• English
  • Login / Register

Volkswagen Taigun, Virtus Sound Editionನ ಬಿಡುಗಡೆ: ಬೆಲೆಗಳು ರೂ 15.52 ಲಕ್ಷದಿಂದ ಪ್ರಾರಂಭ

ವೋಕ್ಸ್ವ್ಯಾಗನ್ ವಿಟರ್ಸ್ ಗಾಗಿ rohit ಮೂಲಕ ನವೆಂಬರ್ 21, 2023 06:33 pm ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರಡು ಕಾರುಗಳ ಸೌಂಡ್ ಎಡಿಶನ್ ಗಳು ಅವುಗಳ ಸ್ಟ್ಯಾಂಡರ್ಡ್‌ ಮೊಡೆಲ್‌ಗಳ ಮೇಲೆ ಸಣ್ಣ ವಿನ್ಯಾಸದ ಬದಲಾವಣೆ ಮತ್ತು ಪರಿಷ್ಕರಣೆಗಳನ್ನು ಪಡೆದಿದೆ.

Volkswagen Taigun & Virtus Sound Edition

  • ಎರಡೂ ಮಾದರಿಗಳ ಸೌಂಡ್‌ ಎಡಿಷನ್‌ನ C-ಪಿಲ್ಲರ್ ನ ಮೇಲೆ ವಿಶೇಷ ಸ್ಟಿಕ್ಕರ್‌ಗಳನ್ನು ಮತ್ತು ಸಬ್ ವೂಫರ್‌ನಲ್ಲಿ ಪಡೆಯುತ್ತವೆ.
  • ಸೀಮಿತ ಅವಧಿಯ ಈ ಆವೃತ್ತಿಯು ಎರಡೂ ಕಾರುಗಳ ಟಾಪ್‌ಲೈನ್ ವೇರಿಯೆಂಟ್‌ಗಳನ್ನು ಆಧರಿಸಿದೆ.
  • ಈ ವೇರಿಯೆಂಟ್‌ಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS/178 Nm) ನೊಂದಿಗೆ ಬರುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ.
  • ಅವರ ವೈಶಿಷ್ಟ್ಯಗಳ ಪಟ್ಟಿಯು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳನ್ನು ಪಡೆಯುವ ಸ್ಟ್ಯಾಂಡರ್ಡ್ ಟಾಪ್‌ಲೈನ್ ವೇರಿಯೆಂಟ್‌ಗಳಂತೆಯೇ ಉಳಿದಿದೆ.

ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ ಸೌಂಡ್ ಎಡಿಷನ್ ಎಂಬ ಮತ್ತೊಂದು ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ. ವಿನ್ಯಾಸ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳ ಮೇಲೆ ಮಾತ್ರ ಕೇಂದ್ರೀಕರಿಸಿದ ಇತರ ಕಾರು ತಯಾರಕರ ವಿಶೇಷ ಆವೃತ್ತಿಗಳಿಗೆ ಹೋಲಿಸಿದರೆ, ಕಾರಿನ ಮ್ಯೂಸಿಕ್‌-ಆಧಾರಿತ ವಿಶೇಷ ಆವೃತ್ತಿಯನ್ನು ಹೊರತಂದಿರುವುದು ಇದೇ ಮೊದಲು. ಎರಡು ಕಾಂಪ್ಯಾಕ್ಟ್ ಕೊಡುಗೆಗಳ ವಿಶೇಷ ಆವೃತ್ತಿಯು ಅವುಗಳ ಟಾಪ್‌ಲೈನ್ ವೇರಿಯೆಂಟ್‌ ನೊಂದಿಗೆ ಲಭ್ಯವಿದೆ ಮತ್ತು ಇದರ ಬೆಲೆಗಳು ಈ ಕೆಳಗಿನಂತೆ ಇವೆ:

ಟ್ರಾನ್ಸ್‌ಮಿಷನ್‌ ಆಯ್ಕೆ

ಟೈಗುನ್ ಟಾಪ್‌ಲೈನ್

ಟೈಗುನ್ ಸೌಂಡ್‌ ಎಡಿಷನ್‌

ವ್ಯತ್ಯಾಸ

ವರ್ಟಸ್ ಟಾಪ್‌ಲೈನ್

ವರ್ಟಸ್ ಸೌಂಡ್ ಎಡಿಷನ್‌

ವ್ಯತ್ಯಾಸ

ಮಾನ್ಯುಯಲ್   

15.84 ಲಕ್ಷ ರೂ

16.33 ಲಕ್ಷ ರೂ

+49,000 ರೂ

15.22 ಲಕ್ಷ ರೂ

15.52 ಲಕ್ಷ ರೂ

+30,000 ರೂ

ಆಟೋಮ್ಯಾಟಿಕ್ 

ರೂ 17.35 ಲಕ್ಷ ರೂ

17.90 ಲಕ್ಷ ರೂ

    +55,000 ರೂ

16.47 ಲಕ್ಷ ರೂ

16.77 ಲಕ್ಷ ರೂ

+30,000 ರೂ

ಇದು ದೆಹಲಿಯ ಎಕ್ಸ್ ಶೋ ರೂಂ ಬೆಲೆಗಳು 
 

ಸೌಂಡ್‌ ಎಡಿಷನ್‌ನಲ್ಲಿ ಏನು ಭಿನ್ನವಾಗಿದೆ?

Volkswagen Taigun Sound Edition Decal

ವೋಕ್ಸ್‌ವ್ಯಾಗನ್ ಈಗ ವರ್ಟಸ್ ಮತ್ತು ಟೈಗನ್‌ನ ಡೈನಾಮಿಕ್‌ ಲೈನ್‌ನಲ್ಲಿ ಸಬ್ ವೂಫರ್ ಮತ್ತು ಆಂಪ್ಲಿಫೈಯರ್‌ನೊಂದಿಗೆ ಟಾಪ್‌ ಎಂಡ್‌ ವೇರಿಯೆಂಟ್‌ನ್ನು ಸಜ್ಜುಗೊಳಿಸಿದೆ, ಅದು ಇಲ್ಲಿಯವರೆಗೆ ಟಾಪ್‌-ಎಂಡ್‌ನ ಜಿಟಿ ಆವೃತ್ತಿಗಳಿಗೆ ಸೀಮಿತವಾಗಿತ್ತು. ಇದರಲ್ಲಿ ಇನ್ನೊಂದು ವಿಶೇಷತೆ ಎಂದರೆ ಸಿ-ಪಿಲ್ಲರ್‌ನಲ್ಲಿ ಸ್ಪೆಷಲ್‌-ಎಡಿಷನ್‌ನ ಸ್ಟಿಕ್ಕರ್‌ಗಳನ್ನು ನೀಡಲಾಗಿದೆ.   

Volkswagen Taigun Sound Edition Music System

ಟಾಪ್‌ಲೈನ್ ವೇರಿಯೆಂಟ್‌ಗಳ ಇತರ ವೈಶಿಷ್ಟ್ಯಗಳಾದ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ಪವರ್‌ಡ್‌ ಮತ್ತು ವೆಂಟಿಲೇಶನ್‌ ಸೌಕರ್ಯ ಹೊಂದಿರುವ ಮುಂಭಾಗದ ಸೀಟುಗಳು, 6 ಏರ್‌ಬ್ಯಾಗ್‌ಗಳು, ಸ್ವಯಂ-ಡಿಮ್‌ ಆಗುವ IRVM ಮತ್ತು ಮಳೆ ಸೆನ್ಸಿಂಗ್ ವೈಪರ್‌ ನಂತಹುಗಳನ್ನು ಇದರಲ್ಲಿ ನೀಡಲಾಗಿದೆ.

ಒಂದು ಎಂಜಿನ್‌ ಮಾತ್ರ

Volkswagen Virtus Engine

ಟೈಗುನ್ ಮತ್ತು ವರ್ಟಸ್‌ನ ಸೌಂಡ್‌ ಎಡಿಷನ್‌ ಇವುಗಳ ಡೈನಾಮಿಕ್ ಲೈನ್ ಅನ್ನು ಆಧರಿಸಿದೆ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS/ 178 Nm) ಆಯ್ಕೆಯೊಂದಿಗೆ ಮಾತ್ರ ಬರುತ್ತದೆ. ಇದನ್ನು 6-ಸ್ಪೀಡ್ ಮ್ಯಾನುಯಲ್‌ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಇದನ್ನೂ ಓದಿ: ಫೋಕ್ಸ್‌ ವ್ಯಾಗನ್‌ ಟೈಗುನ್‌ ಟ್ರೇಲ್‌ ಆವೃತ್ತಿ Vs ಹ್ಯುಂಡೈ ಕ್ರೆಟಾ ಅಡ್ವೆಂಚರ್‌ ಆವೃತ್ತಿ: ಚಿತ್ರಗಳ ಮೂಲಕ ಹೋಲಿಕೆ

 ಫೋಕ್ಸ್‌ವ್ಯಾಗನ್ ಎರಡು ಮೊಡೆಲ್‌ಗಳನ್ನು ದೊಡ್ಡದಾದ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 150 PS ಮತ್ತು 250 Nm ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುಯಲ್‌ ಅಥವಾ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌) ನೊಂದಿಗೆ ಜೋಡಿಸಲಾಗಿದೆ. ಎಸ್‌ಯುವಿಗಾಗಿ ಇತ್ತೀಚೆಗೆ ಪರಿಚಯಿಸಲಾದ ವಿಶೇಷ ಆವೃತ್ತಿ, ಟೈಗುನ್ GT ಟ್ರಯಲ್ ಎಡಿಷನ್ ಅನ್ನು ಈ ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ನೀಡಲಾಗುತ್ತದೆ.

ನೇರಸ್ಪರ್ಧಿಗಳ ಕುರಿತು

Volkswagen Virtus & Taigun Sound Editions

ಈ ಸೌಂಡ್‌ ಎಡಿಷನ್‌ಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.  ಮಾರುಕಟ್ಟೆಯಲ್ಲಿ ವೋಕ್ಸ್‌ವ್ಯಾಗನ್ ವರ್ಟಸ್‌ಗೆ ಕೇವಲ ನಾಲ್ಕು ಪ್ರತಿಸ್ಪರ್ಧಿಗಳಿವೆ. ಅವುಗಳೆಂದರೆ ಹೋಂಡಾ ಸಿಟಿ, ಹುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ ಮತ್ತು ಮಾರುತಿ ಸಿಯಾಜ್. ಮತ್ತೊಂದೆಡೆ, ವೋಕ್ಸ್‌ವ್ಯಾಗನ್ ಟೈಗನ್ ಗೆ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಹೋಂಡಾ ಎಲಿವೇಟ್, ಎಂಜಿ ಆಸ್ಟರ್ ಮತ್ತು ಸಿಟ್ರೊಯೆನ್ ಸಿ 3 ಏರ್‌ಕ್ರಾಸ್ ನೇರ ಸ್ಪರ್ಧೆಯನ್ನು ಒಡ್ಡುತ್ತದೆ. 

 ಇನ್ನಷ್ಟು ಓದಿ: ವೋಕ್ಸ್‌ವ್ಯಾಗನ್ ವರ್ಟಸ್ ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Volkswagen ವಿಟರ್ಸ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience