• English
  • Login / Register

ಕ್ರ್ಯಾಶ್ ಟೆಸ್ಟ್ ಹೋಲಿಕೆ: ಸ್ಕೋಡಾ ಸ್ಲಾವಿಯಾ /ಫೋಕ್ಸ್‌ವಾಗನ್ ವರ್ಟಸ್ Vs ಹ್ಯುಂಡೈ ಕ್ರೇಟಾ

ಸ್ಕೋಡಾ ಸ್ಲಾವಿಯಾ ಗಾಗಿ tarun ಮೂಲಕ ಏಪ್ರಿಲ್ 11, 2023 08:15 pm ರಂದು ಪ್ರಕಟಿಸಲಾಗಿದೆ

  • 40 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತದ ಅತ್ಯಂತ ಸುರಕ್ಷಿತ ಕಾರುಗಳು ಇತ್ತೀಚಿಗೆ ನಡೆದ ಸುರಕ್ಷತಾ ರೇಟಿಂಗ್‌ನಲ್ಲಿ  ಭಾರತದ ಅತ್ಯಂತ ಜನಪ್ರಿಯ ಕಾರುಗಳನ್ನು ಹೇಗೆ ಮೀರಿಸಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. 

Volkswagen Virtus Vs Hyundai Creta

ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವಾಗನ್ ವರ್ಟಸ್ ಭರ್ತಿ ಫೈವ್-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿರುವ ಇತ್ತೀಚಿನ ಕಾರುಗಳಾಗಿವೆ. ಈ ಸೆಡಾನ್‌ಗಳು ಈಗ ಭಾರತದ ಅತ್ಯಂತ ಸುರಕ್ಷಿತ ಕಾರುಗಳಾಗಿದ್ದು, ತಮ್ಮ SUV ಆವೃತ್ತಿಗಳನ್ನು ಸ್ವಲ್ಪ ವ್ಯತ್ಯಾಸದಲ್ಲಿ ಮೀರಿಸಿವೆ. ಅಲ್ಲದೇ ಈ ಸೆಡಾನ್‌ಗಳು ಸುಮಾರು ರೂ 11 ಲಕ್ಷದಿಂದ ರೂ19 ಲಕ್ಷ (ಎಕ್ಸ್-ಶೋರೂಂ) ತನಕದ ತಮ್ಮ ವಿಶಾಲ ಬೆಲೆ ಶ್ರೇಣಿಯಿಂದಾಗಿ ಕಾಂಪ್ಯಾಕ್ಟ್ SUVಗಳು ಮತ್ತು ಕೆಲವು ಮಧ್ಯಮ ಗಾತ್ರದ SUVಗಳೊಂದಿಗೆ ಪರೋಕ್ಷವಾಗಿ ಸ್ಪರ್ಧಿಸುತ್ತವೆ.

 ಈಗ, ಅತ್ಯಂತ ಹೆಚ್ಚು ಮಾರಾಟವಾಗುವ SUVಗಳಲ್ಲಿ ಒಂದಾಗಿರುವ ಹ್ಯುಂಡೈ ಕ್ರೆಟಾ ಎದುರು ಭಾರತದ ಪ್ರಸ್ತುತ ಅತ್ಯಂತ ಸುರಕ್ಷಿತ ಕಾರುಗಳ ನಡುವಿನ ಕ್ರ್ಯಾಶ್ ಟೆಸ್ಟ್‌ನ ಹೋಲಿಕೆಯನ್ನು ಇಲ್ಲಿ ನೀಡಲಾಗಿದೆ. ಆದಾಗ್ಯೂ, ಸ್ಲಾವಿಯಾ ಮತ್ತು ವರ್ಟಸ್‌ನ ಕ್ರ್ಯಾಶ್ ಟೆಸ್ಟ್ ಅನ್ನು ಹೊಸ ಮತ್ತು ಹೆಚ್ಚು ಕಟ್ಟುನಿಟ್ಟಾದ ಗ್ಲೋಬಲ್ NCAP ಮಾನದಂಡಗಳಿಗೆ ಅನುಸಾರವಾಗಿ ಮಾಡಲಾಗಿದೆ. ಕ್ರೆಟಾಗೆ ಕೇವಲ ಫ್ರಂಟಲ್ ಇಂಪ್ಯಾಕ್ಟ್ ಪರೀಕ್ಷೆ ಮಾಡಲಾಗಿದ್ದರೆ, ಈ ಸೆಡಾನ್‌ಗಳನ್ನು ಸೈಡ್ ಬ್ಯಾರಿಯರ್, ಸೈಡ್ ಪೋಲ್ ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಪರೀಕ್ಷೆಗಳಿಗೂ ಒಳಪಡಿಸಲಾಗಿದೆ.

 

ಹೊಲಿಸಲಾದ ಒಟ್ಟಾರೆ ಸ್ಕೋರ್‌ಗಳು

 


ಸ್ಲಾವಿಯಾ / ವರ್ಟಸ್

ಕ್ರೆಟಾ (ಹಳೆಯ ಮಾನದಂಡಗಳ ಪ್ರಕಾರ ಪರೀಕ್ಷಿಸಲಾಗಿದೆ)

ವಯಸ್ಕ ಪ್ರಯಾಣಿಕರ ಸುರಕ್ಷತೆ

34 ರಲ್ಲಿ 29.71 ಅಂಕಗಳು (5 ಸ್ಟಾರ್‌ಗಳು)

17 ರಲ್ಲಿ 8 ಅಂಕಗಳು (3 ಸ್ಟಾರ್‌ಗಳು)

ಪ್ರಯಾಣಿಕ ಮಗುವಿನ ರಕ್ಷಣೆ

49 ರಲ್ಲಿ 42 ಅಂಕಗಳು (5 ಸ್ಟಾರ್‌ಗಳು)

49 ರಲ್ಲಿ 28.29 ಅಂಕಗಳು (3 ಸ್ಟಾರ್‌ಗಳು)

ಈ ಸೆಡಾನ್‌ಗಳು ವಯಸ್ಕ ಪ್ರಯಾಣಿಕರ ಮತ್ತು ಪ್ರಯಾಣಿಕ ಮಗುವಿನ ರಕ್ಷಣೆ ಎರಡರಲ್ಲಿಯೂ 5 ಸ್ಟಾರ್‌ಗಳನ್ನು ಗಳಿಸಿದ್ದು, ಕ್ರೆಟಾ ಈ ಎರಡಕ್ಕೂ 3 ಸ್ಟಾರ್‌ಗಳನ್ನು ಪಡೆದಿದೆ. ಸ್ಲಾವಿಯಾ ಮತ್ತು ವರ್ಟಸ್‌ನ ಫೂಟ್‌ವೆಲ್ ಮತ್ತು ಬಾಡಿಶೆಲ್ ಇಂಟೆಗ್ರಿಟಿಗೆ ಸ್ಥಿರ ಮತ್ತು ಹೆಚ್ಚಿನ ಲೋಡ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯದ ರೇಟಿಂಗ್ ನೀಡಲಾಗಿದ್ದು, ಹ್ಯುಂಡೈ ಕ್ರೆಟಾದಲ್ಲಿ ಇದು ಅಸ್ಥಿರವಾಗಿದೆ.

 ಇದನ್ನೂ ಓದಿ: ಟಾಟಾ ನೆಕ್ಸಾನ್ ವರ್ಸಸ್ ಸ್ಕೋಡಾ ಕುಶಕ್- ಕ್ರ್ಯಾಶ್ ಟೆಸ್ಟ್ ರೇಟಿಂಗ್ ಹೋಲಿಕೆ

 

ವಯಸ್ಕ ಪ್ರಯಾಣಿಕರ ರಕ್ಷಣೆ

ಸ್ಕೋಡಾ ಸ್ಲಾವಿಯಾ/ವರ್ಟಸ್: 

Volkswagen Virtus

  •  ಸ್ಲಾವಿಯಾ ಮತ್ತು ವರ್ಟಸ್ ತಲೆ, ಕುತ್ತಿಗೆ, ಡ್ರೈವರ್‌ನ ತೊಡೆಗಳು ಮತ್ತು ಸಹ-ಪ್ರಯಾಣಿಕರ ಕಾಲು ಇಡುವ ಸ್ಥಳಕ್ಕೆ ಉತ್ತಮ ರಕ್ಷಣೆಯನ್ನು ತೋರಿಸಿದೆ. 
  •  ಮುಂಭಾಗದ ಇಬ್ಬರು ಪ್ರಯಾಣಿಕರ ಎದೆಯ ಭಾಗಕ್ಕೆ ಉತ್ತಮ ರಕ್ಷಣೆ ನೀಡಲಾಗಿದೆ.
  •  ಈ ಸೆಡಾನ್‌ಗಳನ್ನು ಹೆಚ್ಚು ಕಟ್ಟುನಿಟ್ಟಿನ ಮಾನದಂಡಗಳ ಪ್ರಕಾರ ಸೈಡ್ ಬ್ಯಾರಿಯರ್ ಮತ್ತು ಪೋಲ್ ಇಂಪ್ಯಾಕ್ಟ್ ಪರೀಕ್ಷೆಗಳಿಗೂ ಒಳಪಡಿಸಲಾಯಿತು. 
  • ಸೈಡ್ ಬ್ಯಾರಿಯರ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ಇವುಗಳು ಪಕ್ಕೆಲುಬಿನ ಪ್ರದೇಶಗಳಿಗೆ ಉತ್ತಮ ರಕ್ಷಣೆಯನ್ನು ಆದರೆ ತಲೆ, ಎದೆ ಮತ್ತು ಸೊಂಟದ ಭಾಗಕ್ಕೆ ಸಾಕಷ್ಟು ರಕ್ಷಣೆ ನೀಡಿದೆ.
  •  VAG ಜೋಡಿಗಳು ಸೈಡ್ ಪೋಲ್ ಇಂಪ್ಯಾಕ್ಟ್‌ನಲ್ಲಿ ತಲೆ, ಕುತ್ತಿಗೆ ಮತ್ತು ಪಕ್ಕೆಲುಬು ಪ್ರದೇಶಕ್ಕೆ ಉತ್ತಮ ರಕ್ಷಣೆಯನ್ನು ತೋರಿಸಿದೆ ಆದರೆ ಎದೆಗೆ ಕನಿಷ್ಠ ರಕ್ಷಣೆಯನ್ನು ತೋರಿಸಿದೆ.

ಹ್ಯುಂಡೈ ಕ್ರೆಟಾ

Hyundai Creta Gets A 3-Star Rating In Global NCAP Tests

  •  ಫ್ರಂಟಲ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ಕ್ರೆಟಾ ಸಹ-ಚಾಲಕನ ತಲೆ ಮತ್ತು ಮುಂಭಾಗದ ಪ್ರಯಾಣಿಕರ ಕುತ್ತಿಗೆಗೆ ಉತ್ತಮ ರಕ್ಷಣೆಯನ್ನು ತೋರಿಸಿದೆ ಆದರೆ ಚಾಲಕನ ತಲೆಗೆ ಸಾಕಷ್ಟು ಸುರಕ್ಷತೆಯನ್ನು ತೋರಿಸಿದೆ.
  •  ಚಾಲಕನ ಎದೆಗೆ ಕನಿಷ್ಠ ರಕ್ಷಣೆ ನೀಡಿದ್ದರೆ, ಸಹಚಾಲಕನಿಗೆ ಇದು ಉತ್ತಮವಾಗಿದೆ.
  •  ಎರಡೂ ಪ್ರಯಾಣಿಕರ ಮೊಳಕಾಲಿಗೆ ಕನಿಷ್ಠ ರಕ್ಷಣೆ ಒದಗಿಸಿದೆ. ಚಾಲಕನ ಜಂಘಾಸ್ಥಿಗೆ ಇದು ದುರ್ಬಲ ಮತ್ತು ಸಾಕಷ್ಟು ರಕ್ಷಣೆಯನ್ನು ತೋರಿಸಿದೆ ಮತ್ತು ಸಹ-ಚಾಲಕನ ವಿಷಯದಲ್ಲಿ ಇದು ಉತ್ತಮ ಮತ್ತು ಸಾಕಷ್ಟು ಆಗಿದೆ.
  • ಕ್ರೆಟಾಗೆ ಆ ಸಮಯದಲ್ಲಿ ಹೊಸ ಪರೀಕ್ಷಾ ಮಾನದಂಡಗಳು ಅನ್ವಯವಾಗದಿರದ ಕಾರಣ ಸೈಡ್ ಬ್ಯಾರಿಯರ್ ಮತ್ತು ಪೋಲ್ ಇಂಪ್ಯಾಕ್ಟ್ ಪರೀಕ್ಷೆಗಳನ್ನು ನಡೆಸಲಾಗಿಲ್ಲ.

 ಪ್ರಯಾಣಿಕ ಮಗುವಿನ ರಕ್ಷಣೆ:

Volkswagen Virtus

ಸ್ಕೋಡಾ ಸ್ಲಾವಿಯಾ ಮತ್ತು VW ವರ್ಟಸ್‌ನ ಹಿಂಬದಿಯಲ್ಲಿ ಕೂರಿಸಲಾದ ಮೂರು ವರ್ಷ ವಯಸ್ಸಿನ ಮತ್ತು 18 ತಿಂಗಳ ಡಮ್ಮಿಗಳಿಗೆ ಸಂಪೂರ್ಣ ರಕ್ಷಣೆ ನೀಡಲಾಗಿದೆ. ಆದಾಗ್ಯೂ, ಕ್ರೆಟಾದಲ್ಲಿ ಹೀಗಿಲ್ಲ, ಇದು ಮೂರು ವರ್ಷದ ಮಗುವಿನ ತಲೆ ಮತ್ತು ಎದೆಭಾಗಕ್ಕೆ ದುರ್ಬಲ ರಕ್ಷಣೆ ನೀಡಿದ್ದು 18 ತಿಂಗಳ ಡಮ್ಮಿಗೆ ಇದು ಉತ್ತಮ ರಕ್ಷಣೆ ನೀಡಿದೆ.

 

ಸ್ಟಾಂಡರ್ಡ್ ಸುರಕ್ಷತಾ ಫೀಚರ್‌ಗಳು

ಸ್ಕೋಡಾ ಸ್ಲಾವಿಯಾ / ಫೋಕ್ಸ್‌ವಾಗನ್ ವರ್ಟಸ್: 

skoda slavia review

  •  ಈ ಸೆಡಾನ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, ಮತ್ತು ಎಲ್ಲಾ ಐದು ಆಸನಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ.
  •  ಟಾಪ್ ಎಂಡ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮರಾ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಅನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ

Hyundai Creta Gets A 3-Star Rating In Global NCAP Tests

  • ಕ್ರೆಟಾದಲ್ಲಿ ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ISOFIX ಈಗ ಸ್ಟಾಂಡರ್ಡ್ ಆಗಿದೆ.
  •  ಆದಾಗ್ಯೂ ಕ್ರ್ಯಾಶ್ ಟೆಸ್ಟ್‌ನಲ್ಲಿ, ಕೇವಲ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು EBD ಜೊತೆಗಿನ ABS ಮಾತ್ರವೇ ಸ್ಟಾಂಡರ್ಡ್ ಆಗಿತ್ತು.
  •  ಕ್ರೆಟಾದ ಟಾಪ್‌ ಎಂಡ್‌ಗಳಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ ಲಭ್ಯವಿದೆ.

ಇದನ್ನೂ ಓದಿ: ಹ್ಯುಂಡೈ i20 ವರ್ಸಸ್ ಟಾಟಾ ಆಲ್ಟ್ರೋಝ್: ಕ್ರ್ಯಾಶ್ ಟೆಸ್ಟ್ ರೇಟಿಂಗ್‌ಗಳು ಹೋಲಿಸಲಾಗಿವೆ

 ಸಾರಾಂಶ

 

ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವಾಗನ್ ವರ್ಟಸ್ ಖಂಡಿತವಾಗಿಯೂ ಸುರಕ್ಷಿತ ಕಾರು ಆಗಿದ್ದು ಕ್ರೆಟಾ ಈಗ ಹೆಚ್ಚಿನ ಹಲವು ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಹೊಸ ಪ್ರೋಟೋಕಾಲ್ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ, ಹ್ಯುಂಡೈ SUV ಉತ್ತಮ ಸುರಕ್ಷತಾ ರೇಟಿಂಗ್ ಅನ್ನು ಪಡೆಯಬಹುದು.

ಇನ್ನಷ್ಟು ಓದಿ : ಸ್ಲಾವಿಯಾ ಆಟೋಮ್ಯಾಟಿಕ್

was this article helpful ?

Write your Comment on Skoda ಸ್ಲಾವಿಯಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience