Maruti Brezzaದಲ್ಲಿ ಅರ್ಬಾನೊ ಎಡಿಷನ್ ಅಕ್ಸಸೆರಿ ಪ್ಯಾಕ್ ಪರಿಚಯ: ಪ್ರಸ್ತುತ Lxi ಮತ್ತು Vxi ಮಾಡೆಲ್‌ಗಳಲ್ಲಿ ಮಾತ್ರ ಲಭ್ಯ
ಮಾರುತಿ ಬ್ರೆಜ್ಜಾ ಗಾಗಿ ansh ಮೂಲಕ ಜುಲೈ 08, 2024 04:16 pm ರಂದು ಪ್ರಕಟಿಸಲಾಗಿದೆ
- 136 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಶೇಷ ಎಡಿಷನ್ ಡೀಲರ್ ಫಿಟ್ ಮಾಡಿರುವ ಅಕ್ಸಸೆರಿಗಳಾದ ರಿವರ್ಸಿಂಗ್ ಕ್ಯಾಮೆರಾ, ಸ್ಕಿಡ್ ಪ್ಲೇಟ್‌ಗಳು ಮತ್ತು ವೀಲ್ ಆರ್ಚ್ ಕಿಟ್ ನಂತಹ ಹೊಸ ಫೀಚರ್ ಗಳನ್ನು ಒಳಗೊಂಡಿದೆ
-
Lxi ಅರ್ಬಾನೊ ಎಡಿಷನ್ ಮತ್ತು Vxi ಸ್ಪೆಷಲ್ ಎಡಿಷನ್ ಕ್ರಮವಾಗಿ ರೂ. 42,000 ಮತ್ತು ರೂ. 18,500 ಹೆಚ್ಚುವರಿ ಬೆಲೆಗೆ ಸಿಗುತ್ತದೆ
-
ಎರಡೂ ವಿಶೇಷ ಎಡಿಷನ್ ಗಳು ಎಕ್ಸ್ಟಿರಿಯಾರ್ ಸ್ಟೈಲಿಂಗ್ ಆಕ್ಸಸೇರಿಗಳನ್ನು ಪಡೆಯುತ್ತವೆ.
-
Vxi ಅರ್ಬಾನೊ ಎಡಿಷನ್ ಇಂಟೀರಿಯರ್ ಸ್ಟೈಲಿಂಗ್ ಕಿಟ್ ಅನ್ನು ಕೂಡ ಪಡೆಯುತ್ತದೆ.
ಮಾರುತಿ ಬ್ರೆಝಾ ಈಗ ಅರ್ಬಾನೋ ಎಡಿಷನ್ ಎಂಬ ಹೊಸ ವಿಶೇಷ ಎಡಿಷನ್ ಅನ್ನು ನೀಡುತ್ತಿದೆ, ಇದು ಹಲವಾರು ಫಂಕ್ಷನಲ್ ಮತ್ತು ಕಾಸ್ಮೆಟಿಕ್ ಆಕ್ಸಸೇರಿಗಳೊಂದಿಗೆ ಬರುತ್ತದೆ. ಈ ಎಡಿಷನ್ SUV ಯ ಬೇಸ್-ಸ್ಪೆಕ್ Lxi ಮತ್ತು ಬೇಸ್ ಗಿಂತ ಒಂದು ಮಟ್ಟ ಮೇಲಿರುವ Vxi ಟ್ರಿಮ್‌ನೊಂದಿಗೆ ಲಭ್ಯವಿದೆ ಮತ್ತು ಎರಡೂ ವೇರಿಯಂಟ್ ಗಳು ವಿಭಿನ್ನ ಅಕ್ಸಸೇರಿ ಸೆಟ್ ಅನ್ನು ಪಡೆಯುತ್ತವೆ. ಈ ವಿಶೇಷ ಎಡಿಷನ್ ನ ವಿವರಗಳು ಇಲ್ಲಿದೆ.
ಬ್ರೆಜ್ಜಾ ಅರ್ಬಾನೊ Lxi
ಯುಟಿಲಿಟಿ ಅಕ್ಸಸೆರಿಗಳು |
ಕ್ಯಾಮೆರಾ ಮಲ್ಟಿಮೀಡಿಯಾ |
ಕಿಟ್ ಬೆಲೆ: ರೂ. 42,000 |
ಟಚ್‌ಸ್ಕ್ರೀನ್ ಸ್ಟಿರಿಯೊ |
||
ಸ್ಪೀಕರ್ ಗಳು |
||
ಫಾಗ್ ಲ್ಯಾಂಪ್ ಕಿಟ್ |
||
ಸ್ಟೈಲಿಂಗ್ ಅಕ್ಸಸೆರಿಗಳು |
ಫ್ರಂಟ್ ಸ್ಕಿಡ್ ಪ್ಲೇಟ್ |
|
ರಿಯರ್ ಸ್ಕಿಡ್ ಪ್ಲೇಟ್ |
||
ಫಾಗ್ ಲ್ಯಾಂಪ್ ಗಾರ್ನಿಶ್ |
||
ಫ್ರಂಟ್ ಗ್ರಿಲ್ ಗಾರ್ನಿಶ್ ಕ್ರೋಮ್ |
||
ಬಾಡಿ ಸೈಡ್ ಮೌಲ್ಡಿಂಗ್ |
||
ವೀಲ್ ಆರ್ಚ್ ಕಿಟ್ |
ಈ ವಿಶೇಷ ಎಡಿಷನ್ ನಲ್ಲಿ ನೀಡಿರುವ ಕಾಸ್ಮೆಟಿಕ್ ಅಕ್ಸಸೆರಿಗಳೊಂದಿಗೆ, ಬ್ರೆಜ್ಜಾದ ಬೇಸ್ ಮಾಡೆಲ್ ಹೆಚ್ಚು ಪ್ರೀಮಿಯಂ ಲುಕ್ ಅನ್ನು ಪಡೆಯುತ್ತದೆ. ವಿಶೇಷ ಎಡಿಷನ್ ಸ್ಕಿಡ್ ಪ್ಲೇಟ್‌ಗಳು, ಬಾಡಿ ಸೈಡ್ ಮೋಲ್ಡಿಂಗ್ ಮತ್ತು ವೀಲ್ ಆರ್ಚ್ ಕಿಟ್ ಅನ್ನು ಕೂಡ ಪಡೆಯುತ್ತದೆ
ಇದನ್ನು ಕೂಡ ಓದಿ: ಮಾರುತಿ ಜಿಮ್ನಿ ಗೆ ಹೋಲಿಸಿದರೆ ಮಹೀಂದ್ರ ಥಾರ್ 5 ಡೋರ್ ನೀಡಬಹುದಾದ 7 ಫೀಚರ್ ಗಳು.
ವಿಶೇಷ ಎಡಿಷನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಫ್ರಂಟ್ ಫಾಗ್ ಲ್ಯಾಂಪ್ ಗಳನ್ನು ಕೂಡ ಒಳಗೊಂಡಿದೆ, ಇದು ಬೇಸ್ Lxi ವೇರಿಯಂಟ್ ನಲ್ಲಿ ಲಭ್ಯವಿಲ್ಲ.
ಬ್ರೆಜ್ಜಾ ಅರ್ಬಾನೊ Vxi
ಯುಟಿಲಿಟಿ ಅಕ್ಸಸೆರಿಗಳು |
ರಿಯರ್ ವ್ಯೂ ಕ್ಯಾಮೆರಾ |
ಕಿಟ್ ಬೆಲೆ: ರೂ. 18,500 |
ಫಾಗ್ ಲ್ಯಾಂಪ್ ಗಳು |
||
ಸ್ಟೈಲಿಂಗ್ ಅಕ್ಸಸೆರಿಗಳು |
ಇಂಟೀರಿಯರ್ ಸ್ಟೈಲಿಂಗ್ ಕಿಟ್ |
|
ಬಾಡಿ ಸೈಡ್ ಮೌಲ್ಡಿಂಗ್ |
||
ವೀಲ್ ಆರ್ಚ್ ಕಿಟ್ |
||
ಮೆಟಲ್ ಸಿಲ್ ಗಾರ್ಡ್ |
||
ನಂಬರ್ ಪ್ಲೇಟ್ ಗಾರ್ನಿಶ್ |
||
3D ಫ್ಲೋರ್ ಮ್ಯಾಟ್ ಗಳು |
ಮತ್ತೊಂದೆಡೆ, Vxi ವೇರಿಯಂಟ್ ರಿಯರ್‌ವ್ಯೂ ಕ್ಯಾಮೆರಾವನ್ನು ಪಡೆಯುತ್ತದೆ, ಮತ್ತು ವಿಶೇಷ ಎಡಿಷನ್ ಕ್ಯಾಬಿನ್‌ನ ಲುಕ್ ಅನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಇದು ವುಡನ್ ಇನ್ಸರ್ಟ್ ನೊಂದಿಗೆ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ನೀಡುತ್ತದೆ ಮತ್ತು ಇದು ವಿಭಿನ್ನ 3D ಫ್ಲೋರ್ ಮ್ಯಾಟ್‌ಗಳೊಂದಿಗೆ ಬರುತ್ತದೆ. ಇದು ಬಾಡಿ ಸೈಡ್ ಮೋಲ್ಡಿಂಗ್ ಮತ್ತು ವೀಲ್ ಆರ್ಚ್ ಕಿಟ್‌ನಂತಹ ಕೆಲವು ಎಕ್ಸ್ಟಿರಿಯರ್ ಕಾಸ್ಮೆಟಿಕ್ ಬದಲಾವಣೆಗಳನ್ನು ಕೂಡ ಪಡೆಯುತ್ತದೆ.
ಪವರ್‌ಟ್ರೇನ್
ಬ್ರೆಝಾ 103 PS ಮತ್ತು 137 Nm ಉತ್ಪಾದಿಸುವ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಅದೇ ಎಂಜಿನ್ 88 PS ಮತ್ತು 121.1 Nm ಅನ್ನು ಉತ್ಪಾದಿಸುವ CNG ವರ್ಷನ್ ನಲ್ಲಿ ಕೂಡ ಬರುತ್ತದೆ ಮತ್ತು ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.
ಫೀಚರ್ ಗಳು ಮತ್ತು ಸುರಕ್ಷತೆ
ಫೀಚರ್ ಗಳನ್ನು ನೋಡಿದರೆ, ಈ ವೇರಿಯಂಟ್ ಗಳು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು, ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳೊಂದಿಗೆ ಬರುತ್ತವೆ. Vxi ವೇರಿಯಂಟ್ ಹಿಂಭಾಗದ AC ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಕೂಡ ನೀಡುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಬ್ರೆಝಾ Lxi ರೂ. 8.34 ಲಕ್ಷದಿಂದ ಆರಂಭವಾಗುತ್ತದೆ, ಹಾಗೆಯೇ Vxi ವೇರಿಯಂಟ್ ಗಳ ಬೆಲೆಯು ರೂ 9.69 ಲಕ್ಷದಿಂದ ರೂ 11.09 ಲಕ್ಷದ ನಡುವೆ ಇದೆ ಮತ್ತು ಹೆಚ್ಚುವರಿ ಅಕ್ಸಸೇರಿಗಳನ್ನು ನೀಡುವ ವಿಶೇಷ ಎಡಿಷನ್ ಗಳಿಗೆ ರೂ. 42,000 ವರೆಗೆ ಪ್ರೀಮಿಯಂ ಬೆಲೆಯಿದೆ. ಮಾರುತಿಯ ಈ ಸಬ್ -4m SUV ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV 3XO ಮತ್ತು ಕಿಯಾ ಸೋನೆಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಮಾರುತಿ ಬ್ರೆಝಾ ಆನ್ ರೋಡ್ ಬೆಲೆ