• English
  • Login / Register

2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ

ಮಾರುತಿ ಗ್ರಾಂಡ್ ವಿಟರಾ ಗಾಗಿ rohit ಮೂಲಕ ನವೆಂಬರ್ 25, 2023 10:49 am ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಯೋಜಿತ ಐದು ಹೊಸ ಮಾದರಿಗಳು ಕೆಲವೊಂದು ಹ್ಯಾಚ್‌ ಬ್ಯಾಕ್‌ ಮತ್ತು SUV ಗಳು ಹಾಗೂ ಮಿಡ್‌ ಸೈಜ್‌ MPV ಗಳ ಮಿಶ್ರಣವೆನಿಸಲಿವೆ.

Upcoming Maruti cars

ಭಾರತದ ಅತ್ಯಂತ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಕೆಲ ಇತರ ಕಾರು ತಯಾರಕ ಸಂಸ್ಥೆಗಳೊಂದಿಗೆ 2025ರೊಳಗೆ EV ಕ್ಷೇತ್ರಕ್ಕೆ ಧುಮುಕಲಿದೆ. ಆದರೆ ಮುಂದಿನ ಒಂದು ದಶಕದ ಕಾಲ ಹೊಸ ಇಂಟರ್ನಲ್‌ ಕಂಬಶನ್‌ ಎಂಜಿನ್‌ (ICE) ಗಳನ್ನು ಹೊರತರುವ ತಮ್ಮ ಇರಾದೆಯಿಂದ ಈ ಕಾರು ತಯಾರಕ ಸಂಸ್ಥೆಯು ಹಿಂದಕ್ಕೆ ಸರಿದಿಲ್ಲ. ತನ್ನ ಇತ್ತೀಚಿನ ಸಂದರ್ಶನದಲ್ಲಿ, ಮಾರುತಿ ಸುಜುಕಿ ಸಂಸ್ಥೆಯ ಅಧ್ಯಕ್ಷರಾದ ಆರ್‌.ಸಿ  ಭಾರ್ಗವ ಅವರು, ತನ್ನ ಕಾರು ತಯಾರಕ ಸಂಸ್ಥೆಯು 2013ರೊಳಗೆ ಐದು ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿರುವುದಾಗಿ ಹೇಳಿದ್ದಾರೆ. ಮುಂದಿನ ಐದು ಮಾರುತಿ ಮಾದರಿಗಳು ಹೇಗಿರಲಿವೆ ಎಂಬುದನ್ನು ನಾವು ಖಂಡಿತವಾಗಿಯೂ ಊಹಿಸಬಹುದು:

ಗ್ರಾಂಡ್‌ ವಿಟಾರ ಆಧರಿತ 3 ಸಾಲುಗಳ SUV

Maruti Grand Vitara

 ಸೆಪ್ಟೆಂಬರ್ 2022ರಲ್ಲಿ ಮಾರುತಿ ಸಂಸ್ಥೆಯು ಗ್ರಾಂಡ್‌ ವಿಟಾರ ಎಂಬ ಹೆಸರನ್ನು SUV ಗೆ ನಾಮಕರಣ ಮಾಡುವ ಮೂಲಕ ಹೊಸ ವಾಹನವೊಂದನ್ನು ಕಾಂಪ್ಯಾಕ್ಟ್‌ SUV ವಲಯದಲ್ಲಿ ಹೊರತಂದಿತು. ಆದರೆ ಈ ಕಾರು ತಯಾರಕ ಸಂಸ್ಥೆಯು 3 ಸಾಲುಗಳ ಮಿಡ್‌ ಸೈಜ್ SUV ವಲಯದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೀಗಾಗಿ ಹ್ಯುಂಡೈ ಅಲ್ಕಜಾರ್ ಮತ್ತು ಮಹೀಂದ್ರಾ XUV700 ವಾಹನಗಳಿಗೆ ಸ್ಪರ್ಧಿಯಾಗಿ ಮಾರುತಿ ಸಂಸ್ಥೆಯು ಗ್ರಾಂಡ್‌ ವಿಟಾರದ 3 ಸಾಲುಗಳ ಆವೃತ್ತಿಯನ್ನು ಹೊರತರಲಿದ್ದು, 3 ಸಾಲುಗಳ ಪ್ರೀಮಿಯಂ ಮತ್ತು ಐಷಾರಾಮಿ MPV ಎನಿಸಿರುವ ಇನ್ವಿಕ್ಟೊ ವಾಹನಕ್ಕೆ ಬದಲಾಗಿ ಅಗ್ಗದ 3 ಸಾಲುಗಳ SUV ಯ ಆಯ್ಕೆಯನ್ನು ಮಾರುತಿ ಸುಜುಕಿಯ ಸಂಭಾವ್ಯ ಗ್ರಾಹಕರಿಗೆ ನೀಡಲಿದೆ.

ಯೋಜನೆಯಂತೆ ಎರಡು ಹ್ಯಾಚ್‌ ಬ್ಯಾಕ್‌ ಗಳು

Maruti Alto K10
Maruti Celerio
ಹ್ಯಾಚ್‌ ಬ್ಯಾಕ್‌ ಕಾರುಗಳ ವಿಭಾಗದಲ್ಲಿ ಮಾರುತಿ ಸಂಸ್ಥೆಯು ಸಾಕಷ್ಟು ಹಿಡಿತವನ್ನು ಹೊಂದಿದೆ ಈ ಕಾರು ತಯಾರಕ ಸಂಸ್ಥೆಯು ನಮ್ಮ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹ್ಯಾಚ್‌ ಬ್ಯಾಕ್‌ ಕಾರುಗಳನ್ನು ಹೊಂದಿದ್ದು, ಹೊಸ ಗ್ರಾಹಕರು SUV ಗಳತ್ತ ಆಕರ್ಷಿತರಾಗುತ್ತಿರುವುದರಿಂದ ಇವುಗಳ ಮಾರಾಟದಲ್ಲಿ ಇಳಿಕೆ ಉಂಟಾಗಿದೆ. ಮಾರುತಿ ಸಂಸ್ಥೆಯು ಸೆಲೆರಿಯೊ ಮತ್ತು ಆಲ್ಟೊ ಕಾರುಗಳಿಗೆ ಸಂಭಾವ್ಯ ಬದಲಿ ಕಾರುಗಳಾಗಿ ರೂ. 10 ಲಕ್ಷಕ್ಕಿಂತ ಕೆಳಗಿನ ವಾಹನಗಳ ಸಾಲಿನಲ್ಲಿ ಈ ಹ್ಯಾಚ್‌ ಬ್ಯಾಕ್‌ ಕಾರುಗಳನ್ನು ಪರಿಚಯಿಸಲಿದ್ದು, ಇವು ಹೊಸ ಹೆಸರುಗಳನ್ನು ಹೊಂದಿರಲಿವೆ.

XL6 ಮತ್ತು ಇನ್ವಿಕ್ಟೊ ನಡುವೆ ಹೊಸ MPV

Maruti Invicto

 ಮಾರುತಿ ಸಂಸ್ಥೆಯು ತನ್ನ ಪಟ್ಟಿಯಲ್ಲಿ ಮೂರು MPVಗಳನ್ನು ಹೊಂದಿದೆ. ಅವೆಂದರೆ ಎರ್ಟಿಗಾ, XL6 ಮತ್ತು ಇನ್ವಿಕ್ಟೊ. ಇವುಗಳಲ್ಲಿ ನಂತರದ ಎರಡು ಮಾದರಿಗಳನ್ನು ನೆಕ್ಸಾ ಮಳಿಗೆಗಳ ಮೂಲಕ ಮಾರಲಾಗುತ್ತಿದೆ. ಆದರೆ XL6 ಮತ್ತು ಇನ್ವಿಕ್ಟೊ ನಡುವೆ ಬೆಲೆಯಲ್ಲಿ ಸಾಕಷ್ಟು ಅಂತರವಿದೆ. ಹೀಗಾಗಿ ಮಾರುತಿ ಸಂಸ್ಥೆಯು ಹೊಸ MPV ಯ ಮೂಲಕ ಈ ಅಂತರವನ್ನು ತುಂಬುವ ಉದ್ದೇಶವನ್ನು ಹೊಂದಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಕಿಯಾ ಕಾರೆನ್ಸ್‌ ಜೊತೆಗೆ ಸ್ಪರ್ಧಿಸಲಿದೆ. ಈ ಕಾರು ತಯಾರಕ ಸಂಸ್ಥೆಯು ಹೊಸ ಮಾದರಿಯನ್ನು ಪರಿಚಯಿಸುವ ಮೂಲಕ ಕಾರೆನ್ಸ್‌ ಮಾದರಿಯ ಮಾರಾಟಕ್ಕೆ ಕಡಿವಾಣ ಹಾಕುವ ಇರಾದೆಯನ್ನು ಹೊಂದಿದೆ. 

ಇದನ್ನು ಸಹ ಓದಿರಿ: ಚಾರ್ಜಿಂಗ್‌ ವೇಳೆ ಭಾರತದಲ್ಲಿ ಕಾಣಿಸಿಕೊಂಡ ಮಾರುತಿ eVX ಎಲೆಕ್ಟ್ರಿಕ್ SUV

ಮಾರುತಿಯ ಹೊಸ ಮೈಕ್ರೊ SUV

ಮೈಕ್ರೊ SUVಗಳ ವಲಯವು ಸಹ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಟಾಟಾ ಪಂಚ್ ಕಾರು 2021ರಲ್ಲಿ ಬಿಡುಗಡೆಯಾದ ನಂತರ ಹಾಗೂ ತದನಂತರ ಹ್ಯುಂಡೈ ಎಕ್ಸ್ಟರ್  ಕಾರು ಈ ಪಟ್ಟಿಗೆ ಸೇರ್ಪಡೆಯಾದ ನಂತರ ಈ ಬೆಳವಣಿಗೆಯು ಉಂಟಾಗಿದೆ. ಮಾರುತಿ ಇಗ್ನಿಸ್ ಕಾರು ಈ ಎರಡು ಕಾರುಗಳ ಪಾಲಿಗೆ ತಾತ್ಕಾಲಿಕ ಸ್ಪರ್ಧಿ ಎನಿಸಿದ್ದರೂ, ಇದು ಸ್ಪಲ್ಪ ಒರಟಾದ ಶೈಲಿಯೊಂದಿಗೆ ಬಹುಪಾಲಿಗೆ ಹ್ಯಾಚ್‌ ಬ್ಯಾಕ್‌ ಎನಿಸಿದೆ. ಹೀಗಾಗಿ, ಬೆಳವಣಿಗೆಯನ್ನು ಕಾಣುತ್ತಿರುವ ಈ ಕ್ಷೇತ್ರದಲ್ಲಿ ಇನ್ನಷ್ಟು ಸ್ಪರ್ಧೆಯನ್ನು ನೀಡುವುದಕ್ಕಾಗಿ ಮಾರುತಿಯು ತನ್ನದೇ ಆದ ಮೈಕ್ರೊ SUVಯನ್ನು ಹೊರತರಲಿದೆ.

ಈ ಐದು ಕಾರುಗಳಲ್ಲಿ ಯಾವುದನ್ನು ನೀವು ಮೊದಲಿಗೆ ಶೋರೂಂಗಳಲ್ಲಿ ನೋಡಲು ಬಯಸುತ್ತೀರಿ ಹಾಗೂ ಮಾರುತಿ ಸಂಸ್ಥೆಯು ಇತರ ಯಾವ ವಲಯಗಳತ್ತ ಗಮನ ನೀಡಬೇಕೆಂದು ನೀವು ಇಚ್ಛಿಸುತ್ತೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಗ್ರಾಂಡ್‌ ವಿಟಾರ ಆನ್‌ ರೋಡ್‌ ಬೆಲೆ

was this article helpful ?

Write your Comment on Maruti ಗ್ರಾಂಡ್ ವಿಟರಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience