ಮತ್ತೊಮ್ಮೆ 5-door Mahindra Tharನ ರಹಸ್ಯ ಫೋಟೊಗಳು ಸೆರೆ, ಹೊಸ ವಿವರಗಳು ಇಲ್ಲಿವೆ
ಈ ದೊಡ್ಡದಾದ ಥಾರ್ ಹೆಚ್ಚು ಸ್ಪೇಸ್ ಅನ್ನು ನೀಡುವುದಲ್ಲದೆ, ಸುರಕ್ಷತೆ, ಮನರಂಜನೆ ಮತ್ತು ಅನುಕೂಲಕ್ಕಾಗಿ ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ.
- ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
- ಇದು 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್, ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರಲಿದೆ.
- ಇದರಲ್ಲಿ ರಿಯರ್-ವೀಲ್-ಡ್ರೈವ್ ಮತ್ತು 4WD ಡ್ರೈವ್‌ಟ್ರೇನ್‌ಗಳ ಆಯ್ಕೆಯನ್ನು ನಿರೀಕ್ಷಿಸಬಹುದು.
- ಇದುವರೆಗೆ ಸ್ಪೈ ಮಾಡಲಾದ ಫೀಚರ್ ಅಪ್ಡೇಟ್ ಗಳಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಸೇರಿವೆ.
- ಇದರ ಬೆಲೆಯು 15 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ.
5-ಡೋರ್ ಮಹೀಂದ್ರ ಥಾರ್ ಈ ವರ್ಷ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ ಮತ್ತು ಅದರ ಟೆಸ್ಟಿಂಗ್ ಕಳೆದ ಕೆಲವು ಸಮಯದಿಂದ ನಡೆಯುತ್ತಿದೆ. ಪ್ರತಿ ಬಾರಿಯೂ, ಆನ್‌ಲೈನ್‌ನಲ್ಲಿ ಈ ದೊಡ್ಡದಾದ ಥಾರ್ ನ ಹೊಸ ಸ್ಪೈ ಶಾಟ್‌ಗಳು ಬರುತ್ತಿವೆ (ಇನ್ನೂ ಇದನ್ನು ಬಹಿರಂಗಪಡಿಸಿಲ್ಲ), ಮತ್ತು ಇತ್ತೀಚಿನ ಚಿತ್ರಗಳು ಅದರ ಡಿಸೈನ್, ಇಂಟೀರಿಯರ್ ಮತ್ತು ಫೀಚರ್ ಗಳ ಕುರಿತು ಹೊಸ ವಿವರಗಳನ್ನು ನೀಡುತ್ತವೆ. ಇಲ್ಲಿಯವರೆಗೆ ಈ ದೊಡ್ಡದಾದ ಮಹೀಂದ್ರಾ ಥಾರ್ ಬಗ್ಗೆ ನಮಗೆ ತಿಳಿದಿರುವ ಎಲ್ಲಾ ವಿವರಗಳು ಇಲ್ಲಿದೆ.
ಹೊರಭಾಗ
5-ಡೋರ್ ಥಾರ್‌ನ ಒಟ್ಟಾರೆ ಡಿಸೈನ್ ಅದರ ಸಣ್ಣ ವರ್ಷನ್ ಅನ್ನು ಹೋಲುತ್ತದೆ, ಆದರೆ ಬದಲಾವಣೆಗಳ ಬಗ್ಗೆ ಹೇಳುವುದಾದರೆ ಗ್ರಿಲ್‌ಗೆ ಕೆಲವು ಸಣ್ಣ ಟ್ವೀಕ್‌ಗಳು ಮತ್ತು ರೌಂಡ್ ಹೆಡ್‌ಲೈಟ್‌ಗಳಿಗೆ ಅಪ್ಡೇಟ್ ಅನ್ನು ಮಾಡಲಾಗಿದೆ. ಇಲ್ಲಿ, ನಾವು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳ ಅಳವಡಿಕೆಯನ್ನು ಕೂಡ ನೋಡಬಹುದು.
ಸೈಡ್ ಪ್ರೊಫೈಲ್ ನಲ್ಲಿ, 3-ಡೋರ್ ವರ್ಷನ್ ಗೆ ಹೋಲಿಸಿದರೆ ಎರಡು ಹೆಚ್ಚುವರಿ ಡೋರ್ ಗಳನ್ನು ಹೊರತುಪಡಿಸಿ, ವಿಭಿನ್ನ ಡಿಸೈನ್ ನೊಂದಿಗೆ 19-ಇಂಚಿನ ಅಲಾಯ್ ವೀಲ್ಸ್ ಅನ್ನು ಕೂಡ ಪಡೆಯುತ್ತದೆ. ಹಿಂಬದಿಯ ಪ್ರೊಫೈಲ್ ನಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ ಮತ್ತು ಟೈಲ್‌ಗೇಟ್‌ನಲ್ಲಿ ಇಲ್ಲಿ ಕೂಡ ಸ್ಪೇರ್ ವೀಲ್ ಅನ್ನು ಅಳವಡಿಸಲಾಗಿದೆ.
ಒಳಭಾಗ
ಕ್ಯಾಬಿನ್‌ನಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿರುವ ಹೊಸ ಡ್ಯುಯಲ್-ಟೋನ್ ಬ್ಲಾಕ್ ಮತ್ತು ಬ್ರೌನ್ ಥೀಮ್ ಅನ್ನು ನೀವು ಗಮನಿಸಬಹುದು. ಈ ಡ್ಯಾಶ್‌ಬೋರ್ಡ್ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ (ಬಹುಶಃ 10.25-ಇಂಚಿನ ಯುನಿಟ್), ಇದು ಅಪ್ಡೇಟ್ ಆಗಿರುವ XUV400 ಎಲೆಕ್ಟ್ರಿಕ್ SUVನಲ್ಲಿ ಕಂಡುಬರುವಂತೆಯೇ ಇದೆ. ಈ ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಬರಬಹುದು ಮತ್ತು ಮಹೀಂದ್ರಾದ ಆರ್ಡೆನೊX ಕನೆಕ್ಟೆಡ್ ಕಾರ್ ಫೀಚರ್ ಗಳನ್ನು ಕೂಡ ಪಡೆಯಬಹುದು.
ಇಲ್ಲಿ, ಮುಂಭಾಗದ ಸೀಟ್ ಗಳು 3-ಡೋರ್ ವರ್ಷನ್ ನಂತೆಯೇ ಇರಲಿದೆ, ಆದರೆ ಡ್ರೈವರ್ ಮತ್ತು ಮುಂಭಾಗದ ಸೀಟ್ ನಲ್ಲಿ ಕುಳಿತುಕೊಳ್ಳುವವರಿಗೆ ಆರ್ಮ್ ರೆಸ್ಟ್ ಗಳನ್ನು ನೀಡಲಾಗಿದೆ.
5-ಡೋರ್ ಥಾರ್‌ನಲ್ಲಿ ಹಿಂದಿನ ಸೀಟ್‌ಗಳ ಡಿಸೈನ್ ಅನ್ನು ಬದಲಾಯಿಸಲಾಗಿದೆ ಮತ್ತು ಮಧ್ಯದಲ್ಲಿ ಕುಳಿತುಕೊಳ್ಳುವವರಿಗೆ ಹೆಡ್‌ರೆಸ್ಟ್ ಸೇರಿದಂತೆ ಮೂರು ಜನ ಕುಳಿತುಕೊಳ್ಳುವ ಸೀಟ್ ಗಳಿವೆ. ಇದು ಫೋಲ್ಡ್-ಔಟ್ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಕೂಡ ಪಡೆಯುತ್ತದೆ, ಮತ್ತು ಇದು ಕಪ್‌ಹೋಲ್ಡರ್‌ಗಳೊಂದಿಗೆ ಬರುವ ಸಾಧ್ಯತೆಯಿದೆ.
ಫೀಚರ್ ಗಳು
ದೊಡ್ಡ ಟಚ್‌ಸ್ಕ್ರೀನ್‌ನ ಹೊರತಾಗಿ, 5-ಡೋರ್ ಥಾರ್ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ (10.25-ಇಂಚಿನ ಸಹ), ಸಿಂಗಲ್ ಪೇನ್ ಸನ್‌ರೂಫ್, ಮುಂಭಾಗದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಂಭಾಗದ AC ವೆಂಟ್‌ಗಳು, ಎಲೆಕ್ಟ್ರಿಕ್ ಫ್ಯುಯೆಲ್ ಕ್ಯಾಪ್ ರಿಲೀಸ್, ಮತ್ತು ಆಟೋ ಡಿಮ್ ಆಗುವ IRVM ಅನ್ನು ಕೂಡ ಪಡೆಯುತ್ತದೆ.
ಇದನ್ನು ಕೂಡ ಓದಿ: ಮಹೀಂದ್ರಾ ಸ್ಕಾರ್ಪಿಯೋ N Z6 2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಳ್ಳುತ್ತಿದೆ
ಸುರಕ್ಷತೆಯ ವಿಷಯಕ್ಕೆ ಬಂದಾಗ, 5-ಡೋರ್ ಥಾರ್ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ರಿಯರ್‌ವ್ಯೂ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಇದು ಮೇಲ್ಮಟ್ಟದ ವೇರಿಯಂಟ್ ಗಳಲ್ಲಿ 360 ಡಿಗ್ರಿ ಕ್ಯಾಮೆರಾ ಕೂಡ ಪಡೆಯಬಹುದು.
ಪವರ್‌ಟ್ರೇನ್
ಮಹೀಂದ್ರಾ ತನ್ನ ದೊಡ್ಡದಾದ ಥಾರ್ ಅನ್ನು ಎರಡು ಪರಿಚಿತ ಎಂಜಿನ್ ಆಯ್ಕೆಗಳೊಂದಿಗೆ ನೀಡಲಿದೆ: 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್. ಈ ಎರಡೂ ಎಂಜಿನ್ ಗಳು 152 PS (ಪೆಟ್ರೋಲ್) ಮತ್ತು 132 PS (ಡೀಸೆಲ್) ಉತ್ಪಾದಿಸುವ 3-ಡೋರ್ ವರ್ಷನ್ ನಲ್ಲಿ ಇರುವ ಎಂಜಿನ್‌ಗಳಾಗಿದ್ದು, ಆದರೆ ಇಲ್ಲಿ ಅವು ಹೆಚ್ಚಿನ ಔಟ್‌ಪುಟ್ ನೀಡಲಿವೆ. 5-ಡೋರ್ ಥಾರ್ RWD ಮತ್ತು 4WD ವೇರಿಯಂಟ್ ಗಳೊಂದಿಗೆ ಬರುವ ಸಾಧ್ಯತೆಗಳಿವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರ ಥಾರ್ 5-ಡೋರ್ ಈ ವರ್ಷದ ಕೊನೆಯಲ್ಲಿ ರೂ.15 ಲಕ್ಷಗಳ ಆರಂಭಿಕ ಬೆಲೆಯೊಂದಿಗೆ (ಎಕ್ಸ್ ಶೋರೂಂ) ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಅದರ ಸೈಜ್ ಮತ್ತು ಪರ್ಫಾರ್ಮೆನ್ಸ್ ಅನ್ನು ನೋಡಿದರೆ, ಇದು ಸಬ್-4m ಮಾರುತಿ ಜಿಮ್ನಿಗಿಂತ ಒಂದು ಲೆವೆಲ್ ಮೇಲಿರುತ್ತದೆ ಮತ್ತು ಮುಂಬರುವ 5-ಡೋರ್ ಫೋರ್ಸ್ ಗೂರ್ಖಾಗೆ ಉತ್ತಮವಾದ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಥಾರ್ ಆಟೋಮ್ಯಾಟಿಕ್