2023 ಹ್ಯುಂಡೈ ವರ್ನಾ SX(O) ವೇರಿಯಂಟ್ ವಿಶ್ಲೇಷಣೆ: ಇದರ ಆಯ್ಕೆ ಲಾಭದಾಯಕವೇ?

published on ಏಪ್ರಿಲ್ 04, 2023 07:53 pm by rohit for ಹುಂಡೈ ವೆರ್ನಾ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಡಿಎ‌ಎಸ್ ಮತ್ತು ಹೀಟೆಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಬೇಕೆಂದು ನೀವು ಬಯಸಿದರೆ ಶ್ರೇಣಿಯ ಟಾಪಿಂಗ್ SX(O) ನಿಮಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ.

Hyundai Verna

ಹೊಸ ಹ್ಯುಂಡೈ ವರ್ನಾದಲ್ಲಿ ಕೆಲವು ವಿಭಾಗದಲ್ಲೇ ಮೊದಲ ಮತ್ತು ಸುಧಾರಿತ ಡ್ರೈವರ್ ಅಸಿಸ್ಟೆಂಟ್ ವ್ಯವಸ್ಥೆಗಳು (ಎಡಿಎ‌ಎಸ್), ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟುಗಳು ಮತ್ತು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ (ಎನ್‌ಎ ಪವರ್‌ಟ್ರೇನ್‌ಗೆ ಮಾತ್ರ) ನಂತಹ ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆದಾಗ್ಯೂ, ನೀವು ಇವೆಲ್ಲವನ್ನೂ ಮತ್ತು ಹೆಚ್ಚಿನದನ್ನು ಬಯಸಿದರೆ, ನಿಮಗೆ ಲಭ್ಯವಿರುವ ಏಕೈಕ ಆಯ್ಕೆ ಕಾಂಪ್ಯಾಕ್ಟ್ ಸೆಡಾನ್‌ನ ಶ್ರೇಣಿಯ-ಟಾಪ್ SX(O) ವೇರಿಯಂಟ್ ಆಗಿದೆ. ಇದನ್ನು ಆಯ್ದುಕೊಳ್ಳುವುದು ಲಾಭದಾಯಕವಾಗಿದೆಯೇ ಎಂದು ತಿಳುದುಕೊಳ್ಳೋಣ:

ವೇರಿಯಂಟ್

1.5-ಲೀಟರ್ ಎನ್.ಎ. ಪೆಟ್ರೋಲ್

1.5-ಲೀಟರ್ ಟರ್ಬೋ-ಪೆಟ್ರೋಲ್

ಎಂಟಿ

ಸಿವಿಟಿ

ಎಂಟಿ

ಡಿಸಿಟಿ

SX(O)

14.66 ಲಕ್ಷ ರೂ.

16.20 ಲಕ್ಷ ರೂ.

15.99 ಲಕ್ಷ ರೂ.

17.38  ಲಕ್ಷ ರೂ.

 

ವರ್ನಾ ಎಸ್‌ಎಕ್ಸ್(ಒ) ಅನ್ನು ಏಕೆ ಆರಿಸಬೇಕು?

Hyundai Verna powered driver seat

ನೀವು ಇಂದಿನ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ವೈಶಿಷ್ಟ್ಯ-ಭರಿತ ಕಾಂಪ್ಯಾಕ್ಟ್ ಸೆಡಾನ್‌ಗಾಗಿ ಹುಡುಕುತ್ತಿದ್ದರೆ, ಹೊಸ ವರ್ನಾದ ಟಾಪ್-ಸ್ಪೆಕ್ SX(O) ನಿಮ್ಮ ಆಯ್ಕೆಯಾಗಿರಬೇಕು. ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ (ಎನ್‌ಎ ಪವರ್‌ಟ್ರೇನ್‌ನೊಂದಿಗೆ) ಮತ್ತು ಹೀಟೆಡ್ ಫ್ರಂಟ್ ಸೀಟ್‌ಗಳು (ಕೂಲಿಂಗ್ ಕಾರ್ಯವನ್ನು ಸಹ ಉಳಿಸಿಕೊಳ್ಳಲಾಗಿದೆ) ಸೇರಿದಂತೆ ಸೆಡಾನ್‌ನ ಹೊಸ ವೈಶಿಷ್ಟ್ಯಗಳನ್ನು ನೀವು ಆನಂದಿಸಬಹುದಾದ ಮತ್ತು ಬಳಸಬಹುದಾದ ಏಕೈಕ ವೇರಿಯಂಟ್ ಆಗಿದೆ. ಸುರಕ್ಷತೆಯ ದೃಷ್ಟಿಯಿಂದಲೂ, SX(O) ಎಡಿಎ‌ಎಸ್, ರಿಯರ್ ಡಿಸ್ಕ್ ಬ್ರೇಕ್‌ಗಳು ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‌ಗಳನ್ನು ಪಡೆದುಕೊಂಡಿದೆ (ನಂತರದ ಎರಡು ಟರ್ಬೊ ಡಿಸಿಟಿ ಆವೃತ್ತಿಯೊಂದಿಗೆ ಮಾತ್ರ ಲಭ್ಯವಿವೆ).

Hyundai Verna ADAS radar resized

ನೀವು ಎಡಿಎ‌ಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹೊಂದಿರುವ ಹೊಸ ವೆರ್ನಾವನ್ನು ಖರೀದಿಸಲು ಬಯಸಿದರೆ, ನೀವು ಪೆಟ್ರೋಲ್-ಸಿವಿಟಿ ಆಯ್ಕೆಯನ್ನು ಅಥವಾ ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಪರಿಗಣಿಸಬಹುದಾಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ಗಾಗಿ, ನೀವು SX(O) ಟರ್ಬೊ DCT ಅನ್ನು ಪಡೆಯಬೇಕು.

ಈಗ ಈ ವೇರಿಯಂಟ್‌ಗಳಲ್ಲಿ ನೀಡಲಾದ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ:

 

ಹೊರಭಾಗ

ಒಳಭಾಗ

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

ಪ್ರಮುಖ ವೈಶಿಷ್ಟ್ಯಗಳು

  • ಕಾರ್ನರಿಂಗ್ ಕಾರ್ಯದೊಂದಿಗೆ ಎಲ್ಇಡಿ ಹೆಡ್‌ಲೈಟ್‌ಗಳು
  • 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು (ಟರ್ಬೊ ವೇರಿಯಂಟ್‌ಗಾಗಿ ಬ್ಲ್ಯಾಕ್ ಮತ್ತು ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ)
  • ಲೆಥೆರೆಟ್ ಅಪ್‌ಹೋಲೆಸ್ಟರಿ
  • ರಿಯರ್ ವಿಂಡೋ ಸನ್‌ಶೇಡ್
  • ಐಆರ್‌ವಿಎಂನಲ್ಲಿ ಹಾಟ್‌ಕೀಗಳು
  • ಆಂಬಿಯಂಟ್ ಲೈಟಿಂಗ್ 
  • ವೆಂಟಿಲೇಟೆಡ್ ಮತ್ತು ಹೀಟೆಡ್ ಫ್ರಂಟ್ ಸೀಟ್‌ಗಳು
  • ಪವರ್ಡ್ ಡ್ರೈವರ್ ಸೀಟ್
  • ಏರ್ ಪ್ಯೂರಿಫೈಯರ್
  • ಫ್ರಂಟ್ ಮತ್ತು ರಿಯರ್ ಸೆಂಟ್ರಲ್ ಆರ್ಮ್‌ರೆಸ್ಟ್‌ಗಳು
  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್
  • ವಿದ್ಯುತ್ ಚಾಲಿತ ಟೈಲ್ ಗೇಟ್
  • 8-ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್
  • ಸಂಪರ್ಕಿತ ಕಾರು ತಂತ್ರಜ್ಞಾನ
  • 10.25-ಇಂಚಿನ ಟಚ್‌ಸ್ಕೀನ್ ಸಿಸ್ಟಮ್
  • ಎಡಿಎ‌ಎಸ್ (ಸಿವಿಟಿ ಮತ್ತು ಟರ್ಬೊ ವೇರಿಯಂಟ್‌ಗಳು): ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೊಲಿಷನ್ ಅವಾಯ್ಡನ್ಸ್, ಸುರಕ್ಷಿತ ನಿರ್ಗಮನ ಎಚ್ಚರಿಕೆ
  • ರಿಯರ್ ಡಿಸ್ಕ್ ಬ್ರೇಕ್‌ಗಳು (ಡಿಸಿಟಿ)
  • ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ (ಡಿಸಿಟಿ)

ಇತರೆ ವೈಶಿಷ್ಟ್ಯಗಳು

  • ಕ್ರೋಮ್ ವಿಂಡೋ ಬೆಲ್ಟ್‌ಲೈನ್
  • ಕ್ರೋಮ್ ಡೋರ್ ಹ್ಯಾಂಡಲ್‌ಗಳು
  • ಶಾರ್ಕ್ ಫಿನ್ ಆಂಟೆನಾ
  • ಎಲ್‌ಇಡಿ ಟೈಲ್‌ಲೈಟ್‌ಗಳು
  • ಬ್ಲ್ಯಾಕ್ ಮತ್ತು ಬೀಜ್ ಕ್ಯಾಬಿನ್ ಥೀಮ್ (ಟರ್ಬೊಗೆ ಸಂಪೂರ್ಣ ಬ್ಲ್ಯಾಕ್ ಇಂಟೀರಿಯರ್)
  • ಆಟೋ-ಡಿಮ್ಮಿಂಗ್ ಐಆರ್‌ವಿಎಂ
  • ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  •  ಆಟೋ ಫೋಲ್ಡಿಂಗ್ ಒಆರ್‌ವಿಎಂಗಳು
  • ಸನ್‌ರೂಫ್
  • ವೈರ್‌ಲೆಸ್ ಫೋನ್ ಚಾರ್ಜಿಂಗ್ 
  • ಆಟೋ ಎಸಿ
  • ಹವಾಮಾನ ಮತ್ತು ಮಾಧ್ಯಮಕ್ಕಾಗಿ ಬದಲಾಯಿಸಬಹುದಾದ ಕಂಟ್ರೋಲ್‌ಗಳು
  • ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ
  • ವಾಯ್ಸ್ ರೆಕಗ್ನಿಷನ್
  • ಬ್ಲೂಟೂತ್ ಕನೆಕ್ಟಿವಿಟಿ
  • ಆರು ಏರ್‌ಬ್ಯಾಗ್‌ಗಳು
  • ಟಿಪಿಎಂಎಸ್
  • ಐ‌ಎಸ್‌ಒಎಫ್‌ಐಎಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು
  • ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು
  • ರಿಯರ್ ಪಾರ್ಕಿಂಗ್ ಕ್ಯಾಮೆರಾ
  • ಇಎಸ್‌ಸಿ ಮತ್ತು ವಿಎಸ್‌ಎಂ

Hyundai Verna sunroof

ವರ್ನಾ SX(O) ನಲ್ಲಿ ಯಾವುದು ಇನ್ನೂ ಉತ್ತಮವಾಗಿರಬಹುದಾಗಿತ್ತು?

 ಪೀಳಿಗೆಯ ಅಪ್‌ಗ್ರೇಡ್‌ನೊಂದಿಗೆ, ವರ್ನಾ ಈಗ ಅಧಿಕ ಸ್ಪೇಸ್, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಅದರ ಪ್ರತಿಸ್ಪರ್ಧಿಗಳಿಗೆ ಸರಿಸಮನಾಗಿದೆ. ಹ್ಯುಂಡೈಗೆ ರಿಯರ್ ವಿಂಡೋ ಸನ್‌ಶೇಡ್‌ಗಳು, ರಿಯರ್ ಸೆಂಟರ್ ಹೆಡ್‌ರೆಸ್ಟ್, 360-ಡಿಗ್ರಿ ಕ್ಯಾಮೆರಾ ವ್ಯೂ ಮತ್ತು ಮೀಸಲಾದ ಫೋನ್ ಸೀಟ್ ಬ್ಯಾಕ್ ಪಾಕೆಟ್‌ಗಳಂತಹ ಹೆಚ್ಚಿನ ಅನುಕೂಲಗಳನ್ನು ನೀಡಲು ಅವಕಾಶವಿತ್ತು ಎಂದು ನಮ್ಮ ಭಾವನೆ. ಕಾರು ತಯಾರಕರು ಅದನ್ನು SX(O) ವೇರಿಯಂಟ್‌ನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಒದಗಿಸಿರಬಹುದಿತ್ತು ಎಂದು ನಮ್ಮ ಅಭಿಪ್ರಾಯ. ಹಾಗೆಯೇ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಫಂಕ್ಷನ್ ಅನ್ನು ಪೆಟ್ರೋಲ್-ಸಿವಿಟಿ SX(O) ನಲ್ಲಿ ಉಳಿದ ಎಡಿಎ‌ಎಸ್ ಸೂಟ್ ಜೊತೆಗೆ ಒದಗಿಸಬಹುದಾಗಿತ್ತು.

ವೇರಿಯಂಟ್

ತೀರ್ಮಾನ

EX

ಸುರಕ್ಷತೆಯ ಮೇಲೆ ಕೇಂದೀಕರಿಸಲಾದ ಮೂಲಭೂತ ಅಂಶಗಳನ್ನು ಮಾತ್ರ ಒಳಗೊಂಡಿದೆ; ಸೀಮಿತ ಬಜೆಟ್‌ ಹೊಂದಿದ್ದರೆ ಮಾತ್ರ ಪರಿಗಣಿಸಿ

S

ಸಮರ್ಥನೀಯ ಪ್ರೀಮಿಯಂನಲ್ಲಿ ಉಪಯುಕ್ತ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರುವ ಟ್ರೂ ಎಂಟ್ರಿ ವೇರಿಯಂಟ್   

SX

ಶಿಫಾರಸು ಮಾಡಲಾದ ವೇರಿಯಂಟ್, ವಿಶೇಷವಾಗಿ ಸಿವಿಟಿ ಆಟೋಮ್ಯಾಟಿಕ್ ಅಥವಾ ಎಂಟ್ರಿ ಲೆವೆಲ್ ಟರ್ಬೊ ವೇರಿಯಂಟ್ ಆಗಿ

SX(O)

ನೀವು ಟಾಪ್-ಸ್ಪೆಕ್ ಪೆಟ್ರೋಲ್-ಸಿವಿಟಿ ಅಥವಾ ಟರ್ಬೊ ವೇರಿಯಂಟ್ ಅನ್ನು ಬಯಸಿದರೆ ಮಾತ್ರ ಅದನ್ನು ಆರಿಸಿಕೊಳ್ಳಿ, ಉತ್ತಮ ವೈಶಿಷ್ಟ್ಯಗಳು ಮತ್ತು ಎಡಿಎ‌ಎಸ್‌ಗಳನ್ನು ಹೊಂದಿದೆ.

 ಎಲ್ಲವೂ ಭಾರತದಾದ್ಯಂತದ ಪ್ರಾಸ್ತಾವಿಕ ಎಕ್ಸ್ ಶೋರೂಂ ಬೆಲೆಗಳಾಗಿವೆ

ಇನ್ನಷ್ಟು ಓದಿ : ವರ್ನಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ವೆರ್ನಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience