• English
  • Login / Register

ಟೊಯೋಟಾ ಇನ್ನೋವಾ ಕ್ರಿಸ್ಟಾ ಟಾಪ್-ಎಂಡ್ ವೇರಿಯೆಂಟ್‌ ನ ಬೆಲೆಗಳು ಬಹಿರಂಗ!

ಟೊಯೋಟಾ ಇನೋವಾ ಕ್ರಿಸ್ಟಾ ಗಾಗಿ tarun ಮೂಲಕ ಮೇ 05, 2023 10:57 am ರಂದು ಪ್ರಕಟಿಸಲಾಗಿದೆ

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದರ ಬೆಲೆ ಹೈಕ್ರಾಸ್‌ನ ಪ್ರಾರಂಭಿಕ ಹಂತದ ಹೈಬ್ರಿಡ್ ವೇರಿಯೆಂಟ್‌ಗೆ ಸಮೀಪದಲ್ಲಿದೆ

Toyota Innova Crysta

  •  ಇನ್ನೋವಾ ಕ್ರಿಸ್ಟಾ VX ಮತ್ತು ZX ವೇರಿಯೆಂಟ್ ಬೆಲೆಗಳನ್ನು ಬಹಿರಂಗಪಡಿಸಲಾಗಿದೆ; ಈ MPV ಬೆಲೆ ರೂ 19.13 ಲಕ್ಷದಿಂದ ರೂ 25.43 ಲಕ್ಷದ (ಎಕ್ಸ್-ಶೋರೂಂ) ತನಕ ಇದೆ.
  •  ಈ MPV ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಅವುಗಳೆಂದರೆ,G, GX, VX, ಮತ್ತು ZX
  •  ಫೀಚರ್‌ಗಳು 8-ಇಂಚು ಟಚ್‌ಸ್ಕ್ರೀನ್ ಯುನಿಟ್, ಪವರ್ ಡ್ರೈವರ್ ಸೀಟ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಏಳರ ತನಕ ಏರ್‌ಬ್ಯಾಗಗನ್ನು ಒಳಗೊಂಡಿದೆ.
  •   5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾತ್ರ ಹೊಂದಿರುವ150PS 2.4-ಲೀಟರ್ ಡೀಸೆಲ್ ಇಂಜಿನ್ ಪಡೆದಿದೆ. 

ಟಾಪ್-ಎಂಡ್ ಟೊಯೋಟಾ ಇನ್ನೋವಾ ಕ್ರಿಸ್ಟಾ ವೇರಿಯೆಂಟ್‌ಗಳಾದ - VX ಮತ್ತು ZX ಬೆಲೆಗಳು ಕೊನೆಗೂ ಬಹಿರಂಗವಾಗಿದೆ. ಈ MPVಯ ಹಳೆಯ ಪೀಳಿಗೆಯನ್ನು ಮುಂಭಾಗದಲ್ಲಿ ತುಸು ನವೀಕರಿಸಿ ನಾಲ್ಕು ವೇರಿಯೆಂಟ್‌ಗಳನ್ನು ನೀಡಲಾಗಿದೆ- G, GX, VX, ಮತ್ತು ZX. ಇವುಗಳ ಸಂಪೂರ್ಣ ಬೆಲೆ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

ವೇರಿಯೆಂಟ್

ಬೆಲೆಗಳು

G 7-ಸೀಟರ್

ರೂ 19.13 ಲಕ್ಷ

G 8-ಸೀಟರ್

ರೂ 19.18 ಲಕ್ಷ

GX 7- ಮತ್ತು 8-ಸೀಟರ್

ರೂ 19.99 ಲಕ್ಷ

VX 7-ಸೀಟರ್ (NEW)

ರೂ 23.79 ಲಕ್ಷ

VX 8- ಸೀಟರ್ (NEW)

ರೂ 23.84 ಲಕ್ಷ

ZX 7- ಲಕ್ಷ (NEW)

ರೂ 25.43 ಲಕ್ಷ

 GX ವೇರಿಯಂಟ್‌ಗೆ ಹೋಲಿಸಿದರೆ, ಈ VX ವೇರಿಯೆಂಟ್ 3.79 ಲಕ್ಷದಷ್ಟು ದುಬಾರಿಯಾಗಿದೆ. VX ವೇರಿಯೆಂಟ್‌ಗೆ ಹೋಲಿಸಿದರೆ ZX ವೇರಿಯೆಂಟ್ ರೂ1.5 ಲಕ್ಷದಷ್ಟು ದುಬಾರಿಯಾಗಿದೆ. ಕ್ರಿಸ್ಟಾದ VX ವೇರಿಯೆಂಟ್ ಇನ್ನೋವಾ ಹೈಕ್ರಾಸ್‌ಗಿಂತ ರೂ ಒಂದು ಲಕ್ಷದಷ್ಟು ಕಡಿಮೆ ಇದೆ. ಆದಾಗ್ಯೂ ಕ್ರಿಸ್ಟಾ ZX ವೇರಿಯೆಂಟ್, ಹೈಕ್ರಾಸ್‌ VX ಹೈಬ್ರಿಡ್‌ಗಿಂತ ಸುಮಾರು ರೂ 60,000 ದಷ್ಟು ದುಬಾರಿಯಾಗಿದೆ.

 ಇದನ್ನೂ ಓದಿ: ‘ಮಾರುತಿ’ ಇನ್ನೋವಾ ಹೈಕ್ರಾಸ್ ಜುಲೈನಲ್ಲಿ ಅನಾವರಣ

Toyota Innova Crysta

 ಟೋಯೋಟಾ ಇನ್ನೋವಾ ಕ್ರಿಸ್ಟಾದ ಫೀಚರ್‌ಗಳು ಆಟೋಮ್ಯಾಟಿಕ್ AC, 8-ರೀತಿಯಲ್ಲಿ ಹೊಂದಿಸಬಲ್ಲ ವಿದ್ಯುತ್‌ಚಾಲಿತ ಡ್ರೈವರ್ ಸೀಟು, ಲೆದರೆಟ್ ಸೀಟುಗಳು, ವನ್-ಟಚ್ ಟಂಬಲ್ ಎರಡನೇ ಸಾಲಿನ ಸೀಟುಗಳು, ಮತ್ತು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಸುರಕ್ಷತಾ ಫೀಚರ್‌ಗಳು, ಏಳರ ತನಕದ ಏರ್‌ಬ್ಯಾಗ್‌ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಒಳಗೊಂಡಿದೆ.

 ಈ MPV ಅದೇ 150PS/343Nm 2.4-ಲೀಟರ್ ಡೀಸೆಲ್ ಇಂಜಿನ್ ಅನ್ನು ಪಡೆದಿದ್ದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಸರಿಹೊಂದುವಂತೆ ಇತ್ತೀಚಿನ ಎಮಿಷನ್ ಮಾನದಂಡಗಳೊಂದಿಗೆ ನವೀಕೃತಗೊಳಿಸಲಾಗಿದೆ. ಹೈಕ್ರಾಸ್ ಮಾತ್ರ ಆಟೋಮ್ಯಾಟಿಕ್ ಟ್ರನ್ಸ್‌ಮಿಷನ್ ಅನ್ನು ಒಳಗೊಂಡಿದ್ದು, ಹಳೆಯ ಇನ್ನೋವಾದಲ್ಲಿ ಈ ಅನುಕೂಲತೆ ಲಭ್ಯವಿರುವುದಿಲ್ಲ.

2023 Toyota Innova Crysta Rear

 ಇದನ್ನೂ ಓದಿ: ಟೊಯೋಟಾ ಇನ್ನೋವಾ ಹೈಕ್ರಾಸ್ ಪೆಟ್ರೋಲ್ ವರ್ಸಸ್ ಹೈಬ್ರಿಡ್: ಇಲೆಕ್ಟ್ರಿಕ್‌ಚಾಲಿತ MPV ಎಷ್ಟು ಮಿತವ್ಯಯಕಾರಿ?

 ಈ ಡೀಸೆಲ್ ಚಾಲಿತ ಇನ್ನೋವಾ ಕ್ರಿಸ್ಟಾ ಇನ್ನೋವಾ ಹೈಕ್ರಾಸ್‌ಗೆ ಪರ್ಯಯವಾಗಿದೆ ಮತ್ತು ಸಂಪೂರ್ಣ ಹೊಸ ಉತ್ಪನ್ನವಾಗಿದೆ. ಇನ್ನೋವಾ ಹೈಕ್ರಾಸ್ 2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು, 21.1kmpl ಇಂಧನ ಮಿತವ್ಯಯತೆಯನ್ನು ಪಡೆಯಲು ಹೈಬ್ರಿಡೇಸೇಶನ್‌ನ ಆಯ್ಕೆ ಮಾಡಬಹುದಾಗಿದೆ. ಇದು ಕ್ರಿಸ್ಟಾಗಿಂತ ಹೆಚ್ಚು ದುಬಾರಿ ಮತ್ತು ಆಧುನಿಕವಾಗಿದ್ದು, ರಡಾರ್ ಆಧಾರಿತ ADAS ‌ನೊಂದಿಗೆ ಹೆಚ್ಚು ಸುರಕ್ಷಿತವಾಗಿದೆ. ಈ ಹೈಕ್ರಾಸ್ ಬೆಲೆಯನ್ನು ರೂ 18.55 ಲಕ್ಷದಿಂದ ರೂ 29.72 ಲಕ್ಷದ ತನಕ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.

 ಇನ್ನಷ್ಟು ಓದಿ : ಇನ್ನೋವಾ  ಕ್ರಿಸ್ಟಾ ಡೀಸೆಲ್

was this article helpful ?

Write your Comment on Toyota ಇನೋವಾ Crysta

explore ಇನ್ನಷ್ಟು on ಟೊಯೋಟಾ ಇನೋವಾ ಕ್ರಿಸ್ಟಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience