Login or Register ಅತ್ಯುತ್ತಮ CarDekho experience ಗೆ
Login

ನವೀಕೃತ ಕಿಯಾ ಸೆಲ್ಟೋಸ್‌ನ ಈ ಹೊಸ ಸ್ಟೈಲಿಂಗ್ ಸಂಗತಿ ಏನೇನಿದೆ ನೋಡಿ..

published on ಏಪ್ರಿಲ್ 10, 2023 09:32 am by rohit for ಕಿಯಾ ಸೆಲ್ಟೋಸ್

ನವೀಕೃತ ಎಸ್‌ಯುವಿ ಮಹೀಂದ್ರ ಸ್ಕಾರ್ಪಿಯೊ ಎನ್ ಮತ್ತು ಎಂಜಿ ಹೆಕ್ಟರ್‌ಗಳಂತೆಯೇ ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಪಡೆದುಕೊಳ್ಳುತ್ತದೆ.

  • ಎಸ್‌ಯುವಿಯ ಮತ್ತೊಂದು ಪರೀಕ್ಷಾರ್ಥ ಕಾರು ಮುಸುಕಿನೊಂದಿಗೆ ಕಂಡುಬಂದಿವೆ.
  • ಇದು ಎರಡೂ ಬದಿಗಳಲ್ಲಿ ಪ್ರತ್ಯೇಕ ಎಗ್‌ಸಾಸ್ಟ್ ಟಿಪ್ಸ್‌ನಿಂದ ದೊರೆತ ಸುಳಿವಿನ ಪ್ರಕಾರ ಟರ್ಬೊ ವೇರಿಯಂಟ್ ಆಗಿದೆ.
  • ಕ್ಯಾಬಿನ್ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ, ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ಹೊಸ ಡಿಸ್‌ಪ್ಲೇಗಳನ್ನು ಒಳಗೊಂಡಿರುತ್ತದೆ.
  • ಹೊಸ ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ ಪನೋರಮಿಕ್ ಸನ್‌ರೂಫ್ ಮತ್ತು ಎಡಿಎ‍ಎಸ್ ಸೇರಿವೆ.
  • ಪ್ರಸ್ತುತ ಮಾಡೆಲ್‌ನಲ್ಲಿರುವ 115PS ಸಾಮರ್ಥ್ಯದ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯಲು; ಹೊಸ ವೆರ್ನಾದ 1.5-ಲೀಟರ್ ಟರ್ಬೊ ಕೂಡ ಆಫರ್‌ನಲ್ಲಿದೆ.
  • ಬೆಲೆಗಳು 10-ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ನವೀಕೃತ ಕಿಯಾ ಸೆಲ್ಟೋಸ್‌ನ ಸಾಕಷ್ಟು ಸ್ಪೈ ಶಾಟ್‌ಗಳು ಮತ್ತು ವೀಡಿಯೊಗಳು ಈಗಾಗಲೇ ಲಭ್ಯವಿದ್ದರೂ, ಇನ್ನೊಂದು ಕುತೂಹಲಕಾರಿಯಾದ ಎಸ್‌ಯುವಿಯ ಸ್ಪೈ ವಿಡಿಯೋ ಮುಂಚೂಣಿಗೆ ಬಂದಿದೆ.

ಇತ್ತೀಚಿನ ವೀಕ್ಷಣೆಗಳು

ನವೀಕೃತ ಸೆಲ್ಟೋಸ್ ಮಹೀಂದ್ರ ಸ್ಕಾರ್ಪಿಯೊ ಎನ್ ಮತ್ತು ಎಂಜಿ ಹೆಕ್ಟರ್‌ಗಳಂತೆಯೇ ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಲಿದೆ ಎನ್ನುವುದು ಹೊಸ ವೀಡಿಯೊದಿಂದ ದೃಢಪಟ್ಟಿದೆ. ಬಹಿರಂಗವಾಗಿರುವ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ಪರೀಕ್ಷಾ ಮ್ಯೂಲ್ ಅನ್ನು ಡ್ಯುಯಲ್ ಎಕ್ಸಾಸ್ಟ್‌ಗಳೊಂದಿಗೆ (ಪ್ರತಿ ಬದಿಯಲ್ಲಿ ಒಂದು) ಅಳವಡಿಸಲಾಗಿದೆ, ಇದು ಬಹುಶಃ ಎಸ್‌ಯುವಿಯ ಟರ್ಬೊ ವೇರಿಯಂಟ್ ಆಗಿದೆ ಎಂದು ಸುಳಿವು ನೀಡುತ್ತದೆ.

ಒಳಭಾಗದ ಬದಲಾವಣೆಗಳು

ವೀಡಿಯೊದಲ್ಲಿ ಅಪ್‌ಡೇಟ್ ಮಾಡಲಾದ ಕ್ಯಾಬಿನ್‌ನ ನೋಟ ಲಭ್ಯವಾಗದಿದ್ದರೂ, ಇದು ಜಾಗತಿಕವಾಗಿ ಬಹಿರಂಗಪಡಿಸಿದ ನವೀಕೃತ ಮಾಡೆಲ್‌ನಂತೆಯೇ ಇರುತ್ತದೆ. ಕಿಯಾ ಇದನ್ನು ಸ್ವಲ್ಪ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್‌ನೊಂದಿಗೆ ಒದಗಿಸಬಹುದು, ಸ್ಲಿಮ್ಮರ್ ಸೆಂಟ್ರಲ್ ಎಸಿ ವೆಂಟ್‌ಗಳು ಮತ್ತು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳನ್ನು ಒಳಗೊಂಡಿದೆ. ನವೀಕೃತ ಸೆಲ್ಟೋಸ್‌ನಲ್ಲಿ ನಿರೀಕ್ಷಿತ ಹೊಸ ವೈಶಿಷ್ಟ್ಯಗಳು ವಿಹಂಗಮ ಸನ್‌ರೂಫ್ ಮತ್ತು ಹೀಟೆಡ್ ಫ್ರಂಟ್ ಆಸನಗಳಾಗಿವೆ.

ಎಸ್‌ಯುವಿಯ ಭದ್ರತಾ ಜಾಲವು ಆರು ಏರ್‌ಬ್ಯಾಗ್‌ಗಳು, ಐ‌ಎಸ್‌ಒಎಫ್‌ಐಎಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ), ಮತ್ತು ಪ್ರಾಯಶಃ ಸುಧಾರಿತ ಡ್ರೈವರ್ ಅಸಿಸ್ಟಂಟ್ ಸಿಸ್ಟಮ್‌ಗಳಳನ್ನು (ಎಡಿಎ‌ಎಸ್) ಒಳಗೊಂಡಿರುತ್ತದೆ. ಡ್ರೈವರ್-ಅಸಿಸ್ಟಂಟ್ ಸೂಟ್ ಆರನೇ ಪೀಳಿಗೆಯ ಹುಂಡೈ ವೆರ್ನಾದಲ್ಲಿ ಪ್ರಚಲಿತದಲ್ಲಿರುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರಬಹುದು.

ಇದನ್ನೂ ಓದಿ: 17 ಲಕ್ಷ ರೂ.ನಿಂದ ಪ್ರಾರಂಭವಾಗುವ ಕಿಯಾ ಕ್ಯಾರೆನ್ಸ್ ಮತ್ತೊಂದು ಐಷಾರಾಮಿ ಟ್ರಿಮ್

ಪವರ್‌ಟ್ರೇನ್‌ನಲ್ಲಿ ಬದಲಾವಣೆ ಆಗಿದ್ಯಾ?

ಕಿಯಾ ಹೊಸ ಸೆಲ್ಟೋಸ್ ಅನ್ನು ಪ್ರಸ್ತುತ ಮಾಡಲ್‌ನ 115PS ಸಾಮರ್ಥ್ಯದ, 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡುತ್ತದೆ ಎಂದು ನಮ್ಮ ನಿರೀಕ್ಷೆ. ಪೆಟ್ರೋಲ್ ಎಂಜಿನ್‌ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗಿದ್ದರೂ, ಡೀಸೆಲ್ ಎಂಜಿನ್ ಮ್ಯಾನುವಲ್ ಬದಲಿಗೆ ಐಎಂಟಿ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಗಳನ್ನು ಪಡೆಯುತ್ತದೆ. 1.4-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಬದಲಿಗೆ, ನವೀಕೃತ ಸೆಲ್ಟೋಸ್ ಹೊಸ ವೆರ್ನಾದ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160PS/253Nm) ಅನ್ನು ಸಿಕ್ಸ್-ಸ್ಪೀಡ್ ಐಎಂಟಿ ಅಥವಾ ಸೆವೆನ್-ಸ್ಪೀಡ್ ಡಿಸಿಟಿಯೊಂದಿಗೆ ಜೋಡಿಸುತ್ತದೆ.

ನೀವು ಅದನ್ನು ಯಾವಾಗ ನಿರೀಕ್ಷಿಸಬಹುದು?

ಹೊಸ ಸೆಲ್ಟೋಸ್ ಅನ್ನು ಕಿಯಾ 2023 ರ ಮಧ್ಯದಲ್ಲಿ 10-ಲಕ್ಷ ರೂ. ಬಾಲ್ ಪಾರ್ಕ್‌ನಲ್ಲಿ (ಎಕ್ಸ್ ಶೋ ರೂಂ) ನ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಎಂಜಿ ಆಸ್ಟರ್, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗುನ್, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗಳೊಂದಿಗೆ ಸ್ಪರ್ಧೆಯನ್ನು ಮುಂದುವರಿಸುತ್ತದೆ.

ಚಿತ್ರಕೃಪೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 34 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ