• English
  • Login / Register

ಡಿಸೈನ್ ಸ್ಕೆಚ್‌ಗಳಲ್ಲಿ 2024 ಹ್ಯುಂಡೈ ಕ್ರೆಟಾದ ಫೈನಲ್ ಲುಕ್ ಇಲ್ಲಿದೆ

ಹುಂಡೈ ಕ್ರೆಟಾ ಗಾಗಿ shreyash ಮೂಲಕ ಜನವರಿ 10, 2024 03:01 pm ರಂದು ಪ್ರಕಟಿಸಲಾಗಿದೆ

  • 38 Views
  • ಕಾಮೆಂಟ್‌ ಅನ್ನು ಬರೆಯಿರಿ

ಇತ್ತೀಚೆಗೆ ಲೀಕ್ ಆಗಿರುವ ಚಿತ್ರಗಳಲ್ಲಿ ಕಂಡುಬಂದಿರುವ ಇದರ ಡಿಸೈನ್ ಸ್ಕೆಚ್ 2024 ಕ್ರೆಟಾದ ಅಂತಿಮ ರೂಪಕ್ಕೆ ಸಾಕಷ್ಟು ಹೋಲುತ್ತದೆ.

2024 Hyundai Creta

  • ಮುಂಭಾಗದಲ್ಲಿ, ಕ್ರೆಟಾ ಫೇಸ್ಲಿಫ್ಟ್ ಹೊಚ್ಚ ಹೊಸ ಗ್ರಿಲ್, ಹೊಸ ಹೆಡ್ಲೈಟ್ಗಳು ಮತ್ತು ಹೆಚ್ಚು ಪ್ರಮುಖವಾದ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ.

  • SUV ಯು ಈಗ ತಲೆಕೆಳಗಾದ L- ಆಕಾರದ ಡಿಸೈನ್ ನೊಂದಿಗೆ ಫುಲ್ ವಿಡ್ತ್ LED DRL ಗಳನ್ನು ಹೊಂದಿದೆ.

  • ಇನ್ನು ಹಿಂಭಾಗದಲ್ಲಿ, ಮುಂಭಾಗದಲ್ಲಿರುವಂತೆಯೇ ಅದೇ ರೀತಿಯ ತಲೆಕೆಳಗಾದ L-ಆಕಾರದ ಡಿಸೈನ್ ನೊಂದಿಗೆ ಹೊಸದಾದ ಕನೆಕ್ಟ್ ಆಗಿರುವ LED ಟೈಲ್ ಲೈಟ್ ಸೆಟಪ್ ಅನ್ನು ಪಡೆದಿದೆ.

  • ಹಾಗೆಯೇ ಕ್ಯಾಬಿನ್ ನಲ್ಲಿ ಕಿಯಾ ಸೆಲ್ಟೋಸ್ನಲ್ಲಿ ಇರುವ ಇಂಟೆಗ್ರೇಟ್ ಆಗಿರುವ ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ.

  • ಹುಂಡೈನ ಫೇಸ್ಲಿಫ್ಟ್ ಆಗಿರುವ ಕಾಂಪ್ಯಾಕ್ಟ್ SUV ಈಗ ಐಚ್ಛಿಕ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಜೊತೆಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ.

ಹ್ಯುಂಡೈ ಕ್ರೆಟಾವು ಜನವರಿ 16, 2024 ರಂದು ಮೇಕ್ ಓವರ್ ಪಡೆಯಲು ಸಿದ್ಧವಾಗಿದೆ ಮತ್ತು ಹ್ಯುಂಡೈ ಈಗಾಗಲೇ ಬುಕಿಂಗ್ ಅನ್ನು ತೆರೆದಿದೆ ಮತ್ತು ಅದಕ್ಕಾಗಿ ಟೀಸರ್ಗಳನ್ನು ಹೊರತರಲು ಪ್ರಾರಂಭಿಸಿದೆ.

ಈಗ, ಹ್ಯುಂಡೈ 2024 ಕ್ರೆಟಾದ SUV ಮುಂಭಾಗ ಮತ್ತು ಹಿಂಭಾಗವನ್ನು ಪ್ರದರ್ಶಿಸುವ ಒಂದೆರಡು ಡಿಸೈನ್ ಸ್ಕೆಚ್ ಗಳನ್ನು ಬಿಡುಗಡೆ ಮಾಡಿದೆ. ಡಿಸೈನ್ ಸ್ಕೆಚ್ ನಲ್ಲಿ ಕ್ರೆಟಾ ಹೇಗೆ ಕಾಣುತ್ತದೆ ಎಂದು ನೋಡೋಣ.

ಮುಂಭಾಗ

Hyundai Creta 2024 Front Sketch

ಅಪ್ಡೇಟ್ ನೊಂದಿಗೆ, ಹೊಸ ಆಯತಾಕಾರದ ಗ್ರಿಲ್ ಮತ್ತು ಮುಂಭಾಗದಲ್ಲಿರುವ ಪ್ರಮುಖ ಸಿಲ್ವರ್ ಸ್ಕಿಡ್ ಪ್ಲೇಟ್ನಿಂದಾಗಿ ಹುಂಡೈ ಕ್ರೆಟಾ ಫೇಸ್ಲಿಫ್ಟ್ ಈಗ ಇನ್ನಷ್ಟು ಬೆರಗಾಗಿಸುವ ಲುಕ್ ಅನ್ನು ಪಡೆದಿದೆ. ಇದು ತಲೆಕೆಳಗಾದ L-ಆಕಾರದ ಡಿಸೈನ್ ನೊಂದಿಗೆ ಬಾನೆಟ್ ನಷ್ಟು-ಅಗಲದ LED DRL ಸ್ಟ್ರಿಪ್ ಮತ್ತು ಹೆಡ್ಲೈಟ್ಗಳಿಗಾಗಿ ಅಪ್ಡೇಟ್ ಆಗಿರುವ ಚೌಕದ ಆಕಾರವನ್ನು ಪಡೆದಿದೆ. ಒಟ್ಟಾರೆಯಾಗಿ, 2024 ಕ್ರೆಟಾದ ಅಂತಿಮ ರೂಪವು ಲೀಕ್ ಆಗಿರುವ ಚಿತ್ರಗಳಲ್ಲಿ ತೋರಿಸಿದ ಡಿಸೈನ್ ಸ್ಕೆಚ್ ಅನ್ನು ಹೋಲುತ್ತದೆ.

ಹಿಂಭಾಗ

Hyundai Creta 2024 Rear Sketch

The bolder appearance of the 2024 Hyundai Creta continues at the rear as well, with all-new connected LED taillamps featuring the same inverted L-shaped element as the front. Further contributing to its stronger appeal is the prominent silver skid plate. Of course, the wheels are more sensibly proportioned on the final car, and housed neatly under the arches.

2024 ಹ್ಯುಂಡೈ ಕ್ರೆಟಾ ಹಿಂಭಾಗದಲ್ಲಿ ಕೂಡ ಬೆರಗುಗೊಳಿಸುವ ನೋಟವನ್ನು ಪಡೆದಿದೆ. ಇದು ಮುಂಭಾಗದಲ್ಲಿ ಇರುವಂತೆಯೇ ತಲೆಕೆಳಗಾದ L-ಆಕಾರದ ಡಿಸೈನ್ ಹೊಸ ಕನೆಕ್ಟ್ ಆಗಿರುವ LED ಟೈಲ್ಲ್ಯಾಂಪ್ಗಳನ್ನು ಒಳಗೊಂಡಿದೆ. ಪ್ರಮುಖವಾದ ಸಿಲ್ವರ್ ಸ್ಕಿಡ್ ಪ್ಲೇಟ್ ಕೂಡ ಅದರ ಆಕರ್ಷಣೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ. ಹಾಗೆಯೇ, ಕಾರಿನ ಅಂತಿಮ ವರ್ಷನ್ ನಲ್ಲಿ ಚಕ್ರಗಳನ್ನು ಹೆಚ್ಚು ಸೂಕ್ತವಾಗಿ ಫಿಟ್ ಮಾಡಲಾಗಿದೆ ಮತ್ತು ಆರ್ಚ್ ಗಳ ಅಡಿಯಲ್ಲಿ ಸುಂದರವಾಗಿ ಇರಿಸಲಾಗಿದೆ.

ಇದನ್ನು ಕೂಡ ಓದಿ: ಕಿಯಾ ಸೋನೆಟ್ ಫೇಸ್‌ಲಿಫ್ಟ್ ನೀಡುವ ಇಂಧನ ದಕ್ಷತೆಯ ಅಂಕಿಅಂಶಗಳು ಬಹಿರಂಗವಾಗಿದೆ

  • ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ

  • ಉಪಯೋಗಿಸಿದ ಕಾರಿನ ಮೌಲ್ಯಮಾಪನ

ಹೊಚ್ಚ ಹೊಸ ಕ್ಯಾಬಿನ್ ಮತ್ತು ಫೀಚರ್ ಗಳು

2024 Hyundai Creta cabin

ಒಳಭಾಗದಲ್ಲಿ, ಕ್ರೆಟಾ 2024 ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿರುವ ಪರಿಷ್ಕೃತ ಡ್ಯಾಶ್ಬೋರ್ಡ್ ಡಿಸೈನ್ ಅನ್ನು ಪಡೆದುಕೊಂಡಿದೆ (ಇನ್ಫೋಟೈನ್ಮೆಂಟ್ಗಾಗಿ 10.25-ಇಂಚು ಮತ್ತು ಡ್ರೈವರ್ಡಿಸ್ಪ್ಲೇಗಾಗಿ 10.25-ಇಂಚು). SUV ನಲ್ಲಿರುವ ಇತರ ಫೀಚರ್ ಗಳೆಂದರೆ 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್ರೂಫ್, ವೈರ್ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು.

ಇದು ಆರು ಏರ್ಬ್ಯಾಗ್ಗಳು, 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಪರಿಚಯದೊಂದಿಗೆ ಸುರಕ್ಷತೆಯ ಅಂಶವನ್ನು ಹೆಚ್ಚಿಸಲಾಗಿದೆ.

ಹೊಸದಾದ ಟರ್ಬೊ-ಪೆಟ್ರೋಲ್ ಎಂಜಿನ್

2024 Hyundai Creta

ಹುಂಡೈ ಕ್ರೆಟಾ ಫೇಸ್ಲಿಫ್ಟ್ ಈಗ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಜೊತೆಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ಅನ್ನು ಕೂಡ ನೀಡಲಾಗಿದೆ. ಹಳೆ ಆವೃತ್ತಿಯಲ್ಲಿ ಲಭ್ಯವಿದ್ದ ಇತರ ಎರಡು ಎಂಜಿನ್ ಆಯ್ಕೆಗಳನ್ನು ಕೂಡ ಹುಂಡೈ SUV ಉಳಿಸಿಕೊಂಡಿದೆ, ಅವುಗಳೆಂದರೆ: 1.5-ಲೀಟರ್ ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (115 PS / 144 Nm) ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ CVT ಯೊಂದಿಗೆ ಜೋಡಿಸಲಾಗಿದೆ, ಮತ್ತು 1.5- ಲೀಟರ್ ಡೀಸೆಲ್ ಎಂಜಿನ್ (116 PS / 250 Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್.

ಇದನ್ನು ಕೂಡ ಓದಿ: ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ವೇರಿಯಂಟ್ ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಬಹಿರಂಗಪಡಿಸಲಾಗಿದೆ

ನಿರೀಕ್ಷಿಸಬಹುದಾದ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 ಹ್ಯುಂಡೈ ಕ್ರೆಟಾವನ್ನು 11 ಲಕ್ಷಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲಿವೇಟ್ ಮತ್ತು ಸಿಟ್ರೊನ್ C3 ಏರ್‌ಕ್ರಾಸ್‌ಗಳ ಜೊತೆಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಕ್ರೆಟಾ ಆಟೋಮ್ಯಾಟಿಕ್

was this article helpful ?

Write your Comment on Hyundai ಕ್ರೆಟಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience