ಫೋಕ್ಸ್ ವ್ಯಾಗನ್ ಟೈಗುನ್ ಟ್ರೇಲ್ ಆವೃತ್ತಿ Vs ಹ್ಯುಂಡೈ ಕ್ರೆಟಾ ಅಡ್ವೆಂಚರ್ ಆವೃತ್ತಿ: ಚಿತ್ರಗಳ ಮೂಲಕ ಹೋಲಿಕೆ
ವೋಕ್ಸ್ವ್ಯಾಗನ್ ಟೈಗುನ್ ಗಾಗಿ rohit ಮೂಲಕ ನವೆಂಬರ್ 05, 2023 02:21 pm ರಂದು ಪ್ರಕಟಿಸಲ ಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಈ ಎರಡೂ SUV ಗಳ ವಿಶೇಷ ಆವೃತ್ತಿಗಳು ಅವುಗಳ ಮೂಲ ಮಾದರಿಗಳಿಗೆ ಹೋಲಿಸಿದರೆ ನೋಟದಲ್ಲಿ ಬದಲಾವಣೆಯನ್ನು ಕಂಡಿದ್ದು, ಬೇರೆ ಬೇರೆ ಬಣ್ಣಗಳಲ್ಲಿಯೂ ಲಭ್ಯ.
ಕಾಂಪ್ಯಾಕ್ಟ್ SUV ವಿಭಾಗವು ಫೋಕ್ಸ್ ವ್ಯಾಗನ್ ಟೈಗುನ್ ಟ್ರೇಲ್ ಎಡಿಷನ್ ಮೂಲಕ ಇನ್ನೊಂದು ಸೀಮಿತ ಆವೃತ್ತಿಯನ್ನು ಪಡೆದಿದೆ. ಇದರ ಕಾಸ್ಮೆಟಿಕ್ ವಿವರಗಳು, ನಗರ ಪ್ರದೇಶದ ಮೇಲೆ ಗಮನ ಹರಿಸಿರುವ ಈ SUV ಯ ರಗ್ಡ್ ಎಲಿಮೆಂಟ್ ಗಳನ್ನು ಇನ್ನಷ್ಟು ಉದ್ಧರಿಸಿವೆ. ಆಗಸ್ಟ್ 2023ರಲ್ಲಿ ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಅಡ್ವೆಂಚರ್ ಆವೃತ್ತಿಯು ಇದರ ನೇರ ಪ್ರತಿಸ್ಪರ್ಧಿ ಎನಿಸಿದೆ. ಎರಡೂ SUV ಗಳ ಸೀಮಿತ ಮತ್ತು ವಿಶೇಷ ಆವೃತ್ತಿಗಳು ಕೇವಲ ಕಾಸ್ಮೆಟಿಕ್ ಮತ್ತು ವಿಷುವಲ್ ಪರಿಷ್ಕರಣೆಗಳಿಗೆ ಒಳಪಟ್ಟಿದ್ದು, ಈ ಎರಡೂ ಕಾರುಗಳ ಹೋಲಿಕೆಗಳನ್ನು ಚಿತ್ರಗಳ ಮೂಲಕ ಇಲ್ಲಿ ವಿವರಿಸಲಾಗಿದೆ.
ಗಮನಿಸಿ: ಇಲ್ಲಿ ಉಲ್ಲೇಖಿಸಲಾಗಿರುವ ಟೈಗುನ್ ಟ್ರೇಲ್ ಆವೃತ್ತಿ ಮತ್ತು ಕ್ರೆಟಾ ಅಡ್ವೆಂಚರ್ ಆವೃತ್ತಿಯನ್ನು ಅನುಕ್ರಮವಾಗಿ ಕ್ಯಾಂಡಿ ವೈಟ್ ಮತ್ತು ರೇಂಜರ್ ಖಾಕಿ ಬಣ್ಣಗಳ ಆಯ್ಕೆಯಲ್ಲಿ ಸಿದ್ಧಪಡಿಸಿದ್ದರೂ, ಎರಡೂ ಕಾರುಗಳು ಇನ್ನೂ ಅನೇಕ ಬಣ್ಣಗಳಲ್ಲಿ ದೊರೆಯುತ್ತವೆ.
ಮುಂಭಾಗ
ಫೋಕ್ಸ್ ವ್ಯಾಗನ್ ಟೈಗುನ್ ಟ್ರೇಲ್ ಆವೃತ್ತಿಯು ‘GT’ ಬ್ಯಾಜ್ ನೊಂದಿಗೆ ಕಪ್ಪು ಬಣ್ಣದ ಗ್ರಿಲ್ ಅನ್ನು ಹೊಂದಿದ್ದು, ಮೇಲ್ಗಡೆ ಮತ್ತು ಕೆಳಗಡೆಯಲ್ಲಿ ಕ್ರೋಮ್ ಪಟ್ಟಿಗಳನ್ನು ಅಳವಡಿಸಲಾಗಿದೆ. ಇನ್ನೊಂದೆಡೆ ಹ್ಯುಂಡೈ ಕ್ರೆಟಾ ಅಡ್ವೆಂಚರ್ ಕಾರು ತನ್ನ ಗ್ರಿಲ್ ಮಾತ್ರವಲ್ಲದೆ ಸ್ಕಿಡ್ ಪ್ಲೇಟ್ ಹಾಗೂ ಹ್ಯುಂಡೈ ಲೋಗೋವನ್ನು ಬ್ಲ್ಯಾಕ್ ಫಿನಿಶ್ ನಲ್ಲಿ ಪಡೆದಿದೆ.
ಸೈಡ್
ಪ್ರೊಫೈಲ್ ನಲ್ಲಿ, ಟೈಗುನ್ ಕಾರಿನ ಸೀಮಿತ ಆವೃತ್ತಿಯಲ್ಲಿ 16 ಇಂಚಿನ ಕಪ್ಪು ಅಲೋಯ್ ವೀಲ್ ಗಳು, ಮುಂಭಾದ ಫೆಂಡರ್ ಗಳಲ್ಲಿ ‘GT’ ಬ್ಯಾಜ್ ಗಳು ಮತ್ತು ಹಿಂಭಾಗದ ಬಾಗಿಲುಗಳು ಮತ್ತು ಫೆಂಡರ್ ಗಳಲ್ಲಿ ಡೀಕಾಲ್ ಗಳನ್ನು ನೋಡಬಹುದು. ಕ್ರೆಟಾ ಅಡ್ವೆಂಚರ್ ಅನ್ನು ಪಕ್ಕದಿಂದ ನೋಡಿದಾಗ ಕೆಂಪು ಬಣ್ಣದ ಬ್ರೇಕ್ ಕ್ಯಾಲಿಪರ್ ಗಳ ಜೊತೆಗೆ ಇದರ ಕಪ್ಪು ಬಣ್ಣದ 17 ಇಂಚಿನ ಅಲೋಯ್ ವೀಲ್ ಗಳು, ಕಪ್ಪು ORVM ಹೌಸಿಂಗ್ ಗಳು, ಬಾಡಿ ಸೈಡ್ ಮೌಲ್ಡಿಂಗ್ ಮತ್ತು ರೂಫ್ ರೇಲ್ ಗಳು, ಮತ್ತು ಮುಂಭಾಗದ ಫೆಂಡರ್ ಗಳಲ್ಲಿ ‘Adventure’ ಬ್ಯಾಜ್ ಅನ್ನು ಗಮನಿಸಬಹುದು.
-
ಕಾರಿನ ಹೊಸ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಇಲ್ಲಿ ಪರಿಶೀಲಿಸಿ.
ಹಿಂಭಾಗ
ಟೈಗುನ್ ಸೀಮಿತ ಆವೃತ್ತಿಯ ಹಿಂಭಾಗದಲ್ಲಿರುವ ಒಂದೇ ವ್ಯತ್ಯಾಸವೆಂದರೆ, ಟ್ರೇಲ್ ಎಡಿಷನ್ ಬ್ಯಾಜ್ ನ ಸೇರ್ಪಡೆ. ಇದರ ಹೆಸರು ಮತ್ತು ʻGTʼ ಮಾನಿಕರ್ ಗಳು ಇನ್ನೂ ಕ್ರೋಂನಲ್ಲಿಯೇ ಇವೆ. ಇನ್ನೊಂದೆಡೆ ಹ್ಯುಂಡೈಯು ಕ್ರೆಟಾ ಅಡ್ವೆಂಚರ್ ಆವೃತ್ತಿಗೆ ರಿಯರ್ ಸ್ಕಿಡ್ ಪ್ಲೇಟ್ ಮತ್ತು ‘Creta’ ಅಕ್ಷರವೂ ಸೇರಿದಂತೆ ಹಿಂಭಾಗದಲ್ಲಿರುವ ಬ್ಯಾಜ್ ಗಳಿಗೆ ಇನ್ನೂ ಹೆಚ್ಚಿನ ಕಪ್ಪು ಬಣ್ಣವನ್ನು ನೀಡಿದೆ.
ಇದನ್ನು ಸಹ ನೋಡಿರಿ: ನೀವು ಈಗಾಗಲೇ ಬುಕ್ ಮಾಡಿದರೆ ಈ 5 SUV ಗಳನ್ನು ಈ ದೀಪಾವಳಿ ವೇಳೆ ಮನೆಗೆ ಕೊಂಡೊಯ್ಯಬಹುದು!
ಒಳಾಂಗಣ
ಟೈಗುನ್ ಟ್ರೇಲ್ ಆವೃತ್ತಿಯು ಕೆಂಪು ಬಣ್ಣದ ಪೈಪಿಂಗ್ ಮತ್ತು ಸೀಟುಗಳ ಮೇಲೆ ‘Trail’ ಎಂಬೋಸಿಂಗ್ ಜೊತೆಗೆ ವೇರಿಯಂಟ್ ವಾರು ಕಪ್ಪು ಅಫೋಲ್ಸ್ಟರಿಯನ್ನು ಪಡೆದಿದೆ. ಫೋಕ್ಸ್ ವ್ಯಾಗನ್ ಸಂಸ್ಥೆಯು ಇದಕ್ಕೆ ಸ್ಟೇನ್ ಲೆಸ್ ಸ್ಟೀಲ್ ನ ಪೆಡಲ್ ಗಳನ್ನು ಒದಗಿಸಿದೆ. ಇದಕ್ಕೆ ಪ್ರತಿಯಾಗಿ ಕ್ರೆಟಾ ಅಡ್ವೆಂಚರ್ ಕಾರು ಸೇಜ್ ಗ್ರೀನ್ ಇನ್ಸರ್ಟ್ ಗಳು, ಹೊಸ ಕಪ್ಪು ಮತ್ತು ಹಸಿರಿನ ಸೀಟ್ ಅಫೋಲ್ಸ್ಟರಿಯೊಂದಿಗೆ ಕಪ್ಪು ಬಣ್ಣದ ಕ್ಯಾಬಿನ್ ಥೀಮ್ ನೊಂದಿಗೆ ಬರುತ್ತದೆ. 3D ಫ್ಲೋರ್ ಮ್ಯಾಟ್ ಗಳು ಮತ್ತು ಮೆಟಲ್ ಪೆಡಲ್ ಗಳಂತಹ ಇತರ ಪರಿಷ್ಕರಣೆಗಳನ್ನು ಸಹ ಒಳಭಾಗದಲ್ಲಿ ಮಾಡಲಾಗಿದೆ.
ವೈಶಿಷ್ಟ್ಯಗಳ ಸೇರ್ಪಡೆಯ ಕುರಿತು ಹೇಳುವುದಾದರೆ, ಎರಡೂ ಕಾಂಪ್ಯಾಕ್ಟ್ SUV ಗಳ ವಿಶೇಷ ಆವೃತ್ತಿಗಳು ಡ್ಯುವಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಗಳನ್ನು (VW ಟೈಗುನ್ ಕಾರು ಬಿಲ್ಟ್ ಇನ್ LCD ಡಿಸ್ಪ್ಲೇಯನ್ನು ಸಹ ಹೊಂದಿದೆ) ಪಡೆಯಲಿವೆ. ಇತರ ಎಲ್ಲಾ ವೈಶಿಷ್ಟ್ಯಗಳು ಅವುಗಳ ಮೂಲ ವೇರಿಯಂಟ್ ನಲ್ಲಿ ಇರುವಂತೆಯೇ ಇವೆ. ಟ್ರೇಲ್ ಆವೃತ್ತಿಯು ಟೈಗುನ್ GTಯನ್ನು ಅನುಸರಿಸಿದರೆ, ಅಡ್ವೆಂಚರ್ ಆವೃತ್ತಿಯು SX ಮತ್ತು SX(O) ಅನ್ನು ಆಧರಿಸಿದೆ.
ಇದನ್ನು ಸಹ ಓದಿರಿ: ಹೊಸ ಗೂಗಲ್ ಮ್ಯಾಪ್ಸ್ ಪರಿಷ್ಕರಣೆಯು ನಿಮ್ಮ ಪ್ರಯಾಣಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಲು ಸಹಾಯ ಮಾಡಲಿದೆ
ಪವರ್ ಟ್ರೇನ್ ಗಳು ಮತ್ತು ಬೆಲೆಗಳು
ಫೋಕ್ಸ್ ವ್ಯಾಗನ್ ಟೈಗುನ್ ಟ್ರೇಲ್ ಆವೃತ್ತಿಯು ಒಂದು ಪವರ್ ಟ್ರೇನ್ ಜೊತೆಗೆ ಮಾತ್ರ ಲಭ್ಯ: 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಿದ 150PS 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್. ಇದೇ ವೇಳೆ, ಕ್ರೆಟಾ ಅಡ್ವೆಂಚರ್ ಆವೃತ್ತಿಯು ಮ್ಯಾನುವಲ್ ಮತ್ತು CVT ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಗಳೊಂದಿಗೆ ಲಭ್ಯವಿರುವ 115PS 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ದೊರೆಯುತ್ತದೆ.
ಈ ವಿಶೇಷ ಆವೃತ್ತಿಯ ಬೆಲೆಯು ಈ ಕೆಳಗಿನಂತೆ ಇದೆ:
ಫೋಕ್ಸ್ ವ್ಯಾಗನ್ ಟೈಗುನ್ ಟ್ರೇಲ್ ಆವೃತ್ತಿ |
ಹ್ಯುಂಡೈ ಕ್ರೆಟಾ ಅಡ್ವೆಂಚರ್ ಆವೃತ್ತಿ |
GT ಟ್ರೇಲ್ - ರೂ. 16.30 ಲಕ್ಷ |
SX MT - ರೂ. 15.17 ಲಕ್ಷ |
|
SX(O) CVT - ರೂ. 17.89 ಲಕ್ಷ |
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟೈಗುನ್ ಆನ್ ರೋಡ್ ಬೆಲೆ