• English
  • Login / Register

Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

Published On ಮೇ 28, 2024 By ujjawall for ಮಾರುತಿ ಜಿಮ್ನಿ

  • 1 View
  • Write a comment

ಮಾರುತಿ ಜಿಮ್ನಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿಯ ಏಕೈಕ ಆಫ್-ರೋಡರ್ ಆಗಿದೆ. ಇದು ಸಾಮರ್ಥ್ಯಕ್ಕಿಂತ ಹೆಚ್ಚಿನದಾಗಿದೆ, ಎಷ್ಟರಮಟ್ಟಿಗೆ ಎಂದರೆ ಲೆಜೆಂಡರಿ ಮಹೀಂದ್ರಾ ಥಾರ್‌ನ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದೆ. ಹಾಗೆಯೇ ಇದರ ಬೆಲೆ ಸಹ ಗಮನಾರ್ಹವಾಗಿ ಕಡಿಮೆಯಿದೆ. ಆದರೆ ಥಾರ್‌ ಅನ್ನು ಆರಾಮದಾಯಕ ಸಿಟಿ ರೈಡರ್‌ ಎಂದು ಪರಿಗಣಿಸಲಾಗದಿದ್ದರೂ, ತನ್ನ ಕೆಲವು ವಿಶೇಷತೆಗಳೊಂದಿಗೆ ಜಿಮ್ನಿಯು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದೆ. ಜಿಮ್ನಿ ನಿಮ್ಮ ಕುಟುಂಬಕ್ಕೆ ಉತ್ತಮ ಸಿಟಿ ಕಾರ್ ಆಗಬಹುದೇ ಎಂದು ನಾವು ಕಂಡುಕೊಳ್ಳುವ ಮೂಲಕ ನಾವು ಈ  ರೋಡ್‌ ಟೆಸ್ಟ್‌ನಲ್ಲಿ ಆದರ ವಿಶೇಷತೆಗಳನ್ನು ಚರ್ಚಿಸುತ್ತೇವೆ. ಬನ್ನಿ ಪ್ರಾರಂಭಿಸೋಣ:

ಡಿಸೈನ್‌

ತನ್ನ ಕಾಂಪ್ಯಾಕ್ಟ್ ಆಯಾಮಗಳಿಂದಾಗಿ, ಜಿಮ್ನಿಯು ಮೊದಲ ನೋಟದಲ್ಲಿ ವಿಶಿಷ್ಟವಾದ ಆಫ್ರೋಡರ್‌ನ ವೈಬ್ ಅನ್ನು ನೀಡದೇ ಇರಬಹುದು. ಆದರೆ, ಇದು ಆ ಉದ್ದೇಶದಿಂದಲೇ ನಿರ್ಮಿತವಾದಂತೆ ಕಾಣುತ್ತದೆ, ಇದಕ್ಕೆ ಪೂರಕ ಎಂಬಂತೆ ಇದರ ಬಾಕ್ಸಿ ಮತ್ತು ಸ್ಕ್ವೇರ್ ಸ್ಟೈಲಿಂಗ್ ಅಂಶಗಳು, ಹೆಚ್ಚು ಹೊದಿಕೆಯ ವೀಲ್‌ ಆರ್ಚ್‌ಗಳು  ಮತ್ತು ಅದರ ಹೊರಭಾಗದ ಶೈಲಿಯನ್ನು ವ್ಯಾಖ್ಯಾನಿಸುವ ನೇರವಾದ ನಿಲುವುಗಳನ್ನು ಹೊಂದಿದೆ.

ಫ್ಲಾಟ್ ಬಾನೆಟ್ ಮತ್ತು ಬಂಪರ್‌ನಲ್ಲಿರುವ ಕೆಲವು ದಪ್ಪನಾದ ಅಂಶಗಳ ಹೊರತಾಗಿಯೂ, ಜಿಮ್ನಿ ತನ್ನ 15-ಇಂಚಿನ ಚಕ್ರಗಳು ಮತ್ತು ಕಾಂಪ್ಯಾಕ್ಟ್ ಆಯಾಮಗಳೊಂದಿಗೆ ಸಾಕಷ್ಟು 'ಮುದ್ದಾದ'ವಾಗಿ ಕಾಣುತ್ತದೆ. ಇದು ವಿಶೇಷವಾಗಿ ಈ ಪ್ರಕಾಶಮಾನವಾದ ಕೈನೆಟಿಕ್ ಹಳದಿ ಬಣ್ಣದ ಬಾಡಿಯು ಎಲ್ಲರ ಗಮನವನ್ನು ಸೆಳೆಯುತ್ತದೆ. ಇದಲ್ಲದೆ, ಜಿಮ್ನಿ ಜಾಗತಿಕವಾಗಿ ಮನ್ನಣೆ ಪಡೆದಿದ್ದು, ಇದರೊಂದಿಗೆ ಮಾಡಿಫಿಕೇಶನ್‌ಗೆ ಇಲ್ಲಿ ಅಗಾಧವಾದ ಆಯ್ಕೆಗಳಿವೆ. ಸರಿಯಾದ ಮಾಡಿಫಿಕೇಶನ್‌ಗಳೊಂದಿಗೆ ನೀವು ಅದನ್ನು ಅಕ್ಷರಶಃ ಬೇಬಿ ಜಿ ವ್ಯಾಗನ್ ಆಗಿ ಪರಿವರ್ತಿಸಬಹುದು.

ಇಂಟಿರೀಯರ್‌

ಜಿಮ್ನಿಯ ಒಳಭಾಗವು ಹಳೆಯ ಶಾಲೆಯ ಶೈಲಿಯದ್ದಾಗಿದೆ: ಒರಟಾದ ಮತ್ತು ಒಂದು ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ಮತ್ತು ಲುಕ್‌ಗಿಂತ ಹೆಚ್ಚಾಗಿ ಫಂಕ್ಷನಾಲಿಟಿಯ ಕಡೆಗೆ ಗಮನಹರಿಸಲಾಗಿದೆ. ಎಲ್ಲವೂ ಸಾಲಿಡ್‌  ಕಾಣುವುದು ಮಾತ್ರವಲ್ಲ, ಅದು ಹಾಗೆಯೇ ಇದೆ! ಗ್ರಾಬ್ ಹ್ಯಾಂಡಲ್‌ಗೆ ಸೀಮಿತವಾಗಿರುವುದರಿಂದ ನೀವು ಇದರಲ್ಲಿ ಹೆಚ್ಚು ಸಾಫ್ಟ್‌ ಟಚ್‌ ಮೆಟಿರೀಯಲ್‌ಗಳನ್ನು ಕಾಣುವುದಿಲ್ಲ, ಇದು ಗ್ರ್ಯಾಬ್‌ ಹ್ಯಾಂಡಲ್‌ಗೆ ಮಾತ್ರ ಸೀಮಿತವಾಗಿದೆ. ಪ್ಲಾಸ್ಟಿಕ್‌ಗಳು ಅವುಗಳಿಗೆ ಉತ್ತಮವಾದ ವಿನ್ಯಾಸವನ್ನು ಹೊಂದಿವೆ ಮತ್ತು ಯಾವತ್ತೂ ಕಡಿಮೆ ಆಯಿತು ಎನ್ನುವ ಭಾವನೆ ಮೂಡಿಸುವುದಿಲ್ಲ.  

ಸ್ಟೀರಿಂಗ್ ಲೆದರ್‌ನ ಕವರ್‌ ಅನ್ನು ಪಡೆಯುತ್ತದೆ ಮತ್ತು ಇದು ಹಳೆಯ ಶೈಲಿಯ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್‌ ಅನ್ನು ಪಡೆಯುವುದರೊಂದಿಗೆ ಜಿಮ್ನಿಯ ಪರಂಪರೆಯನ್ನು ನೆನಪಿಸುತ್ತದೆ. ಅನಲಾಗ್ ಕ್ಲಸ್ಟರ್ ಜಿಪ್ಸಿಯಿಂದ ಹೆಚ್ಚು ಪ್ರೇರಿತವಾಗಿದೆ, ಆದರೆ ಕಪ್ಪು ಮತ್ತು ಬಿಳಿ MID (ಮಲ್ಟಿ ಇಂಫೊರ್ಮೆಶನ್‌ ಡಿಸ್‌ಪ್ಲೇ) ಅನ್ನು ಸಂಯೋಜಿಸುವ ಮೂಲಕ ಸ್ವಲ್ಪ ಆಧುನಿಕ ಸ್ಪರ್ಶವನ್ನು ನೀಡಲಾಗಿದೆ. ಆದರೆ ಇಲ್ಲಿ ಕಲರ್‌ ಡಿಸ್‌ಪ್ಲೇಯು ಹೆಚ್ಚು ಸೂಕ್ತವಾಗಿರುತ್ತದೆ. 

ಕ್ಲೈಮೇಟ್‌ ಕಂಟ್ರೋಲ್‌ಗಾಗಿ ಮೂರು ಡಯಲ್‌ಗಳನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ಕೆಳಗಿನ ಪವರ್ ವಿಂಡೋಗಳು ಮತ್ತು ಟ್ರಾಕ್ಷನ್‌ ಕಂಟ್ರೋಲ್‌ ಸ್ವಿಚ್‌ಗಳೊಂದಿಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಜಿಮ್ನಿಯ ಕ್ಯಾಬಿನ್‌ಗೆ ಅತ್ಯಂತ ಆಧುನಿಕ ಮತ್ತು ಪ್ರೀಮಿಯಂ ಆದ ಅಂಶವೆಂದರೆ ಅದರ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಗಿದೆ, ಆದರೆ ಇದು ಸ್ವಲ್ಪಮಟ್ಟಿಗೆ ಸರಿಯಾದ ಜಾಗದಿಂದ ಹೊರಗಿರುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಶಗಳಲ್ಲಿ ತುಂಬಾ ರಗಡ್‌ ಆದ ಮತ್ತು ಫಂಕ್ಷನ್‌-ಕೇಂದ್ರಿತ ಕ್ಯಾಬಿನ್‌ ಆಗಿದೆ.

ಸೀಟ್‌ಗಳನ್ನು ಸಹ ಫಂಕ್ಷನ್‌ನ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ನೀವು ಎತ್ತರದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ವಿಂಡ್‌ಸ್ಕ್ರೀನ್‌ನಿಂದ ಉತ್ತಮವಾದ ವೀಕ್ಷಣೆಯನ್ನು ಪಡೆಯಬಹುದು. ಬಾನೆಟ್ ಎಡ್ಜ್ ಅನ್ನು ಸಹ ನಿಮಗೆ ಕಾಣುತ್ತಿರುತ್ತದೆ ಮತ್ತು ಇದು ಪ್ರಮುಖವಾಗಿ ಹೊಸ ಡ್ರೈವರ್‌ಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ ಜೊತೆಗೆ ಎತ್ತರ-ಹೊಂದಾಣಿಕೆ ಮಾಡಬಹುದಾದ ಸೀಟ್‌ಗಳು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸಿಹಿಗೊಳಿಸುತ್ತವೆ. ಸೌಕರ್ಯಗಳಿಗೆ ಸಂಬಂಧಿಸಿದಂತೆ, ಸೀಟ್‌ನ ಕುಷನ್‌ ಸಹ ಮೃದುವಾಗಿರುತ್ತದೆ, ಆದರೆ ತೊಡೆಯ ಕೆಳಭಾಗದ ಬೆಂಬಲ ಮತ್ತು ಸೈಡ್ ಬೋಲ್ಸ್‌ಟರಿಂಗ್ ಲಾಂಗ್‌ ಡ್ರೈವ್‌ಗಳಿಗೆ ಸಾಕಷ್ಟು ಉತ್ತಮವಾಗಿಲ್ಲ ಮತ್ತು ಇದು ನಗರ ಬಳಕೆಗೆ ಸಾಕಾಗುತ್ತದೆ.

ಕ್ಯಾಬಿನ್‌ನಲ್ಲಿನ ಪ್ರಾಯೋಗಿಕತೆ

ಜಿಮ್ನಿ ನಿಜವಾಗಿಯೂ ಪ್ರಾಯೋಗಿಕತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿಲ್ಲ ಮತ್ತು ಅದು ನಮಗೆ ಕ್ಯಾಬಿನ್‌ನನ್ನು ಗಮನಿಸುವಾಗ ತಿಳಿಯುತ್ತದೆ. ಮಧ್ಯದಲ್ಲಿ 2 ಕಪ್ ಹೋಲ್ಡರ್‌ಗಳ ರೂಪದಲ್ಲಿ ಬರುವ 6 ಸ್ಥಳಗಳೊಂದಿಗೆ ಸ್ಟೋರೇಜ್‌ ಆಯ್ಕೆಗಳು ಸೀಮಿತವಾಗಿವೆ (ಹಿಂಭಾಗದ ಪ್ರಯಾಣಿಕರೊಂದಿಗೆ ಹಂಚಿಕೊಳ್ಳಲಾಗಿದೆ), ಗೇರ್‌ಬಾಕ್ಸ್‌ನ ಮುಂದೆ ಒಂದು ಸಣ್ಣ ಜಾಗ (ಮ್ಯಾನುಯಲ್‌ನಲ್ಲಿ ಚಿಕ್ಕದಾಗಿದೆ), ತೆಳುವಾದ ಬಾಗಿಲಿನ ಪಾಕೆಟ್‌ಗಳು ಕೇವಲ ಒಂದೆರಡು ಮ್ಯಾಗಜೀನ್‌ಗಳನ್ನು ಹಿಡಿದಿಟ್ಟುಕೊಳ್ಳಷ್ಟೇ ಸಾಕಾಗುತ್ತದೆ, ಯೋಗ್ಯ ಗಾತ್ರದ ಗ್ಲೋವ್‌ಬಾಕ್ಸ್ ಮತ್ತು ಮುಂಭಾಗದ ಆಸನಗಳ ಹಿಂದೆ ಪಾಕೆಟ್‌ಗಳನ್ನು ಒಳಗೊಂಡಿದೆ.

ಬಾಗಿಲುಗಳಲ್ಲಿ ಬಾಟಲಿ ಹೋಲ್ಡರ್‌ಗಳ ಕೊರತೆಯು ಖಂಡಿತವಾಗಿಯೂ ಜಿಮ್ನಿಯನ್ನು ಉತ್ತಮ ಸಿಟಿ ಕಾರು ಅನ್ನಾಗಿಸುವ ಪ್ರಯತ್ನಕ್ಕೆ ಸ್ವಲ್ಪ ಮಟ್ಟಿಗೆ ಬ್ರೇಕ್‌ ಹಾಕುತ್ತದೆ. 

ಚಾರ್ಜಿಂಗ್‌ನ ಕೆಲಸಗಳನ್ನು ಎರಡು 12V ಸಾಕೆಟ್‌ಗಳಿಂದ (ಒಂದು ಮುಂಭಾಗ ಮತ್ತು ಬೂಟ್‌ನಲ್ಲಿ ಒಂದು) ಮತ್ತು ಮುಂಭಾಗದಲ್ಲಿ ನೀಡಲಾಗುವ ಸಿಂಗಲ್ USB ಪೋರ್ಟ್‌ಗಳಿಂದ ಮಾಡಲಾಗುತ್ತದೆ. ಹಿಂದಿನ ಪ್ರಯಾಣಿಕರು ತಮ್ಮ ವೈಯಕ್ತಿಕ ಪವರ್ ಬ್ಯಾಂಕ್‌ಗಳನ್ನು ಅವಲಂಬಿಸಬೇಕಾಗುತ್ತದೆ ಏಕೆಂದರೆ ಅವರಿಗೆ ಮೀಸಲಾದ ಪೋರ್ಟ್ ಇಲ್ಲ.

ಹಿಂಭಾಗದ ಕ್ಯಾಬಿನ್‌ನ ಅನುಭವ

ಹಿಂಬದಿಯ ಬಗ್ಗೆ ಹೇಳುವುದಾದರೆ, ಇಬ್ಬರು ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವಿದೆ. ತಲೆ, ಮೊಣಕಾಲು ಮತ್ತು ಲೆಗ್‌ರೂಮ್ ಸಾಕಷ್ಟು ಇದೆ ಮತ್ತು ನೀವು ನಿಮ್ಮ ಕಾಲುಗಳನ್ನು ಸಹ ಸ್ವಲ್ಪ ಮಟ್ಟಿಗೆ ಹಿಗ್ಗಿಸಬಹುದು. ಬ್ಯಾಕ್‌ರೆಸ್ಟ್ 2 ರಿಕ್ಲೈನ್ ಆಂಗಲ್‌ಗಳನ್ನು ಪಡೆಯುತ್ತದೆ, ಅದನ್ನು ನಿಮ್ಮ ಅಗತ್ಯ ಮತ್ತು ಸೌಕರ್ಯಗಳಿಗೆ ಅನುಗುಣವಾಗಿ ಆಡ್ಜಸ್ಟ್‌ ಮಾಡಬಹುದು. ಸಣ್ಣ ನಗರದ ಪ್ರಯಾಣಕ್ಕೆ ಎಲ್ಲವೂ ಒಳ್ಳೆಯದು ಮತ್ತು ಉತ್ತಮವಾಗಿದೆ, ಆದರೆ ತೊಡೆಯ ಕೆಲಭಾಗದ ಸಪೋರ್ಟ್‌ನ ಕೊರತೆಯಿಂದಾಗಿ ಲಾಂಗ್‌ಡ್ರೈವ್‌ನಲ್ಲಿ ಆಯಾಸವನ್ನು ಉಂಟುಮಾಡುತ್ತದೆ.

ಹಿಂಬದಿಯ ಪ್ರಯಾಣಿಕರು ಉತ್ತಮ ನೋಟವನ್ನು ನೀಡುವ ದೊಡ್ಡ ಕಿಟಕಿಗಳನ್ನು ಖಂಡಿತವಾಗಿ ಪ್ರಶಂಸಿಸುತ್ತಾರೆ, ಹಾಗೆಯೇ ಇದು ಮುಂದಿನ ನೋಟವನ್ನು ನಿರ್ಬಂಧಿಸುವ ಮುಂಭಾಗದ ಬೃಹತ್ ಹೆಡ್‌ರೆಸ್ಟ್‌ಗಳಿಗೆ ಸರಿದೂಗಿಸುತ್ತದೆ.

ಮೋಜಿನ ಸಂಗತಿ: ಲೌಂಜ್ ತರಹದ ಸೀಟ್‌ನ ಅನುಭವಕ್ಕಾಗಿ ನೀವು ಮುಂಭಾಗದ ಹೆಡ್‌ರೆಸ್ಟ್‌ಗಳನ್ನು ತೆಗೆದುಹಾಕಬಹುದು ಮತ್ತು ಆಸನವನ್ನು ಸಂಪೂರ್ಣವಾಗಿ ಒರಗಿಸಬಹುದು. ಇದೊಂದು ಅಚ್ಚುಕಟ್ಟಾದ ಕ್ಯಾಂಪಿಂಗ್ ಟ್ರಿಕ್ ಆಗಿರಬಹುದು!.

ಬೂಟ್‌ ಸ್ಪೇಸ್‌

ನೀವು ಅಂತಿಮವಾಗಿ ಜಿಮ್ನಿಯಲ್ಲಿ ಕ್ಯಾಂಪಿಂಗ್ ಅಥವಾ ದಿನಸಿ ಶಾಪಿಂಗ್‌ಗೆ ಹೋದಾಗ, 208-ಲೀಟರ್ ಬೂಟ್ ಸ್ಪೇಸ್ ನಿಮ್ಮ ಹೆಚ್ಚಿನ ಬ್ಯಾಗ್‌ಗಳಿಗೆ ಸಾಕಾಗುತ್ತದೆ. ಬಸ್‌, ರೈಲು ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ನಿಮ್ಮ ಪ್ರಯಾಣದ ಸಮಯದ ಲಗೇಜ್‌ಗಳಿಗೂ ಸಾಕಾಗುತ್ತದೆ, ಆದರೆ ದೊಡ್ಡ ಲಗೇಜ್‌ಗಳನ್ನು ಲಂಬವಾಗಿ ಜೋಡಿಸಿ ಮತ್ತು ಸಣ್ಣ ಸೂಟ್‌ಕೇಸ್‌ಗಳನ್ನು ಇದರ ಮಧ್ಯದಲ್ಲಿ ಇರಿಸಬೇಕು. 

ಬೂಟ್ ಅಷ್ಟೇನು ದೊಡ್ಡದಲ್ಲ, ಆದರೆ ನೀವು ಹೆಚ್ಚು ಜಾಗವನ್ನು ಪಡೆಯಲು 50:50 ಸ್ಪ್ಲಿಟ್ ಫೋಲ್ಡಿಂಗ್ ಅನ್ನು ಪಡೆಯುತ್ತೀರಿ. ಆದರೆ ಅದು ಬೂಟ್‌ನ ನೆಲದ ಸಮಕ್ಕೆ ಸರಿಯಾಗಿ ಬಾಗುವುದಿಲ್ಲ.

ಟೈಲ್‌ಗೇಟ್‌ನಲ್ಲಿ (ಡಿಕ್ಕಿ) ಒಂದು ವಿಶೇಷವಾದ ದೂರು ಇದೆ, ಇದು ಹೈಡ್ರಾಲಿಕ್ ಸ್ಟ್ರಟ್‌ಗಳಿಂದ ತೆರೆಯಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಬಲವಂತವಾಗಿ ತೆರೆಯಲು ಸಹ ಸಾಧ್ಯವಿಲ್ಲ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

ಇದು ಪ್ರಮುಖವಾಗಿ ಆಫ್-ರೋಡರ್ ಆಗಿದ್ದರೂ, ಜಿಮ್ನಿಯು ವೈಶಿಷ್ಟ್ಯಗಳಲ್ಲಿ ಪ್ರಯಾಣಿಕರೊಂದಿಗೆ ರಾಜಿಮಾಡಿಕೊಳ್ಳುವುದಿಲ್ಲ. ಮೊದಲನೆಯದಾಗಿ, ಮೇಲೆ ತಿಳಿಸಲಾದ 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಪ್ರೀಮಿಯಂ ಆಗಿ ಕಾಣುವುದು ಮಾತ್ರವಲ್ಲದೇ, ಅಂತಹದೇ ಅನುಭವವನ್ನು ನೀಡುತ್ತದೆ. ಇದನ್ನು ಬಳಸುವುದು ಸುಲಭ ಮತ್ತು ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಪಡೆಯುತ್ತದೆ, ಇದನ್ನು ಉತ್ತಮವಾಗಿ ಸಂಯೋಜಿಸಲಾಗಿದೆ. ಗ್ರಾಫಿಕ್ಸ್ ಉತ್ತಮವಾಗಿದೆ, ಪ್ರತಿಕ್ರಿಯೆ ತ್ವರಿತವಾಗಿದೆ ಮತ್ತು ಒಟ್ಟಾರೆ ಅನುಭವವು ವಿಳಂಬ-ರಹಿತವಾಗಿದೆ. ನೀವು ಸ್ಕ್ರೀನ್‌ನ ಕೆಳಗೆ ಮೀಸಲಾದ ಬಟನ್‌ಗಳನ್ನು ಸಹ ಪಡೆಯುತ್ತೀರಿ, ಇದು ಮೆನುಗಳಲ್ಲಿನ ಆಯ್ಕೆಯನ್ನು ಸುಲಭವಾಗಿ ಬಳಸಲು ಸಹಕಾರಿಯಾಗಿದೆ. ಜಿಮ್ನಿ ನೀಡುವ ಇತರ ವೈಶಿಷ್ಟ್ಯಗಳ ಪಟ್ಟಿ ಇಲ್ಲಿದೆ:

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ 

ಕ್ರೂಸ್ ಕಂಟ್ರೋಲ್

MID ಡಿಸ್‌ಪ್ಲೇ

ನಾಲ್ಕು ಸ್ಪೀಕರ್‌ಗಳು

ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

ಎಲೆಕ್ಟ್ರಿಕ್ ORVM

ಆಟೋಮ್ಯಾಟಿಕ್‌ ಹೆಡ್‌ಲ್ಯಾಂಪ್

ಹೆಡ್‌ಲ್ಯಾಂಪ್ ವಾಷರ್‌

ಮ್ಯಾನುಯಲ್‌ IRVM

ಆಟೋಮ್ಯಾಟಿಕ್‌ ಎಸಿ

ಜಿಮ್ನಿ ಬೇಸಿಕ್‌ ಅಂಶಗಳನ್ನು ಸರಿಯಾಗಿ ಒಳಗೊಂಡಿರುವಾಗ, ಆಟೋಮ್ಯಾಟಿಕ್‌ ವೈಪರ್‌ಗಳು, ಆಟೋ-ಡಿಮ್ಮಿಂಗ್‌ IRVM, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್, ಎತ್ತರ ಹೊಂದಾಣಿಕೆಯ ಸೀಟ್‌ಗಳು ಮತ್ತು ಸ್ಟೀರಿಂಗ್ ಚಕ್ರಕ್ಕೆ ಟೆಲಿಸ್ಕೋಪಿಕ್ ಹೊಂದಾಣಿಕೆಯಂತಹ ವೈಶಿಷ್ಟ್ಯಗಳನ್ನು ನೀಡುತ್ತಿದ್ದರೆ, ಒಟ್ಟಾರೆ ಕ್ಯಾಬಿನ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತಿತ್ತು. ವಿಶೇಷವಾಗಿ ಬೆಲೆಯನ್ನು ಪರಿಗಣಿಸಿದಾಗ, ಈ ಕೆಲವು ವೈಶಿಷ್ಟ್ಯಗಳನ್ನು ಖಂಡಿತವಾಗಿಯೂ ನೀಡಬೇಕಾಗಿತ್ತು.

ಸುರಕ್ಷತೆಯ ಅಂಶಕ್ಕೆ ಬರುವುದಾದರೆ, ಜಿಮ್ನಿ ತನ್ನ ಬೇಸ್‌ ಮೊಡೆಲ್‌ಗಳಿಂದಲೇ ಪ್ರಭಾವಶಾಲಿ ಕಿಟ್ ಅನ್ನು ನೀಡುತ್ತದೆ. ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಸೆನ್ಸರ್‌ಗಳೊಂದಿಗೆ ರಿಯರ್ ವ್ಯೂ ಕ್ಯಾಮೆರಾ, ISOFIX ಮೌಂಟ್‌ಗಳು ಮತ್ತು ರಿಮೈಂಡರ್‌ಗಳೊಂದಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು ಎಲ್ಲಾ ಪ್ರಮಾಣಿತ ವೈಶಿಷ್ಟ್ಯಗಳಾಗಿವೆ.

ಮಾಹಿತಿಗಾಗಿ: 3-ಡೋರ್‌ನ ಜಿಮ್ನಿಯು ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 3.5 ರೇಟಿಂಗ್‌ಗಳನ್ನು ಗಳಿಸಿದೆ

ಆದಾಗ್ಯೂ, ಹಿಂಬದಿಯ ವ್ಯೂ ಕ್ಯಾಮೆರಾದ ಆಂಗಲ್‌ನ ಕಾರ್ಯಗತಗೊಳಿಸುವಿಕೆಯು ಉತ್ತಮಗೊಳಿಸಬಹುದಿತ್ತು. ಮತ್ತು ವಿಶಿಷ್ಟವಾದ ಮಾರುತಿ ಶೈಲಿಯಲ್ಲಿ, ಹಿಂದಿನ ಸೀಟುಗಳು ಲೋಡ್ ಸೆನ್ಸಾರ್‌ಗಳನ್ನು ಪಡೆಯುವುದಿಲ್ಲ. ಇದರ ಪರಿಣಾಮವಾಗಿ, ನೀವು 90 ಸೆಕೆಂಡುಗಳ ಕಾಲ ಬೀಪ್ ಅನ್ನು ಕೇಳಬೇಕಾಗುತ್ತದೆ, ಒಂದು ವೇಳೆ ಬೀಪ್‌ ಸೌಂಡ್‌ ಅನ್ನು ಕೇಳುವುದನ್ನು ತಪ್ಪಿಸಲು ಬೆಲ್ಟ್‌ಗಳ ಮೇಲೆ ಯಾರೂ ಕುಳಿತುಕೊಳ್ಳದಿದ್ದರೂ ಸಹ ನೀವು ಅವುಗಳನ್ನು ಬಕಲ್ ಮಾಡಬೇಕಾಗುತ್ತದೆ.

ಡ್ರೈವಿಂಗ್‌ನ ಅನುಭವ

ಜಿಮ್ನಿಯು ಏಕೈಕ 1.5-ಲೀಟರ್ ನ್ಯಾಚುರಲಿ ಎಸ್ಪಿರೆಟೆಡ್‌ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ, ಇದನ್ನು 5-ಸ್ಪೀಡ್ ಮ್ಯಾನುಯಲ್‌ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಬಹುದು. ಈ ಎಂಜಿನ್‌ 105ಪಿಎಸ್‌ ಮತ್ತು 134 ಎನ್‌ಎಮ್‌ ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ, ಆದರೆ ಇದು ಯಾವುದೇ ಅರ್ಥದಲ್ಲಿ ಅತ್ಯಾಕರ್ಷಕವಲ್ಲ.

ಆದರೆ ಇದರ ಪರ್ಫಾರ್ಮೆನ್ಸ್‌ ನಗರದೊಳಗಿನ ಪ್ರಯಾಣಕ್ಕೆ ಸಾಕಾಗುತ್ತದೆ. ಟ್ರಾಫಿಕ್‌ನ ಸಾಲಿನಲ್ಲಿ ಸಾಗಲು ಇದು ನಿಧಾನವಾದ ವೇಗದಲ್ಲಿ ಸಾಕಷ್ಟು ಪವರ್‌ ಅನ್ನು ಹೊಂದಿದೆ ಮತ್ತು ತ್ವರಿತ ಓವರ್‌ಟೇಕ್‌ಗಳಿಗೆ ಮಾತ್ರ ನೀವು ಎಂಜಿನ್ ಅನ್ನು ವಿಸ್ತರಿಸುವ ಅಗತ್ಯವಿರುತ್ತದೆ. ನಾವು ಪರೀಕ್ಷೆಗೆ ಬಳಸಿದ ಜಿಮ್ನಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಗಿತ್ತು, ಇದು ತ್ವರಿತ ಮತ್ತು ಮೃದುವಿನಲ್ಲಿ ಸಮವಾಗಿರುತ್ತದೆ: ನೀವು ತ್ವರಿತ ವೇಗವರ್ಧನೆಯನ್ನು ಕೇಳಿದಾಗ ಜರ್ಕ್ಸ್ ಅಥವಾ ಯಾವುದೇ ನೈಜ ವಿಳಂಬವಿಲ್ಲದೆ ಗೇರ್‌ ಕೆಳಕ್ಕೆ ಚಲಿಸುತ್ತದೆ. 

ಹೆದ್ದಾರಿಯ ವೇಗದಲ್ಲಿ ಪ್ರಯಾಣಿಸುವುದು ಸಹ ಸರಾಗವಾಗಿರುತ್ತದೆ ಮತ್ತು ಓವರ್‌ಟೇಕ್ ಮಾಡುವಾಗ ಮಾತ್ರ ನೀವು ಶಕ್ತಿಯ ಕೊರತೆಯನ್ನು ಅನುಭವಿಸುವಿರಿ. ಒಟ್ಟಾರೆಯಾಗಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಜೋಡಣೆಯಲ್ಲಿ ಲೋಪವನ್ನು ಕಂಡುಹಿಡಿಯುವುದು ಕಷ್ಟ, ವಿಶೇಷವಾಗಿ ನಗರದೊಳಗಿನ ರಸ್ತೆಗಳಲ್ಲಿ. ಆದರೆ ನಾವು ನಗರದಲ್ಲಿ ಸರಾಸರಿ 12 ಕಿ.ಮೀ ಮೈಲೇಜ್‌ ಅನ್ನು ಪಡೆದಿದ್ದರಿಂದ, ಇಂಧನ ದಕ್ಷತೆಯ ವಿಷಯದಲ್ಲಿ ಇದು ನಿಮ್ಮನ್ನು ನಿರಾಸೆಗೊಳಿಸುತ್ತದೆ. ಅತ್ಯಾಕರ್ಷಕವಾದ ಪರ್ಫಾರ್ಮೆನ್ಸ್‌ ಅನ್ನು ಪಡೆಯದೆಯೂ, ಈ ಕಡಿಮೆ ಇಂಧನ ದಕ್ಷತೆಯ ಅಂಕಿ ಅಂಶವು ವಿಶೇಷವಾಗಿ ಮಾರುತಿ ಸ್ಟ್ಯಾಂಡರ್ಡ್‌ಗಳಿಂದ ನಿರಾಶಾದಾಯಕವಾಗಿದೆ.

ಈ ನಗರ-ಆಧಾರಿತ ವಿಮರ್ಶೆಯಲ್ಲಿ ನಾವು ಜಿಮ್ನಿಯ 4x4 ಡ್ರೈವ್ ಮೋಡ್‌ಗಳ ಕುರಿತು ಚರ್ಚಿಸುವುದಿಲ್ಲ. 

ರೈಡ್‌ನ ಗುಣಮಟ್ಟ

ಲ್ಯಾಡರ್-ಫ್ರೇಮ್ ಚಾಸಿಸ್ ಆಗಿದ್ದರೂ, ಮಾರುತಿಯು ಜಿಮ್ನಿಗೆ ಸಮತೋಲನದ ರೈಡಿಂಗ್‌ ಗುಣಮಟ್ಟವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ನೀವು ಫ್ರಾಂಕ್ಸ್ ಮತ್ತು ಬಲೆನೊಗೆ ಹೋಲುವ ಅತ್ಯಾಧುನಿಕ ಮಟ್ಟವನ್ನು ನಿರೀಕ್ಷಿಸಲಾಗದಿದ್ದರೂ, ಕೆಟ್ಟ ರಸ್ತೆಗಳಲ್ಲಿ ಇದು ಇನ್ನೂ ಸಾಕಷ್ಟು ಆರಾಮದಾಯಕವಾಗಿದೆ. ಹೊಂಡಗಳು ಅಥವಾ ಒರಟಾದ ರಸ್ತೆಗಳಲ್ಲಿ ಸರಾಗವಾಗಿ ಮತ್ತು ಮೌನವಾಗಿ ಸಾಗುತ್ತದೆ, ಮತ್ತು ಸಸ್ಪೆನ್ಸನ್‌ನ ಮೂಲಕ ಆಘಾತವನ್ನು ಕಳುಹಿಸಲು ಇದು ನಿಜವಾಗಿಯೂ ತೀಕ್ಷ್ಣವಾದ ಬಂಪ್ ಅನ್ನು ತೆಗೆದುಕೊಳ್ಳುತ್ತದೆ. 

ಕಳಪೆ ರಸ್ತೆಗಳಲ್ಲಿ ಸ್ವಲ್ಪ ಸೈಡ್‌-ಸೈಡ್‌ಗೆ ಚಾಲನೆಯಾಗುತ್ತದೆ, ಆದರೆ ಇದು ಶಾಂತತೆ ಭಂಗ ತರುವುದಿಲ್ಲ. ಅಂತಹ ಕಾರಿಗೆ ಹೈ ಸ್ಪೀಡ್ ಹೈವೇ ಸ್ಟೆಬಿಲಿಟಿ ಕೂಡ ಒಳ್ಳೆಯದು, ಮತ್ತು ಉತ್ತಮ ಸಂಗತಿಯೆಂದರೆ, ಇತರ ಕಾರುಗಳು ಕಳಪೆ ರಸ್ತೆಗಳಿಗೆ ನಿಧಾನವಾಗಬೇಕಾದರೆ, ನೀವು ಜಿಮ್ನಿಯಲ್ಲಿ ಅಡೆತಡೆಯಿಲ್ಲದೆ ಹೋಗಬಹುದು.

ಸ್ಟೀರಿಂಗ್ ಚಕ್ರವು ವಿಶಿಷ್ಟವಾದ ಆಫ್-ರೋಡರ್ ಆಗಿದೆ, ಹೌದು, ಯಾಕೆಂದರೆ ಇದು ನಿಧಾನ. ಹಾಗಾಗಿ ಒಂದು ರೌಂಡ್‌ ಸುತ್ತುವ ಮೊದಲೇ  ಸ್ಟೀರಿಂಗ್ ಲಾಕ್ ಆಗುತ್ತದೆ, ಇತರ ಕಾರುಗಳಲ್ಲಿ ಇದು ಇರುವುದಿಲ್ಲ. . ಇದರ ತಿರುವು ಸರ್ಕಲ್‌ ಸಾಮಾನ್ಯಕ್ಕಿಂತ ಅಗಲವಾಗಿರುತ್ತದೆ, ಆದ್ದರಿಂದ ದಟ್ಟಣೆಯ ಸ್ಥಳಗಳಲ್ಲಿ U-ತಿರುವುಗಳಿಗಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಇದರ ತೂಕವು ಭಾರವಾಗಿದೆ, ಇದು ಕಾರ್ನರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತದೆ. ಆದರೆ ನೀವು ಜಿಮ್ನಿಯನ್ನು ಕಾರ್ನರ್‌ಗಳಲ್ಲಿ ಓಡಿಸಲು ನೀವು ಮನಸ್ಸು ಮಾಡುವುದಿಲ್ಲ, ಏಕೆಂದರೆ ಈ ಸಮಯದಲ್ಲಿ ನೀವು ಬಾಡಿ ರೋಲ್‌ ಆಗುವುದನ್ನು ಕಾಣಬಹುದು.

ಅಂತಿಮ ಮಾತು

ಅಂತಿಮ ಮಾತನ್ನು ಬರೆಯುವ ಮೊದಲು, ಜಿಮ್ನಿಯು ಸಿಟಿ-ಕೇಂದ್ರಿತ ಕಾರ್ ಅಲ್ಲ ಎಂಬ ಅಂಶವನ್ನು ನಾವು ಪುನರುಚ್ಚರಿಸಬೇಕು. ಇದು ಮೊದಲು ಆಫ್ ರೋಡರ್ ಮತ್ತು ಬೇರೆ ಯಾವುದಾಗಿದ್ದರೂ ನಂತರ. ಆದರೆ, ಇದೆಲ್ಲದರ ಹೊರತಾಗಿಯೂ, ಜಿಮ್ನಿ ಆಫ್‌ರೋಡರ್‌ ಮತ್ತು ಸಿಟಿ ಕಾರ್ ಆಗಿ ಉತ್ತಮ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಖಚಿತವಾಗಿ, ಇದು ಹೆಚ್ಚು ಪ್ರಾಯೋಗಿಕವಾಗಿಲ್ಲ, ಆದರೆ ಯೋಗ್ಯವಾದ ವೈಶಿಷ್ಟ್ಯಗಳ ಪಟ್ಟಿಯನ್ನು ನೀಡುತ್ತದೆ. ಹಾಗೆಯೇ, ಇದರ ಆಫ್-ರೋಡಿಂಗ್ ಗುಣಲಕ್ಷಣಗಳು ಅದನ್ನು ಕಡಿಮೆ ಆರಾಮದಾಯಕವಾಗಿಸುತ್ತದೆ, ಆದರೆ ಅದು ಇತರ ಕಾರುಗಳು ಕಷ್ಟಪಡುವ ಕಳಪೆ ರಸ್ತೆಯ ಪ್ಯಾಚ್‌ಗಳಲ್ಲಿ ಸಹಾಯ ಮಾಡುತ್ತದೆ. ಇದರ ಡ್ರೈವ್‌ಟ್ರೇನ್ ಅನ್ನು ಆಫ್-ರೋಡಿಂಗ್ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಆದರೆ ಇದು ಇನ್ನೂ ನಗರಕ್ಕೆ ಸಾಕಷ್ಟು ಉತ್ತಮವಾದ ರೈಡ್ ಮತ್ತು ಪರ್ಫಾರ್ಮೆನ್ಸ್‌ನ ಪ್ಯಾಕೇಜ್ ಅನ್ನು ನೀಡುತ್ತದೆ.

ಇದು ಒಂದು ಸಣ್ಣ ಕುಟುಂಬಕ್ಕೆ ಉತ್ತಮ ಸಿಟಿ ಕಾರು ಆದರೆ ಕೆಲವು ಅಂಶಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ: ಈ ಸಾಲು ಜಿಮ್ನಿಯನ್ನು ಸಂಪೂರ್ಣವಾಗಿ ಒಟ್ಟುಗೂಡಿಸುತ್ತದೆ. ಏಕೆಂದರೆ ಅಂತಿಮವಾಗಿ, ಈ ಕಾರು ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಮತ್ತು ಜೀವನಶೈಲಿಯ ಆಯ್ಕೆಯಾಗಿದೆ ಮತ್ತು ಅದರೊಂದಿಗೆ ಆಫ್-ರೋಡಿಂಗ್‌ನಲ್ಲಿ ನಿಜವಾದ ಮೋಜು ಇರುತ್ತದೆ.

Published by
ujjawall

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience