• ಮಾರುತಿ ಬ್ರೆಜ್ಜಾ ಮುಂಭಾಗ left side image
1/1
  • Maruti Brezza
    + 88ಚಿತ್ರಗಳು
  • Maruti Brezza
  • Maruti Brezza
    + 9ಬಣ್ಣಗಳು
  • Maruti Brezza

ಮಾರುತಿ ಬ್ರೆಜ್ಜಾ

with ಫ್ರಂಟ್‌ ವೀಲ್‌ option. ಮಾರುತಿ ಬ್ರೆಜ್ಜಾ Price starts from ₹ 8.34 ಲಕ್ಷ & top model price goes upto ₹ 14.14 ಲಕ್ಷ. This model is available with 1462 cc engine option. This car is available in ಪೆಟ್ರೋಲ್ ಮತ್ತು ಸಿಎನ್‌ಜಿ options with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's & . This model has 2-6 safety airbags. & 328 litres boot space. This model is available in 10 colours.
change car
577 ವಿರ್ಮಶೆಗಳುrate & win ₹ 1000
Rs.8.34 - 14.14 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಮಾರುತಿ ಬ್ರೆಜ್ಜಾ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಬ್ರೆಜ್ಜಾ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: 2023 ರ ಸುಧಾರಿತ ಟಾಟಾ ನೆಕ್ಸಾನ್‌ನ ವಿರುದ್ಧ ನೀವು ಯಾಕೆ ಮಾರುತಿ ಬ್ರೆಝಾವನ್ನು ಪರಿಗಣಿಸಬೇಕು ಎಂಬುವುದು ಇಲ್ಲಿದೆ. 

ಬೆಲೆ: ದೆಹಲಿಯಲ್ಲಿ ಬ್ರೆಝಾದ ಎಕ್ಸ್ ಶೋರೂಂ ಬೆಲೆಯು  8.29 ಲಕ್ಷ ರೂ. ನಿಂದ 14.14 ಲಕ್ಷ ರೂ. ವರೆಗೆ ಇದೆ. 

ವೆರಿಯೆಂಟ್:  ಮಾರುತಿ ಇದನ್ನು ನಾಲ್ಕು ಟ್ರಿಮ್‌ಗಳಲ್ಲಿ ನೀಡುತ್ತದೆ: LXi, VXi, ZXi ಮತ್ತು ZXi+. ಟಾಪ್-ಸ್ಪೆಕ್ ZXi+ ಹೊರತುಪಡಿಸಿ ಎಲ್ಲಾ ವೆರಿಯೆಂಟ್ ಗಳಲ್ಲಿ ಐಚ್ಛಿಕ CNG ಕಿಟ್ ಅನ್ನು ನೀಡಲಾಗುತ್ತದೆ. ಅಲ್ಲದೆ, ZXi ಮತ್ತು ZXi+ ಟ್ರಿಮ್‌ಗಳು ಕಪ್ಪು ಆವೃತ್ತಿಗಳಲ್ಲಿ ಲಭ್ಯವಿದೆ.

 ಬಣ್ಣಗಳು: ಇದನ್ನು ಆರು ಮೊನೊಟೋನ್‌ಗಳು ಮತ್ತು ಮೂರು ಡ್ಯುಯಲ್-ಟೋನ್ ಶೇಡ್‌ಗಳಲ್ಲಿ ಹೊಂದಬಹುದು: ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ  ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಸಿಂಗಲ್ ಟೋನ್ ಬಣ್ಣಗಳಾದರೆ, ಸಿಜ್ಲಿಂಗ್ ರೆಡ್ ವಿತ್ ಮಿಡ್‌ನೈಟ್ ಬ್ಲ್ಯಾಕ್ ರೂಫ್, ಬ್ರೇವ್ ಖಾಕಿ ವಿತ್ ಆರ್ಕ್ಟಿಕ್ ವೈಟ್ ರೂಫ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ವಿಥ್ ಮಿಡ್ನೈಟ್ ಬ್ಲ್ಯಾಕ್ ರೂಫ್

ಆಸನ ಸಾಮರ್ಥ್ಯ: ಇದು ಐದು ಆಸನಗಳ ಸಂರಚನೆಯಲ್ಲಿ ಬರುತ್ತದೆ.

 ಬೂಟ್ ಸ್ಪೇಸ್: ಮಾರುತಿಯ ಸಬ್ ಕಾಂಪ್ಯಾಕ್ಟ್ SUV 328 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ಪ್ರೊಪಲ್ಷನ್ ಡ್ಯೂಟಿಯನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ (103PS/137Nm) ಐದು-ಸ್ಪೀಡ್ ಮ್ಯಾನುವಲ್ ಅಥವಾ ಸಿಕ್ಸ್-ಸ್ಪೀಡ್  ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಸಂಯೋಜಿಸಲಾಗಿದೆ. CNG ಆವೃತ್ತಿಯು 88PS/121.5Nm ಕಡಿಮೆ ಉತ್ಪಾದನೆಯೊಂದಿಗೆ ಅದೇ ಎಂಜಿನ್ ಅನ್ನು ಬಳಸುತ್ತದೆ ಮತ್ತು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಕಾರು ತಯಾರಕರು ಘೋಷಿಸಿರುವ ಮೈಲೇಜ್ ಅಂಕಿಅಂಶಗಳು ಇಲ್ಲಿವೆ:

  • ಮಾನ್ಯುಯಲ್ ಟ್ರಾನ್ಸ್ ಮಿಷನ್ - ಪ್ರತಿ ಲೀ.ಗೆ 20.15km  (LXi ಮತ್ತು VXi)

  • ಮಾನ್ಯುಯಲ್ ಟ್ರಾನ್ಸ್ ಮಿಷನ್ -  ಪ್ರತಿ ಲೀ.ಗೆ 19.89km  (ZXi ಮತ್ತು ZXi+)

  • ಆಟೋಮ್ಯಾಟಿಕ್ -  ಪ್ರತಿ ಲೀ.ಗೆ 19.8km  (VXi, ZXi ಮತ್ತು ZXi+)

  • CNG ಮಾನ್ಯುಯಲ್ - ಪ್ರತಿ ಕೆಜಿಗೆ 25.51km  (LXi, VXi ಮತ್ತು ZXi)

ವೈಶಿಷ್ಟ್ಯಗಳು: ಬ್ರೆಝಾ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮತ್ತು ನಾಲ್ಕು-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು ಪ್ಯಾಡಲ್ ಶಿಫ್ಟರ್‌ಗಳು (AT ವೆರಿಯೆಂಟ್), ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್  ಸೆನ್ಸಾರ್ ಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತವೆ.

ಪ್ರತಿಸ್ಪರ್ಧಿಗಳು: ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ಮಹೀಂದ್ರ XUV300, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸನ್,  ಹ್ಯುಂಡೈ ವೆನ್ಯೂ ಮತ್ತು ಮಾರುತಿ ಫ್ರಾಂಕ್ಸ್  ಜೊತೆ  ಮಾರುತಿ ಬ್ರೆಝಾ  ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಬ್ರೆಜ್ಜಾ ಎಲ್‌ಎಕ್ಸೈ(Base Model)1462 cc, ಮ್ಯಾನುಯಲ್‌, ಪೆಟ್ರೋಲ್, 17.38 ಕೆಎಂಪಿಎಲ್more than 2 months waitingRs.8.34 ಲಕ್ಷ*
ಬ್ರೆಜ್ಜಾ ಎಲ್‌ಎಕ್ಸ್‌ಐ ಸಿಎನ್‌ಜಿ(Base Model)1462 cc, ಮ್ಯಾನುಯಲ್‌, ಸಿಎನ್‌ಜಿ, 25.51 ಕಿಮೀ / ಕೆಜಿmore than 2 months waitingRs.9.29 ಲಕ್ಷ*
ಬ್ರೆಜ್ಜಾ ವಿಎಕ್ಸೈ1462 cc, ಮ್ಯಾನುಯಲ್‌, ಪೆಟ್ರೋಲ್, 17.38 ಕೆಎಂಪಿಎಲ್more than 2 months waitingRs.9.70 ಲಕ್ಷ*
ಬ್ರೆಜ್ಜಾ ವಿಎಕ್ಸೈ ಸಿಎನ್ಜಿ1462 cc, ಮ್ಯಾನುಯಲ್‌, ಸಿಎನ್‌ಜಿ, 25.51 ಕಿಮೀ / ಕೆಜಿmore than 2 months waitingRs.10.64 ಲಕ್ಷ*
ಬ್ರೆಜ್ಜಾ ವಿಎಕ್ಸೈ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.8 ಕೆಎಂಪಿಎಲ್more than 2 months waitingRs.11.10 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ1462 cc, ಮ್ಯಾನುಯಲ್‌, ಪೆಟ್ರೋಲ್, 19.89 ಕೆಎಂಪಿಎಲ್more than 2 months waitingRs.11.14 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ dt1462 cc, ಮ್ಯಾನುಯಲ್‌, ಪೆಟ್ರೋಲ್, 19.89 ಕೆಎಂಪಿಎಲ್more than 2 months waitingRs.11.30 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ ಸಿಎನ್‌ಜಿ
ಅಗ್ರ ಮಾರಾಟ
1462 cc, ಮ್ಯಾನುಯಲ್‌, ಸಿಎನ್‌ಜಿ, 25.51 ಕಿಮೀ / ಕೆಜಿmore than 2 months waiting
Rs.12.10 ಲಕ್ಷ*
ಬ್ರೆಜ್ಜಾ ಜೆಡ್‌ಎಕ್ಸ್‌ಐ ಸಿಎನ್‌ಜಿ ಡ್ಯುಯಲ್‌ಟೋನ್‌(Top Model)1462 cc, ಮ್ಯಾನುಯಲ್‌, ಸಿಎನ್‌ಜಿ, 25.51 ಕಿಮೀ / ಕೆಜಿmore than 2 months waitingRs.12.26 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.8 ಕೆಎಂಪಿಎಲ್more than 2 months waitingRs.12.54 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ ಪ್ಲಸ್
ಅಗ್ರ ಮಾರಾಟ
1462 cc, ಮ್ಯಾನುಯಲ್‌, ಪೆಟ್ರೋಲ್, 19.89 ಕೆಎಂಪಿಎಲ್more than 2 months waiting
Rs.12.58 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ ಎಟಿ dt1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.8 ಕೆಎಂಪಿಎಲ್more than 2 months waitingRs.12.71 ಲಕ್ಷ*
ಬ್ರೆಜ್ಜಾ ಜೆಡ್ಎ‌ಕ್ಸ್‌ಐ ಪ್ಲಸ್ ಡುಯಲ್ ಟೋನ್1462 cc, ಮ್ಯಾನುಯಲ್‌, ಪೆಟ್ರೋಲ್, 19.89 ಕೆಎಂಪಿಎಲ್more than 2 months waitingRs.12.74 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ ಪ್ಲಸ್ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.8 ಕೆಎಂಪಿಎಲ್more than 2 months waitingRs.13.98 ಲಕ್ಷ*
ಬ್ರೆಜ್ಜಾ ಝಡ್ಎಕ್ಸ್ಐ ಪ್ಲಸ್ ಎಟಿ dt(Top Model)1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.8 ಕೆಎಂಪಿಎಲ್more than 2 months waitingRs.14.14 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

Maruti Suzuki Brezza ಇದೇ ಕಾರುಗಳೊಂದಿಗೆ ಹೋಲಿಕೆ

ಮಾರುತಿ ಬ್ರೆಜ್ಜಾ ವಿಮರ್ಶೆ

ಮಾರುತಿ ಸುಜುಕಿ ಬ್ರೆಝಾ ತನ್ನ ಹೆಸರಿನಿಂದ ವಿಟಾರಾವನ್ನು ಕೈಬಿಟ್ಟು ತಂತ್ರಜ್ಞ ಫಾರ್ಮುಲಾವನ್ನು ತೆಗೆದುಕೊಂಡಿದೆ. ಅದಕ್ಕಿಂತ ಇದು ಇನ್ನೂ ಅರ್ಥಪೂರ್ಣವಾಗಿದೆ ಎಂದು ನಿಮಗೆ ಅನ್ನಿಸುತ್ತದೆಯೇ?

ಮಾರುತಿ ಸುಜುಕಿಯು ಸಬ್ ಕಾಂಪ್ಯಾಕ್ಟ್ ವಿಭಾಗಕ್ಕೆ ಅತ್ಯಂತ ಸ್ಫೋಟಕವಾದಂತಹ ಪ್ರವೇಶವನ್ನು ಮಾಡಲಿಲ್ಲ. ವಿಟಾರಾ ಬ್ರೆಝಾ ಭಾರತದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಖಂಡಿತಾವಾಗಿಯೂ ಒಂದಾಗಿದೆ. ಆದರೆ ಅದು ಆಮೂಲಾಗ್ರವಾಗಿ ವಿಭಿನ್ನವಾದದ್ದನ್ನು ಮಾಡಿಲ್ಲ. ಇದು ಸೂಕ್ತ ಪ್ರಮಾಣದ ವೈಶಿಷ್ಟ್ಯಗಳನ್ನು ಹೊಂದಿತ್ತಲ್ಲದೇ ಕುಟುಂಬದಲ್ಲಿ ಎಲ್ಲರೂ ಒಪ್ಪಿಕೊಳ್ಳುವಷ್ಟು ಚೆನ್ನಾಗಿ ಮತ್ತು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿತ್ತು.

ಇದು ಗುರುತಿಸಲ್ಪಡುವ ಫಾರ್ಮುಲಾವಾಗಿದೆಯಲ್ಲದೇ 2016 ರಿಂದ 7.5 ಲಕ್ಷ ಖರೀದಿದಾರರು ಒಪ್ಪಿಕೊಳ್ಳುತ್ತಾರೆ. ಆದರೆ ಈಗಿರುವ ಕಠಿಣ ಸ್ಪರ್ಧೆಯಿಂದಾಗಿ ಇದು ಬದಲಾಗುವ ಸಮಯವಾಗಿತ್ತು.  ಹೊಸ ಮತ್ತು ತಂತ್ರಜ್ಞ ಬ್ರೆಝಾ ಜೊತೆಗಿನ ಅನುಭವ ಹೇಗಿದೆ ಎಂಬುದು ಇಲ್ಲಿದೆ.

ಎಕ್ಸ್‌ಟೀರಿಯರ್

ಬ್ಯಾಲೆನ್ಸ್ ಆಗಿದೆ, ಇದು ಹೊಸ ಬ್ರೆಜ್ಜಾದ ವಿನ್ಯಾಸವನ್ನು ಒಂದು ಪದದಲ್ಲಿ ಹೇಳುವುದಾದರೆ. ಹಿಂದಿನ ಆವೃತ್ತಿಗಳ ನೋಟವು ತಟಸ್ಥವಾಗಿದೆ ಎಂದು ಪರಿಗಣಿಸಿ ಕೆಲವರು ಇದರ ಕುರಿತು ಸ್ವಲ್ಪ ನಿರಾಸಾಕ್ತಿ ತೋರಿಸಬಹುದು. ಆದರೆ ಲುಕ್‌ ಮಾತ್ರ ದೊಡ್ಡದಾಗಿ ಸಾರ್ವತ್ರಿಕವಾಗಿದೆ. ಇದರ ಆಯಾಮಗಳು ಬದಲಾಗಿಲ್ಲ ಮತ್ತು ಇದು ಸಂಪೂರ್ಣವಾಗಿ ಹೊಸ ಬ್ರೆಝಾ ಆಗಿದ್ದರೂ, ಇದು ಇನ್ನೂ ಮೊದಲಿನಂತೆಯೇ ಅದೇ TECT ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಇದನ್ನೂ ಓದಿ: ತನ್ನ ಎಲ್ಲಾ ಆವೃತ್ತಿಗಳಲ್ಲಿ ಪ್ರಬಲ ಹೈಬ್ರಿಡ್ ಟೆಕ್ ಅನ್ನು ಪರಿಚಯಿಸಲಿರುವ ಮಾರುತಿ

ವಿಶೇಷವಾಗಿ ಮುಂಭಾಗ ಅಥವಾ ಹಿಂಭಾಗದಿಂದ ನೋಡಿದಾಗ, ಹೊಸ ವಿನ್ಯಾಸದ ಪ್ರಮುಖ ಹೈಲೈಟ್‌ ಎಂದರೆ ಕಾರನ್ನು ಅಗಲವಾಗಿ ಕಾಣುವಂತೆ ಮಾಡುತ್ತದೆ. ಹೊಸ ವಿನ್ಯಾಸದಲ್ಲಿ ಮೂಗಿನ ಭಾಗವು ಚಪ್ಪಟೆಯಾಗಿದೆ, ಹೊಸ ಗ್ರಿಲ್ ಹೆಚ್ಚು ಆಕರ್ಷಣೆಯನ್ನು ಹೊಂದಿದೆ ಮತ್ತು L ಮತ್ತು V ವೇರಿಯೆಂಟ್‌ಗಳು ಮೊದಲಿನಂತೆ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಪಡೆದರೆ, Z ಮತ್ತು Z+ ಹೊಸ LED ಪ್ರೊಜೆಕ್ಟರ್‌ಗಳನ್ನು ಪಡೆಯುತ್ತವೆ. ಅವುಗಳನ್ನು ಹೊಸ LED DRL ಗಳಿಂದ ಅಲಂಕರಿಸಲಾಗಿದೆ (Z/Z+) ಮತ್ತು ಇದರೊಂದಿಗೆ LED ಫಾಗ್‌ ಲೈಟ್‌ಗಳು (Z+) ಜೊತೆಗೂಡಿವೆ.

ಸೈಡ್‌ನಿಂದ ಗಮನಿಸುವಾಗ, ನೀವು 16-ಇಂಚಿನ ಡೈಮಂಡ್-ಕಟ್ ಅಲಾಯ್‌ ವೀಲ್‌ಗಳ ಹೊಸ ಸೆಟ್ ಮತ್ತು ಹಿಂದಿನ ಕಾರಿಗೆ ಹೋಲಿಸಿದರೆ ಇದು 2 ಪಟ್ಟು ಹೆಚ್ಚು ಬಾಡಿ ಕ್ಲಾಡಿಂಗ್ ಅನ್ನು ಗುರುತಿಸುತ್ತೀರಿ.  ಹಿಂಭಾಗದ ಲುಕ್‌ ನಮಗೆ ಹೊಸ ಬ್ರೆಜ್ಜಾದ ಅತ್ಯುತ್ತಮ ಆಂಗಲ್‌ ಆಗಿದೆ. ಟೈಲ್ ಲೈಟ್‌ಗಳು ಕಾರನ್ನು ಇನ್ನು ಅಗಲವಾಗಿ ಕಾಣುವಂತೆ ಮಾಡುತ್ತದೆ ಮತ್ತು ಒಳಗೆ ದೊಡ್ಡದಾದ, ಹೆಚ್ಚು ವಿಭಿನ್ನವಾದ ಲೈಟಿಂಗ್‌ ವೈಶಿಷ್ಟ್ಯವನ್ನು ಹೊಂದಿರುತ್ತದೆ.

ಇಂಟೀರಿಯರ್

ಹೊಸ ಡ್ಯಾಶ್‌ಬೋರ್ಡ್, ಹೊಸ ಸ್ಟೀರಿಂಗ್ ವೀಲ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಹೊಸ ಫ್ಯಾಬ್ರಿಕ್‌ಗಳನ್ನು ಬಳಸುವುದರೊಂದಿಗೆ ಇಂಟಿರೀಯರ್‌ನ ವಿನ್ಯಾಸವು ವಿಭಿನ್ನವಾಗಿದೆ. Z/Z+ ವೇರಿಯೆಂಟ್‌ಗಳಲ್ಲಿ, 2022ರ ಬ್ರೆಝಾ ಚಾಕೊಲೇಟ್ ಬ್ರೌನ್‌ ಮತ್ತು ಬ್ಲ್ಯಾಕ್‌ ಕಲರ್‌ನೊಂದಿಗೆ ಡ್ಯುಯಲ್‌-ಟೋನ್‌ನ ಇಂಟಿರೀಯರ್‌ನ್ನು ಪಡೆಯುತ್ತದೆ, ಅದು ಚೆನ್ನಾಗಿ ಕಾಣುತ್ತದೆ ಮತ್ತು ಡ್ಯಾಶ್‌ಟಾಪ್ ಮತ್ತು ಹೊಸ AC ಕನ್ಸೋಲ್‌ನಂತಹ ಬಿಟ್‌ಗಳು ಹೆಚ್ಚು ಪ್ರೀಮಿಯಂ ಅದ ಅನುಭವವನ್ನು ನೀಡುತ್ತದೆ.

ಆದಾಗಿಯೂ, ವಿಶಾಲವಾಗಿ ಹೇಳುವುದಾದರೆ ಇಂಟಿರೀಯರ್‌ನ ಗುಣಮಟ್ಟವು ಯಾವುದೇ ಬೆಂಚ್‌ಮಾರ್ಕ್‌ನ್ನು ಸೆಟ್‌ ಮಾಡಿಲ್ಲ. ಕ್ರ್ಯಾಶ್ ಪ್ಯಾಡ್ ಪ್ಲ್ಯಾಸ್ಟಿಕ್‌ಗಳು ಸ್ಕ್ರಾಚಿಯಾಗಿವೆ, ಗ್ಲೋವ್‌ಬಾಕ್ಸ್ ನಮ್ಮ ಎರಡೂ ಪರೀಕ್ಷಾ ಕಾರುಗಳಲ್ಲಿ ಅಷ್ಟೇನು ಉತ್ತಮವಾಗಿರಲಿಲ್ಲ ಮತ್ತು ಸನ್‌ರೂಫ್ ನೆರಳು ಕೂಡ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಈ ಸೆಗ್ಮೆಂಟ್‌ನಲ್ಲಿ ಈಗ ಬ್ರೆಝಾ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವುದನ್ನು ಗಮನಿಸುವಾಗ, ಕ್ಯಾಬಿನ್ ನನ್ನು ಇನ್ನಷ್ಟು ಶ್ರೀಮಂತಗೊಳಿಸಬಹುದಿತ್ತು.  ದುಃಖಕರವೆಂದರೆ, ಇದರ ಅಂಶಗಳನ್ನು ಕಿಯಾ ಸೋನೆಟ್‌ಗೆ ಹೋಲಿಸಿದರೆ, ಇದರಲ್ಲಿ ಹಲವು ವೈಶಿಷ್ಟ್ಯಗಳ ಕೊರತೆ ಎದ್ದು ಕಾಣುತ್ತದೆ.

ವೈಶಿಷ್ಟ್ಯಗಳು

ಹೊಸ ಬ್ರೆಜ್ಜಾದ ಪ್ರಮುಖ ಅಂಶವೆಂದರೆ ಅದರ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ಪ್ಯಾಕೇಜ್. ಹೊಸ ವೈಶಿಷ್ಟ್ಯಗಳು 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದ್ದು ಅದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ* ಗೆ ಸಪೋರ್ಟ್‌ ಆಗುತ್ತದೆ. ಸ್ಕ್ರೀನ್‌ ಲೇಔಟ್ ಹಲವು ಡೇಟಾಗಳನ್ನು ಒಳಗೊಂಡಿರುತ್ತದೆ ಮತ್ತು ಆದರೆ ದೊಡ್ಡ ಫಾಂಟ್‌ಗಳು ಮತ್ತು ವಿಜೆಟ್ ಗಾತ್ರಗಳೊಂದಿಗೆ ನ್ಯಾವಿಗೇಟ್ ಮಾಡಲು ತುಂಬಾ ಸುಲಭವಾಗಿದೆ. ಪ್ರದರ್ಶಿಸಲಾದ ಡೇಟಾವನ್ನು ನಿಮ್ಮ ಆದ್ಯತೆಗೆ ಅನುಗುಣವಾಗಿ ತಿರುಗಿಸಬಹುದು ಮತ್ತು ಸಿಸ್ಟಮ್ ಸ್ಪಂದಿಸುವ ರೀತಿ ಬಳಸಲು ತುಂಬಾ ನಯವಾಗಿದೆ.

*ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಪ್ರಸ್ತುತ ಅದನ್ನು ಸಕ್ರಿಯಗೊಳಿಸಲಾಗಿಲ್ಲ. 

ಬಲೆನೋದಂತೆ, ಬ್ರೆಜ್ಜಾ ಸಹ ನಿಮಗೆ ಡಿಜಿಟಲ್ ಸ್ಪೀಡೋಮೀಟರ್, ಟ್ಯಾಕೋಮೀಟರ್, ಗೇರ್ ಇಂಡಿಕೇಟರ್, ಕ್ರೂಸ್ ಕಂಟ್ರೋಲ್ ಡಿಸ್ಪ್ಲೇ ಮತ್ತು ಡೋರ್ ಅಜರ್ ವಾರ್ನಿಂಗ್‌ನಂತಹ ಕಾರ್ ಆಲರ್ಟ್‌ಗಳ ಮಾಹಿತಿಯನ್ನು ನೀಡುವ ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಪಡೆಯುತ್ತದೆ.

ಇತರ ವೈಶಿಷ್ಟ್ಯಗಳೆಂದರೆ ಕಲರ್ MID (ಮಲ್ಟಿ-ಇಂಫೊರ್ಮೆಶನ್‌ ಡಿಸ್‌ಪ್ಲೇ), ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್‌ನಲ್ಲಿ ಎತ್ತರ ಮತ್ತು ಹತ್ತಿರ ಹೊಂದಾಣಿಕೆ, ನೀಲಿ ಆಂಬಿಯೆಂಟ್ ಲೈಟಿಂಗ್, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಸ್ಮಾರ್ಟ್-ಕೀ ಮತ್ತು ಮಾರುತಿ ಸುಜುಕಿಯಲ್ಲಿ ಮೊದಲನೆಯ ಬಾರಿಗೆ ಇದರಲ್ಲಿ ಸನ್‌ರೂಫ್‌ನ್ನು ನೀಡಲಾಗುತ್ತಿದೆ. ಅಂತಿಮವಾಗಿ, ರಿಮೋಟ್ AC ಕಂಟ್ರೋಲ್ (ಆಟೋಮ್ಯಾಟಿಕ್‌), ಅಪಾಯದ ಬೆಳಕಿನ ಕಂಟ್ರೋಲ್‌, ಕಾರ್ ಟ್ರ್ಯಾಕಿಂಗ್, ಜಿಯೋ-ಫೆನ್ಸಿಂಗ್ ಮತ್ತು ಹೆಚ್ಚಿನದಕ್ಕೆ ಸಪೋರ್ಟ್‌ ಆಗುವ ಕನೆಕ್ಟೆಡ್‌ ಕಾರ್ ಟೆಕ್ ಸೂಟ್ ಇದೆ. ಬ್ರೆಝಾವು ಕಿಯಾ ಸೋನೆಟ್‌ನಂತಹ ವೆಂಟಿಲೇಟೆಡ್‌ ಸೀಟ್‌ಗಳನ್ನು ಪಡೆಯುವುದಿಲ್ಲ ಮತ್ತು ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿಯನ್ನು ಸಹ ಇದರಲ್ಲಿ ಮಿಸ್‌ ಆಗಿದೆ. 

ಹಿಂದಿನ ಸೀಟ್

ಬ್ರೆಜ್ಜಾದ ಶ್ಲಾಘನೀಯ ಸಂಗತಿಗಳೆಂದರೆ, ಆಗತ್ಯವಾಗಿ ಬೇಕಾಗುವ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು ಸುಧಾರಿಸಲಾಗಿದೆ. 6 ಅಡಿ ಎತ್ತರದ ಡ್ರೈವರ್‌ಗಳಿಗೂ ಸಾಕಾಗುವಷ್ಟು ಮೊಣಕಾಲು ಕೊಠಡಿಯನ್ನು ನೀಡಲಾಗುತ್ತಿದೆ ಮತ್ತು ಹೆಡ್‌ರೂಮ್ ಅದಕ್ಕಿಂತ ಎತ್ತರದ ವ್ಯಕ್ತಿಗೂ ಸಾಕು. ಸರಾಸರಿ ದೇಹಗಾತ್ರ ಹೊಂದಿರುವ ಪ್ರಯಾಣಿಕರಿಗೆ ಇದು ಯಾವಾಗಲೂ ಉತ್ತಮ 5-ಸೀಟರ್‌ ಕಾರು ಆಗಿತ್ತು, ಮತ್ತು ಈಗ ಇನ್ನೂ ಉತ್ತಮವಾಗಿದೆ. ಹಿಂಬದಿಯ ಬ್ಯಾಕ್‌ರೆಸ್ಟ್‌ ಅಗಲವಿರುವುದರಿಂದ ಪ್ರಯಾಣಿಕರಿಗೆ ಆರಾಮವಾಗಿದೆ.

ಹಿಂಬದಿ ಸೀಟಿನ ಪ್ರಯಾಣಿಕರಿಗೆ ಈಗ ಮೊದಲಿಗಿಂತಲೂ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ. ಮುಂಬದಿಯ ಎರಡೂ ಸೀಟ್‌ಬ್ಯಾಕ್‌ಗಳಲ್ಲಿ ಪಾಕೆಟ್‌ಗಳು, ಹಿಂಭಾಗದ ಆರ್ಮ್‌ರೆಸ್ಟ್ ನಲ್ಲಿ ಎರಡು ಕಪ್ ಹೋಲ್ಡರ್‌ಗಳು, ಹಿಂಭಾಗದ AC ವೆಂಟ್‌ಗಳು, ಎರಡು ಅಡ್ಜಸ್ಟ್‌ ಮಾಡಬಹುದಾದ ಹಿಂಬದಿ ಹೆಡ್‌ರೆಸ್ಟ್‌ಗಳು (ಮಧ್ಯದ ಪ್ರಯಾಣಿಕರು ಇದನ್ನು ಪಡೆಯುವುದಿಲ್ಲ) ಮತ್ತು ಎರಡು USB ಫಾಸ್ಟ್ ಚಾರ್ಜರ್‌ಗಳನ್ನು (ಟೈಪ್ A + ಟೈಪ್ C) ನೀಡಲಾಗುತ್ತಿದೆ.

ಪ್ರಾಯೋಗಿಕತೆ

ಡೋರ್ ಪಾಕೆಟ್‌ಗಳಲ್ಲಿ 1-ಲೀಟರ್ ಬಾಟಲಿಗಳು ಮತ್ತು ಕೆಲವು ವಿವಿಧ ವಸ್ತುಗಳನ್ನು ಇಡುವಷ್ಟು ಜಾಗವನ್ನು ಹೊಂದಿದೆ. ಹಾಗೆಯೇ Z+ ವೇರಿಯೆಂಟ್‌ನಲ್ಲಿ ಗ್ಲೋವ್‌ಬಾಕ್ಸ್ ಅನ್ನು ತಂಪಾಗಿಸಲಾಗುತ್ತದೆ ಮತ್ತು ಕಾರ್ ಡಾಕ್ಯುಮೆಂಟ್‌ಗಳು, ಒದ್ದೆಯಾಗಿರುವ ಒರೆಸುವ ಬಟ್ಟೆಗಳು ಮತ್ತು ನೀವು ತಂಪಾಗಿರಲು ಅಗತ್ಯವಿರುವ ಯಾವುದೇ ಔಷಧಿಗಳನ್ನು ಇಟ್ಟುಕೊಳ್ಳಬಹುದು. ಮುಂಭಾಗದ ಆರ್ಮ್‌ರೆಸ್ಟ್‌ನ ಒಳಗೆ ಸ್ಟೋರೆಜ್‌ಗೆ ಸ್ಥಳವಿದೆ, ಆದರೆ ಈ ಸ್ಲೈಡಿಂಗ್ ಆರ್ಮ್‌ರೆಸ್ಟ್ ಅನ್ನು ಟಾಪ್-ಎಂಡ್‌ ಮೊಡೆಲ್‌ ಆಗಿರುವ Z+ ವೆರಿಯೆಂಟ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಸುರಕ್ಷತೆ

ಸುಜುಕಿಯ ಜಾಗತಿಕ TECT ಪ್ಲಾಟ್‌ಫಾರ್ಮ್ ( ಹಾರ್ಟ್‌ಟೆಕ್‌ ಅಲ್ಲ) ಆಧರಿಸಿ, ಜಾಗತಿಕ NCAP 4-ಸ್ಟಾರ್ (ಮಕ್ಕಳ ರಕ್ಷಣೆಗಾಗಿ 5 ಸ್ಟಾರ್) ರೇಟಿಂಗ್‌ ಸಿಕ್ಕಿದ ಕಾರು ಬ್ರೆಝಾ, ಈಗ ಮೊದಲಿಗಿಂತ ಹೆಚ್ಚು ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿದೆ. ಎದುರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ISOFIX, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ESP ಮತ್ತು ಹಿಲ್-ಹೋಲ್ಡ್ ಸ್ಟ್ಯಾಂಡರ್ಡ್‌ ಆಗಿ ಬರುತ್ತವೆ. ಬ್ರೆಝಾದ ಟಾಪ್‌ ಎಂಡ್‌ ಮೊಡೆಲ್‌ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಆಟೋ-ಡಿಮ್ಮಿಂಗ್‌ IRVM ಅನ್ನು ಪಡೆಯುತ್ತದೆ.

ಇದನ್ನೂ ಓದಿ: ಗೊಂದಲಕ್ಕೀಡಾಗಬೇಡಿ! ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಟೊಯೋಟಾದ 2022 ರ ಮಾರುತಿ ಬ್ರೆಜ್ಜಾದ ಆವೃತ್ತಿಯಲ್ಲ 

ವೈಶಿಷ್ಟ್ಯಗಳ ಪಟ್ಟಿಯು ಪ್ರಬಲವಾಗಿದ್ದರೂ, ಕಾರ್ಯಗತಗೊಳಿಸುವಿಕೆಯು ಸರಿಯಾಗಿದೆ ಎಂದು ವರದಿ ಮಾಡಲು ನಮಗೆ ಸಂತೋಷವಾಗುತ್ತದೆ. ಉದಾಹರಣೆಗೆ, ಪಾರ್ಕಿಂಗ್ ಕ್ಯಾಮೆರಾ ಡೈನಾಮಿಕ್ ಮಾರ್ಗಸೂಚಿಗಳನ್ನು ಪಡೆಯುತ್ತದೆ ಮತ್ತು ರೆಸಲ್ಯೂಶನ್ ತೀಕ್ಷ್ಣವಾಗಿರುತ್ತದೆ.

ಬೂಟ್‌ನ ಸಾಮರ್ಥ್ಯ

ಇದು 328 ಲೀಟರ್‌ನಷ್ಟು ಬೂಟ್‌ ಸ್ಪೇಸ್‌ನ್ನು ಹೊಂದಿದ್ದು, ಈ ಸಂಖ್ಯೆ ನಿಮಗೆ ಬಹಳ ದೊಡ್ಡದು ಅನಿಸದಿರಬಹುದು, ಆದರೆ ಇದರ ಚೌಕಾಕಾರದ ಆಕಾರವು ದೊಡ್ಡ ಸೂಟ್‌ಕೇಸ್‌ಗಳನ್ನು ಇಡಲು ಸಹಾಯ ಮಾಡುತ್ತದೆ. ಸ್ವಚ್ಛಗೊಳಿಸುವ ಬಟ್ಟೆ ಅಥವಾ ಟೈರ್ ರಿಪೇರಿ ಕಿಟ್ ನಂತಹ ಸಣ್ಣ ವಸ್ತುಗಳನ್ನು ಇಡಲು ಬದಿಯಲ್ಲಿ ಸಣ್ಣ ಪಾಕೆಟ್‌ ಇದೆ. ಅದರೆ ಇದರಲ್ಲಿ ಟೈರ್‌ಗೆ ಗಾಳಿ ತುಂಬಿಸುವಂತಹ ಮೆಷಿನ್‌ಗಳನ್ನು ಇಡಲು ಇಲ್ಲಿ ಸಾಧ್ಯವಿಲ್ಲ. ಇದಕ್ಕೆ ಹೆಚ್ಚಿನ ಜಾಗವನ್ನು ಸೇರಿಸಲು ಹಿಂಬದಿಯ ಸೀಟ್‌ಗಳನ್ನು ಎರಡು ಮಾಡಬಹುದು ಅಥವಾ ಒಮ್ಮೆ ನೀವು ಸೀಟ್ ಬೇಸ್ ಅನ್ನು ಮೇಲಕ್ಕೆ ತಿರುಗಿಸಿ ಮತ್ತು ಬ್ಯಾಕ್‌ರೆಸ್ಟ್ ಅನ್ನು ಕೆಳಕ್ಕೆ ಇಳಿಸಿದಾಗ ಸೀಟನ್ನು 60:40 ಅನುಪಾತದಲ್ಲಿ ಮಡಚಬಹುದು.

ಕಾರ್ಯಕ್ಷಮತೆ

ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಇದು 1.5-ಲೀಟರ್‌, ನಾಲ್ಕು-ಸಿಲಿಂಡರ್ ನ್ಯಾಚುರಲಿ-ಅಸ್ಪಿರೆಟೆಡ್‌ ಎಂಜಿನ್‌ (K15C) ಆಗಿದ್ದು, ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ನಿಂದ ಸಹಾಯ ಮಾಡುತ್ತದೆ. 103PS ಮತ್ತು 137Nm ನಷ್ಟು ಶಕ್ತಿಯನ್ನು ಹೊರಹಾಕಲಿದ್ದು, ಬ್ರೌಷರ್‌ನಲ್ಲಿ ನೀಡಿರುವ ಅದರ ಔಟ್‌ಪುಟ್ ಕೋರ್ಸ್‌ಗೆ ಇದು ಸಮನಾಗಿರುತ್ತದೆ ಮತ್ತು ಇದು ಆನ್‌ ರೋಡ್‌ನ ಕಾರ್ಯಕ್ಷಮತೆಯಲ್ಲೂ ಪ್ರತಿಫಲಿಸುತ್ತದೆ.

ಎಂಜಿನ್  1.5-ಲೀಟರ್, 4 ಸಿಲಿಂಡರ್ ಪೆಟ್ರೋಲ್ ನೊಂದಿಗೆ ಮೈಲ್ಡ್‌ ಹೈಬ್ರಿಡ್‌
ಪವರ್  103 ಪಿಎಸ್‌
ಟಾರ್ಕ್‌  137 ಎನ್‌ಎಮ್‌
ಟ್ರಾನ್ಸ್‌ಮಿಶನ್‌ 5-ಸ್ಪೀಡ್ ಮಾನ್ಯುಯಲ್ | 6-ಸ್ಪೀಡ್ ಆಟೋಮ್ಯಾಟಿಕ್‌
ಘೋಷಿಸಿರುವ ಇಂಧನ-ದಕ್ಷತೆ  ಪ್ರತಿ ಲೀ.ಗೆ 19.89-20.15 ಕಿ.ಮೀ (ಮ್ಯಾನುಯಲ್‌) | ಪ್ರತಿ ಲೀ.ಗೆ 19.80 ಕಿ.ಮೀ (ಆಟೋಮ್ಯಾಟಿಕ್‌)
ಡ್ರೈವ್  ಫ್ರಂಟ್ ವೀಲ್ ಡ್ರೈವ್ 

ಈ ಎಂಜಿನ್ ಬಳಸಲು ತುಂಬಾ ಮೃದುವಾಗಿರುತ್ತದೆ ಮತ್ತು ವೇಗವು ಹೆಚ್ಚಾದಂತೆ ಕಾರ್ಯಕ್ಷಮತೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ. ಇದು ಸುಲಭವಾಗಿ 60-80kmph ವೇಗವನ್ನು ಪಡೆಯುತ್ತದೆ ಮತ್ತು ಇದು ಶಾಂತವಾದ ಡ್ರೈವಿಂಗ್‌ ಆಗಿರಲಿದೆ. ಸೌಮ್ಯ-ಹೈಬ್ರಿಡ್ ಸಹಾಯದಿಂದಾಗಿ, ನಿಧಾನದ ಡ್ರೈವಿಂಗ್‌ನ ಕಾರ್ಯಕ್ಷಮತೆಯು ಪ್ರಬಲವಾಗಿದೆ. ಇದು ನಗರದಲ್ಲಿನ ಟ್ರಾಫಿಕ್‌ನಲ್ಲಿ ಡ್ರೈವ್‌ ಮಾಡಲು ಅನುಕೂಲಕರವಾಗಿದೆ. ಆದಾಗಿಯೂ, ಅದರ ಟರ್ಬೊ-ಪೆಟ್ರೋಲ್ ಎಂಜಿನ್‌ನ ಜೊತೆಗೆ ಇದನ್ನು ಹೋಲಿಸಿದರೆ, ಈ ಎಂಜಿನ್‌ನ ಕಾರ್ಯಕ್ಷಮತೆಯ ಬಗ್ಗೆ ಅಷ್ಟೇನು ಕುತೂಹಲಕಾರಿ ಅಂಶಗಳಿಲ್ಲ. ಹೈ-ಸ್ಪೀಡ್‌ನ ವೇಗದ ಓವರ್‌ಟೇಕ್‌ಗಳಿಗೆ ಮೊದಲೇ ಯೋಜನೆ ಮಾಡುವ ಅಗತ್ಯವಿರುತ್ತದೆ ಮತ್ತು ಸಾಮಾನ್ಯವಾಗಿ ಗೇರ್‌ನ್ನು ಡೌನ್‌ಶಿಫ್ಟ್ ಮಾಡುವುದು ಸಹ ಅಗತ್ಯವಿರುತ್ತದೆ, ವಿಶೇಷವಾಗಿ ನೀವು ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದರೆ.

ಸ್ಟ್ಯಾಂಡರ್ಡ್ ಆಗಿರುವ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊರತಾಗಿ, ಬ್ರೆಝಾ ಈಗ ಪ್ಯಾಡಲ್-ಶಿಫ್ಟರ್‌ಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ್ನು ಸಹ ಪಡೆಯುತ್ತದೆ. ಈ ಟ್ರಾನ್ಸ್‌ಮಿಷನ್‌ ಬಳಸಲು ತುಂಬಾ ಅರ್ಥಗರ್ಭಿತವಾಗಿದೆ ಮತ್ತು ನಗರದ ಟ್ರಾಫಿಕ್‌ನಲ್ಲಿ ಅಥವಾ ರಾಷ್ಟ್ರಿಯ ಹೆದ್ದಾರಿಯಲ್ಲಿ ಡ್ರೈವ್‌ ಮಾಡುವಾಗ ಮನೆಯ ಅನುಭವವಾಗುತ್ತದೆ. ಕುತೂಹಲಕಾರಿಯಾಗಿ, ಇದು ಮ್ಯಾನುಯಲ್‌ನಲ್ಲಿ ನೀವು ಇರುವುದಕ್ಕಿಂತ ಹೆಚ್ಚು ಕಾಲ ಗೇರ್‌ಗಳನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ ಮತ್ತು ಸ್ಪಂದಿಸುವಿಕೆಯ ಕೊರತೆಯನ್ನು ಅನುಭವಿಸುವುದಿಲ್ಲ. ಇದು ಟ್ವಿನ್-ಕ್ಲಚ್/ಡಿಸಿಟಿಯಂತೆ ತ್ವರಿತವಾಗಿಲ್ಲ, ಆದರೆ ದೂರು ನೀಡಲು ನಿಮಗೆ ಕಾರಣವನ್ನು ನೀಡುವುದಿಲ್ಲ. ಅಗತ್ಯವಿದ್ದರೆ ಇದು ಒಂದೇ ಸಮಯದಲ್ಲಿ ಎರಡು ಗೇರ್‌ಗಳನ್ನು ಬಿಡುತ್ತದೆ ಮತ್ತು ಅದನ್ನು ಮಾಡುವಾಗ ಶಿಫ್ಟ್-ಶಾಕ್ ಅನ್ನು ಚೆನ್ನಾಗಿ ನಿಯಂತ್ರಿಸುತ್ತದೆ.

ಗೇರ್ ಲಿವರ್‌ನೊಂದಿಗೆ ಯಾವುದೇ ಮಾನ್ಯುಯಲ್/ಟಿಪ್ಟ್ರಾನಿಕ್-ಶೈಲಿಯ ಶಿಫ್ಟಿಂಗ್ ಇಲ್ಲದಿರುವುದರಿಂದ ಪ್ಯಾಡಲ್-ಶಿಫ್ಟರ್‌ಗಳು ನೀವು ಹೊಂದಿರುವ ಏಕೈಕ ಮ್ಯಾನುಯಲ್‌ ಕಂಟ್ರೋಲ್‌ ಆಗಿದೆ. ಪ್ಯಾಡಲ್‌ನೊಂದಿಗೆ ಡೌನ್‌ಶಿಫ್ಟ್ ಮಾಡಿ, ಥ್ರೊಟಲ್‌ಗೆ ಹೆಚ್ಚಿನ ಕೆಲಸವನ್ನು ಕೊಟ್ಟಾಗ ಇದು ಗೇರ್‌ನಲ್ಲಿ ಉಳಿಯುತ್ತದೆ. ನೀವು ಗೇರ್‌ ಲಿವರ್ ಅನ್ನು ಮ್ಯಾನುಯಲ್‌ ಮೋಡ್‌ಗೆ ಸ್ಲಾಟ್ ಮಾಡಬಹುದು, ಅಲ್ಲಿ ಗೇರ್‌ ಎಂದಿಗೂ ಆಟೋಮ್ಯಾಟಿಕ್‌ ಆಗಿ ಮೇಲಕ್ಕೆ ಹೋಗುವುದಿಲ್ಲ, ಇದು ವಿಶೇಷವಾಗಿ ಎತ್ತರವನ್ನು ಹತ್ತುವ ಸಮಯದಲ್ಲಿ ಸೂಕ್ತವಾಗಿ ಬಳಕೆಯಾಗುತ್ತದೆ.

ಎರಡೂ ಟ್ರಾನ್ಸ್‌ಮಿಶನ್‌ಗೆ ಪ್ರತಿ ಲೀ.ಗೆ ಸರಿಸುಮಾರು 20 ಕಿ.ಮೀ ನಷ್ಟು ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ)- ರೇಟೆಡ್ ಇಂಧನ ದಕ್ಷತೆಯ ಅಂಕಿಅಂಶಗಳು ಆಕರ್ಷಕವಾಗಿವೆ. ಹೆದ್ದಾರಿಯಲ್ಲಿ, ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಚಾಲನಾ ವೆಚ್ಚವು ಗಮನಾರ್ಹವಾಗಿ ಕಡಿಮೆ ಇರುತ್ತದೆ ಎಂದು ಸಾಬೀತುಪಡಿಸಬೇಕಾಗಿದೆ. ಮ್ಯಾನ್ಯುವಲ್ ಟಾಪ್ ಗೇರ್‌ನಲ್ಲಿ 100kmph ವೇಗದಲ್ಲಿ ಸಾಗುವಾಗ rpm ಸುಮಾರು 3000 ದಷ್ಟಿರುತ್ತದೆ. ಈ ಗೇರ್‌ ಮತ್ತು ವೇಗವನ್ನು ಗಮನಿಸುವಾಗ ಇದು ಸ್ವಲ್ಪ ಹೆಚ್ಚು ಎನ್ನಬಹುದು. ಆದರೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಈ ವೇಗವು 2000rpm ಗಿಂತಲೂ ಕಡಿಮೆಯಿರುತ್ತದೆ. ನೀವು ನಗರ ಮತ್ತು ಇಂಟರ್-ಸಿಟಿ ಡ್ರೈವ್‌ಗಳಿಗಾಗಿ ಉತ್ತಮ ಆಲ್‌ರೌಂಡರ್‌ಗಳನ್ನು ನೋಡುತ್ತಿದ್ದರೆ, ನಾವು ಆಟೋಮ್ಯಾಟಿಕ್‌ ನ್ನು ನಿಮಗೆ ಸಲಹೆ ನೀಡುತ್ತೇವೆ.

ರೈಡ್ ಅಂಡ್ ಹ್ಯಾಂಡಲಿಂಗ್

ಬ್ರೆಝಾವು ಸವಾರಿಯ ಗುಣಮಟ್ಟ ಮತ್ತು ನಿರ್ವಹಣೆಯ ಉತ್ತಮ ಸಮತೋಲನವನ್ನು ನೀಡುತ್ತದೆ. ಎದುರು ಸೀಟಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೀಕ್ಷ್ಣವಾದ ಉಬ್ಬುಗಳಲ್ಲಿ ಯಾವುದೇ ರೀತಿಯ ಅನುಭವವಾಗುವುದಿಲ್ಲ. ಹಾಗೆಯೇ ಕಾರು ಏರಿಳಿತದ ರಸ್ತೆಗಳಲ್ಲಿಯೂ ಸಹ ಶಾಂತತೆಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಇದು 100kmph ವೇಗದಲ್ಲಿಯೂ ಸ್ಥಿರವಾಗಿರುತ್ತದೆ. ವಿಟಾರಾ ಬ್ರೆಜ್ಜಾದ ರೈಡ್ ನ ಗುಣಮಟ್ಟವನ್ನು ಆರಂಭದಲ್ಲಿ ಸ್ಪೋರ್ಟಿಯರ್/ಗಟ್ಟಿಯಾಗಿ ನೀಡಲಾಗಿದ್ದರೂ, ಅದು ಈಗ ಹೆಚ್ಚು ಬ್ಯಾಲೆನ್ಸ್‌ ಆಗಿದೆ. 80-100kmph ವೇಗದಲ್ಲಿ ಸಾಗುವಾಗ ಕೆಲವೊಮ್ಮೆ ನಿಮಗೆ ಗಾಳಿಯ ಶಬ್ದವು ಕೇಳಬಹುದು. ಅದರೆ ಬ್ರೆಝಾ ಮೊದಲಿಗಿಂತ ಸ್ವಲ್ಪ ಹೆಚ್ಚು ಶಬ್ದ ನಿರೋಧನವನ್ನು ಹೊಂದಿದೆ.

ರೂಪಾಂತರಗಳು

 2022 ಮಾರುತಿ ಸುಜುಕಿ ಬ್ರೆಝಾವು LXi, VXi, ZXi ಮತ್ತು ZXi+ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ  ಲಭ್ಯವಿದೆ. ಬೇಸ್‌ ವೇರಿಯೆಂಟ್‌ ಆಗಿರುವ LXi ಯನ್ನು ಹೊರತುಪಡಿಸಿ, ಉಳಿದ ಎಲ್ಲಾ ವೇರಿಯೆಂಟ್‌ಗಳು ಒಪ್ಷನಲ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ನೊಂದಿಗೆ ಲಭ್ಯವಿದೆ. ಯಾವ  ವೇರಿಯೆಂಟ್‌ ನಿಮಗೆ ಸೂಕ್ತವಾಗಿದೆ ಮತ್ತು ಯಾಕೆ ಎಂಬುದರ ಕುರಿತು ವಿವರವಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ವರ್ಡಿಕ್ಟ್

ಮಾರುತಿ ಸುಜುಕಿ ಬ್ರೆಝಾ, ಪ್ರಾಯೋಗಿಕತೆ ಮತ್ತು ಸೌಕರ್ಯಗಳ ಬಲವಾದ ಮೂಲಭೂತ ಅಂಶಗಳನ್ನು ನಿರ್ವಹಿಸುತ್ತದೆ. ಆದರೆ ಈಗ ಬಲವಾದ ಟೆಕ್ ಪ್ಯಾಕೇಜ್, ಹೆಚ್ಚಿನ ಸುರಕ್ಷತೆ ವೈಶಿಷ್ಟ್ಯಗಳು ಮತ್ತಷ್ಟು ಉತ್ತಮ ಸ್ವಯಂಚಾಲಿತ ಪ್ರಸರಣವನ್ನು ಹೊಂದಿರಲಿದೆ.ಝೆಡ್ ಮತ್ತು ಝೆಡ್ ಪ್ಲಸ್  ರೂಪಾಂತರಗಳಲ್ಲಿ ಪ್ಯಾಕೇಜಿಂಗ್ ಪ್ರಬಲವಾಗಿದ್ದರೂ, ಇದು ಎಲ್  ಮತ್ತು ವಿ ನಲ್ಲಿಯೂ ಯೋಗ್ಯವಾದ ಮೌಲ್ಯವನ್ನು ನೀಡುತ್ತದೆ. ಆದರೆ ನೀವು ಹೆಚ್ಚಿನ ಬೆಲೆಯನ್ನು ಪರಿಗಣಿಸಿದಾಗ ಅದರಲ್ಲೂ ವಿಶೇಷವಾಗಿ ಉನ್ನತ ರೂಪಾಂತರಗಳಲ್ಲಿ ಪ್ರಮುಖವಾಗಿ ಅದರ ಪ್ರತಿಸ್ಪರ್ಧಿಗಳು ಕಡಿಮೆ ಹಣಕ್ಕೆ  ಪೆಟ್ರೋಲ್ ಮತ್ತು ಡೀಸೆಲ್‌ ಟರ್ಬೋಗಳನ್ನು ವಿತರಿಸಿದಾಗ ಬ್ರೆಝಾ ಉತ್ತಮವಾದ ಆಂತರಿಕ ಗುಣಮಟ್ಟ ಮತ್ತು ಹೆಚ್ಚು ಉತ್ತೇಜಕ ಡ್ರೈವ್ ಆಯ್ಕೆಗಳನ್ನು ನೀಡಬೇಕು. 

ಆದರೆ ಒಟ್ಟಾರೆಯಾಗಿ ಬ್ರೆಝಾ ಈಗ ಒಂದು ಕಾರು ಆಗಿದ್ದು ಅದು ಕುಟುಂಬದಲ್ಲಿ ವಯಸ್ಕರು ಮತ್ತು ಮಕ್ಕಳು ಇಬ್ಬರನ್ನೂ ತೃಪ್ತಿಪಡಿಸುತ್ತದೆ. 

ಮಾರುತಿ ಬ್ರೆಜ್ಜಾ

ನಾವು ಇಷ್ಟಪಡುವ ವಿಷಯಗಳು

  • ಅಗಲವಾದ ಹಿಂಭಾಗದ ಸೀಟ್‌ನೊಂದಿಗೆ ವಿಶಾಲವಾದ ಒಳ ವಿನ್ಯಾಸ. ಉತ್ತಮ 5-ಆಸನಗಳು.
  • ಆರಾಮದಾಯಕ ಸವಾರಿ ಗುಣಮಟ್ಟ
  • ಕಾಂಪ್ಯಾಕ್ಟ್ ಆಯಾಮಗಳು ಮತ್ತು ಬೆಳಕಿನ ನಿಯಂತ್ರಣಗಳು ಇದನ್ನು ಉತ್ತಮ ಸಿಟಿ ಕಾರ್ ಅಂತಾ ಹೇಳುತ್ತದೆ.
  • ವೈಶಿಷ್ಟ್ಯಗಳ ವಿಸ್ತಾರವಾದ ಪಟ್ಟಿ: ಹೆಡ್ಸ್-ಅಪ್ ಡಿಸ್ ಪ್ಲೇ, 360ಡಿಗ್ರಿ ಕ್ಯಾಮೆರಾ, 9 ಇಂಚಿನ ಟಚ್‌ಸ್ಕ್ರೀನ್, ಸನ್‌ರೂಫ್ ಮತ್ತು ಇನ್ನಷ್ಟು

ನಾವು ಇಷ್ಟಪಡದ ವಿಷಯಗಳು

  • ಬೆಲೆಗೆ ಒಳ ವಿನ್ಯಾಸ ಗುಣಮಟ್ಟ ಉತ್ತಮವಾಗಿರಬೇಕು.
  • ಅನೇಕ ಪರ್ಯಾಯಗಳಂತೆ ಯಾವುದೇ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿಲ್ಲ.
  • ಎಂಜಿನ್ ಉತ್ತಮ ಬಳಕೆಯನ್ನು ನೀಡುತ್ತದೆ ಆದರೆ ಅತ್ಯಾಕರ್ಷಕವಾಗಿದೆ ಅಂತಾ ಅನ್ನಿಸುವುದಿಲ್ಲ.

ಒಂದೇ ರೀತಿಯ ಕಾರುಗಳೊಂದಿಗೆ ಬ್ರೆಜ್ಜಾ ಅನ್ನು ಹೋಲಿಕೆ ಮಾಡಿ

Car Nameಮಾರುತಿ ಬ್ರೆಜ್ಜಾಟಾಟಾ ನೆಕ್ಸ್ಂನ್‌ಮಾರುತಿ ಫ್ರಾಂಕ್ಸ್‌ಹುಂಡೈ ಕ್ರೆಟಾಹುಂಡೈ ವೆನ್ಯೂಕಿಯಾ ಸೊನೆಟ್ಮಹೀಂದ್ರ ಎಕ್ಸ್‌ಯುವಿ300ಟಾಟಾ ಪಂಚ್‌ಮಾರುತಿ ಬಾಲೆನೋಮಾರುತಿ ಎರ್ಟಿಗಾ
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
577 ವಿರ್ಮಶೆಗಳು
498 ವಿರ್ಮಶೆಗಳು
449 ವಿರ್ಮಶೆಗಳು
261 ವಿರ್ಮಶೆಗಳು
342 ವಿರ್ಮಶೆಗಳು
65 ವಿರ್ಮಶೆಗಳು
2426 ವಿರ್ಮಶೆಗಳು
1123 ವಿರ್ಮಶೆಗಳು
464 ವಿರ್ಮಶೆಗಳು
511 ವಿರ್ಮಶೆಗಳು
ಇಂಜಿನ್1462 cc1199 cc - 1497 cc 998 cc - 1197 cc 1482 cc - 1497 cc 998 cc - 1493 cc 998 cc - 1493 cc 1197 cc - 1497 cc1199 cc1197 cc 1462 cc
ಇಂಧನಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿ
ಹಳೆಯ ಶೋರೂಮ್ ಬೆಲೆ8.34 - 14.14 ಲಕ್ಷ8.15 - 15.80 ಲಕ್ಷ7.51 - 13.04 ಲಕ್ಷ11 - 20.15 ಲಕ್ಷ7.94 - 13.48 ಲಕ್ಷ7.99 - 15.75 ಲಕ್ಷ7.99 - 14.76 ಲಕ್ಷ6.13 - 10.20 ಲಕ್ಷ6.66 - 9.88 ಲಕ್ಷ8.69 - 13.03 ಲಕ್ಷ
ಗಾಳಿಚೀಲಗಳು2-662-66662-622-62-4
Power86.63 - 101.64 ಬಿಹೆಚ್ ಪಿ113.31 - 118.27 ಬಿಹೆಚ್ ಪಿ76.43 - 98.69 ಬಿಹೆಚ್ ಪಿ113.18 - 157.57 ಬಿಹೆಚ್ ಪಿ81.8 - 118.41 ಬಿಹೆಚ್ ಪಿ81.8 - 118 ಬಿಹೆಚ್ ಪಿ108.62 - 128.73 ಬಿಹೆಚ್ ಪಿ72.41 - 86.63 ಬಿಹೆಚ್ ಪಿ76.43 - 88.5 ಬಿಹೆಚ್ ಪಿ86.63 - 101.64 ಬಿಹೆಚ್ ಪಿ
ಮೈಲೇಜ್17.38 ಗೆ 19.89 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್20.01 ಗೆ 22.89 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್24.2 ಕೆಎಂಪಿಎಲ್-20.1 ಕೆಎಂಪಿಎಲ್18.8 ಗೆ 20.09 ಕೆಎಂಪಿಎಲ್22.35 ಗೆ 22.94 ಕೆಎಂಪಿಎಲ್20.3 ಗೆ 20.51 ಕೆಎಂಪಿಎಲ್

ಮಾರುತಿ ಬ್ರೆಜ್ಜಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಮಾರುತಿ ಬ್ರೆಜ್ಜಾ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ577 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (577)
  • Looks (178)
  • Comfort (236)
  • Mileage (193)
  • Engine (78)
  • Interior (89)
  • Space (70)
  • Price (109)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • Comfortable Car

    I have purchased this car on November 2023, till now drive 9000km and my experience is very good. I ...ಮತ್ತಷ್ಟು ಓದು

    ಇವರಿಂದ navjeet kumar
    On: Apr 23, 2024 | 284 Views
  • It Is Well Balanced Car.

    It is well balanced car. It has everything which is required for a normal person who wants good mile...ಮತ್ತಷ್ಟು ಓದು

    ಇವರಿಂದ aman mishra
    On: Apr 22, 2024 | 311 Views
  • for Vxi CNG

    The Car Is Amazing

    The car exhibits remarkable stability even at speeds of 110-120 kmph, feeling effortless and lacking...ಮತ್ತಷ್ಟು ಓದು

    ಇವರಿಂದ ashish shantilal parmar
    On: Apr 20, 2024 | 211 Views
  • Maruti Brezza Compact SUV With Dynamic Design

    The Maruti Brezza is a compact SUV that combines public transportation with active functionality to ...ಮತ್ತಷ್ಟು ಓದು

    ಇವರಿಂದ balasubramanian
    On: Apr 17, 2024 | 554 Views
  • Best Car

    The optimal choice for driving with an affordable price tag, boasting the best available color optio...ಮತ್ತಷ್ಟು ಓದು

    ಇವರಿಂದ meg
    On: Apr 14, 2024 | 330 Views
  • ಎಲ್ಲಾ ಬ್ರೆಜ್ಜಾ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಬ್ರೆಜ್ಜಾ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 19.89 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 19.8 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 25.51 ಕಿಮೀ / ಕೆಜಿ.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌19.89 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌19.8 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌25.51 ಕಿಮೀ / ಕೆಜಿ

ಮಾರುತಿ ಬ್ರೆಜ್ಜಾ ವೀಡಿಯೊಗಳು

  • Maruti Brezza 2022 Review In Hindi | Pros and Cons Explained | क्या गलत, क्या सही?
    5:19
    Maruti Brezza 2022 Review In Hindi | Pros and Cons Explained | क्या गलत, क्या सही?
    10 ತಿಂಗಳುಗಳು ago | 77.2K Views
  • Maruti Brezza 2022 LXi, VXi, ZXi, ZXi+: All Variants Explained in Hindi
    8:39
    Maruti Brezza 2022 LXi, VXi, ZXi, ZXi+: All Variants Explained in Hindi
    10 ತಿಂಗಳುಗಳು ago | 7K Views

ಮಾರುತಿ ಬ್ರೆಜ್ಜಾ ಬಣ್ಣಗಳು

  • ಪರ್ಲ್ ಆರ್ಕ್ಟಿಕ್ ವೈಟ್
    ಪರ್ಲ್ ಆರ್ಕ್ಟಿಕ್ ವೈಟ್
  • exuberant ನೀಲಿ
    exuberant ನೀಲಿ
  • ಪರ್ಲ್ ಮಿಡ್ನೈಟ್ ಬ್ಲ್ಯಾಕ್
    ಪರ್ಲ್ ಮಿಡ್ನೈಟ್ ಬ್ಲ್ಯಾಕ್
  • ಬ್ರೇವ್ ಕಾಕಿ
    ಬ್ರೇವ್ ಕಾಕಿ
  • ಬ್ರೇವ್ ಕಾಕಿ with ಮುತ್ತು ಆರ್ಕ್ಟಿಕ್ ವೈಟ್
    ಬ್ರೇವ್ ಕಾಕಿ with ಮುತ್ತು ಆರ್ಕ್ಟಿಕ್ ವೈಟ್
  • ಮಾಗ್ಮಾ ಗ್ರೇ
    ಮಾಗ್ಮಾ ಗ್ರೇ
  • sizzling ಕೆಂಪು with ಮಧ್ಯರಾತ್ರಿ ಕಪ್ಪು roof
    sizzling ಕೆಂಪು with ಮಧ್ಯರಾತ್ರಿ ಕಪ್ಪು roof
  • sizzling ಕೆಂಪು
    sizzling ಕೆಂಪು

ಮಾರುತಿ ಬ್ರೆಜ್ಜಾ ಚಿತ್ರಗಳು

  • Maruti Brezza Front Left Side Image
  • Maruti Brezza Rear Left View Image
  • Maruti Brezza Grille Image
  • Maruti Brezza Headlight Image
  • Maruti Brezza Taillight Image
  • Maruti Brezza Side Mirror (Body) Image
  • Maruti Brezza Wheel Image
  • Maruti Brezza Hill Assist Image
space Image

ಮಾರುತಿ ಬ್ರೆಜ್ಜಾ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the engine CC of Maruti Brezza?

Devyani asked on 16 Apr 2024

The Maruti Brezza has 1 Petrol Engine and 1 CNG Engine on offer. The Petrol engi...

ಮತ್ತಷ್ಟು ಓದು
By CarDekho Experts on 16 Apr 2024

What is the engine cc of Maruti Brezza?

Anmol asked on 10 Apr 2024

The Maruti Brezza has 1 Petrol Engine and 1 CNG Engine on offer. The Petrol engi...

ಮತ್ತಷ್ಟು ಓದು
By CarDekho Experts on 10 Apr 2024

What is the Transmission Type of Maruti Brezza?

Vikas asked on 24 Mar 2024

The Maruti Brezza is available with Manual and Automatic Transmission.

By CarDekho Experts on 24 Mar 2024

What is the max power of Maruti Brezza?

Vikas asked on 10 Mar 2024

The max power of Maruti Brezza is 101.64bhp@6000rpm.

By CarDekho Experts on 10 Mar 2024

What is the max power of Maruti Brezza?

Prakash asked on 8 Feb 2024

The Maruti Brezza has a max power of 86.63 - 101.64 bhp.

By CarDekho Experts on 8 Feb 2024
space Image
ಮಾರುತಿ ಬ್ರೆಜ್ಜಾ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ಭಾರತ ರಲ್ಲಿ ಬ್ರೆಜ್ಜಾ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 9.95 - 17.38 ಲಕ್ಷ
ಮುಂಬೈRs. 9.69 - 16.63 ಲಕ್ಷ
ತಳ್ಳುRs. 9.69 - 16.63 ಲಕ್ಷ
ಹೈದರಾಬಾದ್Rs. 9.86 - 17.18 ಲಕ್ಷ
ಚೆನ್ನೈRs. 9.83 - 17.38 ಲಕ್ಷ
ಅಹ್ಮದಾಬಾದ್Rs. 9.27 - 15.78 ಲಕ್ಷ
ಲಕ್ನೋRs. 9.43 - 16.33 ಲಕ್ಷ
ಜೈಪುರRs. 9.61 - 16.30 ಲಕ್ಷ
ಪಾಟ್ನಾRs. 9.68 - 16.47 ಲಕ್ಷ
ಚಂಡೀಗಡ್Rs. 9.44 - 15.93 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience