• English
  • Login / Register

ಬುಕಿಂಗ್‌ ಪ್ರಕ್ರಿಯೆ ಆರಂಭಿಸಿದ ಮಾರುತಿ ಇನ್ವಿಕ್ಟೊ

ಮಾರುತಿ ಇನ್ವಿಕ್ಟೋ ಗಾಗಿ tarun ಮೂಲಕ ಜೂನ್ 20, 2023 02:33 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಇನ್ವಿಕ್ಟೊ ಮಾರುತಿ ಕಂಪೆನಿಯ ಅತ್ಯಂತ ದುಬಾರಿ ಕಾರಾಗಿದ್ದು, ಇದರ ಬೆಲೆ ಸುಮಾರು ರೂ. 19 ಲಕ್ಷಗಳಾಗಿವೆ (ಎಕ್ಸ್-ಶೋರೂಮ್)

Maruti Invicto MPV

  • ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಈಗ ರೂ.25000 ಕ್ಕೆ ಬುಕಿಂಗ್‌ಗಳು ತೆರೆದಿವೆ.

  •  ಇದು ಇನೋವಾ ಹೈಕ್ರಾಸ್‌ನ ರೀಬ್ಯಾಡ್ಜ್‌ನ ಆವೃತ್ತಿಯಾಗಿದ್ದು, ಸ್ವಲ್ಪ ವಿಭಿನ್ನವಾದ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಪಡೆದಿದೆ.

  •  10-ಇಂಚಿನ ಟಚ್‌ಸ್ಕ್ರೀನ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಡ್ಯುಯಲ್-ಝೋನ್ ಎಸಿ (ಮುಂಭಾಗ ಮತ್ತು ಹಿಂಭಾಗ). 260-ಡಿಗ್ರಿ ಕ್ಯಾಮರಾ ಮತ್ತು ADAS ಅನ್ನು ಪಡೆಯುತ್ತದೆ.

  •  ಈ ಇನ್ವಿಕ್ಟೊ ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಯೊಂದಿಗೆ ಹೈಕ್ರಾಸ್‌ನ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

  •   ಇದರ ಬೆಲೆಗಳು ಸುಮಾರು ರೂ.19 ಲಕ್ಷದಿಂದ ಆರಂಭವಾಗಬಹುದು.

 ನೀವು ಈಗ ಜುಲೈ 5 ರಂದು ಇದರ ಬಿಡುಗಡೆಗೂ ಮುಂಚಿತವಾಗಿ ಈ ಮಾರುತಿ  ಇನ್ವಿಕ್ಟೊ ಎಂಪಿವಿಯನ್ನು ನೀವು ರೂ. 25000 ಕ್ಕೆ ಬುಕ್ ಮಾಡಬಹುದು. ಇದು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟವಾಗಲಿದೆ ಮತ್ತು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮಾರುತಿಯ ವಾಹನವಾಗಿದೆ.

Toyota Innova Hycross

( ಉಲ್ಲೇಖಕ್ಕಾಗಿ ಟೊಯೊಟಾ ಇನೋವಾ ಹೈಕ್ರಾಸ್ ಚಿತ್ರವನ್ನು ಬಳಸಲಾಗಿದೆ)

ಕಾರುಗಳು ಮತ್ತು ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳಲು ಟೊಯೊಟಾ-ಸುಝುಕಿ ಜಾಗತಿಕ ಪಾಲುದಾರಿಕೆಯನ್ನು ಹೊಂದಿದ್ದು, ಇನ್ವಿಕ್ಟೊ ಮೂಲತಃ ಟೊಯೊಟಾ ಇನೋವಾ ಹೈಕ್ರಾಸ್‌ನ ರೀಬ್ಯಾಡ್ಜ್ ಮಾಡಿದ ಆವೃತ್ತಿಯಾಗಿದೆ. ಗ್ರ್ಯಾಂಡ್ ವಿಟಾರಾ/ಹೈರೈಡರ್ ಮತ್ತು ಗ್ಲಾಂಝಾ/ಬಲೆನೊದಂತೆಯೇ, ಈ ಇನ್ವಿಕ್ಟೊ ಹೈಕ್ರಾಸ್‌ಗಿಂತ ಸ್ವಲ್ಪ ವಿಭಿನ್ನವಾದ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಹೊಂದಿರುತ್ತದೆ.

 ಸಂಬಂಧಿತ: ಸಿಡಿ ನುಡಿ: ಮಾರುತಿ ಎಂಪಿವಿ ಮೇಲೆ ಹೆಚ್ಚುವರಿ ರೂ. 30000 ಪಾವತಿಸಲು ತಯಾರಾಗಿ 

ಇನೊವಾ ಹೈಕ್ರಾಸ್ ಆಧಾರಿತ ಇನ್ವಿಕ್ಟೊ, ಅಲಂಕಾರಿಕ ಮತ್ತು ಪ್ರೀಮಿಯಂ ಇಂಟೀರಿಯರ್ ಅನ್ನು ಪಡೆಯುತ್ತದೆ. ಫೀಚರ್‌ಗಳ ವಿಷಯದಲ್ಲಿ, ಇದು ವಿಹಂಗಮ ಸನ್‌ರೂಫ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಡ್ಯುಯಲ್-ಝೋನ್ ಎಸಿ, ಮತ್ತು 10-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೇನ್‌ಮೆಂಟ್ ಅನ್ನು ಪಡೆಯುತ್ತದೆ. ಸುರಕ್ಷತೆಯ ವಿಷಯಕ್ಕೆ ಬಂದರೆ, ಇದು 360-ಡಿಗ್ರಿ ಕ್ಯಾಮರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಮತ್ತು ರಾಡಾರ್-ಆಧಾರಿತ ADAS ತಂತ್ರಜ್ಞಾನವನ್ನು ಪಡೆಯುತ್ತದೆ. 

Toyota Innova Hycross

ಹೈಬ್ರಿಡೈಸೇಷನ್ ಆಯ್ಕೆಯೊಂದಿಗೆ 2-ಲೀಟರ್ ಪೆಟ್ರೋಲ್ ಎಂಜಿನ್ ಆಗಿರುವ ಹೈಕ್ರಾಸ್‌ನ ಪವರ್‌ಟ್ರೇನ್ ಅನ್ನು ಈ ಇನ್ವಿಕ್ಟೊ ಪಡೆಯುತ್ತದೆ. ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ 186PS ವರೆಗೆ ಬಿಡುಗಡೆ ಮಾಡುತ್ತದೆ ಮತ್ತು 23.24kmpl ವರೆಗಿನ ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ. ಇದೇ ರೀತಿಯ ಅಂಕಿಅಂಶಗಳು ಮತ್ತು ದಕ್ಷತೆಯನ್ನು ನಾವು ಇನ್ವಿಕ್ಟೊದಲ್ಲಿ ಸಹ ನೋಡಬಹುದು.

 ಹೋಲಿಕೆ: ಕಿಯಾ ಕ್ಯಾರೆನ್ಸ್ ಲಕ್ಸುರಿ ಪ್ಲಸ್ ವರ್ಸಸ್ ಟೊಯೊಟಾ ಇನೋವಾ GX

ಈ ಇನೊವಾ ಹೈಕ್ರಾಸ್‌ನ ಬೆಲೆಯು ರೂ 18.55 ಲಕ್ಷದಿಂದ ರೂ 29.99 ಲಕ್ಷದವರೆಗೆ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ. ಮಾರುತಿ ಇನ್ವಿಕ್ಟೊದ ಬೆಲೆಯು ಇದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ ರೂ. 19 ಲಕ್ಷವಿರಬಹುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಯಾವುದೇ ನೇರ ಪೈಪೋಟಿಯನ್ನು ಹೊಂದಿರದಿದ್ದರೂ, ಇನ್ವಿಕ್ಟೊ ಅನ್ನು ಕಿಯಾ ಕ್ಯಾರೆನ್ಸ್‌ಗೆ ಹೆಚ್ಚು ಪ್ರೀಮಿಯಂ ಪರ್ಯಾಯವಾಗಿ ನಿಲ್ಲಿಸಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ಇನ್ವಿಕ್ಟೊ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience