• English
  • Login / Register

ಹೊಚ್ಚ ಹೊಸ ಹ್ಯುಂಡೈ ವರ್ನಾದ ವೇರಿಯೆಂಟ್‌ವಾರು ಫೀಚರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುಂಡೈ ವೆರ್ನಾ ಗಾಗಿ tarun ಮೂಲಕ ಮಾರ್ಚ್‌ 24, 2023 01:42 pm ರಂದು ಮಾರ್ಪಡಿಸಲಾಗಿದೆ

  • 14 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಹೊಚ್ಚಹೊಸ ವರ್ನಾ ನಾಲ್ಕು ವೇರಿಯೆಂಟ್‌ಗಳು ಮತ್ತು ಅಷ್ಟೇ ಸಂಖ್ಯೆಯ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ.

Hyundai Verna 2023

ಈ ಕಾಂಪ್ಯಾಕ್ಟ್ ಸೆಡಾನ್ ವಿಭಾಗವು ಇತ್ತೀಚಿನ ಹೋಂಡಾ ಸಿಟಿ, ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವಾಗನ್ ವರ್ಟಸ್‌ ರೂಪದಲ್ಲಿ ಹೊಸ ಸೇರ್ಪಡೆಗಳೊಂದಿಗೆ ಸ್ವಲ್ಪ ಮಟ್ಟಿಗೆ ಪುನರುಜ್ಜೀವನಗೊಂಡಿದೆ. ಹ್ಯುಂಡೈ ಆರನೇ ಪೀಳಿಗೆ ವರ್ನಾದೊಂದಿಗೆ ಪಾದಾರ್ಪಣೆ ಮಾಡುತ್ತಿದ್ದು, ಇದು ಹಿಂದಿನ ಪೀಳಿಗೆಗಿಂತ ದೊಡ್ಡದಾಗಿದೆ, ಹೆಚ್ಚು ದುಬಾರಿಯಾಗಿದೆ, ತಂತ್ರಜ್ಞಾನಭರಿತವಾಗಿದೆ ಮತ್ತು ಶಕ್ತಿಶಾಲಿಯಾಗಿದೆ. ಇದು ಸ್ಟೈಲಿಂಗ್ ವಿಷಯದಲ್ಲಿ ಇನ್ನಷ್ಟು ಸ್ಪೋರ್ಟಿ ಮತ್ತು ಅಗ್ರೆಸಿವ್ ಆಗಿದೆ. ಹೊಸ ವರ್ನಾದ ಆರಂಭಿಕ ಬೆಲೆಗಳು ರೂ 10.90 ಲಕ್ಷದಿಂದ ರೂ 17.38 ಲಕ್ಷದ ತನಕ (ಎಕ್ಸ್-ಶೋರೂಂ) ಇದೆ.

 ಈ ಸೆಡಾನ್ 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ (NA) ಟರ್ಬೋ-ಪೆಟ್ರೋಲ್ ಇಂಜಿನ್‌ಗಳೊಂದಿಗೆ ಲಭ್ಯವಿದ್ದು, ಎರಡನ್ನೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟಾಂಡರ್ಡ್ ಆಗಿ ಜೋಡಿಸಲಾಗಿದೆ. ಈ NA ಇಂಜಿನ್ CVT ಆಯ್ಕೆಯನ್ನು ಪಡೆದಿದ್ದು ಟರ್ಬೋ ಯುನಿಟ್ ಅನ್ನು 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಲಾಗಿದೆ.

 ಇದನ್ನೂ ಓದಿ: ಇಲ್ಲಿದೆ ಹೊಸ ಹ್ಯುಂಡೈ ವರ್ನಾದ 10 ಚಿತ್ರಗಳಲ್ಲಿ ನಿಮ್ಮ ಮೊದಲ ನೋಟ 

 ಈ ಹೊಸ ವರ್ನಾ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: EX, S, SX, ಮತ್ತು SX (O) ಹಾಗೂ ಇದರಲ್ಲಿ ಏನಿದೆ ಎಂಬುದರ ವಿವರ ಇಲ್ಲಿದೆ:

 ಹ್ಯುಂಡೈ ವರ್ನಾ EX ವೇರಿಯೆಂಟ್

Hyundai Verna 2023

 (ಡ್ಯುಯಲ್ ಟೋನ್ ಇಂಟೀರಿಯರ್ ರೆಫರೆನ್ಸ್‌ಗಾಗಿ ಚಿತ್ರವನ್ನು ಬಳಸಲಾಗಿದೆ)

 ಬೆಲೆ: ರೂ 10.90 ಲಕ್ಷ

ಪವರ್‌ಟ್ರೇನ್: 1.5-ಲೀಟರ್ ಪೆಟ್ರೋಲ್ 6-ಸ್ಪೀಡ್ MT ಜೊತೆಗೆ ಮಾತ್ರ

ಎಕ್ಸ್‌ಟೀರಿಯರ್

ಇಂಟೀರಿಯರ್

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

  • ಪ್ರಾಜೆಕ್ಟರ್ ಹೆಡ್‌ಲ್ಯಾಂಪ್‌ಗಳು
  • ಬ್ಲ್ಯಾಕ್ ಕ್ರೋಮ್ ಫಿನಿಶಿಂಗ್ ಹೊಂದಿರುವ ಗ್ರಿಲ್
  • 15-ಇಂಚಿನ ಸ್ಟೀಲ್ ವ್ಹೀಲ್‌ಗಳು ಕವರ್‌ಗಳ ಜೊತೆಗೆ
  • ಡ್ಯುಯಲ್-ಟೋನ್ ಬ್ಲ್ಯಾಕ್ ಮತ್ತು ಬೇಝ್ ಥೀಮ್ 
  • ಪಾರ್ಕಿಂಗ್ ಬ್ರೇಕ್ ಮತ್ತು ಡೋರ್ ಹ್ಯಾಂಡಲ್‌ಗಳಿಗೆ ಮೆಟಲ್ ಫಿನಿಶಿಂಗ್
  • ಎತ್ತರ ಹೊಂದಿಸಬಲ್ಲ ಡ್ರೈವರ್‌ಸೀಟ್
  • ಫ್ರಂಟ್ ಮತ್ತು ರಿಯರ್ ಅಡ್ಜಸ್ಟೇಬಲ್ ಹೆಡ್‌ರೆಸ್ಟ್‌ಗಳು
  • ರಿಯರ್ ಸೆಂಟರ್ ಆರ್ಮ್‌ರೆಸ್ಟ್ ಮತ್ತು ಕಪ್‌ಹೋಲ್ಡರ್‌ಗಳು
  • ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಗಳು
  • ಮ್ಯಾನುವಲ್ AC
  • ಟಿಲ್ಟ್ ಅಡ್ಜಸ್ಟೇಬಲ್ ಸ್ಟೀರಿಂಗ್
  • ಫ್ರಂಟ್ ಮತ್ತು ರಿಯರ್ USB ಟೈಪ್-C ಚಾರ್ಜರ್
  • ಇಲೆಕ್ಟ್ರಿಕಲಿ ಅಡ್ಜಸ್ಟಿಬಲ್ ORVMಗಳು

-

  • ಆರು ಏರ್‌ಬ್ಯಾಗ್‌ಗಳು
  • ABS ಜೊತೆಗೆ EBD
  • ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು
  • ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು
  • ರಿಯರ್ ಡಿಫಾಗರ್
  • ಎಲ್ಲಾ ಸೀಟುಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್
  • ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು
  • ISOFIX ಚೈಲ್ಡ್-ಸೀಟ್‌ ಮೌಂಟ್‌ಗಳು

 ಈ ಬೇಸ್-ಸ್ಪೆಕ್ EX ವೇರಿಯೆಂಟ್ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್‌ ಮೌಂಟ್‌ಗಳು ಮತ್ತು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳೊಂದಿಗೆ ಯೋಗ್ಯವಾಗಿ ಸುಸಜ್ಜಿತಗೊಂಡ ಸುರಕ್ಷತಾ ಪ್ಯಾಕೇಜ್ ಅನ್ನು ಪಡೆದಿದೆ. ಇದರ ಹೊರತಾಗಿ, ಈ ವೇರಿಯೆಂಟ್ ತುಸು ಬೇಸಿಕ್ ಆಗಿದ್ದು, ಇದರಲ್ಲಿ ಇನ್ಫೊಟೈನ್‌ಮೆಂಟ್ ಸಿಸ್ಟಮ್ ಮತ್ತು ರಿಯರ್ AC ವೆಂಟ್‌ಗಳು ಇರುವುದಿಲ್ಲ. ಈ ವೇರಿಯೆಂಟ್ ಪೆಟ್ರೋಲ್-ಮ್ಯಾನುವಲ್ ಪವರ್‌ಟ್ರೇನ್‌ಗೆ ಮಾತ್ರ ಸೀಮಿತವಾಗಿದೆ.

 ಹ್ಯುಂಡೈ ವರ್ನಾ S ವೇರಿಯೆಂಟ್

Hyundai Verna 2023

ಬೆಲೆ: ರೂ 11.96 ಲಕ್ಷ

 ಪವರ್‌ಟ್ರೇನ್: 1.5-ಲೀಟರ್ ಪೆಟ್ರೋಲ್ 6-ಸ್ಪೀಡ್ MT ಜೊತೆಗೆ

 ಫೀಚರ್‌ಗಳು:

 (ವರ್ನಾ EX ವೇರಿಯೆಂಟ್ ಜೊತೆಗೆ)

ಎಕ್ಸ್‌ಟೀರಿಯರ್

ಇಂಟೀರಿಯರ್

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

  • ಹಾರಿಝಾನ್ LED ಪೊಸಿಷನಿಂಗ್ ಲ್ಯಾಂಪ್‌ಗಳು ಮತ್ತು DRLಗಳು
  • ಸಂಪರ್ಕಿತ LED ಟೈಲ್ ಲ್ಯಾಂಪ್‌ಗಳು 
  • ORVMಗಳ ಇಂಡಿಕೇಟರ್‌ಗಳನ್ನು ಆನ್ ಮಾಡುವುದು
  • 15-ಇಂಚಿನ ಅಲಾಯ್ ವ್ಹೀಲ್‌ಗಳು
  • ಶಾರ್ಕ್ ಫಿನ್ ಆ್ಯಂಟೆನಾ
  • ಮುಂದಕ್ಕೆ ಬಾಗುವ ಸೆಂಟರ್ ಆರ್ಮ್‌ರೆಸ್ಟ್ 
  • ಐಡ್ಲ್ ಸ್ಟಾಪ್ ಮತ್ತು ಗೋ 
  • ಆಟೋಮ್ಯಾಟಿಕ್ AC
  • ರಿಯರ್ AC ವೆಂಟ್‌ಗಳು
  • ಕೂಲ್ಡ್ ಗ್ಲೋವ್‌ಬಾಕ್ಸ್
  • ಟೆಲಿಸ್ಕೋಪಿಕ್ ಸ್ಟೀರಿಂಗ್ ಅಡ್ಜಸ್ಟ್
  • ಕ್ರ್ಯೂಸ್ ಕಂಟ್ರೋಲ್ 
  • ಸ್ಟೀರಿಂಗ್ ವ್ಹೀಲ್ ಜೊತೆಗೆ ಆಡಿಯೋ ಮತ್ತು ಫೋನ್‌ ಕಂಟ್ರೋಲ್‌ಗಳು
  • 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
  • ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ
  • ವಾಯ್ಸ್ ಅಸಿಸ್ಟ್
  • ಫ್ರಂಟ್ ಮತ್ತು ರಿಯರ್ ಸ್ಪೀಕರ್‌ಗಳು
  • ಡಿಜಿಟೈಸ್ ಮಾಡಲಾದ ಇನ್ಸ್‌ಟ್ರುಮೆಂಟ್ ಕ್ಲಸ್ಟರ್
  • ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್
  • ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
  • TPMS
  • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್

S ವೇರಿಯೆಂಟ್ ಕೆಲವು ಅಗತ್ಯದ ಸೇರ್ಪಡೆಗಳಾದ ಆಟೋಮ್ಯಾಟಿಕ್ AC, ರಿಯರ್ AC ವೆಂಟ್‌ಗಳು, ಕ್ರ್ಯೂಸ್ ಕಂಟ್ರೋಲ್ ಮತ್ತು 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ಗಳನ್ನು ಪಡೆದಿದೆ. ಇದು ಹೊಸ ವರ್ನಾದ ಫ್ರಂಟ್ ಮತ್ತು ರಿಯರ್‌ನ ವಿಶಿಷ್ಟ ಲೈಟಿಂಗ್ ಅಂಶಗಳ ಪ್ರವೇಶ ಹಂತದ ವೆರಿಯೆಂಟ್ ಆಗಿದೆ. ಹಿಲ್ ಸ್ಟಾರ್ಟ್ ಅಸಿಸ್ಟ್, ESC, ಮತ್ತು TPMS ನೊಂದಿಗೆ ಉತ್ತಮ ಸುರಕ್ಷತೆಯನ್ನು ಪಡೆದಿದೆ. ಆದಾಗ್ಯೂ ರಿಯರ್ ಕ್ಯಾಮರಾ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಇರುವುದಿಲ್ಲ.

ವರ್ನಾ SX ವೇರಿಯೆಂಟ್

Hyundai Verna 2023

ಬೆಲೆ: ರೂ 12.99 ಲಕ್ಷದಿಂದ ರೂ 14.24 ಲಕ್ಷದ ತನಕ

 ಇಂಜಿನ್: 1.5-ಲೀಟರ್ ಪೆಟ್ರೋಲ್ ಇಂಜಿನ್ 6-ಸ್ಪೀಡ್ MT ಮತ್ತು IVT (ಆಟೋಮ್ಯಾಟಿಕ್)

 ಫೀಚರ್‌ಗಳು:

 (ವರ್ನಾ S ವೇರಿಯೆಂಟ್‌ನ ಜೊತೆಗೆ)

ಎಕ್ಸ್‌ಟೀರಿಯರ್

ಇಂಟೀರಿಯರ್

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

  • LED ಹೆಡ್‌ಲ್ಯಾಂಪ್‌ಗಳು
  • ಕಾರ್ನರಿಂಗ್ ಲ್ಯಾಂಪ್‌ಗಳು
  • 16-ಇಂಚಿನ ಅಲಾಯ್ ವ್ಹೀಲ್‌ಗಳು
  • ಕ್ರೋಮ್ ಡೋರ್ ಹ್ಯಾಂಡಲ್‌ಗಳು ಮತ್ತು ವಿಂಡೋ ಲೈನ್
  • ಸ್ಟೀರಿಂಗ್ ವ್ಹೀಲ್ ಮತ್ತು ಗೇರ್ ನಾಬ್‌ಲೆದರೆಟ್ ಫಿನಿಶ್ 
  • ಆಂಬಿಯೆಂಟ್ ಲೈಟಿಂಗ್
  • ಪೆಡಲ್ ಶಿಫ್ಟರ್‌ಗಳು (IVT)
  • ಇಲೆಕ್ಟ್ರಿಕ್ ಸನ್‌ರೂಫ್
  • ಡ್ರೈವ್ ಮೋಡ್ ಸೆಲೆಕ್ಟ್ (IVT)
  • ಸ್ಮಾರ್ಟ್ ಟ್ರಂಕ್
  • ಪುಶ್ ಬಟನ್ ಸ್ಟಾರ್ಟ್
  • ವೈರ್‌ಲೆಸ್ ಚಾರ್ಜರ್
  • ಡ್ರೈವರ್ ರಿಯರ್ ವ್ಯೂ ಮಾನಿಟರ್
  • ಆಟೋ-ಫೋಲ್ಡಿಂಗ್ ORVMಗಳು

ಆಡಿಯೋ ಸಿಸ್ಟಮ್‌ಗೆ ಫ್ರಂಟ್ ಟ್ವೀಟರ್‌ಗಳು

  • ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು
  • ರಿಯರ್ ಪಾರ್ಕಿಂಗ್  ಕ್ಯಾಮರಾ
  • ಇಲೆಕ್ಟ್ರೋಕ್ರೋಮಿಕ್ ಮಿರರ್
  • ಸ್ಮಾರ್ಟ್ ಕೀ
  • ಎತ್ತರ ಹೊಂದಿಸಬಲ್ಲ ಫ್ರಂಟ್ ಸೀಟ್‌ಬೆಲ್ಟ್‌ಗಳು
  •  

ಈ ವೇರಿಯೆಂಟ್ LED ಹೆಡ್‌ಲ್ಯಾಂಪ್‌ಗಳು, ದೊಡ್ಡದಾದ ಅಲಾಯ್ ವ್ಹೀಲ್‌ಗಳು ಮತ್ತು ಕೆಲವು ಕ್ರೋಮ್ ಅಂಶಗಳಿಂದಾಗಿ ಹೊರಗಿನಿಂದ ನೋಡುವಾಗ ತುಂಬಾ ವಿಭಿನ್ನ ಹಾಗೂ ಪ್ರೀಮಿಯಂ ಆಗಿ ಕಾಣುತ್ತದೆ. ಆದರೆ ಒಳಗೆ ಸುಮಾರಾಗಿ  S ವೇರಿಯೆಂಟ್‌ನಂತೆಯೇ ಇದೆ. ಇಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಅನ್ನು ಇಲ್ಲಿ ಸೇರಿಸಲಾಗಿದ್ದು, ಆಟೋಮ್ಯಾಟಿಕ್ ಆಯ್ಕೆಯೂ ಪೆಡಲ್ ಶಿಫ್ಟರ್‌ಗಳು ಮತ್ತು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಇನ್ನಷ್ಟು ಅನುಕೂಲಕ್ಕಾಗಿ ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಸೇರಿಸಲಾಗಿದೆ. ಆದಾಗ್ಯೂ, ಹೊಸ ಪೀಳಿಗೆ ಸೆಡಾನ್‌ನ ಸ್ಟಾರ್ ಫೀಚರ್‌ಗಳು ಈ ವೇರಿಯೆಂಟ್‌ನಲ್ಲಿ ಇರುವುದಿಲ್ಲ.

 ಇದನ್ನೂ ಓದಿ: ನೀವು ಖರೀದಿಸಬಹುದು 2023 ಹ್ಯುಂಡೈ ವರ್ನಾವನ್ನು 9 ವಿಭಿನ್ನ ಶೇಡ್‌ಗಳಲ್ಲಿ 

ವರ್ನಾ SX (ಟರ್ಬೋ)

Hyundai Verna 2023 Turbo

ಬೆಲೆ: ರೂ 14.84 ಲಕ್ಷದಿಂದ ರೂ 16.08 ಲಕ್ಷದ ತನಕ

 ಇಂಜಿನ್: 1.5-ಲೀಟರ್ ಟರ್ಬೋ-ಪೆಟ್ರೋಲ್ 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಜೊತೆಗೆ

 (SX ನ ಫೀಚರ್‌ಗಳ ಜೊತೆಗೆ)

ಎಕ್ಸ್‌ಟೀರಿಯರ್

ಇಂಟೀರಿಯರ್

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

  • ರೆಡ್ ಬ್ರೇಕ್ ಕ್ಯಾಲಿಪರ್‌ಗಳು
  • 16-ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು
  • ಡ್ಯುಯಲ್-ಟೋನ್ ಪೈಂಟ್
  • ರೆಡ್ ಆಕ್ಸೆಂಟ್‌ಗಳೊಂದಿಗೆ ಸಂಪೂರ್ಣ-ಬ್ಲ್ಯಾಕ್ ಇಂಟೀರಿಯರ್
  • ಮೆಟಲ್ ಪೆಡಲ್‌ಗಳು
  • ಸಾಫ್ಟ್-ಟಚ್ ಡೋರ್ ಟ್ರಿಮ್ ಮತ್ತು ಕ್ರ್ಯಾಶ್ ಪ್ಯಾಡ್
  • ಸಂಯೋಜಿತ ಏರ್ ಪ್ಯೂರಿಫೈಯರ್
  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ 
  • ಬ್ಲ್ಯೂಲಿಂಕ್ ಸಂಪರ್ಕಿತ ಕಾರ್ ತಂತ್ರಜ್ಞಾನ 
  • ಇಲೆಕ್ಟ್ರೋಕ್ರೋಮಿಕ್ ಮಿರರ್  ಎಮರ್ಜನ್ಸಿ ಸ್ವಿಚ್‌ಗಳ ಜೊತೆಗೆ

ಹೌದು, ಅದೇ SX  ವೇರಿಯೆಂಟ್‌ನ ಟರ್ಬೋ-ಪೆಟ್ರೋಲ್ ಆವೃತ್ತಿಯು NA SXಗಿಂತ ಹೆಚ್ಚುವರಿ ಪೀಚರ್‌ಗಳನ್ನು ಪಡೆಯುತ್ತದೆ. ಇದು ಹೊಸ ವರ್ನಾದ ಕಾರ್ಯಕ್ಷಮತೆ ಆಧಾರಿತ ಪವರ್‌ಟ್ರೇನ್‌ಗೆ ಪ್ರವೇಶ-ಹಂತದ ಟ್ರಿಮ್ ಆಗಿದೆ. ಹೊರಗಿನಿಂದ ಸ್ಪೋರ್ಟಿ ನೋಟಕ್ಕಾಗಿ ಇದು ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು, ರೆಡ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಡ್ಯುಯಲ್-ಟೋನ್ ಕಲರ್‌ಗಳನ್ನು (ಬ್ಲ್ಯಾಕ್ ರೂಫ್ ಆಯ್ಕೆ) ಹೊಂದಿದೆ.

 ಅಲ್ಲದೇ ಕ್ಯಾಬಿನ್ ಸಂಪೂರ್ಣ ಬ್ಲ್ಯಾಕ್ ಇಂಟೀರಿಯರ್‌, ರೆಡ್ ಆಕ್ಸೆಂಟ್‌ಗಳು ಮತ್ತು ಮೆಟಲ್ ಪೆಡಲ್‌ಗಳೊಂದಿಗೆ ರೇಸಿ-ಅಪೀಲ್ ಅನ್ನು ಪಡೆಯುತ್ತದೆ. SX ಪೆಟ್ರೋಲ್ ವೇರಿಯೆಂಟ್‌ಗೆ ಹೋಲಿಸಿದರೆ, ಇದು ಸಂಯೋಜಿತ ಡ್ಯುಯಲ್ ಡಿಸ್‌ಪ್ಲೇಗಳ ಸೇರ್ಪಡೆಗಳು, 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ ಮತ್ತು ಸಾಫ್ಟ್-ಟಚ್‌ಗಳೊಂದಿಗೆ ಕ್ಯಾಬಿನ್ ಅನ್ನು ವರ್ಧಿಸುತ್ತದೆ. ಇಲ್ಲಿ ಡ್ರೈವ್ ಮೋಡ್‌ಗಳು ಆಟೋಮ್ಯಾಟಿಕ್ ಆಯ್ಕೆಗೆ ಸೀಮಿತವಲ್ಲ.

 ವರ್ನಾ SX (O)

Hyundai Verna 2023 Variants

 ಬೆಲೆ : ರೂ 14.66 ಲಕ್ಷದಿಂದ ರೂ 16.20 ಲಕ್ಷದ ತನಕ

 ಇಂಜಿನ್: 1.5-ಲೀಟರ್ ಪೆಟ್ರೋಲ್ ಇಂಜಿನ್ 6-ಸ್ಪೀಡ್ MT ಮತ್ತು IVT ಆಟೋಮ್ಯಾಟಿಕ್ ಜೊತೆಗೆ

(SX ಟರ್ಬೋನ ಫೀಚರ್‌ಗಳೊಂದಿಗೆ)

ಎಕ್ಸ್‌ಟೀರಿಯರ್

ಇಂಟೀರಿಯರ್

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

 

  • ಡ್ಯಾಶ್‌ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳ ಮೇಲೆ ಸಾಫ್ಟ್-ಟಚ್ ಮಟೀರಿಯಲ್‌ (SX ಗೆ ಹೋಲಿಸಿದಾಗ)
  • ಲೆದರೆಟ್ ಸೀಟ್ ಅಪ್‌ಹೋಲ್ಸ್‌ಟ್ರಿ
  • ಫ್ರಂಟ್ ವಾತಾಯನದ ಮತ್ತು ಹೀಟಡ್ ಸೀಟುಗಳು
  • ಪವರ್ಡ್ ಡ್ರೈವರ್ ಸೀಟು
  • ಮ್ಯಾನುವಲ್ ರಿಯರ್ ಕರ್ಟನ್
  • ಸಂಯೋಜಿತ ಏರ್ ಪ್ಯೂರಿಫೈಯರ್ (SX ಗೆ ಹೋಲಿಸಿದಾಗ)
  • 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್
  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಬ್ಲೂಲಿಂಕ್ ಸಂಪರ್ಕಿತ ಕಾರ್‌ ಟಕ್‌ ಜೊತೆಗೆ (SX ಗೆ ಹೋಲಿಸಿದಾಗ)
  • ಎಮರ್ಜೆನ್ಸಿ ಸ್ವಿಚ್‌ಗಳನ್ನು ಹೊಂದಿದ ಇಲೆಕ್ಟ್ರೋಕ್ರೋಮಿಕ್ ಮಿರರ್ (SX ಗೆ ಹೋಲಿಸಿದಾಗ)
  • ADAS (IVT ಗೆ ಮಾತ್ರ)
  • ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಕೊಲಿಶನ್ ತಡೆಗೆ 
  • ಬ್ಲೈಂಡ್ ಸ್ಪಾಟ್ ಮಾನಿಟರಿಂಗ್
  • ಸ್ಮಾರ್ಟ್ ಕ್ರ್ಯೂಸ್ ಕಂಟ್ರೋಲ್
  • ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್
  • ಲೇನ್ ಕೀಪ್ ಅಸಿಸ್ಟ್
  • ಹೈ ಬೀಮ್ ಅಸಿಸ್ಟ್

ವಿಭಿನ್ನ ಅಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿದರೆ SX (O) ವೇರಿಯೆಂಟ್ SX ವೇರಿಯೆಂಟ್‌ಗಿಂತ ಅಷ್ಟೇನೂ ವಿಭಿನ್ನವಾಗಿಲ್ಲ. ಲೆದರೆಟ್ ಸೀಟ್ ಅಪ್‌ಹೋಲ್ಸ್‌ಟ್ರಿ ಮತ್ತು ಸಾಫ್ಟ್-ಟಚ್‌ ಮಟೀರಿಯಲ್‌ಗಳ ಸೇರ್ಪಡೆಯೊಂದಿಗೆ ಕ್ಯಾಬಿನ್ ಹೆಚ್ಚು ದುಬಾರಿಯಾಗಿದೆ. ಹೊಸ ಫೀಚರ್‌ಗಳಾದ ಹೀಟಡ್ ಮತ್ತು ವಾತಾಯನದ ಫ್ರಂಟ್ ಸೀಟುಗಳು ಮತ್ತು ಪವರ್ಡ್ ಡ್ರೈವರ್ ಸೀಟುಗಳನ್ನು ವಿಭಾಗದಲ್ಲೇ ಮೊದಲ ಬಾರಿಗೆ ಒಳಗೊಂಡಿದೆ. ಈ ವೇರಿಯಂಟ್‌ನ ಪ್ರಮುಖ USP ಎಂದರೆ ರಡಾರ್- ಆಧಾರಿತ ADAS ಆಗಿದ್ದು, ಇದು CVT ಆಟೋಮ್ಯಾಟಿಕ್ ವೇರಿಯೆಂಟ್‌ಗಳಲ್ಲಿ ಮಾತ್ರ ಇರುತ್ತದೆ. 

ವರ್ನಾ SX (O) ಟರ್ಬೋ

Hyundai Verna 2023

ಬೆಲೆ: ರೂ 15.99 ಲಕ್ಷದಿಂದ 17.38 ಲಕ್ಷದ ತನಕ

 ಇಂಜಿನ್: 1.5-ಲೀಟರ್ ಟರ್ಬೋ-ಪೆಟ್ರೋಲ್ 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಜೊತೆಗೆ

 (SX (O) ಮತ್ತು SX ಟರ್ಬೋ ಫೀಚರ್‌ಗಳ ಜೊತೆಗೆ)

ಎಕ್ಸ್‌ಟೀರಿಯರ್

ಇಂಟೀರಿಯರ್

ಆರಾಮ ಮತ್ತು ಅನುಕೂಲತೆ

ಇನ್ಫೋಟೈನ್‌ಮೆಂಟ್

ಸುರಕ್ಷತೆ

 

SX ಗೆ ಹೋಲಿಸಿದರೆ ಟರ್ಬೋ ಲೆದರೆಟ್ ಸೀಟ್ ಅಪ್‌ಹೋಲ್ಸ್‌ಟ್ರಿ

  • SX ಗೆ ಹೋಲಿಸಿದರೆ ಟರ್ಬೋ
  • ಫ್ರಂಟ್ ವಾತಾಯನದ ಮತ್ತು ಹೀಟಡ್ ಸೀಟುಗಳು
  • ಪವರ್ಡ್ ಡ್ರೈವರ್ ಸೀಟು
  • ಮ್ಯಾನುವಲ್ ರಿಯರ್ ಕರ್ಟನ್
  • SX ಗೆ ಹೋಲಿಸಿದರೆ ಟರ್ಬೋ
  • 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್
  • ರಿಯರ್ ಡಿಸ್ಕ್ ಬ್ರೇಕ್‌ಗಳು (DCT)
  • ADAS (MT ಮತ್ತು DCT ವೇರಿಯೆಂಟ್‌ಗಳಿಗೆ ಮಾತ್ರ)
  • ಹೊಂದಿಸಬಲ್ಲ ಕ್ರ್ಯೂಸ್ ಕಂಟ್ರೋಲ್ (DCT)
  • ಲೀಡಿಂಗ್ ವೆಹಿಕಲ್ ಡಿಪರ್ಚರ್ ಅಲರ್ಟ್ (DCT)
  • ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಇದು ಎಲ್ಲಾ ಪ್ರಮುಖ ಫೀಚರ್‌ಗಳನ್ನು ಹೊಂದಿದ ಹೊಸ ವರ್ನಾದ ಟಾಪ್ ಎಂಡ್ ವೇರಿಯೆಂಟ್ ಆಗಿದೆ. ಇದು ಹೊರಗಿನಿಂದ ನೋಡಿದರೆ SX ಟರ್ಬೋಗಿಂತ ವಿಭಿನ್ನವಾಗಿ ಕಾಣುವುದಿಲ್ಲವಾದರೂ, ಲೆದರೆಟ್ ಅಪ್‌ಹೋಲ್ಸ್‌ಟ್ರಿ, ಪ್ರೀಮಿಯಂ ಆಡಿಯೋ ಸಿಸ್ಟಮ್ ಮತ್ತು ಫೀಚರ್‌ಭರಿತ ಫ್ರಂಟ್ ಸೀಟುಗಳನ್ನು ಪಡೆದಿದೆ. ರಿಯರ್ ಡಿಸ್ಕ್ ಬ್ರೇಕ್‌ಗಳು, ADAS (ಸ್ಟಾಂಡರ್ಡ್ ಆಗಿ) ಮತ್ತು ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಇನ್ನಷ್ಟು ಸುರಕ್ಷಿತವಾಗಿದೆ. SX(O) ಗೆ ಹೋಲಿಸಿದರೆ ಇದು ಹ್ಯುಂಡೈನ ಹೊಂದಿಸಬಲ್ಲ ಕ್ರ್ಯೂಸ್ ಕಂಟ್ರೋಲ್ ಅನ್ನು ಹೊಂದಿದ್ದು, ಇದು DCT ಆಯ್ಕೆಗೆ ಸೀಮಿತವಾಗಿದೆ.

 ಇವುಗಳು ಹೊಚ್ಚ ಹೊಸ ಹ್ಯುಂಡೈ ವರ್ನಾದ ವೇರಿಯೆಂಟ್-ವಾರು ವಿವರಗಳಾಗಿವೆ. ಸೆಡಾನ್ ಬಗೆಗಿನ ಇನ್ನಷ್ಟು ವಿವರಗಳಿಗಾಗಿ ಕಾರ್‌ದೇಖೋಗೆ ಭೇಟಿ ನೀಡುತ್ತಿರಿ ಮತ್ತು ನಾವು ಸದ್ಯದಲ್ಲೇ ಕಾರಿನ ವಿಮರ್ಶೆ ಮತ್ತು ಮೊದಲ ಡ್ರೈವಿಂಗ್ ಇಂಪ್ರೆಶನ್ ಅನ್ನು ಹಂಚಿಕೊಳ್ಳಲಿದ್ದೇವೆ.

 ಇನ್ನಷ್ಟು ಓದಿ : ಹ್ಯುಂಡೈ ವರ್ನಾದ ಆನ್‌ ರೋಡ್ ಬೆಲೆ

was this article helpful ?

Write your Comment on Hyundai ವೆರ್ನಾ

explore ಇನ್ನಷ್ಟು on ಹುಂಡೈ ವೆರ್ನಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience