Login or Register ಅತ್ಯುತ್ತಮ CarDekho experience ಗೆ
Login

ಫೋಕ್ಸ್‌ವ್ಯಾಗನ್ ವರ್ಟಸ್ GT ಮ್ಯಾನ್ಯುವಲ್ ಬಿಡುಗಡೆ , ಬ್ಲಾಕೆಡ್- ಔಟ್ ಕ್ಲಬ್‌ಗೆ ಸೇರ್ಪಡೆ

published on ಜೂನ್ 12, 2023 02:00 pm by tarun for ವೋಕ್ಸ್ವ್ಯಾಗನ್ ವಿಟರ್ಸ್

ಈ ಸೆಡಾನ್‌ನ 150PS ಎಂಜಿನ್ ಈಗ ಕೈಗೆಟುಕುವಂತಾಗಿದೆ ಮತ್ತು ಹೆಚ್ಚು ಆಕರ್ಷಕವಾಗಿದೆ ಹಾಗೂ ಹೊಸ ಬಣ್ಣವು ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

  • ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ, ಫೋಕ್ಸ್‌ವ್ಯಾಗನ್ ವರ್ಟಸ್ GT ಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪರಿಚಯಿಸಿದೆ.

  • ಈ ವರ್ಟಸ್ ಜಿಟಿ ಲೈನ್ ಮ್ಯಾನ್ಯುವಲ್ ವೇರಿಯೆಂಟ್ ಅನ್ನು ಪಡೆದಿದ್ದು, ಈಗ ಅದು GT ಪ್ಲಸ್ DSG ಗಿಂತ ರೂ. 1.67 ಲಕ್ಷ ಕಡಿಮೆ ಬೆಲೆಯನ್ನು ಹೊಂದಿದೆ.

  • ವರ್ಟಸ್‌ನ ಹೊಸ GT ಎಡ್ಜ್ ಲೈನ್ ಹೊಸ ಡೀಪ್ ಬ್ಲ್ಯಾಕ್ ಪರ್ಲ್ ಎಕ್ಸ್‌ಟೀರಿಯರ್ ಬಣ್ಣವನ್ನು ಸಹ ಪಡೆಯುತ್ತದೆ.

  • ಟಾಪ್-ಎಂಡ್ ಜಿಟಿ ಪ್ಲಸ್ ವೇರಿಯೆಂಟ್‌ನೊಂದಿಗೆ ಮಾತ್ರ ಲಭ್ಯವಿದೆ.

ಫೋಕ್ಸ್‌ವ್ಯಾಗನ್ ವರ್ಟಸ್ GT ಲೈನ್ ಈಗ ಕೈಗೆಟಕುವ ದರದಲ್ಲಿ ಲಭ್ಯವಿದ್ದು, ಈಗ ಮ್ಯಾನ್ಯುವಲ್ ಟ್ರಾನ್‌ಮಿಷನ್ ಅನ್ನು ಇದರಲ್ಲಿ ಪರಿಚಯಿಸಲಾಗಿದೆ. ಏನತ್ಮಧ್ಯೆ, ಈ ಸೆಡಾನ್ ಹೊಸ ಡೀಪ್ ಬ್ಲ್ಯಾಕ್ ಪರ್ಲ್ ಶೇಡ್ ಅನ್ನು ಪಡೆಯುತ್ತದೆ, ಆದರೆ ಇದು GT ಲೈನ್ ಟ್ರಿಮ್‌ಗಳಿಗೆ ಸೀಮಿತವಾಗಿದೆ.

ಹೊಸ ವೇರಿಯೆಂಟ್ ಮತ್ತು ಬಣ್ಣದ ಬೆಲೆಗಳು

ವೇರಿಯೆಂಟ್‌ಗಳು

ಎಕ್ಸ್-ಶೋರೂಮ್ ಬೆಲೆ

GT ಪ್ಲಸ್ MT

ರೂ. 16.89 ಲಕ್ಷ

GT ಪ್ಲಸ್ MT ಡೀಪ್ ಬ್ಲ್ಯಾಕ್ ಪರ್ಲ್

ರೂ. 17.09 ಲಕ್ಷ

GT ಪ್ಲಸ್ DSG ಡೀಪ್ ಬ್ಲ್ಯಾಕ್ ಪರ್ಲ್

ರೂ. 18.76 ಲಕ್ಷ

ಈ ಫೋಕ್ಸ್‌ವ್ಯಾಗನ್ ವರ್ಟಸ್ GT ಲೈನ್ 150PS 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತಿದ್ದು, ಈಗ ಇದು ಮ್ಯಾನ್ಯುವಲ್ ವೇರಿಯೆಂಟ್‌ನಲ್ಲಿಯೂ ಲಭ್ಯವಿದೆ. ಇಲ್ಲಿಯವರೆಗೆ, ಈ ಎಂಜಿನ್ 7-ಸ್ಪೀಡ್ DSG (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್) ನೊಂದಿಗೆ ಮಾತ್ರ ಲಭ್ಯವಿತ್ತು. ಈ ಮ್ಯಾನ್ಯುವಲ್ ಟ್ರಾನ್‌ಮಿಷನ್ ವೇರಿಯೆಂಟ್ ಆಟೋಮ್ಯಾಟಿಕ್ ವೇರಿಯೆಂಟ್‌ಗಿಂತ ರೂ. 1.67 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದೆ ಹಾಗೂ ಹೆಚ್ಚು ಉತ್ಪಾದಿತ ಚಾಲನಾ ಅನುಭವವನ್ನು ಹೊಂದಲು ಬಯಸುವ ಉತ್ಸಾಹಿಗಳಿಗೆ ಇದು ಒಳ್ಳೆಯ ಆಯ್ಕೆಯಾಗಿದೆ.

ಈ ಸೆಡಾನ್‌ನಲ್ಲಿ 115PS 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಹೊಸ ಬಣ್ಣಗಳೊಂದಿಗೆ ಹೊಸ ಜಿಟಿ ವೇರಿಯೆಂಟ್‌ಗಳನ್ನು ಮತ್ತು ಸೀಮಿತ ಆವೃತ್ತಿಗಳನ್ನು ಪಡೆಯುತ್ತಿರುವ ಫೋಕ್ಸ್‌ವ್ಯಾಗನ್ ಟೈಗನ್

ಈ ಡೀಪ್ ಬ್ಲ್ಯಾಕ್ ಪರ್ಲ್ ಬಣ್ಣವು ಸಾಮಾನ್ಯ ಬಣ್ಣದ ಆಯ್ಕೆಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ಈ ಸೆಡಾನ್ ಈಗಾಗಲೇ ಆರು ಬಣ್ಣಗಳ ಆಯ್ಕೆಯನ್ನು ಪಡೆದಿದೆ: ಕರ್ಕುಮಾ ಯೆಲ್ಲೋ, ರೈಸಿಂಗ್ ಬ್ಲ್ಯೂ ಮೆಟಾಲಿಕ್, ರಿಫ್ಲೆಕ್ಸ್ ಸಿಲ್ವರ್, ಕಾರ್ಬನ್ ಸ್ಟೀಲ್ ಗ್ರೇ, ಕ್ಯಾಂಡಿ ವೈಟ್, ಮತ್ತು ವೈಲ್ಡ್ ಚೆರ್ರಿ ರೆಡ್. ನೀವು ಈ GT ಎಡ್ಜ್ ವೇರಿಯೆಂಟ್‌ಗಳನ್ನು ಹೊಸ ಬಣ್ಣದೊಂದಿಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು ಮತ್ತು ಉತ್ಪಾದನೆಯು ಒಟ್ಟು ಬುಕಿಂಗ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಸೀಮಿತ ಮಾಡೆಲ್‌ಗಳಾಗಿದೆ ಮತ್ತು ಜುಲೈ 2023 ರಲ್ಲಿ ಡೆಲಿವರಿ ಪ್ರಾರಂಭವಾಗುತ್ತದೆ.

ಈ ನವೀಕರಣವು ಫೀಚರ್‌ಗಳಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲ. ಆದ್ದರಿಂದ, ಈ ಸೆಡಾನ್ ಮೊದಲಿನಂತೆ ಎಲೆಕ್ಟ್ರಿಕ್ ಸನ್‌ರೂಫ್, 10.1-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೇನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ಪಡೆಯುತ್ತದೆ. ಸುರಕ್ಷತೆಯ ವಿಷಯಕ್ಕೆ ಬಂದರೆ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಪಡೆಯುತ್ತದೆ.

ಇದನ್ನೂ ಓದಿ: ಹ್ಯುಂಡೈ ವರ್ನಾ ಟರ್ಬೋ DCT ವರ್ಸಸ್ ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ 1.5 ಡಿಎಸ್‌ಜಿ: ನೈಜ-ಪ್ರಪಂಚದ ಇಂಧನ ದಕ್ಷತೆ ಹೋಲಿಕೆ

ಈ ವರ್ಟಸ್, ಹ್ಯುಂಡೈ ವರ್ನಾ, ಸ್ಕೋಡಾ ಸ್ಲಾವಿಯಾ, ಮಾರುತಿ ಸುಝುಕಿ ಸಿಯಾಝ್, ಮತ್ತು ಹೋಂಡಾ ಸಿಟಿಗೆ ಪರ್ಯಾಯವಾಗಿದೆಯಾದರೂ, ಇದರ ಯಾವುದೇ ಪ್ರತಿಸ್ಪರ್ಧಿಗಳು ಸಂಪೂರ್ಣ ಕಪ್ಪು ಶೇಡ್ ಪಡೆಯುವುದಿಲ್ಲ.

ಇನ್ನಷ್ಟು ಇಲ್ಲಿ ಓದಿ : ಫೋಕ್ಸ್‌ವ್ಯಾಗನ್ ವರ್ಟಸ್ ಆಟೋಮ್ಯಾಟಿಕ್

t
ಅವರಿಂದ ಪ್ರಕಟಿಸಲಾಗಿದೆ

tarun

  • 11 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ವೋಕ್ಸ್ವ್ಯಾಗನ್ ವಿಟರ್ಸ್

Read Full News

explore ಇನ್ನಷ್ಟು on ವೋಕ್ಸ್ವ್ಯಾಗನ್ ವಿಟರ್ಸ್

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ