- + 11ಬಣ್ಣಗಳು
- + 19ಚಿತ್ರಗಳು
- shorts
- ವೀಡಿಯೋಸ್
ಮಾರುತಿ ಫ್ರಾಂಕ್ಸ್
ಮಾರುತಿ ಫ್ರಾಂಕ್ಸ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 998 ಸಿಸಿ - 1197 ಸಿಸಿ |
ಪವರ್ | 76.43 - 98.69 ಬಿಹೆಚ್ ಪಿ |
ಟಾರ್ಕ್ | 98.5 Nm - 147.6 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 20.01 ಗೆ 22.89 ಕೆಎಂಪಿಎಲ್ |
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- ರಿಯರ್ ಏಸಿ ವೆಂಟ್ಸ್
- wireless charger
- ಕ್ರುಯಸ್ ಕಂಟ್ರೋಲ್
- 360 degree camera
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಫ್ರಾಂಕ್ಸ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಈ ಏಪ್ರಿಲ್‌ನಲ್ಲಿ ಮಾರುತಿಯು ಫ್ರಾಂಕ್ಸ್ ಅನ್ನು 32,000 ರೂ.ವರೆಗಿನ ರಿಯಾಯಿತಿಯೊಂದಿಗೆ ನೀಡುತ್ತಿದೆ.
ಬೆಲೆ: ದೆಹಲಿಯಲ್ಲಿ ಫ್ರಾಂಕ್ಸ್ ಬೆಲೆ(ಎಕ್ಸ್ ಶೋ ರೂಂ) 7.52 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ.
ಆವೃತ್ತಿಗಳು: ಇದು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಸಿಗ್ಮಾ ಮತ್ತು ಡೆಲ್ಟಾ ಟ್ರಿಮ್‌ಗಳಲ್ಲಿ CNG ಪವರ್‌ಟ್ರೇನ್ ಅನ್ನು ನೀಡಲಾಗುತ್ತದೆ.
ಬಣ್ಣಗಳು: ಇದನ್ನು ಮೂರು ಡ್ಯುಯಲ್-ಟೋನ್ ಮತ್ತು ಏಳು ಮೊನೋಟೋನ್ ಬಣ್ಣಗಳಲ್ಲಿ ಪಡೆಯಬಹುದಾಗಿದೆ. ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಅರ್ಥರ್ನ್ ಬ್ರೌನ್, ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಓಪ್ಯುಲೆಂಟ್ ರೆಡ್, ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಸ್ಪ್ಲೆಂಡಿಡ್ ಸಿಲ್ವರ್, ನೆಕ್ಸಾ ಬ್ಲೂ, ಅರ್ಥರ್ನ್ ಬ್ರೌನ್, ಆರ್ಕ್ಟಿಕ್ ವೈಟ್, ಓಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ, ಬ್ಲೂಯಿಷ್ ಬ್ಲಾಕ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್.
ಆಸನ ಸಾಮರ್ಥ್ಯ: ಮಾರುತಿ ಫ್ರಾಂಕ್ಸ್ 5 ಪ್ರಯಾಣಿಕರನ್ನು ಕೂರಿಸುವ ಸಾಮರ್ಥ್ಯವನ್ನು ಹೊಂದಿದೆ.
ಬೂಟ್ ಸ್ಪೇಸ್: ಕ್ರಾಸ್ಒವರ್ ಎಸ್ ಯುವಿ 308 ಲೀಟರ್‌ಗಳಷ್ಟು ಬೂಟ್ ಸ್ಪೇಸ್ ನೊಂದಿಗೆ ಬರುತ್ತದೆ.
ಎಂಜಿನ್ ಮತ್ತು ಗೇರ್‌ಬಾಕ್ಸ್: ಮಾರುತಿಯು ಫ್ರಾಂಕ್ಸ್ ಅನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಒದಗಿಸುತ್ತದೆ;
- ಮೊದಲನೆಯದು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು(100 PS/148 Nm), 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೊತೆ ಜೋಡಿಸಲಾಗಿದೆ.
- ಎರಡನೇಯದು 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು (90 PS/113 Nm), 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ.
ಸಿಎನ್‌ಜಿ ಆವೃತ್ತಿಗಳು 1.2-ಲೀಟರ್ ಎಂಜಿನ್ ಅನ್ನು ಬಳಸುತ್ತವೆ, 77.5 PS ಮತ್ತು 98.5 Nm ಅನ್ನು ಉತ್ಪಾದಿಸುತ್ತವೆ ಮತ್ತು 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಜೋಡಿಯಾಗಿವೆ.
ಫ್ರಾಂಕ್ಸ್‌ನ ಕ್ಲೈಮ್ಡ್ ಮೈಲೇಜ್ ಅಂಕಿಅಂಶಗಳು ಇಲ್ಲಿವೆ:
- 1-ಲೀಟರ್ ಮ್ಯಾನುಯಲ್: ಪ್ರತಿ ಲೀ.ಗೆ 21.5 ಕಿ.ಮೀ
- 1-ಲೀಟರ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 20.1 ಕಿ.ಮೀ
- 1.2-ಲೀಟರ್ ಮ್ಯಾನುಯಲ್: ಪ್ರತಿ ಲೀ.ಗೆ 21.79 ಕಿ.ಮೀ
- 1.2-ಲೀಟರ್ ಎಎಮ್‌ಟಿ: ಪ್ರತಿ ಲೀ.ಗೆ 22.89 ಕಿ.ಮೀ
- 1.2-ಲೀಟರ್ ಸಿಎನ್‌ಜಿ: ಪ್ರತಿ ಕೆ.ಜಿ.ಗೆ 28.51 ಕಿ.ಮೀ
ವಿಶೇಷತೆಗಳು: ಫ್ರಾಂಕ್ಸ್‌ನಲ್ಲಿನ ವಿಶೇಷತೆಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್ ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಸುರಕ್ಷತೆ: ಮುಂಭಾಗದ ಸುರಕ್ಷತೆಯಲ್ಲಿ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ISOFIX ಆಂಕರ್‌ಗಳು ಮತ್ತು EBD ಜೊತೆಗೆ ABS ಅನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: ಸದ್ಯಕ್ಕೆ, ಫ್ರಾಂಕ್ಸ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಕಿಯಾ ಸೋನೆಟ್, ಹುಂಡೈ ವೆನ್ಯೂ, ಟಾಟಾ ನೆಕ್ಸನ್, ಮಹೀಂದ್ರಾ ಎಕ್ಸ್ ಯುವಿ 300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಸಬ್‌ಕಾಂಪ್ಯಾಕ್ಟ್ ಎಸ್ ಯುವಿ ಗಳೊಂದಿಗೆ ಸ್ಪರ್ಧಿಸುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಇವಿ: ಮಾರುತಿ ಸುಜುಕಿ ಫ್ರಾಂಕ್ಸ್ ಇವಿ ತಯಾರಿಕೆಯ ಹಂತದಲ್ಲಿದೆ ಮತ್ತು ಮಾರುತಿಯ ಎಲೆಕ್ಟ್ರಿಕ್ ಲೈನ್‌ಅಪ್‌ನ ಭಾಗವಾಗಲಿದೆ.
ಫ್ರಾಂಕ್ಸ್ ಸಿಗ್ಮಾ(ಬೇಸ್ ಮಾಡೆಲ್)1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.79 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹7.54 ಲಕ್ಷ* | ||
ಫ್ರಾಂಕ್ಸ್ ಡೆಲ್ಟಾ1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.79 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹8.40 ಲಕ್ಷ* | ||
ಫ್ರಾಂಕ್ಸ್ ಸಿಗ್ಮಾ ಸಿಎನ್‌ಜಿ1197 ಸಿಸಿ, ಮ್ಯಾನುಯಲ್, ಸಿಎನ್‌ಜಿ, 28.51 ಕಿಮೀ / ಕೆಜಿ2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹8.49 ಲಕ್ಷ* | ||
ಅಗ್ರ ಮಾರಾಟ ಫ್ರಾಂಕ್ಸ್ ಡೆಲ್ಟಾ ಪ್ಲಸ್1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.79 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹8.80 ಲಕ್ಷ* | ||
ಫ್ರಾಂಕ್ಸ್ ಡೆಲ್ಟಾ ಎಎಂಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 22.89 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹8.90 ಲಕ್ಷ* | ||
ಫ್ರಾಂಕ್ಸ್ ಡೆಲ್ಟಾ ಪ್ಲಸ್ ಒಪ್ಟ್1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.79 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹8.96 ಲಕ್ಷ* | ||
ಫ್ರಾಂಕ್ಸ್ ಡೆಲ್ಟಾ ಪ್ಲಸ್ ಎಎಂಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 22.89 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹9.30 ಲಕ್ಷ* | ||
ಅಗ್ರ ಮಾರಾಟ ಫ್ರಾಂಕ್ಸ್ ಡೆಲ್ಟಾ ಸಿಎನ್‌ಜಿ1197 ಸಿಸಿ, ಮ್ಯಾನುಯಲ್, ಸಿಎನ್‌ಜಿ, 28.51 ಕಿಮೀ / ಕೆಜಿ2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹9.36 ಲಕ್ಷ* | ||
ಫ್ರಾಂಕ್ಸ್ ಡ ೆಲ್ಟಾ ಪ್ಲಸ್ ಒಪ್ಟ್ ಎಎಮ್‌ಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 22.89 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹9.46 ಲಕ್ಷ* | ||
ಫ್ರಾಂಕ್ಸ್ ಡೆಲ್ಟಾ ಪ್ಲಸ್ ಟರ್ಬೊ998 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.5 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹9.76 ಲಕ್ಷ* | ||
ಫ್ರಾಂಕ್ಸ್ ಝೀಟಾ ಟರ್ಬೊ998 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.5 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹10.59 ಲಕ್ಷ* | ||
ಫ್ರಾಂಕ್ಸ್ ಆಲ್ಫಾ ಟರ್ಬೊ998 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.5 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹11.51 ಲಕ್ಷ* | ||
ಫ್ರಾಂಕ್ಸ್ ಆಲ್ಫಾ ಟರ್ಬೊ ಡ್ಯುಯಲ್ ಟೋನ್998 ಸಿಸಿ, ಮ್ಯಾನುಯಲ್, ಪೆಟ್ರೋಲ್, 21.5 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹11.66 ಲಕ್ಷ* | ||
ಫ್ರಾಂಕ್ಸ್ ಝೀಟಾ ಟರ್ಬೊ ಎಟಿ998 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 20.01 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹11.98 ಲಕ್ಷ* | ||
ಫ್ರಾಂಕ್ಸ್ ಆಲ್ಫಾ ಟರ್ಬೊ ಎಟಿ998 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 20.01 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹12.90 ಲಕ್ಷ* | ||
ಫ್ರಾಂಕ್ಸ್ ಆಲ್ಫಾ ಟರ್ಬೊ ಡ್ಯುಯಲ್ ಟೋನ್ ಆಟೋಮ್ಯಾಟಿಕ್(ಟಾಪ್ ಮೊಡೆಲ್)998 ಸಿಸಿ, ಆಟೋಮ್ಯಾಟಿಕ್, ಪೆ ಟ್ರೋಲ್, 20.01 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್ | ₹13.06 ಲಕ್ಷ* |

ಮಾರುತಿ ಫ್ರಾಂಕ್ಸ್ ವಿಮರ್ಶೆ
Overview
ನೀವು ಬಲೆನೋ ಕಾರನ್ನು ಮನೆಗೆ ತರಲು ಇಚ್ಚಿಸಿ ಸ್ಥಳೀಯ ಮಾರುತಿ ಡೀಲರ್ ಬಳಿಗೆ ಹೋದರೆ ನಿಮಗೆ ಫ್ರಾಂಕ್ಸ್ ಉತ್ತೇಜಿಸುವ ರೀತಿಯಲ್ಲಿ ಕಾಣಿಸಬಹುದು. ನೀವು ನಿಜವಾಗಿಯೂ ಬ್ರೆಝ್ಝಾದ ಬಾಕ್ಸ್ ರೀತಿಯ ಶೈಲಿಯನ್ನು ಇಷ್ಟಪಡದಿದ್ದಲ್ಲಿ ಅಥವಾ ಗ್ರ್ಯಾಂಡ್ ವಿಟಾರಾ ಗಾತ್ರವನ್ನು ಬಯಸಿದರೆ ಫ್ರಾಂಕ್ಸ್ ಅಷ್ಟೇ ಯೋಗ್ಯವಾದ ಇನ್ನೊಂದು ಆಯ್ಕೆಯಾಗಿ ಕಾಣಿಸಬಹುದು (ನಾವು ಇಲ್ಲಿ ಹಳೆ ಆವೃತ್ತಿಯ ಬಗ್ಗೆ ಹೇಳುತ್ತಿದ್ದೇವೆ).
ಎಕ್ಸ್‌ಟೀರಿಯರ್
ಯಾವುದೇ ಕುರುಹು ಇಲ್ಲದೆ ಮುಳುಗಿದ ಕ್ರಾಸ್ ಹ್ಯಾಚ್‌ಬ್ಯಾಕ್‌ಗಳ ಸಮುದ್ರದಲ್ಲಿ, ಮಾರುತಿ ಫ್ರಾಂಕ್ಸ್ ಅನ್ನು ಅದರ ಮೂಲ ಮಾದರಿಯಾಗಿರುವ ಬಲೆನೊದಿಂದ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುವಂತೆ ಮಾಡಿರುವುದು ಉತ್ತಮ ಆರಂಭವಾಗಿದೆ. ಚೆನ್ನಾಗಿ ಪ್ರಾರಂಭಿಸಿದರೆ ಅರ್ಧ ಮುಗಿದಂತೆ ಎಂಬ ಮಾತಿದೆ, ಇದು ಫ್ರಾಂಕ್ಸ್ ವಿಚಾರದಲ್ಲಿ ನಿಜವಾಗಿದೆ. ಮುಂಭಾಗದ ಬಾಗಿಲನ್ನು ಹೊರತುಪಡಿಸಿ ಮತ್ತು ಮಿರರ್‌ಗಳು ಬಲೆನೊದಿಂದ ಕಾಪಿ ಮಾಡಿದಂತೆ ತೋರಿದರೂ, ಇದು ಹ್ಯಾಚ್‌ನೊಂದಿಗೆ ಪ್ರಾಯೋಗಿಕವಾಗಿ ಯಾವುದೇ ಬಾಡಿ ಪ್ಯಾನೆಲ್‌ನ್ನು ಹಂಚಿಕೊಳ್ಳುವುದಿಲ್ಲ.
ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳಲ್ಲಿ ಟ್ರಿಪಲ್ ಎಲಿಮೆಂಟ್‌ಗಳು ಮತ್ತು ಬಂಪರ್‌ನಲ್ಲಿ ಇರಿಸಲಾದ ಪೂರ್ಣ-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಮುಂಭಾಗವು ಗ್ರ್ಯಾಂಡ್ ವಿಟಾರಾದ ಸ್ಕೇಲ್ಡ್-ಡೌನ್ ಆವೃತ್ತಿಯಂತೆ ಕಾಣುತ್ತದೆ. ಲೊವರ್ ವೇರಿಯೆಂಟ್‌ಗಳಲ್ಲಿ ಡಿಆರ್‌ಎಲ್‌ಗಳು ಲಭ್ಯವಿಲ್ಲ ಮತ್ತು ಇವುಗಳಲ್ಲಿ ನೀವು ಬೇಸಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಪಡೆಯುತ್ತೀರಿ ಎಂಬುದನ್ನು ನಾವು ಗಮನಿಸಬೇಕು.
ವಿಶಾಲವಾದ ಗ್ರಿಲ್ ಮತ್ತು ನೇರವಾದ ಮೂಗಿನಿಂದಾಗಿ ಫ್ರಾಂಕ್ಸ್ ಆತ್ಮವಿಶ್ವಾಸದಿಂದ ನಿಂತಂತೆ ಕಾಣುತ್ತದೆ. ಬಿಗಿಯಾದ ಲೈನ್‌ಗಳೊಂದಿಗೆ ಉಬ್ಬಿದ ಫೆಂಡರ್‌ಗಳು ಬದಿಗಳಿಗೆ ಸ್ನಾಯುವಿಂತಹ ನೋಟವನ್ನು ನೀಡುತ್ತವೆ ಮತ್ತು ಮೆಶಿನ್‌ನಲ್ಲಿ-ಫಿನಿಶ್ ಮಾಡಿದ 16-ಇಂಚಿನ ಚಕ್ರಗಳು ಹೆಚ್ಚು ಸ್ಪೊರ್ಟಿ ಲುಕ್‌ನ್ನು ಹೊಂದಿದೆ. ದಪ್ಪನಾದ 195/60-ವಿಭಾಗದ ಟೈರ್‌ಗಳು ಎಲ್ಲಾ ಆವೃತ್ತಿಯಲ್ಲಿ ಸಿಗಲಿದೆ. ಆದರೆ ಡೆಲ್ಟಾ+ ಮತ್ತು ಝೀಟಾ ಆವೃತ್ತಿಗಳು ಬೆಳ್ಳಿ ಅಲಾಯ್‌ಗಳನ್ನು ಪಡೆಯುತ್ತವೆ.
ಮಾರುತಿ ಸುಜುಕಿ ತನ್ನ ವಿನ್ಯಾಸದೊಂದಿಗೆ ಸ್ವಲ್ಪ ಸಾಹಸಮಯವಾಗಿದೆ, ಎತ್ತರದ ರಂಪ್‌ನೊಂದಿಗೆ (ಹಿಂಬದಿಯ ಭಾಗ) ಜೋಡಿಸಲಾದ ತೀವ್ರವಾಗಿ ಇಳಿಜಾರಿನ ಮೇಲ್ಛಾವಣಿಯನ್ನು ಆರಿಸಿಕೊಂಡಿದೆ. ಫ್ರಾಂಕ್ಸ್ ಬದಿಯಿಂದ ಮತ್ತು ಹಿಂಭಾಗದ ಮೂರರಿಂದ ನಾಲ್ಕನೇ ಭಾಗದಿಂದ ಹೇಗೆ ಕಾಣುತ್ತದೆ ಎಂಬುವುದನ್ನು ನಾವು ತುಂಬಾನೇ ಇಷ್ಟಪಡುತ್ತೇವೆ. ರೂಫ್‌ನ ರೈಲ್ಸ್ ಮತ್ತು ಪ್ರಮುಖ ಸ್ಕಿಡ್ ಪ್ಲೇಟ್‌ನಂತಹ ಅಂಶಗಳು ಇಲ್ಲಿ ಎದ್ದು ಕಾಣುತ್ತವೆ.
ನಮ್ಮ ಪರೀಕ್ಷಾ ಕಾರನ್ನು ನೆಕ್ಸಾದ ಸ್ಟ್ಯಾಪಲ್ ಡೀಪ್ ಬ್ಲೂ ಬಣ್ಣದ ಕಾರಿನಲ್ಲಿ ನಮ್ಮ ಟೆಸ್ಟ್ ಡ್ರೈವ್‌ನ್ನು ಪೂರ್ಣಗೊಳಿಸಲಾಗಿದೆ ಮತ್ತು ನಾವು ಡೀಪ್ ರೆಡ್ ಫ್ರಾಂಕ್ಸ್ ಅನ್ನು ಸಹ ನೋಡಿದ್ದೇವೆ. ಕೆಂಪು, ಸಿಲ್ವರ್ ಮತ್ತು ಬ್ರೌನ್ ಶೇಡ್‌ನೊಂದಿಗೆ ನೀವು ಮೇಲ್ಛಾವಣಿಯನ್ನು ಆಯ್ಕೆ ಮಾಡಬಹುದು ಮತ್ತು ಬ್ಲ್ಯೂಇಶ್-ಬ್ಲಾಕ್ ಪೈಂಟ್‌ನಲ್ಲಿ ಫಿನಿಶ್ ಮಾಡಿದ ORVM (ಸೈಡ್ ಮಿರರ್) ಗಳನ್ನು ಟಾಪ್ ಎಂಡ್ ಮೊಡೆಲ್ ಆಲ್ಫಾ ವೇರಿಯೆಂಟ್‌ನಲ್ಲಿ ಆಯ್ಕೆ ಮಾಡಬಹುದು.
ಮೊದಲ ಅನಿಸಿಕೆಗಳಲ್ಲಿ, ಫ್ರಾಂಕ್ಸ್ ಸಂಪೂರ್ಣ ಕ್ರಾಸ್ ಹ್ಯಾಚ್‌ಗಿಂತ ಗಾತ್ರದಲ್ಲಿ ಕಡಿಮೆಯಾದ ಎಸ್‌ಯುವಿಯಂತೆ ಕಾಣುತ್ತದೆ. ಗಾತ್ರವನ್ನೇ ಗಮನಿಸುವಾಗ, ಇದು ಈ ಸೆಗ್ಮೆಂಟ್‌ನಲ್ಲಿ ಇತರ ಕಾರುಗಳೊಂದಿಗೆ ಸರಿಯಾಗಿದೆ.
ಇಂಟೀರಿಯರ್
ಫ್ರಾಂಕ್ಸ್‌ನ ಕ್ಯಾಬಿನ್‌ನಲ್ಲಿ ಯಾವುದೇ ಆಶ್ಚರ್ಯಕರ ಅಂಶವಿಲ್ಲ, ಅದು ಒಳ್ಳೆಯದ್ದಾಗಿರಬಹುದು ಮತ್ತು ಕೆಟ್ಟದ್ದಾಗಿರಬಹುದು. ಇಂಟಿರಿಯಲ್ ಬಾಲೆನೊದಿಂದ ಕಾಪಿ-ಪೇಸ್ಟ್ ಆದಂತಿದೆ. ಅಂದರೆ ಇದು ಸಂಪೂರ್ಣವಾಗಿ ಪ್ರಾಯೋಗಿಕ ಮತ್ತು ಬಳಸಬಹುದಾದಂತಾಗಿದೆ. ಹಾಗೆಯೇ ಇದು ಸಂಪೂರ್ಣವಾಗಿ ಯಾವುದೇ ಹೊಸತನವನ್ನು ಹೊಂದಿಲ್ಲ. ಮಾರುತಿ ಸುಜುಕಿಯು ಬಲೆನೊದ ನೀಲಿ ಬಣ್ಣಕ್ಕೆ ಬದಲಾಗಿ ಕೆಲವು ಮರೂನ್ ಅಂಶಗಳೊಂದಿಗೆ ಫ್ರಾಂಕ್ಸ್‌ಗೆ ತನ್ನದೇ ಆದ ಗುರುತನ್ನು ನೀಡಲು ಪ್ರಯತ್ನಿಸಿದೆ, ಆದರೆ ಅದು ತುಂಬಾ ಅಲ್ಪ ತುಂಬಾ ತಡ ಎಂಬಂತೆ ಭಾಸವಾಗುತ್ತಿದೆ.
ಫ್ರಾಂಕ್ಸ್ ನೆಲದಿಂದ ಎತ್ತರದಲ್ಲಿ ಕುಳಿತುಕೊಳ್ಳುವುದರಿಂದ ಆಸನದ ಸ್ಥಾನದಲ್ಲಿ ಮಾತ್ರ ಸ್ಪಷ್ಟವಾದ ವ್ಯತ್ಯಾಸವಿದೆ. ಚಾಲಕನ ಸೀಟಿನಿಂದ ಗೋಚರತೆ ಉತ್ತಮವಾಗಿರುತ್ತದೆ ಮತ್ತು ನೀವು ವಾಹನದ ಅಂಚುಗಳನ್ನು ಸುಲಭವಾಗಿ ಗುರುತಿಸಬಹುದು. ಇದು ನಿಮ್ಮ ಮೊದಲ ಕಾರು ಆಗಿದ್ದರೆ ಬಲೆನೊದ ಬದಲಾಗಿ ಫ್ರಾಂಕ್ಸ್ ಅನ್ನು ಆಯ್ಕೆ ಮಾಡಲು ಇದು ನಿಮ್ಮನ್ನು ಪ್ರೋತ್ಸಾಹಿಸಬಹುದು.
ಗುಣಮಟ್ಟ ಮುಖ್ಯ ಕಾಳಜಿಯಾಗಿದ್ದರೆ, ಫ್ರಾಂಕ್ಸ್ ಆ ದಿಕ್ಕಿಗೆ ಸಮಾನವಾಗಿದೆ. ಇದು ಯಾವುದೇ ರೀತಿಯಲ್ಲಿ ಅಸಾಧಾರಣವಲ್ಲ. ಡ್ಯಾಶ್‌ಬೋರ್ಡ್‌ನಲ್ಲಿ ಇನ್ನೂ ಸ್ವಲ್ಪ ಗಟ್ಟಿಯಾದ ಪ್ಲಾಸ್ಟಿಕ್‌ನ್ನು ನೀಡಲಾಗಿದೆ. ಆದರೆ ಹಳೆಯ ಮಾರುತಿಗಳಿಗೆ ಹೋಲಿಸಿದರೆ ಫಿಟ್ ಮತ್ತು ಫಿನಿಶ್ ಮಟ್ಟಗಳನ್ನು ಹೊಸ ಮೊಡೆಲ್‌ಗಳಲ್ಲಿ ಕೆಲವು ಹಂತಗಳವರೆಗೆ ಹೆಚ್ಚಿಸಿವೆ. ಆಸಕ್ತಿದಾಯಕವಾಗಿ, ಡೋರ್ ಪ್ಯಾಡ್‌ಗಳು ಮತ್ತು ಮೊಣಕೈ ರೆಸ್ಟ್‌ಗಳ ಮೇಲೆ ಮೃದುವಾದ ಲೆಥೆರೆಟ್ ಇದೆ, ಆದರೆ ಸೀಟ್‌ಗಳನ್ನು ಫ್ಯಾಬ್ರಿಕ್‌ನಲ್ಲಿ ಹೊದಿಸಲಾಗುತ್ತದೆ. ನೀವು ಕೆಲವು ಲೆಥೆರೆಟ್ ಸೀಟ್ ಕವರ್‌ಗಳನ್ನು ಎಕ್ಸಸರೀಸ್‌ಗಳಲ್ಲಿ ಸೇರಿಸಬಹುದು, ಆದರೆ, ಇದರ ಬೆಲೆಗೆ ಇವುಗಳನ್ನು ಕಂಪೆನಿ ಕಡೆಯಿಂದಲೇ ನೀಡಬಹುದಿತ್ತು ಎಂದು ನಮಗೆ ಅನಿಸುತ್ತದೆ.
ಹಿಂಭಾಗದಲ್ಲಿಯೂ, ಕಿಟಕಿಯ ಲೈನ್‌ಗಳನ್ನು ಕೆಳಗೆ ನೀಡುವುದರೊಂದಿಗೆ ಎತ್ತರದ ಆಸನದ ಸ್ಥಾನವು ಬದಿಯಿಂದ ಉತ್ತಮವಾದ ಹೊರನೋಟವನ್ನು ನೀಡುತ್ತದೆ. XL-ಗಾತ್ರದ ಹೆಡ್‌ರೆಸ್ಟ್‌ಗಳಿಂದ ಮುಂಭಾಗದ ಹೊರನೋಟಕ್ಕೆ ಅಡಚಣೆಯಾಗುತ್ತದೆ. ಅಲ್ಲದೆ, 'ನಿಜವಾದ' ಸ್ಥಳಾವಕಾಶವನ್ನು ಹೊಂದಿದ್ದರೂ ಸಹ, ಫ್ರಾಂಕ್ಸ್ ಜಾಗ ಮತ್ತು ಗಾಳಿಯ 'ಅರ್ಥ'ವನ್ನು ಹೊಂದಿಲ್ಲ ಎಂಬುವುದು ನಿಮಗೆ ಇಲ್ಲಿ ಅನುಭವವಕ್ಕೆ ಬರುತ್ತದೆ. ಅದರಲ್ಲಿ ಹೆಚ್ಚಿನವು ಕಪ್ಪು-ಮರೂನ್ ಬಣ್ಣದ ಯೋಜನೆಯನ್ನು ಕೆಳಗೆ ಬಳಸುತ್ತದೆ. ಆರು ಅಡಿ ಎತ್ತರದ ಪ್ರಯಾಣಿಕರಿಗೆ ಡ್ರೈವಿಂಗ್ ಸೀಟ್‌ನ ಹಿಂದೆ ಆರಾಮವಾಗಿ ಕುಳಿತುಕೊಳ್ಳಲು ಬೇಕಾಗುವಷ್ಟು ಸ್ಥಳಾವಕಾಶವನ್ನು ಹೊಂದಿದೆ. ಇದರಲ್ಲಿ ಫುಟ್‌ರೂಮ್‌ಗೆ ಯಾವುದೇ ಕೊರತೆಯಿಲ್ಲ, ಆದರೆ ಇಳಿಜಾರಾದ ಮೇಲ್ಛಾವಣಿಯನ್ನು ನೀಡುವುದರಿಂದ ಹೆಡ್‌ರೂಮ್‌ನಲ್ಲಿ ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ವಾಸ್ತವವಾಗಿ, ರಸ್ತೆಯಲ್ಲಿರುವ ಚೂಪಾದ ಉಬ್ಬುಗಳ ಮೇಲೆ ಪ್ರಯಣಿಸುವಾಗ ಆರು ಅಡಿಗಳಿಗಿಂತ ಎತ್ತರದವರ ತಲೆಯು ರೂಫ್‌ಗೆ ತಾಗಬಹುದು. ಇದಕ್ಕೆ ಪರಿಹಾರವೆಂದರೆ, ಮೊಣಕಾಲಿನ ಕೋಣೆಯನ್ನು ಸ್ಪಷ್ಟವಾಗಿ ಬಳಸುವುದರೊಂದಿಗೆ ಸೀಟಿನ ಮೇಲೆ ಮತ್ತಷ್ಟು ಮುಂದೆ ಕುಳಿತುಕೊಳ್ಳುವುದಾಗಿದೆ.
ಮೂರು ಪ್ರಯಾಣಿಕರಿಗೆ ಒಟ್ಟಿಗೆ ಕುಳಿತುಕೊಳ್ಳಬಹುದು. ಆದರೆ ಬಿಗಿಯಾಗಿ ಅದುಮಿದಂತೆ ಅನಿಸಬಹುದು. ನಿಮ್ಮ ಕುಟುಂಬದಲ್ಲಿ ಉತ್ತಮ ಆಹಾರವನ್ನು ಸೇವಿಸಿ ದಪ್ಪವಾದ ದೇಹವನ್ನು ಹೊಂದಿರುವ ವಯಸ್ಕರಿದ್ದರೆ, ಇದನ್ನು ನಾಲ್ಕು ಸೀಟರ್‌ನ ಕಾರು ಎಂದು ಪರಿಗಣಿಸಬಹುದು. ಕೆಲವು ಸಂದರ್ಭದಲ್ಲಿ ನೀವು ನಿಜವಾಗಿಯೂ ಮೂರು ಪ್ರಯಾಣಿಕರು ಕುಳಿತುಕೊಳ್ಳಬಹುದು. ಹಿಂದಿನ ಸೀಟ್‌ನಲ್ಲಿ ಹೆಡ್‌ರೆಸ್ಟ್ ಮತ್ತು ಸರಿಯಾದ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಬಲೆನೊದ ಮೇಲಿನ ಏಕೈಕ ಗಮನಾರ್ಹ ಸೇರ್ಪಡೆಯಾಗಿದೆ. ಇದು ಮಧ್ಯದ ಪ್ರಯಾಣಿಕರಿಗೆ ಸಹಕಾರಿಯಾಗಿದೆ. ಆದರೂ ಇದರಲ್ಲಿ ನೀವು ನಡುವಿನ ಆರ್ಮ್‌ರೆಸ್ಟ್ ಮತ್ತು ಕಪ್ ಹೋಲ್ಡರ್‌ಗಳನ್ನು ಇದರಲ್ಲಿ ಪಡೆಯುವುದಿಲ್ಲ.
ವೈಶಿಷ್ಟ್ಯಗಳು
ಫ್ರಾಂಕ್ಸ್‌ಗೆ ಅತ್ಯಗತ್ಯವಿರುವುದನ್ನು ನೀಡುವುದರೊಂದಿಗೆ ಅದಕ್ಕಿಂತ ಹೆಚ್ಚಿನದರ ಕುರಿತು ಮಾರುತಿ ಗಮನಹರಿಸಿಲ್ಲ. ಹೆಡ್ಸ್-ಅಪ್ ಡಿಸ್ಪ್ಲೇ, 360° ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜರ್ ಸೇರಿದಂತೆ ಕೆಲವು ಮುಖ್ಯ ಆಂಶಗಳನ್ನು ಸೇರಿಸಲಾಗಿದೆ. ಕ್ರೂಸ್ ಕಂಟ್ರೋಲ್, ಆಟೋ ಡಿಮ್ಮಿಂಗ್ IRVM, ಒಂಬತ್ತು ಇಂಚಿನ ಟಚ್‌ಸ್ಕ್ರೀನ್, ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ ಎಸಿ ವೆಂಟ್‌ಗಳು ಸೇರಿದಂತೆ ಉಳಿದವುಗಳು ಈ ಸೆಗ್ಮೆಂಟ್‌ಗೆ ಸ್ಟ್ಯಾಂಡರ್ಡ್ ಸೇರ್ಪಡೆಯಾಗಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕೂಡ ಇದೆ.
ಹ್ಯುಂಡೈ-ಕಿಯಾ ನೀಡುವ ಕೆಲವು ಸೌಕರ್ಯಗಳು ಇದರಲ್ಲಿ ಮಿಸ್ ಆಗಿದೆ. ವೆನ್ಯೂ ಮತ್ತು ಸೋನೆಟ್‌ನಲ್ಲಿ ಮುಂಭಾಗದ ಸೀಟ್‌ಗಳಲ್ಲಿ ವೇಂಟಿಲೇಶನ್ ಸೌಕರ್ಯ, ಬಟನ್ ಮೂಲಕ ಹೊಂದಾಣಿಕೆ ಮಾಡಬಲ್ಲ ಡ್ರೈವರ್ ಸೀಟ್ ಮತ್ತು ಜನಪ್ರೀಯ ಬೋಸ್ ಕಂಪೆನಿಯ ಸೌಂಡ್ ಸಿಸ್ಟಮ್‌ನಂತಹ ಕೆಲವು ವೈಶಿಷ್ಟ್ಯಗಳು ಲಭ್ಯವಿದೆ. ಇವುಗಳು ಫ್ರಾಂಕ್ಸ್‌ನಲ್ಲಿ ಕಣ್ಮರೆಯಾಗಿರುವುದು ನಿಮಗೆ ಅಚ್ಚರಿ ಮೂಡಿಸುವ ಸಾಧ್ಯತೆಯಿಲ್ಲದಿದ್ದರೂ, ಸನ್‌ರೂಫ್‌ನ ಇಲ್ಲದಿರುವುದು ಖಂಡಿತವಾಗಿಯೂ ನಿಮ್ಮನ್ನು ನಿರಾಶೆ ಮಾಡಿಸುತ್ತದೆ.
ವೈಶಿಷ್ಟ್ಯ ವಿತರಣೆಯ ಮೂಲಕ ಸಂಯೋಜನೆ ಮತ್ತು ರೇಂಜ್‌ನಾದ್ಯಂತ ಉಪಯುಕ್ತತೆಯನ್ನು ಒದಗಿಸುವ ಗುರಿಯನ್ನು ಮಾರುತಿ ಹೊಂದಿದೆ ಎಂದು ನೀವು ಕಂಡುಕೊಂಡಿದ್ದೀರಿ. ರಿಯರ್ ಡಿಫಾಗರ್, 60:40 ಸ್ಪ್ಲಿಟ್ ಸೀಟ್‌ಗಳು, ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ನಾಲ್ಕು ಪವರ್ ವಿಂಡೋಗಳು ಮತ್ತು ಕ್ಲೈಮೇಟ್ ಕಂಟ್ರೋಲ್‌ನಂತಹ ನಿರ್ಣಾಯಕ ಬಿಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಡೆಲ್ಟಾ ವೇರಿಯೆಂಟ್ (ಬೇಸ್ ಮೋಡೆಲ್‌ಗಿಂತ ಮೇಲಿನ ಆವೃತ್ತಿ) ಚಾಲಿತ ORVM ಗಳು, ಏಳು-ಇಂಚಿನ ಟಚ್‌ಸ್ಕ್ರೀನ್ ಜೊತೆಗೆ ಸ್ಟೀರಿಂಗ್-ಮೌಂಟೆಡ್ ಆಡಿಯೊ ನಿಯಂತ್ರಣಗಳ ಮೂಲಕ ಹೆಚ್ಚು ಉಪಯುಕ್ತತೆಯನ್ನು ಸೇರಿಸುತ್ತದೆ.
ನೀವು ಬಯಸುವ ಕೆಲವು ಸೌಕರ್ಯಗಳು ಫ್ರಾಂಕ್ಸ್ ನಲ್ಲಿ ಕಣ್ಮರೆಯಾದರೂ, ನಿಮ್ಮ ಸಾಕಷ್ಟು ಅಗತ್ಯಗಳನ್ನು ಇದರಲ್ಲಿ ಪೂರೈಸಲಾಗಿದೆ ಎಂದು ಖಚಿತಪಡಿಸುತ್ತದೆ.
ಸುರಕ್ಷತೆ
ಇದರ ಸುರಕ್ಷತಾ ಕಿಟ್ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಅಸಿಸ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಇದರ ಎರಡು ಟಾಪ್ ಮೊಡೆಲ್‌ಗಳು ಹೆಚ್ಚುವರಿ ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳನ್ನು ಪಡೆಯುತ್ತವೆ, ಈ ಮೂಲಕ ಇದರ ಏರ್‌ಬ್ಯಾಗ್ ಸಂಖ್ಯೆ ಆರಕ್ಕೆ ಏರುತ್ತದೆ. ಫ್ರಾಂಕ್ಸ್ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂಬುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದು ಯಾವಾಗಲೂ ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಪರೀಕ್ಷೆಗಳಲ್ಲಿ ಸಾಧಾರಣ ರೇಟಿಂಗ್‌ಗಳೊಂದಿಗೆ ಹಿಂತಿರುಗುತ್ತದೆ.
ಬೂಟ್‌ನ ಸಾಮರ್ಥ್ಯ
ಇದು ಸುಮಾರು 308 ಲೀಟರ್‌ನಷ್ಟು ಬೂಟ್ ಸ್ಪೇಸ್ ನ್ನು ಹೊಂದಿದೆ. ಈ ಸೆಗ್ಮೆಂಟ್‌ನ ಇತರ ಕಾರುಗಳಿಗೆ ಹೋಲಿಸಿದರೆ ಇದರ ಸಾಮರ್ಥ್ಯ ಉತ್ತಮವಾಗಿಲ್ಲ, ಆದರೆ ಕುಟುಂಬದೊಂದಿಗೆ ವಾರಾಂತ್ಯದ ಪ್ರವಾಸಕ್ಕೆ ಇದು ಸೂಕ್ತವಾಗಿದೆ. ನಿಮಗೆ ಹೆಚ್ಚಿನ ಲಗೇಜ್‌ಗಳನ್ನು ಇಡಲಿದ್ದರೆ, ಸೀಟ್‌ನ್ನು 60:40 ಅನುಪಾತದಲ್ಲಿ ಬಾಗಿಸುವ ಮೂಲಕ ಪ್ರಯಾಣಿಕರನ್ನು ಲಗೇಜ್‌ಗಾಗಿ ಹೆಚ್ಚಿನ ಜಾಗವನ್ನು ಇದು ಪಡೆಯುತ್ತದೆ. ಬಲೆನೊಗೆ ಹೋಲಿಸಿದರೆ ಲೋಡಿಂಗ್ ಪ್ರದೇಶವು ಗಮನಾರ್ಹವಾಗಿ ವಿಶಾಲವಾಗಿದೆ ಮತ್ತು ಬೂಟ್ ಅಷ್ಟೇ ಆಳವಾಗಿ ತೋರುತ್ತದೆ. ಪೇಪರ್‌ನಲ್ಲಿ ನೀಡುವ ಬೂಟ್ ಸಾಮರ್ಥ್ಯಕ್ಕಿಂತ ವಾಸ್ತವದಲ್ಲಿ ಇದು 10-ಲೀಟರ್ ನಷ್ಟು ಕಡಿತವನ್ನು ಕಾಣುತ್ತದೆ.
ಕಾರ್ಯಕ್ಷಮತೆ
ಸುಜುಕಿಯ 1.0-ಲೀಟರ್ ಟರ್ಬೋಚಾರ್ಜ್ಡ್ ಬೂಸ್ಟರ್‌ಜೆಟ್ ಎಂಜಿನ್ ನ್ನು ಫ್ರಾಂಕ್ಸ್‌ನಲ್ಲಿ ನೀಡಲಾಗುತ್ತದೆ. ಹಿಂದಿನ ಬಲೆನೊ ಆರ್‌ಎಸ್‌ನಲ್ಲಿ ಈ ಮೋಟರ್ ಅನ್ನು ಬಳಸುತ್ತಿದ್ದದನ್ನು ನಾವು ಕಂಡಿದ್ದೆವೆ. ಈ ಸಮಯದಲ್ಲಿ, ಇದು ಹೆಚ್ಚು ಮಿತವ್ಯಯವನ್ನು ಮಾಡಲು ಸೌಮ್ಯ-ಹೈಬ್ರಿಡ್ ತಂತ್ರಜ್ಞಾನದ ಸಹಾಯವನ್ನು ಹೊಂದಿದೆ. ಇನ್ನೊಂದು ಆಯ್ಕೆಯೆಂದರೆ ಮಾರುತಿ ಸುಜುಕಿಯ ಬಳಸಿದ ಮತ್ತು ಪರೀಕ್ಷಿಸಿದ 1.2-ಲೀಟರ್ ಎಂಜಿನ್, ಇದು ಇತರ ವಾಹನಗಳಲ್ಲಿಯೂ ಲಭ್ಯವಿದೆ. ಹ್ಯುಂಡೈ-ಕಿಯಾದಲ್ಲಿ ನೀವು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಕಾರನ್ನು ಖರೀದಿಸಲು ಬಯಸಿದರೆ ಟರ್ಬೊ ವೇರಿಯೆಂಟ್‌ನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಿತ್ತು, ಅದರೆ ಮಾರುತಿ ಸುಜುಕಿ ಇದಕ್ಕಿಂತ ಭಿನ್ನವಾಗಿ ಎರಡೂ ಎಂಜಿನ್‌ಗಳೊಂದಿಗೆ ಎರಡು-ಪೆಡಲ್ ಆಯ್ಕೆಯನ್ನು ನೀಡುತ್ತಿದೆ. ಟರ್ಬೊ ಅಲ್ಲದ ಎಂಜಿನ್‌ಗೆ 5-ಸ್ಪೀಡ್ AMT, ಮತ್ತು ಟರ್ಬೋಚಾರ್ಜ್ಡ್ ಎಂಜಿನ್‌ಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನನ್ನು ಜೋಡಿಸಲಾಗಿದೆ.
ವಿಶೇಷಣಗಳು | ||
ಎಂಜಿನ್ | 1.2-ಲೀಟರ್ ನಾಲ್ಕು ಸಿಲಿಂಡರ್ | ಮೈಲ್ಡ್-ಹೈಬ್ರಿಡ್ ನೆರವಿನೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ | 90PS | 100PS |
ಟಾರ್ಕ್ | 113Nm | 148Nm |
ಟ್ರಾನ್ಸ್ಮಿಷನ್ ಆಯ್ಕೆಗಳು | 5-ಸ್ಪೀಡ್ ಮ್ಯಾನುಯಲ್ / 5-ಸ್ಪೀಡ್ ಎಎಂಟಿ | 5-ಸ್ಪೀಡ್ ಮ್ಯಾನುಯಲ್ / 5-ಸ್ಪೀಡ್ ಆಟೋಮ್ಯಾಟಿಕ್ |
ಗೋವಾದಲ್ಲಿ ನಾವು ನಡೆಸಿದ ಹಲವು ಗಂಟೆಗಳ ಟೆಸ್ಟ್ ಡ್ರೈವ್‌ನಲ್ಲಿ , ನಾವು ಎರಡೂ ಟ್ರಾನ್ಸ್‌ಮಿಷನ್‌ನೊಂದಿಗೆ ಬೂಸ್ಟರ್‌ಜೆಟ್ ಅನ್ನು ಮೊಡೆಲ್‌ನ್ನು ಡ್ರೈವ್ ಮಾಡಿದ್ದೇವೆ. ಇದರಲ್ಲಿ ನಾವು ಏನನ್ನು ನಿರೀಕ್ಷಿಸಬಹುದು ಎಂಬುದರ ತ್ವರಿತ ಸಾರಾಂಶ ಇಲ್ಲಿದೆ:
- ಮೊದಲ ಅನಿಸಿಕೆಗಳು: ವಿಶೇಷವಾಗಿ ಮಾರುತಿಯ ನಯವಾಗಿರುವ 1.2-ಲೀಟರ್ ಮೋಟಾರ್‌ಗೆ ಹೋಲಿಸಿದರೆ, ಈ ಮೂರು-ಸಿಲಿಂಡರ್ ಎಂಜಿನ್‌ನಲ್ಲಿ ಸ್ವಲ್ಪ ವೈಬ್ರೆಷನ್‌ನ ಅನುಭವವಾಗುತ್ತದೆ. ರಸ್ತೆಯಲ್ಲಿ ನೀವು ಹೆಚ್ಚಿನ ವೇಗಕ್ಕಾಗಿ ಎಕ್ಸಿಲರೇಟರ್‌ನ್ನು ಹೆಚ್ಚು ತಳ್ಳಿದಾಗ ಇದು ನಿಮಗೆ ತಿಳಿಯುತ್ತದೆ. ಅದರೆ ಸೌಂಡ್‌ನ ಲೆವೆಲ್ ಸಾದಾರಣವಾಗಿದೆ.
- ಉದಾಹರಣೆಗೆ ಹೇಳುವುದಾದರೆ, ವೋಕ್ಸ್‌ವ್ಯಾಗನ್‌ನ 1.0 TSI ಎಂಜಿನ್‌ನಂತೆ ಇದು ಕಾರ್ಯಕ್ಷಮತೆಯಲ್ಲಿ ಸ್ಫೋಟಕವಾಗಿಲ್ಲ. ಸಿಟಿ ಡ್ರೈವಿಂಗ್ ಮತ್ತು ಹೈವೇ ಡ್ರೈವ್‌ಗಳಿಗೆ ಸಮತೋಲನವನ್ನು ನೀಡುವ ಉದ್ದೇಶವು ಉಪಯುಕ್ತತೆಯ ಮೇಲೆ ಸ್ಪಷ್ಟವಾಗಿ ಗಮನಹರಿಸುತ್ತದೆ.
- ಟರ್ಬೊ ಅಲ್ಲದ ಎಂಜಿನ್‌ಗೆ ಹೋಲಿಸಿದರೆ, ಟರ್ಬೊ ಎಂಜಿನ್‌ನ ನೈಜ ಪ್ರಯೋಜನವು ಹೆದ್ದಾರಿ ಚಾಲನೆಯಲ್ಲಿ ನಮಗೆ ಸ್ಪಷ್ಟವಾಗುತ್ತದೆ. ಇದರಲ್ಲಿ ಪ್ರಯಾಣದುದ್ದಕ್ಕೂ ವೇಗವನ್ನು 100-120 ಕಿ.ಮೀಯಷ್ಟು ಹಿಡಿದಿಟ್ಟುಕೊಳ್ಳುವುದು ತುಂಬಾ ಆರಾಮದಾಯಕವಾಗಿದೆ. 60-80 ಕಿ.ಮೀ ಯಿಂದ 100 ಕಿ.ಮೀಯಷ್ಟು ವೇಗವನ್ನು ಹೆಚ್ಚಿಸಿ ಓವರ್‌ಟೇಕ್ ಮಾಡುವುದು ಈಗ ಹೆಚ್ಚು ಶ್ರಮರಹಿತವಾಗಿರುತ್ತದೆ.
- ನಗರದ ಡ್ರೈವಿಂಗ್ ವೇಳೆ, ನೀವು ಎರಡನೇ ಅಥವಾ ಮೂರನೇ ಗೇರ್‌ನ ನಡುವೆಯೇ ಇರುತ್ತಿರಿ. 1800-2000rpm ನಂತರ ಎಂಜಿನ್‌ಗೆ ಆಕ್ಟಿವ್ ಆದ ಅನುಭವವಾಗುತ್ತದೆ. ಅದರ ಕೆಳಗಿನ ಆರ್‌ಪಿಎಂನಲ್ಲಿ, ಇದು ಚಲಿಸಲು ಸ್ವಲ್ಪ ಹಿಂಜರಿಯುತ್ತದೆ, ಆದರೆ ಎಂದಿಗೂ ಬೇಸರದ ಭಾವನೆಯನ್ನು ಉಂಟುಮಾಡುತ್ತದೆ. ಗಮನಿಸಿ: ನಿಮ್ಮ ಡ್ರೈವ್ ನಗರಕ್ಕೆ ಸೀಮಿತವಾಗಿದ್ದರೆ ನೀವು 1.2 ಎಂಜಿನ್‌ಗೆ ಆದ್ಯತೆ ನೀಡಬಹುದು. ಆಗ ನೀವು ಆಗಾಗ್ಗೆ ಗೇರ್ ಬದಲಾಯಿಸುವ ಆಗತ್ಯವಿರುವುದಿಲ್ಲ.
- ನೀವು ಬೇರೆ ಬೇರೆ ನಗರಗಳಿಗೆ ಅಥವಾ ಅಂತರ-ರಾಜ್ಯ ಪ್ರವಾಸಗಳನ್ನು ಸಾಕಷ್ಟು ಮಾಡುವುವವರಾಗಿದ್ದರೆ ಈ ಎಂಜಿನ್ ಅನ್ನು ಆರಿಸಿ. ಇದರಲ್ಲಿ ಹೆಚ್ಚಾಗಿ ಉತ್ಪಾದನೆಯಾಗುವ ಟಾರ್ಕ್ ಹೆದ್ದಾರಿಯ ಪ್ರಯಾಣವನ್ನು ಹೆಚ್ಚು ಶಾಂತಗೊಳಿಸುತ್ತದೆ.
- ಮತ್ತೊಂದು ಉತ್ತಮ ಅಂಶವೆಂದರೆ, ಈ ಎಂಜಿನ್ ನಯವಾದ ಮತ್ತು ತೊಂದರೆ ಮುಕ್ತವಾದ, ಸರಿಯಾದ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ್ನು ಪಡೆಯುತ್ತದೆ. ಇದು ವೇಗವಾದ ಗೇರ್‌ಬಾಕ್ಸ್ ಅಲ್ಲ - ನೀವು ಥ್ರೊಟಲ್ ಅನ್ನು ಕೆಳಗೆ ಒತ್ತಿದಾಗ ಡೌನ್‌ಶಿಫ್ಟಿಂಗ್ ಮಾಡುವ ಮೊದಲು ಇದು ಸಾಮಾನ್ಯವಾಗಿ ಅರ್ಧ ಸೆಕೆಂಡ್ ತೆಗೆದುಕೊಳ್ಳುತ್ತದೆ - ಆದರೆ ಅನುಕೂಲವು ಅದನ್ನು ಸರಿದೂಗಿಸುತ್ತದೆ.
- ಗೇರ್‌ಬಾಕ್ಸ್‌ನಲ್ಲಿ ಯಾವುದೇ ಡ್ರೈವ್ ಮೋಡ್‌ಗಳು ಅಥವಾ ವಿಶೇಸವಾಗಿ ಸ್ಪೋರ್ಟ್ ಮೋಡ್ ಕೂಡ ಇಲ್ಲ. ಆದಾಗ್ಯೂ ನೀವು ಪ್ಯಾಡಲ್ ಶಿಫ್ಟರ್‌ಗಳನ್ನು ಬಳಸುವುದನ್ನು ಆಯ್ಕೆ ಮಾಡಬಹುದು ಮತ್ತು ಇದನ್ನು ಮ್ಯಾನುಯಲ್ ಆಗಿ ಬದಲಾಯಿಸಬಹುದು.
ರೈಡ್ ಅಂಡ್ ಹ್ಯಾಂಡಲಿಂಗ್
ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉತ್ತಮ ಸಸ್ಪೆನ್ಸನ್‌ನಿಂದಾಗಿ ಫ್ರಾಂಕ್ಸ್ ಕೆಟ್ಟ ರಸ್ತೆಗಳಲ್ಲಿ ಹಿಂದೆ ಸರಿಯುವುದಿಲ್ಲ.
ಬಾಡಿಯ ಚಲನೆಯನ್ನು ಚೆನ್ನಾಗಿ ನಿಯಂತ್ರಿಸಲಾಗುತ್ತದೆ ಮತ್ತು ಕಡಿಮೆ ವೇಗದಲ್ಲಿ ಹೊಂಡ ಗುಂಡಿಗಳ ಮೇಲೆ ಪ್ರಯಾಣಿಕರನ್ನು ಮೇಲಕ್ಕೆ ಎಸೆಯುವುದಿಲ್ಲ. ಇಲ್ಲಿಯೂ ಸಹ, ಬದಿ-ಬದಿಗೆ ಎಳೆಯುವ ಚಲನೆಯನ್ನು ಚೆನ್ನಾಗಿ ಪರಿಶೀಲಿಸಲಾಗುತ್ತದೆ.
ಹೆಚ್ಚಿನ ವೇಗದಲ್ಲಿ ಕಾರಿನ ಸ್ಥಿರತೆಯು ಡ್ರೈವಿಂಗ್‌ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ಹಿಂಭಾಗದಲ್ಲಿ ಕುಳಿತಿದ್ದರೂ ಸಹ, ನೂರರ ವೇಗದಲ್ಲಿಯೂ ಸಹ ಇದು ತೇಲುವ ಅಥವಾ ಹಿಂಜರಿಯುವ ಭಾವನೆಯನ್ನು ಅನುಭವಿಸುವುದಿಲ್ಲ. ಹೆದ್ದಾರಿಯ ಪ್ರಯಾಣದಲ್ಲಿ, ರಸ್ತೆಯ ಬಂಪ್‌ನಲ್ಲಿ ಅಥವಾ ರಸ್ತೆಯ ಗುಣಮಟ್ಟ ಬದಲಾದಂತೆ ಕೆಲವೊಮ್ಮೆ ನಿಮಗೆ ಕುಳಿತಲ್ಲಿಂದಲೇ ಹಾರಿದ ಅನುಭವವಾಗುತ್ತದೆ. ಹಿಂದಿನ ಪ್ರಯಾಣಿಕರಿಗೆ ಇದು ಹೆಚ್ಚಾಗಿ ಅನುಭವವಾಗುತ್ತದೆ.
ನೀವು ನಗರದ ಪ್ರಯಾಣಿಕರಾಗಿದ್ದರೆ, ಫ್ರಾಂಕ್ಸ್ ಸ್ಟೀರಿಂಗ್‌ನಲ್ಲಿ ನಿಮಗೆ ಯಾವುದೇ ಸಮಸ್ಯೆಯ ಅನುಭವವಾಗುವುದಿಲ್ಲ. ಇದು ಹಗುರವಾಗಿರುತ್ತದೆ ಮತ್ತು ಸಾಕಷ್ಟು ತ್ವರಿತವಾಗಿ ಬಳಸಬಹುದು. ಹೆದ್ದಾರಿಗಳಲ್ಲಿ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಅನುಭವವನ್ನು ನೀಡಲು ಇದು ಸಾಕಷ್ಟು ಸಹಕಾರಿಯಾಗಿದೆ. ಅಂಕುಡೊಂಕಾದ ರಸ್ತೆಗಳಲ್ಲಿ ಇದು ನಿಮಗೆ ರೆಸ್ಪೊನ್ಸ್ ಮಾಡುವ ರೀತಿಯನ್ನು ನೀವು ಪ್ರಶಂಸಿಸುತ್ತೀರಿ. ನೀವು ಚಕ್ರದಿಂದ ಸ್ವಲ್ಪ ಹೆಚ್ಚಿನ ಪ್ರತಿಕ್ರಿಯೆಯನ್ನು ಬಯಸುತ್ತೀರಿ, ಆದರೆ ಫ್ರಾಂಕ್ಸ್ ಏನು ನೀಡುತ್ತಿದೆ ಎಂಬುದನ್ನು ನೀವು ಬಳಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ವರ್ಡಿಕ್ಟ್
ಫ್ರಾಂಕ್ಸ್‌ನ ಬೆಲೆಯಲ್ಲಿ ಮಾರುತಿ ಸುಜುಕಿಯು ಸ್ವಲ್ಪ ಆಶಾವಾದಿಕರವಾಗಿದ್ದು, ಬಲೆನೋ ಮೇಲೆ ಇದು ಸುಮಾರು ಒಂದು ಲಕ್ಷದಷ್ಟು ಕಡಿತವನ್ನು ಹೊಂದಿದೆ. ಉನ್ನತ ರೂಪಾಂತರಗಳು ನೆಕ್ಸಾನ್, ವೆನ್ಯೂ ಮತ್ತು ಸೋನೆಟ್‌ನ ಟಾಪ್-ಸ್ಪೆಕ್ ರೂಪಾಂತರಗಳೊಂದಿಗೆ ಸಮಾನವಾಗಿ ಬೆಲೆಯನ್ನೂ ಹೊಂದಿವೆ. ಅಲ್ಲದೇ ಇವೆಲ್ಲವೂ ಬೆಲೆಯಿಂದಾಗಿ ಹೆಚ್ಚು ಸೆಳೆಯುತ್ತವೆ.
ಫ್ರಾಂಕ್ಸ್ ಬಗ್ಗೆ ಇಷ್ಟಪಡಲು ಬಹಳಷ್ಟು ಇದ್ದು, ನ್ಯೂನತೆಗಳು ಕಡಿಮೆ. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್, ಸಬ್-ಕಾಂಪ್ಯಾಕ್ಟ್ ಎಸ್ ಯುವಿ ಮತ್ತು ಕಾಂಪ್ಯಾಕ್ಟ್ ಎಸ್ ಯುವಿ ನಡುವೆ ಇಷ್ಟವಾಗುವ ಬ್ಯಾಲೆನ್ಸ್ ಅನ್ನು ತರುತ್ತದೆ. ಶೈಲಿ, ಸ್ಥಳ, ಸೌಕರ್ಯ ಮತ್ತು ದೈನಂದಿನ ಉಪಯುಕ್ತತೆಯಂತಹ ಮೂಲಭೂತ ಅಂಶಗಳನ್ನು ಫ್ರಾಂಕ್ಸ್ ನಲ್ಲಿ ನಾವು ಕಾಣಬಹುದಾಗಿದೆ. ಇನ್ನೂ ಕೆಲವು ವೈಶಿಷ್ಟ್ಯಗಳು ಅಥವಾ ಕಡಿಮೆ ಬೆಲೆಯು ಅದನ್ನು ಶಿಫಾರಸು ಮಾಡಲು ನಮಗೆ ಸಂಪೂರ್ಣ ಸುಲಭ ಸಾಧ್ಯವಾಗಿಸುತ್ತದೆ.
ಮಾರುತಿ ಫ್ರಾಂಕ್ಸ್
ನಾವು ಇಷ್ಟಪಡುವ ವಿಷಯಗಳು
- ಮಸ್ಕ್ಯುಲರ್ ಶೈಲಿಯ ವಿನ್ಯಾಸ ಗಮನ ಸೆಳೆಯುತ್ತದೆ. ಇದು ಬೇಬಿ ಎಸ್ ಯುವಿ ರೀತಿ ಕಾಣಿಸುತ್ತದೆ.
- ವಿಶಾಲವಾದ ಮತ್ತು ಪ್ರಾಯೋಗಿಕ ಕ್ಯಾಬಿನ್ ಸಣ್ಣ ಕುಟುಂಬಕ್ಕೆ ತುಂಬಾ ಸೂಕ್ತ.
- ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಸ್ವಯಂಚಾಲಿತ ಆಯ್ಕೆಯನ್ನೂ ಹೊಂದಿದೆ.
ನಾವು ಇಷ್ಟಪಡದ ವಿಷಯಗಳು
- ಇಳಿಜಾರಾದ ಮೇಲ್ಛಾವಣಿಯು ಹಿಂದಿನ ಸೀಟಿನ ಹೆಡ್‌ರೂಮ್ ಸ್ಥಳವನ್ನು ನುಂಗಿ ಹಾಕುತ್ತದೆ.
- ಡೀಸೆಲ್ ಎಂಜಿನ್ ಆಯ್ಕೆ ಇಲ್ಲವಾಗಿದ್ದು ವೆನ್ಯೂ, ನೆಕ್ಸಾನ್ ಮತ್ತು ಸೋನೆಟ್ ಜೊತೆಗೆ ಲಭ್ಯವಿದೆ.
- ಸನ್‌ರೂಫ್, ಚರ್ಮದ ಸಜ್ಜಿಕೆ ಮತ್ತು ಗಾಳಿಯಾಡುವ ಆಸನಗಳು ಕಾಣಿಸದೇ ಇರುವ ವಿಶೇಷತೆಗಳಾಗಿವೆ
ಮಾರುತಿ ಫ್ರಾಂಕ್ಸ್ comparison with similar cars
![]() Rs.7.54 - 13.06 ಲಕ್ಷ* | ![]() ![]() Rs.6.15 - 11.23 ಲಕ್ಷ* | ![]() Rs.7.76 - 13.06 ಲಕ್ಷ* | ![]() Rs.6.70 - 9.92 ಲಕ್ಷ* | ![]() Rs.8.69 - 14.14 ಲಕ್ಷ* | ![]() Rs.6 - 10.32 ಲಕ್ಷ* | ![]() Rs.8.25 - 13.99 ಲಕ್ಷ* |