• English
  • Login / Register

ಈ 10 ಪ್ರಮುಖ ಫೀಚರ್‌ಗಳು ಹೋಂಡಾ ಎಲಿವೇಟರ್‌ನಲ್ಲಿ ಲಭ್ಯವಿಲ್ಲ..!

ಹೊಂಡಾ ಇಲೆವಟ್ ಗಾಗಿ tarun ಮೂಲಕ ಜೂನ್ 09, 2023 02:00 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೋಂಡಾ ಎಲಿವೇಟ್ ಪ್ರೀಮಿಯಂ ಆಫರಿಂಗ್ ರೂಪದಲ್ಲಿ ಲಭ್ಯವಾಗಲಿದೆ ಆದರೆ ಅದರ ಪ್ರತಿಸ್ಪರ್ಧಿಗಳಲ್ಲಿ ಸಾಮಾನ್ಯವಾಗಿರುವ ಕೆಲವು ಸೌಕರ್ಯಗಳನ್ನು ಹೊಂದಿಲ್ಲ.

Honda Elevate

ಹೋಂಡಾ ಇತ್ತೀಚೆಗೆ ತನ್ನ ಮೊದಲ ಕಾಂಪ್ಯಾಕ್ಟ್ ಎಸ್‌ಯುವಿ ಕಾರಾದ ಎಲಿವೇಟ್ ಅನ್ನು ಅನಾವರಣಗೊಳಿಸಿದೆ. ಈ ವಾಹನವು ಸುಮಾರು 12 ಲಕ್ಷ ರೂ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯೊಂದಿಗೆ ಭಾರತದಲ್ಲಿ ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ. ಹೋಂಡಾ ಎಲಿವೇಟ್ ಎಸ್‌ಯುವಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸಿಟ್ರೊಯೆನ್ C3 ಏರ್‌ಕ್ರಾಸ್, ಸ್ಕೋಡಾ ಕುಶಾಕ್ ಮತ್ತು MG ಆಸ್ಟರ್‌ಗಳೊಂದಿಗೆ ಸ್ಪರ್ಧಿಸಲಿದೆ.

 ಹೋಂಡಾ ಎಲಿವೇಟ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 121PS ಪವರ್ ಮತ್ತು 145Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಜೊತೆಗೆ, ಇದು 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುವುದು. ಇದು ADAS, 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ. ಇದು ಅನೇಕ ಪ್ರೀಮಿಯಂ ಫೀಚರ್‌ಗಳು ಮತ್ತು ಸೊಗಸಾದ ವಿನ್ಯಾಸವನ್ನು ಪಡೆದುಕೊಂಡಿದೆಯಾದರೂ,  ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದು ಹೊಂದಿಲ್ಲದ ಪ್ರಮುಖ 10 ಫೀಚರ್‌ಗಳ ಬಗ್ಗೆ ಇಲ್ಲಿ ನಾವು ಮತ್ತಷ್ಟು ತಿಳಿದುಕೊಳ್ಳೋಣ:

 

ವಿಹಂಗಮ ಸನ್‌ರೂಫ್

Hyundai Creta Panoramic Sunroof

ಎಲಿವೇಟ್ ಸಿಂಗಲ್-ಪೇನ್ ಸನ್‌ರೂಫ್ ಅನ್ನು ಪಡೆದರೆ ಅದರ ಪ್ರತಿಸ್ಪರ್ಧಿಗಳು ವಿಹಂಗಮ ಸನ್‌ರೂಫ್ ಅನ್ನು ಪಡೆದುಕೊಳ್ಳುತ್ತವೆ. ಹ್ಯುಂಡೈ ಕ್ರೆಟಾ, MG ಆಸ್ಟರ್, ಟೊಯೊಟಾ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಲ್ಲಿ ವಿಹಂಗಮ ಸನ್‌ರೂಫ್ ಅನ್ನು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ, ಈ ವೈಶಿಷ್ಟ್ಯವು ಕಾಂಪ್ಯಾಕ್ಟ್ ಮತ್ತು ದೊಡ್ಡ ಎಸ್‌ಯುವಿ ಕಾರುಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಮತ್ತು ಇದರಿಂದಾಗಿ ಕ್ಯಾಬಿನ್ ಅನುಭವವು ಹೆಚ್ಚು ಉತ್ತಮವಾಗುತ್ತದೆ. ಹೋಂಡಾ ಸಾಕಷ್ಟು ತಡವಾಗಿ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸುತ್ತಿರುವುದರಿಂದ ಹೆಚ್ಚಿನವರು ಅದರಲ್ಲಿ ಈ ಫೀಚರ್ ಅನ್ನು ನಿರೀಕ್ಷಿಸುತ್ತಿದ್ದರು.

 

360-ಡಿಗ್ರಿ ಕ್ಯಾಮೆರಾ

Maruti Grand Vitara Review

 ಹೋಂಡಾ ಇದರಲ್ಲಿ ರಿಯರ್‌ವ್ಯೂ ಕ್ಯಾಮೆರಾ ಮತ್ತು 'ಲೇನ್‌ವಾಚ್' ಕ್ಯಾಮೆರಾ ಫೀಚರ್ ಅನ್ನು ನೀಡಿದೆ, ಆದರೆ 360 ಡಿಗ್ರಿ ಕ್ಯಾಮೆರಾ ವ್ಯೂ ಸೆಟಪ್ ಅನ್ನು ನೀಡಿಲ್ಲ. 360 ಡಿಗ್ರಿ ಕ್ಯಾಮೆರಾ ಫೀಚರ್‌ನಿಂದ ಕಾರು ಪಾರ್ಕಿಂಗ್ ಮತ್ತು ದಟ್ಟಣೆಯ ಪ್ರದೇಶಗಳಲ್ಲಿ ಚಾಲನೆ ಸುಲಭವಾಗುತ್ತದೆ. ಅದರ ಪ್ರತಿಸ್ಪರ್ಧಿಗಳಾದ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು MG ಆಸ್ಟರ್‌ನಲ್ಲಿ ಈ ಫೀಚರ್ ಅನ್ನು ನೀಡಲಾಗಿದೆ.

 ಸಂಬಂಧಿತ: ಜುಲೈಯಲ್ಲಿ ಹೋಂಡಾ  ಎಲಿವೇಟ್ ಬುಕಿಂಗ್‌ಗಳನ್ನು ತೆರೆಯುವುದರೊಂದಿಗೆ  ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿಗಳು/ಇ-ಎಸ್‌ಯುವಿಗಳ ವಿರುದ್ಧ ಸೆಣಸಲಿದೆ

 

ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

 ಇತ್ತೀಚಿನ ಕಾರುಗಳಲ್ಲಿ ಆಧುನಿಕ ಉಪಕರಣ ಸಮೂಹವೇ ಕಂಡುಬರುತ್ತಿದೆ, ಅಂತಹ ಸಮಯದಲ್ಲಿ, ಹೋಂಡಾ ಎಲಿವೇಟ್‌ನಲ್ಲಿ 7-ಇಂಚಿನ TFTಯೊಂದಿಗೆ ಅರೆ-ಡಿಜಿಟಲ್ ಯುನಿಟ್ ಅನ್ನು ನೀಡಿದೆ. ಇದು ಖಂಡಿತವಾಗಿಯೂ ಉತ್ತಮವಾಗಿದೆ ಆದರೆ ಔಟ್‌ಡೇಟೆಡ್ ರೀತಿ ತೋರುತ್ತದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಚ್ಚಹೊಸ ಹೋಂಡಾ ಆಗಿ ಕಂಗೊಳಿಸಲು, ಅದರ ಕ್ಯಾಬಿನ್ ಅನುಭವವನ್ನು ಹೆಚ್ಚು ಉತ್ತಮವಾಗಿಸಲು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ನೀಡಬಹುದಾಗಿತ್ತು. ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್, MG ಆಸ್ಟರ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೌಕರ್ಯವನ್ನು ಪಡೆಯುತ್ತವೆ.

 

ಬ್ರಾಂಡೆಡ್ ಆಡಿಯೋ ಸಿಸ್ಟಮ್

 ಹೋಂಡಾ ಎಲಿವೇಟ್ ಈ ವಿಭಾಗದಲ್ಲಿ ಸಾಕಷ್ಟು ಸಾಮಾನ್ಯವಾಗಿರುವ ಬ್ರ್ಯಾಂಡೆಡ್ ಆಡಿಯೊ ಸಿಸ್ಟಮ್ ಫೀಚರ್ ಅನ್ನು ಕೂಡ ಪಡೆದುಕೊಂಡಿಲ್ಲ. ಹೋಂಡಾ ತನ್ನ ಟಾಪ್ ವೇರಿಯಂಟ್‌ನಲ್ಲಾದರೂ ಈ ಫೀಚರ್ ಅನ್ನು ನೀಡಬಹುದಿತ್ತು. ಕ್ರೆಟಾ ಮತ್ತು ಸೆಲ್ಟೋಸ್ ಕಾರುಗಳು ಬೋಸ್ ಸೌಂಡ್ ಸಿಸ್ಟಂ ಹೊಂದಿದ್ದರೆ, ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಕ್ಲಾರಿಯನ್ ಸೌಂಡ್ ಸಿಸ್ಟಂ ಅನ್ನು ಪಡೆದುಕೊಂಡಿವೆ.

Powered Driver’s Seat 

ಪವರ್ಡ್ ಡ್ರೈವರ್ ಸೀಟು

 ಎಲಿವೇಟ್‌ನಲ್ಲಿ ಹೋಂಡಾ ನೀಡಬಹುದಾಗಿದ್ದ ಮತ್ತೊಂದು ಅನುಕೂಲಕರ ಫೀಚರ್ ಎಂದರೆ ಪವರ್ಡ್ ಡ್ರೈವರ್ ಸೀಟ್. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು MG ಆಸ್ಟರ್‌ನಲ್ಲಿ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಡ್ರೈವರ್ ಸೀಟ್ ಅನ್ನು ನೀಡಲಾಗಿದೆ, ಇವುಗಳು ವಿಭಾಗದಲ್ಲಿ ಅತ್ಯಂತ ಹೆಚ್ಚು ಫೀಚರ್ ಅನ್ನಿ ಹೊಂದಿರುವ ಕಾರುಗಳಾಗಿವೆ. ಈ ಫೀಚರ್‌ನೊಂದಿಗೆ ಬಳಕೆದಾರರ ಅನುಭವವು ನಿಜವಾಗಿಯೂ ಉತ್ತಮಗೊಳ್ಳುತ್ತದೆ.

 

ವೆಂಟಿಲೇಟೆಡ್ ಫ್ರಂಟ್ ಸೀಟುಗಳು

Maruti XL6 Ventilated Seats

 ಭಾರತೀಯ ಹವಾಮಾನ ಪರಿಸ್ಥಿತಿಗಳಿಗೆ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ತುಂಬಾ ಉಪಯುಕ್ತವಾದ ಸೇರ್ಪಡೆಯಾಗಿದೆ. ಆಸ್ಟರ್ ಮತ್ತು C3 ಏರ್‌ಕ್ರಾಸ್ ಹೊರತುಪಡಿಸಿ, ಈ ಫೀಚರ್ ಅನ್ನು ಇತರ ಎಲ್ಲಾ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ನೀಡಲಾಗುತ್ತದೆ. ಅಷ್ಟೇ ಅಲ್ಲದೇ, ಈ ಫೀಚರ್ ಈಗ ಅದರ ಕೆಳಗಿನ ವಿಭಾಗದ ಕಾರುಗಳಲ್ಲಿಯೂ ಲಭ್ಯವಿದೆ. 

 ಸಂಬಂಧಿತ: ಹೋಂಡಾ ಎಲಿವೇಟ್‌ನ ಹೊರಭಾಗದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎಂಬುದನ್ನು ಈ 10 ಚಿತ್ರಗಳ ಮೂಲಕ ತಿಳಿಯಿರಿ

 

ಟೈಪ್ C USB ಪೋರ್ಟ್‌ಗಳು

 ಈಗ ಆಪಲ್ ಮತ್ತು ಇತರ ಮೊಬೈಲ್ ಫೋನ್ ಕಂಪನಿಗಳು ಸಹ ತಮ್ಮ ಉತ್ಪನ್ನಗಳಲ್ಲಿ ಸಾಮಾನ್ಯ USB ಪೋರ್ಟ್ ಬದಲಿಗೆ ಟೈಪ್-ಸಿ ಪೋರ್ಟ್ ನೀಡಲು ಪ್ರಾರಂಭಿಸಿವೆ, ಆದರೆ ಹೋಂಡಾ ಇನ್ನೂ ಮುಂಭಾಗದಲ್ಲಿ ಸಾಮಾನ್ಯ ಪೋರ್ಟ್ ಅನ್ನು ನೀಡುತ್ತಿದೆ. ಪ್ರೀಮಿಯಂ ಆಧುನಿಕ ಎಸ್‌ಯುವಿ ಆಗಿದ್ದರೂ, ಕಂಪನಿಯು ಎಲಿವೇಟ್‌ನಲ್ಲಿ ಇಂದಿನ ತಂತ್ರಜ್ಞಾನವನ್ನು ಏಕೆ ಬಳಸಿಕೊಂಡಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.

 ಇದು ಮುಂಭಾಗದಲ್ಲಿ 12V ಸಾಕೆಟ್ ಜೊತೆಗೆ ಎರಡು ಸಾಮಾನ್ಯ USB ಪೋರ್ಟ್‌ಗಳನ್ನು ಹೊಂದಿದೆ. 12V ಸಾಕೆಟ್‌ನೊಂದಿಗೆ, ನಿಮ್ಮ ಇತರ ಸಾಧನಗಳನ್ನು ನೀವು ಚಾರ್ಜ್ ಮಾಡಬಹುದಾಗಿದೆ. ಆಸಕ್ತಿದಾಯಕ ವಿಷಯವೆಂದರೆ ಇದು ಹಿಂಭಾಗದಲ್ಲಿ 12V ಸಾಕೆಟ್ ಅನ್ನು ಸಹ ಹೊಂದಿದೆ, ಆದರೆ USB ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿಲ್ಲ. 

 

ರಿಯರ್ ಸನ್‌ಬ್ಲೈಂಡ್ಸ್

Hyundai Creta Rear Sunblinds

 ಹ್ಯುಂಡೈ ಎಲಿವೇಟ್‌ನಲ್ಲಿ ಕಾಣೆಯಾಗಿರುವ ಮತ್ತೊಂದು ಶಾಖ-ಸ್ನೇಹಿ ಫೀಚರ್ ಎಂದರೆ ರಿಯರ್ ವಿಂಡೋ ಸನ್‌ಬ್ಲೈಂಡ್. ಈ ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ಕ್ರೆಟಾ ಮತ್ತು ಸೆಲ್ಟೋಸ್ ಅವುಗಳನ್ನು ತಮ್ಮ ಹೈಯರ್ ಎಂಡ್ ವೇರಿಯಂಟ್‌ಗಳಲ್ಲಿ ನೀಡುತ್ತವೆ. ಹೋಂಡಾ ಈ ವಿಭಾಗದ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲು  ಎಲಿವೇಟ್‌ನಲ್ಲಿ ಈ ಫೀಚರ್ ಅನ್ನು ನೀಡಬಹುದಾಗಿತ್ತು.

 

ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿಲ್ಲ

  ಡಾ ಎಲಿವೇಟ್ ಎಸ್‌ಯುವಿಯು ಸಿಟಿ ಸೆಡಾನ್‌ನಂತೆಯೇ 1.5-ಲೀಟರ್ ಸ್ವಾಭಾವಿಕವಾಗಿ ಮಹತ್ವಾಕಾಂಕ್ಷಿ  i-VTEC ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 121PS ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್‌ನ ಅಷ್ಟೇ ಸಿಸಿ ಎಂಜಿನ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಈ ವಿಭಾಗದ ಇತರ ಕಾರುಗಳು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುತ್ತವೆ. ಈ ಎಂಜಿನ್ ಆಯ್ಕೆಯನ್ನು ಕಂಪನಿಯು ಟಾಪ್-ಸ್ಪೆಕ್ ಗ್ರಾಹಕರಿಗೆ ನೀಡಿ ಮೋಜಿನ-ಡ್ರೈವ್ ಅನುಭವವನ್ನು ಬಯಸುವ ಗ್ರಾಹಕರನ್ನು ಆಕರ್ಷಿಸಬಹುದಾಗಿತ್ತು.

 ಹೊಸ ಹೋಂಡಾ ಎಸ್‌ಯುವಿಯನ್ನು ಓದಿಸಲು ನಮಗೆ ಸಾಧ್ಯವಾದ ಕೂಡಲೇ, ನಾವು ಅದರ ನೈಜ ಡ್ರೈವ್ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

 

ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆ ಲಭ್ಯವಿಲ್ಲ

2023 Honda City Hybrid e:HEV Badging

 ಹೋಂಡಾ ಸಿಟಿಯಲ್ಲಿ ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನವನ್ನು ನೀಡಲಾಗಿದೆ, ಅದರ ಪ್ರಮಾಣೀಕೃತ ಮೈಲೇಜ್ ಪ್ರತಿ ಲೀಟರ್‌ಗೆ 27.13 ಕಿಲೋಮೀಟರ್ ಎಂದು ಹೇಳಲಾಗುತ್ತದೆ. ಎಲಿವೇಟ್ ಅನ್ನು ಸಿಟಿ ಸೆಡಾನ್‌ನ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದರೂ ಮತ್ತು ಅದರ i-VTEC ಎಂಜಿನ್ ಅನ್ನು ಬಳಸುತ್ತಿದ್ದರೂ, ಇದು ಹೈಬ್ರಿಡ್ ಆಯ್ಕೆಯನ್ನು ಪಡೆದುಕೊಂಡಿಲ್ಲ. ಅದರ ಪ್ರತಿಸ್ಪರ್ಧಿಗಳಾದ, ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್‌ಗಳಿಗೆ ಪ್ರಬಲ-ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ನೀಡಲಾಗಿದೆ, ಇದರಿಂದಾಗಿ ಅವುಗಳ ಮೈಲೇಜ್ ವಿಭಾಗದಲ್ಲಿನ ಇತರ ಕಾರುಗಳಿಗಿಂತ ಹೆಚ್ಚಾಗಿದೆ. ಸ್ಪರ್ಧೆಯಲ್ಲಿ ಸ್ಥಾನವನ್ನು ಕಾಯ್ದುಕೊಳ್ಳಲು, ಹೋಂಡಾ ಈ ತಂತ್ರಜ್ಞಾನವನ್ನು ಎಲಿವೇಟ್‌ಗೂ ನೀಡಬೇಕಿತ್ತು.

 ಆದಾಗ್ಯೂ, 2026 ರ ವೇಳೆಗೆ ಬಿಡುಗಡೆಗೆ ಲಭ್ಯವಾಗುವ ಎಲಿವೇಟ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಹೊರತರುವುದಾಗಿ ಹೋಂಡಾ ಖಚಿತಪಡಿಸಿದೆ. ಇದು ಎಸ್‌ಯುವಿಯಲ್ಲಿ ಕಂಪನಿಯು ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯನ್ನು ನೀಡದಿರಲು  ಒಂದು ಕಾರಣವಾಗಿರಬಹುದು.

 ಆದ್ದರಿಂದ ಇವೆಲ್ಲವೂ ಹೋಂಡಾ ಎಲಿವೇಟ್‌ ಹೊಂದಿರದ ಪ್ರಮುಖ ಫೀಚರ್‌ಗಳಾಗಿವೆ. ಶೀಘ್ರದಲ್ಲೇ ಎಲಿವೇಟ್ ಕಾರನ್ನು ಓಡಿಸಲು ಮತ್ತು ಅದರ ನೈಜ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಇನ್ನಷ್ಟು ತಿಳಿದುಕೊಳ್ಳಲು CarDekho ಗೆ ಟ್ಯೂನ್ ಮಾಡಿ. ಹೊಸ ಹೋಂಡಾ ಎಸ್‌ಯುವಿಯಲ್ಲಿ ನೀವು ಯಾವ ಫೀಚರ್‌ಗಳನ್ನು ನಿರೀಕ್ಷಿಸುತ್ತಿದ್ದೀರಿ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಇಲೆವಟ್

1 ಕಾಮೆಂಟ್
1
V
varunesh
Jun 8, 2023, 10:10:07 AM

Had great expectations from this car and I was eagerly waiting to update from my Honda City. Little disappointed with all misses on Elevate. Have to look out for an alternate compact Suv.

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience