• English
    • Login / Register

    ಈ ಹಬ್ಬದ ಸಂಭ್ರಮದಲ್ಲಿ ಮಾರುತಿ ನೆಕ್ಸಾ ಕಾರುಗಳ ಮೇಲೆ 2 ಲಕ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್‌

    ಮಾರುತಿ ಜಿಮ್ನಿ ಗಾಗಿ yashika ಮೂಲಕ ಅಕ್ಟೋಬರ್ 07, 2024 06:02 pm ರಂದು ಪ್ರಕಟಿಸಲಾಗಿದೆ

    • 98 Views
    • ಕಾಮೆಂಟ್‌ ಅನ್ನು ಬರೆಯಿರಿ

    ಎಂಟು ಮೊಡೆಲ್‌ಗಳಲ್ಲಿ ಮೂರು ಹೆಚ್ಚುವರಿ ರಿಯಾಯಿತಿಗಳೊಂದಿಗೆ ಮಾರುತಿಯ ಸ್ವಂತ ಹಣಕಾಸು ಯೋಜನೆಯಾದ 'ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್' (MSSF) ಮೂಲಕ ಲಭ್ಯವಿದೆ

    Nexa October Offers

    • ಮಾರುತಿಯ ಫೈನಾನ್ಸಿಂಗ್ ಆಯ್ಕೆಯ ಮೂಲಕ ಮಾರುತಿ ಜಿಮ್ನಿಯಲ್ಲಿ ಗರಿಷ್ಠ 2.3 ಲಕ್ಷದವರೆಗೆ ರಿಯಾಯಿತಿಗಳು ಲಭ್ಯವಿವೆ.

    • ಮಾರುತಿಯ ಫೈನಾನ್ಸಿಂಗ್ ಆಯ್ಕೆಯನ್ನು ಆರಿಸಿದರೆ ಗ್ರಾಂಡ್ ವಿಟಾರಾ ಮತ್ತು ಇನ್ವಿಕ್ಟೊ ಹೆಚ್ಚುವರಿ ರಿಯಾಯಿತಿಗಳೊಂದಿಗೆ ಲಭ್ಯವಿದೆ.

    • ಮಾರುತಿಯು ಬಲೆನೊವನ್ನು 52,000 ರೂ.ಗಿಂತ ಹೆಚ್ಚಿನ ಉಳಿತಾಯದೊಂದಿಗೆ ನೀಡುತ್ತಿದೆ.

    • ಇಗ್ನಿಸ್ 53,100 ರೂ.ವರೆಗಿನ ಒಟ್ಟು ಡಿಸ್ಕೌಂಟ್‌ ಅನ್ನು ಪಡೆಯುತ್ತದೆ.

    • ಎಲ್ಲಾ ಆಫರ್‌ಗಳು 2024 ರ ಅಕ್ಟೋಬರ್ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

    ಈ ಹಬ್ಬದ ಸೀಸನ್‌ನಲ್ಲಿ ನೆಕ್ಸಾ ಕಾರನ್ನು ಮನೆಗೆ ಸ್ವಾಗತಿಸಲು ಯೋಜಿಸುತ್ತಿರುವಿರಾ? ಹಾಗಿದ್ದರೆ, ವಾಹನ ತಯಾರಕರು ಅಕ್ಟೋಬರ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ನೊಂದಿಗೆ ಬಂದಿದ್ದಾರೆ. ಈ ಆಫರ್‌ ಎಮ್‌ಪಿವಿಯಾಗಿರುವ ಇನ್ವಿಕ್ಟೋ ಸೇರಿದಂತೆ ಅದರ ನೆಕ್ಸಾ ರೇಂಜ್‌ನಲ್ಲಿನ ಎಲ್ಲಾ ಮೊಡೆಲ್‌ಗಳಲ್ಲಿ ಕ್ಯಾಶ್‌ ಡಿಸ್ಕೌಂಟ್‌ಗಳು, ಎಕ್ಸ್‌ಚೇಂಜ್‌ ಬೋನಸ್‌ಗಳು ಮತ್ತು ಸ್ಕ್ರ್ಯಾಪ್‌ಪೇಜ್ ಬೋನಸ್‌ಗಳನ್ನು ಒಳಗೊಂಡಿದೆ. ಒಟ್ಟಾರೆ ಪ್ರಯೋಜನಗಳು ಸ್ಕ್ರ್ಯಾಪ್‌ಪೇಜ್ ಬೋನಸ್ ಅಥವಾ ಎಕ್ಸ್‌ಚೇಂಜ್ ಬೋನಸ್‌ನ ಆಯ್ಕೆಯನ್ನು ಒಳಗೊಂಡಿರುತ್ತದೆ, ಆದರೆ ಎರಡು ಆಫರ್‌ಗಳನ್ನು ಒಟ್ಟಿಗೆ ನೀಡಲಾಗುವುದಿಲ್ಲ.

    ಈ ತಿಂಗಳ ಅಂತ್ಯದವರೆಗೆ ಮಾತ್ರ ಲಭ್ಯವಿರುವುದರಿಂದ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮಾಡೆಲ್-ವಾರು ಆಫರ್‌ಗಳನ್ನು ಒಮ್ಮೆ ಗಮನಿಸೋಣ. 

    ಗಮನಿಸಿ: ಗ್ರಾಹಕರು ಕಾರ್ಪೊರೇಟ್ ರಿಯಾಯಿತಿ ಅಥವಾ ಗ್ರಾಮೀಣ ರಿಯಾಯಿತಿಯನ್ನು ಆಯ್ಕೆ ಮಾಡಬಹುದು.

    ಜಿಮ್ನಿ

    Maruti Jimny

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

      80,000 ರೂ.

    ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್‌ ಸ್ಕೀಮ್‌ (MSSF)

      1.5 ಲಕ್ಷ ರೂ.ವರೆಗೆ

    ಒಟ್ಟು ಡಿಸ್ಕೌಂಟ್‌ಗಳು

    2.3 ಲಕ್ಷ ರೂ.ವರೆಗೆ

    • ಮಾರುತಿ ಜಿಮ್ನಿಯ ಎಲ್ಲಾ ವೇರಿಯೆಂಟ್‌ಗಳ ಮೇಲೆ ಗ್ರಾಹಕರು ರೂ 80,000 ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯಬಹುದು.

    • ಮೇಲೆ ತಿಳಿಸಲಾದ MSSF ರಿಯಾಯಿತಿಯು ಜಿಮ್ನಿಯ ಟಾಪ್-ಸ್ಪೆಕ್ ಆಲ್ಫಾ ವೇರಿಯೆಂಟ್‌ಗೆ ಮಾತ್ರ ಅನ್ವಯಿಸುತ್ತದೆ. ಮಿಡ್-ಸ್ಪೆಕ್ ಝೀಟಾ ವೇರಿಯೆಂಟ್‌ಗಾಗಿ, ಇದು  95,000 ರೂ.ಗೆ ಇಳಿಯುತ್ತದೆ, ಆಗ 1.75 ಲಕ್ಷ ರೂ. ವರೆಗೆ ಮಾತ್ರ ಒಟ್ಟು ಪ್ರಯೋಜನಗಳನ್ನು ಪಡೆಯಬಹುದು. 

    • ಜಿಮ್ನಿಯೊಂದಿಗೆ ಯಾವುದೇ ಎಕ್ಸ್‌ಚೇಂಜ್‌ ಬೋನಸ್, ಕಾರ್ಪೊರೇಟ್ ರಿಯಾಯಿತಿ, ಸ್ಕ್ರ್ಯಾಪೇಜ್ ಬೋನಸ್ ಅಥವಾ ಗ್ರಾಮೀಣ ರಿಯಾಯಿತಿ ಲಭ್ಯವಿಲ್ಲ.

    • ಜಿಮ್ನಿಯ ಬೆಲೆ 12.74 ಲಕ್ಷ ರೂ.ನಿಂದ 15.05 ಲಕ್ಷ ರೂ.ವರೆಗೆ ಇದೆ.

    ಮಾರುತಿ ಗ್ರ್ಯಾಂಡ್ ವಿಟಾರಾ

    Maruti Grand Vitara

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    50,000 ರೂ.ವರೆಗೆ

    ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್‌ ಸ್ಕೀಮ್‌ (MSSF)

    30,000 ರೂ.

    ಸ್ಕ್ರ್ಯಾಪೇಜ್/ಎಕ್ಸ್‌ಚೇಂಜ್ ಬೋನಸ್

      55,000 ರೂ.ವರೆಗೆ

    ಗ್ರಾಮೀಣ ರಿಯಾಯಿತಿ

    3,100 ರೂ.

    ಒಟ್ಟು ಪ್ರಯೋಜನಗಳು

      1.38 ಲಕ್ಷ ರೂ.ವರೆಗೆ

    •  ಮಾರುತಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್‌-ಹೈಬ್ರಿಡ್ ವೇರಿಯೆಂಟ್‌ಗಳನ್ನು ಹೆಚ್ಚಿನ ಡಿಸ್ಕೌಂಟ್‌ಗಳೊಂದಿಗೆ ನೀಡಲಾಗುತ್ತಿದೆ. ಇದು ಉಚಿತ 5 ವರ್ಷಗಳ ವಾರಂಟಿಯನ್ನು ಸಹ ಪಡೆಯುತ್ತದೆ. ಗ್ರಾಹಕರು ಪ್ರಸ್ತಾಪಿಸಿದಂತೆ ಸ್ಕ್ರ್ಯಾಪೇಜ್ ಬೋನಸ್ ಬದಲಿಗೆ 50,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಆಯ್ಕೆ ಮಾಡಬಹುದು.

    • ಮಾರುತಿಯು ಈ ಎಸ್‌ಯುವಿಯ ರೆಗುಲರ್‌ ಪೆಟ್ರೋಲ್ ವೇರಿಯೆಂಟ್‌ಗಳನ್ನು 20,000 ರೂ ನಗದು ಡಿಸ್ಕೌಂಟ್‌ನೊಂದಿಗೆ MSSF ಯೋಜನೆಯನ್ನು ಬಳಸಿಕೊಂಡು ರೂ 30,000 ಹೆಚ್ಚುವರಿ ಡಿಸ್ಕೌಂಟ್‌ ಅನ್ನು ನೀಡುತ್ತದೆ. ಆದರೆ, MSSF ಸ್ಕೀಮ್‌ನೊಂದಿಗೆ ಬೇಸ್-ಸ್ಪೆಕ್ ಸಿಗ್ಮಾ ವೇರಿಯೆಂಟ್‌ ಅನ್ನು ನೀಡಲಾಗುತ್ತಿಲ್ಲ. ಹೆಚ್ಚುವರಿಯಾಗಿ, ಕಾರು ತಯಾರಕರು 30,000 ರೂ.ನಷ್ಟು ಎಕ್ಸ್‌ಚೇಂಜ್‌ ಬೋನಸ್ (ಅಥವಾ ರೂ. 35,000 ಸ್ಕ್ರ್ಯಾಪೇಜ್ ಬೋನಸ್‌ನ ಆಯ್ಕೆ) ನೀಡುತ್ತಿದ್ದಾರೆ.

    • MSSF ಸ್ಕೀಮ್ ಬಳಸಿಕೊಂಡು 10,000 ರೂ.ನಷ್ಟು ಕ್ಯಾಶ್‌ ಡಿಸ್ಕೌಂಟ್‌ ಮತ್ತು ರೂ 30,000 ಹೆಚ್ಚುವರಿ ಡಿಸ್ಕೌಂಟ್‌  ಈ ಎಸ್‌ಯುವಿಯ ಸಿಎನ್‌ಜಿ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಇದನ್ನು 20,000 ರೂ. ಅಥವಾ 25,000 ರೂ.ಸ್ಕ್ರ್ಯಾಪೇಜ್ ಬೋನಸ್‌ನ ಎಕ್ಸ್‌ಚೇಂಜ್ ಬೋನಸ್‌ನೊಂದಿಗೆ ಕ್ಲಬ್ ಮಾಡಬಹುದು, ಆದರೆ ಎರಡೂ ಅಲ್ಲ.

    • ಗ್ರಾಂಡ್ ವಿಟಾರಾವನ್ನು ಅದರ ಎಲ್ಲಾ ವೇರಿಯೆಂಟ್‌ಗಳ ಮೇಲೆ ರೂ 3,100 ರ ಗ್ರಾಮೀಣ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ, ಆದರೆ ಇದು ಕಾರ್ಪೊರೇಟ್ ರಿಯಾಯಿತಿಗಳನ್ನು ಕಳೆದುಕೊಳ್ಳುತ್ತದೆ.

    • ಇದರ ಬೆಲೆ 11 ಲಕ್ಷ ರೂ.ನಿಂದ 20.09 ಲಕ್ಷ ರೂ.ವರೆಗೆ ಇದೆ. 

    ಬಲೆನೊ

    Maruti Baleno

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    30,000 ರೂ.ವರೆಗೆ

    ಸ್ಕ್ರ್ಯಾಪೇಜ್/ಎಕ್ಸ್‌ಚೇಂಜ್ ಬೋನಸ್

    20,000 ರೂ.ವರೆಗೆ

    ಗ್ರಾಮೀಣ ರಿಯಾಯಿತಿ

    2,100 ರೂ.

    ಒಟ್ಟು ಪ್ರಯೋಜನಗಳು

      52,100 ರೂ.ವರೆಗೆ

    • ಮೇಲೆ ತಿಳಿಸಿದ ಎಲ್ಲಾ ಡಿಸ್ಕೌಂಟ್‌ಗಳು ಮಾರುತಿ ಬಲೆನೊದ ಎಎಮ್‌ಟಿ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ.

    • ನೀವು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಹ್ಯಾಚ್‌ಬ್ಯಾಕ್ ಅನ್ನು ಆರಿಸಿದರೆ, ಕ್ಯಾಶ್‌ ಡಿಸ್ಕೌಂಟ್‌ 25,000 ರೂ.ಗೆ ಕಡಿಮೆಯಾಗುತ್ತದೆ, ಆದರೆ ಇತರ ಆಫರ್‌ಗಳು ಬದಲಾಗದೆ ಉಳಿಯುತ್ತವೆ.

    • ಮಾರುತಿಯು ಬಲೆನೊದ ಸಿಎನ್‌ಜಿ ವೆರಿಯೆಂಟ್‌ಗಳನ್ನು 20,000 ರೂ.ವರೆಗಿನ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ನೀಡುತ್ತಿದೆ, ಆದರೆ ಇತರ ಪ್ರಯೋಜನಗಳು ಬಾಧಿತವಾಗುವುದಿಲ್ಲ.

    • ಆಯ್ಕೆ ಮಾಡಿದ ವೇರಿಯಂಟ್ ಯಾವುದೇ ಇದ್ದರೂ, ಮೇಲಿನ ಕೋಷ್ಟಕದಲ್ಲಿರುವಂತೆ ಸ್ಕ್ರ್ಯಾಪ್‌ಪೇಜ್ ಬೋನಸ್ ಬದಲಿಗೆ ನೀವು ರೂ 15,000 ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು.

    • ಬಲೆನೊ ಬೆಲೆ 6.66 ಲಕ್ಷ ರೂ.ನಿಂದ 9.83 ಲಕ್ಷ ರೂ.ವರೆಗೆ ಇದೆ. 

    ಇಗ್ನಿಸ್‌

    Maruti Ignis

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    35,000 ರೂ.ವರೆಗೆ

    ಸ್ಕ್ರ್ಯಾಪೇಜ್/ಎಕ್ಸ್‌ಚೇಂಜ್ ಬೋನಸ್

    20,000 ರೂ. 

    ಗ್ರಾಮೀಣ ರಿಯಾಯಿತಿ

    3,100 ರೂ. 

    ಒಟ್ಟು ಪ್ರಯೋಜನಗಳು

      58,100 ರೂ.ವರೆಗೆ

    • ಮೇಲೆ ತಿಳಿಸಲಾದ ಆಫರ್‌ಗಳು ಮಾರುತಿ ಇಗ್ನಿಸ್‌ನ ಬೇಸ್-ಸ್ಪೆಕ್ ಸಿಗ್ಮಾಗೆ ಅನ್ವಯಿಸುತ್ತವೆ. 

    • ಇತರ ಮ್ಯಾನುವಲ್‌ ವೇರಿಯೆಂಟ್‌ಗಳನ್ನು(ಸಿಗ್ಮಾ ಹೊರತುಪಡಿಸಿ) ಆಯ್ಕೆ ಮಾಡುವ ಗ್ರಾಹಕರು  25,000 ರೂ.ನಷ್ಟು ಕ್ಯಾಶ್‌ ಡಿಸ್ಕೌಂಟ್‌ ಅನ್ನು ಪಡೆಯಬಹುದು ಆದರೆ ಇತರ ಪ್ರಯೋಜನಗಳು ಒಂದೇ ಆಗಿರುತ್ತವೆ.

    • ಇಗ್ನಿಸ್‌ನ ಎಎಮ್‌ಟಿ ವೇರಿಯೆಂಟ್‌ಗಳಿಗೆ ಕ್ಯಾಶ್‌ ಡಿಸ್ಕೌಂಟ್‌ 30,000 ರೂ. ಆಗಿದೆ, ಆದರೆ ಇತರ ಆಫರ್‌ಗಳು ಬದಲಾಗುವುದಿಲ್ಲ.  

    • ಗ್ರಾಹಕರು 15,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಅಥವಾ ಟೇಬಲ್‌ನಲ್ಲಿ ಉಲ್ಲೇಖಿಸಿರುವಂತೆ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು, ಆದರೆ ಈ ಎರಡು ಆಫರ್ ಗಳನ್ನು ಒಟ್ಟಿಗೆ ಪಡೆಯಲು ಸಾಧ್ಯವಿಲ್ಲ.

    •  ಗ್ರಾಮೀಣ ರಿಯಾಯಿತಿ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ 3,100 ಆಗಿದ್ದು, ಆದರೆ ಎರಡರಲ್ಲಿ ಒಂದನ್ನು ಮಾತ್ರ ಪಡೆಯಬಹುದು.

    • ಇಗ್ನಿಸ್ ಬೆಲೆಗಳು 5.84 ಲಕ್ಷ ರೂ.ನಿಂದ 8.06 ಲಕ್ಷ ರೂ.ವರೆಗೆ ಇದೆ. 

    ಸಿಯಾಜ್‌

    Maruti Ciaz

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    15,000 ರೂ.

    ಸ್ಕ್ರ್ಯಾಪೇಜ್/ಎಕ್ಸ್‌ಚೇಂಜ್ ಬೋನಸ್

    30,000 ರೂ.ವರೆಗೆ

    ಕಾರ್ಪೋರೇಟ್‌ ಡಿಸ್ಕೌಂಟ್‌

    3,000 ರೂ.

    ಒಟ್ಟು ಪ್ರಯೋಜನಗಳು

      48,000 ರೂ.ವರೆಗೆ

    • ಮಾರುತಿ ಸಿಯಾಜ್‌ನ ಎಲ್ಲಾ ವೇರಿಯೆಂಟ್‌ಗಳನ್ನು ಟೇಬಲ್‌ನಲ್ಲಿ ಮೇಲೆ ತಿಳಿಸಿದ ಅದೇ ಆಫರ್‌ಗಳೊಂದಿಗೆ ನೀಡಲಾಗುತ್ತಿದೆ. 

    • ಗ್ರಾಹಕರು ಮೇಲೆ ತಿಳಿಸಿದ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು ಅಥವಾ 25,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

    • ಮಾರುತಿ ಈ ಸೆಡಾನ್ ಮೇಲೆ 3,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಸಹ ನೀಡುತ್ತಿದೆ. ಅದರೊಂದಿಗೆ ಯಾವುದೇ ಗ್ರಾಮೀಣ ರಿಯಾಯಿತಿ ಇಲ್ಲ. 

    • ಇದರ ಬೆಲೆ 9.40 ಲಕ್ಷ ರೂ.ನಿಂದ 12.29 ಲಕ್ಷ ರೂ.ವರೆಗೆ ಇದೆ. 

    ಫ್ರಾಂಕ್ಸ್‌

    Maruti Fronx

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    25,000 ರೂ.ವರೆಗೆ

    ಸ್ಕ್ರ್ಯಾಪೇಜ್/ಎಕ್ಸ್‌ಚೇಂಜ್ ಬೋನಸ್

    15,000 ರೂ.ವರೆಗೆ

    ಒಟ್ಟು ಪ್ರಯೋಜನಗಳು

    40,000 ರೂ.ವರೆಗೆ

    • ಮಾರುತಿಯು ಫ್ರಾಂಕ್ಸ್‌ನ ಟರ್ಬೊ ವೇರಿಯೆಂಟ್‌ಗಳನ್ನು  25,000 ರೂ. ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ  43,000 ರೂ. ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್‌ ಅನ್ನು ಹೆಚ್ಚುವರಿಯಾಗಿ ನೀಡುತ್ತಿದೆ.

    • ಬೇಸ್-ಸ್ಪೆಕ್ ಸಿಗ್ಮಾ ವೇರಿಯೆಂಟ್‌ ಅನ್ನು ಆಯ್ಕೆ ಮಾಡುವ ಗ್ರಾಹಕರಿಗೆ, ರೂ 3,060 ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್ ಜೊತೆಗೆ ಕ್ಯಾಶ್‌ ಡಿಸ್ಕೌಂಟ್‌ 22,500 ರೂ.ಗೆ ಇಳಿಯುತ್ತದೆ.

    • ಗ್ರಾಹಕರು 10,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅಥವಾ 15000 ರೂಪಾಯಿಗಳ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು, ಇದು ಫ್ರಾಂಕ್ಸ್‌ನ ಎಲ್ಲಾ ವೇರಿಯೆಂಟ್‌ಗಳಲ್ಲಿ ಮಾನ್ಯವಾಗಿರುತ್ತದೆ.

    • ಅದರ ಸ್ಟ್ಯಾಂಡರ್ಡ್ ಪೆಟ್ರೋಲ್ ವೇರಿಯೆಂಟ್‌ಗಳನ್ನು (ಮಿಡ್-ಸ್ಪೆಕ್ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್) ಆಯ್ಕೆ ಮಾಡಲು ಬಯಸುವ ಖರೀದಿದಾರರಿಗೆ, ನಗದು ರಿಯಾಯಿತಿಯನ್ನು 15,000 ರೂ.ಗೆ ಕಡಿಮೆ ಮಾಡಲಾಗಿದೆ, ಆದರೆ ಪೆಟ್ರೋಲ್ ಎಎಮ್‌ಟಿ ವೇರಿಯೆಂಟ್‌ಗಳನ್ನು ರೂ 20,000 ನಗದು ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಇತರ ಕೊಡುಗೆಗಳು ಬದಲಾಗದೆ ಉಳಿದಿವೆ.

    • ಸಿಎನ್‌ಜಿ ವೇರಿಯೆಂಟ್‌ಗಳು ಕೇವಲ ಎಕ್ಸ್‌ಚೇಂಜ್‌ ಅಥವಾ ಸ್ಕ್ರ್ಯಾಪೇಜ್ ಬೋನಸ್‌ನೊಂದಿಗೆ ಬರುತ್ತವೆ.

    • ಇದರ ಬೆಲೆ 7.52 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ.

    ಎಕ್ಸ್‌ಎಲ್‌6

    Maruti XL6

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    15,000 ರೂ.

    ಸ್ಕ್ರ್ಯಾಪೇಜ್/ಎಕ್ಸ್‌ಚೇಂಜ್ ಬೋನಸ್

    25,000 ರೂ.ವರೆಗೆ

    ಒಟ್ಟು ಪ್ರಯೋಜನಗಳು

    40,000 ರೂ.ವರೆಗೆ

    • ಮಾರುತಿ ಎಕ್ಸ್‌ಎಲ್‌6 ಅನ್ನು ಅದರ ಎಲ್ಲಾ ವೇರಿಯೆಂಟ್‌ಗಳಲ್ಲಿ 15,000 ರೂ.ಗಳ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತಿದೆ.

    • ಗ್ರಾಹಕರು ಈ ಎಮ್‌ಪಿವಿಯ ಯ ಪೆಟ್ರೋಲ್ ವೇರಿಯೆಂಟ್‌ಗಳಲ್ಲಿ ಸ್ಕ್ರ್ಯಾಪೇಜ್ ಬೋನಸ್ ಬದಲಿಗೆ 20,000 ರೂಪಾಯಿಗಳ ವಿನಿಮಯ ಬೋನಸ್ ಅನ್ನು ಆಯ್ಕೆ ಮಾಡಬಹುದು.

    • ನೀವು ಸಿಎನ್‌ಜಿ ವೇರಿಯೆಂಟ್‌ ಅನ್ನು ಆರಿಸಿದರೆ, ವಿನಿಮಯ ಬೋನಸ್ ಮತ್ತು ಒಪ್ಶನಲ್‌ ಸ್ಕ್ರ್ಯಾಪೇಜ್ ಬೋನಸ್ ತಲಾ 10,000 ರೂ.ಗಳಷ್ಟು ಕಡಿಮೆಯಾಗುತ್ತದೆ.

    • ಮಾರುತಿ ಎಕ್ಸ್‌ಎಲ್‌6 ಬೆಲೆಯು 11.61 ಲಕ್ಷ ರೂ.ನಿಂದ 14.77 ಲಕ್ಷ ರೂ.ವರೆಗೆ ಇದೆ.

    ಇನ್ವಿಕ್ಟೊ

    Maruti Invicto Front Left Side

    ಆಫರ್‌

    ಮೊತ್ತ

    ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್‌ ಸ್ಕೀಮ್‌ (MSSF)

    1 ಲಕ್ಷ ರೂ. 

    ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್‌

    25,000 ರೂ.

    ಒಟ್ಟು ಡಿಸ್ಕೌಂಟ್‌ಗಳು

    1.25 ಲಕ್ಷ ರೂ.

    • ಮಾರುತಿ ಇನ್ವಿಕ್ಟೊವನ್ನು ಹಳೆಯ ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಎಕ್ಸ್‌ಚೇಂಜ್‌ನಲ್ಲಿ ಅದರ ಎರಡೂ ವೇರಿಯೆಂಟ್‌ಗಳಲ್ಲಿ  25,000 ರೂ. ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ.

    • ಆದರೆ, ಎಮ್‌ಪಿವಿ ಆಲ್ಫಾ ವೇರಿಯೆಂಟ್‌ ಅನ್ನು ಆಯ್ಕೆ ಮಾಡುವ ಗ್ರಾಹಕರು ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ (MSSF) ಯೋಜನೆಯನ್ನು ಬಳಸಿಕೊಂಡು 1 ಲಕ್ಷ ರೂ.ನಷ್ಟು ಹೆಚ್ಚುವರಿ ಡಿಸ್ಕೌಂಟ್‌ ಅನ್ನು ಪಡೆಯಬಹುದು.

    • ಇದರ ಬೆಲೆ 25.21 ಲಕ್ಷ ರೂ.ನಿಂದ 28.92 ಲಕ್ಷ ರೂ.ವರೆಗೆ ಇದೆ. 

    ಗಮನಿಸಿ:

    • ಮೇಲೆ ತಿಳಿಸಿದ ಆಫರ್‌ಗಳು ಸ್ಟಾಕ್ ಇರುವವರೆಗೆ ಮಾನ್ಯವಾಗಿರುತ್ತವೆ.

    • ಮೇಲೆ ತಿಳಿಸಲಾದ ಆಫರ್‌ಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

    • ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಬೆಲೆ ಆಗಿದೆ.

    ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

    ಇನ್ನಷ್ಟು ಓದಿ :  ಜಿಮ್ನಿ ಆನ್‌ ರೋಡ್‌ ಬೆಲೆ

    was this article helpful ?

    Write your Comment on Maruti ಜಿಮ್ನಿ

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience