• English
  • Login / Register

2023 ಹ್ಯುಂಡೈ ವರ್ನಾವನ್ನು ನೀವು ಖರೀದಿಸಬಹುದು 9 ವಿಭಿನ್ನ ಶೇಡ್‌ಗಳಲ್ಲಿ

ಹುಂಡೈ ವೆರ್ನಾ ಗಾಗಿ ansh ಮೂಲಕ ಮಾರ್ಚ್‌ 24, 2023 08:04 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದನ್ನು ಏಳು ಮೋನೋಟೋನ್ ಮತ್ತು ಎರಡು ಡ್ಯುಯಲ್-ಟೋನ್  ಕಲರ್ ಆಯ್ಕೆಗಳಲ್ಲಿ ನೀಡಲಾಗಿದೆ

2023 Hyundai Verna Colour Options In Detail

  • ಆರನೇ-ಪೀಳಿಗೆ ವರ್ನಾದ ಬೆಲೆ ರೂ. 10.90 ಲಕ್ಷದಿಂದ ರೂ. 17.38 ಲಕ್ಷದ ತನಕ ಇದೆ (ಪ್ರಾಸ್ತಾವಿಕ ಎಕ್ಸ್-ಶೋರೂಂ)
  •  ಎರಡು ಪೆಟ್ರೋಲ್ ಇಂಜಿನ್‌ಗಳನ್ನು ಪಡೆದಿದೆ: 115PSನ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಇಂಜಿನ್ ಮತ್ತು 160PSನ ಟರ್ಬೋಚಾರ್ಜ್ ಯೂನಿಟ್.
  •  ಈ ಸೆಡಾನ್ ಹ್ಯುಂಡೈನ ಇತ್ತೀಚಿನ ಪ್ಯಾರಾಮೆಟ್ರಿಕ್ ಡಿಸೈನ್ ಲ್ಯಾಂಗ್ವೇಜ್ ವಿವರಗಳನ್ನು ಫ್ರಂಟ್ ಮತ್ತು ರಿಯರ್‌ನಲ್ಲಿ ಹೊಂದಿದೆ.
  •  ಸಂಯೋಜಿತ ಡ್ಯುಯಲ್ ಡಿಸ್‌ಪ್ಲೇಗಳು, ಹೀಟಡ್ ಮತ್ತು ವಾತಾಯನದ ಫ್ರಂಟ್ ಸೀಟುಗಳು, ಆರು ಏರ್‌ಬ್ಯಾಗ್‌ಗಳು ಮತ್ತು ADAS ಫೀಚರ್‌ಗಳನ್ನು ಹೊಂದಿದೆ.
  •  ಈಗಾಗಲೇ 8,000 ಕ್ಕೂ ಹೆಚ್ಚಿನ ಬುಕಿಂಗ್‌ಗಳನ್ನು ಸ್ವೀಕರಿಸಿದೆ.

 ಸುದೀರ್ಘ ಕಾಯುವಿಕೆಯ ನಂತರ  ಹ್ಯುಂಡೈ ಕೊನೆಗೂ  ಆರನೇ-ಪೀಳಿಗೆ ವರ್ನಾ ವನ್ನು ಅನಾವರಣಗೊಳಿಸಿ ಅದರ ಬೆಲೆಗಳನ್ನು ಬಹಿರಂಗಪಡಿಸಿದೆ. ಇದು ನಿರ್ಗಮಿತ ಮಾಡೆಲ್‌ಗಿಂತ ದೊಡ್ಡದಿದ್ದು, ಇದರ ಫೀಚರ್‌ಗಳು ಬೋಲ್ಡ್ ನ್ಯೂ ಸ್ಟೈಲಿಂಗ್ ಜೊತೆಗೆ ಪ್ಯಾರಾಮೆಟ್ರಿಕ್ ಡಿಸೈನ್ ವಿವರಗಳನ್ನು ಫ್ರಂಟ್ ಮತ್ತು ರಿಯರ್‌ನಲ್ಲಿ ಹೊಂದಿದೆ. ಈ ಹೊಸ ನೋಟವು ಮೂರು ಅಂಶಗಳಿಂದ ಪ್ರಾಬಲ್ಯ ಹೊಂದಿದೆ: ಸುತ್ತುವರೆದ LED ಲೈಟ್ ಸ್ಟ್ರಿಪ್‌ಗಳು ಫ್ರಂಟ್ ಮತ್ತು ರಿಯರ್, ನಯವಾದ ನಾಚ್‌ಬ್ಯಾಕ್-ಶೈಲಿಯ ರೂಫ್‌ಲೈನ್ ಮತ್ತು ರಿಯರ್ ಪ್ರೊಫೈಲ್‌ನ ರಿಯರ್ ಅರ್ಧದಲ್ಲಿ ಕೋನೀಯ ಕಡಿತಗಳು. ಈ ಸೆಡಾನ್‌ಗೆ ಬುಕಿಂಗ್ ಈಗ ಒಂದು ತಿಂಗಳಿನಿಂದ ತೆರೆದಿವೆ, ಆದರೆ ಈ ಕಾರುತಯಾರಕರು ಲಭ್ಯವಿರುವ ಎಲ್ಲಾ ಕಲರ್ ಆಯ್ಕೆಗಳನ್ನು ಈಗಷ್ಟೇ ಬಹಿರಂಗಪಡಿಸಿದೆ.

 ಇದನ್ನೂ ಓದಿ: ಹ್ಯುಂಡೈ ವರ್ನಾ 2023 ರೂ. 10.90 ಲಕ್ಷಕ್ಕೆ ಬಿಡುಗಡೆಗೊಂಡಿದೆ; ತನ್ನ ಪ್ರತಿಸ್ಪರ್ಧಿಗಳಿಗಿಂತ ರೂ 40,000ಕ್ಕೂ ಹೆಚ್ಚು ಬೆಲೆ ಕಡಿತಗೊಳಿಸಿದೆ

 ಹಾಗಾಗಿ ನೀವು 2023 ವರ್ನಾವನ್ನು ಕಾಯ್ದಿರಿಸುವುದಕ್ಕೂ ಮೊದಲು ಅದರ ಬಣ್ಣದ ಪ್ಯಾಲೆಟ್ ಅನ್ನು ನೋಡಿ:  

Atlas White

  •  ಅಟ್ಲಾಸ್ ವೈಟ್

Fiery Red

  •  ಫೇರಿ ರೆಡ್

Abyss Black

  •  ಆಬೇಸ್ ಬ್ಲ್ಯಾಕ್

Typhoon Silver

  • ಟೈಫೂನ್ ಸಿಲ್ವರ್

Tellurian Brown

  •  ಟೆಲ್ಲೂರಿಯನ್ ಬ್ರೌನ್

Titan Grey

  •  ಟೈಟನ್ ಗ್ರೇ

Starry Night

  •  ಸ್ಟೇರಿ ನೈಟ್

Atlas White Dual-tone

  • ಅಟ್ಲಾಸ್ ವೈಟ್ ಡ್ಯುಯಲ್-ಟೋನ್

Fiery Red Dual-tone

  •  ಫೇರಿ ರೆಡ್ ಡ್ಯುಯಲ್ ಟೋನ್

 ಪವರ್‌ಟ್ರೇನ್

2023 Hyundai Verna front

ಈ 2023 ವರ್ನಾ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತಿದೆ: 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಯೂನಿಟ್, ಇದು 115PS ಮತ್ತು 144Nm ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್‌ನೊಂದಿಗೆ ಇದನ್ನು ಜೋಡಿಸಲಾಗಿದೆ ಮತ್ತೊಂದು 1.5-ಲೀಟರ್ ಟರ್ಬೋಚಾರ್ಜ್ ಇಂಜಿನ್, ಇದು 160PS ಮತ್ತು 253Nm ಉತ್ಪಾದಿಸುತ್ತದೆ ಮತ್ತು 7-ಸ್ಪೀಡ್ ಮ್ಯಾನುವಲ್ ಅಥವಾ DCTಯೊಂದಿಗೆ ಇದನ್ನು ಜೋಡಿಸಲಾಗಿದೆ. ಡ್ಯುಯಲ್ ಟೋನ್ ಆಯ್ಕೆಯು ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳನ್ನು ಹೊಂದಿರುವ ಹೊಸ ವರ್ನಾದ ಟರ್ಬೋ ವೇರಿಯೆಂಟ್‌ಗಳಿಗೆ ಸೀಮಿತವಾಗಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

2023 Hyundai Verna cabin

ಇದರ ಫೀಚರ್‌ಗಳ ಪಟ್ಟಿಯು ಡ್ಯುಯಲ್ ಸಂಯೋಜಿತ ಡಿಸ್‌ಪ್ಲೇಗಳು (10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಸಿಂಗಲ್-ಪೇನ್ ಸನ್‌ರೂಫ್, ಹೀಟಡ್ ಮತ್ತು ವಾತಾಯನದ ಫ್ರಂಟ್ ಸೀಟುಗಳು, ಸ್ವಿಚ್ ಮಾಡಬಹುದಾದ ನಿಯಂತ್ರಣಗಳನ್ನು ಹೊಂದಿದ ಇನ್‌ಫೋಟೈನ್‌ಮೆಂಟ್ ಮತ್ತು AC, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. 

ಇದನ್ನೂ ಓದಿ: ಹೊಸ ಹ್ಯುಂಡೈ ವರ್ನಾ ಇಲೆಕ್ಟ್ರಿಫಿಕೇಶನ್ ಇಲ್ಲದೆಯೇ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವ ಸೆಡಾನ್ ಹೌದೇ?

 ಕಾರಿನ ಒಳಗಿನ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ, ಈ 2023 ವರ್ನಾ ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿಯರ್ ಡಿಫಾಗರ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.ಅಲ್ಲದೇ ಇದು ಸುಧಾರಿತ ಡ್ರೈವರ್-ಅಸಿಸ್ಟೆಂಟ್ ಸಿಸ್ಟಮ್‌ಗಳು (ADAS) ಇದರ ಜೊತೆಗೆ ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಅಲರ್ಟ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಡ್ರೈವರ್ ಅಟೆನ್ಷನ್ ವಾರ್ನಿಂಗ್ ಮತ್ತು ಹೊಂದಿಸಬಲ್ಲ ಕ್ರ್ಯೂಸ್ ಕಂಟ್ರೋಲ್ ಫೀಚರ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

2023 Hyundai Verna

ಹ್ಯುಂಡೈ ಈ ಆರನೇ-ಪೀಳಿಗೆ ವರ್ನಾದ ಬೆಲೆಯನ್ನು ರೂ. 10.90 ಲಕ್ಷದಿಂದ ರೂ. 17.38 ಲಕ್ಷದ ತನಕ (ಪರಿಚಯಾತ್ಮಕ ಎಕ್ಸ್-ಶೋರೂಂ) ನಿಗದಿಪಡಿಸಿದೆ ಹಾಗೂ ಇದು ಹೋಂಡಾ ಸಿಟಿ, ಸ್ಕೋಡಾ ಸ್ಲೇವಿಯಾ, ಫೋಕ್ಸ್‌ವಾಗನ್ ವರ್ಟಸ್ ಮತ್ತು ಮಾರುತಿ ಸಿಯಾಝ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರೆದಿದೆ.

ಇನ್ನಷ್ಟು ಓದಿ : ವರ್ನಾದ ಆನ್ ರೋಡ್ ಬೆಲೆ 

was this article helpful ?

Write your Comment on Hyundai ವೆರ್ನಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience