5-ಡೋರ್ Mahindra Thar Roxxನ ವೇರಿಯೆಂಟ್-ವಾರು ಬೆಲೆಗಳ ವಿವರ
ಮಹೀಂದ್ರಾವು ಥಾರ್ ರೋಕ್ಸ್ ಅನ್ನು 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ
-
ಥಾರ್ ರೋಕ್ಸ್‌ನ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ.
-
ಇದನ್ನು ಹಿಂಬದಿ-ಚಕ್ರ-ಡ್ರೈವ್ ಮತ್ತು ನಾಲ್ಕು-ಚಕ್ರ-ಡ್ರೈವ್ ಸೆಟಪ್‌ಗಳೊಂದಿಗೆ ಹೊಂದಬಹುದು.
-
ಫೀಚರ್‌ಗಳು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಬಹಳ ಸಮಯದಿಂದ ಕಾಯುತ್ತಿದ್ದ 5-ಡೋರ್‌ನ ಮಹೀಂದ್ರಾ ಥಾರ್ ರೋಕ್ಸ್‌ಅನ್ನು ಬಿಡುಗಡೆ ಮಾಡಲಾಗಿದೆ ಮತ್ತು ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಗಳು12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಮಹೀಂದ್ರಾವು ತನ್ನ ದೊಡ್ಡದಾದ ಥಾರ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡುತ್ತಿದ್ದು, ಹಾಗೆಯೇ ಇದನ್ನು ಹಿಂಬದಿ-ಚಕ್ರ-ಡ್ರೈವ್ (RWD) ಮತ್ತು ನಾಲ್ಕು-ಚಕ್ರ-ಡ್ರೈವ್ (4WD) ಸೆಟಪ್‌ಗಳ ಆಯ್ಕೆಯೊಂದಿಗೆ ಪಡೆಯಬಹುದು.
ಇದನ್ನೂ ಸಹ ಓದಿ: ಈ ವಿವರವಾದ ಗ್ಯಾಲರಿಯಲ್ಲಿ 5 ಡೋರ್ ಮಹೀಂದ್ರಾ ಥಾರ್ ರೋಕ್ಸ್‌ನ ಸಂಪೂರ್ಣ ಚಿತ್ರಣ
ಥಾರ್ ರೋಕ್ಸ್‌ನ ಟೆಸ್ಟ್ ಡ್ರೈವ್‌ಗಳು ಸೆಪ್ಟೆಂಬರ್ 14 ರಂದು ಪ್ರಾರಂಭವಾಗುತ್ತದೆ ಮತ್ತು ಬುಕಿಂಗ್ ಅಕ್ಟೋಬರ್ 3 ರಂದು ಶುರುವಾಗಲಿದೆ. ಮಹೀಂದ್ರಾ ದಸರಾ (ಅಕ್ಟೋಬರ್ 12) ಹಬ್ಬದ ಸಂಭ್ರಮದಂದು ಡೆಲಿವೆರಿಯನ್ನು ಪ್ರಾರಂಭಿಸಲಿದೆ. ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳ ಜೊತೆಗೆ ಹೊಸ ಥಾರ್‌ನ ವೇರಿಯೆಂಟ್-ವಾರು ಬೆಲೆಗಳು ಇಲ್ಲಿವೆ.
ಬೆಲೆ
ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ |
||
ಪೆಟ್ರೋಲ್ |
||
ವೇರಿಯೆಂಟ್ |
ಮ್ಯಾನುಯಲ್ |
ಆಟೋಮ್ಯಾಟಿಕ್ |
ಎಮ್‌ಎಕ್ಸ್1 RWD |
12.99 ಲಕ್ಷ ರೂ. |
ಅನ್ವಯವಾಗುವುದಿಲ್ಲ |
ಎಮ್‌ಎಕ್ಸ್3 RWD |
ಅನ್ವಯವಾಗುವುದಿಲ್ಲ |
14.99 ಲಕ್ಷ ರೂ. |
ಎಮ್‌ಎಕ್ಸ್5 RWD |
16.49 ಲಕ್ಷ ರೂ. |
17.99 ಲಕ್ಷ ರೂ. |
ಎಎಕ್ಸ್7ಎಲ್ RWD |
ಅನ್ವಯವಾಗುವುದಿಲ್ಲ |
19.99 ಲಕ್ಷ ರೂ. |
ಡೀಸೆಲ್ |
||
ವೇರಿಯೆಂಟ್ |
ಮ್ಯಾನುಯಲ್ |
ಆಟೋಮ್ಯಾಟಿಕ್ |
ಎಮ್‌ಎಕ್ಸ್1 RWD |
13.99 ಲಕ್ಷ ರೂ. |
ಅನ್ವಯವಾಗುವುದಿಲ್ಲ |
ಎಮ್‌ಎಕ್ಸ್3 RWD |
15.99 ಲಕ್ಷ ರೂ. |
17.49 ಲಕ್ಷ ರೂ. |
ಎಎಕ್ಸ್3ಎಲ್ RWD |
16.99 ಲಕ್ಷ ರೂ. |
ಅನ್ವಯವಾಗುವುದಿಲ್ಲ |
ಎಮ್‌ಎಕ್ಸ್5 RWD |
16.99 ಲಕ್ಷ ರೂ. |
18.49 ಲಕ್ಷ ರೂ. |
ಎಎಕ್ಸ್5ಎಲ್ RWD |
ಅನ್ವಯವಾಗುವುದಿಲ್ಲ |
18.99 ಲಕ್ಷ ರೂ. |
ಎಎಕ್ಸ್7ಎಲ್ RWD |
18.99 ಲಕ್ಷ ರೂ. |
20.49 ಲಕ್ಷ ರೂ. |
3-ಡೋರ್ ಥಾರ್‌ಗೆ ಹೋಲಿಸಿದರೆ, ಥಾರ್ ರೋಕ್ಸ್‌ನ ಬೇಸ್ ವೇರಿಯೆಂಟ್‌ನ ಬೆಲೆಗಳು 1.64 ಲಕ್ಷ ರೂ.ಗಳಷ್ಟು ಹೆಚ್ಚಿದೆ
ಗಮನಿಸಿ: ಡೀಸೆಲ್-ಚಾಲಿತ ಎಮ್‌ಎಕ್ಸ್5, ಎಎಕ್ಸ್5L ಮತ್ತು ಎಎಕ್ಸ್7L ಆವೃತ್ತಿಗಳು ಮಾತ್ರ 4-ವೀಲ್-ಡ್ರೈವ್ (4WD) ಸೆಟಪ್‌ನ ಆಯ್ಕೆಯನ್ನು ಪಡೆಯುತ್ತವೆ. ಈ ಆವೃತ್ತಿಗಳ ಬೆಲೆಗಳನ್ನು ಮಹಿಂದಾ ಇನ್ನೂ ಬಹಿರಂಗಪಡಿಸಿಲ್ಲ.
ಡಿಸೈನ್‌ನಲ್ಲಿನ ಬದಲಾವಣೆಗಳು: ಒಳಗೆ ಹೊರಗೆ
ಗಾತ್ರಗಳು |
ಮಹೀಂದ್ರಾ ಥಾರ್ ರೋಕ್ಸ್ |
ಮಹೀಂದ್ರಾ ಥಾರ್ |
ವ್ಯತ್ಯಾಸ |
ಉದ್ದ |
4428 ಮಿ.ಮೀ |
3985 ಮಿ.ಮೀ |
+ 443 ಮಿ.ಮೀ |
ಅಗಲ |
1870 ಮಿ.ಮೀ |
1820 ಮಿ.ಮೀ |
+ 50 ಮಿ.ಮೀ |
ಎತ್ತರ |
1923 ಮಿ.ಮೀ |
1855 ಮಿ.ಮೀ ವರೆಗೆ |
+ 68 ಮಿ.ಮೀ |
ವೀಲ್‌ಬೇಸ್ |
2850 ಮಿ.ಮೀ |
2450 ಮಿ.ಮೀ |
+ 400 ಮಿ.ಮೀ |
ಮಹೀಂದ್ರಾವು ತನ್ನ ಹೊಸ ಥಾರ್ ರೋಕ್ಸ್‌ನಲ್ಲಿ, 6-ಸ್ಲ್ಯಾಟ್ ಗ್ರಿಲ್, ಸಿಲ್ವರ್-ಫಿನಿಶ್ಡ್ ಬಂಪರ್‌ಗಳು, ಸಿ-ಆಕಾರದ ಡಿಆರ್‌ಎಲ್‌ಗಳೊಂದಿಗೆ ರೌಂಡ್ ಹೆಡ್‌ಲ್ಯಾಂಪ್‌ಗಳು ಮತ್ತು 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ನೀಡುತ್ತಿದೆ. ಬದಿಗಳಲ್ಲಿ, ಸಿ-ಪಿಲ್ಲರ್ ಮೌಂಟೆಡ್ ಲಂಬ ಡೋರ್ ಹ್ಯಾಂಡಲ್‌ಗಳೊಂದಿಗೆ ಹಿಂಭಾಗದ ಬಾಗಿಲುಗಳು ಮತ್ತು ಮೆಟಲ್ ಸೈಡ್ ಸ್ಟೆಪ್ ಅನ್ನು ಸಹ ನೀವು ಗಮನಿಸಬಹುದು.
3-ಡೋರ್ ಆವೃತ್ತಿಗೆ ಹೋಲಿಸಿದರೆ ಹಿಂಭಾಗವು ಹೆಚ್ಚು ಬದಲಾಗಿಲ್ಲ, ಮತ್ತು ಇದು ಸಿ-ಆಕಾರದ ಲೈಟಿಂಗ್ ಅಂಶಗಳೊಂದಿಗೆ ಎಲ್ಇಡಿ ಟೈಲ್ ಲೈಟ್ ಸೆಟಪ್ ಮತ್ತು ದೊಡ್ಡ ಬಂಪರ್ ಅನ್ನು ಪಡೆಯುತ್ತದೆ.
ಒಳಭಾಗವನ್ನು ಗಮನಿಸುವಾಗ, ಥಾರ್ ರೋಕ್ಸ್ ಕಪ್ಪು ಡ್ಯಾಶ್‌ಬೋರ್ಡ್‌ನೊಂದಿಗೆ ಲೆಥೆರೆಟ್ ಪ್ಯಾಡಿಂಗ್ ಮತ್ತು ತಾಮ್ರದ ಸ್ಟಿಚ್ಚಿಂಗ್‌ನೊಂದಿಗೆ ಬರುತ್ತದೆ. ಇದು ಸೀಟ್‌ಗಳಿಗೆ ಬಿಳಿ ಲೆಥೆರೆಟ್ ಕವರ್‌ಗಳನ್ನು ಪಡೆಯುತ್ತದೆ, ಹಿಂಭಾಗದಲ್ಲಿ "ಥಾರ್" ಎಂಬ ಹೆಸರನ್ನು ಕೆತ್ತಲಾಗಿದೆ.
ಪವರ್‌ಟ್ರೈನ್
ಎಂಜಿನ್ |
2-ಲೀಟರ್ ಟರ್ಬೊ-ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
177 ಪಿಎಸ್ ವರೆಗೆ |
175 ಪಿಎಸ್ ವರೆಗೆ |
ಟಾರ್ಕ್ |
380 ಎನ್ಎಮ್ ವರೆಗೆ |
370 ಎನ್ಎಂ ವರೆಗೆ |
ಗೇರ್‌ಬಾಕ್ಸ್ |
6 ಮ್ಯಾನುಯಲ್ ಮತ್ತು 6 ಆಟೋಮ್ಯಾಟಿಕ್ |
6 ಮ್ಯಾನುಯಲ್ ಮತ್ತು 6 ಆಟೋಮ್ಯಾಟಿಕ್ |
ಡ್ರೈವ್ ಮೋಡ್‌ಗಳು |
RWD |
RWD 4WD |
ಮಹೀಂದ್ರಾ ಥಾರ್ ರೋಕ್ಸ್ ಅನ್ನು ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ (1.5-ಲೀಟರ್ ಡೀಸೆಲ್‌ನ ಹೊರತುಪಡಿಸಿ) 3-ಡೋರ್ ಥಾರ್‌ನಂತೆ ನೀಡುತ್ತಿದೆ. ಆದರೆ, 5-ಡೋರ್‌ನ ಥಾರ್ ಈ ಎಂಜಿನ್‌ಗಳನ್ನು ಉನ್ನತ ಹಂತದ ಪರ್ಫಾರ್ಮೆನ್ಸ್‌ನಲ್ಲಿ ಪಡೆಯುತ್ತದೆ.
ಆಫ್‌ರೋಡ್ ವಿಶೇಷತೆಗಳು |
|
ಅಪ್ರೋಚ್ ಆಂಗಲ್ |
41.7 ಡಿಗ್ರಿ |
ಬ್ರೇಕ್ಓವರ್ ಆಂಗಲ್ |
23.9 ಡಿಗ್ರಿ |
ಡಿಪಾರ್ಚರ್ ಆಂಗಲ್ |
36.1 ಡಿಗ್ರಿ |
ವಾಟರ್ ವೇಡಿಂಗ್ ಸಾಮರ್ಥ್ಯ |
650 ಮಿ.ಮೀ |
ಫೀಚರ್ ಮತ್ತು ಸುರಕ್ಷತೆ
ಫೀಚರ್‌ಗಳ ವಿಷಯದಲ್ಲಿ, 5-ಬಾಗಿಲಿನ ಥಾರ್ ರೋಕ್ಸ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಪನರೋಮಿಕ್ ಸನ್‌ರೂಫ್, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಮತ್ತು 560W ಆಂಪ್ಲಿಫೈಯರ್‌ನೊಂದಿಗೆ 9-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ.
ಪ್ರಯಾಣಿಕರ ಸುರಕ್ಷತೆಗಾಗಿ, ಇದು 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತದೆ. ಈ ಎಸ್‌ಯುವಿ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತದೆ, ಇದರಲ್ಲಿ ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿವೆ.
ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ ರೋಕ್ಸ್ ಮಾರುಕಟ್ಟೆಯಲ್ಲಿ 5-ಡೋರ್ ಫೋರ್ಸ್ ಗೂರ್ಖಾಗೆ ಪ್ರತಿಸ್ಪರ್ಧಿಯಾಗಿದೆ, ಆದರೆ ಮಾರುತಿ ಜಿಮ್ನಿ ಮತ್ತು 3-ಡೋರ್ ಮಹೀಂದ್ರ ಥಾರ್‌ಗಳಿಗೆ ದೊಡ್ಡ ಮತ್ತು ಹೆಚ್ಚು ಪ್ರೀಮಿಯಂ ಪರ್ಯಾಯವಾಗಿದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಮಿಸ್ ಮಾಡದೇ ಫಾಲೋ ಮಾಡಿ
ಇನ್ನಷ್ಟು ಓದಿ: ಥಾರ್ ರಾಕ್ಸ್ ಡೀಸೆಲ್
Write your Comment on Mahindra ಥಾರ್ ROXX
What's difference between 5 door base model vs top model