• English
  • Login / Register

Tata Safari ವರ್ಸಸ್ Mahindra XUV700 ವರ್ಸಸ್ Toyota Innova Hycross: ಕ್ಯಾಬಿನ್ ಸ್ಪೇಸ್ ಮತ್ತು ವಾಸ್ತವಿಕ ಅಂಶಗಳ ಹೋಲಿಕೆ

ಮಹೀಂದ್ರ ಎಕ್ಸ್‌ಯುವಿ 700 ಗಾಗಿ arun ಮೂಲಕ ಫೆಬ್ರವಾರಿ 27, 2024 06:26 pm ರಂದು ಪ್ರಕಟಿಸಲಾಗಿದೆ

  • 27 Views
  • ಕಾಮೆಂಟ್‌ ಅನ್ನು ಬರೆಯಿರಿ

ನಿಮ್ಮ ಕುಟುಂಬಕ್ಕೆ ಯಾವ 7 ಸೀಟರ್ ಸೂಕ್ತವಾಗಿದೆ?

Mahindra XUV700 vs Tata Safari vs Toyota Innova Hycross

ಸರಿಸುಮಾರು ರೂ. 35 ಲಕ್ಷ ರುಪಾಯಿಗೆ, ನೀವು ಏಳು ಸೀಟರ್ ವಾಹನದ ಜೊತೆಗೆ ಕೆಲವು ಉತ್ತಮ ಫೀಚರ್ ಗಳನ್ನು ಕೂಡ ಪಡೆಯಬಹುದು. ಈ ಬಜೆಟ್ ನಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್, ಮಹೀಂದ್ರ XUV700 ಮತ್ತು ಟಾಟಾ ಸಫಾರಿ ಸೇರಿದಂತೆ ಕೆಲವು ಆಯ್ಕೆಗಳು ನಿಮ್ಮ ಮುಂದಿವೆ. ಮಹೀಂದ್ರಾ ತನ್ನ XUV700 ನ ಫೀಚರ್ ಗಳ ಪಟ್ಟಿಗೆ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿದೆ, ಹಾಗೆಯೇ ಟಾಟಾ ಸಫಾರಿಗೆ ಸಮಗ್ರ ಫೇಸ್‌ಲಿಫ್ಟ್ ಅನ್ನು ನೀಡಲಾಗಿದೆ, ಇದು ಈ ಸ್ಪರ್ಧೆಯನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ. ಈ ದೊಡ್ಡ ಗಾತ್ರದ ಫ್ಯಾಮಿಲಿ ಕಾರುಗಳಲ್ಲಿ ಯಾವುದು ನಿಮಗೆ ಸೂಕ್ತವಾಗಿದೆ? ಬನ್ನಿ ನೋಡೋಣ

 ಡಿಸೈನ್

Tata Safari

 ಮೊದಲ ನೋಟದಲ್ಲಿ ಟಾಟಾ ಸಫಾರಿ ಇಷ್ಟವಾಗುವುದು ಸಹಜ. SUV ಯ ಈಗಾಗಲೇ ಇರುವ ವಿಶಾಲವಾದ ಪರ್ಸನಾಲಿಟಿಯು ಈಗ ಹೊಚ್ಚ ಹೊಸ ಡಿಸೈನ್ ಅಂಶಗಳಾದ ಹೊಸ ಬಂಪರ್‌ಗಳು, ಅನಿಮೇಷನ್‌ಗಳೊಂದಿಗೆ ಕನೆಕ್ಟೆಡ್ ಲೈಟಿಂಗ್ ಮತ್ತು ದೊಡ್ಡ 19-ಇಂಚಿನ ಅಲೊಯ್ ವೀಲ್ಸ್ ಗಳೊಂದಿಗೆ ಇನ್ನಷ್ಟು ಗಮನ ಸೆಳೆಯುತ್ತಿದೆ. ನೀವು ಚಿತ್ರಗಳಲ್ಲಿ ನೋಡುತ್ತಿರುವ ಬ್ರೊನ್ಜ್ ಶೇಡ್ ಸೇರಿದಂತೆ ಕೆಲವು ವಿಶಿಷ್ಟವಾದ ಕಲರ್ ಆಯ್ಕೆಗಳನ್ನು ಕೂಡ ಟಾಟಾ ನೀಡುತ್ತಿದೆ, ಇದು ಸಫಾರಿಯ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

2024 Mahindra XUV700

 2024 ರ ಅಪ್‌ಡೇಟ್‌ನೊಂದಿಗೆ, ಮಹೀಂದ್ರಾ ತನ್ನ XUV700 ಅನ್ನು ಯಾವುದೇ ರೀತಿಯ ಕ್ರೋಮ್ ಇಲ್ಲದಿರುವ ಆಲ್-ಬ್ಲಾಕ್ ಅವತಾರದಲ್ಲಿ ನೀಡುತ್ತಿದೆ. ಇದನ್ನು ಹೊರತುಪಡಿಸಿ, ಲುಕ್ ನಲ್ಲಿ XUV ಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಫಾಂಗ್ ತರಹದ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿರುವ ದೊಡ್ಡ ಹೆಡ್‌ಲೈಟ್‌ಗಳು, 18-ಇಂಚಿನ ಅಲೊಯ್ ವೀಲ್ಸ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳು ಇಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.

Toyota Innova Hycross

 ಟೊಯೊಟಾ ತನ್ನ ಹೈಕ್ರಾಸ್‌ನೊಂದಿಗೆ MPV ಮತ್ತು SUV ತರಹದ ಸ್ಟೈಲಿಂಗ್‌ನ ಒಂದು ಉತ್ತಮ ಮಿಶ್ರಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ, ಇಲ್ಲಿ ಇದು ಹೆಚ್ಚು ಕಡಿಮೆ ವ್ಯಾನ್‌ನಂತೆ ಕಾಣುತ್ತದೆ. ನೀವು ಅದನ್ನು ಸೈಡ್ ನಿಂದ ನೋಡಿದಾಗ ಇದು ಸ್ಪಷ್ಟವಾಗಿ ಕಾಣುತ್ತದೆ, ಏಕೆಂದರೆ ಇದರ ದೊಡ್ಡ 18-ಇಂಚಿನ ಅಲೊಯ್ ವೀಲ್ಸ್ ಕೂಡ ಈ ದೊಡ್ಡದಾದ ಕಾರಿಗೆ ಸ್ವಲ್ಪ ಚಿಕ್ಕದಾಗಿ ಕಾಣುತ್ತವೆ. ಅದೇನೇ ಇರಲಿ, ಈ ಡಿಸೈನ್ ಮಾತ್ರ ಉತ್ತಮವಾಗಿದೆ ಮತ್ತು ಕಾಲಕಳೆದಂತೆ ಇನ್ನಷ್ಟು ಆಕರ್ಷಕವಾಗಿ ಕಾಣುವುದಂತೂ ಖಚಿತ.

 ಬೂಟ್ ಸ್ಪೇಸ್

Toyota Innova Hycross boot space with third row up
Tata Safari boot space with third row up

 ಎಲ್ಲಾ ಮೂರು ಸಾಲುಗಳು ಇರುವ ಕಾರಣ, ಟೊಯೊಟಾ ಇನ್ನೋವಾ ಹೈಕ್ರಾಸ್ ಬೂಟ್ ಸ್ಪೇಸ್ ವಿಷಯದಲ್ಲಿ ಸ್ಪಷ್ಟವಾಗಿ ಗೆಲ್ಲುತ್ತದೆ. ನಮಗೆ ಕ್ಯಾಬಿನ್ ಗಾತ್ರದ ಮತ್ತು ಮಧ್ಯಮ ಗಾತ್ರದ ಟ್ರಾಲಿ ಬ್ಯಾಗ್ ಅನ್ನು ಆರಾಮವಾಗಿ ಇರಿಸಲು ಸಾಧ್ಯವಾಯಿತು. ಇದಕ್ಕೆ ವಿರುದ್ಧವಾಗಿ, ಟಾಟಾ ಸಫಾರಿ ಮತ್ತು ಮಹೀಂದ್ರಾ XUV700 ಬೂಟ್‌ನಲ್ಲಿ ಯಾವುದೇ ಜಾಗವಿಲ್ಲ. ನೀವು ಜಾಸ್ತಿಯೆಂದರೆ, ಒಂದೆರಡು ಲ್ಯಾಪ್‌ಟಾಪ್ ಬ್ಯಾಗ್‌ಗಳನ್ನು ಅಥವಾ ಡಫಲ್ ಬ್ಯಾಗ್‌ ಅನ್ನು ಇಡಬಹುದು.

Toyota Innova Hycross hybrid boot space

 ಮೂರನೇ ಸಾಲನ್ನು ಫೋಲ್ಡ್ ಮಾಡಿದರೆ, ಮನೆ ಬದಲಾಯಿಸಲು ಅಗತ್ಯವಿರುವ ಸಾಮಾನುಗಳನ್ನೆಲ್ಲ ಇಡುವ ಜಾಗ ಈ ಎಲ್ಲಾ ಮೂರು ವಾಹನಗಳಲ್ಲಿದೆ. ನೀವು ನಿಮ್ಮ ಹತ್ತಿರ ಇರುವ ಎಲ್ಲಾ ಸಾಮಾನುಗಳನ್ನು ಇಡಬಹುದಾದಷ್ಟು ಜಾಗ ಇಲ್ಲಿದೆ. ಇಲ್ಲಿಯೂ ಕೂಡ, ನಾವು ಇನ್ನೋವಾ ಹೈಕ್ರಾಸ್‌ಗೆ ಆದ್ಯತೆ ನೀಡುತ್ತೇವೆ, ಏಕೆಂದರೆ ಅದರ ಲಗೇಜ್ ಇಡುವ ಜಾಗವು ವಿಶಾಲವಾಗಿದೆ.

 ಮೂರನೇ ಸಾಲಿನ ಸ್ಪೇಸ್ ಮತ್ತು ಅನುಭವ

 ಮೂರನೇ ಸಾಲಿನ ಸ್ಪೇಸ್ ಅನ್ನು ಚರ್ಚಿಸುವ ಮೊದಲು, ಮೂರನೇ ಸಾಲಿನ ಒಳಗೆ ಮತ್ತು ಹೊರಗೆ ಹೋಗುವ ಪ್ರಕ್ರಿಯೆ ಎಷ್ಟು ಸುಲಭವಾಗಿದೆ ಎಂದು ನೋಡೋಣ. ಇಲ್ಲಿ, XUV700 ಪ್ಯಾಸೆಂಜರ್ ಸೈಡ್ ಅಲ್ಲಿ ಲಭ್ಯವಿರುವ ಅದರ ಒನ್-ಟಚ್ ಟಂಬಲ್ ಫಂಕ್ಷನಾಲಿಟಿಯಿಂದ ಮೊದಲ ಆಯ್ಕೆಯಾಗಿ ಹೊರಹೊಮ್ಮುತ್ತದೆ. ಇದು ಎರಡನೇ ಸಾಲಿನ ಸೀಟ್ ಅನ್ನು ನೂಕುವ ಪ್ರಯತ್ನವನ್ನು ಕಡಿಮೆ ಮಾಡುತ್ತದೆ. ಇನ್ನೋವಾ ಹೈಕ್ರಾಸ್ ಮತ್ತು ಸಫಾರಿಯಲ್ಲಿ ಎರಡನೇ ಸಾಲಿನ ಸೀಟುಗಳು ಮುಂದಕ್ಕೆ ಉರುಳುವುದಿಲ್ಲ. ಆದರೆ, ಹೈಕ್ರಾಸ್‌ನ ಸೀಟ್ ಹೆಚ್ಚು ಜಾಗವನ್ನು ಹೊಂದಿರುವುದರಿಂದ ಮತ್ತು ಸಫಾರಿಗೆ ಹೋಲಿಸಿದರೆ ಮೂರನೇ ಸಾಲನ್ನು ಪ್ರವೇಶಿಸಲು ಅಗಲವಾದ ಜಾಗ ಇರುವ ಕಾರಣ, ನಾವು ಹೈಕ್ರಾಸ್‌ಗೆ ಜಾಸ್ತಿ ಅಂಕ ನೀಡುತ್ತೇವೆ. ಸಫಾರಿಯ ವಿಷಯದಲ್ಲಿ, ಕೊನೆಯ ಸಾಲಿನ ಸೀಟ್ ಗಳನ್ನು ಪ್ರವೇಶಿಸಲು ಎರಡನೇ ಸಾಲಿನ ನಡುವೆ ಸುಲಭವಾಗಿ ನಡೆಯಬಹುದು.

Toyota Innova Hycross hybrid third-row seats

 ಸ್ಪೇಸ್ ಅನ್ನು ನೋಡಿದರೆ, ಇಲ್ಲಿ ಇನ್ನೋವಾ ಹೈಕ್ರಾಸ್ ಅಗ್ರ ಸ್ಥಾನವನ್ನು ಪಡೆಯುತ್ತದೆ. ಇಲ್ಲಿ ನೀಡಲಾಗಿರುವ ಹೆಡ್‌ರೂಮ್, ಫುಟ್‌ರೂಮ್ ಮತ್ತು ಶೋಲ್ಡರ್ ರೂಮ್ ಸ್ಪೇಸ್ ಅತ್ಯುತ್ತಮವಾಗಿದೆ. ಅಲ್ಲದೆ, ಎರಡನೇ ಸಾಲು ಹೆಚ್ಚು ಅಡ್ಜಸ್ಟ್ ಮಾಡಬಹುದಾದ ಜಾಗವನ್ನು ಹೊಂದಿರುವುದರಿಂದ, ಇಲ್ಲಿ ಆರಾಮದಾಯಕವಾಗಿ ಕುಳಿತುಕೊಳ್ಳಬಹುದು. ಓವರ್‌ಹೆಡ್ AC ವೆಂಟ್‌ಗಳನ್ನು ಒದಗಿಸಲಾಗಿದೆ, ಇದು ಪ್ಯಾಸೆಂಜರ್ ಗಳನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

Tata Safari third-row seats

 ಹೈಕ್ರಾಸ್‌ಗೆ ಹೋಲಿಸಿದರೆ, ಸಫಾರಿ ಮತ್ತು XUV700 ಎರಡರಲ್ಲೂ ನೀವು 'ನೀಸ್-ಅಪ್' ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಬಹುದು. ಸಂಪೂರ್ಣವಾಗಿ ಖಾಲಿಯಿರುವ ಕಾರಿನ ಸ್ಪೇಸ್ ಅನ್ನು ನೋಡಿದರೆ, ಸಫಾರಿಯು ನೀರೂಮ್ ಮತ್ತು ಹೆಡ್‌ರೂಮ್ ವಿಷಯದಲ್ಲಿ ಸ್ವಲ್ಪ ಉತ್ತಮವಾಗಿದೆ. ಆದರೆ, ನಿಮ್ಮ ಪಾದವನ್ನು ಆರಾಮವಾಗಿ ಇರಿಸಲು ಎರಡನೇ ಸಾಲಿನ ಸೀಟಿನ ಕೆಳಗೆ ಸಾಕಷ್ಟು ಸ್ಥಳಾವಕಾಶವಿಲ್ಲ.

Mahindra XUV700 third-row seats

 XUV700 ಇಲ್ಲಿ ಅತಿ ಕಡಿಮೆ ಪ್ರಮಾಣದ ಮೂರನೇ ಸಾಲಿನ ಸ್ಪೇಸ್ ಅನ್ನು ಹೊಂದಿದೆ. ಪ್ಯಾಸೆಂಜರ್ ಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ಎರಡನೇ ಸಾಲನ್ನು ಅಡ್ಜಸ್ಟ್ ಮಾಡಲು ಕೂಡ ಸಾಧ್ಯವಿಲ್ಲ. ಆದ್ದರಿಂದ, ದೀರ್ಘ ಪ್ರಯಾಣವನ್ನು ಮಾಡುವಾಗ ಈ ಸಾಲನ್ನು ಮಕ್ಕಳಿಗೆ ನೀಡುವುದು ಉತ್ತಮ, ಹಾಗೆಯೇ ವಯಸ್ಕರು ಬಳಸಲು ಬಯಸಿದರೆ ಕಮ್ಮಿ ದೂರ ಸಾಗುವ ನಗರದ ಓಡಾಟಕ್ಕೆ ಉಪಯೋಗಿಸಬಹುದು.

 ಇದನ್ನು ಕೂಡ ಓದಿ: ಆಟೋಮ್ಯಾಟಿಕ್ ಕಾರುಗಳಲ್ಲಿ ಇರುವ 5 ವಿವಿಧ ರೀತಿಯ ಡ್ರೈವ್ ಸೆಲೆಕ್ಟರ್‌ಗಳು (ಗೇರ್ ಸೆಲೆಕ್ಟರ್)

 ಎರಡನೇ ಸಾಲಿನ ಸ್ಪೇಸ್ ಮತ್ತು ಅನುಭವ

Toyota Innova Hycross hybrid second-row seats

 ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಎರಡನೇ ಸಾಲಿನ ಒಳಗೆ ಹೋಗುವುದು ಮತ್ತು ಹೊರಗೆ ಬರುವುದು ಅತ್ಯಂತ ಸುಲಭವಾಗಿದೆ. ನೀವು ಕ್ಯಾಬಿನ್ ಒಳಗೆ ನಡೆಯಬಹುದು ಕೂಡ. ನೀವು ಮಿಕ್ಕಿದ ಎರಡು SUV ಗಳ ಕ್ಯಾಬಿನ್‌ನ ಒಳಗೆ ಹತ್ತಬೇಕಾಗುತ್ತದೆ, ಮತ್ತು ಇಲ್ಲಿ ಸಫಾರಿಯನ್ನು ಹತ್ತಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಕುಟುಂಬದಲ್ಲಿರುವ ಹಿರಿಯ ವಯಸ್ಸಿನವರು ಟಾಟಾವನ್ನು ಬಳಸಬೇಕಾದರೆ, ಅವರ ಅನುಕೂಲಕ್ಕಾಗಿ ಸೈಡ್ ಸ್ಟೆಪ್ಸ್ ಗಳನ್ನು ಅಳವಡಿಸುವುದು ಉತ್ತಮ.

Toyota Innova Hycross fold-out tray in the second row

 ಒಮ್ಮೆ ಎರಡನೇ ಸಾಲಿನ ಒಳಗೆ ಹೋದರೆ, ಇಲ್ಲಿ ಮತ್ತೊಮ್ಮೆ ಇನ್ನೋವಾ ತನ್ನ ಅದ್ಭುತ ಸ್ಪೇಸ್ ನೊಂದಿಗೆ ನಮ್ಮನ್ನು ಆಕರ್ಷಿಸುತ್ತದೆ. ಸೀಟ್ ನಲ್ಲಿ ತುಂಬಾ ಜಾಗವಿದೆ, ಎಷ್ಟೆಂದರೆ ನೀವು ಹಿಂದಕ್ಕೆ ಒರಗಿ ಆರಾಮವಾಗಿ  ಕುಳಿತಿದ್ದರೆ, ಮುಂಭಾಗದ ಸೀಟ್ ಗಳನ್ನು ಮುಟ್ಟುವುದು ಕೂಡ ನಿಮಗೆ ಕಷ್ಟವಾಗಬಹುದು. ಹಾಗೆ ನೋಡಿದರೆ, ಇನ್ನೋವಾ ಹೈಕ್ರಾಸ್‌ನ ಪ್ರತಿಯೊಂದು ಸಾಲಿನಲ್ಲಿಯೂ ಆರು-ಅಡಿ ಉದ್ದವಿರುವ ವ್ಯಕ್ತಿಯು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಕುಳಿತುಕೊಳ್ಳಬಹುದು. ಇದು ಎರಡನೇ-ಸಾಲಿನ ಅನುಕೂಲದ ಮೇಲೆ ಹೆಚ್ಚು ಗಮನಹರಿಸಿರುವ ವಾಹನವಾಗಿದೆ, ಮತ್ತು ಇಲ್ಲಿ ನೀಡಲಾಗಿರುವ ಪವರ್ ಚಾಲಿತ ರಿಕ್ಲೈನ್, ಒಟ್ಟೋಮನ್ ಮತ್ತು ಸೀಟ್ ನಲ್ಲಿರುವ ಆರಾಮದಾಯಕ ಕುಶನಿಂಗ್ ಇದನ್ನು ಸಾಬೀತುಪಡಿಸುತ್ತದೆ. ಹೆಚ್ಚುವರಿ ಅನುಕೂಲವನ್ನು ನೀಡಲು ಪ್ರತ್ಯೇಕ ಆರ್ಮ್‌ಸ್ಟ್ರೆಸ್ಟ್‌ಗಳು ಮತ್ತು ಮಧ್ಯದಲ್ಲಿ ಫೋಲ್ಡ್ ಮಾಡಬಹುದಾದ ಟ್ರೇ ಕೂಡ ಇವೆ. ಓವರ್‌ಹೆಡ್ AC ವೆಂಟ್‌ಗಳು ಮತ್ತು ವಿಂಡೋಗಳಿಗೆ ಸನ್‌ಶೇಡ್  ಇರುವ ಕಾರಣ ಈ ಕ್ಯಾಬಿನ್ ವಿಶ್ರಾಂತಿ ಪಡೆಯಲು ಹೇಳಿಮಾಡಿಸಿದಂತಹ ಸ್ಥಳವಾಗಿದೆ.

Tata Safari second-row seats

 ಮಹೀಂದ್ರಾ XUV700 ಗೆ ಹೋಲಿಸಿದರೆ ಟಾಟಾ ಸಫಾರಿಯು ಉತ್ತಮ ನೀರೂಮ್ ಮತ್ತು ಸ್ಪೇಸ್ ಇರುವ ಕಾರಣ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಕಂಫರ್ಟ್ ಹೆಡ್‌ರೆಸ್ಟ್‌ಗಳು ಮತ್ತು ಸೀಟ್ ವೆಂಟಿಲೇಶನ್‌ನಂತಹ (ಕ್ಯಾಪ್ಟನ್ ಸೀಟ್ ವರ್ಷನ್ ನಲ್ಲಿ ಮಾತ್ರ) ವಿಶಿಷ್ಟ ಫೀಚರ್ ಗಳಿವೆ - ನೀವು ಡ್ರೈವ್‌ಗಳಲ್ಲಿ ಒಂದು ಸಣ್ಣ ಸುಖಕರ ನಿದ್ದೆಗೆ ಜಾರಲು ಬಯಸಿದರೆ ಇದು ಉತ್ತಮವಾಗಿದೆ. ಸೀಟ್ ಗಳು ಅತ್ಯುತ್ತಮ ಬೋಲ್ಸ್ಟರ್‌ಗಳನ್ನು ಹೊಂದಿದ್ದು ಅದು ನಿಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಆದರೆ, ನೀವು XL-ಸೈಜ್ ನವರಾಗಿದ್ದರೆ, ನಿಮಗೆ ಸೀಟ್ ಸ್ವಲ್ಪ ಸಣ್ಣದಾಗಿದೆ ಎಂದು ಅನಿಸಬಹುದು.

Mahindra XUV700 captain seats

 ಫ್ಲಿಪ್‌ಸೈಡ್‌ನಲ್ಲಿ, XUV700 ನಲ್ಲಿ ಹೊಸದಾಗಿ ಪರಿಚಯಿಸಲಾದ ಕ್ಯಾಪ್ಟನ್ ಸೀಟ್‌ಗಳು ಹೆಚ್ಚು ಫ್ಲಾಟ್ ಮತ್ತು ಅಗಲವಾಗಿವೆ, ಇದು ದೊಡ್ಡ ಶರೀರದವರಿಗೆ ಉತ್ತಮವಾಗಿದೆ. ಆದರೆ, ಇಲ್ಲಿ ನೀರೂಮ್‌ ಸಫಾರಿಗಿಂತ ಸ್ವಲ್ಪ ಕಡಿಮೆಯಿದೆ. ಮಹೀಂದ್ರಾ ರಿಯರ್ ಸನ್‌ಶೇಡ್‌ಗಳನ್ನು ಕೂಡ ಸೇರಿಸಬಹುದಿತ್ತು. ಮತ್ತೊಂದು ಸಣ್ಣ ಸಮಸ್ಯೆಯೆಂದರೆ AC ವೆಂಟ್ ನೀಡಿರುವ ಸ್ಥಳ, ಇದು ನಿಮ್ಮ ಮೊಣಕಾಲುಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ತಂಪಾಗಿಸುವ ಜಾಗದಲ್ಲಿ ನೀಡಲಾಗಿದೆ.

 ಮೊದಲ ಸಾಲು / ಕ್ಯಾಬಿನ್ ಅನುಭವ

Tata Safari dashboard

 ಡಿಸೈನ್, ಗುಣಮಟ್ಟ ಮತ್ತು ಕೊಟ್ಟಿರುವ ದುಡ್ಡಿಗೆ ಮೌಲ್ಯವನ್ನು ನೋಡಿದರೆ, ಇಲ್ಲಿ ಟಾಟಾ ಸಫಾರಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಡ್ಯಾಶ್‌ಬೋರ್ಡ್ ಲೇಔಟ್ ಅತ್ಯಂತ ಹೆಚ್ಚು ಆಕರ್ಷಕವಾಗಿದೆ, ಮೆಟೀರಿಯಲ್ ಗಳ ಆಯ್ಕೆಯು ಅತ್ಯುತ್ತಮವಾಗಿದೆ ಮತ್ತು ಫಿಟ್ ಮತ್ತು ಫಿನಿಶ್ ಇಲ್ಲಿ ಹೆಚ್ಚು ಟಾಪ್ ಕ್ಲಾಸ್ ಆಗಿದೆ. ಟಾಟಾ ಇಲ್ಲಿ ವಿವಿಧ ವೇರಿಯಂಟ್ ಗಳಲ್ಲಿ ಹಲವಾರು ವಿಧಗಳನ್ನು ಕೂಡ ನೀಡುತ್ತಿದೆ, ಆದ್ದರಿಂದ ಹಳೆ ಮಾಡೆಲ್ ಗಳಿಗೆ ಹೋಲಿಸಿದರೆ ಇದು ಯಾವುದೇ ರೀತಿಯಲ್ಲಿ ಕೆಳಮಟ್ಟದ ವರ್ಷನ್ ನಂತೆ ಅನಿಸುವುದಿಲ್ಲ. ನೀವು ಐಷಾರಾಮಿ ಅನುಭವವನ್ನು ಪಡೆಯಲು ನೋಡುತ್ತಿದ್ದರೆ, ಸಫಾರಿ ನಿಮ್ಮ ಗಮನವನ್ನು ಹೆಚ್ಚು ಸೆಳೆಯುತ್ತದೆ.

Mahindra XUV700 dashboard

 ಮಹೀಂದ್ರಾದ XUV700 ತನ್ನ ನೇರವಾದ, ಬಹುತೇಕ ಜರ್ಮನ್-ಕಾರ್-ರೀತಿಯ ಡಿಸೈನ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಡಿಸೈನ್ ಫಂಕ್ಷನಾಲಿಟಿಯ ಮೇಲೆ ಗಮನಹರಿಸುತ್ತದೆ ಮತ್ತು ಗುಣಮಟ್ಟವು ತಕ್ಕಮಟ್ಟಿಗಿದೆ ಮತ್ತು ಬೆಲೆಗೆ ಸ್ವೀಕಾರಾರ್ಹವಾಗಿವೆ. ಮಹೀಂದ್ರಾ ಡ್ಯಾಶ್‌ನ ಮೇಲ್ಭಾಗದಲ್ಲಿ ಸಾಫ್ಟ್ ಟಚ್ ಮೆಟೀರಿಯಲ್ ಅನ್ನು ನೀಡುವ ಮೂಲಕ ಮತ್ತು ಆಂಬಿಯೆಂಟ್ ಲೈಟಿಂಗ್ ಜೊತೆಗೆ ಎಕ್ಸ್ಪೆರಿಮೆಂಟ್ ಮಾಡುವ ಮೂಲಕ ಮತ್ತು ಸೆಂಟರ್ ಕನ್ಸೋಲ್‌ನಲ್ಲಿನ ಕ್ಲಟರ್ ಅನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ಆಧುನಿಕ ಲುಕ್ ಅನ್ನು ನೀಡಬಹುದಿತ್ತು.

Toyota Innova Hycross dashboard

 ಇಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಕೊನೆಯ ಸ್ಥಾನದಲ್ಲಿದೆ, ಇದು ಪ್ಲಾಸ್ಟಿಕ್ ಗುಣಮಟ್ಟ ಮತ್ತು ಫಿಟ್ ಮತ್ತು ಫಿನಿಶ್ ವಿಷಯದಲ್ಲಿ ನಿರಾಸೆಯನ್ನು ಮೂಡಿಸುತ್ತದೆ. ಡ್ಯಾಶ್‌ಬೋರ್ಡ್ ಮತ್ತು ಡೋರ್‌ಪ್ಯಾಡ್‌ಗಳಲ್ಲಿ ಲೆಥೆರೆಟ್ ಇನ್ಸರ್ಟ್‌ನೊಂದಿಗೆ ಅಪ್‌ಮಾರ್ಕೆಟ್ ಅನುಭವವನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ, ಆದರೆ ಇಲ್ಲಿ ಇನ್ನಷ್ಟು ಕೆಲಸ ಮಾಡಬಹುದಿತ್ತು ಎಂದು ಅನಿಸುತ್ತದೆ. ಇಲ್ಲಿ ಹೈಕ್ರಾಸ್ ಅತ್ಯಂತ ದುಬಾರಿ ವಾಹನವಾಗಿರುವ ಕಾರಣ, ನೀವು ಇನ್ನೂ ಉತ್ತಮವಾದ ಅಂಶಗಳನ್ನು ಬಯಸುವುದು ಸಹಜವಾಗಿದೆ.

 ಇಲ್ಲಿ ಇನ್ನೋವಾ ಅತ್ಯುತ್ತಮವಾದ ಡ್ರೈವಿಂಗ್ ಸ್ಥಾನವನ್ನು ನೀಡುತ್ತದೆ. ಸ್ಲಿಮ್ A-ಪಿಲ್ಲರ್, ಶಾರ್ಟ್ ಡ್ಯಾಶ್‌ಬೋರ್ಡ್ ಮತ್ತು ಹೆಚ್ಚು ಎತ್ತರವಿರುವ ಸೀಟ್ ಗಳು ಹೊಸ ಡ್ರೈವರ್‌ಗೆ ಕೂಡ ಅನುಕೂಲಕರವಾಗಿದೆ. XUV700 ಮತ್ತು ಸಫಾರಿ ಎರಡೂ, SUV ತರಹದ ಡ್ರೈವಿಂಗ್ ಅನುಭವವನ್ನು ನೀಡುತ್ತವೆ, ಇಲ್ಲಿ ನಿಮ್ಮ ಸೀಟ್ ನಲ್ಲಿ ಕುಳಿತಾಗ ಬಾನೆಟ್ ನಿಮಗೆ ಕಾಣುತ್ತದೆ. XUV700 ನಲ್ಲಿ ಎಲ್ಲವೂ XL ಗಾತ್ರದಲ್ಲಿ ಇರುವ ಕಾರಣ ಸಫಾರಿಗಿಂತ ಇದು ಆರಾಮದಾಯಕ ಎಂದು ಅನಿಸುತ್ತದೆ.

 ಇದನ್ನು ಕೂಡ ಓದಿ: ಟೊಯೋಟಾ ಇನ್ನೋವಾ ಹೈಕ್ರಾಸ್ ರಿವ್ಯೂ: ಇಲ್ಲಿಯವರೆಗೆ ಬಂದ ಇನ್ನೋವಾಗಳಲ್ಲಿ ಇದು ಉತ್ತಮವಾಗಿದೆಯೇ?

 ಫೀಚರ್ ಗಳು

 ಈ ಮೂರು ವಾಹನಗಳ ನಡುವೆ ಸಾಮಾನ್ಯವಾಗಿರುವ ಹಲವಾರು ಫೀಚರ್ ಗಳಿವೆ. ಈ ಎಲ್ಲಾ ಕಾರುಗಳ ಟಾಪ್ ಮಾಡೆಲ್ ಗಳಲ್ಲಿ ಲಭ್ಯವಿರುವ ಫೀಚರ್ ಗಳೆಂದರೆ:

 ಕೀಲೆಸ್ ಎಂಟ್ರಿ

 ಪುಶ್-ಬಟನ್ ಸ್ಟಾರ್ಟ್

 ಕ್ಲೈಮೇಟ್ ಕಂಟ್ರೋಲ್

 ರಿಯರ್-AC ವೆಂಟ್ ಗಳು

 ಪವರ್ಡ್ ಡ್ರೈವರ್ ಸೀಟ್

 ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು

 ಪನೋರಮಿಕ್ ಸನ್‌ರೂಫ್

 ಫ್ರಂಟ್ ಸೀಟ್ ವೆಂಟಿಲೇಷನ್

 360° ಕ್ಯಾಮೆರಾ

 ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್

Tata Safari powered co-driver seat

 ಟಾಟಾ ಸಫಾರಿಯು ಪವರ್ಡ್ ಕೋ-ಡ್ರೈವರ್ ಸೀಟ್ ಅನ್ನು ಹೊಂದಿದೆ, ಅದು ಇತರ ಎರಡರಲ್ಲಿ ಲಭ್ಯವಿಲ್ಲ. ಅದೇ ರೀತಿ, ಸಫಾರಿ ಮತ್ತು ಇನ್ನೋವಾ ಎರಡೂ XUV700 ಯಲ್ಲಿ ಲಭ್ಯವಿರದ ಪವರ್ಡ್ ಟೈಲ್‌ಗೇಟ್ ಅನ್ನು ಪಡೆಯುತ್ತವೆ.

 ಅವುಗಳ ಫೀಚರ್ ಗಳ ಆಧಾರದ ಮೇಲೆ ಮೂರೂ ವಾಹನಗಳನ್ನು ಹೋಲಿಸುವುದು ಕಷ್ಟ, ಆದರೆ ಇನ್ಫೋಟೈನ್‌ಮೆಂಟ್ ಅನುಭವದ ವಿಷಯದಲ್ಲಿ ಅವುಗಳ ನಡುವೆ ಸ್ಪಷ್ಟವಾದ ವ್ಯತ್ಯಾಸ ಕಾಣಿಸುತ್ತದೆ. ಅವುಗಳು ಏನನ್ನು ನೀಡುತ್ತವೆ ಎಂಬುದು ಇಲ್ಲಿದೆ:

 

 ಟಾಟಾ ಸಫಾರಿ

 ಮಹೀಂದ್ರ XUV700

 ಟೊಯೊಟಾ ಇನ್ನೋವಾ ಹೈಕ್ರಾಸ್

 ಟಚ್‌ಸ್ಕ್ರೀನ್

 12.3-ಇಂಚು

 10.25-ಇಂಚು

 10.1-ಇಂಚು

 ಆಂಡ್ರಾಯ್ಡ್ ಆಟೋ/ಆಪಲ್ ಕಾರ್ ಪ್ಲೇ

 ವೈರ್‌ಲೆಸ್‌

 ವೈರ್‌ಲೆಸ್‌

 ವೈರ್‌ಲೆಸ್‌

 ಇನ್ಸ್ಟ್ರುಮೆಂಟ್ ಕ್ಲಸ್ಟರ್

 10.25-ಇಂಚು

 10.25-ಇಂಚು

 7-ಇಂಚು

 ಸೌಂಡ್ ಸಿಸ್ಟಮ್

 10-ಸ್ಪೀಕರ್ (JBL)

 12-ಸ್ಪೀಕರ್ (ಸೋನಿ)

 10-ಸ್ಪೀಕರ್ (JBL)

Tata Safari 12.3-inch touchscreen

 ಇನ್ಫೋಟೈನ್‌ಮೆಂಟ್ ವಿಷಯದಲ್ಲಿ, ಸಫಾರಿ ಮುಂಚೂಣಿಯಲ್ಲಿದೆ. ಟಚ್‌ಸ್ಕ್ರೀನ್‌ನ ಲೇಔಟ್, ಗ್ರಾಫಿಕ್ಸ್ ಮತ್ತು ಬಳಸುವ ವಿಧಾನ ಸುಲಭ ಮತ್ತು ಸರಳವಾಗಿದೆ. 10-ಸ್ಪೀಕರ್ ಸೌಂಡ್ ಸಿಸ್ಟಮ್‌ನಿಂದ ಬರುವ ಆಡಿಯೊ ಔಟ್‌ಪುಟ್ ಕೂಡ ಇಲ್ಲಿ ಅತ್ಯುತ್ತಮವಾಗಿದೆ. ಆದರೆ, ಈ ಇನ್ಫೋಟೈನ್‌ಮೆಂಟ್ ಸೆಟಪ್ ಫ್ರೀಜ್ ಆಗುವ/ಗ್ಲಿಚ್ ಹೊಂದಿರುವ ಕುರಿತು ವರದಿಗಳು ಬಂದಿವೆ. ಯಾವುದೇ ಸಮಸ್ಯೆಗಳಿಲ್ಲದೇ ಇದು ಕೆಲಸ ಮಾಡಿದರೆ, ಈ ಸೆಗ್ಮೆಂಟ್ ನಲ್ಲಿ ಇದು ಅತ್ಯುತ್ತಮ ಇನ್ಫೋಟೈನ್‌ಮೆಂಟ್ ಅನುಭವವನ್ನು ನೀಡುತ್ತದೆ.

Mahindra XUV700 10.25-inch touchscreen

 XUV700 ಡಿಸೈನ್ ಇಲ್ಲಿ ಬೇಸಿಕ್ ಲೇಔಟ್ ನೊಂದಿಗೆ ಸರಳವಾಗಿದೆ. ಹೋಮ್‌ಸ್ಕ್ರೀನ್ ಮೊದಲ ಬಾರಿ ಬಳಸುವವರಿಗೆ ಸ್ವಲ್ಪ ಗೊಂದಲವನ್ನು ಉಂಟುಮಾಡಬಹುದು ಮತ್ತು ಸುಲಭವಾಗಿ ಬಳಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆಡಿಯೊ ಔಟ್‌ಪುಟ್ ಚೆನ್ನಾಗಿದೆ ಮತ್ತು ಸರೌಂಡ್ ಸೌಂಡ್ ಎಫೆಕ್ಟ್ ಅನ್ನು ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

Toyota Innova Hycross 10.1-inch touchscreen

 ಟೊಯೊಟಾ ಇಲ್ಲಿ ಸಾಧಾರಣವಾದ ಇನ್ಫೋಟೈನ್ಮೆಂಟ್ ನೀಡುವ ಮೂಲಕ ನಿರಾಸೆಯನ್ನು ಮೂಡಿಸುತ್ತದೆ. ಟಚ್‌ಸ್ಕ್ರೀನ್ ಕಾಂಟ್ರಾಸ್ಟ್ ಅನ್ನು ಹೊಂದಿಲ್ಲ, ಲುಕ್ ಮತ್ತು ಫೀಲ್ ಅತ್ಯಂತ ಬೇಸಿಕ್ ಆಗಿದೆ ಮತ್ತು ನಿಮ್ಮ ಮ್ಯೂಸಿಕ್ ಅನ್ನು ಪ್ಲೇ ಮಾಡುವುದು ಮತ್ತು ಕ್ಯಾಮರಾ ಫೀಡ್ ಅನ್ನು ತೋರಿಸುವುದನ್ನು ಹೊರತುಪಡಿಸಿ ಹೆಚ್ಚಿನ ಯಾವುದೇ ಫೀಚರ್ ಗಳಿಲ್ಲ.

 ಹಾಗೆ ನೋಡಿದರೆ, ಟೊಯೊಟಾ ಕೂಡ ಕಳಪೆ ಕ್ಯಾಮೆರಾ ಔಟ್‌ಪುಟ್ ಅನ್ನು ಹೊಂದಿದೆ. ಇದು ಗ್ರೆಯ್ನಿ ಆಗಿದೆ ಮತ್ತು ಕಡಿಮೆ ಬೆಳಕಿನಲ್ಲಿ ಉಪಯೋಗಿಸಲು ಕಷ್ಟವಾಗುತ್ತದೆ. ಮಹೀಂದ್ರಾದಲ್ಲಿ, ಸ್ಕ್ರೀನ್ ಮೇಲಿನ ಔಟ್‌ಪುಟ್ ಸಾಕಷ್ಟು ಚಿಕ್ಕದಾಗಿದೆ ಮತ್ತು ಕೆಲವೊಮ್ಮೆ ಕನೆಕ್ಷನ್ ಕೂಡ ಸ್ಥಿರವಾಗಿಲ್ಲ. ವೀಡಿಯೊ ಗುಣಮಟ್ಟ ಮತ್ತು ಕಡಿಮೆ ಬೆಳಕಿನ ಪರ್ಫಾರ್ಮೆನ್ಸ್ ನಲ್ಲಿ ಟಾಟಾದ ಕ್ಯಾಮರಾ ಔಟ್‌ಪುಟ್ ಉತ್ತಮವಾಗಿದೆ.

 ಸುರಕ್ಷತೆ

Tata Safari airbag

 ಎಲ್ಲಾ ವಾಹನಗಳ ಟಾಪ್-ಸ್ಪೆಕ್ ವರ್ಷನ್ ಗಳು ಆರು ಏರ್‌ಬ್ಯಾಗ್‌ಗಳನ್ನು (ಸಫಾರಿ ಮತ್ತು XUV700 7 ನೀಡುತ್ತದೆ), EBD ಜೊತೆಗೆ ABS ಮತ್ತು ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್‌ನಂತಹ ಎಲೆಕ್ಟ್ರಾನಿಕ್ ಸುರಕ್ಷತಾ ಅಸಿಸ್ಟ್‌ಗಳನ್ನು ಒಳಗೊಂಡಿವೆ. ಮತ್ತೊಂದು ಪ್ರಮುಖ ವಿಷಯವೆಂದರೆ ಈ ಎಲ್ಲಾ ವಾಹನಗಳು ಲೆವೆಲ್ 2 ADAS ಅನ್ನು ಒಳಗೊಂಡಿವೆ, ಇದು ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್ ಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಇಷ್ಟವಾಗುವ ಅಂಶವೆಂದರೆ, ಭಾರತೀಯ ಟ್ರಾಫಿಕ್ ಸನ್ನಿವೇಶಗಳಿಗಾಗಿ ಎಲ್ಲಾ ಮೂರು ಸಿಸ್ಟಮ್ ಗಳನ್ನು ಚೆನ್ನಾಗಿ ಕ್ಯಾಲಿಬ್ರೇಟ್ ಮಾಡಲಾಗಿದೆ. ಅವುಗಳನ್ನು ನಿಜವಾದ ಜಗತ್ತಿನಲ್ಲಿ, ಹೆಚ್ಚಾಗಿ ಹೆದ್ದಾರಿಗಳಲ್ಲಿ ಬಳಸಬಹುದಾಗಿದೆ.

 ಕ್ರ್ಯಾಶ್ ಟೆಸ್ಟ್ ಸ್ಕೋರ್‌ಗಳನ್ನು ನೋಡಿದರೆ, ಟಾಟಾ ಸಫಾರಿಗೆ ಗ್ಲೋಬಲ್ NCAP ಮತ್ತು ಭಾರತ್ NCAP ಪೂರ್ತಿ ಐದು ಸ್ಟಾರ್‌ಗಳನ್ನು ನೀಡಿದೆ; ಮಹೀಂದ್ರಾ XUV700 ಗ್ಲೋಬಲ್ NCAP ನಿಂದ ಐದು ಸ್ಟಾರ್‌ ರೇಟಿಂಗ್ ಅನ್ನು ಪಡೆದುಕೊಂಡಿದೆ (ಗಮನಿಸಿ: ಹಳೆಯ ಪರೀಕ್ಷಾ ವಿಧಾನದಲ್ಲಿ), ಆದರೆ ಈ ಲೇಖನವನ್ನು ಪ್ರಕಟಿಸುವ ವೇಳೆಯಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ಹೊಂದಿಲ್ಲ.

 ಇದನ್ನು ಕೂಡ ಓದಿ: ಮೊಟ್ಟ ಮೊದಲ ಭಾರತ್ NCAP ರೇಟಿಂಗ್ ನಲ್ಲಿ ಟಾಟಾ ಹ್ಯಾರಿಯರ್ ಮತ್ತು ಸಫಾರಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ

 ಡ್ರೈವ್ ಅನುಭವ

 ಪ್ರತಿ ವಾಹನವು ಯಾವ ರೀತಿಯ ಡ್ರೈವ್ ಅನುಭವವನ್ನು ನೀಡುತ್ತದೆ ಎಂಬುದರ ವಿವರ ಇಲ್ಲಿದೆ

 

 ಟಾಟಾ ಸಫಾರಿ

 ಮಹೀಂದ್ರ XUV700

 ಟೊಯೊಟಾ ಇನ್ನೋವಾ ಹೈಕ್ರಾಸ್

 ಇಂಜಿನ್

 2-ಲೀಟರ್ ಡೀಸೆಲ್

 2-ಲೀಟರ್ ಪೆಟ್ರೋಲ್ / 2.2-ಲೀಟರ್ ಡೀಸೆಲ್

 2-ಲೀಟರ್ ಪೆಟ್ರೋಲ್ / 2-ಲೀಟರ್ ಪೆಟ್ರೋಲ್ ಹೈಬ್ರಿಡ್

 ಗೇರ್ ಬಾಕ್ಸ್

6MT/6AT

6MT/6AT

CVT

 

ಟೆಸ್ಟರ್ ನೋಟ್ ಗಳು:

ಟಾಟಾ ಸಫಾರಿ

Tata Safari

  •  ಇಲ್ಲಿ ಇಂಜಿನ್ ಹೆಚ್ಚು ಕ್ರೂಡ್ ಆಗಿದೆ ಮತ್ತು ರಿಫೈನ್ ಕೂಡ ಆಗಿಲ್ಲ ಎಂದು ಅನಿಸುತ್ತದೆ. ಕ್ಯಾಬಿನ್ ಸಾಕಷ್ಟು ಶಬ್ದ ಮಾಡುತ್ತದೆ, ವಿಶೇಷವಾಗಿ ಜಾಸ್ತಿ ಆಕ್ಸಿಲರೇಷನ್ ನೀಡಿದಾಗ.

  •  ನಗರ ಅಥವಾ ಹೆದ್ದಾರಿಯಲ್ಲಿ ಚಲಾಯಿಸುವಾಗ ಯಾವುದೇ ಪವರ್ ನ ಕೊರತೆ ಕಾಣುವುದಿಲ್ಲ. ಆದರೆ, ಇಂಜಿನ್ ಹೆದ್ದಾರಿಯಲ್ಲಿ ದೂರ ಸಾಗುವಾಗ ಕ್ರೂಸಿಂಗ್ ಗೆ ಸೂಕ್ತವೆಂದು ತೋರುತ್ತದೆ.

  •  ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸುಗಮ ಮತ್ತು ತ್ವರಿತವಾಗಿದೆ. ಮಾನ್ಯುಯಲ್ ಗೆ ಹೋಲಿಸಿದರೆ ನಗರದ ಒಳಗೆ ಓಡಿಸಲು ಇದು ಸುಲಭವಾಗಿದೆ.

  •  ಪೆಟ್ರೋಲ್ ಇಲ್ಲದಿರುವುದು ಅಥವಾ ಆಲ್-ವೀಲ್ ಡ್ರೈವ್ ವೇರಿಯಂಟ್ ಅನ್ನು ಆಯ್ಕೆಯಾಗಿ ನೀಡದಿರುವುದು ನಿರಾಶಾದಾಯಕವಾಗಿದೆ.

  •  ರೈಡ್ ಗುಣಮಟ್ಟವನ್ನು ಹೋಲಿಸಿದರೆ ಮೂರರಲ್ಲಿ ಇದು ಸ್ಥಿರವಾಗಿದೆ. ಕೆಲವೊಮ್ಮೆ ಬಿರುಸಿನ ಸನ್ನಿವೇಶಗಳಲ್ಲಿ ಕ್ಯಾಬಿನ್ ಶಬ್ದ ಮಾಡುತ್ತವೆ. ಆದರೆ, ಯಾವುದೇ ರೀತಿಯ ರಸ್ತೆಯಿದ್ದರೂ ಕೂಡ ಪ್ಯಾಸೆಂಜರ್ ಗಳು ಆರಾಮದಾಯಕವಾಗಿ ಪ್ರಯಾಣಿಸಬಹುದು. ಹೆದ್ದಾರಿಯಲ್ಲಿ ಇದರ ಸ್ಥಿರತೆ ಅದ್ಭುತವಾಗಿದೆ.

ಮಹೀಂದ್ರ XUV700

Mahindra XUV700

  •  ಲಭ್ಯವಿರುವ ಆಯ್ಕೆಗಳು: ಪೆಟ್ರೋಲ್, ಡೀಸೆಲ್, ಮಾನ್ಯುಯಲ್, ಆಟೋಮ್ಯಾಟಿಕ್, ಆಲ್-ವೀಲ್ ಡ್ರೈವ್.

  •  ಎರಡೂ ಎಂಜಿನ್‌ಗಳನ್ನು ಚೆನ್ನಾಗಿ ಟ್ಯೂನ್ ಮಾಡಲಾಗಿದೆ ಮತ್ತು ಕಾರಿನ ಸ್ಪೋರ್ಟಿ ವರ್ಷನ್ ಗೆ ಸರಿಹೊಂದುತ್ತದೆ.

  •  ಪರ್ಫಾರ್ಮೆನ್ಸ್ ಮತ್ತು ದಕ್ಷತೆಯ ನಡುವಿನ ಉತ್ತಮ ಬ್ಯಾಲೆನ್ಸ್ ಗಾಗಿ, ಎರಡು ಎಂಜಿನ್‌ಗಳ ನಡುವೆ ಡೀಸೆಲ್ ಅನ್ನು ಶಿಫಾರಸು ಮಾಡಲಾಗಿದೆ.

  •  ಪೆಟ್ರೋಲ್ ಮೋಟಾರು ಓಡಿಸಲು ಮಜವಾಗಿದೆ, ಆದರೆ ಇಂಧನ ದಕ್ಷತೆ ಕಡಿಮೆಯಿದೆ, ವಿಶೇಷವಾಗಿ ನಗರದೊಳಗೆ ಬಳಸಿದರೆ.

  •  ಡೀಸೆಲ್-AWD-AT ಸಂಯೋಜನೆಯು ವಿಶಿಷ್ಟವಾಗಿದೆ ಮತ್ತು ಹಿಮ/ಮರಳುಗಳಿರುವ ಪ್ರದೇಶಗಳಿಗೆ ರೋಡ್ ಟ್ರಿಪ್ ಅನ್ನು ಮಾಡಲು ಇಷ್ಟಪಡುವವರಿಗೆ ಶಿಫಾರಸು ಮಾಡಲಾಗಿದೆ.

  •  ಇಂಪ್ಯಾಕ್ಟ್ ಗಳ ಸಮಯದಲ್ಲಿ ರಕ್ಷಣೆಯನ್ನು ನೀಡಲು ಸಸ್ಪೆನ್ಷನ್ ಟ್ಯೂನಿಂಗ್ ಅನ್ನು ಉತ್ತಮವಾಗಿ ಮಾಡಲಾಗಿದೆ. ಸಫಾರಿಗಿಂತಲೂ ಕಡಿಮೆ ಶಬ್ದವನ್ನು ಮಾಡುತ್ತದೆ ಎಂದು ಅನಿಸುತ್ತದೆ. ಇಲ್ಲಿ ಯಾವುದೇ ಪ್ರಮುಖ ಅಂಶಗಳು ಅಥವಾ ಸಮಸ್ಯೆಗಳಿಲ್ಲ.

ಟೊಯೊಟಾ ಇನ್ನೋವಾ ಹೈಕ್ರಾಸ್

Toyoto Innova Hycross

  •  ಇದು ಎರಡು ಪೆಟ್ರೋಲ್ ಎಂಜಿನ್‌ಗಳನ್ನು ನೀಡುತ್ತದೆ, ಆದರೆ ಮಾನ್ಯುಯಲ್ ಟ್ರಾನ್ಸ್‌ಮಿಷನ್‌ ಲಭ್ಯವಿಲ್ಲ.

  •  ಹೈಬ್ರಿಡ್ ಅಲ್ಲದ ವರ್ಷನ್ ನ ಪರ್ಫಾರ್ಮೆನ್ಸ್ ಉತ್ತಮವಾಗಿಲ್ಲ. ವಿಶೇಷವಾಗಿ ಫುಲ್ ಲೋಡ್ ನೊಂದಿಗೆ ಓಡಿಸಿದರೆ ಕೇವಲ ಸಮರ್ಪಕ ಎಂದು ಅನಿಸುತ್ತದೆ.

  •  ಹೈಬ್ರಿಡ್ ವರ್ಷನ್ ತ್ವರಿತವಾಗಿ ಆಕ್ಸಿಲರೇಟ್ ಆಗುತ್ತದೆ ಮತ್ತು ತನ್ನ ವೇಗವನ್ನು ಹೆದ್ದಾರಿ ಪ್ರಯಾಣದ ಉದ್ದಕ್ಕೂ ಹೆಚ್ಚು ಕಾಲ ಉಳಿಸಿಕೊಳ್ಳುತ್ತದೆ.

  •  ಹೈಬ್ರಿಡ್ ಪ್ಯಾಕೇಜ್‌ನ ಪ್ರಮುಖ ಅಂಶವೆಂದರೆ ಇಂಧನ ದಕ್ಷತೆ. ಫುಲ್ ಟ್ಯಾಂಕ್ ಪೆಟ್ರೋಲ್‌ನಲ್ಲಿ 800-1000 ಕಿಮೀ ಮೈಲೇಜ್ ಅನ್ನು ನೀಡಬಹುದು.

  •  ಈ ಮೂರರಲ್ಲಿ ಹೋಲಿಸಿದರೆ ಇದರ ರೈಡ್ ಕಂಫರ್ಟ್ ಅತ್ಯುತ್ತಮವಾಗಿದೆ. ಕ್ಯಾಬಿನ್‌ನಲ್ಲಿ ಪ್ಯಾಸೆಂಜರ್ ಗಳು ಹೆಚ್ಚು ಸುಖಕರ ಅನುಭವವನ್ನು ಪಡೆಯಬಹುದು. ಸಸ್ಪೆನ್ಷನ್ ಕೂಡ ಸದ್ದು ಮಾಡುವುದಿಲ್ಲ ಮತ್ತು ಕಳಪೆ ರಸ್ತೆಗಳ ಇಂಪ್ಯಾಕ್ಟ್ ಒಳಗೆ ಕುಳಿತವರಿಗೆ ಅನುಭವವಾಗುವುದಿಲ್ಲ.

 ತೀರ್ಮಾನ

Mahindra XUV700 vs Tata Safari vs Toyota Innova Hycross

 ನಿಮ್ಮ ಅಗತ್ಯತೆಗಳ ಆಧಾರದ ಮೇಲೆ ನೀವು ಈ ಮೂರು ವಾಹನಗಳ ನಡುವೆ ಆಯ್ಕೆ ಮಾಡಬಹುದು:

 ಟೊಯೊಟಾ ಇನ್ನೋವಾ ಹೈಕ್ರಾಸ್

 ಈ ಕೆಳಗಿನವುಗಳು ಬೇಕಾದರೆ ಆಯ್ಕೆ ಮಾಡಿ

  •  ನಿಮಗೆ ಪೆಟ್ರೋಲ್ ಕಾರು ಬೇಕು. ಪರ್ಫಾರ್ಮೆನ್ಸ್ ಮತ್ತು ದಕ್ಷತೆಯ ಮಿಶ್ರಣವನ್ನು ನಂಬಬೇಕಾದರೆ ಅದನ್ನು ಅನುಭವಿಸಬೇಕು ಎಂದು ಅಂದುಕೊಂಡಿದ್ದೀರಿ.

  •  ಹಣದಿಂದ ಖರೀದಿಸಬಹುದಾದ ಅತ್ಯುತ್ತಮ ಹಿಂದಿನ ಸೀಟಿನ ಅನುಭವವನ್ನು ನೀವು ಬಯಸುತ್ತೀರಿ.

  •  ನಿಮಗೆ ಈ ಬಜೆಟ್‌ನಲ್ಲಿ ಅತ್ಯಂತ ಪ್ರಾಯೋಗಿಕ ಏಳು/ಎಂಟು ಸೀಟರ್ ಬೇಕು. ಕ್ಯಾಬಿನ್‌ನ ಒಳಗಿನ ಸ್ಥಳಾವಕಾಶ, ಬೂಟ್ ಸ್ಪೇಸ್ ಮತ್ತು ಕ್ಯಾಬಿನ್‌ನಲ್ಲಿನ ವಾಸ್ತವಿಕ ಅಂಶಗಳು ಈ ಕ್ಲಾಸ್ ನಲ್ಲಿ ಅತ್ಯುತ್ತಮವಾಗಿದೆ.

 ಟಾಟಾ ಸಫಾರಿ

 ಈ ಕೆಳಗಿನವುಗಳು ಬೇಕಾದರೆ ಆಯ್ಕೆ ಮಾಡಿ

  •  ರಸ್ತೆಯಲ್ಲಿ ಸಾಗುವಾಗ ಉತ್ತಮ ಅನುಭವವನ್ನು ನೀಡುವ ಶುದ್ಧ SUV ಡಿಸೈನ್ ಅನ್ನು ನೀವು ಬಯಸುತ್ತೀರಿ.

  •  ನಿಮಗೆ 5+2 ಸೀಟರ್ ನ ಅಗತ್ಯವಿದೆ ಆದರೆ ಜಾಗದ ವಿಷಯದಲ್ಲಿ ಹೆಚ್ಚು ರಾಜಿ ಮಾಡಿಕೊಳ್ಳಲು ತಯಾರಿಲ್ಲ.

  •  ನೀವು ಈ ವಿಭಾಗದಲ್ಲಿ ಉತ್ತಮ ಫೀಚರ್ ಗಳ ಪಟ್ಟಿ ಮತ್ತು ಇನ್ಫೋಟೈನ್‌ಮೆಂಟ್ ಅನುಭವವನ್ನು ಬಯಸುತ್ತೀರಿ.

 ಮಹೀಂದ್ರ XUV700

 ಈ ಕೆಳಗಿನವುಗಳು ಬೇಕಾದರೆ ಆಯ್ಕೆ ಮಾಡಿ

  •  ಫೀಚರ್ ಗಳು, ಸ್ಪೇಸ್ ಮತ್ತು ಟೆಕ್ ಈ ಎಲ್ಲಾ ವಿಷಯದಲ್ಲಿ ನೀವು ಸ್ವಲ್ಪ ಸ್ವಲ್ಪ ಅಂಶಗಳನ್ನು ಬಯಸುತ್ತೀರಿ.

  •  ನಿಮಗೆ ಕ್ವಿಕ್ ಟರ್ಬೊ-ಪೆಟ್ರೋಲ್ ಆಯ್ಕೆ ಅಥವಾ ಆಲ್-ವೀಲ್ ಡ್ರೈವ್ ಬೇಕು.

  •  ಈ ಮೂರರ ನಡುವೆ ನೀವು ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ವಾಹನವನ್ನು ಖರೀದಿಸಲು ಬಯಸುತ್ತೀರಿ.

 ಇನ್ನಷ್ಟು ಓದಿ: ಮಹೀಂದ್ರ XUV700 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಎಕ್ಸ್‌ಯುವಿ 700

2 ಕಾಮೆಂಟ್ಗಳು
1
D
draj s
Mar 27, 2024, 12:58:39 PM

Which car among these has a good resale value.

Read More...
    ಪ್ರತ್ಯುತ್ತರ
    Write a Reply
    1
    A
    ajay bhatnagar
    Feb 28, 2024, 12:22:14 AM

    Best car in its budget. It's really smooth to drive and best in safety.....Mahindra Jai Bharat.....Jai Hind.....

    Read More...
      ಪ್ರತ್ಯುತ್ತರ
      Write a Reply
      Read Full News

      explore similar ಕಾರುಗಳು

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience