲ ಹೈಬ್ರಿಡ್ ತಂತ್ರಜ್ಞಾನವನ್ನು ಆಫರ್‌ನಲ್ಲಿ ನಿರೀಕ್ಷಿಸಬಹುದು, ಬಹುಶಃ ಬಿಡುಗಡೆಯ ಸ್ವಲ್ಪ ದಿವಸದ ನಂತರ ಪರಿಚಯಿಸಲಾಗುತ್ತದೆ. ಫೀಚರ್‌ಗಳ ಪಟ್ಟಿಯಲ್ಲಿ, ಈ SUV ಇಲೆಕ್ಟ್ರಿಕ್ ಸನ್‌ರೂಫ್ ಪಡೆದಿದ್ದು, ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಡ್ರೈವರ್ ಡಿಜಿಟಲ್ ಡಿಸ್‌ಪ್ಲೇ, ಆರರ ತನಕ ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಹೊಂದಿರುವ ನಿರೀಕ್ಷೆ ಇದೆ.

ಮರ್ಸಿಡಿಸ್ ಬೆನ್ಝ್ AMG SL55

Mercedes Benz AMG SL55

12ವರ್ಷಗಳ ನಂತರ,  ಐತಿಹಾಸಿಕ ‘SL’ ನಾಮಫಲಕವು ಮರಳಿ ಭಾರತಕ್ಕೆ ಬರುತ್ತಿದೆ. ಏಳನೇ-ಪೀಳಿಗೆ ಮರ್ಸಿಡಿಸ್ ಬೆನ್ಝ್ SL ತನ್ನ AMG 55 4MATIC+ ರೂಪದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲಿದ್ದು, ಆಲ್-ವ್ಹೀಲ್ ಡ್ರೈವ್ ಮತ್ತು ರಿಯರ್ ವ್ಹೀಲ್ ಸ್ಟೀರಿಂಗ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಬಾನೆಟ್ ಅಡಿಯಲ್ಲಿ ದೈತ್ಯ 4-ಲೀಟರ್ ಟ್ವಿನ್ -ಟರ್ಬೋ V8 ಇದ್ದು, ಇದರಲ್ಲಿ ನಿಲುಗಡೆಯಿಂದ 100kmph ತನಕ ಕೇವಲ 3.9 ಸೆಕೆಂಡುಗಳಲ್ಲಿ ಝೂಮ್ ಮಾಡಬಹುದು. ಬೆಲೆ ಎಷ್ಟಿರಬಹುದು? ಸುಮಾರು ರೂ 2 ಕೋಟಿಗಳಷ್ಟು (ಎಕ್ಸ್-ಶೋರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಜಿಮ್ನಿ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience