• English
  • Login / Register

ಮುಂದಿನ ತಿಂಗಳಿನಲ್ಲಿ ಕಿಯಾ ಸೆಲ್ಟೊಸ್‌ ಮತ್ತು ಕಿಯಾ ಕರೆನ್ಸ್‌ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ..!

ಕಿಯಾ ಸೆಲ್ಟೋಸ್ ಗಾಗಿ shreyash ಮೂಲಕ ಸೆಪ್ಟೆಂಬರ್ 28, 2023 07:56 am ರಂದು ಪ್ರಕಟಿಸಲಾಗಿದೆ

  • 69 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು ಇತ್ತೀಚೆಗೆ ಬಿಡುಗಡೆಯಾದ 2023 ಕಿಯಾ ಸೆಲ್ಟೊಸ್‌ ಕಾರಿನ ಪರಿಚಯಾತ್ಮಕ ಬೆಲೆಯನ್ನು ಕೊನೆಗೊಳಿಸಲಿದೆ

2023 Kia Seltos And Kia Carens Price Hike Coming In October 2023 

  • 2023 ಸೆಲ್ಟೊಸ್‌ ಮತ್ತು ಕರೆನ್ಸ್‌ ಕಾರಿನ ಬೆಲೆಗಳಲ್ಲಿ ಎರಡು ಶೇಕಡಾದಷ್ಟು ಹೆಚ್ಚಳ ಉಂಟಾಗಲಿದೆ.
  • ವರದಿಗಳ ಪ್ರಕಾರ, ಪರಿಷ್ಕೃತ ಸೆಲ್ಟೊಸ್‌ ಮಾದರಿಯಲ್ಲಿ ಹೆಚ್ಚಿದ ಇನ್ಪುಟ್‌ ವೆಚ್ಚ ಮತ್ತು ಹೂಡಿಕೆಯ ಕಾರಣ ಬೆಲೆಯಲ್ಲಿ ಹೆಚ್ಚಳ ಮಾಡುವ ಅನಿವಾರ್ಯತೆ ಉಂಟಾಗಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
  • ಸೆಲ್ಟೊಸ್‌ ಮತ್ತು ಕರೆನ್ಸ್‌ ಕಾರುಗಳೆರಡೂ ಒಂದೇ ರೀತಿಯ ಎಂಜಿನ್‌ ಮತ್ತು ಟ್ರಾನ್ಸ್‌ ಮಿಶನ್‌ ಆಯ್ಕೆಗಳನ್ನು ಹೊಂದಿದ್ದರೂ, MPV ಯು CVT ಅಟೋಮ್ಯಾಟಿಕ್‌ ಅನ್ನು ಹೊಂದಿಲ್ಲ.
  • ಬೆಲೆಗಳ ಹೆಚ್ಚಳವು 2023ರ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ.

ಆರ್ಥಿಕ ವರ್ಷದ ಎರಡನೇ ಭಾಗವು ಸಮೀಪಿಸುತ್ತಿರುವಂತೆಯೇ ಕಾರು ತಯಾರಕ ಸಂಸ್ಥೆಗಳು ಬೆಲೆಗಳಲ್ಲಿ ಪರಿಷ್ಕರಣೆ ಮಾಡುವ ಕೆಲಸಕ್ಕೆ ಕೈ ಹಾಕಿವೆ. ಬೆಲೆ ಏರಿಸುವ ವಿಚಾರದಲ್ಲಿ ಕಿಯಾ ಸಂಸ್ಥೆಯು ಮಹೀಂದ್ರಾದ ಹಾದಿಯನ್ನು ಹಿಡಿದಿದ್ದು ತನ್ನ ಎರಡು ಜನಪ್ರಿಯ ಮಾದರಿಗಳಾದ 2023 ಕಿಯಾ ಸೆಲ್ಟೊಸ್ ಮತ್ತು  ಕಿಯಾ ಕರೆನ್ಸ್‌  ಗಳಲ್ಲಿ ಅಕ್ಟೋಬರ್‌ ತಿಂಗಳಿನಿಂದ ಈ ಹೆಚ್ಚಳವನ್ನು ಮಾಡಲಿದೆ. ಈ ಮೂಲಕ ಕರೆನ್ಸ್‌ ಮಾದರಿಯು ಈ ವರ್ಷದಲ್ಲಿ ಎರಡನೇ ಬಾರಿಗೆ ಬೆಲೆ ಹೆಚ್ಚಳವನ್ನು ಕಂಡರೆ, ಪರಿಷ್ಕೃತ ಸೆಲ್ಟೊಸ್‌ ಮಾದರಿಯಲ್ಲಿ ಪರಿಚಯಾತ್ಮಕ ಬೆಲೆಯು ಕೊನೆಗೊಳ್ಳಲಿದೆ. 

ಎಷ್ಟು ಹೆಚ್ಚಳ ಉಂಟಾಗಲಿದೆ?

Kia Seltos Profile

ವರದಿಗಳ ಪ್ರಕಾರ, 2023 ಸೆಲ್ಟೊಸ್‌ ಮತ್ತು ಕರೆನ್ಸ್‌ ಮಾದರಿಗಳಲ್ಲಿ 2 ಶೇಕಡಾದಷ್ಟು ಬೆಲೆ ಹೆಚ್ಚಳ ಉಂಟಾಗಲಿದೆ. ಸುದ್ದಿಸಂಸ್ಥೆ ಪಿ.ಟಿ.ಐ ಗೆ ಅಧಿಕೃತ ಹೇಳಿಕೆಯೊಂದನ್ನು ನೀಡಿ, ಕಿಯಾ ಇಂಡಿಯಾದ ನ್ಯಾಷನಲ್‌ ಹೆಡ್‌ ಆಫ್‌ ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌ ಆಗಿರುವ ಹರ್‌ ದೀಪ್‌ ಎಸ್‌. ಬ್ರಾರ್‌ ಅವರು, ಕಚ್ಚಾ ವಸ್ತುಗಳಲ್ಲಿ ಉಂಟಾಗಿರುವ ಹೆಚ್ಚಳದ ಕಾರಣ ಅನೇಕ ಕಂಪನಿಗಳು ಏಪ್ರಿಲ್‌ ನಂತರವೇ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದ್ದರೆ, ಕಿಯಾ ಸಂಸ್ಥೆಯು ಇಲ್ಲಿಯತನಕ ಈ ಕೆಲಸಕ್ಕೆ ಕೈ ಹಾಕಿಲ್ಲ ಎಂದು ಹೇಳಿದ್ದಾರೆ.  ಕಿಯಾ ಸಂಸ್ಥೆಯು ಪರಿಷ್ಕೃತ ಸೆಲ್ಟೊಸ್‌ ಅನ್ನು ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಹೂಡಿಕೆ ಮಾಡಬೇಕಾದ ಕಾರಣ ಬೆಲೆಗಳನ್ನು ಪರಿಷ್ಕರಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಸಹ ಅವರು ಹೇಳಿದ್ದಾರೆ.

ಆದರೆ ವರದಿಗಳ ಪ್ರಕಾರ, ಕಿಯಾ ಸಂಸ್ಥೆಯು ಈ ಸುತ್ತಿನಲ್ಲಿ ಸೋನೆಟ್‌ ಸಬ್‌ ಕಾಂಪ್ಯಾಕ್ಟ್‌ SUV ಯ ಬೆಲೆಯನ್ನು ಹೆಚ್ಚಿಸುವುದಿಲ್ಲ. 

ಇದನ್ನು ಸಹ ನೋಡಿರಿ: 25 ವರ್ಷಗಳನ್ನು ಪೂರ್ಣಗೊಳಿಸಿದ ಗೂಗಲ್: ಆಧುನಿಕ ಕಾರುಗಳು ಮತ್ತು ನಮ್ಮ ಚಾಲನಾ ಅನುಭವವನ್ನು ಇದು ರೂಪಿಸಿದ್ದು ಹೀಗೆ

ಸೆಲ್ಟೊಸ್‌ ಮತ್ತು ಕರೆನ್ಸ್‌ ಕಾರುಗಳು ಏನನ್ನು ಹೊಂದಿವೆ?

Kia Seltos Interior

ಪರಿಷ್ಕೃತ ಸೆಲ್ಟೊಸ್‌ ಮಾದರಿಯು 10.25 ಇಂಚಿನ ಎರಡು ಡಿಸ್ಪ್ಲೇ (ಚಾಲಕನ ಡಿಜಿಟಲ್‌ ಡಿಸ್ಪ್ಲೇ ಮತ್ತು ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್)‌, ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಪ್ಯಾನೊರಾಮಿಕ್‌ ಸನ್‌ ರೂಫ್‌ ಅನ್ನು ಹೊಂದಿದೆ. ಅಲ್ಲದೆ ಬಿಲ್ಟ್‌ ಇನ್‌ ಏರ್‌ ಪ್ಯೂರಿಫೈರ್‌, ಆಂಬಿಯೆಂಟ್‌ ಲೈಟಿಂಗ್‌, ಹೆಡ್ಸ್‌ - ಅಪ್‌ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು ಇದರಲ್ಲಿರಲಿವೆ. ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್‌ ಬ್ಯಾಗುಗಳು (ಪ್ರಮಾಣಿತ), ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), 360 ಡಿಗ್ರಿ ಕ್ಯಾಮರಾ ಮತ್ತು ಲೇನ್‌ ಕೀಪ್‌ ಅಸಿಸ್ಟ್‌, ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್‌ ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿಗಳನ್ನು ಹೊಂದಿರುವ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳು ಒಳಗೊಂಡಿವೆ.

ಕಿಯಾ ಸಂಸ್ಥೆಯು ಇತ್ತೀಚೆಗೆ ಸೆಲ್ಟೊಸ್‌ ನ ಅತ್ಯಂತ ಅಗ್ಗದ ADAS ಒಳಗೊಂಡಿರುವ ವೇರಿಯಂಟ್‌ ಗಳನ್ನು ಬಿಡುಗಡೆ ಮಾಡಿದೆ. ನೀವು ಇಲ್ಲಿ ಕ್ಲಿಕ್‌ ಮಾಡುವ ಮೂಲಕ ಈ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

Kia Carens Interior

ಇನ್ನೊಂದೆಡೆ ಕರೆನ್ಸ್‌ MPV ಯು 6 ಅಥವಾ 7 ಸೀಟುಗಳ ಮೂರು ಸಾಲುಗಳ ವ್ಯವಸ್ಥೆಯೊಂದಿಗೆ ಬರಲಿದೆ. ಇದು ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 10.25 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌, ಸೆಮಿ ಡಿಜಿಟಲ್‌ ಇನ್ಸ್‌ ಟ್ರುಮೆಂಟ್‌ ಕ್ಲಸ್ಟರ್‌, ಕ್ರೂಸ್‌ ಕಂಟ್ರೋಲ್‌ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳನ್ನು ಹೊಂದಿರಲಿದೆ. ಆರು ಏರ್‌ ಬ್ಯಾಗುಗಳು, ಆಲ್‌ ವೀಲ್‌ ಡಿಸ್ಕ್‌ ಬ್ರೇಕ್‌ ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ಮತ್ತು ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS) ಇತ್ಯಾದಿ ಸುರಕ್ಷತಾ ಸೌಲಭ್ಯಗಳು ಇದರಲ್ಲಿವೆ.

ಪವರ್‌ ಟ್ರೇನ್ ಗಳು

Kia Carens Engine

 2023 ಕಿಯಾ ಸೆಲ್ಟೊಸ್‌ ಮತ್ತು ಕಿಯಾ ಕರೆನ್ಸ್‌ ಮಾದರಿಗಳೆರಡೂ ಒಂದು ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್‌, ಒಂದು ಟರ್ಬೊ ಪೆಟ್ರೋಲ್‌ ಮತ್ತು ಒಂದು ಡೀಸೆಲ್‌ ಎಂಜಿನ್‌ ಸೇರಿದಂತೆ ಮೂರು ಎಂಜಿನ್‌ ಆಯ್ಕೆಗಳಲ್ಲಿ ಬರಲಿವೆ. ಅವುಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

ಎಂಜಿನ್

1.5-ಲೀಟರ್ ಪೆಟ್ರೋಲ್

1.5-ಲೀಟರ್ T-GDi ಟರ್ಬೊ ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್

115PS

160PS

116PS

ಟಾರ್ಕ್

144Nm

253Nm

250Nm

ಟ್ರಾನ್ಸ್‌ ಮಿಶನ್

6-MT, CVT (ಸೆಲ್ಟೊಸ್‌ ಮಾತ್ರ)

6-iMT, 7-DCT

6-iMT, 6-AT

ಟರ್ಬೊ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳು ಸಾಮಾನ್ಯ ಮ್ಯಾನುವಲ್‌ ಶಿಫ್ಟರ್‌ ಆಯ್ಕೆಯನ್ನು ಹೊಂದಿಲ್ಲ. ಬದಲಾಗಿ ಕಿಯಾ ಸಂಸ್ಥೆಯು ಅದನ್ನು ತನ್ನ iMT (ಕ್ಲಚ್‌ ಪೆಡಲ್‌ ಇಲ್ಲದೆಯೇ ಮ್ಯಾನುವಲ್)‌ ಜೊತೆಗೆ ನೀಡುತ್ತಿದೆ.

ಪ್ರಸ್ತುತ ಬೆಲೆ ಶ್ರೇಣಿ

ಸದ್ಯಕ್ಕೆ 2023 ಕಿಯಾ ಸೆಲ್ಟೊಸ್‌ ವಾಹನದ ಬೆಲೆಯನ್ನು ರೂ 10.90 ಲಕ್ಷದಿಂದ ರೂ 20 ಲಕ್ಷದ ನಡುವೆ (ಪರಿಚಯಾತ್ಮಕ) ನಿಗದಿಪಡಿಸಿದರೆ, ಕಿಯಾ ಕರೆನ್ಸ್ ವಾಹನವು ರೂ. 10.45 ಲಕ್ಷದಿಂದ ರೂ. 18.95 ಲಕ್ಷದ ನಡುವೆ ಲಭ್ಯ (ಎಲ್ಲಾ ಬೆಲೆಗಳು ಎಕ್ಸ್‌ - ಶೋರೂಂ ಬೆಲೆಗಳಾಗಿವೆ). ಸೆಲ್ಟೊಸ್‌ ಕಾರು ಮಾರುತಿ ಗ್ರಾಂಡ್‌ ವಿಟಾರ, ಟೊಟೊಯಾ ಅರ್ಬನ್‌ ಕ್ರೂಸರ್‌ ಹೈರೈಡರ್, ಫೋಕ್ಸ್‌ ವ್ಯಾಗನ್‌ ತೈಗುನ್, ಸ್ಕೋಡ ಕುಶಕ್, ಸಿಟ್ರಾನ್ C3 ಏರ್‌ ಕ್ರಾಸ್ ಮತ್ತು MG ಆಸ್ಟರ್‌ ಜೊತೆಗೆ ಸ್ಪರ್ಧಿಸಲಿದೆ. 

ಇದೇ ವೇಳೆ ಕರೆನ್ಸ್‌ ಮಾದರಿಯು, ಮಾರುತಿ ಎರ್ಟಿಗಾ ಮತ್ತು ಮಾರುತಿ Xl6  ಕಾರುಗಳ ಬದಲಿಗೆ ಪ್ರೀಮಿಯಂ ಆಯ್ಕೆ ಎನಿಸಿದರೆ,  ಟೊಯೊಟಾ ಇನೋವಾ ಹೈಕ್ರಾಸ್, ಮಾರುತಿ ಇನ್ವಿಕ್ಟೊ ಮತ್ತು ಟೊಯೊಟಾ ಇನೋವಾ ಕ್ರಿಸ್ಟ ಮಾದರಿಗಳಿಗೆ ಪ್ರತಿಯಾಗಿ ಅಗ್ಗದ ಆಯ್ಕೆಯಾಗಿ ಹೊರಹೊಮ್ಮಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೆಲ್ಟೊಸ್‌ ಡೀಸೆಲ್

was this article helpful ?

Write your Comment on Kia ಸೆಲ್ಟೋಸ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience