ಮಾರುತಿ ಆಲ್ಟೊ K10 AMT

Published On ಮೇ 14, 2019 By prithvi for ಮಾರುತಿ ಆಲ್ಟೊ ಕೆ10

ಗ್ರಾಹಕರಿಗಾಗಿ ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾರುತಿ ಸುಜುಕಿ ಪ್ರಖ್ಯಾತಿ  ಹೊಂದಿರುವ ಆಲ್ಟೊ K10 ನಲ್ಲಿ ಆಟೋಮೇಟೆಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ , ಹಾಗು ಪ್ರಾಸಂಗಿಕವಾಗಿ ಸ್ವಲ್ಪ ಫೇಸ್ ಲಿಫ್ಟ್ ಸಹ ಕೊಡಲಾಗಿದೆ. ಅನುಕೂಲತೆಗಳು ಸಾಂಪ್ರದಾಯಿಕವಾದ ಮಾನ್ಯುಯಲ್ ಗೇರ್ ಶಿಫ್ಟ್ ನ ಮೇಲೆ ಜಯ ಸಾಧಿಸುತ್ತದೆಯೇ? ತಿಳಿಯೋಣ

Maruti ಆಲ್ಟೊ K10 AMT

ನಿರೀಕ್ಷಿಸಬಹುದಾದ ವಿಷಯಗಳು

 • ನವೀನ  ಶೈಲಿಯ ಡಿಸೈನ್
 • ಸ್ಪರ್ಧಾತ್ಮಕ ಸ್ಟೈಲಿಂಗ್
 • ಕ್ಯಾಬಿನ್ ನಲ್ಲಿ  ಹೈಲೈಟ್ ಆಗುವ ಹೊಸ ಡ್ಯಾಶ್ ಬೋರ್ಡ್
 • ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನ ಆಯ್ಕೆ

ಎರೆಡು ಬಾರಿ ಆಲೋಚಿಸುವಂತೆ ಮಾಡಬಹುದಾದ ವಿಚಾರ

 • ಹಳೆ ರೀತಿಯ ಮತ್ತು ಆಕರ್ಷಣೆ ಇಲ್ಲದ ಪಕ್ಕಗಳ ಬಾಗ
 • ಜಾರುವಿಕೆಯ ಮೇಲ್ಚಾವಣಿ ಹಿಂಬದಿಯ ಪ್ಯಾಸೆಂಜರ್ ಗಳಿಗೆ ಹೆಡ್ ರೂಮ್ ಕಡಿಮೆ ಮಾಡುತ್ತದೆ.
 • ನೆೇರವಾಗಿರುವ ಸ್ಟಿಯರಿಂಗ್ ಇನ್ಪುಟ್ ಡ್ರೈವಿಂಗ್ ನ ಆಹ್ಲಾದತೆಯನ್ನು ಕಡಿಮೆ ಮಾಡುತ್ತದೆ.

Maruti ಆಲ್ಟೊ K10 AMT 

ಮಾರುತಿ ಸುಜುಕಿ ಇಂಡಿಯಾ 4.3 ಲಕ್ಷ ಯೂನಿಟ್  ಆಲ್ಟೊ K10 ಅನ್ನು ಮಾರಾಟಮಾಡಿದೆ. ಇದರ ಅರ್ಥ K10 ಒಂದು ಭಾರತದಲ್ಲಿ  ಹೆಚ್ಚು ಪ್ರಖ್ಯಾತಿ ಪಡೆದಿರುವ ಮಾಡೆಲ್ ಆಗಿದೆ.  ಮುಂದುವರೆದು ಸ್ಥಳೀಯ ತಯಾರಕ ಸ್ವಲ್ಪ ಆರಾಮದಾಯಕ ವಿಚಾರಗಳನ್ನು ಹೆಚ್ಚುಮಾಡುವುದರ ಜೊತೆಗೆ ಈ ಹೊಸ ಅವತಾರದಲ್ಲಿ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅನ್ನು ಅಳವಡಿಸಿದೆ. ಹಾಗು ಆಟೋ ಗೇರ್ ಶಿಫ್ಟ್ ಇರುವ ಕಾರನ್ನು ಕೊಳ್ಳ ಬಯಸುವ ಗ್ರಾಹಕರಿಗೆ , ಅದರಲ್ಲೂ ಮಹಾನಗರಗಳಲ್ಲಿರುವವರಿಗೆ ಟ್ರಾಫಿಕ್  ದಟ್ಟಣೆ ಇರುವಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ ಮಾಡಲಾಗಿದೆ.

ಬಾಹ್ಯ

Maruti ಆಲ್ಟೊ K10 AMT

ಒಂದು ನೋಟದಲ್ಲಿ ಇದರ ಮುಂಬಾಗದ ಭಯಂಕರ  ಶೈಲಿ ಒಮ್ಮೆ ನೋಡುವಂತೆ ಮಾಡುತ್ತದೆ ಹಿಂದಿನ ಜನರೇಶನ್ ಅನ್ನು ಪರಿಗಣಿಸಿದಾಗ ಕೆಲವು ನವೀಕರಣಗಳನ್ನು ಮುಂಭಾಗದಲ್ಲಿ ಕೊಡಲಾಗಿದೆ ಎಂದು ಹೇಳಬಹುದು .

ಪ್ರಾರಂಭಕ್ಕೆ  ಇದರಲ್ಲಿ 3D ಶೈಲಿಯ ಬಾನೆಟ್ ಮುಂಬದಿಯ ಭಾಗಕ್ಕೆ ಹೆಚ್ಚು ವೈಷ್ಟ್ಯತೆ ಕೊಟ್ಟ ಹಾಗಿದೆ, ಹಳೆಯ ಮಾಡೆಲ್ ಸರಳವಾಗಿತ್ತು. ಕ್ರೋಮ್ ಫಿನಿಷ್ ಇರುವ ಗ್ರಿಲ್ ‘S ಲೋಗೋ ದೊಂದಿಗೆ ಮಧ್ಯದಲ್ಲಿದ್ದು ಆಕರ್ಷಕವಾಗಿದೆ. ಹಾಗೆಯೆ ಹೆಡ್ ಲ್ಯಾಂಪ್ ಗಳು ಕೂಡ ಎದ್ದುಕಾಣುವಂತೆ ಇದೆ ದೊಡ್ಡ ಏರ್ ಡ್ಯಾಮ್ ನೊಂದಿಗೆ. ಚಿತ್ರಗಳಲ್ಲಿ ಇರುವಂತೆ ನಾವು ಟೆಸ್ಟ್ ಮಾಡಿದ  VXi  ವೇರಿಯೆಂಟ್ ನಲ್ಲಿ ಫಾಗ್ ಲ್ಯಾಂಪ್ ಇರಲಿಲ್ಲ, ಆದರೆ ಇದು ಟಾಪ್ ಎಂಡ್ ವೇರಿಯೆಂಟ್ ನಲ್ಲಿ ಪ್ಯಾಕೇಜ್ ನ ಜೊತೆಗೆ ಬರುತ್ತದೆ.

Maruti ಆಲ್ಟೊ K10 AMT

ಇದರ ಪಕ್ಕದ ಭಾಗಗಳು ಬದಲಾವಣೆ ಆಗಿಲ್ಲ, ಆದರೂ ಹೊಸದಾಗಿ ಪರಿಚಯಿಸಿರುವ ವಿಚಾರಗಳೆಂದರೆ ದೊಡ್ಡ ಸೈಡ್ ಮಿರರ್, ಇದು ಒಟ್ಟಾರೆ ಡಿಸೈನ್ ಗೆ ಹೊಂದುಕೊಳ್ಳುವಂತೆ ತಯಾರಿಸಲಾಗಿದೆ. ಪಕ್ಕಗಳಲ್ಲಿ ಇರುವ ಗೆರೆ ಗಳು ಇದರ ಆಕರ್ಷಣೆ ಹೆಚ್ಚಿಸುತ್ತದೆ , ರಬ್ಬರ್ ಕ್ಲಾಡ್ಡಿಂಗ್ ಕೂಡ ಹಾಗೆಯೇ , ಇವನ್ನು ಡೋರ್ ಗಾಲ ಮೇಲೆ ಕಾಣಬಹುದು.  ಕಪ್ಪು ಬಿ ಪಿಲ್ಲರ್ ಗಳೂ ಸಹ ಆಲ್ಟೊ K10 ಗೆ ಸ್ಪರ್ಧಾತ್ಮಕ ಚಿತ್ರಣವನ್ನು ಅದರ ಜಾರುವಿಕೆಯ ಮೇಲ್ಚಾವಣಿಯೊಂದಿಗೆ ಕೊಡುತ್ತದೆ.

 Maruti ಆಲ್ಟೊ K10 AMT

ಚಿತ್ರಣವನ್ನು ಪೂರ್ತಿ ಗೊಳಿಸಲು 155/65R R13 ವೀಲ್ ಗಳು ಪ್ಲಾಸ್ಟಿಕ್ ಹಬ್ ಕ್ಯಾಪ್ ನೊಂದಿಗೆ ಬರುತ್ತದೆ. ಹಿಂಬದಿಯಲ್ಲಿ ಕೆಲವು ಹೋಲಿಕೆಗಳು ಹಿಂದಿನ ಮಾಡೆಲ್ ನ ಟೈಲ್ ಗೇಟ್ ಅನ್ನು ಸೂಚಿಸುತ್ತದೆ. ಹೊಸ ಡಿಸೈನ್ ನಲ್ಲಿ ಮತ್ತೆ ಡಿಸೈನ್ ಮಾಡಲಾದ ಟೈಲ್ ಲೈಟ್ ಗಳು, ಟೈಲ್ ಗೇಟ್ ನ ಕೆಳಭಾಗದಲ್ಲಿ ಸಾಗುವ  ಕ್ರೋಮ್ ಫಿನಿಶಿಂಗ್ ಗೆರೆಗಳು ಇದಕ್ಕೆ ಪ್ರೀಮಿಯಂ ನೋಟ ಕೊಡುತ್ತದೆ. ಮತ್ತು ಗುರುತರಗಳಾದ ಆಲ್ಟೊ K10 ವಿಎಕ್ಸೈ ಮತ್ತು ಆಟೋ ಗೇರ್ ಶಿಫ್ಟ್ ಬ್ಯಾಡ್ಜ್ ಅನ್ನು ಬಲಭಾಗದಲ್ಲಿ ಕಾಣಬಹುದು, ಮತ್ತು ಎಡಭಾಗದಲ್ಲಿ ಮಾರುತಿ ಸುಜುಕಿ ಎಂದು ಬರೆಯಲ್ಪಟ್ಟಿದೆ, ಹಾಗು ಟೈಲ್ ಗೇಟ್ ನ ಮದ್ಯದಲ್ಲಿ ಲೋಗೋ ಇದ್ದು ಚೆನ್ನಾಗಿ ಕಾಣುತ್ತದೆ.

 Maruti ಆಲ್ಟೊ K10 AMT

ಆoತರಿಕಗಳು

ಬಾಹ್ಯಗಳಿಗೆ ಹೋಲಿಸಿದಾಗ ಫೇಸ್ ಲಿಫ್ಟ್ ಆಲ್ಟೊ K10 ಗಳು ಹೊರ ಹೋಗುವ ಜನರೇಶನ್  ಕಿಂತ ವಿಭಿನ್ನವಾಗಿದೆ.  ಮೊದಲು ಗೋಚರವಾಗುವ ವಿಚಾರ ಹೊಸ ಡ್ಯಾಶ್ ಬೋರ್ಡ್ . ಬೇಲಿಗೆ ಮತ್ತು ಬ್ಲಾಕ್ ಟೋನ್ ನಲ್ಲಿ ಬರಲಿದೆ, ಡ್ಯಾಶ್ ಬೋರ್ಡ್ ಹೊಸ ಇಂಸ್ಟುಮೆಂಟ್ ಕ್ಲಸ್ಟರ್ ಸಿಲ್ವರ್ ಸರೌಂಡ್ ನೂಂದಿಗೆ ಬರುತ್ತದೆ., ಮತ್ತು ಇದರಲ್ಲಿ ಸ್ಪೀಡೋಮೀಟರ್, RPM ಮೀಟರ್, ಮತ್ತು ಡಿಜಿಟಲ್ ಟ್ರಿಪ್ ಕಂಪ್ಯೂಟರ್  ಸಹ ಇದೆ.  

Maruti ಆಲ್ಟೊ K10 AMT

ಇದಕ್ಕೆ ಅಥೆಂಟಿಕ್ ನೋಟ ಕೊಡಲು, ಸ್ಟಿಯರಿಂಗ್ ವೀಲ್ ಹೊಸ ಡಿಸೈನ್ ಶೈಲಿಯೊಂದಿಗೆ ಸಿಲ್ವರ್ ಅಸೆಂಟ್ ಗಳನ್ನೂ ಸಹ ಹೊಂದಿದೆ. ಇದರ ಜೊತೆ ಪಿಯಾನೋ ಬ್ಲಾಕ್ ಫಿನಿಷ್ ಇರುವ ಸೆಂಟರ್ ಕನ್ಸೋಲ್ ಸಹ ನವೀಕರಣ ಹೊಂದಿದೆ.ಇದರಲ್ಲಿ ಮ್ಯೂಸಿಕ್ ಸಿಸ್ಟಮ್  CD  ಪ್ಲೇಯರ್ , ರೇಡಿಯೋ, USB ಮತ್ತು  AUX-in port ಸಹ ಇದೆ. ಸೆಂಟರ್ ಕನ್ಸೋಲ್ ಕೆಳಗೆ ಇರುವ  ದುoಡಗಿನ ಕ್ನೋಬ್ ಗಳು ಏರ್ ಕಂಡೀಶನ್ ಕಂಟ್ರೋಲ್ ಗಾಗಿ ಅಳವಡಿಸಲಾಗಿದೆ, ಮತ್ತು ನೋಡಲು ಸುಂದರವಾಗಿ ಕಾಣುತ್ತದೆ ಕೂಡ.

Maruti ಆಲ್ಟೊ K10 AMT

ಗ್ಲೋವ್ ಬಾಕ್ಸ್ ಕಂಪಾರ್ಟ್ಮೆಂಟ್ ಸಕಷ್ಟು ದೊಡ್ಡದಿದೆ . ಸಾಮಾನ್ಯವಾಗಿ ಇಂತಹದರಲ್ಲಿ ಒಳಗಿನ ಜಾಗ ಕಡಿಮೆ ಇರುತ್ತದೆ, ಆದರೆ K10 ಹಾಗಲ್ಲ. ಗೇರ್ ಸ್ಟಿಕ್ ನ ಕೆಳಭಾಗದಲ್ಲಿ 12V  ಚಾರ್ಜಿನ್ಗ್  ಪಾಯಿಂಟ್ ಇದೆ, ಇದು ಒಂದು ಉತ್ತಮ ಆಲೋಚಿಸಿದ ಒಂದು ಫೀಚರ್ ಆಗಿದೆ, ಮತ್ತು ಸೆಲ್ ಫೋನ್ ಗಳನ್ನು ಮತ್ತು ಇಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಮಾಡಬಹುದಾಗಿದೆ.

Maruti ಆಲ್ಟೊ K10 AMT

ಕ್ಯಾಬಿನ್ ನಲ್ಲಿ ಎಲ್ಲಾ  ಕಾರಗಳ್ಲಲೂ ಇರಬೇಕಾದ ಕೆಲವು ಮುಖ್ಯ ಫೀಚರ್ ಗಳಾದ ಶೇಖರಣೆಗೆ ಉಪಯೋಗವಾಗುವ ಕಪ್ ಹೋಲ್ಡರ್ ಗಳು ಇದರಲ್ಲಿ ಇಲ್ಲ. ಬಿಲ್ಡ್ ಕ್ವಾಲಿಟಿ ಯನ್ನು ಪರಿಗಣಿಸಿದಾಗ ಹೆಯಿದೆ ಬರುತ್ತಿದ್ದಂತಹ ಮತ್ತು ಈಗಿರುವ ಮಾರುತಿ ಕರುಗಳಿಗೆ ಹೋಲಿಸಿದರೆ ಸುರಕ್ಷತೆಗಳು ಚೆನ್ನಾಗಿವೆ, ಮತ್ತು ಒಳ್ಳೆ ಬೆಲೆಯ್ಲಲೂ ಸಿಗುತ್ತದೆ.

Maruti ಆಲ್ಟೊ K10 AMT

ಮುಂದುವರೆದು ಡೋರ್ ಪ್ಯಾನೆಲ್ ಗಾಲ ಮೇಲೆ ಪ್ಲಶ್ಡ್ತಿಕ್ ಇನ್ಸರ್ಟ್ ಗಳು ಇದ್ದು ಫ್ಯಾಬ್ರಿಕ್ ಹೊಂದಿರುವ ಇತರ ಇದೆ ಸೆಗ್ಮೆಂಟ್ ಕಾರುಗಳಿಗೆ ಹೋಲಿಸಿದರೆ ಚೆನ್ನಾಗಿದೆ. ಡೋರ್ ಹ್ಯಾಂಡಲ್ ನ ಮೇಲಿನ ಸಿಲ್ವರ್ ಫಿನಿಷ್, ಡಿಸೈನ್ ಶೈಲಿಯನ್ನು ಮತ್ತಷ್ಟು ಚೆನ್ನಾಗಿರುವಂತೆ ಮಾಡುತ್ತದೆ. ಪವರ್ ವಿಂಡೋ ಸ್ವಿಚ್ ಗಳನ್ನು ಮದ್ಯ ದಲ್ಲಿ  ಇರಿಸಲಾಗಿದೆ., ಮತ್ತು ಇದು ಅಷ್ಟು ಅನುಕೂಲಕರವಾಗಿಲ್ಲ. ನಮ್ಮ ದೃಷ್ಟಿಯಲ್ಲಿ ಮಾರುತಿ ಯು ಬೆಲೆ ಕಡಿಮೆ ಮಾಡಲು ಹೀಗೆ ಮಾಡಿರಬಹುದು. 

 Maruti ಆಲ್ಟೊ K10 AMT

ಸೀಟುಗಳ ಭಾಗಕ್ಕೆ ಬಂದಾಗ, ಅವು ಅಸ್ವಲ್ಪ ಸುಪ್ಪೋರ್ಟಿವ್ ಆಗಿದ್ದರೂ ಕಠಿಣವಾಗಿದೆ ಎಂದೆನಿಸುತ್ತದೆ. ಇದರಲ್ಲಿ ಬಹಳಷ್ಟು ಲೆಗ್ ರೂಮ್ ಇದ್ದು  ಇದಕ್ಕೆ ಪೂರಕವಾಗಿ ಸೀಟ್ ಗಳನ್ನು ಸಕಹ್ಸ್ತು ಹಿಂದಕ್ಕೆ ಸರಿಸಬಹುದಾಗಿದೆ. ಡ್ರೈವರ್ ಮತ್ತು ಕೋ-ಪ್ಯಾಸೆಂಜರ್ ಸೀಟ್ ಗೆ ಫಿಕ್ಸ್  ಆಗಿರುವ ಹೆಡ್ ರೆಸ್ಟ್ ಗಳು, ಸೊಂಟದ ಭಾಗದ ಬೆಂಬಲ ಚೆನ್ನಾಗಿದೆ. ಹಿಂದಿನ ಸೀಟ್ ನಲ್ಲಿ  ಸಾಕಷ್ಟು ಲೆಗ್ ರೂಮ್ ಇದೆ. ಅದು ಎತ್ತರದ ಆಳುಗಳಿಗೆ ಇಳಿಜಾರು ಮೇಲ್ಚಾವಣಿ ಇರುವುದರಿಂದ ಸ್ವಲ್ಪ ಕಡಿಮೆ ಲೆಗ್ ರೂಮ್ ಎಂದೆನಿಸಬಹುದಾದರೂ, ಮೆತ್ತನೆಯದಾಗಿದ್ದು, ಸೊಂಟದ ಭಾಗಕ್ಕೂ ಸಹ  ಆರಾಮದಾಯಕವಾಗಿರುತ್ತದೆ.  

Maruti ಆಲ್ಟೊ K10 AMT

ಮುಂಬದಿಯ ಸೀಟ್ ಗಾಲ ಹಿಂದೆ ಸಾಮಾನ್ಯವಾಗಿ ಇರಬಹುದಾದಂತಹ ಸಶೇಕರಣ ಪಾಕೆಟ್ ಕೊಟ್ಟಿಲ್ಲ. ಮುಂಬದಿಯಲ್ಲಿರುವಂತೆ ಹಿಂಬದಿಯಲ್ಲಿ ಪವರ್ ವಿಂಡೋ ಸ್ವಿಚ್ ಕೊಟ್ಟಿರುವುದಿಲ್ಲ, ಮತ್ತು ಇದು ಹಿಂಬದಿಯ ಪ್ಯಾಸೆಂಜರ್ ಗಳಿಗೆ ಯಾಂತ್ರಿಕವಾಗಿ ವಿಂಡೋ ಗ್ಲಾಸ್ ಅನ್ನು ಕೆಳಗಿಳಸಬೇಕಾಗುವಂತೆ ಮಾಡುತ್ತದೆ. ಹಿಂದಿನ ಜನರೇಶನ್ ಗೆ ಹೋಲಿಸಿದರೆ ಬೂಟ್ ಸ್ಪೇಸ್ ಚೆನ್ನಾಗಿದೆ ಮತ್ತು ಆಳವಾಗಿಯೂ ಸಹ ಇದೆ.

Maruti ಆಲ್ಟೊ K10 AMT

ಎಂಜಿನ್ ಮತ್ತು  ಕಾರ್ಯದಕ್ಷತೆ

ಇದು ಫೇಸ್ ಲಿಫ್ಟ್ ಆದ್ದರಿಂದ ಯಾಂತ್ರಿಕವಾಗಿ ಹೆಚ್ಚಿನ ಬದಲಾವಣೆಗಳು ಇಲ್ಲ, ಆಟೋ ಶಿಫ್ಟ್ ಗೇರ್ ಬಾಕ್ಸ್ ನ ಹೊರತಾಗಿ. ಅಲ್ಟೋವನ್ನು ಅದರ ಅಳತೆಗಳಿಗೆ ಬಹಳಷ್ಟು ಬೇಡಿಕೆ ಇತ್ತು, ಮತ್ತು  ಶಕ್ತಿಯುತವಾದ ಎಂಜಿನ್ ಗೆ. ಹಾಗಾಗಿ ಇದರಲ್ಲಿ  ಹಿಂದಿನ ಗೇಮೆರೇಷನ್ ನ  ಅದೇ K10B ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Maruti ಆಲ್ಟೊ K10 AMT

ಇದರ ಸ್ಪೆಸಿಫಿಕೇಷನ್  ಪಟ್ಟಿಯನ್ನು ದೊಡ್ಡದಾಗಿ ಮಾಡುತ್ತಾ , ಹೊಸ ಆಲ್ಟೊ K10 ದಲ್ಲಿ 998cc ಪೆಟ್ರೋಲ್ ಪವರ್ ಪ್ಲಾಂಟ್ ಇದ್ದು ಇದು ಗರಿಷ್ಟ ಪವರ್ 67bhp @ 6000 rpm ಮತ್ತು  ಟಾರ್ಕ್  ಆದ 90 Nm  @3500 rpm ಅನ್ನು ಕೊಡುತ್ತದೆ. ಸೆಲೆರೊ ದಲ್ಲಿ ಬಳಸಲಾಗಿರುವ ಆಟೋ ಗೇರ್ ಶಿಫ್ಟ್ ಅನ್ನು ಇದರಲ್ಲೂ ಸಹ ಬಳಸಲಾಗಿದೆ.

Maruti ಆಲ್ಟೊ K10 AMT

ಮಾರುತಿ ಯು ಇದನ್ನು ಕ್ರಾಂತಿಕಾರಿ ಎಂದು ಕರೆಯುವಂತೆ ಟ್ರಾನ್ಸ್ಮಿಷನ್ ಇಲೆಕ್ಟ್ರಾನಿಕ್ ಸಿನ್ಟ್ರೋಲ್ ಯೂನಿಟ್ ಮೇಲೆ ಆಧಾರವಾಗಿದೆ. ಮತ್ತು ಇದು ಹೈಡ್ರಾಲಿಕ್ ಅಕ್ಟುಟರ್ ಅನ್ನು ಕ್ಲಚ್ ಮತ್ತು ಗೇರ್ ಶಿಫ್ಟಿಂಗ್ ಗೆ ಅನುಕೂಲವಾಗುವಂತೆ ಕಂಟ್ರೋಲ್ ಮಾಡಬಹುದಾಗಿದೆ. ಇದರ ವಿಶೇಷತೆ ಏನೆಂದರೆ ಇದು  ವೇಗವಾಗಿದ್ದು ಕ್ಲಚ್ ಮತ್ತು ಗೇರ್ ಅಳವಡಿಕೆಗೆ ಅನುಕೂಲವಾಗಿದೆ ಮತ್ತು ಫ್ಯುಯೆಲ್ ಎಕಾನಮಿ  (24.07 kmpl  ಧಾಖಲಿತ )ಕೂಡ ಹೆಚ್ಚಾಗಲು ಅನುಕೂಲವಾಗಿದೆ ಮತ್ತು ಡ್ರೈವ್ ಮಾಡಲೂ ಸಹ ಸುಲಭ ವಾಗಿದೆ.

Maruti ಆಲ್ಟೊ K10 AMT

ಸ್ಟಿಯರಿಂಗ್ ಮಾಡಲು ಕುಳಿತುಕೊಂಡಾಗ ನಿಮಗೆ ಪ್ರಾರಂಭದ ಅಚ್ಛೇಲೆರಷನ್ ನಲ್ಲಿ  ಸ್ಟಿಯರಿಂಗ್ ಮಾಡುವಾಗ ಸ್ವಲ್ಪ ಅಸ್ಪಷ್ಟತೆ ಕಂಡುಬರುತ್ತದೆ. ಆದರೆ ಕಡಿಮೆ ವೇಗಗತಿಯಲ್ಲಿ ಸ್ಟಿಯರಿಂಗ್ ಸರಿಯಾಗಿದೆ ಎಂದು ಅನ್ನಿಸುತ್ತದೆ. ಇದು ನಗರಗಳಲ್ಲೂ ಡ್ರೈವ್ ಮಾಡಲು ಚೆನ್ನಾಗಿದೆ ಎಂದೆನಿಸುತ್ತದೆ, ಇಂಜಿನ್ ಸ್ವಲ್ಪ ಹೆಚ್ಚು ಶಬ್ದ ಹೊರಸೂಸುತ್ತದೆ ಮತ್ತು ಪ್ರಯಾಣಿಕರಿಗೆ ಅಹಿತಕರವಾಗಬಹುದು.  ಮತ್ತೊಂದು ಪರಿಗಣಿಸಬೇಕಾದ ವಿಚಾರವೆಂದರೆ ರೋಡ್ ನ ಮೇಲಿನ ಶಬ್ದ ಕ್ಯಾಬಿನ್ ನ ಒಳಗೆ ಪ್ರವೇಶಿಸುತ್ತದೆ.

Maruti ಆಲ್ಟೊ K10 AMT

ಹೈವೆ ಗಳಲ್ಲಿ ದೂರದ ಪ್ರಯಾಣ ಸ್ವಲ್ಪ ಆರಾದಾಯಕವಾಗಿಲ್ಲದಿರಬಹುದು., ಇದಕ್ಕೆ ಕಡಿಮೆ ಲೆಗ್ ರೂಮ್ ಮತ್ತು ಹಿಂಬದಿಯ ಸೀಟ್ ನ ಸ್ಥಾನ ಕಾರಣವಾಗಿರಬಹುದು. ಹ್ಯಾಂಡಲಿಂಗ್ ಅಷ್ಟೇನು ಕಠಿಣವಾಗಿಲ್ಲದಿರಬಹುದು, ಹಾಗಾಗಿ ಇದು ಅಷ್ಟೇನೂ ಕಷ್ಟಕರವಲ್ಲದ ಡ್ರೈವ್ ಮಾಡಲು ಸಹಕಾರಿಯಾಗಿರುತ್ತದೆ. ಆಲ್ಟೊ K10 ಆಟೋಮ್ಯಾಟಿಕ್ ರಸ್ತೆಯ ಅಂಕು ಡೊಂಕು ಗಳನ್ನು  ಅರಮಫ್ಯಾಕವಾಗಿ ನಿಭಾಯಿಸುವುದು, ಇದಕ್ಕೆ ಚೆನ್ನಾಗಿರುವ ಸಸ್ಪೆನ್ಷನ್ ಕಾರಣವಾಗಿದೆ.

Maruti ಆಲ್ಟೊ K10 AMT

ಅಂತಿಮ ಅನಿಸಿಕೆ

ಆಲ್ಟೊ K10  ನಲ್ಲಿ ಆಟೋ ಗೇರ್ ಶಿಫ್ಟ್ ಅಳವಡಿಕೆ ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ, ಮತ್ತು ಇದು ಬಾಹ್ಯದ ಮುಂಭಾಗ ಮತ್ತು ಹಿಂಭಾಗದ  ಸ್ಪರ್ಧಾತ್ಮಕವಾದ ಶೈಲಿಯನ್ನು ಎತ್ತಿಹಿಡಿಯುತ್ತದೆ.

Maruti ಆಲ್ಟೊ K10 AMT

ಹೊಸ ಡಿಸೈನ್ ಎಲಿಮೆಂಟ್ ಗಳು ಈ ಸೆಗ್ಮೆಂಟ್ ನ ಸ್ಪರ್ಧಾತ್ಮಕವಾದ ಕಾರುಗಳಿಗೆ ಹೋಲಿಸಿದರೆ ಹೆಚ್ಚು ವಿಶಾಲವಾದ ಕ್ಯಾಬಿನ್ ಹೊಂದಿದ್ದು ಹೆಚ್ಚು ಪ್ರೀಮಿಯಂ ಆಗು ಕಾಣುತ್ತದೆ., ಮತ್ತು ಬಹಳ ಗ್ರಾಹಕರನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಇದರ ಎಂಜಿನ್ ಹಾಗು ಕಾರ್ಯದಕ್ಷತೆ ತಾರ್ಕಿಕವಾಗಿ ಚೆನ್ನಾಗಿದ್ದು ಇದರ ಬೆಲೆ ರೂ 3.80 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )ಗೆ ಸರಿಸಮನಾಗಿ ಇದೆ.

Maruti ಆಲ್ಟೊ K10 AMT

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

 • ಸಿಟ್ರೊನ್ c3
  ಸಿಟ್ರೊನ್ c3
  Rs.5.50 ಲಕ್ಷಅಂದಾಜು ದಾರ
  ನಿರೀಕ್ಷಿತ ಲಾಂಚ್‌: ಜೂನ, 2022
  ನಿರೀಕ್ಷಿತ ಲಾಂಚ್‌: ಜೂನ, 2022
 • ಎಂಜಿ 3
  ಎಂಜಿ 3
  Rs.6.00 ಲಕ್ಷಅಂದಾಜು ದಾರ
  ನಿರೀಕ್ಷಿತ ಲಾಂಚ್‌: jul 2022
  ನಿರೀಕ್ಷಿತ ಲಾಂಚ್‌: jul 2022
 • ಟಾಟಾ ಆಲ್ಟ್ರೊಜ್ ಇವಿ
  ಟಾಟಾ ಆಲ್ಟ್ರೊಜ್ ಇವಿ
  Rs.14.00 ಲಕ್ಷಅಂದಾಜು ದಾರ
  ನಿರೀಕ್ಷಿತ ಲಾಂಚ್‌: aug 2022
  ನಿರೀಕ್ಷಿತ ಲಾಂಚ್‌: aug 2022
 • ಮಾರುತಿ ಸ್ವಿಫ್ಟ್ ಹೈಬ್ರಿಡ್
  ಮಾರುತಿ ಸ್ವಿಫ್ಟ್ ಹೈಬ್ರಿಡ್
  Rs.10.00 ಲಕ್ಷಅಂದಾಜು ದಾರ
  ನಿರೀಕ್ಷಿತ ಲಾಂಚ್‌: sep 2022
  ನಿರೀಕ್ಷಿತ ಲಾಂಚ್‌: sep 2022
 • ಮಾರುತಿ ಆಲ್ಟೊ 2022
  ಮಾರುತಿ ಆಲ್ಟೊ 2022
  Rs.3.50 ಲಕ್ಷಅಂದಾಜು ದಾರ
  ನಿರೀಕ್ಷಿತ ಲಾಂಚ್‌: ಅಕ್ೋಬರ್, 2022
  ನಿರೀಕ್ಷಿತ ಲಾಂಚ್‌: ಅಕ್ೋಬರ್, 2022

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience