ಇತ್ತೀಚಿನ ಸ್ಪೈ ಶಾಟ್‌ನಲ್ಲಿ ಬಹಿರಂಗಗೊಂಡ 2023 ಟಾಟಾ ನೆಕ್ಸಾನ್‌ನ ಹಿಂಭಾಗದ ವಿನ್ಯಾಸ
ಟಾಟಾ ನೆಕ್ಸಾನ್ ಗಾಗಿ ansh ಮೂಲಕ ಆಗಸ್ಟ್ 25, 2023 01:57 pm ರಂದು ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಒಂದೇ ರೀತಿಯಾಗಿದ್ದು ಆದರೆ ಸ್ವಲ್ಪ ಆಧುನಿಕ ಮತ್ತು ಸ್ಪೋರ್ಟಿಯರ್ ಸ್ಪರ್ಶವನ್ನು ನೀಡಲಾಗಿದೆ.
-
ಚಿತ್ರೀಕರಣದ ಸಮಯದಲ್ಲಿ ನವೀಕೃತ ನೆಕ್ಸಾನ್ ಅನ್ನು ಯಾವುದೇ ಕವರ್ ಇಲ್ಲದೆ ನಾವು ನೋಡಿದ್ದೇವೆ
-
ಇದು ಹೊಸದಾದ ಬಣ್ಣದೊಂದಿಗೆ, ನವೀನ ಹಿಂಭಾಗದ ಬಂಪರ್ ಮತ್ತು ಟೈಲ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ.
-
ಇದು ಪರಿಷ್ಕರಿಸಿದ ಕ್ಯಾಬಿನ್‌ನೊಂದಿಗೆ ಬರುತ್ತಿದೆ.
-
1.5 ಲೀಟರ್ ಡಿಸೇಲ್ ಮತ್ತು 1.2 ಲೀಟರ್ ಟರ್ಬೋ-ಪೆಟ್ರೋಲ್‌ನ ಎರಡು ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ.
-
ಇದು ಈ ವರ್ಷದ ನಂತರ ರೂ. 8 ಲಕ್ಷದ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಬರುವ ಸಾಧ್ಯತೆಯಿದೆ.
ಈ ನವೀಕೃತ ಟಾಟಾ ನೆಕ್ಸಾನ್ ಇನ್ನೂ ಮಾರುಕಟ್ಟೆಗೆ ಬರಬೇಕಾಗಿದ್ದರೂ ಅದರ ಸ್ಪೈ ಶಾಟ್‌ಗಳು ಇದರ ಬಿಡುಗಡೆಯು ತುಂಬಾ ದೂರವಿಲ್ಲ ಎಂಬುದನ್ನು ನಮಗೆ ನೆನಪಿಸುತ್ತಲೇ ಇರುತ್ತವೆ. ಅಪ್‌ಡೇಟ್ ಆದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ತುಂಬಾ ಇತ್ತೀಚೆಗೆ ಅದರ TVC ಚಿತ್ರೀಕರಣದಲ್ಲಿ ಯಾವುದೇ ಹೊದಿಕೆಯಿಲ್ಲದೇ ಕಂಡುಬಂದಿದ್ದು ನಾವು ಅಂತಿಮವಾಗಿ ಅದರ ಹಿಂಭಾಗದ ಪ್ರೊಫೈಲ್ ಅನ್ನು ನೋಡಿದ್ದೇವೆ.
ನೆಕ್ಸಾನ್‌ನ ಹೊಸ ಹಿಂಭಾಗದ ಪ್ರೊಫೈಲ್
ಟಾಟಾ ಎಸ್‌ಯುವಿಯ ಹಿಂಭಾಗದ ಒಟ್ಟಾರೆ ಆಕಾರವು ರಿಯರ್ ಸ್ಪೈಲರ್ ಮತ್ತು ರಿಫ್ಲೆಕ್ಟರ್ ಪ್ಯಾನಲ್‌ನೊಂದಿಗೆ ಹಿಂದಿನಂತೆಯೇ ಕಂಡುಬಂದರೆ ಇದರಲ್ಲಿನ ವಿವರಗಳು ಹೆಚ್ಚು ಆಧುನಿಕ ಮತ್ತು ಆಕ್ರಮಣಕಾರಿಯಾಗಿವೆ. ಹೊಸ ನೆಕ್ಸಾನ್‌ನ ಪ್ರಮುಖ ಬದಲಾವಣೆಯೆಂದರೆ ಮಧ್ಯದಲ್ಲಿ ಸಂಪರ್ಕಿತ ಅಂಶದೊಂದಿಗೆ ಹೊಸ ನಯವಾದ LED ಟೈಲ್‌ಲ್ಯಾಂಪ್ ಸೆಟಪ್ ಕಾಣಬಹುದಾಗಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾದ ಟಾಟಾ ಪಂಚ್ ಇವಿ
ಅದರ ಕೆಳಗೆ ಹಿಂಭಾಗದ ಹಾಂಚ್‌ಗಳು ಹೆಚ್ಚು ಎದ್ದು ಕಾಣುವಂತೆ ತೋರುವುದರಿಂದ ಪಾರ್ಶ್ವದಲ್ಲಿರುವ ರಿಫ್ಲೆಕ್ಟರ್ ಎಲಿಮೆಂಟ್‌ಗಳು ಸ್ಪೋರ್ಟಿಯರ್ ನೋಟದೊಂದಿಗೆ ಎದ್ದು ಕಾಣುತ್ತವೆ. ಪಾರ್ಶ್ವಗಳು ಹೆಚ್ಚು ಶಾರ್ಪ್ ಆದ ಕ್ರೀಸ್‌ಗಳನ್ನು ಪಡೆದಿವೆ ಮತ್ತು ಬಂಪರ್ ಈಗ ಮರುವಿನ್ಯಾಸಗೊಳಿಸಿದ ಎಲಿಮೆಂಟ್‌ಗಳೊಂದಿಗೆ ಹೆಚ್ಚು ದೊಡ್ಡದಾಗಿವೆ.
ಇತರ ವಿನ್ಯಾಸ ಬದಲಾವಣೆಗಳು
ಈ 2023 ನೆಕ್ಸಾನ್ ಸಂಪೂರ್ಣವಾಗಿ ಹೊಸದಾದ ನೋಟವನ್ನು ಪಡೆಯುತ್ತಿದೆ. ಇದರ ಮುಂಭಾಗದ ಪ್ರೊಫೈಲ್ ಅನ್ನು ಇತ್ತೀಚೆಗೆ ಗುರುತಿಸಲಾಗಿದ್ದು, ಇದು ಹೊಸ ನಯವಾದ LED DRLಗಳು ಸಂಪೂರ್ಣ ಕೆಳಗಡೆಯ ಸ್ಥಾನವನ್ನು ಪಡೆದಿರುವ ಹೆಡ್‌ಲ್ಯಾಂಪ್‌ಗಳನ್ನು ಹ್ಯಾರಿಯರ್ ಇವಿ ಕಾನ್ಸೆಪ್ಟ್‌ನಲ್ಲಿ ಮತ್ತು ದೊಡ್ಡದಾದ ಮುಂಭಾಗದ ಗ್ರಿಲ್‌ನಲ್ಲಿರುವ ಶೈಲಿಯೊಂದಿಗೆ ಬಹಿರಂಗಪಡಿಸಿದೆ.
ಇದನ್ನೂ ಓದಿ: 2023 ರಲ್ಲಿ ಹ್ಯುಂಡೈ ಎಕ್ಸ್‌ಟರ್‌ಗಿಂತ ಟಾಟಾ ಪಂಚ್ ಸುಲಭದಲ್ಲಿ ಲಭ್ಯ
ಒಳಭಾಗದ ವಿನ್ಯಾಸದಲ್ಲಿಯೂ ಸಹ ಭಾರೀ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. 2023 ನೆಕ್ಸಾನ್ ಹೊಸ ಡ್ಯಾಶ್‌ಬೋರ್ಡ್ ಲೇಔಟ್, ದೊಡ್ಡ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹೊಸ ಸ್ಟೀರಿಂಗ್ ವ್ಹೀಲ್ ಮತ್ತು ವಿಭಿನ್ನ ಕ್ಯಾಬಿನ್ ಕಲರ್ ಸ್ಕೀಮ್ ಅನ್ನು ಇದು ಹೊಂದಿರುತ್ತದೆ.
ನಿರೀಕ್ಷಿತ ಪವರ್‌ಟ್ರೇನ್‌ಗಳು
ಈ ಅಪ್‌ಡೇಟೆಡ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೊತೆಯಾದ ಅಥವಾ 6-ಸ್ಪೀಡ್ AMT ಯೊಂದಿಗೆ ಜೊತೆಯಾದ ತನ್ನ 1.5-ಲೀಟರ್ ಡಿಸೇಲ್ ಎಂಜಿನ್ (115PS/160Nm) ಅನ್ನು ಪಡೆಯುತ್ತದೆ. ಟಾಟಾ 2023 ರ ನೆಕ್ಸಾನ್‌ನಲ್ಲಿ, DCT (ಡ್ಯುಲ್ ಕ್ಲಚ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಹೊಂದಿರುವ ಹೊಸ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (125PS/225Nm) ಅನ್ನು ಹೊಂದಿರಬಹುದಾದ ನಿರೀಕ್ಷೆಯಿದೆ.
ಫೀಚರ್‌ಗಳು ಮತ್ತು ಸುರಕ್ಷತೆ
ನವೀಕರಣದೊಂದಿಗೆ ನಾವು ಅದರ ಫೀಚರ್ ಲಿಸ್ಟ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ನೋಡಬಹುದು. ನವೀಕೃತ ನೆಕ್ಸಾನ್ 10.25 ಇಂಚಿನ ಇನ್‌ಪೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಪಡೆಯಬಹುದು. ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಚಾರ್ಜರ್‌ನಂತಹ ಸೌಕರ್ಯಗಳು ಈಗಾಗಲೇ ಇದರಲ್ಲಿ ಲಭ್ಯವಿವೆ.
ಇದನ್ನೂ ಓದಿ: ಟಾಟಾ ಆಲ್ಟೋಸ್ ವರ್ಸಸ್ ಮಾರುತಿ ಬಲೆನೊ ವರ್ಸಸ್ ಟೊಯೋಟಾ ಗ್ಲಾಂಝಾ - CNG ಮೈಲೇಜ್ ಹೋಲಿಕೆ
ಸುರಕ್ಷತಾ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮಾರಾವನ್ನು ಪಡೆಯಬಹುದು. ಇದು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಅನ್ನು ಸಹ ಪಡೆಯುವ ನಿರೀಕ್ಷೆಯಿದ್ದು ಅವುಗಳನ್ನು ಪಡೆಯುವ ಮೊದಲ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಬಹುದು. ಇದು ಈಗಾಗಲೇ ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೊಂದಿದೆ.
ಬಿಡುಗಡೆ ಮತ್ತು ಬೆಲೆ
ನವೀಕೃತ ನೆಕ್ಸಾನ್‌ನ ಬಿಡುಗಡೆಯನ್ನು ಈ ವರ್ಷದ ನಂತರ ರೂ. 8 ಲಕ್ಷದ ಮೇಲ್ಪಟ್ಟ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಈ 2023 ರ ನೆಕ್ಸಾನ್ ಕಿಯಾ ಸೊನೆಟ್, ಹ್ಯುಂಡೈ ವೆನ್ಯು, ಮಹೀಂದ್ರಾ XUV300 ಮತ್ತು ಮಾರುತಿ ಬ್ರೆಝಾದೊಂದಿಗೆ ಸ್ಪರ್ಧೆಯನ್ನು ಮುಂದುವರಿಸುತ್ತದೆ.
ಇನ್ನಷ್ಟು ಇಲ್ಲಿ ಓದಿ : ನೆಕ್ಸಾನ್ AMT
0 out of 0 found this helpful