ಈ ವರ್ಷ ಬಿಡುಗಡೆಗೊಳ್ಳಲಿರುವ ಎಲ್ಲಾ ಆಟೋ ಎಕ್ಸ್‌ಪೋ 2023 ಕಾರುಗಳು, ಜೊತೆಗೆ ನಾವು ನೋಡಬಯಸುವ ಇನ್ನಷ್ಟು ಕಾರುಗಳು!
ಈ ಪಟ್ಟಿ ಜನಪ್ರಿಯ ಮಾರುಕಟ್ಟೆ ಮತ್ತು ಐಷಾರಾಮಿ ಮಾಡೆಲ್‌ಗಳ ಮಿಶ್ರಣವಾಗಿದ್ದು ನಿರೀಕ್ಷಿತ ಬಿಡುಗಡೆಗಳು ಎರಡು ಜನಪ್ರಿಯ ಕಾರು ತಯಾರಕರ CNG ತ್ರಿವಳಿಯನ್ನು ಒಳಗೊಂಡಿದೆ
ಆಟೋ ಎಕ್ಸ್‌ಪೋದ ಈ ಆವೃತ್ತಿಯಲ್ಲಿ ಕಾರು ತಯಾರಕ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿದ್ದರೂ, ಇದರ ಮೊದಲ ಎರಡು ದಿನದಲ್ಲಿ ಹೆಚ್ಚಿನ ಆಕ್ಷನ್ ಅನ್ನು ನೋಡಲು ನಮಗೆ ಸಾಧ್ಯವಾಯಿತು. ಪ್ರದರ್ಶಿಸಲಾದ ಎಲ್ಲಾ ಮಾಡೆಲ್‌ಗಳಲ್ಲಿ ಕೆಲವು ಮಾಲೀಕರು ಮುಂಬರುವ ತಮ್ಮ ಉತ್ಪನ್ನಗಳ ಬಿಡುಗಡೆಯ ಟೈಮ್‌ಲೈನ್‌ಗಳನ್ನು ಸಹ ಬಹಿರಂಗಪಡಿಸಿದ್ದಾರೆ.
ಈ ವೃತ್ತಾಂತದಲ್ಲಿ, 2023 ರಲ್ಲಿ ತಮ್ಮ ಬಿಡುಗಡೆಯನ್ನು ದೃಢೀಕರಿಸಿದ ಕಾರುಗಳು ಮತ್ತು ಈ ವರ್ಷಾಂತ್ಯದ ವೇಳೆಗೆ ಶೋರೂಂಗೆ ಲಗ್ಗೆ ಇಡಬಹುದಾದ ಮಾಡೆಲ್‌ಗಳನ್ನು ನೋಡೋಣ:
ಮಾರುತಿ ಜಿಮ್ನಿ
ಕೊನೆಗೂ ಆಟೋ ಎಕ್ಸ್‌ಪೋ 2023 ರಲ್ಲಿ ಮಾರುತಿಯು ಭಾರತದಲ್ಲಿ ಉದ್ದನೆಯ-ವ್ಹೀಲ್‌ಬೇಸ್ ಜಿಮ್ನಿಯನ್ನು ಅನಾವರಣಗೊಳಿಸಿತು. ಈ ಎಸ್‌ಯುವಿಯು ಐಡಲ್-ಇಂಜಿನ್ ಸ್ಟಾರ್ಟ್/ಸ್ಟಾಪ್ ಮತ್ತು ಫೋರ್-ವ್ಹೀಲ್ ಡ್ರೈವ್‌ಟ್ರೇನ್‌ನೊಂದಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪ್ರಮಾಣಿತವಾಗಿ ಹೊಂದಲಿದೆ. ಟ್ರಾನ್ಸ್‌ಮಿಶನ್ ಆಯ್ಕೆಯು ಫೈವ್-ಸ್ಪೀಡ್ MT ಅಥವಾ ಫೋರ್-ಸ್ಪೀಡ್ AT ಆಗಿರಲಿದೆ. ಇದರ ಬುಕಿಂಗ್ ಈಗಾಗಲೇ ನಡೆಯುತ್ತಿದ್ದು ಮಾರ್ಚ್ 2023 ರಲ್ಲಿ ಇದು ಬಿಡುಗಡೆಯಾಗಲಿದೆ.
ಮಾರುತಿ ಫ್ರಾಂಕ್ಸ್
ಆಟೋ ಎಕ್ಸ್‌ಪೋ 2023 ರಲ್ಲಿ ಫೈವ್-ಡೋರ್ ಜಿಮ್ನಿಯ ಜೊತೆಗೆ ಅನಾವರಣಗೊಂಡ ಮಾರುತಿಯ ಮತ್ತೊಂದು ಮಾದರಿಯೆಂದರೆ ಮಾರುತಿ ಫ್ರಾಂಕ್ಸ್. ಬಲೆನೋ-ಆಧಾರಿತ ಎಸ್‌ಯುವಿ ಕಾರು ತಯಾರಕರನ್ನು ಟರ್ಬೋ-ಪೆಟ್ರೋಲ್ ಇಂಜಿನ್‌ಗೆ (ಮೈಲ್ಡ್-ಹೈಬ್ರಿಡ್ ಟೆಕ್‌ನೊಂದಿಗೆ 1-ಲೀಟರ್ ಬೂಸ್ಟರ್‌ಜೆಟ್ ಯೂನಿಟ್ ಅನ್ನು ಇದು ಹೊಂದಿದೆ) ಮರಳುವಂತೆ ಮಾಡಿದ್ದು, ಬಲೆನೋದ 1.2-ಲೀಟರ್ ಡ್ಯುಯಲ್‌ಜೆಟ್ ಇಂಜಿನ್ ಅನ್ನು ಸಹ ಒಳಗೊಂಡಿದೆ. ಇದು ದೊಡ್ಡ ಎಸ್‌ಯುವಿನಂತೆಯೇ ಇರುವ ಗ್ರ್ಯಾಂಡ್ ವಿಟಾರಾದ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಎರವಲು ಪಡೆದಿದೆ ಹಾಗೂ ಏಪ್ರಿಲ್ ವೇಳೆಗೆ ಮಾರಾಟಕ್ಕೆ ಸಿದ್ಧವಾಗಲಿದೆ.
ಫಿಫ್ತ್-ಜೆನ್ ಲೆಕ್ಸಸ್ ಆರ್‌ಎಕ್ಸ್
ಲೆಕ್ಸಸ್ ಮಾರ್ಚ್ ವೇಳೆಗೆ ಫಿಫ್ತ್-ಜನರೇಷನ್ ಆರ್‌ಎಕ್ಸ್ ಅನ್ನು ಭಾರತಕ್ಕೆ ತರಲು ಸಿದ್ಧವಾಗಿದೆ. ಹೊಸ ಎಸ್‌ಯುವಿಯನ್ನು ಈ ಕಾರು ತಯಾರಕರ ನಮ್ಮ ದೇಶದಲ್ಲಿರುವ ಪೋರ್ಟ್‌ಫೋಲಿಯೋದಲ್ಲಿ ಎಂಟ್ರಿ-ಲೆವಲ್ ಎನ್‌ಎಕ್ಸ್ ಮತ್ತು ಫ್ಲ್ಯಾಗ್‌ಶಿಪ್ ಎಲ್‌ಎಕ್ಸ್ ನಡುವೆ ಇರಲಿದೆ. ಇದರಲ್ಲಿ ಎರಡು ಟ್ರಿಮ್‌ಗಳಲ್ಲಿ ಪೆಟ್ರೋಲ್ ಇಂಜಿನ್ ಮತ್ತು ಆಲ್-ವ್ಹೀಲ್ ಡ್ರೈವ್ (AWD) ಆಯ್ಕೆಯನ್ನು ನೀಡಲಾಗುವುದು.
ಬಿವೈಡಿ ಸೀಲ್ ಇವಿ
ಆಟೋ ಎಕ್ಸ್‌ಪೋ 2023 ರಲ್ಲಿ ಬಿವೈಡಿ ತನ್ನ ಜಾಗತಿಕ ಎಲೆಕ್ಟ್ರಿಕ್ ಸೆಡಾನ್ ಕೊಡುಗೆಯಾದ ಸೀಲ್ ಅನ್ನು ಪರಿಚಯಿಸಿತು. ಈ ಇವಿ (EV) ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ಸೀಲ್ ಅನ್ನು ಮುಂದಿನ ಎಲೆಕ್ಟ್ರಿಕ್ ವಾಹನವಾಗಿ ಪರಿಚಯಿಸುವ ತಮ್ಮ ಯೋಜನೆಯನ್ನು ದೃಢಪಡಿಸಿದ್ದಾರೆ. ಈ ವರ್ಷದ ದೀಪಾವಳಿಯ ಹೊತ್ತಿಗೆ ಬಿವೈಡಿ 700km ರೇಂಜ್ ಕ್ಲೈಮ್ ಮಾಡುವ ಸೀಲ್ ಅನ್ನು ಪರಿಚಯಯಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಸಂಬಂಧಿತ: ಆಟೋ ಎಕ್ಸ್‌ಪೋ 2023 ರಲ್ಲಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ 15 ಕಾರುಗಳು
ಟಾಟಾ ಆಲ್ಟ್ರೋಸ್ ರೇಸರ್
ಟಾಟಾ ನೆಕ್ಸಾನ್‌ನ 120PS 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಆಲ್ಟ್ರೋಸ್‌ನಲ್ಲಿ ‘ರೇಸರ್’ ಎಂಬ ಸ್ವತಂತ್ರ ಪುನರಾವೃತ್ತಿಯಲ್ಲಿ ಪರಿಚಯಿಸುತ್ತಿದೆ. ಪ್ರಮಾಣಿತ ಆಲ್ಟ್ರೋಸ್ ಮತ್ತು ಅದರ ರೇಸರ್ ಕೌಂಟರ್‌ಪಾರ್ಟ್‌ಗೆ ಅದರ ಪವರ್‌ಟ್ರೇನ್ ಅಪ್‌ಗ್ರೇಡ್ ಮಾತ್ರ ವ್ಯತ್ಯಾಸವಲ್ಲ. ಎರಡನೆಯದು ಕೆಲವು ಕಾಸ್ಮೆಟಿಕ್ ಅಪ್‌ಡೇಟ್‌ಗಳು ಮತ್ತು ಕೆಲವು ಹೊಸ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಪಡೆದಿದೆ. ಅದೃಷ್ಟವಶಾತ್ ಕಾರು ತಯಾರಕರು ಇದರ ಬಿಡುಗಡೆಯನ್ನು ದೃಢೀಕರಿಸಿರುವುದರಿಂದ ಶೀಘ್ರದಲ್ಲೇ ನೀವಿದನ್ನು ಖರೀದಿಸಿ ಮನೆಗೊಯ್ಯಲು ಸಾಧ್ಯವಾಗುತ್ತದೆ.
ಲೆಕ್ಸಸ್ ಎಲ್ಎಂ
ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿರುವ ಮತ್ತೊಂದು ಲೆಕ್ಸಸ್ ಮಾಡೆಲ್ ಇದಾಗಿದೆ. ಕಾರು ತಯಾರಕರು ಎಲ್ಎಂ ಎಂಪಿವಿಯನ್ನು, ಅದರ ಐಷಾರಾಮಿ ಕೊಡುಗೆಗಳನ್ನು 2023 ರ ಅಂತ್ಯದ ವೇಳೆಗೆ ನಮ್ಮ ಮಾರುಕಟ್ಟೆಗೆ ತರಲಿದ್ದಾರೆ. ಇದು ತನ್ನ ಭವ್ಯವಾದ ಇನ್-ಕ್ಯಾಬಿನ್ ಅನುಭವಕ್ಕೆ ಹೆಸರುವಾಸಿಯಾಗಿದ್ದು ಜಾಗತಿಕವಾಗಿ ನಾಲ್ಕು ಅಥವಾ ಏಳು ಸೀಟುಗಳು ಕಾನ್ಫಿಗರೇಶನ್‌ನಲ್ಲಿ ಮಾರಾಟವಾಗುತ್ತದೆ.
2023 ರಲ್ಲಿ ಆಗಮಿಸಲೆಂದು ನಾವು ನಿರೀಕ್ಷಿಸುತ್ತಿರುವ ಕಾರುಗಳು
ಟಾಟಾ ಟಿಯಾಗೋ ಇವಿ ಬ್ಲಿಟ್ಸ್
ಟಾಟಾದ ಪೆವಿಲಿಯನ್ ಅಲ್ಲಿ ಪ್ರದರ್ಶಿಸಲಾದ ಮಾಡೆಲ್‌ಗಳಲ್ಲಿ ಟಿಯಾಗೋ ಇವಿ ಕೂಡಾ ಇತ್ತು ಆದರೆ ನಾವು ಅದನ್ನು ಹೇಗೆ ನೋಡುತ್ತಾ ಬಂದಿದ್ದೇವೋ ಆ ರೀತಿಯಾಗಿ ಅಲ್ಲ. ಬಿಳಿ ಬಣ್ಣ, 15-ಇಂಚಿನ ಅಲೋಯ್ ವ್ಹೀಲ್‌ಗಳು ಮತ್ತು ಬಾಡಿ ಸ್ಕರ್ಟ್‌ಗಳಂತಹ ನವೀಕರಣಗಳನ್ನು ಒಳಗೊಂಡ ಸ್ಪೋರ್ಟಿಯರ್ ಅವತಾರದಲ್ಲಿ ಇದರ ಮಾಲೀಕರು ಇದನ್ನು ಪ್ರದರ್ಶಿಸಿದ್ದಾರೆ. ಟಾಟಾ ಇದರ ವೈಶಿಷ್ಟ್ಯತೆಗಳನ್ನು ಹಂಚಿಕೊಂಡಿಲ್ಲವಾದರೂ ರೆಗ್ಯುಲರ್ ಟಿಯಾಗೋ ಇವಿಯಂತೆಯೇ ಅದೇ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಇದು ಒಳಗೊಂಡಿದೆ ಎಂದು ನಾವು ನಂಬುತ್ತೇವೆ. ಎಲೆಕ್ಟ್ರಿಕ್ ಹ್ಯಾಚ್-ಬ್ಯಾಕ್‌ನ ಒಂದು ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲು ಡಿಸೆಂಬರ್ 2023 ರ ವೇಳೆಗೆ ಟಾಟಾ ಇದನ್ನು ಬಿಡುಗಡೆಗೊಳಿಸಬಹುದು ಎಂಬುದು ನಮ್ಮ ಅಂಬೋಣ.
ಇದನ್ನೂ ಓದಿ: ರಿಫ್ಯುಯಲ್ ಅಥವಾ ರೀಚಾರ್ಜ್, ಟಾಟಾ ಸಿಯೆರಾದಲ್ಲಿ ಎರಡೂ ಆಯ್ಕೆಗಳು
ಮಾರುತಿ ಬ್ರೆಝಾ ಸಿಎನ್‌ಜಿ
ಸಿಎನ್‌ಜಿ ಯಾವಾಗಲೂ ಸಣ್ಣ ಹ್ಯಾಚ್‌ಬ್ಯಾಕ್‌ಗಳು ಮತ್ತು ಸೆಡಾನ್‌ಗಳೊಂದಿಗೆ ಆಫರ್‌ನಲ್ಲಿರುತ್ತದೆ. ಇತ್ತೀಚೆಗೆ ನಾವು ಮಾರುತಿ ಗ್ರ್ಯಾಂಡ್ ವಿಟಾರಾದಲ್ಲಿ ನೋಡಿರುವಂತೆಯೇ ಎಸ್‌ಯುವಿಗಳು ಪರ್ಯಾಯ ಇಂಧನ ಆಯ್ಕೆಯನ್ನು ಸಹ ಹೊಂದಿರುತ್ತವೆ. ಈಗ ಕಾರು ತಯಾರಕರು ಬ್ರೆಝಾದೊಂದಿಗೆ ಸಿಎನ್‌ಜಿ ಪವರ್‌ಟ್ರೇನ್‌ಗಾಗಿ sub-4m ಎಸ್‌ಯುವಿಯನ್ನು ಗಮನಿಸಿರುವಂತೆ ತೋರುತ್ತಿದೆ, ಇದನ್ನು ಆಟೋ ಎಕ್ಸ್‌ಪೋ ಪೆವಿಲಿಯನ್‌ನಲ್ಲಿ ಇರಿಸಲಾಗಿದೆ.
ಟಾಟಾ ಹ್ಯಾರಿಯರ್ ಮತ್ತು ಸಫಾರಿ ರೆಡ್ ಡಾರ್ಕ್ ಎಡಿಷನ್‌ಗಳು
ಪ್ರಮುಖ ಎಸ್‌ಯುವಿಗೆ ಜೊತೆಯಾದ ಹ್ಯಾರಿಯರ್ ಮತ್ತು ಸಫಾರಿಯ ವಿಶೇಷ ಎಡಿಷನ್‌ಗಳ ಸಂಖ್ಯೆಯು ಸಾಲದೆಂಬಂತೆ, ಟಾಟಾ ಆಟೋ ಎಕ್ಸ್‌ಪೋ 2023 ರಲ್ಲಿ ಇವೆರಡರ ‘ರೆಡ್ ಡಾರ್ಕ್’ ಎಡಿಷನ್ ಅನ್ನು ಪರಿಚಯಿಸಿದೆ. ಇವೆರಡೂ ದೊಡ್ಡ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳು ಮತ್ತು ದೊಡ್ಡ ಟಚ್‌ಸ್ಕ್ರೀನ್ ಹಾಗೂ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಪಡೆದಿವೆ. ಈ ಐದು ನವೀಕರಣಗಳೊಂದಿಗೆ ಎರಡು ಎಸ್‌ಯುವಿಗಳನ್ನು ಬಿಡುಗಡೆ ಮಾಡಲಾಗುವುದು ಎಂಬುದನ್ನು ನಾವು ನಿರೀಕ್ಷಿಸುತ್ತಿರುವಾಗಲೇ, ಅವುಗಳಲ್ಲಿ ಯಾವುದು ಅಸ್ತಿತ್ವದಲ್ಲಿರುವ ಎಸ್‌ಯುವಿ ಜೋಡಿಯ ಇಕ್ವಿಪ್‌ಮೆಂಟ್ ಲಿಸ್ಟ್‌ಗೆ ದಾರಿಮಾಡಿಕೊಡುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಹೇಳಲಾಗದು.
ಫೋರ್ತ್-ಜೆನ್ ಕಿಯಾ ಕಾರ್ನಿವಲ್
ನಮ್ಮ ಮಾರುಕಟ್ಟೆ ಎಂಪಿವಿಗಾಗಿ ಕಿಯಾದ ಕಾರ್ನಿವಲ್ ಫ್ಲ್ಯಾಗ್‌ಶಿಪ್ ಆಗಿದೆ. ಕಾರು ತಯಾರಕರು ಆಟೋ ಎಕ್ಸ್‌ಪೋ 2023 ರಲ್ಲಿ ಕಾರ್ನಿವಲ್‌ನ ಹೊಚ್ಚ ಹೊಸ ಜನರೇಷನ್ ಅನ್ನು ಪ್ರದರ್ಶಿಸಿದರು ಮತ್ತು ಇದು ನಮ್ಮ ಮಾರುಕಟ್ಟೆಯ ಎಂಪಿವಿಯನ್ನು ಇನ್ನೂ ಮೌಲ್ಯಮಾಪನ ಮಾಡುತ್ತಿದೆ ಎಂದು ಹೇಳಿದರು. ಅದರ ವಿಕಸನಗೊಂಡ ಅತ್ಯದ್ಭುತವಾದ ನೋಟ, ಪ್ರೀಮಿಯಂ ಕ್ಯಾಬಿನ್ ಮತ್ತು ಅದರ ರಿಫೈನ್ಡ್ ಡಿಸೈಲ್ ಇಂಜಿನ್ ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿಂದಾಗಿ ನಾವು ಹೊಸ ಕಾರ್ನಿವಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ನೋಡಲು ಬಯಸುತ್ತೇವೆ.
ಟಾಟಾ ಆಲ್ಟ್ರೋಸ್ ಮತ್ತು ಪಂಚ್ ಸಿಎನ್‌ಜಿ
ಆಟೋ ಎಕ್ಸ್‌ಪೋ 2023 ರಲ್ಲಿ ನಾವು ಸಿಎನ್‌ಜಿ ಕಿಟ್-ಸಹಿತ ಟಾಟಾ ಆಲ್ಟ್ರೋಸ್ ಮತ್ತು ಪಂಚ್‌ನ ಮೊಟ್ಟ ಮೊದಲ ನೋಟವನ್ನೂ ಕಂಡಿದ್ದೇವೆ. ಶೀಘ್ರದಲ್ಲಿ ಟಿಯಾಗೋ ಮತ್ತು ಟೈಗರ್ ಜೊತೆಗೆ ಇವುಗಳೂ ಈ ಕಾರುತಯಾರಕರ ಸಿಎನ್‌ಜಿ ಪೋರ್ಟ್‌ಫೋಲಿಯೋಗೆ ಹೊಸ ಸೇರ್ಪಡೆಯಾಗಬಹುದು. ಈ ಮಾಡೆಲ್‌ಗಳ ಜೊತೆಗೆ ಉತ್ತಮ ಬೂಟ್ ಸ್ಪೇಸ್ ಅನ್ನು ನೀಡಲು ಟಾಟಾ ತನ್ನ ಟ್ವಿನ್-ಸಿಲಿಂಡರ್ ಟ್ಯಾಂಕ್‌ಗಳನ್ನು ಬೂತ್‌ನಲ್ಲಿ ಪ್ರದರ್ಶಿಸಿತು. ನೀವು ವಿವರವಾಗಿ ಪರಿಶೀಲಿಸಲು ಸಹಾಯವಾಗುವಂತೆ ನಾವು ಆಲ್ಟ್ರೋಸ್ ಸಿಎನ್‌ಜಿ ಮತ್ತು ಪಂಚ್ ಸಿಎನ್‌ಜಿಗಳನ್ನು ಇಮೇಜ್ ಸಮೇತ ನೀಡಿದ್ದೇವೆ.
ಇವೆಲ್ಲವೂ ಖಚಿತಗೊಂಡ ಮತ್ತು ಈ ವರ್ಷ ಮಾರಾಟಕ್ಕೆ ಬರುವ ನಿರೀಕ್ಷೆಯಿರುವ ಮಾಡೆಲ್‌ಗಳಾಗಿವೆ, ಪ್ರದರ್ಶನಗೊಂಡ ಇತರ ಕೆಲವು ಕಾರುಗಳು ತಮ್ಮ ತಮ್ಮ ಭಾರತೀಯ ಶೋರೂಮ್‌ಗಳಿಗೆ ಲಗ್ಗೆಯಿಡಬಹುದು. ನೀವು ಯಾವ ಎಕ್ಸ್‌ಪೋ ಕಾರು(ಗಳು) ಬಿಡುಗಡೆಯಾಗಲು ಬಯಸುತ್ತೀರಿ ಎಂಬುದನ್ನು ನಮಗೆ ತಿಳಿಸಿ. ಮೆಗಾ ಈವೆಂಟ್‌ನ ಎಲ್ಲಾ ಆಕ್ಷನ್ ನೋಡಲು ನಮ್ಮ ಆಟೋ ಎಕ್ಸ್‌ಪೋ 2023 ಪುಟವನ್ನು ಪರೀಶೀಲಿಸಿ.