Login or Register ಅತ್ಯುತ್ತಮ CarDekho experience ಗೆ
Login

Tata Nexon EVಯನ್ನು ಹಿಂದಿಕ್ಕಲು ಈ 10 ಫೀಚರ್‌ಗಳನ್ನು ಪಡೆಯಲಿರುವ Tata Curvv

ಟಾಟಾ ಕರ್ವ್‌ ಇವಿ ಗಾಗಿ samarth ಮೂಲಕ ಜುಲೈ 18, 2024 05:28 pm ರಂದು ಪ್ರಕಟಿಸಲಾಗಿದೆ

ಕರ್ವ್‌ ಇವಿಯು ನೆಕ್ಸಾನ್ ಇವಿಗಿಂತ ಹೆಚ್ಚುವರಿಯಾಗಿ ಹೊಂದಿರುವ ಕೆಲವು ವೈಶಿಷ್ಟ್ಯಗಳಲ್ಲಿ ಲೆವೆಲ್ 2 ADAS, ಪ್ಯಾನರೋಮಿಕ್‌ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ AC ಸೇರಿವೆ

ಜುಲೈ 19 ರಂದು ಟಾಟಾ ಕರ್ವ್‌ ಇಂಧನ ಚಾಲಿತ ಎಂಜಿನ್ (ICE) ಮತ್ತು ಎಲೆಕ್ಟ್ರಿಕ್ ವೆಹಿಕಲ್ (EV) ಆವೃತ್ತಿಗಳಲ್ಲಿ ಅನಾವರಣಗೊಳ್ಳಲಿದೆ. ಇದನ್ನು ನೆಕ್ಸಾನ್ ಇವಿಗಿಂತ ಮೇಲಿನ ಹಂತದಲ್ಲಿ ಇರಿಸಲು ಸೆಟ್‌ ಮಾಡಲಾಗಿದೆ ಮತ್ತು ಆದ್ದರಿಂದ, ಕರ್ವ್‌ ಅದರ ಸಬ್‌-4ಎಮ್‌ ಎಲೆಕ್ಟ್ರಿಕ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿವ ಸಹೋದರ ಮೊಡೆಲ್‌ ನೆಕ್ಸಾನ್‌ನಿಂದ ಕೆಲವು ಫಿಚರ್‌ಗಳನ್ನು ಎರವಲು ಪಡೆಯುವ ನಿರೀಕ್ಷೆಯಿದೆ ಮತ್ತು ನಂತರದಲ್ಲಿ ಬೋರ್ಡ್‌ನಲ್ಲಿ ಕೆಲವು ಹೆಚ್ಚುವರಿ ಫಿಚರ್‌ಗಳನ್ನು ಪಡೆಯಬಹುದು. ನೆಕ್ಸಾನ್‌ ನಿಂದ ಕರ್ವ್‌ ಎರವಲು ಪಡೆಯಬಹುದಾದ 5 ಪ್ರಮುಖ ಫೀಚರ್‌ಗಳು ಮತ್ತು ಇದಕ್ಕಿಂತ ಹೆಚ್ಚುವರಿಯಾಗಿ ನೀಡಬಹುದಾದ 5 ಹೊಸ ಫೀಚರ್‌ಗಳು ಇಲ್ಲಿವೆ.

360-ಡಿಗ್ರಿ ಕ್ಯಾಮರಾ

ಇದು ಸುರಕ್ಷತಾ ವೈಶಿಷ್ಟ್ಯವಾಗಿದ್ದು, ಚಾಲಕನಿಗೆ ಕಾರ್ ಮತ್ತು ಅದರ ತಕ್ಷಣದ ಸುತ್ತಮುತ್ತಲಿನ ಸಂಪೂರ್ಣ ನೋಟವನ್ನು ಒದಗಿಸುತ್ತದೆ, ವಿಶೇಷವಾಗಿ ದಟ್ಟಣೆಯ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವಾಗ ಅಥವಾ ಭಾರೀ ಟ್ರಾಫಿಕ್‌ನಲ್ಲಿ ಪ್ರಯಾಣಿಸುವಾಗ ಕಾರಿನ ಸುತ್ತಲು ಡ್ರೈವರ್‌ಗೆ ಕಾಣದ ಜಾಗವನ್ನು ನೋಡಲು ಸಹಾಯ ಮಾಡುತ್ತದೆ. ಇದು ಈಗಾಗಲೇ ನೆಕ್ಸಾನ್‌ ಇವಿಯಲ್ಲಿ ಲಭ್ಯವಿದೆ ಮತ್ತು ಕರ್ವ್‌ ಇವಿಯಲ್ಲಿಯೂ ಸಹ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.

ವೆಂಟಿಲೇಟೆಡ್ ಸೀಟ್‌ಗಳು

ನಮ್ಮಂತಹ ಉಷ್ಣವಲಯದ ಹವಾಮಾನದಲ್ಲಿ ವರದಾನವಾಗಿರುವ ವೆಂಟಿಲೇಟೆಡ್‌ ಸೀಟ್‌ಗಳು ಇತ್ತೀಚಿನ ವರ್ಷಗಳಲ್ಲಿ ಮಾಸ್‌-ಮಾರ್ಕೆಟ್‌ ಕಾರುಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ನೆಕ್ಸಾನ್ ಇವಿ ಅದರ ಟಾಪ್‌-ಎಂಡ್‌ ಆವೃತ್ತಿಗಳಲ್ಲಿ ಮುಂಭಾಗದ ವೆಂಟಿಲೇಟೆಡ್‌ ಸೀಟ್‌ಗಳೊಂದಿಗೆ ಬರುತ್ತದೆ ಮತ್ತು ಕರ್ವ್‌ ಇವಿಗೆ ಈ ಸೌಕರ್ಯದ ಫೀಚರ್‌ ಅನ್ನು ಒದಗಿಸಬಹುದುದು ಎಂದು ನಿರೀಕ್ಷಿಸಲಾಗಿದೆ.

ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

ನೆಕ್ಸಾನ್ ಇವಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿದೆ, ಇದನ್ನು ಕರ್ವ್‌ ಇವಿ ಸಹ ಅಳವಡಿಸಿಕೊಳ್ಳಬಹುದು. ಭಾರತ್ ಮೊಬಿಲಿಟಿ ಎಕ್ಸ್‌ಪೋ ಸಮಯದಲ್ಲಿ ಈ ಫೀಚರ್‌ ಅನ್ನು ಈಗಾಗಲೇ ಗುರುತಿಸಲಾಗಿದೆ. ಈ ಡಿಜಿಟಲ್ ಕ್ಲಸ್ಟರ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡಬಹುದು, ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇ ಬಳಸಿಕೊಂಡು ಕ್ಲಸ್ಟರ್‌ನಲ್ಲಿ ನೇರವಾಗಿ ಮ್ಯಾಪ್ ಅನ್ನು ವೀಕ್ಷಿಸಲು ಡ್ರೈವರ್‌ಗೆ ಸಹಕಾರಿಯಾಗಿದೆ.

12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ

2023 ರಲ್ಲಿ ಟಾಟಾ ಫೇಸ್‌ಲಿಫ್ಟೆಡ್ ನೆಕ್ಸಾನ್ ಇವಿಯನ್ನು ಪರಿಚಯಿಸಿದಾಗ ಪ್ರಮುಖ ಫೀಚರ್‌ಗಳ ಆಪ್‌ಡೇಟ್‌ಗಳಲ್ಲಿ ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಸಹ ಒಂದಾಗಿತ್ತು. ಈ ಹಿಂದೆ ನೀಡಲಾಗುತ್ತಿದ್ದ 7-ಇಂಚಿನ ಸ್ಕ್ರೀನ್‌ಗೆ ಹೋಲಿಸಿದರೆ ಇದು ಕ್ಲೀನರ್ ಮತ್ತು ಫಾಸ್ಟ್‌ UI ಯೊಂದಿಗೆ ಬಂದಿದೆ ಮತ್ತು ಅದೇ ಡಿಸ್‌ಪ್ಲೇಯನ್ನು ಈಗ ಕರ್ವ್‌ ಇವಿನಲ್ಲಿಯೂ ನಿರೀಕ್ಷಿಸಲಾಗಿದೆ. ಟಾಟಾ ಈ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು Arcade.ev ಮೋಡ್‌ನೊಂದಿಗೆ ನೀಡುತ್ತದೆ, ಇದು ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ಯೂಟ್ಯೂಬ್ ಮತ್ತು ಆಟಗಳಂತಹ ಮನರಂಜನಾ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುವ ಅಪ್ಲಿಕೇಶನ್ ಸ್ಟೋರ್ ಆಗಿದೆ.

ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

ದಟ್ಟಣೆಯ ಪಾರ್ಕಿಂಗ್ ಸ್ಥಳಗಳು ಮತ್ತು ನಗರ ಸಂಚಾರದಲ್ಲಿ ಸಹಾಯ ಮಾಡುವ ಮತ್ತೊಂದು ಸುರಕ್ಷತಾ ವೈಶಿಷ್ಟ್ಯವೆಂದರೆ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು. ನೆಕ್ಸಾನ್‌ ಇವಿಯ ವೈಶಿಷ್ಟ್ಯಗಳ ಪಟ್ಟಿಯಿಂದ ಎರವಲು ಪಡೆದು, ಟಾಟಾ ಈ ವೈಶಿಷ್ಟ್ಯವನ್ನು ಕರ್ವ್‌ ಇವಿಯಲ್ಲಿ ನೀಡುವ ಸಾಧ್ಯತೆಯಿದೆ.

ಲೆವೆಲ್ 2 ADAS

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನೆಕ್ಸಾನ್ ಇವಿಯಲ್ಲಿ ಇದು ಲಭ್ಯವಿಲ್ಲ, ಆದರೆ ಕರ್ವ್‌ ಎಸ್‌ಯುವಿ-ಕೂಪ್‌ನ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ನೀಡಲಾಗುವ ಫೀಚರ್‌ಗಳಲ್ಲಿ ಒಂದಾಗಿದೆ. ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್‌ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ನಾವು ನಿರೀಕ್ಷಿಸಬಹುದು.

ಡ್ಯುಯಲ್ ಜೋನ್ ಎಸಿ

ಇದು ಆರಾಮ ಮತ್ತು ಅನುಕೂಲತೆಯ ಫೀಚರ್‌ ಆಗಿದ್ದು, ಮುಂಭಾಗದ ಇಬ್ಬರು ಪ್ರಯಾಣಿಕರಿಗೆ ಕ್ಯಾಬಿನ್ ತಾಪಮಾನವನ್ನು ಪ್ರತ್ಯೇಕವಾಗಿ ಹೊಂದಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರಸ್ತುತ ಟಾಟಾದ ದೊಡ್ಡ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಗಳಲ್ಲಿ ಲಭ್ಯವಿದ್ದರೂ, ಕರ್ವ್‌ ಇವಿ ಸಹ ಈ ಪ್ರೀಮಿಯಂ ವೈಶಿಷ್ಟ್ಯವನ್ನು ಹೊಂದಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ.

ಪನೋರಮಿಕ್ ಸನ್‌ರೂಫ್

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬೇಡಿಕೆಯಿರುವ ವೈಶಿಷ್ಟ್ಯವೆಂದರೆ ಸನ್‌ರೂಫ್ ಮತ್ತು ಅದರಲ್ಲಿಯೂ ದೊಡ್ಡದಾದ ಪ್ಯಾನರೋಮಿಕ್‌ ಸಿಸ್ಟಮ್‌. ಕರ್ವ್‌ನ ರೂಫ್‌ ಇತ್ತೀಚಿನ ಸ್ಪೈ ಶಾಟ್‌ಗಳು ಸನ್‌ರೂಫ್ ಇರುವಿಕೆಯನ್ನು ದೃಢಪಡಿಸಿದೆ, ಇದು ಪ್ರಸ್ತುತ ಚಿಕ್ಕದಾದ ನೆಕ್ಸಾನ್ ಇವಿಯಲ್ಲಿ ಲಭ್ಯವಿರುವುದಿಲ್ಲ.

ಚಾಲಿತ ಡ್ರೈವರ್ ಸೀಟ್

ಟಾಟಾ ಕರ್ವ್‌ ಖಂಡಿತವಾಗಿಯೂ ಸೌಕರ್ಯ ಮತ್ತು ಅನುಕೂಲತೆಯ ವಿಷಯದಲ್ಲಿ ಹಲವಾರು ಫೀಚರ್‌ಗಳನ್ನು ಒಳಗೊಂಡ ಹೆಗ್ಗಳಿಕೆಗೆ ಪಾತ್ರವಾಗುತ್ತದೆ, ಜೊತೆಗೆ ಬಟನ್‌ನಲ್ಲಿ ಹೊಂದಾಣಿಕೆ ಮಾಡಬಾಹುದಾದ ಚಾಲಿತ ಡ್ರೈವರ್ ಸೀಟ್ ಅನ್ನು ನೀಡುತ್ತದೆ. ಚಾಲಕನಿಗೆ ಅತ್ಯಂತ ಆರಾಮದಾಯಕವಾದ ಆಸನ ವಸ್ಥಾನನ್ನು ಸುಲಭವಾಗಿ ಕಂಡುಕೊಳ್ಳಲು ಇದು ಸಹಾಯ ಮಾಡುತ್ತದೆ.

ಫ್ಲಶ್ ಮಾದರಿಯ ಡೋರ್‌ ಹ್ಯಾಂಡಲ್‌ಗಳು

ನಾವು ಈಗಾಗಲೇ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಟಾಟಾ ಕರ್ವ್‌ ಅನ್ನು ಪರಿಕಲ್ಪನೆಯಾಗಿ ನೋಡಿದ್ದೇವೆ, ಅಲ್ಲಿ ಟಾಟಾ ಪ್ರೀಮಿಯಂ-ಲುಕಿಂಗ್ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳಿಗಾಗಿ ಸಾಂಪ್ರದಾಯಿಕ ಡೋರ್ ಹ್ಯಾಂಡಲ್‌ಗಳನ್ನು ತೆಗೆದುಹಾಕಲಿದೆ ಎಂದು ತೋರಿಸಲಾಗಿದೆ. ಟಾಟಾ ಕಾರಿನಲ್ಲಿ ಮೊದಲ ಬಾರಿಗೆ ಈ ಅನುಕೂಲತೆಯೊಂದಿಗೆ ಸೊಗಸಾದ ವೈಶಿಷ್ಟ್ಯವನ್ನು ನೀಡಲಾಗುತ್ತಿದೆ.

ಈ ಫೀಚರ್‌ಗಳನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ನೆಕ್ಸಾನ್‌ ಇವಿಗಿಂತ ಕರ್ವ್‌ ಈ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಕರ್ವ್‌ನಲ್ಲಿ ನೀವು ಯಾವ ಫೀಚರ್‌ ಅನ್ನು ನೋಡಲು ಹೆಚ್ಚು ಆಸಕ್ತಿ ಹೊಂದಿರುವಿರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನಲ್ ಅನ್ನು ಫಾಲೋ ಮಾಡಿ

ಹೆಚ್ಚು ಓದಿ : ನೆಕ್ಸಾನ್ ಎಎಮ್‌ಟಿ

Share via

Write your Comment on Tata ಕರ್ವ್‌ EV

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ