• English
    • Login / Register

    2025ರ ಏಪ್ರಿಲ್‌ನಿಂದ ರೆನಾಲ್ಟ್ ಕಾರುಗಳ ಬೆಲೆಯಲ್ಲಿಯೂ ಹೆಚ್ಚಳ

    ರೆನಾಲ್ಟ್ ಟ್ರೈಬರ್ ಗಾಗಿ kartik ಮೂಲಕ ಮಾರ್ಚ್‌ 23, 2025 07:03 am ರಂದು ಪ್ರಕಟಿಸಲಾಗಿದೆ

    • 7 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮೆಟಿರಿಯಲ್‌ಗಳ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ರೆನಾಲ್ಟ್ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ

    Renault Cars To Get Dearer From April 2025

    2025ರ ಏಪ್ರಿಲ್‌ನ ಹೊಸ ಹಣಕಾಸು ವರ್ಷದ ಆರಂಭದಲ್ಲಿ ರೆನಾಲ್ಟ್ ತನ್ನ ಸಂಪೂರ್ಣ ಕಾರುಗಳಿಗೆ ಅನ್ವಯವಾಗುವ ಬೆಲೆ ಏರಿಕೆಯನ್ನು ಘೋಷಿಸಿದೆ. 2023ರ ನಂತರ ಈ ಕಾರು ತಯಾರಕರು ಘೋಷಿಸಿದ ಮೊದಲ ಹೆಚ್ಚಳ ಇದಾಗಿದೆ. ರೆನಾಲ್ಟ್ ಪ್ರಸ್ತುತ ಭಾರತದಲ್ಲಿ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಎಂಬ ಮೂರು ಕಾರುಗಳನ್ನು ನೀಡುತ್ತಿದೆ. ಫ್ರೆಂಚ್ ಕಾರು ತಯಾರಕ ಕಂಪನಿಯು ಬೆಲೆ ಏರಿಕೆಗೆ ಕಾರಣವನ್ನು ಮತ್ತು ಬೆಲೆ ಏರಿಕೆಯ ಅಂದಾಜನ್ನು ನೀಡಿದ್ದು, ಅವುಗಳು ಈ ಕೆಳಗಿನಂತಿವೆ:

    ಬೆಲೆ ಏರಿಕೆಗೆ ಕಾರಣ

    ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯೇ ಈ ಏರಿಕೆಗೆ ಕಾರಣ ಎಂದು ರೆನಾಲ್ಟ್ ಹೇಳಿದೆ, ಇದನ್ನು ಶೇ. 2 ರಷ್ಟು ಬೆಲೆ ಏರಿಕೆ ಮಾಡುವ ಮೂಲಕ ಕಂಪನಿಯು ಕಡಿಮೆ ಮಾಡುವ ಗುರಿ ಹೊಂದಿದೆ. ಆಯ್ಕೆ ಮಾಡಿದ ಮೊಡೆಲ್‌ ಮತ್ತು ವೇರಿಯೆಂಟ್‌ಅನ್ನು ಆಧರಿಸಿ ಬೆಲೆ ಏರಿಕೆಯಾಗಲಿದೆ ಎಂದು ಕಾರು ತಯಾರಕರು ವಿವರಿಸಿದ್ದಾರೆ. ಹಾಗೆಯೇ, ಸದ್ಯ ಲಭ್ಯವಿರುವ ಮೂರು ರೆನಾಲ್ಟ್ ಕಾರುಗಳ ಪ್ರಸ್ತುತ ಬೆಲೆ ಈ ಕೆಳಗಿನಂತಿದೆ:

    ಮೊಡೆಲ್‌

    ಪ್ರಸ್ತುತ ಬೆಲೆ ರೇಂಜ್‌

    ಕ್ವಿಡ್‌

    4.70 ಲಕ್ಷ ರೂ.ಗಳಿಂದ 6.44 ಲಕ್ಷ ರೂ.

    ಟ್ರೈಬರ್‌

    6.10 ಲಕ್ಷ ರೂ.ಗಳಿಂದ 8.98 ಲಕ್ಷ ರೂ.

    ಕೈಗರ್‌

    6.10 ಲಕ್ಷ ರೂ.ಗಳಿಂದ 11.23 ಲಕ್ಷ ರೂ.

    ಎಲ್ಲಾ ಬೆಲೆಗಳು ಎಕ್ಸ್‌ಶೋರೂಮ್‌ ಆಗಿದೆ

    ಇದನ್ನು ಸಹ ಓದಿ: ಮುಂದಿನ ತಿಂಗಳಿನಿಂದ Honda ಕಾರುಗಳ ಬೆಲೆಯಲ್ಲೂ ಏರಿಕೆ

    ರೆನಾಲ್ಟ್‌ನ ಮುಂದಿನ ಯೋಜನೆ

    Renault Triber

     ಕಾರು ತಯಾರಕರು ಇತ್ತೀಚೆಗೆ ಕೈಗರ್ ಮತ್ತು ಟ್ರೈಬರ್‌ಗೆ ಮೊಡೆಲ್‌ ಇಯರ್‌ 2025ರ ಆಪ್‌ಡೇಟ್‌ಗಳನ್ನು ಪರಿಚಯಿಸಿದರು ಮತ್ತು ಈ ವರ್ಷದ ಕೊನೆಯಲ್ಲಿ ಅವುಗಳ ಫೇಸ್‌ಲಿಫ್ಟೆಡ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಫೇಸ್‌ಲಿಫ್ಟೆಡ್ ಟ್ರೈಬರ್ ಈಗ ಮೊದಲ ಬಾರಿಗೆ ಭಾರೀ ಕವರ್‌ನೊಂದಿಗೆ ಕಾಣಿಸಿಕೊಂಡಿದೆ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Renault ಟ್ರೈಬರ್

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience