5 ಚಿತ್ರಗಳಲ್ಲಿ 2024ರ Hyundai Cretaದ EX ವೇರಿಯಂಟ್‌ನ ಸಂಪೂರ್ಣ ವಿವರಣೆ
ಹುಂಡೈ ಕ್ರೆಟಾ ಗಾಗಿ shreyash ಮೂಲಕ ಜನವರಿ 22, 2024 02:31 pm ರಂದು ಪ್ರಕಟಿಸಲಾಗಿದೆ
- 179 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ನ ಬೇಸ್ ಗಿಂತ ಒಂದು ಮಟ್ಟ ಮೇಲಿರುವ EX ವೇರಿಯಂಟ್ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿದೆ.
ಹ್ಯುಂಡೈ ಕ್ರೆಟಾ ಇತ್ತೀಚೆಗೆ ಸಮಗ್ರ ಬದಲಾವಣೆಗೆ ಒಳಗಾಗಿದೆ, ಇದು ಈ SUVಗೆ ಫ್ರೆಶ್ ಲುಕ್ ನೀಡುವುದರ ಜೊತೆಗೆ ಹೊಸ ಫೀಚರ್ ಗಳ ಶ್ರೇಣಿಯನ್ನು ಕೂಡ ಪರಿಚಯಿಸಿದೆ. ಹುಂಡೈ ತನ್ನ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡುತ್ತದೆ: E, EX, S, S(O), SX, SX Tech, ಮತ್ತು SX(O). ಈ ಲೇಖನದಲ್ಲಿ, ನಾವು ಅಪ್ಡೇಟ್ ಆಗಿರುವ ಕಾಂಪ್ಯಾಕ್ಟ್ SUV ಯ ಬೇಸ್ ಗಿಂತ ಒಂದು ಮಟ್ಟ ಮೇಲಿರುವ EX ವೇರಿಯಂಟ್ ನ ವಿವರಗಳನ್ನು 5 ಚಿತ್ರಗಳಲ್ಲಿ ಒದಗಿಸುತ್ತೇವೆ.
ಮುಂಭಾಗದಲ್ಲಿ, 2024 ಹ್ಯುಂಡೈ ಕ್ರೆಟಾ EX ವೇರಿಯಂಟ್ ತಲೆಕೆಳಗಾದ L-ಆಕಾರದ LED DRL, ಪ್ರಮುಖವಾಗಿ ಕಾಣುವ ಆಯತಾಕಾರದ ಗ್ರಿಲ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ. ಆದರೆ, ಕನೆಕ್ಟೆಡ್ DRL ಗಳು ಇಲ್ಲದಿರುವುದು ಮತ್ತು LED ಗಳ ಬದಲಿಗೆ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ನೀಡಿರುವುದು ಅದರ ಮೇಲ್ಮಟ್ಟದ-ಸ್ಪೆಕ್ ಮಾಡೆಲ್ ಗಳಿಂದ ಇದನ್ನು ಪ್ರತ್ಯೇಕಿಸುತ್ತದೆ. ಅದರೊಂದಿಗೆ, DRL ಸೆಟಪ್‌ಗೆ ಸಂಯೋಜಿಸಲಾದ ಟರ್ನ್ ಇಂಡಿಕೇಟರ್ ಗಳು ಸೀಕ್ವೆನ್ಷಿಯಲ್ ಫಂಕ್ಷನ್ ಅನ್ನು ಹೊಂದಿರುವುದಿಲ್ಲ.
ಸೈಡ್ ನಿಂದ ನೋಡಿದಾಗ, ಈ EX ವೇರಿಯಂಟ್ ಮತ್ತು ಮೇಲ್ಮಟ್ಟದ-ಸ್ಪೆಕ್ ಮಾಡೆಲ್ ಗಳ ನಡುವಿನ ವ್ಯತ್ಯಾಸಗಳು ಹೆಚ್ಚು ಸ್ಪಷ್ಟವಾಗುತ್ತವೆ. EX ವೇರಿಯಂಟ್ ವೀಲ್ ಕವರ್‌ಗಳೊಂದಿಗೆ 16-ಇಂಚಿನ ಸ್ಟೀಲ್ ವೀಲ್ಸ್ ಗಳನ್ನು ಹೊಂದಿದೆ, ಮತ್ತು ಸೈಡ್ ಇಂಡಿಕೇಟರ್‌ಗಳನ್ನು ORVM ಗಳ ಬದಲಿಗೆ ಸೈಡ್ ಫೆಂಡರ್‌ನಲ್ಲಿ ಇರಿಸಲಾಗಿದೆ. ಆದರೆ, ಕ್ರೆಟಾ EX ಸೈಡ್ ಗಾರ್ನಿಶ್ ಅನ್ನು ಪಡೆಯುತ್ತದೆ ಮತ್ತು ಅದು ಅದರ ಬೇಸ್-ಸ್ಪೆಕ್ E ವೇರಿಯಂಟ್ ನಲ್ಲಿ ಲಭ್ಯವಿಲ್ಲ.
ಇದನ್ನು ಕೂಡ ಓದಿ: 5 ಚಿತ್ರಗಳಲ್ಲಿ ಹೊಸ ಹುಂಡೈ ಕ್ರೆಟಾ E ಬೇಸ್ ವೇರಿಯಂಟ್ ನ ಪ್ರಮುಖ ವಿವರಗಳನ್ನು ತಿಳಿಯಿರಿ
ಹಿಂಭಾಗದಲ್ಲಿ, ಕ್ರೆಟಾ EX ಅದರ ಮೇಲಿನ ವೇರಿಯಂಟ್ ನಲ್ಲಿ ನೀಡಲಾಗುವ LED ಟೈಲ್ ಲ್ಯಾಂಪ್‌ಗಳನ್ನು ಹೊಂದಿಲ್ಲ. ಆದರೆ, ಅದರ ಬೇಸ್-ಸ್ಪೆಕ್ E ವೇರಿಯಂಟ್ ನಲ್ಲಿ ಇರುವಂತೆ, ಕ್ರೆಟಾದ ಈ EX ವೇರಿಯಂಟ್ ಶಾರ್ಕ್-ಫಿನ್ ಆಂಟೆನಾವನ್ನು ಪಡೆಯುತ್ತದೆ. ಹೈ-ಮೌಂಟೆಡ್ LED ಸ್ಟಾಪ್ ಲ್ಯಾಂಪ್, ಮತ್ತು ಹಿಂಬದಿಯ ಬಂಪರ್‌ಗೆ ಸಂಯೋಜಿಸಲಾದ ಸಿಲ್ವರ್ ಸ್ಕಿಡ್ ಪ್ಲೇಟ್ ನಂತಹ ಇತರ ವಿವರಗಳು ಕ್ರೆಟಾದ ಇತರ ಟ್ರಿಮ್‌ಗಳಂತೆಯೇ ಇರುತ್ತವೆ.
ಒಳಭಾಗದಲ್ಲಿ, ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ನ EX ವೇರಿಯಂಟ್ ಚಿಕ್ಕದಾದ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದು ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ. ಇದರ ಮೇಲಿನ ಮಾಡೆಲ್ ಗಳಲ್ಲಿ ದೊಡ್ಡದಾದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡಲಾಗಿದೆ. ಕೆಳಮಟ್ಟದ-ಸ್ಪೆಕ್ ಮಾಡೆಲ್ ಆಗಿರುವುದರಿಂದ, ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನೊಂದಿಗೆ ಬರುವುದಿಲ್ಲ.
ಈ ವೇರಿಯಂಟ್ ನಲ್ಲಿ ಹ್ಯುಂಡೈ ವೆನ್ಯೂ ಮತ್ತು ಹ್ಯುಂಡೈ ವೆರ್ನಾದಲ್ಲಿ ಕಂಡುಬರುವ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಯೂನಿಟ್ ಅನ್ನು ನೀಡಲಾಗಿದೆ, ಆದರೆ ಮೇಲ್ಮಟ್ಟದ ವೇರಿಯಂಟ್ ನಲ್ಲಿ 10.25-ಇಂಚಿನ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಅನ್ನು ನೀಡಲಾಗಿದೆ.
ಕ್ರೆಟಾ EXನಲ್ಲಿರುವ ಇತರ ಫೀಚರ್ ಗಳಲ್ಲಿ ಎಲ್ಲಾ ನಾಲ್ಕು ಪವರ್ ವಿಂಡೋಗಳು, ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ ಅಡ್ಜಸ್ಟ್ಮೆಂಟ್ ಗಳು ಮತ್ತು ಸ್ಟೀರಿಂಗ್-ಮೌಂಟೆಡ್ ಇನ್ಫೋಟೈನ್‌ಮೆಂಟ್ ಕಂಟ್ರೋಲ್‌ಗಳನ್ನು ಒಳಗೊಂಡಿದೆ. ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. 2024 ಕ್ರೆಟಾದ ಈ ವೇರಿಯಂಟ್ ಇನ್ನೂ ರಿಯರ್ ವ್ಯೂ ಕ್ಯಾಮೆರಾವನ್ನು ಪಡೆದಿಲ್ಲ.
ಇದನ್ನು ಕೂಡ ಓದಿ: ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾದ ಪ್ರತಿಯೊಂದು ವೇರಿಯಂಟ್ ನಲ್ಲಿ ಏನೇನಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ
ಎಂಜಿನ್ ಆಯ್ಕೆಗಳು
ಕ್ರೆಟಾ ಫೇಸ್‌ಲಿಫ್ಟ್‌ನ EX ವೇರಿಯಂಟ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (115 PS / 144 Nm) ಮತ್ತು 1.5-ಲೀಟರ್ ಡೀಸೆಲ್ ಯೂನಿಟ್ (116 PS / 250 Nm), ಎರಡನ್ನೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೆ ಮಾತ್ರ ಜೋಡಿಸಲಾಗಿದೆ. ಪೆಟ್ರೋಲ್‌ನೊಂದಿಗೆ CVT ಆಟೋಮ್ಯಾಟಿಕ್ ಆಯ್ಕೆ ಮತ್ತು ಡೀಸೆಲ್ ಯೂನಿಟ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್, ಕ್ರೆಟಾದ ಮಿಡ್-ಸ್ಪೆಕ್ S(O) ವೇರಿಯಂಟ್ ನಿಂದ ಲಭ್ಯವಿದೆ.
2024 ಕ್ರೆಟಾದ ಟಾಪ್-ಸ್ಪೆಕ್ SX(O) ವೇರಿಯಂಟ್ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಜೊತೆಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಆಯ್ಕೆಯನ್ನು ಮಾತ್ರ ಪಡೆಯುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ EX ಬೆಲೆಯು 12.18 ಲಕ್ಷದಿಂದ ಶುರುವಾಗಿ 13.68 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ). ಈ ಕಾಂಪ್ಯಾಕ್ಟ್ SUVಯು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್, MG ಆಸ್ಟರ್ ಮತ್ತು ಸಿಟ್ರೋನ್ C3 ಏರ್‌ಕ್ರಾಸ್‌ಗಳನ್ನು ಮಾರುಕಟ್ಟೆಯಲ್ಲಿ ಎದುರಿಸಲಿದೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ
0 out of 0 found this helpful