ಸಿಟ್ರೋನ್ eC3 ಬೆಲೆಯಲ್ಲಿ ಮತ್ತೆ ಹೆಚ್ಚಳ, ಬಿಡುಗಡೆಯ ಸಮಯದ ಬೆಲೆಗೆ ಹೋಲಿಸಿದರೆ ಈಗ ರೂ. 36,000ದಷ್ಟು ದುಬಾರಿ
ಸಿಟ್ರೊಯೆನ್ ಇಸಿ3 ಗಾಗಿ rohit ಮೂಲಕ ನವೆಂಬರ್ 08, 2023 05:55 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಇತ್ತೀಚಿನ ಬೆಲೆ ಏರಿಕೆಯು ಆಲ್ ಎಲೆಕ್ಟ್ರಿಕ್ C3 ಕಾರನ್ನು ರೂ. 11,000 ದಷ್ಟು ದುಬಾರಿಯನ್ನಾಗಿಸಿದೆ.
- ಸಿಟ್ರೋನ್ ಸಂಸ್ಥೆಯು eC3 ಯನ್ನು ಭಾರತದಲ್ಲಿ 2023ರಲ್ಲಿ ಬಿಡುಗಡೆ ಮಾಡಿತ್ತು.
- ಇದನ್ನು ಎರಡು ವೇರಿಯಂಟ್ ಗಳಲ್ಲಿ ಮಾರಲಾಗುತ್ತದೆ: ಲೈವ್ ಮತ್ತು ಫೀಲ್
- ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇದರ ಬೆಲೆಯನ್ನು ಏರಿಸಲಾಗಿದ್ದು, ಆಗ ಇದು ರೂ. 25,000ದಷ್ಟು ದುಬಾರಿಯಾಗಿತ್ತು.
- eC3 ಕಾರು ಈಗ ರೂ. 11.61 ರಿಂದ ರೂ. 12.79 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
- ಈ ಆಲ್ ಎಲೆಕ್ಟ್ರಿಕ್ C3 ಯು 29.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದ್ದು, ARAI ಪ್ರಕಾರ 320km ನಷ್ಟು ಶ್ರೇಣಿಯನ್ನು ಹೊಂದಿರಲಿದೆ.
ಸಿಟ್ರೋನ್ eC3 ಕಾರಿನ ಬೆಲೆಯನ್ನು ಇದು ಮಾರುಕಟ್ಟೆಗೆ ಕಾಲಿಟ್ಟ ವರ್ಷದೊಳಗೆ ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಇದನ್ನು ಭಾರತದಲ್ಲಿ 2023ರ ಆರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಮೊದಲ ಬಾರಿಗೆ ಇದರ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಬೇಸ್ ವೇರಿಯಂಟ್ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗಿರಲಿಲ್ಲ. eC3 ಕಾರುಗಳ ವೇರಿಯಂಟ್ ವಾರು ಬೆಲೆ ಪರಿಷ್ಕರಣೆಯನ್ನು ಇಲ್ಲಿ ನೀಡಲಾಗಿದೆ:
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಲೈವ್ |
ರೂ 11.50 ಲಕ್ಷ |
ರೂ 11.61 ಲಕ್ಷ |
+ರೂ 11,000 |
ಫೀಲ್ |
ರೂ 12.38 ಲಕ್ಷ |
ರೂ 12.49 ಲಕ್ಷ |
+ರೂ 11,000 |
ಫೀಲ್ ವೈಬ್ ಪ್ಯಾಕ್ |
ರೂ 12.53 ಲಕ್ಷ |
ರೂ 12.64 ಲಕ್ಷ |
+ರೂ 11,000 |
ಫೀಲ್ ಡ್ಯುವಲ್ ಟೋನ್ ವೈಬ್ ಪ್ಯಾಕ್ |
ರೂ 12.68 ಲಕ್ಷ |
ರೂ 12.79 ಲಕ್ಷ |
+ರೂ 11,000 |
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಸಿಟ್ರೋನ್ ಸಂಸ್ಥೆಯು eC3 ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರಿನ ಎಲ್ಲಾ ವೇರಿಯಂಟ್ ಗಳ ಬೆಲೆಯನ್ನು ಏಕಪ್ರಕಾರವಾಗಿ ರೂ. 11,000 ದಷ್ಟು ಹೆಚ್ಚಿಸಿದೆ.
ಎಲೆಕ್ಟ್ರಿಕ್ ಪವರ್ ಟ್ರೇನ್ ಮತ್ತು ಚಾರ್ಜಿಂಗ್ ವಿವರಗಳು
ಸಿಟ್ರೋನ್ eC3 ಕಾರು 29.2kWh ಬ್ಯಾಟರಿ ಪ್ಯಾಕ್ ಮತ್ತು 57PS/143Nm ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ARAI ಪ್ರಕಾರ 320km ಶ್ರೇಣಿಯನ್ನು ಇದು ಹೊಂದಿದೆ. ಸಿಟ್ರನ್ eC3 ಕಾರನ್ನು 15A ಪ್ಲಗ್ ಚಾರ್ಜರ್ ಬಳಸಿ 10 ಗಂಟೆ 30 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. DC ಫಾಸ್ಟ್ ಚಾರ್ಜರ್ ಮೂಲಕ 57 ನಿಮಿಷಗಳಲ್ಲಿ 10 ರಿಂದ 80 ನಿಮಿಷಗಳಲ್ಲಿ ಇದನ್ನು ಚಾರ್ಜ್ ಮಾಡಬಹುದಾಗಿದೆ.
ಇದನ್ನು ಸಹ ಓದಿರಿ: ಅಕ್ಟೋಬರ್ 2023ರಲ್ಲಿ ಗರಿಷ್ಠ ಮಾರಾಟ ಸಾಧಿಸಿದ 10 ಕಾರುಗಳು: ಮಾರುತಿ, ಹ್ಯುಂಡೈ, ಟಾಟಾ, ಮಹೀಂದ್ರಾ ಇತ್ಯಾದಿ
ಸ್ಪರ್ಧಿಗಳು
ಸಿಟ್ರೋನ್ eC3 ಕಾರು ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಜೊತೆಗೆ ಸ್ಪರ್ಧಿಸಲಿದೆ.
ಇದನ್ನು ಸಹ ನೋಡಿರಿ: ಸಿಟ್ರೋನ್ eC3 vs ಟಾಟಾ ತಿಯಾಗೊ EV: ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯ ಹೋಲಿಕೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: eC3 ಅಟೋಮ್ಯಾಟಿಕ್