21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta
ಟೊಯೋಟಾ ಇನೋವಾ ಕ್ರಿಸ್ಟಾ ಗಾಗಿ rohit ಮೂಲಕ ಮೇ 07, 2024 06:48 pm ರಂದು ಪ್ರಕಟಿಸಲಾಗಿದೆ
- 36 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ವೇರಿಯಂಟ್ 7 ಮತ್ತು 8 ಸೀಟರ್ ವಿನ್ಯಾಸಗಳಲ್ಲಿ ದೊರೆಯಲಿದ್ದು, ಆರಂಭಿಕ ಹಂತದ GX ಟ್ರಿಮ್ ಗಿಂತ ರೂ. 1.45 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.
- ಟೊಯೊಟಾ ಸಂಸ್ಥೆಯು ಇನೋವಾ ಕ್ರಿಸ್ಟ ವಾಹನವನ್ನು ಪ್ರಸ್ತುತ ನಾಲ್ಕು ವೇರಿಯಂಟ್ ಗಳಲ್ಲಿ ಮಾರುತ್ತಿದೆ: GX, GX ಪ್ಲಸ್, VX, ಮತ್ತು ZX.
- ಅಟೋ ಫೋಲ್ಡಿಂಗ್ ORVM ಗಳು, 8 ಇಂಚಿನ ಟಚ್ ಸ್ಕ್ರೀನ್ ಮತ್ತು 3 ಏರ್ ಬ್ಯಾಗ್ ಗಳನ್ನು ಇದು ಹೊಂದಿದೆ.
- 5-ಸ್ಪೀಡ್ MT ಜೊತೆಗೆ ಹೊಂದಿಸಲಾದ 2.4 ಲೀಟರ್ ಡೀಸೆಲ್ ಎಂಜಿನ್ ನಿಂದ ಇದು ಚಾಲಿತವಾಗಿದೆ.
- ಇನೋವಾ ಕ್ರಿಸ್ಟ ವಾಹನವು ರೂ. 19.99 ರಿಂದ ರೂ. 26.30 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
ಟೊಯೊಟಾ ಸಂಸ್ಥೆಯು 2024ರಲ್ಲಿ ವೇರಿಯಂಟ್ ಗಳ ಪರಿಷ್ಕರಣೆಯ ಹಿಂದೆ ಬಿದ್ದಿರುವಂತಿದೆ. ಪೆಟ್ರೋಲ್ ನಲ್ಲಿ ಮಾತ್ರವೇ ಲಭ್ಯವಿರುವ ಟೊಯೊಟಾ ಇನೋವಾ ಹೈಕ್ರಾಸ್ ವಾಹನದ ಹೊಸ ಟಾಪ್ ಸ್ಪೆಕ್ GX (O) ವೇರಿಯಂಟ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ನಂತರ, ಈ ಕಾರು ತಯಾರಕ ಸಂಸ್ಥೆಯು ಟೊಯೊಟಾ ಇನೋವಾ ಕ್ರಿಸ್ಟ ವಾಹನಗಳ ಸಾಲಿಗೆ ನವೀನ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಸೇರಿಸಿದೆ.
ವೇರಿಯಂಟ್ ವಾರು ಬೆಲೆಗಳು
ವೇರಿಯಂಟ್ |
ಬೆಲೆ |
GX ಪ್ಲಸ್ 7-ಸೀಟರ್ |
ರೂ 21.39 ಲಕ್ಷ |
GX ಪ್ಲಸ್ 8-ಸೀಟರ್ |
ರೂ 21.44 ಲಕ್ಷ |
ಹೊಸ GX ಪ್ಲಸ್ ವೇರಿಯಂಟ್ ವಾಹನವು, ಡೀಸೆಲ್ ಚಾಲಿತ MPV ಯ ಆರಂಭಿಕ ಹಂತದ GX ಟ್ರಿಮ್ ಗಿಂತ ರೂ. 1.45 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.
GX ಪ್ಲಸ್ ಅನ್ನು ಐದು ಬಣ್ಣಗಳಲ್ಲಿ ಆರಿಸಬಹುದಾಗಿದೆ: ಸೂಪರ್ ವೈಟ್, ಅಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್ ಗಾರ್ದೆ ಬ್ರಾಂಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್.
ಗುಣವೈಶಿಷ್ಟ್ಯಗಳು
ಟೊಯೊಟಾ ಸಂಸ್ಥೆಯು ಇನೋವಾ ಕ್ರಿಸ್ಟ GX ಪ್ಲಸ್ ವೇರಿಯಂಟ್ ನಲ್ಲಿ ಅಟೋ ಫೋಲ್ಡಿಂಗ್ ಔಟ್ ಸೈಟ್ ರಿಯರ್ ವೀವ್ ಮಿರರ್ ಗಳು (ORVMಗಳು), ಬಟ್ಟೆಯ ಸೀಟುಗಳು, ಮತ್ತು 8 ಇಂಚಿನ ಟಚ್ ಸ್ಕ್ರೀನ್ ಅನ್ನು ಅಳವಡಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಇನೋವಾ ಕ್ರಿಸ್ಟದ GX ಪ್ಲಸ್ ವಾಹನವು ರಿಯರ್ ಪಾರ್ಕಿಂಗ್ ಕ್ಯಾಮರಾ, ಮೂರು ಏರ್ ಬ್ಯಾಗುಗಳು (ಡ್ರೈವರ್ ಪಕ್ಕದ ಮೊಣಕಾಲಿನ ಏರ್ ಬ್ಯಾಗ್ ಸೇರಿದಂತೆ), ಮತ್ತು ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC) ಇತ್ಯಾದಿಗಳನ್ನು ಹೊಂದಿದೆ.
-
ಡೀಸೆಲ್ ಮಾದರಿ ಮಾತ್ರ
ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ ಸಿಂಗಲ್ 2.4- ಲೀಟರ್ ಡೀಸೆಲ್ ಎಂಜಿನ್ (150 PS ಮತ್ತು 343 Nm) ಜೊತೆಗೆ ಬರಲಿದೆ. ಇದರಲ್ಲಿ ಎರಡು ಡ್ರೈವ್ ಮೋಡ್ ಗಳಿವೆ: ಇಕೋ ಮತ್ತು ಪವರ್.
ಇದನ್ನು ಸಹ ಓದಿರಿ: ಹೊಸ ಟೊಯೊಟಾ ರುಮಿಯನ್ ಮಿಡ್ ಸ್ಪೆಕ್ ಅಟೋಮ್ಯಾಟಿಕ್ ವೇರಿಯಂಟ್ ನ ಬಿಡುಗಡೆ, ಬೆಲೆ ರೂ. 13 ಲಕ್ಷ
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಟೊಯೊಟಾ ಇನೋವಾ ಕ್ರಿಸ್ಟ ಕಾರು ರೂ. 19.99 ಲಕ್ಷದಿಂದ ರೂ. 26.30 ಲಕ್ಷದ ವರೆಗಿನ ಬೆಲೆ ಶ್ರೇಣಿಯನ್ನು ಹೊಂದಿದೆ. ಇದು ಮಹೀಂದ್ರಾ ಮರಜ್ಜೊ ಮತ್ತು ಕಿಯಾ ಕರೆನ್ಸ್ ಕಾರುಗಳ ಬದಲಿಗೆ ಪ್ರೀಮಿಯಂ ಆಯ್ಕೆ ಎನಿಸಿದ್ದು, ಟೊಯೊಟಾ ಇನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊ ಗಳ ಬದಲಿಗೆ ಡೀಸೆಲ್ ಎಂಜಿನ್ ಆಯ್ಕೆ ಎನಿಸಲಿದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಇನೋವಾ ಕ್ರಿಸ್ಟ ಡೀಸೆಲ್