• English
  • Login / Register

ಕವರ್‌ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಮುಂಭಾಗದ ಲುಕ್

ಟಾಟಾ ನೆಕ್ಸಾನ್‌ ಗಾಗಿ ansh ಮೂಲಕ ಆಗಸ್ಟ್‌ 21, 2023 10:31 am ರಂದು ಪ್ರಕಟಿಸಲಾಗಿದೆ

  • 34 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಹೆಡ್‌ಲ್ಯಾಂಪ್‌ಗಳ ಡಿಸೈನ್ ಹ್ಯಾರಿಯರ್ EV ಹೆಡ್‌ಲ್ಯಾಂಪ್‌ಗಳ ಪರಿಕಲ್ಪನೆಯನ್ನು ಹೋಲುತ್ತಿದೆ

Tata Nexon 2023 Front Profile 

  • ಮುಂಭಾಗದಲ್ಲಿ ಯಾವುದೇ ಹೊದಿಕೆ ಇಲ್ಲದೆಯೇ ಈ ಪರೀಕ್ಷಾರ್ಥ ಕಾರನ್ನು ಗುರುತಿಸಲಾಗಿದೆ.

  •  ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು,

  •  1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್‌ಗಳನ್ನು ಒಳಗೊಂಡ ಇಂಜಿನ್ ಆಯ್ಕೆಗಳನ್ನು ನಿರೀಕ್ಷಿಸಬಹುದು.

  •  ಈ ವರ್ಷಾಂತ್ಯದಲ್ಲಿ ರೂ 8 ಲಕ್ಷ (ಎಕ್ಸ್-ಶೋರೂಂ) ನಿರೀಕ್ಷಿತ ಬೆಲೆಯೊಂದಿಗೆ ಬಿಡುಗಡೆಯಾಗಬಹುದು.

 ನವೀಕೃತ ಟಾಟಾ ನೆಕ್ಸನಾನ್ ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಮುಂಬರುವ ಈ SUVಯ ಅನೇಕ ಸ್ಪೈ ಶಾಟ್‌ಗಳನ್ನು ನಾವು ನೋಡುತ್ತಿದ್ದೇವೆ. ಮುಂಭಾಗದಲ್ಲಿ ಮುಚ್ಚಿಗೆ ಇಲ್ಲದ ನವೀಕೃತ ನೆಕ್ಸಾನ್ ಅನ್ನು ಇತ್ತೀಚೆಗೆ ಗುರುತಿಸಲಾಗಿದ್ದು, ಇದು ಕೆಲವು ಪ್ರಮುಖ ಡಿಸೈನ್ ಅಪ್‌ಗ್ರೇಡ್‌ಗಳನ್ನು ಬಹಿರಂಗಪಡಿಸಿದೆ.

 ಹೊಸ ಡಿಸೈನ್ ಲ್ಯಾಂಗ್ವೇಜ್

Tata Nexon 2023 Headlamps

ಈ ನೆಕ್ಸಾನ್‌ನ ಹೊಸ ಮುಂಭಾಗವು ಪ್ರಸ್ತುತ ಇರುವ ಮಾಡೆಲ್‌ಗೆ ಹೋಲಿಸಿದರೆ, ಅತ್ಯಂತ ಪರಿಷ್ಕೃತವಾಗಿದೆ. ಮುಂಭಾಗದ ಮೇಲೆ ಅನುಕ್ರಮ ಇಂಡಿಕೇಟರ್‌ಗಳೊಂದಿಗೆ ನಯವಾದ ಹೊಳಪಿನ LED DRLಗಳು ಇದ್ದು, ಹೆಡ್‌ಲ್ಯಾಂಪ್‌ಗಳು ಈಗ ಬಂಪರ್‌ನ ಕೆಳಗೆ ಬರುತ್ತವೆ. ನೇರ ಆಧಾರಿತ ಮುಚ್ಚಿಗೆ ಹೊಂದಿರುವ ಈ ಹೆಡ್‌ಲ್ಯಾಂಪ್‌ಗಳು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹ್ಯಾರಿಯರ್ EV ಪರಿಕಲ್ಪನೆಯನ್ನು ಹೋಲುತ್ತವೆ.

Tata Nexon 2023 Front Grille

ಗ್ರಿಲ್ ಈಗ ದೊಡ್ಡದಾಗಿದ್ದು, ಏರ್‌ ಡ್ಯಾಮ್‌ನ ಮಧ್ಯಭಾಗದ ಮೂಲಕ ಪ್ಲಾಸ್ಟಿಕ್ ಎಲಿಮೆಂಟ್ ಹಾದು ಹೋಗಿ ಎರಡೂ ಹೆಡ್‌ಲ್ಯಾಂಪ್‌ಗಳ ಹೋಸಿಂಗ್ ಅನ್ನು ಸಂಪರ್ಕಿಸುತ್ತದೆ.

 

ಇತರ ಡಿಸೈನ್ ಅಪ್‌ಡೇಟ್‌ಗಳು

2024 Tata Nexon spied

ನವೀಕೃತ ನೆಕ್ಸಾನ್‌ನ ಈ ಹಿಂದಿನ ನೋಟದಲ್ಲಿ, ಹೊಸ ಅಲಾಯ್‌ ವ್ಹೀಲ್‌ಗಳು, ಪರಿಷ್ಕೃತ ಬಂಪರ್ ಡಿಸೈನ್ (ಮುಂಭಾಗ ಮತ್ತು ಹಿಂಭಾಗ), ರೀಶೇಪ್‌ ಮಾಡಲಾದ ಟೇಲ್‌ಗೇಟ್ ಮತ್ತು ಸಂಪರ್ಕಿತ ಟೇಲ್‌ಲ್ಯಾಂಪ್ ಸೆಟಪ್ ಅನ್ನು ನಾವು ಗಮನಿಸಿದ್ದೇವೆ. ಇತ್ತೀಚೆಗೆ ಕಂಡುಬಂದ ಕಾರು ಸಣ್ಣ ವೇರಿಯೆಂಟ್‌ನದ್ದಾಗಿರಬಹುದು ಯಾಕೆಂದರೆ, ಇದರಲ್ಲಿ ಸ್ಟೀಲ್ ವ್ಹೀಲ್‌ಗಳಿದ್ದು, ಯಾವುದೇ ಕ್ರೋಮ್ ಅಥವಾ ಗ್ಲಾಸ್ ಬ್ಲ್ಯಾಕ್ ಗಾರ್ನಿಶ್ ಇರಲಿಲ್ಲ.

 ಇದನ್ನೂ ಓದಿ: ನವೀಕೃತ ಟಾಟಾ ನೆಕ್ಸಾನ್ ಪಡೆಯಲಿದೆ ಹೊಚ್ಚ ಹೊಸ ಇಂಟೀರಿಯರ್ ಡಿಸೈನ್-ಸ್ಪೈ ಶಾಟ್‌ಗಳು

2023ರ ಟಾಟಾ ನೆಕ್ಸಾನ್ ಅಪ್‌ಡೇಟ್ ಮಾಡಲಾದ ಇಂಟೀರಿಯರ್ ಅನ್ನೂ ಪಡೆಯಲಿದೆ. ಇದು ಹೊಸ ಕ್ಯಾಬಿನ್ ಥೀಮ್, ಹೊಸ ಡ್ಯಾಶ್‌ಬೋರ್ಡ್ ಲೇಔಟ್ ಜೊತೆಗೆ ದೊಡ್ಡದಾದ ಟಚ್‌ಸ್ಕ್ರೀನ್ ಯೂನಿಟ್, ಟಾಟಾ ಅವಿನ್ಯಾ-ಪ್ರೇರಿತ ಸ್ಟೀರಿಂಗ್ ವ್ಹೀಲ್ ಮತ್ತು ಪರಿಷ್ಕೃತ ಸೆಂಟರ್ ಕನ್ಸೋಲ್‌ ಅನ್ನು ಹೊಂದಿರುತ್ತದೆ.

 

ನಿರೀಕ್ಷಿತ ಪವರ್‌ಟ್ರೇನ್‌ಗಳು

ಟಾಟಾ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMTಗೆ ಜೋಡಿಸಲಾದ 1.5-ಲೀಟರ್ ಡೀಸೆಲ್ ಇಂಜಿನ್ (115PS/160Nm) ಅನ್ನು ಉಳಿಸಿಕೊಂಡಿರುವ ಸಾಧ್ಯತೆ ಇದೆ. ಆದರೆ ಈ ಕಾರು ತಯಾರಕರು DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಹೊಂದಿರಬಹುದಾದ ತಮ್ಮ ಹೊಸ 1.2-ಲೀಟರ್ ಟರ್ಬೋ ಪೆಟ್ರೋಲ್ ಯೂನಿಟ್ (125PS/225Nm) ಅನ್ನೂ ನೀಡಬಹುದು.

 

ಫೀಚರ್‌ಗಳು ಮತ್ತು ಸುರಕ್ಷತೆ

Tata Nexon 2023

 ಟಾಟಾ ಈ ನವೀಕೃತ ನೆಕ್ಸಾನ್ ಅನ್ನು 10.25-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್‌ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ AC ಮತ್ತು ವಾತಾಯನದ ಮುಂಭಾಗದ ಸೀಟುಗಳು ಮುಂತಾದ ಫೀಚರ್‌ಗಳಿಂದ ಸಜ್ಜುಗೊಳಿಸಿದೆ.

ಇದನ್ನೂ ಓದಿ: 2024 ಟಾಟಾ ನೆಕ್ಸಾನ್ ಡೈನಾಮಿಕ್ ಟರ್ನ್ ಇಂಡಿಕೇರ್‌ಗಳೊಂದಿಗೆ ಕಂಡುಬಂದಿದೆ

ಸುರಕ್ಷತೆಯ ವಿಷಯದಲ್ಲಿ ಈ ಕಾರು ತಯಾರಕರು ಆರು ಏರ್‌ಬ್ಯಾಗ್‌ಗಳು, ABS ಹಾಗೂ EBD, ಹಿಲ್ ಅಸಿಸ್ಟ್, ESP (ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), 360 ಡಿಗ್ರಿ ಕ್ಯಾಮರಾವನ್ನು ನೀಡಿದ್ದಾರೆ. ಹಾಗೆಯೇ, ಇದು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು ನೀಡುವ ಏಕೈಕ ಸಬ್‌ಕಾಂಪ್ಯಾಕ್ಟ್ SUV ಆಗಿದೆ.

 

ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

Tata Nexon 2023

ಟಾಟಾ ಈ ನವೀಕೃತ ನೆಕ್ಸಾನ್ ಅನ್ನು ಸೆಪ್ಟೆಂಬರ್ 2023ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು ಆರಂಭಿಕ ಬೆಲೆಗಳು ರೂ 8 ಲಕ್ಷ (ಎಕ್ಸ್-ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದೆ. ಇದು ತನ್ನ ಪ್ರತಿಸ್ಪರ್ಧಿಗಳಾದ  ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ ಮತ್ತು ಮಹೀಂದ್ರಾ XUV300 ಪೈಪೋಟಿ ನೀಡಲಿದೆ.

ಚಿತ್ರದ ಮೂಲ

ಇನ್ನಷ್ಟು ಓದಿ : ನೆಕ್ಸಾನ್ ಆಟೋಮ್ಯಾಟಿಕ್

was this article helpful ?

Write your Comment on Tata ನೆಕ್ಸಾನ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience