Login or Register ಅತ್ಯುತ್ತಮ CarDekho experience ಗೆ
Login

2024ರ Maruti Suzuki Swift: ಭಾರತೀಯ ಸ್ವಿಫ್ಟ್‌ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್‌ಗಿರುವ 5 ವ್ಯತ್ಯಾಸಗಳು

ಮಾರುತಿ ಸ್ವಿಫ್ಟ್ ಗಾಗಿ dipan ಮೂಲಕ ಜೂನ್ 20, 2024 07:42 pm ರಂದು ಪ್ರಕಟಿಸಲಾಗಿದೆ

ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಉತ್ತಮ ಫೀಚರ್‌ ಸೆಟ್ ಮತ್ತು 1.2-ಲೀಟರ್ 12V ಹೈಬ್ರಿಡ್ ಪವರ್‌ಟ್ರೇನ್ ಅನ್ನು ಹೊಂದಿದೆ, ಇದು ಭಾರತೀಯ ಮೊಡೆಲ್‌ನಲ್ಲಿ ಲಭ್ಯವಿರುವುದಿಲ್ಲ

ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ 2024ರ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ, ಹಲವಾರು ವೈಶಿಷ್ಟ್ಯಗಳ ಪ್ಯಾಕೇಜ್‌ಅನ್ನು ಹೊಂದಿದ್ದರೂ, ಅದರ ಅಂತರರಾಷ್ಟ್ರೀಯ ಆವೃತ್ತಿಗಳಲ್ಲಿ ಕಂಡುಬರುವ ಹೈಬ್ರಿಡ್ ಪವರ್‌ಟ್ರೇನ್ ಮತ್ತು ಆಲ್-ವೀಲ್-ಡ್ರೈವ್ (AWD) ಸೆಟಪ್ ಇದರಲ್ಲಿ ಮಿಸ್‌ ಆಗಿದೆ. ಹೊಸ ಸ್ವಿಫ್ಟ್ ಅನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಪರಿಚಯಿಸಲಾಯಿತು, ಆದರೆ ಇದನ್ನು ಇಂಡಿಯಾ-ಸ್ಪೆಕ್ ಮಾಡೆಲ್‌ನ ಪವರ್‌ಟ್ರೇನ್ ಸೆಟಪ್‌ನಿಂದ ಬಿಟ್ಟುಬಿಡಲಾಗಿದೆ. ಒಂದೇ ರೀತಿಯ ಬಾಡಿಯನ್ನು ಹೊಂದಿದ್ದರೂ, ಈ ಮೊಡೆಲ್‌ಗಳು, ಪವರ್‌ಟ್ರೇನ್ ಅನ್ನು ಹೊರತುಪಡಿಸಿ, ಇನ್ನೂ ಹಲವಾರು ವಿಧಗಳಲ್ಲಿ ಭಿನ್ನವಾಗಿರುತ್ತವೆ. ಅವುಗಳ ಪಟ್ಟಿ ಇಲ್ಲಿದೆ:

ಒಂದು ಎಕ್ಸ್‌ಕ್ಲೂಸಿವ್‌ ಬಾಡಿಕಲರ್‌ ಮತ್ತು ದೊಡ್ಡ ಅಲಾಯ್‌ ವೀಲ್‌ಗಳು

ಭಾರತದ ಸ್ವಿಫ್ಟ್‌

ಆಸ್ಟ್ರೇಲಿಯಾದ ಸ್ವಿಫ್ಟ್‌ ಹೈಬ್ರೀಡ್‌

ಸಿಜ್ಲಿಂಗ್ ರೆಡ್‌

ಲಸ್ಟರ್ ಬ್ಲೂ

ನೊವೆಲ್ ಆರೆಂಜ್

ಮ್ಯಾಗ್ಮಾ ಗ್ರೇ

ಸ್ಪ್ಲೆಂಡಿಡ್‌ ಸಿಲ್ವರ್‌

ಪರ್ಲ್ ಆರ್ಕ್ಟಿಕ್ ವೈಟ್

ಮಿಡ್‌ನೈಟ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಸಿಜ್ಲಿಂಗ್ ರೆಡ್‌

ಮಿಡ್‌ನೈಟ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್

ಮಿಡ್‌ನೈಟ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಲಸ್ಟರ್ ಬ್ಲೂ

ಸೂಪರ್ ಬ್ಲ್ಯಾಕ್ ಪರ್ಲ್ (ಎಕ್ಸ್‌ಕ್ಲೂಸಿವ್‌)

ಪ್ರೀಮಿಯಂ ಸಿಲ್ವರ್ ಮೆಟಾಲಿಕ್

ಪ್ಯೂರ್‌ ವೈಟ್‌ ಪರ್ಲ್

ಮಿನರಲ್ ಗ್ರೇ ಮೆಟಾಲಿಕ್

ಬರ್ನಿಂಗ್‌ ರೆಡ್‌ ಮೆಟಾಲಿಕ್‌

ಫ್ಲೇಮ್ ಆರೆಂಜ್

ಕಪ್ಪು ರೂಫ್‌ನೊಂದಿಗೆ ಫ್ರಾಂಟಿಯರ್ ಬ್ಲೂ ಪರ್ಲ್

ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಹೈಬ್ರಿಡ್ ನೀಡುವ ಆಲ್-ಬ್ಲ್ಯಾಕ್ ಪೇಂಟ್ ಸ್ಕೀಮ್ ಅನ್ನು ಇಂಡಿಯಾ-ಸ್ಪೆಕ್ ಮಾಡೆಲ್ ಪಡೆಯುವುದಿಲ್ಲ. ಮತ್ತೊಂದೆಡೆ, ಭಾರತೀಯ ಮೊಡೆಲ್‌ ಹೆಚ್ಚು ಡ್ಯುಯಲ್-ಟೋನ್ ಬಣ್ಣಗಳನ್ನು ಪಡೆಯುತ್ತದೆ.

ಇದಲ್ಲದೆ, ಆಸ್ಟ್ರೇಲಿಯಾದಲ್ಲಿ ಮಾರಾಟವಾಗುವ ಸ್ವಿಫ್ಟ್ ಹೈಬ್ರಿಡ್ 16-ಇಂಚಿನ ಅಲಾಯ್‌ ವೀಲ್‌ಗಳನ್ನು ಟಾಪ್‌ ವೇರಿಯೆಂಟ್‌ಗಳಲ್ಲಿ ವಿಶಿಷ್ಟ ವಿನ್ಯಾಸದೊಂದಿಗೆ ಹೊಂದಿದೆ, ಆದರೆ ಲೋವರ್‌ ವೇರಿಯೆಂಟ್‌ಗಳಲ್ಲಿ 15-ಇಂಚಿನ ಚಕ್ರಗಳನ್ನು ಹೊಂದಿವೆ. ಆದರೆ, ಇಂಡಿಯಾ-ಸ್ಪೆಕ್ ಸ್ವಿಫ್ಟ್ 15-ಇಂಚಿನ ಅಲಾಯ್ ಚಕ್ರಗಳನ್ನು ಮಾತ್ರ ಪಡೆಯುತ್ತದೆ, ಟಾಪ್-ಸ್ಪೆಕ್ ಆವೃತ್ತಿಗಳಲ್ಲಿಯೂ ಸಹ. ಅಲ್ಲದೆ, ಆಸ್ಟ್ರೇಲಿಯನ್ ಮೊಡೆಲ್‌ಗಳು ಮುಂಭಾಗದ ಬದಲಿಗೆ ಹಿಂಭಾಗದ ಫಾಗ್‌ ಲ್ಯಾಂಪ್‌ಗಳನ್ನು ಹೊಂದಿದೆ. ಮತ್ತೊಂದೆಡೆ, ಭಾರತೀಯ-ಸ್ಪೆಕ್ ಮೊಡೆಲ್‌ಗಳು ಮುಂಭಾಗದ ಫಾಗ್‌ ಲ್ಯಾಂಪ್‌ಗಳನ್ನು ಒಳಗೊಂಡಿದೆ, ಆದರೆ ಹಿಂಭಾಗದಲ್ಲಿ ಲಭ್ಯವಿಲ್ಲ.

ಹೆಚ್ಚಿನ ಫೀಚರ್‌ಗಳು

ವೈರ್‌ಲೆಸ್ ಫೋನ್ ಚಾರ್ಜರ್, 9-ಇಂಚಿನ ಟಚ್‌ಸ್ಕ್ರೀನ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಸೇರಿದಂತೆ ಇಂಡಿಯಾ-ಸ್ಪೆಕ್ ಮಾರುತಿ ಸ್ವಿಫ್ಟ್ ಕೆಲವು ಹೊಸ ವೈಶಿಷ್ಟ್ಯಗಳನ್ನು ನೀಡುತ್ತದೆ. ಆದಾಗಿಯೂ, ಆಸ್ಟ್ರೇಲಿಯನ್ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಹೀಟೆಡ್‌ ಫ್ರಂಟ್‌ ಸೀಟ್‌ಗಳು ಮತ್ತು ಹೊರಗಿನ ಹಿಂಬದಿಯ ನೋಟ ಕನ್ನಡಿಗಳನ್ನು (ORVMs) ಸೇರಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಒಳಭಾಗದಲ್ಲಿ, ಆಸ್ಟ್ರೇಲಿಯನ್ ಮೊಡೆಲ್‌ ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಇಂಟಿರೀಯರ್‌ ಅನ್ನು ಹೊಂದಿದೆ, ಆದರೆ ಮಾರುತಿ ಸ್ವಿಫ್ಟ್ ಸಿಲ್ವರ್‌ ಎಕ್ಸೆಂಟ್‌ನೊಂದಿಗೆ ಸಂಪೂರ್ಣ ಕಪ್ಪು ಇಂಟಿರೀಯರ್‌ಅನ್ನು ಹೊಂದಿದೆ. ಎರಡೂ ಸ್ವಿಫ್ಟ್‌ಗಳಲ್ಲಿ ಆಸನಗಳನ್ನು ಫ್ಯಾಬ್ರಿಕ್‌ನಲ್ಲಿ, ಆದರೆ ವಿಭಿನ್ನ ಪ್ಯಾಟರ್ನ್‌ನೊಂದಿಗೆ ಸಜ್ಜುಗೊಳಿಸಲಾಗಿದೆ.

ADAS ಸೂಟ್‌

ಆಸ್ಟ್ರೇಲಿಯಾದಲ್ಲಿ ಅನಾವರಣಗೊಂಡ ಸುಜುಕಿ ಸ್ವಿಫ್ಟ್ ಹೈಬ್ರಿಡ್, ರಾಡಾರ್-ಆಧಾರಿತ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಅಪಘಾತ ತಗ್ಗಿಸುವಿಕೆ, ಲೇನ್ ನಿರ್ಗಮನ ವಾರ್ನಿಂಗ್‌ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಂಡಿಯಾ-ಸ್ಪೆಕ್ ಮಾರುತಿ ಸ್ವಿಫ್ಟ್‌ನಲ್ಲಿ ADAS ಸೂಟ್ ಅನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಗಿದೆ.

ಪವರ್‌ಟ್ರೇನ್‌ನಲ್ಲಿ ವ್ಯತ್ಯಾಸ

ಇಂಡಿಯಾ-ಸ್ಪೆಕ್ ಸ್ವಿಫ್ಟ್

ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಹೈಬ್ರಿಡ್

ಎಂಜಿನ್‌

1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

1.2-ಲೀಟರ್ 3-ಸಿಲಿಂಡರ್ 12ವಿ ಮೈಲ್ಡ್-ಹೈಬ್ರಿಡ್ ಪೆಟ್ರೋಲ್

ಪವರ್‌

82 ಪಿಎಸ್‌

83 ಪಿಎಸ್‌

ಟಾರ್ಕ್‌

112 ಎನ್‌ಎಮ್‌

112 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್ ಮ್ಯಾನ್ಯುವಲ್/5-ಸ್ಪೀಡ್ ಆಟೋಮ್ಯಾಟಿಕ್ (ಎಎಮ್‌ಟಿ)

5-ಸ್ಪೀಡ್ ಮ್ಯಾನುವಲ್/ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5-ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್‌

ಡ್ರೈವ್‌ಟ್ರೇನ್‌

ಫ್ರಂಟ್-ವೀಲ್-ಡ್ರೈವ್ (FWD)

ಫ್ರಂಟ್-ವೀಲ್-ಡ್ರೈವ್ (FWD)

ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಮೈಲ್ಡ್‌ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ (12V ಸೆಟಪ್‌ನೊಂದಿಗೆ) ಇದು ಭಾರತ-ಸ್ಪೆಕ್ ಮೊಡೆಲ್‌ನಂತೆಯೇ ಶಕ್ತಿಯನ್ನು ಉತ್ಪಾದಿಸುತ್ತದೆ. ವ್ಯತ್ಯಾಸವೆಂದರೆ ಭಾರತೀಯ ಮೊಡೆಲ್‌ ಎಎಮ್‌ಟಿ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ, ಆದರೆ ಆಸ್ಟ್ರೇಲಿಯಾದ ಮೊಡೆಲ್‌ ಸರಿಯಾದ ಆಟೋಮ್ಯಾಟಿಕ್‌ ಸಿವಿಟಿ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. ಆಸ್ಟ್ರೇಲಿಯಾದ ಮೊಡೆಲ್‌ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5-ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ, ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಟಾಪ್-ಸ್ಪೆಕ್ ಮಾಡೆಲ್ ಕೂಡ ಪ್ಯಾಡಲ್ ಶಿಫ್ಟರ್‌ಗಳನ್ನು ಪಡೆಯುತ್ತದೆ. ಆದರೆ, ಭಾರತೀಯ ಮೊಡೆಲ್‌ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿಲ್ಲ.

ಬೆಲೆಗಳ ಬಗ್ಗೆ

ಮೊಡೆಲ್‌

ಬೆಲೆಯ ರೇಂಜ್‌

ಆಸ್ಟ್ರೇಲಿಯನ್ ಡಾಲರ್‌ಗಳಲ್ಲಿ

ಭಾರತೀಯ ರೂಪಾಯಿಗಳಲ್ಲಿ

ಆಸ್ಟ್ರೇಲಿಯನ್-ಸ್ಪೆಕ್ ಸ್ವಿಫ್ಟ್ ಹೈಬ್ರಿಡ್

AUD 24,490 ರಿಂದ AUD 30,135

13.51 ಲಕ್ಷ ರೂ.ನಿಂದ 16.62 ಲಕ್ಷ ರೂ.

ಭಾರತೀಯ-ಸ್ಪೆಕ್ ಸ್ವಿಫ್ಟ್

ಅನ್ವಯಿಸುವುದಿಲ್ಲ

6.49 ಲಕ್ಷ ರೂ.ನಿಂದ 9.60 ಲಕ್ಷ ರೂ.

ಇದು ಎಕ್ಸ್ ಶೋರೂಂ ಬೆಲೆಗಳು; ಪರಿವರ್ತಿತ ಬೆಲೆಗಳು ತೆರಿಗೆಗಳನ್ನು ಒಳಗೊಂಡಿಲ್ಲ

ಭಾರತದಲ್ಲಿ ಲಭ್ಯವಿರುವ ಮಾರುತಿ ಸ್ವಿಫ್ಟ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಮಾರಾಟವಾಗುವುದಕ್ಕಿಂತ ಹೆಚ್ಚು ಅಗ್ಗವಾಗಿದೆ. ಭಾರತದಲ್ಲಿ, ಇದು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ಗೆ ನೇರಸ್ಪರ್ಧಿಯಾಗಿದೆ, ಹಾಗೆಯೇ ಕ್ರಾಸ್‌ಒವರ್ ಎಮ್‌ಪಿವಿ ರೆನಾಲ್ಟ್ ಟ್ರೈಬರ್ ಮತ್ತು ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ನಂತಹ ಮೈಕ್ರೋ ಎಸ್‌ಯುವಿಗಳಿಗೆ ಹ್ಯಾಚ್‌ಬ್ಯಾಕ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಆಸ್ಟ್ರೇಲಿಯನ್-ಸ್ಪೆಕ್ ಸ್ವಿಫ್ಟ್‌ನ ಬೆಲೆ ಏರಿಕೆ (ಭಾರತೀಯ ರೂಪಾಯಿಗಳಿಗೆ ಹೋಲಿಸಿದರೆ) ಹೆಚ್ಚುವರಿ ವೈಶಿಷ್ಟ್ಯಗಳಿಂದ ಸಮರ್ಥಿಸಲ್ಪಟ್ಟಿದೆ ಎಂದು ನೀವು ಭಾವಿಸುತ್ತೀರಾ? ಕೆಳಗಿನ ಕಾಮೆಂಟ್‌ಗಳ ವಿಭಾಗದಲ್ಲಿ ನಮಗೆ ತಿಳಿಸಿ.

ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ, ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಅನುಸರಿಸಿ

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

Share via

Write your Comment on Maruti ಸ್ವಿಫ್ಟ್

explore similar ಕಾರುಗಳು

ಮಾರುತಿ ಸ್ವಿಫ್ಟ್

ಪೆಟ್ರೋಲ್24.8 ಕೆಎಂಪಿಎಲ್
ಸಿಎನ್‌ಜಿ32.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ