ಏ.19 ರಂದು MG ಕಾಮೆಟ್-ಇವಿಯ ಬ್ಯಾಟರಿ, ರೇಂಜ್ ಮತ್ತು ಫೀಚರ್‌ಗಳ ಮಾಹಿತಿ ಬಹಿರಂಗ
ಎಂಜಿ ಕಾಮೆಟ್ ಇವಿ ಗಾಗಿ tarun ಮೂಲಕ ಏಪ್ರಿಲ್ 12, 2023 10:31 pm ರಂದು ಪ್ರಕಟಿಸಲಾಗಿದೆ
- 14 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಟಿಯಾಗೋ EV ಮತ್ತು ಸಿಟ್ರಾನ್ eC3ಗೆ ಪ್ರತಿಸ್ಪರ್ಧಿಯಾಗಿರುವ ಈ ಕಾಮೆಟ್ EV ಬೆಲೆ ರೂ. 10 ಲಕ್ಷದೊಳಗಿರಬೇಕು.
- MG ಕಾಮೆಟ್ EV 2-ಡೋರ್, 4-ಸೀಟರ್‌ನ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದೆ.
- ಫೀಚರ್‌ಗಳ ಪಟ್ಟಿಯಲ್ಲಿ ಇದು ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇ ಸ್ಕ್ರೀನ್‌ಗಳು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಆಟೋ AC ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ ಅನ್ನು ಹೊಂದಿದೆ
- ಇದು 300 ಕಿಲೋಮೀಟರ್‌ಗಳ ತನಕದ ರೇಂಜ್ ಹೊಂದಿರುವ17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿರಬಹುದು.
- ಬೆಲೆಗಳು ಸುಮಾರು ರೂ 9 ಲಕ್ಷ(ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
MG ತನ್ನ ಮುಂಬರುವ ಸಣ್ಣ EVಯನ್ನು ಏಪ್ರಿಲ್ 19ರಂದು ಬಹಿರಂಗಪಡಿಸಲಿದ್ದು, ಇದರ ಬಿಡುಗಡೆ ನಂತರ ಆಗಲಿದೆ. ಈ ಕಾರುತಯಾರಕರು ಕಾಮೆಟ್ EVಯ ಮೊದಲ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಇದರ ಇಂಟೀರಿಯರ್‌ನ ಕಿರುನೋಟವನ್ನು ನೀಡಿದೆ.
MG ಕಾಮೆಟ್ EV ಸಣ್ಣ ಫೂಟ್‌ಪ್ರಿಂಟ್ ಹೊಂದಿದ್ದು, ಇದರ ಉದ್ದ ಟಾಟಾ ನ್ಯಾನೋಗಿಂತಲೂ ಕಡಿಮೆ ಇದೆ. ಇದು 2-ಡೋರ್ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದ್ದು, ಇದರೊಳಗೆ ನಾಲ್ಕು ಜನರು ಕುಳಿತುಕೊಳ್ಳಬಹುದಾಗಿದೆ. ಈ EVಯ ಒಳಗೆ ಮತ್ತು ಹೊರಗೆ ಚಳಕದ ಸ್ಟೈಲಿಂಗ್ ಇದ್ದು, ಫ್ಲ್ಯಾಶಿ ವ್ಹೀಲ್‌ಗಳು ಮತ್ತು ಮುಂಭಾಗದಲ್ಲಿ ಸ್ಲೀಕ್ LED DRL ಸ್ಟ್ರಿಪ್‌ನೊಂದಿಗೆ ಅನೇಕ ಆಧುನಿಕ ಸ್ಪರ್ಶಗಳನ್ನು ಹೊಂದಿದೆ.
ಇದನ್ನೂ ಓದಿ: MG ಕಾಮೆಟ್ EV ಬಗ್ಗೆ ನೀವು ತಿಳಿದಿರಬೇಕಾದ 5 ಸಂಗತಿಗಳು
ಕಾಮೆಟ್ EV ಯ ಇತ್ತೀಚಿನ ಟೀಸರ್ ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳು (ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ), ಆಟೋ AC, ಸ್ಟೀರಿಂಗ್-ಮೌಂಟೆಡ್ ನಿಯಂತ್ರಣಗಳನ್ನು ತೋರಿಸಿದೆ. ಅಲ್ಲದೇ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನೂ ಇದರಲ್ಲಿ ನಿರೀಕ್ಷಿಸಬಹುದಾಗಿದೆ.
ಇಂಡೋನೇಷಿಯಾ ಮಾರುಕಟ್ಟೆಯಲ್ಲಿ ಇದನ್ನು ವುಲಿಂಗ್ ಅಲ್ಮಝ್ EVಯಾಗಿ ಮಾರಾಟ ಮಾಡಲಾಗುತ್ತಿದ್ದು ಇದರಲ್ಲಿ 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ. ಈ ಸಣ್ಣ ಪ್ಯಾಕ್ 200km ತನಕದ ರೇಂಜ್ ಹೊಂದಿದ್ದು, ದೊಡ್ಡದು 300km ತನಕದ ರೇಂಜ್ ಹೊಂದಿದೆ. ಯಾವ ಬ್ಯಾಟರಿ ಪ್ಯಾಕ್‌ನಲ್ಲಿ ಕಾಮೆಟ್ ಓಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಬ್ಯಾಟರಿಯು ರಿಯರ್-ವ್ಹೀಲ್ ಡ್ರೈವ್‌ಟ್ರೇನ್‌ಗೆ ಶಕ್ತಿ ನೀಡುವುದರ ಜೊತೆಗೆ ಮೋಟಾರು 40PS ತನಕದ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಮುಂಬರುವ ಇಲೆಕ್ಟ್ರಿಕ್ ಕಾರುಗಳು
MG ಕಾಮೆಟ್ EVಯ ಬೆಲೆಗಳು ಸುಮಾರು ರೂ 9 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದ್ದು, ಈ ಸಣ್ಣ ನಗರ EV ಯು ಸಿಟ್ರನ್ eC3 ಮತ್ತು ಟಾಟಾ ಟಿಯಾಗೋ EVಗೆ ಪ್ರತಿಸ್ಪರ್ಧಿಯಾಗಿದೆ.