• English
  • Login / Register

Volkswagen ನ ಹೊಸ ಎಸ್‌ಯುವಿಗೆ Tera ಎಂದು ನಾಮಕರಣ: ಭಾರತದಲ್ಲಿ ಬಿಡುಗಡೆಯಾಗುತ್ತಾ ?

ವೋಕ್ಸ್ವ್ಯಾಗನ್ ವಿಟರ್ಸ್ ಗಾಗಿ dipan ಮೂಲಕ ನವೆಂಬರ್ 06, 2024 03:22 pm ರಂದು ಪ್ರಕಟಿಸಲಾಗಿದೆ

  • 79 Views
  • ಕಾಮೆಂಟ್‌ ಅನ್ನು ಬರೆಯಿರಿ

ವೋಕ್ಸ್‌ವ್ಯಾಗನ್‌ ಟೆರಾವನ್ನು MQB A0 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಟೈಗುನ್‌ನಂತೆಯೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಮುಂಬರುವ ಸ್ಕೋಡಾ ಕೈಲಾಕ್‌ನಂತೆಯೇ ಹೆಜ್ಜೆಗುರುತನ್ನು ಹೊಂದಿದೆ

ಸ್ಕೋಡಾ ಭಾರತದಲ್ಲಿ ಹೊಸ ಸಬ್-4 ಮೀಟರ್ ಎಸ್‌ಯುವಿಯಾದ ಕೈಲಾಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂಬುವುದರ ಕುರಿತ ಸುದ್ದಿಯಲ್ಲ. ಆದರೆ, ಸ್ಕೋಡಾವು ಕುಶಾಕ್ ಮತ್ತು ಸ್ಲಾವಿಯಾವನ್ನು ಬಿಡುಗಡೆ ಮಾಡಿದ ನಂತರ ವೋಕ್ಸ್‌ವ್ಯಾಗನ್‌ ಟೈಗುನ್ ಮತ್ತು ವರ್ಟಸ್ ಅನ್ನು ಮಾಡಿದಂತೆ, ಸ್ಕೋಡಾದ ಕೈಲಾಕ್ ಅನ್ನು ಆಧರಿಸಿ ಇದೇ ರೀತಿಯ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ವೋಕ್ಸ್‌ವ್ಯಾಗನ್‌ ಪರಿಚಯಿಸುತ್ತದೆಯೇ ಎಂಬುವುದನ್ನೂ ಇನ್ನೂ ಖಚಿತಪಡಿಸಿಲ್ಲ.

ಜರ್ಮನ್ ಕಾರು ತಯಾರಕರು ಜಾಗತಿಕ ಮಾರುಕಟ್ಟೆಗಾಗಿ ಹೊಸ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ (ಬಹುಶಃ ಸಬ್‌-4ಎಮ್‌ ಎಸ್‌ಯುವಿ) ಮತ್ತು ಈಗ ಅದಕ್ಕೆ ಟೆರಾ ಎಂದು ನಾಮಕರಣ ಮಾಡಿದ್ದಾರೆ. ಈ ಕ್ರಮವು ವೋಕ್ಸ್‌ವ್ಯಾಗನ್‌ನ ಮುಂಬರುವ ಟೆರಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ ಮತ್ತು ಅದರ ಪರವಾಗಿ ನಾವು ನಂಬುವ ಹಲವಾರು ಅಂಶಗಳಾಗಿವೆ. ನಾವು ಅವುಗಳನ್ನು ವಿವರವಾಗಿ ಪರಿಶೀಲಿಸೋಣ:

ಟೆರಾ ಭಾರತಕ್ಕೆ ಯಾಕೆ ಬರಬೇಕು ?

Skoda Kylaq Front Left Side

ವೋಕ್ಸ್‌ವ್ಯಾಗನ್ ಹಲವಾರು ಬಲವಾದ ಕಾರಣಗಳಿಗಾಗಿ ಟೆರಾವನ್ನು ಭಾರತಕ್ಕೆ ತರಲು ಪರಿಗಣಿಸಬೇಕು. ಮೊದಲನೆಯದಾಗಿ, ವೋಕ್ಸ್‌ವ್ಯಾಗನ್‌ನ ಸಹೋದರ ಬ್ರ್ಯಾಂಡ್ ಸ್ಕೋಡಾ, ತನ್ನ ಕೈಲಾಕ್ ಸಬ್-4ಎಮ್‌ ಎಸ್‌ಯುವಿಯನ್ನು ಶೀಘ್ರದಲ್ಲೇ ಜಾಗತಿಕವಾಗಿ ಅನಾವರಣಗೊಳಿಸಲು ತಯಾರಿ ನಡೆಸುತ್ತಿದೆ, ಇದು 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ. 2022 ರಲ್ಲಿ ಪೋಲೊ ನಿರ್ಗಮಿಸಿದಾಗಿನಿಂದ ಫೋಕ್ಸ್‌ವ್ಯಾಗನ್, ನಾಲ್ಕು ಮೀಟರ್‌ಗಳ ಅಡಿಯಲ್ಲಿ ಯಾವುದೇ ಕಾರುಗಳನ್ನು ಪರಿಚಯಿಸಿಲ್ಲ ಮತ್ತು ಆದ್ದರಿಂದ ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಸೆಳೆಯಲು ಹೊಸ ಮೊಡೆಲ್‌ ಅನ್ನು ಪರಿಚಯಿಸುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಟೆರಾವನ್ನು ಭಾರತಕ್ಕೆ ತರಲು ಮತ್ತೊಂದು ಕಾರಣವೆಂದರೆ ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್ ನಡುವಿನ ಪ್ಲಾಟ್‌ಫಾರ್ಮ್ ಹಂಚಿಕೆ ಪ್ರಯೋಜನ. ಕೈಲಾಕ್, ಮೇಡ್-ಇನ್-ಇಂಡಿಯಾ ಉತ್ಪನ್ನವಾಗಿರುವುದರಿಂದ, ದೇಶದಲ್ಲಿ ರನ್ನಿಂಗ್‌ನಲ್ಲಿರುವ ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್ ಮೊಡೆಲ್‌ ಗಳಾದ ವರ್ಟಸ್, ಸ್ಲಾವಿಯಾ, ಕುಶಾಕ್ ಮತ್ತು ಟೈಗುನ್‌ಗಳಂತೆಯೇ ಅದೇ ಪ್ಲಾಟ್‌ಫಾರ್ಮ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಬಳಸುತ್ತದೆ. ಈ ಹಂಚಿಕೆಯ ತಂತ್ರಜ್ಞಾನವು ವೋಕ್ಸ್‌ವ್ಯಾಗನ್‌ಗೆ ಟೆರಾವನ್ನು ಸ್ಥಳೀಯವಾಗಿ ಪರಿಚಯಿಸಲು ಸುಲಭ ಮತ್ತು ಹೆಚ್ಚಾಗಿ ವೆಚ್ಚವನ್ನು ಉಳಿಸಬಹುದಾಗಿದೆ, ಏಕೆಂದರೆ ಪ್ಲಾಟ್‌ಫಾರ್ಮ್‌ ಮತ್ತು ಪವರ್‌ಟ್ರೇನ್ ಅನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಟೆರಾವನ್ನು ಭಾರತಕ್ಕೆ ತರುವುದರಿಂದ ಭಾರತದಲ್ಲಿ ಮಾರಾಟದ ಪ್ರಮಾಣವು ಹೆಚ್ಚಾಗುತ್ತದೆ, ಈ ಮೂಲಕ ಕಂಪನಿಯು ಸಬ್-4m ಎಸ್‌ಯುವಿ ಪ್ಲಾಟ್‌ಫಾರ್ಮ್‌ಗೆ ಮಾಡಿದ ಹೂಡಿಕೆಯನ್ನು ಸಮರ್ಥಿಸಬಹುದಾಗಿದೆ. 

ಇದನ್ನೂ ಓದಿ: ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳೊಂದಿಗೆ Citroen Aircrossನ ಎಕ್ಸ್‌ಪ್ಲೋರರ್ ಬಿಡುಗಡೆ

10 ಲಕ್ಷಕ್ಕಿಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿರಬಹುದಾದ ಟೆರಾ, ಭಾರತದಲ್ಲಿ ಅತ್ಯಂತ ಕೈಗೆಟುಕುವ ಫೋಕ್ಸ್‌ವ್ಯಾಗನ್ ಕಾರಾಗಿಯೂ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಕಾರು ತಯಾರಕರ ಕಾರುಗಳು ಖರೀದಿದಾರರಿಗೆ ಹೆಚ್ಚು ಕೈಗೆಟುಕಲಿದೆ. ಈ ಮೂಲಕ ಫೋಕ್ಸ್‌ವ್ಯಾಗನ್ ಪೊಲೊದಿಂದ ಉಳಿದಿರುವ ಶೂನ್ಯವನ್ನು ತುಂಬಬಹುದು, ಇದು ಜನಪ್ರಿಯ ಸಬ್‌-4ಎಮ್‌ ಮೊಡೆಲ್‌ ಆಗಿತ್ತು, ಆದರೆ ನಂತರ 2022 ರಲ್ಲಿ ಸ್ಥಗಿತಗೊಂಡಾಗಿನಿಂದ ವೋಕ್ಸ್‌ವ್ಯಾಗನ್ ಇಂಡಿಯಾದ ಸಬ್‌-4ಎಮ್‌ ಸೆಗ್ಮೆಂಟ್‌ ಖಾಲಿಯಾಗಿದೆ.

ಜಾಗತಿಕವಾಗಿ, ವೋಕ್ಸ್‌ವ್ಯಾಗನ್ EVಗಳಿಂದ ಸ್ವಲ್ಪ ಹಿಂದೆ ಸರಿಯುತ್ತಿರುವಂತೆ ತೋರುತ್ತಿದೆ ಮತ್ತು ಇಂಧನದಿಂದ ಚಾಲಿತ ವಾಹನಗಳ ಮೇಲೆ ಕೇಂದ್ರೀಕರಿಸುತ್ತಿದೆ. ಭಾರತದಲ್ಲಿಯೂ ಫೋಕ್ಸ್‌ವ್ಯಾಗನ್ ID.4 ಎಲೆಕ್ಟ್ರಿಕ್ ಎಸ್‌ಯುವಿಯ ಬಿಡುಗಡೆ ವಿಳಂಬವಾಗಿದೆ. ಭಾರತದಲ್ಲಿ ಇಂಧನ ಚಾಲಿತ ಎಂಜಿನ್ ವಾಹನಗಳ ಮೇಲೆ ಹಿಡಿತ ಸಾಧಿಸಲು ಟೆರಾ ವೋಕ್ಸ್‌ವ್ಯಾಗನ್‌ನ ಕಾರ್ಯತಂತ್ರದ ಭಾಗವಾಗಿರಬಹುದು. ಟೆರಾವನ್ನು ಭಾರತಕ್ಕೆ ತರುವುದರಿಂದ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಲೈನ್‌ಅಪ್‌ಗೆ ಸಂಪೂರ್ಣವಾಗಿ ಪರಿವರ್ತನೆಯಾಗುವ ಮೊದಲು ಇಂಧನದಿಂದ ಚಾಲಿತ ಎಂಜಿನ್ ವಾಹನಗಳ ಜನಪ್ರಿಯತೆಯನ್ನು ಫೋಕ್ಸ್‌ವ್ಯಾಗನ್ ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

volkswagen virtus

ಭಾರತದಲ್ಲಿ ವೋಕ್ಸ್‌ವ್ಯಾಗನ್‌ನ ಕೊನೆಯ ಪ್ರಮುಖ ಹೊಸ ಕಾರು ಬಿಡುಗಡೆಯು 2022 ರ ಆರಂಭದಲ್ಲಿ ವರ್ಟಸ್ ಆಗಿತ್ತು ಮತ್ತು ಅಂದಿನಿಂದ, ಬ್ರ್ಯಾಂಡ್ ಸಣ್ಣ ಆಪ್‌ಡೇಟ್‌ಗಳನ್ನು ಮಾತ್ರ ಹೊರತಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಫೋಕ್ಸ್‌ವ್ಯಾಗನ್ ತನ್ನ ಕಾರುಗಳ ಪಟ್ಟಿಯನ್ನು ರಿಫ್ರೆಶ್ ಮಾಡಲು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾದ ಆಸಕ್ತಿಯನ್ನು ಹುಟ್ಟುಹಾಕಲು ಟೆರಾ ಅಗತ್ಯವಿದೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಾಮೆಂಟ್‌ ಸೆಕ್ಷನ್‌ನಲ್ಲಿ ನಮಗೆ ತಿಳಿಸಿ. ಆದರೆ ಅದಕ್ಕೂ ಮೊದಲು, ವೋಕ್ಸ್‌ವ್ಯಾಗನ್ ತೇರಾ ಎಸ್‌ಯುವಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ವೋಕ್ಸ್‌ವ್ಯಾಗನ್ ಟೆರಾ ಕುರಿತು ಇನ್ನಷ್ಟು

ವೋಕ್ಸ್‌ವ್ಯಾಗನ್‌ ಟೆರಾದ ಟೀಸರ್‌ ಅನ್ನು 2024ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿತ್ತು, ಇದು ಮುಂಬರುವ ವೋಕ್ಸ್‌ವ್ಯಾಗನ್ ಟೆರಾದ ಒಂದು ಲುಕ್‌ ಅನ್ನು ನಮಗೆ ನೀಡಿತ್ತು. ಅದರ ಮುಂಭಾಗದ ವಿನ್ಯಾಸವು ಹೊಸ ವೋಕ್ಸ್‌ವ್ಯಾಗನ್‌ ಟಿಗುವಾನ್‌ನಂತೆಯೇ ಇದೇ ರೀತಿಯ ಹೆಡ್‌ಲೈಟ್ ಸೆಟಪ್, ಗ್ರಿಲ್ ಮತ್ತು ಬಂಪರ್‌ನೊಂದಿಗೆ ಹೋಲುತ್ತದೆ ಎಂದು ಬಹಿರಂಗಪಡಿಸಿತು. ಆದರೆ, ಟಿಗುವಾನ್‌ನಂತಲ್ಲದೆ, ಟೆರಾ ಗ್ರಿಲ್ ಮೂಲಕ ಚಾಲನೆಯಲ್ಲಿರುವ ಎಲ್ಇಡಿ ಲೈಟ್ ಅನ್ನು ಒಳಗೊಂಡಿರುವುದಿಲ್ಲ.

ಇದನ್ನು MQB A0 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದು ಪೊಲೊ, ಟಿ-ಕ್ರಾಸ್ ಮತ್ತು ನಿವಸ್‌ಗಳಂತಹ ವಿದೇಶಗಳಲ್ಲಿ ಲಭ್ಯವಿರುವ ಮೊಡೆಲ್‌ಗಳಿಗೆ ಆಧಾರವಾಗಿದೆ. ಆದಾಗ್ಯೂ ಇದು ಟಿ-ಕ್ರಾಸ್‌ನ (ಭಾರತದಲ್ಲಿ ಟೈಗುನ್ ಎಂದು ಕರೆಯಲ್ಪಡುತ್ತದೆ) ಕೆಳಗೆ ಸ್ಥಾನವನ್ನು ಪಡೆಯಲಿದೆ. 

ಬ್ರೆಜಿಲ್-ಸ್ಪೆಕ್ ಟೆರಾ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಟೈಗುನ್ ಮತ್ತು ವರ್ಟಸ್‌ನ ಲೋವರ್‌ ವೇರಿಯೆಂಟ್‌ಗಳಂತೆಯೇ 115 ಪಿಎಸ್‌ ಮತ್ತು 178 ಎನ್‌ಎಮ್‌ ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ವೋಕ್ಸ್‌ವ್ಯಾಗನ್ ವರ್ಟಸ್ ಆನ್‌ರೋಡ್‌ ಬೆಲೆ

was this article helpful ?

Write your Comment on Volkswagen ವಿಟರ್ಸ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience