• English
  • Login / Register

2 ಹೊಸ ವಿಶೇಷ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡ‌ 5-Door Mahindra Thar

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ tarun ಮೂಲಕ ಸೆಪ್ಟೆಂಬರ್ 01, 2023 07:25 pm ರಂದು ಮಾರ್ಪಡಿಸಲಾಗಿದೆ

  • 53 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎರಡು ಹೊಸ ವಿನ್ಯಾಸಗಳಿಂದಾಗಿ ಇದು ಮೂರು ಬಾಗಿಲಿನ ಥಾರ್‌ ನಿಂದ ಭಿನ್ನವಾಗಿ ಕಾಣಿಸಿಕೊಳ್ಳಲಿದೆ

2024 Mahindra Thar 5-Door 

  •  ಹೊಸ ಗ್ರಿಲ್‌ ಮತ್ತು ಪ್ರಾಜೆಕ್ಟರ್‌ ಹೆಡ್‌ ಲ್ಯಾಂಪ್‌ ಗಳೊಂದಿಗೆ 5 ಬಾಗಿಲುಗಳ ಥಾರ್‌ ಹೊರಬರಲಿದೆ. 
  •  ಅಲ್ಲದೆ ಮೂರು ಬಾಗಿಲುಗಳ ಥಾರ್‌ ಗೆ ಭಿನ್ನವಾಗಿ ಫಿಕ್ಸ್ಡ್‌ ಮೆಟಲ್‌ ಟಾಪ್‌ ಮತ್ತು ಎಲೆಕ್ಟ್ರಿಕ್‌ ಸನ್‌ ರೂಫ್‌ ಅನ್ನು ಇದು ಪಡೆಯಲಿದೆ. 
  •  ದೊಡ್ಡದಾದ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌ ಮತ್ತು ಅಟೊಮ್ಯಾಟಿಕ್‌ ಏ.ಸಿ ಸಹ ಹೊಸ ವೈಶಿಷ್ಟ್ಯಗಳಲ್ಲಿ ಒಳಗೊಂಡಿದೆ. 
  •  ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳೊಂದಿಗೆ 2 ಲೀಟರ್‌ ಟರ್ಬೊ ಪೆಟ್ರೋಲ್‌ ಮತ್ತು 2.2
  •  ಎಂದಿನ ಥಾರ್‌ ನಲ್ಲಿ ಇರುವಂತೆಯೇ ರಿಯರ್‌ ಮತ್ತು ಫೋರ್‌ - ವೀಲ್‌ ಡ್ರೈವ್‌ ಟ್ರೇನ್‌ ಗಳು ಇರಲಿವೆ. 
  •  2024ರ ಆರಂಭದಲ್ಲಿ ಇದು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು ಸುಮಾರು ರೂ. 15 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. 

5 ಬಾಗಿಲುಗಳ ಮಹೀಂದ್ರಾ ಥಾರ್‌ ವಾಹವು ಪರೀಕ್ಷೆಯ ವೇಳೆ ಜನರ ಕಣ್ಣಿಗೆ ಬಿದ್ದಿದ್ದು, ಇದು ಹೇಗೆ ಕಾಣಿಸಿಕೊಳ್ಳಲಿದೆ ಎಂಬುದು ಈಗ ಖಚಿತವಾಗಿ ತಿಳಿದುಬಂದಿದೆ. ಈ ಆಫ್‌ ರೋಡ್‌ ವಾಹನದ ಅತ್ಯಂತ ಕಾರ್ಯಸಾಧ್ಯ ಆವೃತ್ತಿಯು 2024ರ ಆರಂಭದಲ್ಲಿ ಮಾರುಕಟ್ಟೆಗೆ ಇಳಿಯಲಿದೆ.  

 

 

ಇದರಲ್ಲಿ ಹೊಸತೇನಿದೆ?

2024 Mahindra Thar 5-Door

 ತೀರಾ ಇತ್ತೀಚೆಗೆ ಆನ್ಲೈನ್‌ ನಲ್ಲಿ ಬಹಿರಂಗಗೊಂಡಿರುವ ಚಿತ್ರಗಳ ಪ್ರಕಾರ, ಐದು ಬಾಗಿಲುಗಳ ಈ ಥಾರ್‌ ವಾಹನವು ಕಟ್ಟುಮಸ್ತಾದ ಸಿಕ್ಸ್-ಸ್ಲಾಟ್‌ ಗ್ರಿಲ್‌ ಮೂಲಕ ಬರಲಿದ್ದು, ಥಾರ್‌ ನ ಸಾಂಪ್ರದಾಯಿಕ ಸೆವೆನ್‌ - ಸ್ಲಾಟ್‌ ವಿನ್ಯಾಸಕ್ಕಿಂತ ಇದು ಭಿನ್ನವಾಗಿದೆ. ಈ ಸ್ಲಾಟ್‌ ಗಳು ಸಮತಲವಾಗಿ ಪ್ರತ್ಯೇಕಗೊಂಡಿದ್ದು, ಸದ್ಯಕ್ಕೆ ಸೆಮಿ - ಎಕ್ಸ್‌ ಪೋಸ್ಡ್‌ ವಿನ್ಯಾಸವನ್ನು ಹೊಂದಿವೆ. 

 ಸಾಂಪ್ರದಾಯಿಕ ದುಂಡಗಿನ ಹೆಡ್‌ ಲ್ಯಾಂಪ್‌ ಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ ಹ್ಯಾಲೋಜೆನ್‌ ದೀಪಗಳ ಬದಲಿಗೆ ಐದು ಬಾಗಿಲುಗಳ ಈ ವಾಹನವು ಪ್ರಾಜೆಕ್ಟರ್‌ ಯೂನಿಟ್‌ ಗಳೊಂದಿಗೆ ಬರಲಿದೆ. ಇದು LED ಗಳನ್ನು ಸಹ ಹೊಂದಲಿದೆ. ಈ LED ಗಳು ಸದ್ಯ ಮಾರುಕಟ್ಟೆಯಲ್ಲಿ ಈ ಬೆಲೆಯಲ್ಲಿ ಮಾರಾಟಗೊಳ್ಳುತ್ತಿರುವ ಕಾರುಗಳಲ್ಲಿ ಹೊಸ ಆಕರ್ಷಣೆ ಎನಿಸಿವೆ. 

ಇದನ್ನು ಸಹ ಓದಿರಿ: ಮಹೀಂದ್ರಾ ಸ್ಕೋರ್ಪಿಯೊ N-ಬೇಸ್ಡ್‌ ಗ್ಲೋಬಲ್‌ ಪಿಕ್‌ ಅಪ್‌ ಕಾನ್ಸೆಪ್ಟ್‌ ನ 5 ಪ್ರಮುಖ ಅಂಶಗಳು

 

ಇಲ್ಲಿಯತನಕ ನಮಗೇನು ತಿಳಿದಿದೆ...

2024 Mahindra Thar 5-Door

 ದೊಡ್ಡ ಗಾತ್ರದ ಈ ಥಾರ್‌ ಅದೇ ಚೌಕಾಕಾರದ ಮತ್ತು ಕಟ್ಟುಮಸ್ತಾದ ಸಿಲ್ವೆಟ್‌ ಮೂಲಕ ಬರಲಿದೆ. ಆದರೆ ಹೆಚ್ಚಿನ ಎರಡು ಬಾಗಿಲುಗಳು ಇದರ ವಿಶೇಷತೆ ಎನಿಸಲಿವೆ. ಮೂರು ಬಾಗಿಲುಗಳ ಥಾರ್‌ ವಾಹನಕ್ಕೆ ಬದಲಾಗಿ ಇದರಲ್ಲಿ ಮಾಡಿರುವ ಇನ್ನೆಡರು ಪ್ರಮುಖ ಬದಲಾವಣೆಗಳೆಂದರೆ, ಫಿಕ್ಸ್ಡ್‌ ಮೆಟಲ್‌ ರೂಫ್‌ ಮತ್ತು ಎಲೆಕ್ಟ್ರಿಕ್‌ ಸನ್‌ ರೂಫ್. ದೊಡ್ಡದಾದ ಟಚ್‌ ಸ್ಕ್ರೀನ್‌ ಮತ್ತು ಹೆಚ್ಚು ಕಾರ್ಯಸಾಧುವೆನಿಸುವ ಸ್ಟೋರೇಜ್‌ ಸ್ಥಳಗಳಂತಹ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಒಳಭಾಗವು ಮೊದಲಿನಂತೆಯೇ ಇರಲಿದೆ. 

ಪವರ್‌ ಟ್ರೇನ್‌ ಅನ್ನು ಪರಿಷ್ಕರಿಸುವ ಸಾಧ್ಯತೆ ಇದೆ

Mahindra Thar 5-Door

 ಎಂದಿನ ಆಫ್‌ ರೋಡ್‌ ವಾಹನದಂತೆಯೇ, 5 ಬಾಗಿಲುಗಳ ಈ ಥಾರ್‌ ವಾಹನವು 2 ಲೀಟರ್‌ ಗಳ ಟರ್ಬೋ ಪೆಟ್ರೋಲ್‌ ಮತ್ತು 2.2 ಲೀಟರುಗಳ ಡೀಸೆಲ್‌ ಎಂಜಿನ್‌ ಗಳೊಂದಿಗೆ ಬರಲಿದ್ದು, ಅಧಿಕ ಸ್ಟೇಟ್‌ ಆಫ್‌ ಟ್ಯೂನ್‌ ಹೊಂದಿರಲಿದೆ. ಎರಡೂ ಪವರ್‌ ಟ್ರೇನ್‌ ಗಳೊಂದಿಗೆ ಸಿಕ್ಸ್‌ ಸ್ಪೀಡ್‌ ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳು ಲಭ್ಯ. ಮೂರು ಬಾಗಿಲುಗಳ ಥಾರ್‌ ನಂತೆಯೇ ಇದರಲ್ಲಿಯೂ ರಿಯರ್‌ ಮತ್ತು ಫೋರ್‌ ವೀಲ್‌ ಡ್ರೈವ್‌ ಟ್ರೇನ್‌ ಗಳು ಇರುವ ಸಾಧ್ಯತೆ ಇದೆ. 

ಇದನ್ನು ಸಹ ಓದಿರಿ: ನಾವು ನೋಡಿರುವ, ಬಿಡುಗಡೆಗೆ ಸಿದ್ಧವಾಗಿರುವ ಪ್ರತಿ ಮಹೀಂದ್ರಾ ಎಲೆಕ್ಟ್ರಿಕ್‌ SUV ವಾಹನಗಳು

5 ಬಾಗಿಲುಗಳ ಮಹೀಂದ್ರಾ ಥಾರ್‌ ವಾಹನವು ಸುಮಾರು ರೂ. 15 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಕಾಂಪ್ಯಾಕ್ಟ್‌ SUV ಗಳ ಬದಲಿಗೆ ಕಟ್ಟುಮಸ್ತಾದ ವಾಹನವಾಗಿ ಹೊರಬರಲಿದ್ದು, ಮಾರುತಿ ಜಿಮ್ಮಿ ಕಾರಿಗಿಂತ ಹೆಚ್ಚು ದೊಡ್ಡದಾದ ಮತ್ತು ಹೆಚ್ಚು ಪ್ರೀಮಿಯಂ ಆಯ್ಕೆ ಎನಿಸಲಿದೆ. ವಿಷನ್ ಥಾರ್.ಇ ಕಾನ್ಸೆಪ್ಟ್‌ ನಲ್ಲಿ ತೋರಿಸಿದಂತೆ, ಐದು ಬಾಗಿಲುಗಳ ತನ್ನ ಥಾರ್‌ ವಾಹನವು ಎಲೆಕ್ಟ್ರಿಕ್‌ ಕಾರ್‌ ಆಗಿ ಹೊರಬರಲಿದೆ ಎಂಬುದನ್ನು ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ದೃಢಪಡಿಸಿದೆ.

ಚಿತ್ರದ ಮೂಲ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ ಥಾರ್‌ ಅಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌ ROXX

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience