ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ
ರೆನಾಲ್ಟ್ ಡಸ್ಟರ್ 2025 ಗಾಗಿ shreyash ಮೂಲಕ ನವೆಂಬರ್ 30, 2023 02:31 pm ರಂದು ಪ್ರಕಟಿಸಲಾಗಿದೆ
- 95 Views
- ಕಾಮೆಂಟ್ ಅನ್ನು ಬರೆಯಿರಿ
ಮೂರನೇ ತಲೆಮಾರಿನ ರೆನೋ ಡಸ್ಟರ್ ಕಾರು ವಿನ್ಯಾಸದ ವಿಚಾರದಲ್ಲಿ ಡೇಶಿಯ ಬಿಗ್ ಸ್ಟರ್ ಪರಿಕಲ್ಪನೆಯೊಂದಿಗೆ ಸಾಮ್ಯತೆಯನ್ನು ಹೊಂದಿದೆ
- 2024 ರೆನೋ ಡಸ್ಟರ್ ಕಾರು CMF-B ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ.
- ತೆಳ್ಳನೆಯ ಹೆಡ್ ಲೈಟ್ ಗಳು, Y ಆಕಾರದ LED DRL ಗಳು ಮತ್ತು ಟೇಲ್ ಲ್ಯಾಂಪ್ ಗಳನ್ನು ಇದು ಹೊಂದಿದೆ.
- ಹೊಸ ತಲೆಮಾರಿನ ಡಸ್ಟರ್ ವಾಹನವು ಒಳಗಡೆಗೆ 10.1 ಇಂಚಿನ ಇನ್ಫೊಟೈನ್ ಮೆಂಟ್ ಮತ್ತು ಚಾಲಕನ ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ.
- ಇದರ ಸುರಕ್ಷತಾ ಪಟ್ಟಿಯು ಅನೇಕ ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಒಳಗೊಂಡಿದೆ.
- ಇದು ಭಾರತದಲ್ಲಿ 2025 ರ ಸುಮಾರಿಗೆ ಬಿಡುಗಡೆಯಾಗಲಿದೆ.
ರೆನೋ ಸಂಸ್ಥೆಯ ಬಜೆಟ್ ಆಧರಿತ ಬ್ರಾಂಡ್ ಆಗಿರುವ ಡೇಶಿಯವು ಜಾಗತಿಕವಾಗಿ ಮೂರನೇ ತಲೆಮಾರಿನ ಡಸ್ಟರ್ ಅನ್ನು ಅನಾವರಣಗೊಳಿಸಿದೆ. ಈ ಹೊಸ SUV ಯು CMF-B ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದು, ಇದರ ವಿನ್ಯಾಸವು ಡೇಶಿಯ ಬಿಗ್ ಸ್ಟರ್ ಪರಿಕಲ್ಪನೆಯಿಂದ ಪ್ರೇರಣೆಯನ್ನು ಪಡೆದಿದೆ. ಇದು ಮೊದಲಿಗೆ 2024ರಲ್ಲಿ ಯೂರೋಪಿನ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳಲಿದ್ದು 2025ರ ಸುಮಾರಿಗೆ ಭಾರತದ ರಸ್ತೆಗಿಳಿಯಲಿದೆ.
ಮೊದಲ ತಲೆಮಾರಿನ ಡಸ್ಟರ್ ಅನ್ನು ಭಾರತದಲ್ಲಿ 2012ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಮಾರಾಟವನ್ನು 2022ರಲ್ಲಿ ನಿಲ್ಲಿಸಲಾಯಿತು. ನಮ್ಮ ಮಾರುಕಟ್ಟೆಯಲ್ಲಿ ರೆನೋ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತು.
ಇದನ್ನು ಸಹ ನೋಡಿರಿ: ಜಾಗತಿಕವಾಗಿ 2024 ರೆನೋ ಡಸ್ಟರ್ ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ
ಬಿಗ್ ಸ್ಟರ್ ಪರಿಕಲ್ಪನೆಯಿಂದ ಪ್ರೇರಣೆ ಪಡೆದ ವಿನ್ಯಾಸ
ಹೊಸ ಡಸ್ಟರ್ ವಾಹನವು ಚೌಕಾಕಾರದ ಪ್ರಮಾಣ ಮತ್ತು SUV ಸಿಲೂಯೆಟ್ ಅನ್ನು ಉಳಿಸಿಕೊಂಡಿದ್ದರೂ ಸಹ ಇದರ ವಿನ್ಯಾಸವು ಬಿಗ್ ಸ್ಟರ್ ಆವೃತ್ತಿಯಿಂದ ಪ್ರೇರಣೆ ಪಡೆದಿದೆ. ಇದು ಸಂಪೂರ್ಣ ಹೊಸ ಗ್ರಿಲ್ ವಿನ್ಯಾಸ, Y ಆಕಾರದ LED DRL ಗಳೊಂದಿಗೆ ತೆಳ್ಳನೆಯ ಹೆಡ್ ಲೈಟ್ ಗಳು ಮತ್ತು ಫಾಗ್ ಲ್ಯಾಂಪ್ ಗಳೊಂದಿಗೆ ಎದ್ದು ಕಾಣುವ ಏರ್ ಡಾಮ್ ಗಳನ್ನು ಹೊಂದಿದೆ.
ಪಕ್ಕದಿಂದ ನೋಡಿದರೆ, ಚೌಕಾಕಾರದ ವೀಲ್ ಆರ್ಚ್ ಗಳು ಮತ್ತು ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಇದಕ್ಕೆ ಸದೃಢ ನೋಟವನ್ನು ನೀಡುತ್ತವೆ. ಜೊತೆಗೆ ಸೈಡ್ ಕ್ಲಾಡಿಂಗ್ ಮತ್ತು ರೂಫ್ ರೇಲ್ ಗಳು ಇದಕ್ಕೆ ಒರಟುತನವನ್ನು ಒದಗಿಸುತ್ತವೆ. ಹೊಸ ಡಸ್ಟರ್ ನ ಹಿಂಭಾಗದ ಬಾಗಿಲುಗಳ ಹ್ಯಾಂಡಲ್ ಗಳನ್ನು C - ಪಿಲ್ಲರ್ ನಲ್ಲಿ ಇರಿಸಲಾಗಿದೆ. ಹಿಂಭಾಗದಲ್ಲಿ ಇದು Y ಆಕಾರದ LED ಟೇಲ್ ಲ್ಯಾಂಪ್ ಗಳು ಮತ್ತು ಎದ್ದು ಕಾಣುವ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.
ಇದನ್ನು ಸಹ ನೋಡಿರಿ: 2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ ಸಂಸ್ಥೆ
ಒಳಗಡೆ ಇದು ಹೇಗಿದೆ?
2024 ರೆನೋ ಡಸ್ಟರ್ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. AC ವೆಂಟ್ ಗಳು ಈಗ Y ಆಕಾರದ ಇನ್ಸರ್ಟ್ ಗಳನ್ನು ಹೊಂದಿವೆ. ಹೊಸ ಡಸ್ಟರ್ ವಾಹನವು 10.1 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಮತ್ತು ಚಾಲಕನ ಡಿಜಿಟಲ್ ಡಿಸ್ಪ್ಲೇ ಜೊತೆಗೆ ಬರಲಿದೆ. ವೈರ್ ಲೆಸ್ ಫೋನ್ ಚಾರ್ಜಿಂಗ್, ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಇತ್ಯಾದಿ ವಿಶೇಷತೆಗಳನ್ನು ಸಹ ಹೊಸ ಡಸ್ಟರ್ ಕಾರು ಹೊಂದಿರಲಿದೆ.
ಅನೇಕ ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂನ (ADAS) ಸಂಪೂರ್ಣ ಸೂಟ್ ಮೂಲಕ ಇದರಲ್ಲಿ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲಾಗಿದೆ.
ಇದನ್ನು ಸಹ ನೋಡಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಹೊಸ ಪವರ್ ಟ್ರೇನ್ ಆಯ್ಕೆಗಳು
ಹೊಸ ತಲೆಮಾರಿನ ಡಸ್ಟರ್ ವಾಹನವು ಹೈಬ್ರೀಡ್ ಮತ್ತು LPG ಸೇರಿದಂತೆ ಅನೇಕ ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರಲಿದೆ. ಈ ಆಯ್ಕೆಗಳು 48 V ಮೈಲ್ಡ್ ಹೈಬ್ರೀಡ್ ಸಿಸ್ಟಂ ಜೊತೆಗೆ ಹೊಂದಿಸಲಾದ 130 PS, 1.2 ಲೀಟರ್ ಪೆಟ್ರೋಲ್ ಪವರ್ ಟ್ರೇನ್, 2 electric motors powered by a 1.2kWh ಬ್ಯಾಟರಿ ಪ್ಯಾಕ್ ಮೂಲಕ ಚಲಾಯಿಸಲಾಗುವ ಹಾಗೂ 2 ಎಲೆಕ್ಟ್ರಿಕ್ ಮೋಟರ್ ಗಳೊಂದಿಗೆ ಹೊಂದಿಸಲಾದ ಪ್ರಬಲ 140 PS 1.6 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿವೆ. ಮೂರನೆಯದು ಪೆಟ್ರೋಲ್ ಮತ್ತು LPG ಯ ಸಂಯೋಜನೆಯಾಗಿದೆ.
ಹೊಸ ತಲೆಮಾರಿನ ಡಸ್ಟರ್ ವಾಹನದ ಭಾರತೀಯ ಆವೃತ್ತಿಯ ಪವರ್ ಟ್ರೇನ್ ಕುರಿತ ಹೆಚ್ಚಿನ ವಿವರಗಳು ಇನ್ನಷ್ಟೇ ಲಭಿಸಬೇಕು.
ಭಾರತದಲ್ಲಿ ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಮೂರನೇ ತಲೆಮಾರಿನ ರೆನೋ ಡಸ್ಟರ್ ಕಾರನ್ನು ಭಾರತದಲ್ಲಿ 2025ರ ಸುಮಾರಿಗೆ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಇದು ಸುಮಾರು ರೂ. 10 ಲಕ್ಷಕ್ಕೆ (ಎಕ್ಸ್ - ಶೋರೂಂ) ದೊರೆಯುವ ಸಾಧ್ಯತೆ ಇದೆ. ಈ ವಾಹನವು ಹ್ಯುಂಡೈ ಕ್ರೆಟ, ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್ ವಿಟಾರ, ಟೊಯೊಟಾ ಹೈರೈಡರ್, ಫೋಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಕ್, ಹೋಂಡಾ ಎಲೆವೇಟ್, MG ಆಸ್ಟರ್, ಮತ್ತು ಸಿಟ್ರನ್ C3 ಏರ್ ಕ್ರಾಸ್ ಜೊತೆಗೆ ಸ್ಪರ್ಧಿಸಲಿದೆ.