Login or Register ಅತ್ಯುತ್ತಮ CarDekho experience ಗೆ
Login

ಅತಿ ಅಗ್ಗದ 3-ಸಾಲು ಸೀಟುಳ್ಳ ಇ-ಎಸ್‌ಯುವಿ ಆಗಲಿದೆ ಸಿಟ್ರಾನ್ C3 ಏರ್‌ಕ್ರಾಸ್ EV

ಆಗಸ್ಟ್‌ 09, 2023 11:23 am ರಂದು tarun ಮೂಲಕ ಪ್ರಕಟಿಸಲಾಗಿದೆ
24 Views

ಬರೀ ಅಗ್ಗವಾಗಿರೋದಷ್ಟೇ ಅಲ್ಲ, C3 ಏರ್‌ಕ್ರಾಸ್ EV ದೇಶದ ಮೊದಲ ಮಾಸ್-ಮಾರ್ಕೆಟ್ 3-ಸಾಲು ಸೀಟುಳ್ಳ EV ಆಗಲಿದೆ

ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ, ಮುಂದಿನ 2 ರಿಂದ 3 ವರ್ಷಗಳಲ್ಲಿ ಹಲವಾರು ಗಾತ್ರದ EV ಗಳು ಬಿಡುಗಡೆಯಾಗಲಿವೆ, ಇದು ಹೆಚ್ಚಾಗಿ ಎಸ್‌ಯುವಿ ಕಾರುಗಳನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಪ್ರಸ್ತುತ ಮಾರಾಟಕ್ಕೆ ಹಲವಾರು ಅಗ್ಗದ ಬೆಲೆಯ ಹ್ಯಾಚ್‌ಬ್ಯಾಕ್‌ಗಳು ಮತ್ತು ಎಸ್‌ಯುವಿಗಳು ಲಭ್ಯವಿವೆ, ಆದರೆ ಈ ಸಮಯದಲ್ಲಿ ಯಾವುದೇ ಬಜೆಟ್ ಸ್ನೇಹಿ ಮೂರು ಸಾಲು ಸೀಟುಳ್ಳ EV ಲಭ್ಯವಿಲ್ಲ. ಮರ್ಸಿಡಿಸ್ ಬೆಂಝ್ EQB ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಏಕೈಕ ಮೂರು ಸಾಲು ಸೀಟುಳ್ಳ ಎಲೆಕ್ಟ್ರಿಕ್ ಕಾರು ಆಗಿದ್ದು ಅದರ ಬೆಲೆ ರೂ. 75 ಲಕ್ಷಗಳಾಗಿದೆ. ಮತ್ತು, ಎಕ್ಸ್‌ಯುವಿ700 ಎಲೆಕ್ಟ್ರಿಕ್ ಅನ್ನು 2024 ರ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಶೀಘ್ರದಲ್ಲೇ ಸಿಟ್ರಾನ್ ತನ್ನ ಅಗ್ಗದ ಬೆಲೆಯ ಮೂರು ಸಾಲು ಸೀಟುಳ್ಳ ಕಾರನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಸಿಟ್ರಾನ್‌ನ ಭವಿಷ್ಯದ ಯೋಜನೆ

ಸಿಟ್ರಾನ್ ತನ್ನ C3 ಏರ್‌ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. eC3 ನಂತರ ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಕಾರು ಇದಾಗಿದೆ. C3 ಏರ್‌ಕ್ರಾಸ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯು ದೃಢಪಡಿಸಿದೆ.

C3 ಏರ್‌ಕ್ರಾಸ್ EV ಅನ್ನು ಒಳಗೊಂಡಿರುವ ಹೊಸ ಮಾಡೆಲ್ ಅನ್ನು ಪ್ರತಿ ವರ್ಷ ಬಿಡುಗಡೆ ಮಾಡುವ ತನ್ನ ಯೋಜನೆಯ ಬಗ್ಗೆ ಕಂಪನಿಯು ಬಹಿರಂಗಪಡಿಸಿದೆ. ಭಾರತದಲ್ಲಿ C3 ಹ್ಯಾಚ್‌ಬ್ಯಾಕ್‌ನ ಮಾರಾಟವು ಜುಲೈ 2022 ರಲ್ಲಿ ಪ್ರಾರಂಭವಾಯಿತು ಮತ್ತು ಅದರ ಎಲೆಕ್ಟ್ರಿಕ್ ಆವೃತ್ತಿಯಾದ e C3 ಕಾರು ಮುಂದಿನ ಏಳು ತಿಂಗಳಲ್ಲಿ ಬಿಡುಗಡೆಯಾಗಲಿದೆ. C3 ಏರ್‌ಕ್ರಾಸ್ EV ಯ ಮಾರಾಟವು 2024 ರ ಮೊದಲ ತ್ರೈಮಾಸಿಕದ ವೇಳೆಗೆ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ.

eC3 ಏರ್‌ಕ್ರಾಸ್ ಬಗ್ಗೆ ಇರುವ ನಿರೀಕ್ಷೆಗಳು

C3 ಏರ್‌ಕ್ರಾಸ್ ಎಸ್‌ಯುವಿಯು C3 ಹ್ಯಾಚ್‌ಬ್ಯಾಕ್‌ನ ವಿಸ್ತೃತ ಮತ್ತು ಮಾರ್ಪಡಿಸಿದ ಆವೃತ್ತಿಯಾಗಿದೆ. ಇದು C3 ಹ್ಯಾಚ್‌ಬ್ಯಾಕ್‌ ಹೊಂದಿರುವ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಆದಾಗ್ಯೂ, ಮುಂಬರುವ ಎಲೆಕ್ಟ್ರಿಕ್ ಥ್ರೀ-ರೋ ಎಸ್‌ಯುವಿ eC3 ಯಲ್ಲಿ ಕಂಡುಬರುವ 29.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿಲ್ಲ, ಇದರಿಂದಾಗಿ ಹ್ಯಾಚ್‌ಬ್ಯಾಕ್‌ನ ಕ್ಲೈಮ್ ಮಾಡಲಾದ ರೇಂಜ್ 320 ಕಿಲೋಮೀಟರ್‌ಗಳಾಗಿವೆ. ಇದರಲ್ಲಿ ದೊಡ್ಡ 40kWh ಬ್ಯಾಟರಿ ಪ್ಯಾಕ್ ಅನ್ನು ನೀಡಬಹುದೆಂದು ಅಂದಾಜಿಸಲಾಗಿದೆ, ಇದರ ರೇಂಜ್ ಸುಮಾರು 400 ಕಿಲೋಮೀಟರ್ ಆಗಿರುವ ನಿರೀಕ್ಷೆಯಿದೆ.

ನೋಟದಲ್ಲಿ, ಈ ಕಾರು C3 ಏರ್‌ಕ್ರಾಸ್‌ಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ. C3 ಮತ್ತು EC3 ಕಾರುಗಳ ನಡುವೆ ಚಿಕ್ಕದಾದ ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರುತ್ತವೆ.

ಇದನ್ನೂ ಓದಿ: ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳು

ಬೆಲೆ

ಸಿಟ್ರಾನ್ ಕಂಪನಿಯು ಭಾರತದಲ್ಲಿ ತಯಾರಾದ ಕಾರುಗಳ ಅಗ್ಗದ ಬೆಲೆಗೆ ಹೆಸರುವಾಸಿಯಾಗಿದೆ. ಸಿಟ್ರಾನ್ C3 ಕಾರಿನ ಗಾತ್ರವು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಗಾತ್ರದಷ್ಟೇ ಇದೆ, ಆದರೆ ಕಡಿಮೆ ಬೆಲೆಯಿಂದಾಗಿ, ಕೆಳಗಿನ ವಿಭಾಗದ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಇದು ಕಠಿಣ ಸ್ಪರ್ಧೆಯನ್ನು ಒಡ್ಡುತ್ತದೆ.

ನಾವು C3 ಮತ್ತು eC3 ಗಳ ವೇರಿಯಂಟ್-ವಾರು ಹೋಲಿಕೆಯನ್ನು ಮಾಡಿದರೆ, ಬೆಲೆ ಏರಿಕೆಯು ಎಲೆಕ್ಟ್ರಿಕ್ ಕಾರು ಎಂಬ ಕಾರಣಕ್ಕಾಗಿ 50 ಪ್ರತಿಶತಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. C3 ಏರ್‌ಕ್ರಾಸ್‌ನ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಅವು ಸುಮಾರು 9 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್-ಶೋರೂಮ್). ಅದರ ಆಧಾರದ ಮೇಲೆ, ಅದರ EV ಕೌಂಟರ್‌ಪಾರ್ಟ್‌ನ ಬೆಲೆ ರೂ. 15 ಲಕ್ಷದಿಂದ ರೂ. 20 ಲಕ್ಷದವರೆಗೆ (ಎಕ್ಸ್-ಶೋರೂಮ್) ಆಗಿರಬಹುದು, ಇದು ಟಾಟಾ ನೆಕ್ಸಾನ್ EV ಮ್ಯಾಕ್ಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ400ನಂತಹ ಸಬ್‌ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಗಳ ಬೆಲೆಗಳನ್ನು ಹೋಲುತ್ತದೆ.

ಇತರ ನಿರೀಕ್ಷಿತ ಎಲೆಕ್ಟ್ರಿಕ್ ಮೂರು ಸಾಲು ಸೀಟುಳ್ಳ ಮಾಡೆಲ್‌ಗಳು

ಎಕ್ಸ್‌ಯುವಿ.e8 (ಎಕ್ಸ್‌ಯುವಿ700 EV) ಪ್ರಸ್ತುತ ಭಾರತಕ್ಕೆ ಆಗಮಿಸುವುದನ್ನು ದೃಢಪಡಿಸಿರುವ ಏಕೈಕ ಥ್ರೀ-ರೋ ಎಲೆಕ್ಟ್ರಿಕ್ ಕಾರಾಗಿದೆ. ಇಲ್ಲಿ ಅದು ಡಿಸೆಂಬರ್ 2024 ರ ವೇಳೆಗೆ ಪಾದಾರ್ಪಣೆ ಮಾಡಲಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 35 ಲಕ್ಷ ರೂ.ಗಳಾಗಿರುವ ಅಂದಾಜಿದೆ, ಇದರಿಂದಾಗಿ ಇದು ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಕಾರು ಆಗಲಿದೆ.

ಎಲೆಕ್ಟ್ರಿಕ್ ಕ್ಯಾರೆನ್ಸ್ ಅನ್ನು ಒಳಗೊಂಡಿರುವ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಮಾಡುವುದನ್ನು ಕಿಯಾ ಖಚಿತಪಡಿಸಿದೆ. ಹ್ಯಾರಿಯರ್ EV ಅಭಿವೃದ್ಧಿಯ ಆಧಾರದ ಮೇಲೆ, ನಾವು ಎಲೆಕ್ಟ್ರಿಕ್ ಸಫಾರಿಯನ್ನು ಸಹ ನಿರೀಕ್ಷಿಸುತ್ತಿದ್ದೇವೆ. ಈ ಎರಡೂ ಕಾರುಗಳ ಬೆಲೆ ಸುಮಾರು 20 ಲಕ್ಷ ರೂ.ಗಳಿಗಿಂತ ಅಧಿಕವಾಗಿರುವ ನಿರೀಕ್ಷೆಯಿದೆ. ಈ ಕಾರುಗಳು 2025 ರ ವೇಳೆಗೆ ಅಥವಾ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ.

ಈ ವರ್ಷದ ಅಂತ್ಯದ ವೇಳೆಗೆ, C3 ಏರ್‌ಕ್ರಾಸ್ EV ಯಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತ ಸ್ಪಷ್ಟವಾದ ಕಲ್ಪನೆ ನಮಗೆ ದೊರೆಯಲಿದೆ. ಆದರೆ, ಒಮ್ಮೆ ಅದು ಸೂಕ್ತ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಾದರೆ, ಸೇವಿಂಗ್ಸ್ ಅನ್ನು ಬರಿದುಮಾಡದೇ ಎಲೆಕ್ಟ್ರಿಕ್ ಪ್ರಪಂಚಕ್ಕೆ ಬದಲಾಗಲು ಬಯಸುವ ಅವಿಭಕ್ತ ಕುಟುಂಬಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

ಇನ್ನಷ್ಟು ಓದಿ: C3 ಆನ್ ರೋಡ್ ಬೆಲೆ

Share via

Write your Comment on Citroen ಏರ್‌ಕ್ರಾಸ್‌

ಇನ್ನಷ್ಟು ಅನ್ವೇಷಿಸಿ on ಸಿಟ್ರೊನ್ ಏರ್‌ಕ್ರಾಸ್‌

ಸಿಟ್ರೊನ್ ಏರ್‌ಕ್ರಾಸ್‌

4.4143 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್17.6 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ