Kushaq ಮತ್ತು Slaviaಗಳನ್ನು ಜೋಡಿಸಲು ವಿಯೆಟ್ನಾಂನಲ್ಲಿ ಹೊಸ ಪ್ಲಾಂಟ್‌ಅನ್ನು ತೆರೆದ ಸ್ಕೋಡಾ
ಸ್ಕೋಡಾ ಸ್ಕೋಡಾ ಕುಶಾಕ್ ಗಾಗಿ kartik ಮೂಲಕ ಮಾರ್ಚ್ 27, 2025 04:09 pm ರಂದು ಪ್ರಕಟಿಸಲಾಗಿದೆ
- 40 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಭಾರತದಲ್ಲಿ ನಿರ್ಮಿತ ಸ್ಲಾವಿಯಾ ಮತ್ತು ಕುಶಾಕ್ ಕಾರುಗಳನ್ನು ಸಂಪೂರ್ಣವಾಗಿ ನಾಕ್ಡ್ ಡೌನ್ (ಸಿಕೆಡಿ) ಘಟಕಗಳಾಗಿ ವಿಯೆಟ್ನಾಂಗೆ ರವಾನಿಸಲಿದ್ದು, ಈ ಮೂಲಕ ಎರಡು ಹೊಸ ಸ್ಕೋಡಾ ಕಾರುಗಳನ್ನು ಜೋಡಿಸುವ ಇನ್ನೊಂದು ದೇಶ ಇದಾಗಲಿದೆ
ಸ್ಕೋಡಾ ಇತ್ತೀಚೆಗೆ ವಿಯೆಟ್ನಾಂನಲ್ಲಿ ಹೊಸ ಪ್ಲಾಂಟ್‌ಅನ್ನು ಉದ್ಘಾಟಿಸಿತು, ಇದನ್ನು ಭಾರತದಲ್ಲಿ ನಿರ್ಮಿತ ಕುಶಾಕ್ ಮತ್ತು ಸ್ಲಾವಿಯಾದ ಕಂಪ್ಲಿಟ್ಲಿ ಕಿಕ್ ಡೌನ್ (CKD) ಕಿಟ್‌ಗಳನ್ನು ಜೋಡಿಸಲು ಬಳಸಲಾಗುತ್ತದೆ. ಸ್ಕೋಡಾ ತನ್ನ ಸ್ಥಳೀಯ ಪಾಲುದಾರ ಥಾನ್ ಕಾಂಗ್ ಗ್ರೂಪ್ ಜೊತೆ ಕೈಜೋಡಿಸಿ ರಾಜಧಾನಿ ಹನೋಯ್ ಬಳಿಯ ಕ್ವಾಂಗ್ ನಿನ್ಹ್ ಪ್ರಾಂತ್ಯದಲ್ಲಿ ಪ್ಲಾಂಟ್‌ಅನ್ನು ತೆರೆದಿದೆ. ಕುಶಾಕ್‌ನ ಲೋಕಲ್ ಎಸೆಂಬಲ್ ಈಗಾಗಲೇ ನಡೆಯುತ್ತಿದೆ ಎಂದು ಸ್ಕೋಡಾ ಹೇಳಿದೆ, ಹಾಗೆಯೇ ಸ್ಲಾವಿಯಾ ಶೀಘ್ರದಲ್ಲೇ ಉತ್ಪಾದನಾ ಮಾರ್ಗವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ವಿಯೆಟ್ನಾಂನಲ್ಲಿರುವ ಸ್ಕೋಡಾದ ಪ್ರಸ್ತುತ ಕಾರುಗಳ ಪಟ್ಟಿಯು ಕರೋಕ್ ಮತ್ತು ಎರಡನೇ ಜನರೇಶನ್‌ನ ಕೊಡಿಯಾಕ್ ಅನ್ನು ಒಳಗೊಂಡಿದೆ, ಇವೆರಡನ್ನೂ ಯುರೋಪ್‌ನಿಂದ ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (CBU) ರವಾನಿಸಲಾಗುತ್ತದೆ.
ಭಾರತ-ಸ್ಪೆಕ್ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ: ಒಂದು ಅವಲೋಕನ
ಸ್ಕೋಡಾ ಕುಶಾಕ್ ಅನ್ನು 2021 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮುಂದಿನ ವರ್ಷದ ವೇಳೆಗೆ ಮಿಡ್‌ಲೈಫ್ ಆಪ್‌ಡೇಟ್‌ಅನ್ನು ಪಡೆಯುವ ನಿರೀಕ್ಷೆಯಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ, 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 ಪಿಎಸ್/178 ಎನ್‌ಎಮ್), ಮತ್ತು 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (150 ಪಿಎಸ್/250 ಎನ್‌ಎಮ್). 10.1-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋ ಎಸಿ, ಕ್ರೂಸ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಪ್ರಮುಖ ಫೀಚರ್‌ಗಳಾಗಿವೆ.
ಮತ್ತೊಂದೆಡೆ, ಸ್ಲಾವಿಯಾವನ್ನು 2022 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮುಂದಿನ ವರ್ಷದ ವೇಳೆಗೆ ಮಿಡ್‌ಲೈಫ್ ರಿಫ್ರೆಶ್ ಪಡೆಯುವ ನಿರೀಕ್ಷೆಯಿದೆ. ಇದು ಕುಶಾಕ್‌ನಂತೆಯೇ 10.1-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ರಿಯರ್ ವೆಂಟ್‌ಗಳೊಂದಿಗೆ ಆಟೋ ಎಸಿ, 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು TPMS ಅನ್ನು ಒಳಗೊಂಡಿರುವ ಅದೇ ಎಂಜಿನ್‌ಗಳು ಮತ್ತು ತಂತ್ರಜ್ಞಾನವನ್ನು ಹೊಂದಿದೆ.
ಇದನ್ನೂ ಓದಿ: Nissanನ Renault Triber ಆಧಾರಿತ ಎಮ್‌ಪಿವಿಯ ಮೊದಲ ಟೀಸರ್ ಔಟ್, ಬಿಡುಗಡೆಯ ಸಮಯವೂ ದೃಢ
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ವಿಯೆಟ್ನಾಂ ಗೆ ತೆರಳುವ ಮೊಡೆಲ್‌ಗಳ ಬೆಲೆಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಸ್ಕೋಡಾ ಕುಶಾಕ್ ಭಾರತದಲ್ಲಿ 10.99 ಲಕ್ಷ ರೂ. ನಿಂದ 19.01 ಲಕ್ಷ ರೂ. ವರೆಗೆ ಬೆಲೆ ಹೊಂದಿದ್ದರೆ, ಸ್ಲಾವಿಯಾ 10.34 ಲಕ್ಷ ರೂ. ನಿಂದ 18.24 ಲಕ್ಷ ರೂ. ವರೆಗೆ ಬೆಲೆ ಹೊಂದಿದೆ. ಕುಶಾಕ್ ಕಾರು ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ, ಟೊಯೋಟಾ ಹೈರೈಡರ್, ಹೋಂಡಾ ಎಲಿವೇಟ್ ಮತ್ತು ಎಂಜಿ ಆಸ್ಟರ್ ಕಾರುಗಳೊಂದಿಗೆ ಪೈಪೋಟಿ ನಡೆಸಿದರೆ, ಸ್ಲಾವಿಯಾ ಕಾರು ಹುಂಡೈ ವೆರ್ನಾ, ಮಾರುತಿ ಸಿಯಾಜ್ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್ ಕಾರುಗಳೊಂದಿಗೆ ಪೈಪೋಟಿ ನಡೆಸುತ್ತದೆ.
(ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಂ ಆಗಿದೆ)
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ