Login or Register ಅತ್ಯುತ್ತಮ CarDekho experience ಗೆ
Login

ಟೊಯೋಟಾ ಇನೋವಾ ಹೈಕ್ರಾಸ್‌ನ ಹೊಸ ಹೈಬ್ರಿಡ್ ವೇರಿಯೆಂಟ್ ಬೆಲೆ ಏರಿಕೆಯೊಂದಿಗೆ ಆಗಮನ

published on ಮಾರ್ಚ್‌ 03, 2023 07:44 pm by tarun for ಟೊಯೋಟಾ ಇನ್ನೋವಾ ಹೈಕ್ರಾಸ್

ಈ MPVಯ ಬೆಲೆಗಳ ಗಣನೀಯವಾಗಿ ರೂ. 75,000 ವರೆಗೆ ಏರಿಕೆಯಾಗಿದ್ದು, ಪ್ರಾಸ್ತಾವಿಕ ಬೆಲೆಗಳಿಗೆ ಅಂತ್ಯ ಹಾಡಿದೆ.

  • ಇದರ ಪೆಟ್ರೋಲ್ ವೇರಿಯೆಂಟ್‌ಗಳು ರೂ. 25,000 ವರೆಗೆ ಬೆಲೆ ಏರಿಕೆ ಕಂಡಿದ್ದು; ಹೈಬ್ರಿಡ್ ವೇರಿಯೆಂಟ್‌ಗಳು ರೂ. 75,000 ವರೆಗೆ ಏರಿಕೆಯನ್ನು ಪಡೆದಿದೆ.
  • ಹೊಸ ಸ್ಟ್ರಾಂಗ್ ಹೈಬ್ರಿಡ್ VX (O) ವೇರಿಯೆಂಟ್ ಅನ್ನು ರೂ. 24.81 ಲಕ್ಷಕ್ಕೆ ಪರಿಚಯಿಸಲಾಗಿದ್ದು; ಇದು VX ವೇರಿಯೆಂಟ್‌ಗಿಂತ ರೂ. 2 ಲಕ್ಷಗಳಷ್ಟು ದುಬಾರಿಯಾಗಿದೆ.
  • VX (O) ವೇರಿಯೆಂಟ್ LED ಹೆಡ್‌ಲ್ಯಾಂಪ್‌ಗಳು, 10.1-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ಮತ್ತು 360-ಡಿಗ್ರಿ ಕ್ಯಾಮರಾವನ್ನು ಫೀಚರ್‌ಗಳಾಗಿ ಪಡೆದಿದೆ.
  • MPV ಯು ಸ್ಟ್ರಾಂಗ್-ಹೈಬ್ರಿಡ್ ಆಯ್ಕೆಯೊಂದಿಗೆ 2-ಲೀಟರ್ ಪೆಟ್ರೋಲ್ ಇಂಜಿನ್ ಚಾಲಿತವಾಗಿದೆ.

ಟೊಯೋಟಾ ಇನೋವಾ ಹೈಕ್ರಾಸ್‌ ನ ಪ್ರಾಸ್ತಾವಿಕ ಬೆಲೆಗಳು ಕೊನೆಗೊಂಡಿದ್ದು ಈ MPV ರೂ. 75,000 ವರೆಗೆ ಬೆಲೆ ಏರಿಕೆಯನ್ನು ಪಡೆದಿದೆ. ಇದರೊಂದಿಗೆ, ಹೊಸ ಮಿಡ್-ಸ್ಪೆಕ್ ಹೈಬ್ರಿಡ್ ವೇರಿಯೆಂಟ್ ಅನ್ನು ಪರಿಚಯಿಸಲಾಗಿದೆ.

ಹೊಸ ಇನೋವಾ ಹೈಕ್ರಾಸ್ ಬೆಲೆಗಳು

ವೇರಿಯೆಂಟ್‌ಗಳು

ಹಳೆ ಬೆಲೆ

ಹೊಸ ಬೆಲೆ

ವ್ಯತ್ಯಾಸ

G 7S

ರೂ. 18.30 ಲಕ್ಷ

ರೂ 18.55 ಲಕ್ಷ

ರೂ 25,000

G 8S

ರೂ 18.35 ಲಕ್ಷ

ರೂ 18.60 ಲಕ್ಷ

ರೂ 25,000

GX 7S

ರೂ 19.15 ಲಕ್ಷ

ರೂ 19.40 ಲಕ್ಷ

ರೂ 25,000

GX 8S

ರೂ 19.20 ಲಕ್ಷ

ರೂ 19.45 ಲಕ್ಷ

ರೂ 25,000

VX ಹೈಬ್ರಿಡ್ 7S

ರೂ 24.01 ಲಕ್ಷ

ರೂ 24.76 ಲಕ್ಷ

ರೂ 75,000

VX ಹೈಬ್ರಿಡ್ 8S

Rs 24.06 ಲಕ್ಷ

Rs 24.81 ಲಕ್ಷ

ರೂ 75,000

VX (O) ಹೈಬ್ರಿಡ್ 7S (ಹೊಸದು)

-

ರೂ 26.73 ಲಕ್ಷ

-

VX (O) ಹೈಬ್ರಿಡ್ 8S (ಹೊಸದು)

-

ರೂ 26.78 ಲಕ್ಷ

-

ZX ಹೈಬ್ರಿಡ್

ರೂ 28.33 ಲಕ್ಷ

ರೂ 29.08 ಲಕ್ಷ

ರೂ 75,000

ZX (O) ಹೈಬ್ರಿಡ್

ರೂ 28.97 ಲಕ್ಷ

ರೂ 29.72 ಲಕ್ಷ

ರೂ 75,000

ಇನೋವಾ ಹೈಕ್ರಾಸ್‌ನ ಪೆಟ್ರೋಲ್ ವೇರಿಯೆಂಟ್‌ಗಳು ರೂ.25,000 ದಷ್ಟು ದುಬಾರಿಯಾದರೆ, ಹೈಬ್ರಿಡ್ ವೇರಿಯೆಂಟ್‌ಗಳು ರೂ.75,000 ದಷ್ಟು ಬೆಲೆ ಏರಿಕೆಯನ್ನು ಪಡೆದಿವೆ. ಇದರ ಬೇಸ್ ವೇರಿಯೆಂಟ್‌ಗಳು ಫ್ಲೀಟ್ ಮಾಲೀಕರಿಗೆ ಈಗಲೂ ಎಕ್ಸ್‌ಕ್ಲೂಸಿವ್ ಆಗಿದೆ, ಆದ್ದರಿಂದ GX ವೇರಿಯೆಂಟ್ ನೀವು ಆಯ್ದುಕೊಳ್ಳಬಹುದಾದ ಏಕೈಕ ಪೆಟ್ರೋಲ್‌ ಇಂಜಿನ್ ಮಾತ್ರ ಒಳಗೊಂಡಿರುವ ವೇರಿಯೆಂಟ್ ಆಗಿದೆ. ಹೈಕ್ರಾಸ್ ಈಗ ರೂ.18.55 ಲಕ್ಷದಿಂದ ರೂ. 29.72 ಲಕ್ಷಗಳವರೆಗೆ ಬೆಲೆ ಏರಿಕೆಯನ್ನು ಕಂಡಿದೆ.

ಹೊಸ ಹೈಬ್ರಿಡ್ ವೇರಿಯೆಂಟ್

ಟೊಯೋಟಾ ತನ್ನ ವಾಹನ ಸಮೂಹಕ್ಕೆ ಹೊಸ VX (O) ವೇರಿಯೆಂಟ್ ಅನ್ನು ಪರಿಚಯಿಸಿದ್ದು, ಇದು ರೂ. 26.73 ಲಕ್ಷ ಮತ್ತು ರೂ. 26.78 ಲಕ್ಷಗಳ ನಡುವೆ ಮಾರಾಟವಾಗುತ್ತಿದೆ. ಹೊಸ ವೇರಿಯೆಂಟ್ ರೂ. 4 ಲಕ್ಷಕ್ಕಿಂತ ಹೆಚ್ಚಿನ ವ್ಯತ್ಯಾಸವನ್ನು ಹೊಂದಿದ್ದು ಇದು VX ಮತ್ತು ZX ವೇರಿಯೆಂಟ್‌ಗಳ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ! ಈ ವೇರಿಯೆಂಟ್ VX ಗಿಂತ ರೂ. 2 ಲಕ್ಷಗಳಷ್ಟು ದುಬಾರಿ, ಆದರೆ ZX ಟ್ರಿಮ್‌ಗಿಂತ ರೂ. 2.5 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದೆ.

ಇದನ್ನೂ ಓದಿ: CD ಮಾತು: ಮಾರುತಿ MPV ಗಾಗಿ ರೂ. 30 ಲಕ್ಷಕ್ಕೂ ಹೆಚ್ಚು ಪಾವತಿಸಲು ಸಿದ್ಧರಾಗಿ

ಈ VX (O) ವೇರಿಯೆಂಟ್ LED ಹೆಡ್‌ಲ್ಯಾಂಪ್‌ಗಳು, ಆಟೋಮ್ಯಾಟಿಕ್ AC, ಒರಗಿಸಬಹುದಾದ ಎರಡನೇ ಮತ್ತು ಮೂರನೇ ಸಾಲಿನ ಸೀಟುಗಳು, 10.1-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್, ಟೈರ್ ಪ್ರೇಶರ್ ಮಾನಿಟರಿಂಗ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, 360-ಡಿಗ್ರಿ ಕ್ಯಾಮರಾ, ಮತ್ತು ಫ್ರಂಟ್/ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಫೀಚರ್‌ಗಳಾಗಿ ಹೊಂದಿದೆ.

ಇದು ಹೈಯರ್ ಸ್ಪೆಕ್ ವೇರಿಯೆಂಟ್‌ನೊಂದಿಗೆ ನೀಡಲಾಗುವ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ADAS (ಅಡ್ವಾನ್ಸ್‌ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್‌ಗಳು), ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಮತ್ತು ವಿಸ್ತ್ರತ ಲೆಗ್ ರೆಸ್ಟ್‌ನೊಂದಿಗೆ ಎರಡನೇ ಸಾಲಿನ ಚಾಲಿತ ಒಟ್ಟೊಮನ್ ಸೀಟುಗಳನ್ನು ಕಳಕೊಂಡಿದೆ.

ಇನೋವಾ ಹೈಕ್ರಾಸ್ ಪವರ್‌ಟ್ರೇನ್‌ಗಳು

ಈ ಹೈಕ್ರಾಸ್ ಅನ್ನು 174PS, 2-ಲೀಟರ್ ಪೆಟ್ರೋಲ್ ಇಂಜಿನ್‌ನೊಂದಿಗೆ ನೀಡಲಾಗುತ್ತಿದ್ದು, ಇದನ್ನು ಸ್ಟ್ರಾಂಗ್-ಹೈಬ್ರಿಡ್ ಸೆಟಪ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ, ಮತ್ತು ಇದು 21.1kmpl ವರೆಗೆ ಇಂಧನ ದಕ್ಷತೆಯನ್ನು (ಕ್ಲೈಮ್ ಮಾಡಲಾಗಿದೆ) ನೀಡಲಾಗುತ್ತದೆ. ಪೆಟ್ರೋಲ್ ಆಯ್ಕೆಯು CVT ಅನ್ನು ಪಡೆದರೆ, ಈ ಸ್ಟ್ರಾಂಗ್-ಹೈಬ್ರಿಡ್ e-CVT (ಸಿಂಗಲ್-ಸ್ಪೀಡ್ ಟ್ರಾನ್ಸ್‌ಮಿಷನ್) ಅನ್ನು ಪಡೆದಿದೆ.

ಇದನ್ನೂ ಓದಿ: ಟೊಯೋಟಾ ಇನೋವಾ ಹೈಕ್ರಾಸ್ ವರ್ಸಸ್ ಮಿಡ್‌ಸೈಜ್ SUVಗಳು: ಬೆಲೆ ಬಾತ್!

ಈ ಟೊಯೋಟಾ MPV ಯು ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ಕಿಯಾ ಕ್ಯಾರೆನ್ಸ್‌ ಗೆ ಪ್ರೀಮಿಯಂ ಪರ್ಯಾಯವಾಗಿದೆ. ಆದಾಗ್ಯೂ, ನೀವು MPV ಯಲ್ಲಿ ಡಿಸೇಲ್ ಇಂಜಿನ್ ಅನ್ನು ಹೊಂದಲು ಬಯಸುತ್ತೀರಾದರೆ, ನೀವು ಹಳೆಯ ಇನೋವಾ ಕ್ರಿಸ್ಟಾ ಅನ್ನು ಖರೀದಿಸಬಹುದು, ಇದರ ಬುಕಿಂಗ್‌ಗಳು ಈಗಾಗಲೇ ಆರಂಭವಾಗಿದ್ದು ಶೀಘ್ರದಲ್ಲೇ ಮಾರುಕಟ್ಟೆಗೆ ಮರಳಲಿದೆ.

(ಎಲ್ಲಾ ಬೆಲೆಗಳು ಎಕ್ಸ್‌-ಶೋರೂಂ)

ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಇನೋವಾ ಹೈಕ್ರಾಸ್ ಆಟೋಮ್ಯಾಟಿಕ್

t
ಅವರಿಂದ ಪ್ರಕಟಿಸಲಾಗಿದೆ

tarun

  • 13 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟೊಯೋಟಾ ಇನೋವಾ Hycross

Read Full News

explore ಇನ್ನಷ್ಟು on ಟೊಯೋಟಾ ಇನ್ನೋವಾ ಹೈಕ್ರಾಸ್

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ